ಬೆಂಗಳೂರು: 2022ರ ಹುಬ್ಬಳ್ಳಿ (Hubballi) ಗಲಭೆ ಕೇಸ್ ವಾಪಸ್ ಪಡೆದಿರೋ ಸರ್ಕಾರದ ನಿರ್ಧಾರವನ್ನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ದಾಖಲಿಸಿದ್ದ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ಕೆಲವು ಕೇಸ್‌ಗಳನ್ನು ಚರ್ಚೆ ಮಾಡಿ ವಾಪಸ್ ತೆಗೆದುಕೊಂಡಿದ್ದೇವೆ. ಗಲಭೆ ಪ್ರಕರಣಗಳಲ್ಲಿ ಇತರೆ ಆರೋಪಿಗಳು ಎಂದು ಸೇರಿಸಿರುತ್ತಾರೆ. ಹೀಗಾಗಿ ಅದರ ತನಿಖೆ ಮಾಡಿ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು
ಸಿ.ಟಿ ರವಿ (C T Ravi) ಅವರ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದೇವೆ. ಇದು ರಾಜಕೀಯ ಅಂತಾ ಅವರು ಹೇಳ್ತಾರಾ? ಹೇಳಲಿ ಅವರಿಗೆ ಏನು ಶಿಕ್ಷೆ ಆಗಬೇಕು ಆಗಲಿ. ಎಲ್ಲ ಕೇಸ್ ಪರಿಶೀಲನೆ ಮಾಡಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದು ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ
– ಕಾಂಗ್ರೆಸ್‌ನಂತೆ ಹಗರಣಗಳಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲವೆಂದು ವಾಗ್ದಾಳಿ
ಬೆಂಗಳೂರು: ಹರಿಯಾಣದಲ್ಲಿ (Haryana) ಬಿಜೆಪಿ (BJP) ಗೆಲುವು ನಮಗೆ ಸ್ಪಷ್ಟವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 28 ರಿಂದ 32 ಸ್ಥಾನಗಳು ಬರಲಿದೆ ಎಂದು ನಮ್ಮ ಸಮೀಕ್ಷೆ ಹೇಳಿತ್ತು. ಆದ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu-Kashmir) ಕಾಂಗ್ರೆಸ್ ಫಾರ್ಮುಲಾ ಸಕ್ಸಸ್ ಆಗಿದೆ ಅನ್ನಿಸುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T Ravi) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿಗೆ ಆರಂಭಿಕ ಹಿನ್ನಡೆಯಾದರೂ ಬಳಿಕ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಫಲಿತಾಂಶ ಇದೆ ನೋಡೋಣ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳಲ್ಲೇ ಮುಳುಗೆದ್ದಿದೆ, ಆದ್ರೆ ಹರಿಯಾಣದಲ್ಲಿ ಹಗರಣದಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲ. ಇನ್ನೂ 12 ಗಂಟೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು. ಇದನ್ನೂ ಓದಿ: ಸಿಎಂ ಆಪ್ತ ಮಹದೇವಪ್ಪರನ್ನ ಭೇಟಿಯಾದ ಸತೀಶ್ ಜಾರಕಿಹೊಳಿ – ರಾಜ್ಯ ರಾಜಕಾರಣದಲ್ಲಿ ಸಂಚಲನ
ಇದು ಭಾರತದ ಜಯ
ಫಲಿತಾಂಶ ಏನೇ ಬಂದರೂ ಚುನಾವಣಾ ಆಯೋಗ ದೂರೋದು, ಇವಿಎಂ ದೂರೋದು, ಜನ ಸರಿಯಿಲ್ಲ ಅಂತ ಇದುವರೆಗೆ ನಾವು ಮಾಡಿಲ್ಲ. ಕಾಂಗ್ರೆಸ್‌ನವರು ಅವರ ಪರ ಬಂದರೆ ಜನಾದೇಶ. ಇಲ್ಲದಿದ್ದರೇ ಇವಿಎಂ ದೋಷ. ಜನ ಸರಿಯಿಲ್ಲ ಅಂತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತ ಚಲಾವಣೆ ಆಗಿದೆ. ಆ ಮೂಲಕ ಅಲ್ಲಿನ ಜನ ನಾವು ಭಾರತದ ಜೊತೆಗೆ, ಪ್ರಜಾಪ್ರಭುತ್ವದ ಜೊತೆ ಇದ್ದೇವೆ ಎಂದು ತೋರಿಸಿದ್ದಾರೆ. ಹಾಗಾಗಿಯೇ ಇದು ಪ್ರಜಾಪ್ರಭುತ್ವದ ಜಯ. ಜನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಭಯೋತ್ಪಾದನೆಯ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಭಾರತದ ಜಯ ಎಂದು ಹೇಳಿದರು. ಇದನ್ನೂ ಓದಿ: Haryana Result | ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ಖಚಿತ – ಸಿಎಂ ನಯಾಬ್ ಸಿಂಗ್ ಸೈನಿ ವಿಶ್ವಾಸ
