Tag: c t ravi

  • ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

    ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

    ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ತಕ್ಷಣವೇ ಸಿ.ಟಿ.ರವಿ (C.T.Ravi) ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ ಹೊರಡಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ನೇತೃತ್ವದ ಪೀಠವು ಆರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡಿ. ಸಿ.ಟಿ.ರವಿ ಈಗ ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡಿ ಎಂದು ಮಧ್ಯಂತರ ಆದೇಶ ನೀಡಿದ್ದಾರೆ. ಅಲ್ಲದೇ, ತನಿಖೆಗೆ ಸಹಕರಿಸಬೇಕು ಎಂದು ಸಿ.ಟಿ.ರವಿಗೆ ಷರತ್ತನ್ನು ಕೋರ್ಟ್‌ ವಿಧಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಕೊಲೆಗಡುಕ ಅಂತ ಹೇಳಿರೋ ಲಕ್ಷ್ಮಿ ಹೆಬ್ಬಾಳ್ಕರ್, ಬೆಂಬಲಿಗರನ್ನು ಬಂಧಿಸಬೇಕು – ಜನಾರ್ದನ ರೆಡ್ಡಿ

    ಸಿ.ಟಿ.ರವಿ ಪರ ವಕೀಲ ಅಶೋಕ್ ಹಾರನಹಳ್ಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದ ಮಂಡಿಸಿದರು.

    ಆರೋಪಿ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಜಾಮೀನು ಅರ್ಜಿ ವಿಚಾರಣೆ ಮಾಡಲು ಸಾಧ್ಯವಿಲ್ಲ. ಇವತ್ತು ಬೆಳಗಾವಿ ಕೋರ್ಟ್ಗೆ ಹಾಜರುಪಡಿಸಿದರು. ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣ ಇದೆ ಅಂತ ಬೆಂಗಳೂರಿಗೆ ಕಳಿಸಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದಿಸಿದರು.

    ಸಿ.ಟಿ.ರವಿ ಪರ ವಕೀಲ ಅಶೋಕ್ ವಾದ ಮಂಡಿಸಿ, 4 ಪುಟಗಳ ದೂರಿನ ಪ್ರತಿ ಇದೆ. ಆಕ್ಷೇಪಣಾ ಪದ ಬಳಕೆ ಮಾಡಿದ್ದಾರೆ ಅಂತ ಆಪ್ತ ಸಹಾಯಕ ಮೂಲಕ ದೂರು ನೀಡಿದ್ದಾರೆ. ದೂರಿನಲ್ಲಿ ದೂರುದಾರರ ಸಹಿ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಸಹಿ ಇಲ್ಲ ಎಂದು ದೂರಿನ ಪ್ರತಿ ಓದಿದರು. ಇದನ್ನೂ ಓದಿ: ಸಿ.ಟಿ ರವಿ ಕೇಸ್‌ ಬೆಂಗಳೂರಿಗೆ ಶಿಫ್ಟ್‌ – ಬೆಳಗಾವಿ ಕೋರ್ಟ್‌ ಆದೇಶ

    ದಸ್ತಗಿರಿ ಮಾಡದೇ ಇದ್ದಲ್ಲಿ ಎಂಬುದನ್ನು ದೂರಿನಲ್ಲಿ ದೂರುದಾರರೇ ಬರೆದಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಅಂತ ಹೇಳಿದ್ದಾರೆ. ಸಾಕ್ಷಿಗಳು ಎಲ್ಲಾ ಆಡಳಿತ ಪಕ್ಷದವರೇ ಆಗಿದ್ದಾರೆ. ಅವರ ಮೇಲೆ ಪ್ರಭಾವ ಬೀರುತ್ತಾರೆ ಎನ್ನಲಾಗಿದೆ. ನೋಟಿಸ್ ನೀಡುವ ವಿಚಾರದಲ್ಲಿ ಸಹಿ ಮಾಡಿಲ್ಲ ಅರೆಸ್ಟ್ ಮಾಡಿದ್ದಾರೆ. 19ನೇ ತಾರೀಖು ನೋಟಿಸ್ ನೀಡಿದ್ದಾರೆ. 19ನೇ ತಾರೀಖು ವಿಚಾರಣೆ ನೋಟಿಸ್ ನೀಡಿದ್ದಾರೆ. ತಕ್ಷಣವೇ ಅರೆಸ್ಟ್ ಮಾಡಿದ್ದಾರೆ. ಖಾನಾಪುರದ ಬಳಿ ಅರೆಸ್ಟ್ ಮಾಡಲಾಗಿದೆ ಅಂತ ಉಲ್ಲೇಖ ಮಾಡಿದ್ದಾರೆ. ಸುವರ್ಣಸೌಧದಲ್ಲಿ ಅರೆಸ್ಟ್ ಮಾಡಿದ್ದಾರೆ. ಖಾನಾಪುರ ಅಂತ ಅರೆಸ್ಟ್ ಮೊಮೋದಲ್ಲಿ ಇದೆ. ಅರೆಸ್ಟ್ ಮೆಮೋದಲ್ಲಿ ಆರೋಪಿತ ನ್ಯಾಯಾಲಯಕ್ಕೆ ಹಾಜರಾಗೋದಿಲ್ಲ ಪರಾರಿ ಆಗುತ್ತಾರೆ ಅಂತ ಪೊಲೀಸರು ಬರೆದಿದ್ದಾರೆ. ಒಂದೇ ದಿನಕ್ಕೆ ಎಲ್ಲಾ ವಿಚಾರದ ಅಂತಿಮ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ದೂರುದಾರರ ಸಹಿ ಇಲ್ಲದೇ ಇದ್ದಾಗ ಕೋರ್ಟ್ ಆದೇಶಗಳು ಏನು ಹೇಳುತ್ತವೆ ಎನ್ನೋದರ ಬಗ್ಗೆ ವಕೀಲ ಅಶೋಕ್ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಬಹುದು ಎಂದು ಧನಂಜಯ್ ಪೀಠದ ಆದೇಶ ಉಲ್ಲೇಖಿಸಿ ವಾದಿಸಿದರು.

