– ಪಾಕ್‌ಗೆ ಜಿಂದಾಬಾದ್ ಎಂದವನಿಗೆ ಹೊಡೆದಿದ್ದಕ್ಕೆ ಭಾರತ್ ಮಾತಾಕಿ ಜೈ ಎನ್ನುವವನ ಹತ್ಯೆ
ಚಿಕ್ಕಮಗಳೂರು: ಕ್ರಿಕೆಟ್ ಗ್ರೌಂಡ್‌ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದಿದ್ದಕ್ಕೆ ಪ್ರತಿಕಾರವಾಗಿ ಭಾರತ್ ಮಾತಾ ಕೀ ಜೈ ಎನ್ನುವವನನ್ನು ಹತ್ಯೆ ಮಾಡಲಾಗಿದೆ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮಂಗಳೂರಿನ (Mangaluru) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty ) ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ಹೊರಗಿನ ಶತ್ರುಗಳನ್ನು ಸೇನೆ ನೋಡಿಕೊಳ್ಳುತ್ತೆ, ಆದರೆ ಒಳಗಿನ ಶತ್ರುಗಳನ್ನ ರಾಜಕಾರಣದಿಂದ ದೂರವಿಟ್ಟು ಬೇರು ಸಹಿತ ಕಿತ್ತುಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ
ಎಸ್‌ಡಿಪಿಐ ಮತಾಂಧತೆಯ ಹುಚ್ಚು ಹಿಡಿದ ದ್ರೋಹಿಗಳನ್ನು ಸಂಘಟಿಸೋ ಕೆಲಸ ಮಾಡುತ್ತಿದೆ. ಇವರೆಲ್ಲಾ ಮತಾಂಧತೆಯ ಹುಚ್ಚು ಹಿಡಿಸಿಕೊಂಡಿರುವ ದೇಶದ್ರೋಹಿಗಳು. ಇವರನ್ನ ಸಹಿಸೋದಾಗಲಿ, ಕ್ಷಮಿಸೋದಾಗಲಿ ಎರಡನ್ನೂ ಮಾಡಬಾರದು. ವಿಧಾನಸೌಧದ ಕಾರಿಡಾರ್‌ಗೆ ಬಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಇವರನ್ನು ನಿಯಂತ್ರಿಸದಿದ್ದರೆ, ಬೇರು ಸಹಿತ ಕಿತ್ತು ಹಾಕದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನು ಸುಹಾಸ್ ಶೆಟ್ಟಿ ಕೊಲೆ ಎಂದು ನೋಡಬಾರದು. ದೇಶದ್ರೋಹಿಗಳು ದೇಶದೊಳಗೆ ನಡೆಸುತ್ತಿರುವ ಷಡ್ಯಂತ್ರ ಎಂದು ನೋಡಬೇಕು. ರಾಷ್ಟ್ರ ಭಕ್ತರನ್ನ ಯಾವ ರೀತಿ ಕೊಲ್ಲುತ್ತಿದ್ದಾರೆ ನೋಡಿ ಮುಖ್ಯಮಂತ್ರಿಗಳೆ, ನೀವು ಎಸ್‌ಡಿಪಿಐ ಹಾಗೂ ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದಿದ್ದೀರಿ. ಈ ಮೂಲಕ ಅವರಿಗೆ ಅಪರಾಧ ನಡೆಸೋಕೆ ಮತ್ತಷ್ಟು ಬಲ ಕೊಡುತ್ತಿದ್ದೀರಾ? ಅವರ ಮೇಲಿದ್ದ ಕೇಸ್ ವಾಪಸ್ ಪಡೆದದಿದ್ದನ್ನು ಹಿಂತೆಗೆದುಕೊಳ್ಳಿ. ಇಲ್ಲವಾದರೆ ಈ ರೀತಿಯ ಹತ್ಯೆಗೆ ನೀವೇ ಪರೋಕ್ಷ ಕಾರಣರಾಗ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇದು ಧರ್ಮದ ನಡುವೆ ಆದ ಗಲಾಟೆ ಅಲ್ಲ: ಯು.ಟಿ.ಖಾದರ್
ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಕುರಿತು ಸಮಗ್ರ ಚರ್ಚೆಗೆ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆಯಲಿ ಎಂದು ಪರಿಷತ್ ಸದಸ್ಯ ಸಿ ಟಿ ರವಿ (C.T. Ravi) ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಮುಖ್ಯಮಂತ್ರಿಗಳು ಅವರ ಸಂಪುಟದ ಸದಸ್ಯರಿಗೇ ಸಮಾಧಾನ ಪಡಿಸಲು ಆಗಿಲ್ಲ. ನಿಮ್ಮ ಶಾಸಕರಿಗೇ ವರದಿ ಬಗ್ಗೆ ಒಪ್ಪಿಸಲು ಆಗಿಲ್ಲ. ಇನ್ನೂ ರಾಜ್ಯದ ಜನರಿಗೆ ಹೇಗೆ ಒಪ್ಪಿಸ್ತೀರಾ ಎಂದು ಪ್ರಶ್ನಿಸಿದರು. ಮೂಲ ವರದಿಯೇ ಇಲ್ಲ, ಸದಸ್ಯ ಕಾರ್ಯದರ್ಶಿ ಅವರೇ ಆ ಸಮೀಕ್ಷೆಗೆ ಸಹಿ ಹಾಕಿಲ್ಲ. ಅದಕ್ಕೆ ಹೇಗೆ ಮಾನ್ಯತೆ ಸಿಗುತ್ತೆ? ವರದಿಯಲ್ಲಿ ವ್ಯತ್ಯಾಸಗಳು ಬಹಳ ಇವೆ. ಕೆಲವು ಸಮುದಾಯಗಳ ಸಂಖ್ಯೆ ಹೆಚ್ಚಾಗಿದೆ, ಕೆಲವರದ್ದು ಕಡಿಮೆ ಆಗಿದೆ. ಇದನ್ನು ಹೇಗೆ ಸರಿಪಡಿಸ್ತೀರಿ? ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ, ಇದು ಜಾಹೀರಾತಿನ ಸರ್ಕಾರ: ಬಿವೈವಿ
ರಾಜ್ಯದ ನಂಬರ್ ಒನ್ ಜನಸಂಖ್ಯೆ ಮುಸ್ಲಿಂ ಅಂತ ಹೇಳಿದ್ದಾರೆ. ಹಾಗಾದರೆ ಅವ್ರು ಹೇಗೆ ಮೈನಾರಿಟಿ ಆಗ್ತಾರೆ? ಅವರು ಬಹುಸಂಖ್ಯಾತರು, ಅವರನ್ನು ಅಲ್ಪಸಂಖ್ಯಾತ ಮಾನ್ಯತೆಯಿಂದ ತೆಗೆಯಿರಿ. ನಿಮ್ಮ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ. ಎಲ್ಲೆಲ್ಲಿ ಸಮೀಕ್ಷೆ ಹೋಗಿದ್ರು? ವರದಿ ಎಷ್ಟು ವೈಜ್ಞಾನಿಕ ಎಂದು ಚರ್ಚೆಯಾಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Pahalgam Attack | ದೆಹಲಿ, ಮುಂಬೈ ಪ್ರವಾಸಿ ತಾಣಗಳ ಮೇಲೂ ನಿಗಾ, ಬುಧವಾರ ಜಮ್ಮು ಬಂದ್‌ಗೆ ಕರೆ
– ಮುಸ್ಲಿಮರನ್ನ ಇಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ – ಭಯೋತ್ಪಾದನೆ ಜಾಲದ ವಿಸ್ತರಣೆಯ ಸಂಚು ಮಾಡುತ್ತಿದೆ
ಚಿಕ್ಕಮಗಳೂರು: ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ ಎಂದು ಮಾಜಿ ಸಚಿವ ಸಿ.ಟಿ ರವಿ (C T Ravi) ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ (Chikkamagaluru) ಜಾತಿ ಜನಗಣತಿ ವರದಿ (Caste Census Report) ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರಕ್ಕೆ ಇರುವುದು. ಇವರು ಸಾಮಾಜಿಕ, ಆರ್ಥಿಕ ಸಮೀಕ್ಷೆ ಎಂದು ಹೇಳಿದ್ದಾರೆ. ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈಗಲೇ ಸತ್ಯ-ಸುಳ್ಳು ಎಂದು ಪ್ರತಿಕ್ರಿಯಿಸುವುದು ಕಷ್ಟ. ಅನಧಿಕೃತವಾಗಿ ಸೋರಿಕೆ ಆಗಿರುವುದನ್ನು ಸತ್ಯ ಎಂದು ಭಾವಿಸಿದ್ರೆ ಚರ್ಚೆ ಹುಟ್ಟು ಹಾಕುತ್ತದೆ ಎಂದರು. ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ
ಅಲ್ಪಸಂಖ್ಯಾತರು ಯಾರು? ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ? ಮೀಸಲಾತಿ ಸಂಬಂಧ ಕೋರ್ಟ್‌ನಲ್ಲಿ ಮೊಕದ್ದಮೆ ಇದ್ದಾಗ ಕೇಂದ್ರ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಬಡ್ತಿ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ. ಸಮಾಜ ಒಡೆಯುವ ದುರುದ್ದೇಶವನ್ನ ನಾವು ಬೆಂಬಲಿಸುವುದಿಲ್ಲ. ಕೆಲ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷಗಳು ಹಿಂದೂ ಸಮಾಜವನ್ನ ಜಾತಿವಾರು ಒಡೆಯುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್
ಮುಸ್ಲಿಮರಲ್ಲೂ 56 ಜಾತಿಗಳಿವೆ, ಮುಟ್ಟಿಸಿಕೊಳ್ಳದ ಜಾತಿ ಕೂಡ ಇದ್ದಾರೆ. ಪಸ್ಮಾಂಡ ಮುಸ್ಲಿಂ ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಅಂತ ಭಾವಿಸುತ್ತಾರೆ ಅವರು ಹೆಣ್ಣು ಕೊಡಲ್ಲ, ಹೆಣ್ಣು ತರಲ್ಲ. ಮುಸ್ಲಿಮರನ್ನ ಹಿಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿ ಬದ್ಧತೆಯಾಗಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್
ವಕ್ಫ್ ಬೋರ್ಡ್ ಕಾಯ್ದೆ (Waqf Board Act) ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡ್ತಿದೆ. ಹಿಂದೆ ಸಿಎಎ ವಿರುದ್ಧವೂ ಕಾಂಗ್ರೆಸ್ ಇದೇ ಅಪಪ್ರಚಾರ ಮಾಡಿತ್ತು. ಕಾಂಗ್ರೆಸ್ ನಿಲುವು ರಾಷ್ಟ್ರಘಾತುಕ ನಿಲುವು, ಈಗ ವಕ್ಫ್ ಬಿಲ್‌ನಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾದ ಜಮೀನನ್ನ ಯಾರೂ ಕಿತ್ತುಕೊಳ್ಳಲ್ಲ. ಅಕ್ರಮವಾಗಿ ಕಬಳಿಸಿದ ಜಮೀನನ್ನು ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ದೇವಸ್ಥಾನದ ಜಮೀನು ನಮ್ಮದು ಎಂದರೆ ಬಿಡಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್, ಪಾರ್ಲಿಮೆಂಟ್ ನಮ್ಮದು ಎಂದು ಹೇಳಲು ಅವಕಾಶ ಕೊಡಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್‌ಗೆ 2,300 ಪುಟಗಳ ಅಂತಿಮ ವರದಿ ಸಲ್ಲಿಕೆ