ನಮ್ಮ ಸರ್ಕಾರ ಜನವಿರೋಧಿ ಕಾರ್ಯಗಳನ್ನು ಮಾಡಿರಲಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ವಿರುದ್ಧ ಅಪಪ್ರಚಾರ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣದಲ್ಲೇ ಮುಳುಗೆದ್ದಿದೆ. ಕೆಲವೊಮ್ಮೆ ಅಪಪ್ರಚಾರವೇ ಗೆಲ್ಲುತ್ತದೆ. ಕಾಂಗ್ರೆಸ್ ಅಪಪ್ರಚಾರದಲ್ಲಿ ಎತ್ತಿದ ʻಕೈʼ. ಕರ್ನಾಟಕದಲ್ಲಿ ಅವರು ಅದನ್ನೇ ಮಾಡಿದ್ದಾರೆ. ಜಮ್ಮುವಿನಲ್ಲೂ ಅದನ್ನೇ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: Haryana Results| ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧಿ: ಕೈ ಸಂಸದೆ ಸೆಲ್ಜಾ
ನಾವು ಜನಹಿತ ಹಾಗೂ ರಾಷ್ಟ್ರಹಿತವನ್ನು ಗಮನದಲ್ಲಿ ಇಟ್ಟುಕೊಂಡು, ಸೈದಾಂತಿಕ ನಿಲುವುಗಳಲ್ಲೂ ಸ್ಪಷ್ಟತೆ ಇಟ್ಟುಕೊಂಡು, ಜನರ ಮುಂದೆ ಪ್ರಣಾಳಿಕೆಯನ್ನು ಇಟ್ಟೆವು. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಹಾಗಾಗಿ ಉತ್ತಮ ಫಲಿತಾಂಶವೇ ಸಿಗುತ್ತೆ ಎಂಬ ನಂಬಿಕೆ ಇದೆ ಎಂದರು. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್
– ಕಾಂಗ್ರೆಸ್ ಪಕ್ಷ ದಲಿತರನ್ನು ನಿಜಕ್ಕೂ ಸಿಎಂ ಮಾಡುತ್ತಾ ಎಂದು ಪ್ರಶ್ನೆ
ಚಿಕ್ಕಮಗಳೂರು: ಭ್ರಷ್ಟಾಚಾರ ಭ್ರಷ್ಟಾಚಾರವೇ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಟಾಂಗ್ ಕೊಟ್ಟರು.
ಚಿಕ್ಕಮಗಳೂರಿನ (Chikkamagaluru) ಸೆಂಟ್ರಲ್ ಲೈಬ್ರರಿ ಬಳಿ ಮಾತನಾಡಿದ ಅವರು, ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಸಿಎಂ ಸಿದ್ದರಾಮಯ್ಯನವರು (Siddaramaiah) ನಾನು ಯಾರಿಗೂ ಹೆದರಲ್ಲ, ಬಿಜೆಪಿ-ಜೆಡಿಎಸ್‌ಗೆ ಹೆದರಲ್ಲ, ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ನಾವು ನಿಮ್ಮನ್ನ ಏನೆಂದು ಕರೆಯಬೇಕೆಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾದ್ರೂ ರಾಜ್ಯಕ್ಕೆ ಪ್ರಯೋಜನ ಆಗ್ತಿಲ್ಲ: ಕೃಷ್ಣಬೈರೇಗೌಡ ಟಕ್ಕರ್
ಸಿಎಂಗೆ ಸಂವಿಧಾನ-ಕಾನೂನಿನ ಬಗ್ಗೆ ಭಯವಿಲ್ಲ. ನೈತಿಕತೆ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಅವರು ಜನರಿಗಿಂತಾ ದೊಡ್ಡವರಾ? ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರಲ್ಲ ಅಂದ್ರೆ, ನಾವು ಮನುಷ್ಯರು ಅನ್ಕೊಳ್ಳಾದಾ? ರಾಕ್ಷಸರು ನಾವು ಯಾರಿಗೂ ಹೆದರಲ್ಲ ಅಂತಿದ್ರಂತೆ, ಹಾಗೇ ಅನ್ಕೋಬೇಕಾ ಎಂದು ವ್ಯಂಗ್ಯವಾಡಿದರು.
ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರಿದರೆ ಸಮಸ್ಯೆ ಇಲ್ಲ. ಆದರೆ, ಸಮಾಜ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯ ಮಾಡಿದ್ರೆ ಮಾತ್ರ ಯಾರೂ ಕ್ಷಮಿಸಲ್ಲ. ಆದರೆ ಹೆಚ್.ಎಂ.ರೇವಣ್ಣ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರೋಧಿಸಿದ್ದು ಎಂದಿದ್ದಾರೆ. ವಿರೋಧಿಸಿದ್ದು ಆರ್‌ಎಸ್‌ಎಸ್, ಬಿಜೆಪಿ ಅಲ್ಲ. ನೆಹರೂ ವಿರೋಧಿಸಿದ್ದು. ರಾಹುಲ್ ಗಾಂಧಿಯವರ ಮುತ್ತಜ್ಜ, ಇಂದಿರಾ ಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ ನೆಹರೂ ಮೀಸಲಾತಿ ವಿರೋಧಿಸಿದ್ದು. ಅಭಿವೃದ್ಧಿ, ದಕ್ಷತೆಗೆ ಅಡ್ಡಿಯಾಗುತ್ತದೆಂದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರೂ. ರೇವಣ್ಣ ತಪ್ಪು ತಿಳಿದಿದ್ದಾರೆ. ಕಾಂಗ್ರೆಸ್ಸಿಗರು ಮೀಸಲಾತಿಗೆ ವಿರೋಧ ಇದ್ದು, ಈಗ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದರು.