    ಸದನದಲ್ಲಿ ಏನನ್ನಾದರೂ ಮಾತಾಡಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜನಪ್ರತಿನಿಧಿಗಳಿಗೆ ಇರುವ ಅಧಿಕಾರದ ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ಜಸ್ಟೀಸ್ ಚಂದ್ರಚೂಡ್ ನೀಡಿದ ಆದೇಶ ಓದಿದ ಸಿ.ಟಿ.ರವಿ ಪರ ವಕೀಲರು, ಹೀಗೆ ಮಾಡಿದ್ರೆ ಪ್ರತಿಯೊಬ್ಬರು ದೂರು ನೀಡ್ತಾರೆ. ಪ್ರತಿಯೊಬ್ಬರೂ ಕೂಡ ಮಾನನಷ್ಟ ಮೊಕದ್ದಮೆ ಹಾಕ್ತಾರೆ. ಎಲ್ಲರೂ ಕೂಡ ಇದನ್ನೇ ಮಾಡಿದ್ರೆ ಎಷ್ಟು ಕೇಸ್ ದಾಖಲು ಮಾಡಬಹುದು. ಲಂಚದ ವಿಚಾರ ಬಿಟ್ಟು ಎಲ್ಲ ವಿಚಾರದ ಬಗ್ಗೆ ಮಾತನಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ತಮ್ಮ ವಾದ ಮುಕ್ತಾಯ ಮಾಡಿದರು. ಇದನ್ನೂ ಓದಿ: ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದರೆ ಅದನ್ನ ನಾನೂ ಸಮರ್ಥಿಸಲ್ಲ – ಹೆಚ್‌ಡಿಕೆ

    ಲಕ್ಷ್ಮಿ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್‌ಸುಂದರ್ ವಾದಿಸಿ, ಮಹಿಳೆಗೆ ಪ್ರಾಸ್ಟಿಟ್ಯೂಟ್ ಅಂತ 10 ಬಾರಿ ಕೂಗಿದ್ದಾರೆ. ಒಬ್ಬ ಮಹಿಳೆಗೆ ಒಮ್ಮೆ ಅಲ್ಲ 10 ಬಾರಿ ಕೂಗಿದ್ದಾರೆ. ಅದು ಸದನದಲ್ಲಿ ಕೂಗಿರೋದು ಶೋಭೆ ತರುವಂತದ್ದಲ್ಲ. ಆರೋಪಿ ಹಾಜರುಪಡಿಸದೇ ಜಾಮೀನು ಪಡೆಯಲು ಸಾಧ್ಯವಿಲ್ಲ. ತನಿಖಾಧಿಕಾರಿ ಕೋರ್ಟ್ಗೆ ಎಫ್‌ಐಆರ್ ವರ್ಗಾವಣೆ ಕಳಿಸಿದ್ದಾರೆ. ಬೆಳಗಾವಿಯ ಹಾಜರುಪಡಿಸಿದಾಗ ಬೆಂಗಳೂರಿಗೆ ಹೇಳಿದ್ದಾರೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಬೇಕು. ಬೆಳಗಾವಿಯ ಕೋರ್ಟ್ ಮುಂದೆ ಹಾಜರುಪಡಿಸಿದಾಗ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಕೂಡ ಜಾಮೀನು ಅರ್ಜಿ ಪೆಂಡಿಂಗ್ ಇದೆ. ಹೀಗಿರುವಾಗ ಸೆಷನ್ಸ್ ಕೋರ್ಟ್ಗೆ ಹೇಗೆ ಅರ್ಜಿ ಸಲ್ಲಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಎಲ್ಲಿದೆ ಎಂದು ವಾದಿಸಿದರು.

    ಯಾವುದೇ ಮಹಿಳೆಗೆ ಅವಮಾನ ಮಾಡುವುದನ್ನ ಯಾವ ಕಾನೂನು ಕೂಡ ಸಹಿಸುವುದಿಲ್ಲ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದನ್ನ ಸಂವಿಧಾನದ ಯಾವ ಕಾನೂನು ಸಹಿಸುವುದಿಲ್ಲ ಎಂದು ಶ್ಯಾಮ್‌ಸುಂದರ್ ತಮ್ಮ ವಾದ ಮುಗಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಆರೋಪಿ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

  • ಹೇಳಿಕೆ ಪರಿಶೀಲನೆಯಾಗಬೇಕಿತ್ತು, ಸರ್ಕಾರದ ತುರ್ತು ನಡೆ ಖಂಡನೀಯ: ಸಿಟಿ ರವಿ ಬಂಧನಕ್ಕೆ ರಾಜ್ಯ ಬಿಜೆಪಿ ಸಂಸದರಿಂದ ವಿರೋಧ

    ಹೇಳಿಕೆ ಪರಿಶೀಲನೆಯಾಗಬೇಕಿತ್ತು, ಸರ್ಕಾರದ ತುರ್ತು ನಡೆ ಖಂಡನೀಯ: ಸಿಟಿ ರವಿ ಬಂಧನಕ್ಕೆ ರಾಜ್ಯ ಬಿಜೆಪಿ ಸಂಸದರಿಂದ ವಿರೋಧ

    ನವದೆಹಲಿ: ಸಿ.ಟಿ.ರವಿ (C.T.Raiv) ಶಿಸ್ತು ಬದ್ಧವಾಗಿ ಸಂಘಟನೆಯಿಂದ ಬಂದ ವ್ಯಕ್ತಿ, ವಿಚಾರದಲ್ಲಿ ಸ್ಪಷ್ಟತೆ ಇರುವ ವ್ಯಕ್ತಿ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಭ್ಯ ಹೇಳಿಕೆ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಹೇಳಿದ್ದಾರೋ ಇಲ್ಲವೋ ತನಿಖೆ ಆಗಲಿ. ದೂರಿನ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಆಗಬೇಕಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Sheeter) ಹೇಳಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಅವರನ್ನು ತಕ್ಷಣವೇ ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರಿಗೆ ಮಾಸಿಕವಾಗಿ, ದೈಹಿಕವಾಗಿ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಅವರ ಮೇಕೆ ದಾಳಿ ಮಾಡಿದವರನ್ನು ಬಂಧಿಸಿಲ್ಲ. ಎರಡು ಕಡೆಗೂ ಸಮಾನ ನ್ಯಾಯ ಇರಬೇಕಿತ್ತು. ಆದರೆ, ಸಿಟಿ ರವಿ ಮೇಲೆ ಸರ್ಕಾರದ ದೌರ್ಜ್ಯವನ್ನು ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ಸಂಸದ ಗೋವಿಂದ ಕಾರಜೋಳ ಮಾತನಾಡಿ, ರಾಜಕಾರಣಿಗಳು ಯಾರೇ ಇರಲಿ, ಯಾವುದೇ ಪಕ್ಷದವರು ಆಗಿರಲಿ 140 ಕೋಟಿ ಜನರಿಗೆ ಮಾದರಿಯಾಗಿರಬೇಕು. ಅಕಸ್ಮಾತ್ ಸಿ.ಟಿ.ರವಿ ಅವರು ಆ ಪದ ಬಳಸಿದ್ದರೆ ತನಿಖೆ ಆಗಬೇಕು. ಆದರೆ, ಅವರನ್ನು ಸರ್ಕಾರ ನಡೆಸಿಕೊಂಡಿರುವ ರೀತಿ ಖಂಡನೀಯ. ತರಾತುರಿಯಲ್ಲಿ ಬಂಧಿಸಿ, ದೇಶದ್ರೋಹಿ ರೀತಿಯಲ್ಲಿ ಬೇರೆ ಬೇರೆ ಕಡೆಗೆ ಸುತ್ತಾಡಿಸಿದ್ದು ತಪ್ಪು. ರವಿ ಅವರ ಜೊತೆ ವಕೀಲರು ಮಾತನಾಡಲು ಅವಕಾಶ ಕೊಟ್ಟಿಲ್ಲ. ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ನಡೆಯುತ್ತಿದೆಯೋ ಅಥವಾ ಚಂಬಲ್ ಕಣಿವೆ ಗೂಂಡಾಗಳ ರೀತಿ ಆಡಳಿತ ನಡೆಯುತ್ತಿದೆಯೋ? ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.

    ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ ಎನ್ನುವುದು ಅವರ ನಡವಳಿಕೆಯಿಂದ ಸ್ಪಷ್ಟವಾಗಿ ಕಾಣಿಸುತ್ತೆ. ಹಿಂದೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಐಪಿಎಸ್ ಅಧಿಕಾರಿ ಬಿಡಲಾಗಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿತು. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

    ಸಿಟಿ ರವಿ ಅವರದು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಇದನ್ನು ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಆದರೆ ಜನಪ್ರತಿನಿಧಿಯನ್ನು ರಾತ್ರಿಯಲ್ಲ ಓಡಾಡಿಸಿದ್ದಾರೆ. ಜನಪ್ರತಿನಿಧಿಗಳ ಹೋರಾಟ ಹತ್ತಿಕ್ಕಲಾಗುತ್ತಿದೆ. ಸಂಸತ್‌ನಲ್ಲಿ ರಾಹುಲ್ ಗಾಂಧಿ ಬಿಜೆಪಿ ಸಂಸದರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲದೆ ಕಾಂಗ್ರೆಸ್ ಹೀಗೆ ವರ್ತಿಸುತ್ತಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಹೆಣ್ಣು ಮಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರೆ ಅದನ್ನು ಒಪ್ಪುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಎಂಎಲ್‌ಸಿ ಸಿ.ಟಿ.ರವಿ ಬಂಧನ

    ಎಂಎಲ್‌ಸಿ ಸಿ.ಟಿ.ರವಿ ಬಂಧನ

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ.ರವಿ (C.T.Ravi) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ ಅವರನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನ ಖಂಡಿಸಿ ಪೊಲೀಸ್ ವ್ಯಾನ್ ಹತ್ತಿ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ಇದನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ ಎಫ್‌ಐಆರ್‌

    ಸುವರ್ಣಸೌಧದ ಬಳಿ ತನ್ನ ಮೇಲೆ ಹಲ್ಲೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿ.ಟಿ.ರವಿ ಆಕ್ರೋಶ ಹೊರಹಾಕಿದರು. ಬಿಜೆಪಿ ನಾಯಕರೆಲ್ಲರೂ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹಲ್ಲೆ ಮಾಡಲು ಬಂದವರು ಗೂಂಡಾಗಳು ಎಂದು ಅಸಮಾಧಾನ ಹೊರಹಾಕಿದರು.

    ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಖಾನಾಪುರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುವರ್ಣ ಸೌಧದಲ್ಲಿ ಹೈಡ್ರಾಮಾ – ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ, ಏಕವಚನದಲ್ಲೇ ಆವಾಜ್‌!