ಮಂಡಲ್ ಆಯೋಗವನ್ನ ಅಡಿಗೆ ಹಾಕಿಕೊಂಡು ಕೂತಿದ್ದು ಕಾಂಗ್ರೆಸ್. ಆರ್‌ಎಸ್‌ಎಸ್, ಬಿಜೆಪಿ ವಿರೋಧ ಮಾಡಿಲ್ಲ, ಮಾಡೋದು ಇಲ್ಲ. ಕಾಂಗ್ರೆಸ್ ದಲಿತರನ್ನ ಸಿಎಂ ಮಾಡೋದಾಗಿದ್ರೆ ಪರಮೇಶ್ವರ್ ಅವರನ್ನ ಏಕೆ ಸೋಲಿಸ್ತಿದ್ರು? ಕಾಂಗ್ರೆಸ್‌ನದ್ದು ಯೂಸ್ ಆ್ಯಂಡ್ ಥ್ರೋ ಅಷ್ಟೆ. ಉಪಯೋಗಿಸಿಕೊಳ್ಳುವುದು, ಬಿಸಾಕೋದು ಅವರ ನೀತಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರನ್ನೇ ಹೆಚ್ಚಿನ ರಾಜ್ಯಗಳಲ್ಲಿ ಸಿಎಂ ಮಾಡಿತ್ತು. ಆದರೆ, ಅವರು ಗೆಲ್ಲದಂತೆ ನೋಡಿಕೊಂಡು ಸೋಲಿಸಿದರು. ಖರ್ಗೆ 60 ವರ್ಷ ರಾಜಕಾರಣ ಮಾಡಿದ್ದಾರೆ. 60 ವರ್ಷ ದಾಟಿದೆ. ಅಷ್ಟು ವರ್ಷದ ರಾಜಕಾರಣದಲ್ಲಿ ಅಷ್ಟು ಸಿನಿಯಾರಿಟಿ ಇದ್ರೂ ಸಿಎಂ ಆಗ್ಲಿಲ್ಲ. ಕಾಂಗ್ರೆಸ್ ಪಕ್ಷ ದಲಿತರನ್ನ ನಿಜಕ್ಕೂ ಸಿಎಂ ಮಾಡುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನದ್ದು 80 ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ: ಕಟೀಲ್ ವಾಗ್ದಾಳಿ
ಬೆಂಗಳೂರು: ದಿನೇಶ್ ಗುಂಡೂರಾವ್ (Dinesh Gundurao) ಅವರು ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ? ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ? ಅವರು ಯಾವುದನ್ನು ಉತ್ತೇಜನ ಮಾಡುವುದಕ್ಕೆ ಹೊರಟಿದ್ದಾರೆ. ಏನಾದ್ರು ಹೊಸ ದಂಧೆ ಶುರು ಮಾಡುವುದಕ್ಕೆ ಹೊರಟಿದ್ದಾರಾ? ದಂಧೆ ಶುರು ಮಾಡುವುದಕ್ಕೆ ಸಹಕಾರ ಸಿಗಲಿ ಎಂದು ಮಾತಾಡ್ತಿದ್ದಾರಾ? ಎಂದು ಬಿಜೆಪಿ ನಾಯಕ ಸಿಟಿ ರವಿ (C T Ravi) ಕಿಡಿಕಾರಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ದನದ ಮಾಂಸ ತಿನ್ನುತ್ತಿದ್ದರು ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ನಾನು ಅವರ ಹೇಳಿಕೆ ಗಮನಿಸಿದ್ದೇನೆ. ಮೂಲಭೂತ ವಾದ, ರಾಷ್ಟ್ರವಾದದ ನಡುವೆ ಅಗಾಧವಾದ ಅಂತರ ಇದೆ. ಮೂಲಭೂತ ವಾದ ದೇಶ ಒಡೆಯಿತು. ಅಖಂಡ ಭಾರತದ ವಿಭಜನೆಗೆ ಕಾರಣವಾಯ್ತು. ಪಾಕಿಸ್ತಾನ ರಚನೆಗೆ ಕಾರಣವಾಯ್ತು. ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯ್ತು. ರಾಷ್ಟ್ರವಾದ ದೇಶಭಕ್ತಿಯಿಂದ ಕೂಡಿರೋದು. ರಾಷ್ಟ್ರವಾದದಿಂದ ದೇಶ ಉಳಿಸಬಹುದು. ಮೂಲಭೂತ ವಾದದಿಂದ ಪಾಕಿಸ್ತಾನ ನಿರ್ಮಾಣ ಆಗುತ್ತದೆ. ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಮೂಲಭೂತ ವಾದವನ್ನು ಸಮರ್ಥನೆ ಮಾಡ್ತಿದೆಯೋ? ಅಥವಾ ರಾಷ್ಟ್ರೀಯ ವಾದವನ್ನೋ? ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಮಾಡೋದು ನಿಮ್ಮ ಉದ್ದೇಶನಾ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ
ಗಾಂಧೀಜಿ (Mahatma Gandhi) ಗೋಹತ್ಯೆ ಪರ ಇದ್ರಾ? ವಿರೋಧ ಇದ್ರಾ? ಗಾಂಧಿ ಒಂದು ದಿನ ಅಧಿಕಾರ ಸಿಕ್ಕರೆ ಸಂಪೂರ್ಣ ಗೋಹತ್ಯೆ ನಿಷೇಧ ಮಾಡ್ತೀನಿ ಎಂದು ಹೇಳಿದ್ರು. ಹಾಗಾದರೆ ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಗಾಂಧಿ ವಿಚಾರಧಾರೆ ಪರವೋ? ವಿರುದ್ದವೋ? ಗಾಂಧಿ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಎರಡನ್ನೂ ಸಮರ್ಥನೆ ಮಾಡುವುದಿಲ್ಲ. ಜಿನ್ನಾ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಭಾರತದ ವಿಭಜನೆಯನ್ನು ಸಮರ್ಥನೆ ಮಾಡುತ್ತಾರೆ. ದಿನೇಶ್ ಗುಂಡೂರಾವ್ ಜಿನ್ನಾ ವಿಚಾರಧಾರೆ ಪರವೋ? ಗಾಂಧಿ ವಿಚಾರಧಾರೆ ಪರವೋ? ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 3, 2024
ನಾಗರೀಕ ಸಮಾಜಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆಗೆ ಸಾವರ್ಕರ್ ವಿಚಾರಧಾರೆ ಮಾತ್ರ ರಾಷ್ಟ್ರ ಉಳಿಸೋದು. ಸಮಾಜದ ನಡುವೆ ಮೌಲ್ಯಗಳು ಇರಬೇಕು. ಸಮಾಜದ ಒಳಗೆ ಅಹಿಂಸೆಬೇಕು ಅದಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆ ಅಹಿಂಸೆಯಿಂದ ಸಾಧ್ಯವಾಗುವ ಹಾಗಿದ್ದರೆ ಭಾರತ ದೊಡ್ಡ ಸೈನ್ಯ ಕಟ್ಟೋ ಅವಶ್ಯಕತೆ ಇರಲಿಲ್ಲ. ಪರಮಾಣು ಬಾಂಬ್, ಕ್ಷಿಪಣಿ ಇಟ್ಟುಕೊಳ್ಳೋ ಅವಶ್ಯಕತೆ ಇರಲಿಲ್ಲ. ಎಕೆ47 ಅವಶ್ಯಕತೆ ಇರಲಿಲ್ಲ. ಸೈನ್ಯ ಸಮರ್ಥವಾಗಿ ಇರಲಿಲ್ಲ ಅಂದಿದ್ದರೆ 1948ರಲ್ಲೇ ಭಾರತವನ್ನು ಪಾಕಿಸ್ತಾನ ಮುಗಿಸುತ್ತಿತ್ತು. ಭಾರತ ಬಲವಾಗಬೇಕು ಎಂದು ಕನಸು ಕಂಡವರು ಸಾವರ್ಕರ್. ಸಾವರ್ಕರ್ ವಿಚಾರಧಾರೆ ಭಾರತೀಯತೆ ಬಲಗೊಳಿಸೋದು ಆಗಿತ್ತು. ಜಿನ್ನಾನಿಗೆ ಅವನಿಗೆ ಕೇಳಿದ್ದು ಕೊಡೋದು ಸಾವರ್ಕರ್ ವಿಚಾರಧಾರೆ ಆಗಿರಲಿಲ್ಲ. ದುರ್ದೈವದ ಸಂಗತಿ ಅಂದರೆ ಗಾಂಧಿ ಬದುಕಿರುವಾಗಲೇ ಭಾರತ ವಿಭಜನೆ ಆಯಿತು. ಭಾರತ ವಿಭಜನೆಯನ್ನ ಗಾಂಧಿ ವಿಚಾರಧಾರೆ ತಡೆಯಲು ಆಗಲಿಲ್ಲ ಅನ್ನೋದು ವಾಸ್ತವಿಕ ಸತ್ಯ ಎಂದು ಹೇಳಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ
ಬೆಂಗಳೂರು: ಬೇರೆಯವರು ತಪ್ಪು ಮಾಡಿದರೆ ನೀವು ರಾಜೀನಾಮೆ ಕೇಳ್ತಿದ್ರಿ. ನಿಮ್ಮ ವಿಷಯದಲ್ಲಿ ಅದು ಇಲ್ಲ. ನಿಮ್ಮ ಕೇಸ್‌ನಲ್ಲಿ ನೀವೇ ಜಡ್ಜ್, ನೀವೇ ವಕೀಲರು ಆದರೆ ಬೇರೆ ಅವರ ಕೇಸ್‌ನಲ್ಲಿ ಜಡ್ಜ್ ಮೆಂಟ್ ಮಾತ್ರ ನೀವು ಕೊಡುತ್ತೀರಿ ಎಂದು ಆತ್ಮಸಾಕ್ಷಿ ಬಗ್ಗೆ ಮಾತಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ (BJP) ನಾಯಕ ಸಿ ಟಿ ರವಿ (C T Ravi) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಿದ್ದರಾಮಯ್ಯ (CM Siddaramaiah) ನೈತಿಕತೆ, ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ಬಹಳ ಸಂತೋಷ ಸಂಗತಿ. ನಾನು ಸಮಾಜವಾದಿಗಳಿಗೆ ಆತ್ಮ, ಆತ್ಮಸಾಕ್ಷಿ ಇರೊಲ್ಲ ಅಂದುಕೊಂಡಿದ್ದೆ. ಸಿದ್ದರಾಮಯ್ಯಗೆ ಆತ್ಮ, ಆತ್ಮಸಾಕ್ಷಿ ಇದೇ ಅನ್ನೋದು ಸಂತೋಷ. ಯಾರು ಆತ್ಮ ಇದೆ ಎಂದು ನಂಬುತ್ತಾರೋ ಅವರು ಪರಮಾತ್ಮನನ್ನು ನಂಬಬೇಕು. ಜಗತ್ತಿನಲ್ಲಿ ಪರಮಾತ್ಮ ಮತ್ತು ಆತ್ಮಕ್ಕೆ ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ
ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಬಹುದು. ಪರಮಾತ್ಮನ ಬಳಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪರಮಾತ್ಮನ ಹತ್ತಿರ ನಾವೇನು ಒಳ್ಳೆಯದು ಮಾಡುತ್ತೇವೆ ಅದು ದಾಖಲಾಗುತ್ತೆ. ಏನು ತಪ್ಪು ಮಾಡಿದ್ದೀವೋ ಅದು ದಾಖಲಾಗುತ್ತೆ. ಸಿಎಂ ಅವರು ನಿಜವಾಗಿ ಆತ್ಮ ಇದೆ, ಪರಮಾತ್ಮ ಇದ್ದಾನೆ ಎಂದು ಒಪ್ಪಿಕೊಳ್ಳೋದಾದ್ರೆ ಸುಳ್ಳಿನ ಸಮರ್ಥನೆಗೆ ಇಳಿಯುತ್ತಿರಲಿಲ್ಲ. ಅಪವಾದ ಬಂದ ದಿನವೇ ರಾಜೀನಾಮೆ ಕೊಡುತ್ತಿದ್ದಿರಿ ಎಂದು ಸಿಎಂ ಆತ್ಮಸಾಕ್ಷಿ ಮಾತಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್
ನೈತಿಕ ಮೌಲ್ಯಗಳನ್ನ ಎತ್ತಿಹಿಡಿಯೋ ರಾಜಕಾರಣಿ ಆಪಾದನೆ ಬಂದಾಗ ರಾಜೀನಾಮೆ ಕೊಡ್ತಾನೆ. ಎಫ್‌ಐಆರ್ ರಿಜಿಸ್ಟರ್ ಆದಾಗಲೂ ಇವರು ರಾಜೀನಾಮೆ ಕೊಡದೇ ಹೋದರೆ ನೈತಿಕತೆಗೂ ಇವರಿಗೂ ಸಂಬಂಧವಿಲ್ಲ. `ಯಾಕ್ರಿ ಸೈಟ್ ವಾಪಸ್ ಕೋಡಬೇಕು. 62 ಕೋಟಿ ರೂ. ಕೊಡಿ` ಅಂತ ಕೇಳಿದ್ದು ಸಿದ್ದರಾಮಯ್ಯ ಅವರೇ. ಈಗ ನೀವು ಕೇಳಿ 62 ಕೋಟಿ ರೂ. ಸಿಕ್ತಾ ಅಂತ ಸಿಎಂ ಗೆ ಕೇಳಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಸಿಎಂ ಅವರು 2011 ಮತ್ತು 2020 ರಲ್ಲಿ ಯಡಿಯೂರಪ್ಪ ( B S Yediyurappa) ಅವರ ವಿಚಾರದಲ್ಲಿ ರಾಜೀನಾಮೆ ಕೇಳುವಾಗ ಯಾವ ಭಾವ, ಯಾವ ಮಾತಿತ್ತು ಇವತ್ತು ಅದನ್ನ ಅವರು ಅಳವಡಿಕೆ ಮಾಡಿಕೊಳ್ಳಲಿ. ನಾನು ಬೇರೆ ಅವರಿಗೆ ಉಪದೇಶ ಮಾಡೋಕೆ ಮಾತ್ರ. ನನ್ನ ವಿಷಯ ಬಂದಾಗ ನಾನೇ ಜಡ್ಜ್ ಅನ್ನೋ ಮನೋಭಾವದಿಂದ ಹೊರಗೆ ಬರಲಿ. ಇಂತಹರು ಆತ್ಮಸಾಕ್ಷಿ ಬಗ್ಗೆ ಮಾತಾಡೋದು ಬೇಡ. ನಾನು ಕ್ಲೀನ್ ಅಂತ ಸರ್ಟಿಫಿಕೇಟ್ ಕೊಟ್ಟುಕೊಳ್ಳೋದು ಬೇಡ. ಕ್ಲೀನ್ ಅಂತ ಹೇಳಿಕೊಳ್ಳೋರು ರಾಜೀನಾಮೆ ಕೊಟ್ಟು ಸಾಬೀತು ಆಗಲಿ ಎಂದು ಹೇಳ್ತಾರೆ. ಯಾವುದೇ ತನಿಖೆಗೂ ನಾನು ಸಿದ್ಧ. ಇಡಿ, ಸಿಬಿಐ ಯಾವುದೇ ಬರಲಿ ನಾನು ತನಿಖೆಗೆ ಸಿದ್ಧ ಎಂದು ಹೇಳುತ್ತಾರೆ. ಎಫ್‌ಐಆರ್ ಆಗುತ್ತಿದ್ದಂತೆ ಒಂದೊಂದು ಟೋನ್ ನಲ್ಲಿ ಮಾತಾಡೋದು ಬೇಡ. ಅಂಗೈ ಹುಣ್ಣಿಗೆ ಕನ್ನಡಿಬೇಡಿ. 2011 ಮತ್ತು 2020 ರಲ್ಲಿ ಸಿದ್ದರಾಮಯ್ಯ ಏನು ಹೇಳಿದ್ರೋ ಅದು ಪಾಲನೆ ಮಾಡಿದ್ರೆ ಅದು ಆತ್ಮಸಾಕ್ಷಿ. ಪಾಲಿಸದೇ ಹೋದರೆ ಅದು ಆತ್ಮ ವಂಚನೆ. ಈಗ ಅವರು ಮಾಡುತ್ತಿರುವ ರಾಜಕೀಯ ಆತ್ಮ ವಂಚನೆ ರಾಜಕಾರಣ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!
ಬೆಂಗಳೂರು: ಅಶೋಕ್ ( R Ashok) ಅವರ ಹೆಗಲ ಮೇಲೆ ಬಂದೂಕು ಇಟ್ಟು ಸಿದ್ದರಾಮಯ್ಯ ಅವರ ಕಡೆ ಗುರಿ ಹೊಡೆದಿದ್ದಾರೆ ಎಂದು ಬಿಜೆಪಿ (BJP) ನಾಯಕ ಸಿಟಿ ರವಿ (C T Ravi) ಹೇಳಿದ್ದಾರೆ.