  • ಹಿಂದುತ್ವ ಭಾವದಿಂದ ಒಂದಾಗಿ ಹನುಮ ಜಯಂತಿ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ಭಾರತ ಉಳಿಯುತ್ತೆ: ಸಿ.ಟಿ.ರವಿ

    ಹಿಂದುತ್ವ ಭಾವದಿಂದ ಒಂದಾಗಿ ಹನುಮ ಜಯಂತಿ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ಭಾರತ ಉಳಿಯುತ್ತೆ: ಸಿ.ಟಿ.ರವಿ

    ಮಡಿಕೇರಿ: ಹಿಂದುತ್ವದ ಭಾವದಿಂದ ಒಂದಾಗಿ ಹನುಮ ಜಯಂತಿಯನ್ನು ಮಾಡಿದರೆ, ಮಾತ್ರ ಭವಿಷ್ಯದಲ್ಲಿ ಭಾರತ ಉಳಿಯುತ್ತದೆ ಎಂಬ ಎಚ್ಚರಿಕೆ ನೀಡಲು ಬಂದಿದ್ದೇನೆ ಎಂದು ವಕ್ಪ್ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಅಬ್ಬರಿಸಿದ್ದಾರೆ.

    ಕೊಡಗಿನ ಕುಶಾಲನಗರದಲ್ಲಿ ಹನುಮನ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಹಿಂದಿನ ಕಾಲದಲ್ಲಿ ಋಷಿ ಮುನಿಗಳು ‌ಯಜ್ಞಯಾಗಾದಿ ಮಾಡುವಾಗ ಅದನ್ನ ಭಂಗಗೊಳಿಸಲು ರಾಕ್ಷಸರು ‌ಬರುತ್ತಿದ್ದರಂತೆ. ಭಸ್ಮಸುರ, ಬಕಾಸುರ ಹೀಗೆ ಹಲವಾರು ರಾಕ್ಷಸರು ಇದ್ದರು. ಆ ರೀತಿಯ ಕೋಟೆ ನಾಡಿನ ರಾಕ್ಷಸರು ಈಗ ಇಲ್ಲ. ಅದರೆ, ರಾಕ್ಷಸಿ ಮಾನಸಿಕತೆ ಇರುವ ಜನರು ಇದ್ದಾರೆ. ನಮ್ಮ ದೇವಾಲಯವನ್ನ ಕಂಡರೆ ಅಗದೇ ಇರುವವರು ಇದ್ದಾರೆ. ಭಯೋತ್ಪಾದನೆ ಮೂಲಕ ನರ ಸಂಹಾರ ಮಾಡುವ ಮೂಲಕ ರಕ್ತಪಿಶಾಚಿಗಳು ಇದ್ದಾರೆ. ಜಿಹಾದಿ ಮಾನಸಿಕತೆಯ‌ ಮೂಲಕ ಭಾರತವನ್ನ ಧ್ವಂಸ ಮಾಡುವ ರಾಕ್ಷಸಿ ಮನಸ್ಥಿತಿ ಇರುವಂತಹ ಜನ ಇದ್ದಾರೆ. ಇದೆಲ್ಲದಕ್ಕೂ ಉತ್ತರ ಒಬ್ಬ ವ್ಯಕ್ತಿ ಕೊಟ್ಟರೆ ಸಾಕಾಗುವುದಿಲ್ಲ. ಕೇವಲ ಅಧಿಕಾರದ ಮೂಲಕ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ಉತ್ತರವನ್ನ ಸಮಾಜ ಕೊಡಬೇಕು. ಸಮಾಜ ಒಂದೊಂದು ಪ್ರಶ್ನೆಯನ್ನೂ ತಾನೇ ಹಾಕಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಹಿಂದುತ್ವದ ಭಾವವನ್ನು ಗಟ್ಟಿಗೊಳಿಸಬೇಕು. ಹನುಮ ಜಯಂತಿ ಅಸ್ಪೃಶ್ಯತೆಯನ್ನ ದೂರ ಮಾಡಬೇಕು. ಹನುಮ ಜಯಂತಿ ರಾಮ ಭಕ್ತಿಯ ಮೂಲಕ ರಾಷ್ಟ್ರಕ್ಕೆ ಒಂದು ಶಕ್ತಿಯಾಗಿ ಹಿಂದೂ ಸಮಾಜವನ್ನ ಕಟ್ಟಿಕೊಡಬೇಕು. ಹಾಗಾದರೆ ಮಾತ್ರ ಹನುಮ ಜಯಂತಿ ಮಾಡುವುದರಲ್ಲಿ ಅರ್ಥ‌ ಇದೆ. ನಮ್ಮ ಮನ ಮತ್ತು ಮನೆಯಿಂದ ಅಸ್ಪೃಶ್ಯತೆ ದೂರ ಆಗಲಿ. ಜಾತೀಯತೆ ದೂರ ಆಗಲಿ. ನಾವೆಲ್ಲ ಒಂದು, ನಾವೆಲ್ಲ ಹಿಂದೂ ಭಾವದಿಂದ ಒಂದಾಗಿ ನಿಲ್ಲೋಣ. ಒಂದಾಗಿ ನಿಂತಾಗ ರಾಕ್ಷಸಿ ಶಕ್ತಿ ತಾನಾಗಿಯೇ ಅಡಗಿ ಹೋಗುತ್ತದೆ. ನಮ್ಮಿಂದ ಮೋಸದಿಂದ ವಂಚನೆಯಿಂದ ಆಕ್ರಮಿಸಿ ಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನಮಗೆ ಇನ್ನೊಬ್ಬರದು ಬೇಡ. ಅದ್ರೆ ನಮ್ಮಿಂದ ಮೋಸದಿಂದ ಅಕ್ರಮಿಸಿಕೊಂಡಿದ್ದಾರೋ ಅದನ್ನ ಬೀಡಬೇಕಾ? ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಅಸ್ತಿ ಮುಕ್ತ ಆಗಬೇಕು. ಬರೀ ಅಯೋಧ್ಯೆಯ ರಾಮಮಂದಿರ ಜಾಗ ಮುಕ್ತ ಅದ್ರೆ ಸಾಲದು. ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯ ಸ್ವಾಮಿಯ ದೇವಾಲಯ ಜಾಗವು ಮುಕ್ತವಾಗಬೇಕು ಎಂಬ ಸಂಕಲ್ಪದೊಂದಿಗೆ ಹನುಮ ಜಯಂತಿಯನ್ನ ಆಚರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