ವಿಪಕ್ಷ ನಾಯಕ ಅಶೋಕ್ ವಿರುದ್ಧ 4 ಸಚಿವರು ಸುದ್ದಿಗೋಷ್ಠಿ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರೇ ಬಹಳ ಬಂದೂಕುಗಳು ನಿಮ್ಮ ಕಡೆ ಇದ್ದಾವೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ಸುದ್ದಿಗೋಷ್ಠಿಗೆ ಲೇವಡಿ ಮಾಡಿದರು. ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬಕ್ಕೆ ರೈಲ್ವೆ ಇಲಾಖೆ ಬಂಪರ್ ಗಿಫ್ಟ್
11 ವರ್ಷಗಳ ಪ್ರಕರಣಕ್ಕೆ 4 ಜನ ಸಚಿವರು ಸುದ್ದಿಗೋಷ್ಠಿ ಮಾಡಿದರು. ಎಲ್ಲರನ್ನು ನೋಡಿದಾಗ ನನಗೆ ಅನ್ನಿಸಿದ್ದು ಇವರಿಗೆ ಸಿಎಂ ರಾಜೀನಾಮೆ ಕೇಳುವ ತಾಕತ್ತು ಇಲ್ಲ. ಅಶೋಕ್ ಅವರ ರಾಜೀನಾಮೆ ಕೇಳುವ ಮೂಲಕ ಸಿಎಂ ರಾಜೀನಾಮೆ ಕೊಡಬೇಕು ಅನ್ನೋ ಪರೋಕ್ಷ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
– ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಅಂತಾ ಮೋದಿ ಚುನಾವಣಾ ಬಾಂಡ್ ತಂದ್ರು
ಚಿಕ್ಕಮಗಳೂರು: ಕಾಂಗ್ರೆಸ್‌ಗೆ ಚುನಾವಣಾ ಬಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ಳುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮೇಲೆ ಕೇಸ್ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಬಾಂಡ್ ವೈಯಕ್ತಿಕವಲ್ಲ, ಪಾರ್ಲಿಮೆಂಟ್‌ನಲ್ಲಿ ಪಾಸ್ ಮಾಡಿ, ಆಯೋಗದ ಗಮನಕ್ಕೂ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ
ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಿದ್ದು, ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ. ಕಾಂಗ್ರೆಸ್ಸಿಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು ಎಂದು ಟೀಕಿಸಿದರು.
ಮೋದಿ ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂದು ಚುನಾವಣಾ ಬಾಂಡ್ ತಂದ್ರು. ಪಾರದರ್ಶಕ ವ್ಯವಸ್ಥೆ ತಪ್ಪೋ… ಕದ್ದು ಸೂಟ್ಕೇಸ್ ತೆಗೆದೊಳ್ತಿದ್ದದ್ದು ತಪ್ಪೋ. ಕಾಂಗ್ರೆಸ್ ಕದ್ದು ಸೂಟ್‌ಕೇಸ್ ತೆಗೆದುಕೊಳ್ತಿರೋದು ಸರಿ, ಪಾರ್ದರ್ಶಕತೆ ತಪ್ಪು ಅಂತಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಕದ್ದು ಯಾರಿಗೆ, ಯಾರು, ಎಷ್ಟು ಅನ್ನೋದು ಗೊತ್ತಾಗಬಾರದು ಅನ್ನೋದು ಕಾಂಗ್ರೆಸ್ ಉದ್ದೇಶ. ಇಂದು ಕಾಂಗ್ರೆಸ್ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಮಾತನ್ನ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಶಂಕಿತ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ
ಪಾರದರ್ಶಕ, ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ದಾಖಲಿಸಿದೆ. ತೊಂದರೆ ಇಲ್ಲ, ಇವೆಲ್ಲವನ್ನೂ ನಾವು ಎದುರಿಸುತ್ತೇವೆ. ಮುಡಾ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡಬಾರದು. ಮುಡಾ ವ್ಯಕ್ತಿಗತ ಸ್ವಾರ್ಥದಿಂದ, ಡಿನೋಟಿಫೈ, ಕನ್ವರ್ಷನ್‌ನಿಂದ ನಿವೇಶನ ಪಡೆಯೋವರೆಗೂ ಸ್ವಹಿತಾಸಕ್ತಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.
– ಕೆಳಗೆ ಬಿದ್ರೆ ಹೊಗಳುಭಟ್ಟರು ತುಳೀತಾರೆ – ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುವಂತೆ ಸಿಎಂಗೆ ಕಿವಿಮಾತು
ಬೆಂಗಳೂರು: ಜಮೀರ್ (Zameer Ahmed) ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ. ರಾಜ್ಯದ ಹಿತದೃಷ್ಟಿಯಿಂದ ಯಾರು ಸಲಹೆ ಕೊಡ್ತಾರೋ ಅವರ ಮಾತು ಕೇಳಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ರಾಜೀನಾಮೆ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಸಲಹೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಗೋಸುಂಬೆ ಮಾತ್ರ ಬಣ್ಣ ಬದಲಾಯಿಸೋದ? ನೀವು ಹಾಗಾಗೋದು ಬೇಡ. ಇಲ್ಲ ನಾನು ಬಣ್ಣ ಬದಲಾಯಿಸೋನು, ನನಗೂ ಗೋಸುಂಬೆಗೂ ಸಂಬಂಧ ಇದೆ ಅಂದ್ರೆ ಏನೂ ಮಾಡೋಕ್ಕಾಗಲ್ಲ. ನನ್ನದು ಬಿಳಿ ಬಟ್ಟೆ ಅಂತೀರ, ಈಗ ನಿಮ್ಮ ಬಟ್ಟೆ ಬಿಳಿಯಾಗಿಲ್ಲ. ಮುಡಾದಲ್ಲಿ 830 ನಿವೇಶನ ರಿಯಲ್‌ಎಸ್ಟೇಟ್ ಬ್ರೋಕರ್‌ಗಳಿಗೆ ಮಾರಿದ್ರಿ. ನೀವು ಮಿಸ್ಟರ್ ಕ್ಲೀನಾ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿಎಂ ವಿರುದ್ಧ ಇಂದೇ ದಾಖಲಾಗುತ್ತಾ ಎಫ್‌ಐಆರ್? – ಸಿದ್ದರಾಮಯ್ಯ ಆಗ್ತಾರಾ ಎ1?