  • ಮುಸ್ಲಿಮರನ್ನು ಅವರಂತೆ ಹೆದರಿಸದಿದ್ರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳು ನಾಶವಾಗಲಿವೆ: ಸಿ.ಟಿ ರವಿ

    ಮುಸ್ಲಿಮರನ್ನು ಅವರಂತೆ ಹೆದರಿಸದಿದ್ರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳು ನಾಶವಾಗಲಿವೆ: ಸಿ.ಟಿ ರವಿ

    – ದತ್ತ ಮಾಲಾಧಾರಣೆ ಮಾಡಿದ ನೂರಾರು ಭಕ್ತರು

    ಚಿಕ್ಕಮಗಳೂರು: ಕಾಫಿನಾಡಲ್ಲಿ (Chikkamagaluru) ಇಂದಿನಿಂದ ದತ್ತಜಯಂತಿ (Dattajayanti) ಸಂಭ್ರಮ ಮನೆ ಮಾಡಿದ್ದು, ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಸಚಿವ ಸಿ.ಟಿ ರವಿ (C.T Ravi) ದತ್ತ ಮಾಲಾಧಾರಣೆ (Dattamala )ಮಾಡಿದ್ದಾರೆ.

    ಸಿ.ಟಿ ರವಿಯವರ ಜೊತೆ ಭಜರಂಗದಳ ಮುಖಂಡ ರಘು ಸಖಲೇಶಪುರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ದತ್ತ ಭಕ್ತರಿಂದ ಮಾಲಾಧಾರಣೆ ಮಾಡಲಾಗಿದೆ. ಇಂದಿನಿಂದ 9 ದಿನಗಳ ಕಾಲ ವ್ರತದಲ್ಲಿ ಇರುವ ದತ್ತಭಕ್ತರು, ಡಿಸೆಂಬರ್ 14 ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ. 12ರಂದು ಅನಸೂಯ ಜಯಂತಿ, 13 ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. 14 ರಂದು 25,000ಕ್ಕೂ ಅಧಿಕ ಭಕ್ತರಿಂದ ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಲಿದ್ದಾರೆ.

    ಮಾಲಾಧಾರಣೆ ಬಳಿಕ ಮಾತಾಡಿದ ಸಿ.ಟಿ ರವಿಯವರು, ರಾಜ್ಯದ ಉದ್ದಗಲಕ್ಕೂ ವಕ್ಫ್ ಬೋರ್ಡ್ ಗಲಾಟೆ ಇದೆ. ವಕ್ಫ್ ಬೋರ್ಡಿಗೆ ಕಾಫಿನಾಡಲ್ಲಿ ಮೊದಲ ಬಲಿಯೇ ದತ್ತಪೀಠ, ದತ್ತಾತ್ರೇಯ ದೇವರು. 1973-74ರಲ್ಲಿ ಮೂಲ ದಾಖಲೆ ಪರಿಶೀಲಿಸದೆ ದತ್ತಪೀಠವನ್ನೂ ಸೇರಿಸಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ ಮಾಡಿದ್ದರು. ದತ್ತಪೀಠವನ್ನ ಉಳಿಸಿಕೊಳ್ಳಲು ಜನಾಂದೋಲನ ಮಾಡಿ, ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಯಿತು. ಜನಾಂದೋಲನ ಪ್ರಭಾವ ಬೀರಿದೆ, ನ್ಯಾಯಾಲಯದ ಹೋರಾಟದಲ್ಲಿ ಅರ್ಧ ನ್ಯಾಯ ಸಿಕ್ಕಿದೆ. ಬಾಂಗ್ಲಾ ಬೆಳವಣಿಗೆ ಗಮನಿಸಿದ್ರೆ ಇಸ್ಲಾಂ ಡಿಎನ್‍ಎಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎಂಬಂತೆ ಇದೆ ಎಂದಿದ್ದಾರೆ.

    ಇಸ್ಲಾಂ ಹೆಸರಿನ ಕ್ರೌರ್ಯ, ನರಮೇಧ, ಸಂಸ್ಕೃತಿ ನಾಶಕ್ಕೆ ಸಾಕ್ಷಿ ಬೇಕಿಲ್ಲ. ಅವರನ್ನು ಅವರದ್ದೇ ರೀತಿಯಲ್ಲಿ ಹೆದರಿಸದೇ ಇದ್ದರೆ ಜಗತ್ತಿನ ಎಲ್ಲಾ ಸಂಸ್ಕೃತಿ, ಪರಂಪರೆ, ಭಾಷೆ ನಾಶವಾಗುತ್ತದೆ. ಬಾಂಗ್ಲಾದಲ್ಲಿ 90% ರಷ್ಟು ಮುಸ್ಲಿಮರು ಎಂದು ಹೇಳುತ್ತಿದ್ದಾರೆ. ನೂರು ವರ್ಷಗಳ ಹಿಂದೆ 1% ಮುಸ್ಲಿಮರು ಇರಲಿಲ್ಲ. ಅಖಂಡ ಭಾರತದಲ್ಲೇ ಮುಸ್ಲಿಮರು ಇರಲಿಲ್ಲ ಎಂದಿದ್ದಾರೆ.

    ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಪೂಜೆ ನಡೆಯುವುದರಿಂದ 9 ದಿನಗಳ ಕಾಲ ಜಿಲ್ಲಾದ್ಯಂತ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.

  • ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೆನಾ? ಕುದುರೆನಾ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೆನಾ? ಕುದುರೆನಾ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಬೆಂಗಳೂರು\ಚಿಕ್ಕಮಗಳೂರು: ನಿಮ್ಮ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಎಂಎಲ್‍ಸಿ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಬಿಜೆಪಿ (BJP) ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದು ಹೇಳಿದ್ದಾರೆ.

    ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು ಕಿಡಿಕಾರಿದ್ದಾರೆ.

    ದಿನನಿತ್ಯ ಸುಳ್ಳು ಹೇಳುವುದು ಸಿದ್ದರಾಮಯ್ಯರ ರಾಜಕೀಯದ ಭಾಗವಾಗಿದೆ. ಸುಳ್ಳು ಹೇಳದೆ ಇದ್ದರೆ ಊಟವೂ ಜೀರ್ಣ ಆಗಲ್ಲ. ರಾತ್ರಿ ನಿದ್ದೆಯೂ ಬರಲ್ಲ. ಸುಳ್ಳಿಂದಲೇ ರಾಜಕೀಯ ಆರಂಭ ಆಗಿ, ಸುಳ್ಳಿಂದಲೇ ನಿಮ್ಮ ದಿನಚರಿ ಅಂತ್ಯ ಆಗುವ ರೀತಿ ಇದೆ. ಸಾಕ್ಷಿ ಇದ್ದರೆ ನಿರೂಪಿಸಿ, ಇಲ್ಲ ಎಂದರೆ ಸಾರ್ವಜನಿಕವಾಗಿ ಕ್ಷೇಮೆ ಕೇಳಿ ಎಂದು ಆಗ್ರಹಿಸಿದ್ದಾರೆ.

  • ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು: ಸಿ.ಟಿ.ರವಿ

    ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು: ಸಿ.ಟಿ.ರವಿ

    – ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ ಎಂದ ಎಂಎಲ್‌ಸಿ

    ಚಿಕ್ಕಮಗಳೂರು: ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    ವಕ್ಫ್ ಬೋರ್ಡಿಗೆ (Waqf Board) ಪರಮಾಧಿಕಾರವಿದೆ, ದೇಶ-ಜಗತ್ತಿನ ಯಾವ ಆಸ್ತಿಯನ್ನಾದರೂ ನಮ್ಮದು ಅನ್ನಬಹುದು. ಒಮ್ಮೆ ಘೋಷಣೆ ಮಾಡಿಕೊಂಡರೆ ಅಲ್ಲಾಗೆ ಸೇರಿದ್ದು ಅಂತಾರೆ. ಬಲಿ ಚಕ್ರವರ್ತಿ ವಿಷ್ಣುವಿನ ಅವತಾರದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಮತ್ತೆ ದಾನ ಕೊಡಬೇಕು ಅಂದರೆ ವಿಷ್ಣುವಿನ ಅವತಾರದ ವಾಮನನೇ ಬಂದು ಕೊಡಬೇಕು. ಇಡೀ ಭೂಮಂಡಲವೇ ಮಹಾ ವಿಷ್ಣುಗೆ ಸೇರಿದ್ದು. ಮಹಾವಿಷ್ಣು ಎಲ್ಲಿವರೆಗೆ ಇನ್ನೊಬ್ಬರಿಗೆ ಭೂಮಿ ಕೊಡಲ್ವೋ ಅಲ್ಲಿವರೆಗೂ ಅದು ಸನಾತನ ಧರ್ಮೀಯರದ್ದು. ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿ ಮೇಲೆ ಬದುಕುವ ಹಕ್ಕಿದೆ ಅಷ್ಟೆ. ದಶಾವತಾರ, ದೇವನೊಬ್ಬ ನಾಮ ಹಲವು, ಬಹುದೇವತಾರಾಧನೆ ಬಗ್ಗೆ ನಂಬಿಕೆ ಇಟ್ಟಿದ್ದಾರೋ ಅವರಿಗೆ ಮಾತ್ರ ವಾರಸುದಾರಿಕೆ ಇದೆ ಎಂದು ಹೇಳಿದರು. ಇದನ್ನೂ ಓದಿ: 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ

  • ವಕ್ಫ್ ನೋಟಿಸ್ ಅನ್ನೋದೆ ಕಾನೂನು ಬಾಹಿರ: ಸಿ.ಟಿ ರವಿ

    ವಕ್ಫ್ ನೋಟಿಸ್ ಅನ್ನೋದೆ ಕಾನೂನು ಬಾಹಿರ: ಸಿ.ಟಿ ರವಿ

    – ಮೋದಿ ಟೀಕಿಸಿದ್ರೆ ಸೂರ್ಯನಿಗೆ ಉಗಿದಂತೆ

    ಚಿಕ್ಕಮಗಳೂರು: ವಕ್ಫ್ (Waqf Board) ನೋಟಿಫಿಕೇಶನ್ ಅನ್ನೋದೇ ಕಾನೂನು ಬಾಹಿರ ಎಂದು ಮಾಜಿ ಸಚಿವ ಸಿ.ಟಿ.ರವಿ (C.T Ravi) ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಡಿ.ಆರ್ ಪೊಲೀಸ್ ಗ್ರೌಂಡ್, ರತ್ನಗಿರಿಯ ಜಾಗವನ್ನು ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಹೊರಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಹಳ್ಳಿ-ಹಳ್ಳಿಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದು ಯಾರು? ಬಿಜೆಪಿಯವರೋ ಅಥವಾ ಸಚಿವ ಜಮೀರ್ ಅವರೋ? ಸಿದ್ದರಾಮಯ್ಯ ಈಗ ಸುಳ್ಳು ರಾಮಯ್ಯ ಆಗಿದ್ದಾರೆ. ಜಮೀರ್ ಅವರು ಸಿಎಂ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ಮಾಡ್ತಿದ್ದೇನೆ ಎಂದಿದ್ದಾರೆ. ಇವರು ಸುಮ್ಮನೆ ಬರ್ತಾರೆ, ಹೋಗ್ತಾರೆ ಎಂದು ಭಾವಿಸಬೇಡಿ ಎಂದು ಜಮೀರ್ ಮಾತನಾಡಿದ್ದ ವೀಡಿಯೋ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ, ಗ್ಯಾರಂಟಿ ವಿಚಾರವಾಗಿ ಮೋದಿ (Narendra Modi) ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯರ ವಿರುದ್ಧ ಸಹ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನೀವು ಮೋದಿಯವರನ್ನ ಟೀಕೆ ಮಾಡಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಅದನ್ನು ನೀವೇ ತೊಳೆದುಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.

    ನೀವು ಮೋದಿಯನ್ನ ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದೀರಿ. ನೀವು ಮೋದಿಗೆ 2014, 2019 ಮತ್ತು 2024ರಲ್ಲಿ ಚಾಲೆಂಜ್ ಮಾಡಿದ್ರಿ. ಜನ ನಿಮ್ಮ ನಾಯಕತ್ವಕ್ಕೆ ಮತ ನೀಡ್ಲಿಲ್ಲ. ಮೋದಿಯವರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ ಎಂದರು.

  • ಬುರ್ಖಾ ಧರಿಸಿ ಓಡಾಡಲಿ: ‘ಕೈ’ ನಾಯಕರಿಗೆ ಸಿ.ಟಿ ರವಿ ಸವಾಲು

    ಬುರ್ಖಾ ಧರಿಸಿ ಓಡಾಡಲಿ: ‘ಕೈ’ ನಾಯಕರಿಗೆ ಸಿ.ಟಿ ರವಿ ಸವಾಲು

    ಕಲಬುರಗಿ: ಹಿಜಬ್ ಪರ ಹೋರಾಟಗಾರರ ಬಗ್ಗೆ ಅಷ್ಟೊಂದು ಒಲವು ಹೊಂದಿರುವ ಕಾಂಗ್ರೆಸ್ (Congress) ನಾಯಕರು ಬುರ್ಖಾ ಧರಿಸಿಕೊಂಡು ಓಡಾಡುವುದಾದರೆ ತಾವೇ ಸ್ವತಃ ಬುರ್ಖಾ ಖರೀದಿಸಿ ಕೊಡುವುದಾಗಿ ಬಿಜೆಪಿ (BjP) ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ಲೇವಡಿ ಮಾಡಿದರು.

    ಕಲಬುರಗಿ (kalaburagi) ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ ಎಂಬುದರಿಂದ ಹಿಡಿದು ವಾಲ್ಮೀಕಿ ಹಗರಣದ ಕೋಟ್ಯಂತರ ರೂ. ಅಕ್ರಮವಾಗಿ ಚುನಾವಣೆಗೆ ಬಳಕೆ ಆಗಿದೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಹಾಗಾಗಿ, ಈ ಬಗ್ಗೆ ರಾಜ್ಯದ ಜನರ ಚಿತ್ತ ಬೇರೆಡೆ ಸೆಳೆಯಲು ಹುಬ್ಬಳ್ಳಿ ಗಲಭೆಕೋರರು ಹಾಗೂ ಹಿಜಾಬ್ ಪರ ಹೋರಾಟಗಾರರ ವಿರುದ್ಧ ಹಾಕಲಾಗಿದ್ದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣದಿಂದ ಗ್ರಂಥಾಲಯ ಸ್ಥಾಪಿಸಿ, ಯುವಜನತೆಗೆ ನೆರವಾದ ಮಹಿಳೆ

    ಮೈಸೂರಿನ ಮುಡಾ ಪ್ರಕರಣ (MUDA Scam) ತಮ್ಮ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂಬುದು ಸಹ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನದಟ್ಟಾಗಿದೆ. ಇದೆಲ್ಲವನ್ನೂ ವಿಷಯಾಂತರ ಮಾಡಲು ಅವರು ಶತಪ್ರಯತ್ನ ಮಾಡುತ್ತಿದ್ದಾರೆ ಎಂದು ನೇರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

    ಹುಬ್ಬಳ್ಳಿ (Hubballi) ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಪರವಾಗಿ ತಾವಿರುವುದಾಗಿ ಹೇಳುವ ಸಿಎಂ, ಆಂಜನೇಯಸ್ವಾಮಿಯ ಮೇಲೆ ಕಲ್ಲು ತೂರಾಟ ಮಾಡಿದವರ ಪರವಾಗಿಯೂ ಇದ್ದೇವೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಕುಕ್ಕರ್ ಬ್ಲಾಸ್ಟ್ ಮಾಡಿದವರು ತಮ್ಮ ಬ್ರದರ್ಸ್ ಎನ್ನುತ್ತಾರೆ ಎಂದು ಅಚ್ಚರಿ ಹೊರಹಾಕಿದರು.