ಸಿದ್ದರಾಮಯ್ಯ ಇನ್ನೆಷ್ಟು ಬೆತ್ತಲಾಗಬೇಕು ಅಂತಾ ಬಯಸ್ತಿದ್ದಾರೆ? ತನಿಖೆ ಆಗಲೇಬೇಕು ಅಂತಾ ಕೋರ್ಟ್ ಸಹ ಹೇಳಿದೆ. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿಸಿದ್ರಿ. ಈಗ ಹೈಕೋರ್ಟ್ ಜಡ್ಜ್ಗೆ ಏನ್ ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.
ಹೊಗಳುಭಟ್ಟರ ಮಾತನ್ನು ಕೇಳಬೇಡಿ ಸಿದ್ದರಾಮಯ್ಯ ಅವರೇ. ಹೊಗಳುಭಟ್ಟರು ಕೆಳಗೆ ಬಿದ್ರೆ ತುಳೀತಾರೆ. ಜಮೀರ್ ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ. ರಾಜ್ಯದ ಹಿತದೃಷ್ಟಿಯಿಂದ ಯಾರು ಸಲಹೆ ಕೊಡ್ತಾರೋ ಅವರ ಮಾತು ಕೇಳಿ. ಅವರ ಅನುಕೂಲಕ್ಕೆ ತಕ್ಕಂತೆ ಹೊಗಳುಭಟ್ಟರು ಮಾತಾಡ್ತಾರೆ, ಮೊದಲು ತುಳಿಯೋದೇ ಅವರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಸಿಎಂ ಬೆನ್ನಿಗೆ ನಿಂತಿದೆ, ರಾಜೀನಾಮೆ ನೀಡುವ ಅಗತ್ಯವಿಲ್ಲ: ಶಿವಕುಮಾರ್
ನೀವು ರಾಜೀನಾಮೆ ಕೊಟ್ರೆ, ನೀವು ಹೇಳಿದವರನ್ನೇ ಸಿಎಂ ಮಾಡ್ತಾರೆ. ನಾವ್ಯಾರೂ ಸಿಎಂ ಸೀಟಿಗೆ ಟವೆಲ್, ಕರ್ಚೀಫ್ ಹಾಕಿಲ್ಲ. ವೇಸ್ಟ್ ಪೇಪರ್ ಸಹ ಹಾಕಿಲ್ಲ. ಅದನ್ನೆಲ್ಲ ಹಾಕಿರೋದು ನಿಮ್ಮ ಪಕ್ಷದವರೇ. ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ಸಿ.ಟಿ.ರವಿ ಸಲಹೆ ನೀಡಿದರು.
ಬೆಂಗಳೂರು: ಮುನಿರತ್ನ (Munirathna) ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ, ದ್ವೇಷದ ರಾಜಕಾರಣ ಮಾಡ್ತಿದೆ. ಅವರನ್ನು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T Ravi) ಆರೋಪಿಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸರ್ವಾಧಿಕಾರಿ, ದ್ವೇಷಪೂರಿತವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಬಗ್ಗೆಯೂ ಕೋರ್ ಕಮಿಟಿ ಗಂಭೀರವಾಗಿ ಚರ್ಚೆ ನಡೆಸಿದೆ. ಸರ್ಕಾರ ಮುನಿರತ್ನ ವಿರುದ್ಧ ತನಿಖೆಗೆ ಮೇಲೆ ಎಸ್ಐಟಿ ರಚನೆ ಮಾಡಿದೆ. ಕಾಂಗ್ರೆಸ್ ನಾಯಕರ ಮೇಲೂ ಈ ರೀತಿ ಆರೋಪಗಳು ಕೇಳಿಬಂದಾಗ ಏನು ಕ್ರಮ ಕೈಗೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೈದಾನದ ಗೇಟ್ ಬಿದ್ದು ಮಗು ಸಾವು – ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್‌ಗೆ ಗುಂಡೂರಾವ್ ಸೂಚನೆ
ಕೋರ್ ಕಮಿಟಿಯಲ್ಲಿ ಮೂರು ವಿಧಾನಸಭೆ ಉಪಚುನಾವಣೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದ್ದೇವೆ. ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ಜೆಡಿಎಸ್ ಜೊತೆ ಚರ್ಚಿಸಿ ನಿರ್ಣಯ ಮಾಡಲು ಕೋರ್ ಕಮಿಟಿ ತೀರ್ಮಾನಿಸಿದೆ. ಅಲ್ಲದೇ ದಕ್ಷಿಣ ಕನ್ನಡ-ಉಡುಪಿ ಪರಿಷತ್ ಉಪಚುನಾವಣೆಗೆ ಸಂಬಂಧಪಟ್ಟಂತೆ ಅಭ್ಯರ್ಥಿ ಆಯ್ಕೆ ಚರ್ಚೆ ಆಗಿದೆ. ಹೆಸರು ಶಿಫಾರಸ್ಸು ಮಾಡಲು ರಾಜ್ಯಾಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಗಣೇಶ ಮೆರವಣಿಗೆ ವೇಳೆ ಆಗುತ್ತಿರುವ ಗಲಾಟೆಗಳು, ಸರ್ಕಾರದ ಹಿಂದೂ ವಿರೋಧಿ ನೀತಿ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ವಿಪಕ್ಷಗಳ ಮೇಲೆ ಸರ್ಕಾರ ಸರ್ವಾಧಿಕಾರಿ ಹಾಗೂ ದ್ವೇಷದ ರಾಜಕೀಯದಿಂದ ನಡೆದುಕೊಳ್ಳುತ್ತಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: MUDA Scam | ಸಿಎಂಗೆ ಬಿಗ್ ಡೇ – ಪ್ರಾಸಿಕ್ಯೂಷನ್ ಭವಿಷ್ಯ ನಾಳೆ ನಿರ್ಧಾರ