    ಬಿಜೆಪಿಯವರು ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಇವರಿಗೆ ಸಿಸಿಟಿವಿ ದೃಶ್ಯಾವಳಿಗಳು ದೇವಸ್ಥಾನ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವುದಕ್ಕೆ ಸಾಕ್ಷಿ ಎನಿಸುತ್ತಿಲ್ಲವೇ? ಪೊಲೀಸರು ಮತ್ತು ದೇವರ ಮೂರ್ತಿಗಳ ಮೇಲೆ ಕಲ್ಲು ತೂರುವವರು ಅಮಾಯಕರು ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾರೆ. ಹಾಗಾದರೆ, ನೀವು ಮುಖ್ಯಮಂತ್ರಿ ಮಾತ್ರವಲ್ಲ, ನ್ಯಾಯವಾದಿ ಸಹ ಆಗಿರುವುದರಿಂದ ಎಲ್ಲವನ್ನೂ ತನಿಖೆ ಮಾಡಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ

    ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಬಿಜೆಪಿ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಉಪ್ಪಿಟ್ಟು ತಿಂದು ಕಾಫಿ ಕುಡಿದು ಬರುತ್ತಿದ್ದಾರೆ. ಸಭೆಯ ಪ್ರಮುಖ ವಿಷಯ ಏನು ಅನ್ನೋದನ್ನೇ ಓದುವುದಿಲ್ಲ. ಏನನ್ನೂ ಓದದೆ ಕೇವಲ ತಲೆ ಅಲುಗಾಡಿಸಿ ಬರುತ್ತಾರೆ ಎಂದು ಟೀಕಿಸಿದರು.ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಚೆನ್ನೈನಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

  • ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ

    ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ

    – ನನ್ನ ಮೇಲಿನ ಯಾವ ಕೇಸ್ ವಾಪಸ್ ಪಡೆದಿದ್ದಾರೆ?

    ಗುಲ್ಬರ್ಗ: ನನ್ನ ಮೇಲಿನ ಯಾವ ಕೇಸ್ ವಾಪಸ್ ಪಡೆದಿದ್ದಾರೆ? ಅದರ ಬಗ್ಗೆ ದಾಖಲೆ ತೋರಿಸಿದರೆ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಕಲಬುರಗಿಯಲ್ಲಿ (Kalaburagi) ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ (C T Ravi) ಹೇಳಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಯಾವ ಕೇಸ್ ಇಲ್ಲ. ಕ್ಯಾಬಿನೆಟ್‌ನಲ್ಲಿ ನನ್ನ ಮೇಲಿನ ಯಾವ ಕೇಸ್ ಕೂಡ ವಾಪಸ್ ಪಡೆದಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ. ನನ್ನ ಮೇಲೆ ಯಾವ ಕೇಸ್ ಇದೆ? ಯಾವುದು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಿ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ, ಹೆಚ್ ಕೆ ಪಾಟೀಲ್ ನನ್ನ ಚಾಲೆಂಜ್ ಸ್ವೀಕರಿಸಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

    ಅವರು ನನ್ನ ರುಜುವಾತು ಮಾಡಬೇಕು. ಇಲ್ಲದೇ ಹೋದ್ರೆ ಜನತೆ ಎದುರು ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು. ಮುಸ್ಲಿಮರ ಓಲೈಕೆಗಾಗಿ ಕೇಸ್ ವಾಪಸ್ ಪಡೆದಿದ್ದಾರೆ. ನನ್ನ ಮೇಲೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಯಾವುದೇ ಕೇಸ್ ಇರಲಿಲ್ಲ. ಕುಕ್ಕರ ಬಾಂಬ್ ಬ್ಲಾಸ್ಟ್ ಪ್ರಕರಣ ಆರೋಪಿಗಳನ್ನು ಕಾಂಗ್ರೆಸ್‌ನವರು ‘ದೇ ಆರ್ ಮೈ ಬ್ರದರ್ಸ್’ ಅಂತಾ ಮುಸ್ಲಿಮರನ್ನು ಓಲೈಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಚೆನ್ನೈನಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

    ಇನ್ನು ಖರ್ಗೆ ಕುಟುಂಬದ ಸಿದ್ದಾರ್ಥ ಟ್ರಸ್ಟ್ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯ ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಕದ್ದ ಮಾಲನ್ನ ವಾಪಸ್ ಕೊಡ್ತಾ ಇದ್ದಾರೆ. ಕದ್ದ ಮಾಲನ್ನ ವಾಪಸ್ ಕೊಟ್ಟರೆ ಅದನ್ನ ಸಾಕ್ಷಿಯಾಗಿ ಪರಿಗಣಿಸುತ್ತಾರೆ. ಆತ್ಮಸಾಕ್ಷಿ ಬಗ್ಗೆ ಮಾತಾಡುವ ಇವರು ಒಂದು ಕೇಸ್ ವಾಪಸ್ ಪಡೆಯಲು ಒಬ್ಬ ವ್ಯಕ್ತಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿದೆ. ಸಮಯ ಬಂದಾಗ ಅದನ್ನ ಬಹಿರಂಗ ಪಡಿಸುತ್ತೇನೆ. ಕೇಸ್ ವಾಪಸ್ ಪಡೆಯಲು ಯಾವ ಹಂತಕ್ಕೆ ಹೋಗಿದ್ದಾರೆ ಎಂದೂ ಗೊತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲು ಕೂಡ ಖರೀದಿ ಮಾಡಬಹುದು ಅಂತಾ ಅಂದುಕೊಂಡಿದ್ದಾರೆ ಎಂದು ‘ಕೈ’ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು – ಛಿದ್ರ ಛಿದ್ರವಾದ ದೇಹಗಳು