ಚಿಕ್ಕಮಗಳೂರು: 80% ಹಿಂದೂಗಳೇ ಇದ್ದರೂ ನೆಮ್ಮದಿಯಿಂದ ಗಣೇಶೋತ್ಸವ ಆಚರಿಸೋಕೆ ಆಗ್ತಿಲ್ಲ. ನಾಗಮಂಗಲ, ದಾವಣಗೆರೆಯಲ್ಲಿ ಕಲ್ಲು ತೂರಾಟ, ಬೆಳಗಾವಿಯಲ್ಲಿ ಚಾಕು ಇರಿತ, ಇಂತಹ ಕೆಟ್ಟ ಪರಿಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ (Congress) ಸರ್ಕಾರ ತಂದಿದೆ ಎಂದು ಎಂಎಲ್‍ಸಿ ಸಿ.ಟಿ ರವಿ (C.T Ravi) ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವಡೆ ಗಣಪತಿ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಮತಾಂದರಿಗೆ ಬೆಂಬಲ ಕೊಟ್ಟು ರಾಜಕಾರಣ ಮಾಡುವುದರಿಂದ ಮತಾಂದರು ಕೊಬ್ಬಿದ್ದಾರೆ. ಸಿದ್ದರಾಮಯ್ಯನವರೇ (Siddaramaiah), ನಿಮ್ಮ ಸೆಕ್ಯುಲರ್ ಅಂದ್ರೆ ಇದೇನಾ? ಗಣೇಶೋತ್ಸವದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಹಾಕಿಸೋದು ನಿಮ್ಮ ಸೆಕ್ಯುಲರ್ ನೀತಿನಾ? ನಿಮ್ಮ ಸರ್ಕಾರ ಬಂದಾಗ ಏಕೆ ಇವರೆಲ್ಲ ಬಾಲ ಬಿಚ್ಚುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ
ಮತಾಂದರ ಇಂತಹ ಸೊಕ್ಕಿಗೆ ನಿಮ್ಮ ಸರ್ಕಾರವೇ ಕಾರಣ. ಅವರ ಹಡೆಮುರಿ ಕಟ್ಟದಿದ್ರೆ ಕರ್ನಾಟಕ ನಾಡಗೀತೆಗೆ ಆಶಯದಂತೆ ಇರುವುದಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
ಜಮೀರ್ ಅಹ್ಮದ್, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೆ ತಪ್ಪೇನು ಎಂದು ಕೇಳಿದ್ದಾರೆ. ಜಮೀರ್ ಸಾಹೇಬ್ರೆ, ಇಲ್ಲಿರುವವರಿಗೂ ಪ್ಯಾಲೆಸ್ತೀನ್‍ಗೂ ಏನು ಸಂಬಂಧ? ಏಕೆ ಹಾರಿಸಬೇಕು? ನಿಮಗೆ ಭಾರತದ ಧ್ವಜ ಹಾರಿಸಬೇಕಾದ್ರೆ ಕಷ್ಟವಾಗುತ್ತದೆ. ಒಂದೇ ಮಾತರಂ ಹೇಳಲು ಷರಿಯಾ ಅಡ್ಡಿಯಾಗುತ್ತೆ. ಅವರಿಗೆ ಬೆಂಬಲಿಸಿ ಮಾತನಾಡುವುದ ನೋಡಿದಾಗ ನಿಮ್ಮ ಬಗ್ಗೆಯೂ ಅನುಮಾನ ಬರುತ್ತದೆ. ಸರ್ಕಾರ ಹಾಗೂ ನಿಮ್ಮ ನಡವಳಿಕೆ ಜಿನ್ನಾಗಿಂತ ಕಡಿಮೆ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಗುಪ್ತಚರ ಇಲಾಖೆಗೆ ಮಾಹಿತಿ ಗೊತ್ತಿರುತ್ತದೆ. ಆದರೆ ಮೌಖಿಕ ಆದೇಶ ಇದೆ, ಬಾಂಧವರು ಏನು ಮಾಡಿದರು ಸುಮ್ಮನಿರಬೇಕು ಎಂದು, ಅದಕ್ಕೆ ಬಾಂಧವರ ಮೇಲೆ ಕ್ರಮ ತೆಗೆದುಕೊಂಡರೆ, ಪೊಲೀಸರ ಮೇಲೆ ಕ್ರಮ ಆಗುತ್ತೆ. ಈ ಕಾರಣಕ್ಕೆ ಪೊಲೀಸರು ಅಸಾಹಯಕರಾಗಿದ್ದಾರೆ. ತಾಲಿಬಾನ್ ಸರ್ಕಾರವಿದ್ದರೂ ಇಷ್ಟೊಂದು ಸ್ವೇಚ್ಛಾಚಾರ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಗಮಂಗಲದಲ್ಲಿ ನಿಷೇಧಿತ ಪಿಎಫ್‌ಐ ಸಕ್ರೀಯ, ಆಸ್ತಿ ಮುಟ್ಟುಗೋಲು ಹಾಕಬೇಕು – ಬಿಜೆಪಿ ಸತ್ಯಶೋಧನಾ ವರದಿಯಲ್ಲಿ ಏನಿದೆ?