ಅಕ್ರಮಕ್ಕೆ ಅವಕಾಶವಿಲ್ಲ. ನ್ಯಾಯಬದ್ಧವಾಗಿದ್ದರೆ ದಾಖಲೆ ನೋಡುತ್ತಾರೆ. ಗ್ರ‍್ಯಾಂಟ್ ಆಗಿದ್ಯಾ, ದಾನ ಕೊಟ್ಟಿದ್ದಾರಾ, ಕೊಂಡುಕೊಂಡಿದ್ದಾರಾ ನೋಡಬೇಕು. ಅದರಲ್ಲಿ ತಪ್ಪೇನಿದೆ. ಮಸೀದಿ ಕಿತ್ತುಕೊಳ್ತಾರೆ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಆ ರೀತಿ ಏನು ಆಗಲ್ಲ. ಅಪಪ್ರಚಾರದ ಜೊತೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ರಾಷ್ಟ್ರಘಾತುಕ. ಭಯೋತ್ಪಾದಕ ಸಂಘಟನೆ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಸಂದರ್ಭದ ಲಾಭ ಪಡೆದು ಭಯೋತ್ಪಾದನೆ ಜಾಲದ ವಿಸ್ತರಣೆಯ ಸಂಚು ಮಾಡುತ್ತಿರುವ ಮಾಹಿತಿ ಬಂದಿದೆ ಎಂದು ಗುಡುಗಿದರು. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ
ಸಂವಿಧಾನ ಬಾಹಿರವಾಗಿ ನಡೆದುಕೊಳ್ಳಬೇಕೆಂದು ಕಾಂಗ್ರೆಸ್ ಸಂಚು
ಮನವಿ ಕೊಟ್ಟರೆ ಆಗಲ್ಲ. ಒಂದೊಂದು ಊರಲ್ಲಿ 10 ಹೆಣ ಬೀಳಬೇಕು ಎಂದು ಕಾಂಗ್ರೆಸ್ ಕಾರ್ಪೋರೇಟರ್ ಕಬೀರ್ ಖಾನ್ ಹೇಳುತ್ತಾನೆ. ರೈಲು, ಬಸ್‌ಗಳನ್ನು ಸುಡಬೇಕು. ದೊಂಬಿ ನಡೆಯಬೇಕು ಆಗ ಮಾತ್ರ ಬಗ್ಗಿಸಬಹುದು ಎಂದು ಹೇಳುತ್ತಾನೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಭಯೋತ್ಪಾದನೆ ನಡೆಸಬೇಕು ಎಂದು ಎಂದು ಹೇಳುವವನು ಕಾಂಗ್ರೆಸ್ ಪಕ್ಷ ಕಾರ್ಪೋರೇಟರ್. ಈವರೆಗೂ ಪಕ್ಷ ಅವನನ್ನ ಕಿತ್ತು ಹಾಕಿಲ್ಲ. ಫತ್ವಾ ಹೊರಡಿಸಿಲ್ಲ, ಮುಸ್ಲಿಂ ಸಂಘಟನೆಯೂ ಅದನ್ನ ತಪ್ಪು ಅಂತ ಹೇಳಿಲ್ಲ. ಸಂವಿಧಾನ ಬಾಹಿರವಾಗಿ ನಡೆದುಕೊಳ್ಳಬೇಕೆಂದು ಸಂಚು ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಹಾಸನ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ 807 ಅತ್ಯಾಚಾರ ಆಗಿವೆ ಎಂದು ಮಾಜಿ ಸಚಿವ ಹಾಗೂ ಪರಿಷತ್ ಸದಸ್ಯ ಸಿ.ಟಿ.ರವಿ ಬೇಸರ ಹೊರಹಾಕಿದರು.
ಹಾಸನದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ತಂದೆ ಜೊತೆ ಮಗಳು ಹೋಗುವ ಹಾಗಿಲ್ಲ, ಅಣ್ಣ-ತಂಗಿ ಜೊತೆ ಹೋಗುವ ಹಾಗಿಲ್ಲ, ವಿದೇಶಿ ಪ್ರವಾಸಿಗರು ಬಂದರೆ ಅತ್ಯಾಚಾರ ಮಾಡ್ತಾರೆ. 1,500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, 1,530 ಕೊಲೆಯಾಗಿವೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರೂಪ. ಸರ್ಕಾರಿ ಅಧಿಕಾರಿ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜನರು ಸುಖವಾಗಿದ್ದಾರೆ ಅಂಥ ಭಾವಿಸಬೇಕಾ? ಹೆಂಗಸರಿಗೆ ಫ್ರೀ, ಗಂಡನ ಜೇಬಿಗೆ ಕತ್ತರಿ. ಪಿಕ್‌ಪ್ಯಾಕೆಟ್ ಅಂದರೆ ಗೊತ್ತಿಲ್ಲದೆ ಮಾಡ್ತಾರೆ ಅಂದುಕೊಳ್ಳಬಹುದು. ಸ್ಟಾಂಪ್ ಪೇಪರ್ ಬೆಲೆ ಎಷ್ಟು? ಇದಕ್ಕಿಂತ ಮನೆಹಾಳರು ಬೇಕು. ಕಸದ ಮೇಲೂ ಟ್ಯಾಕ್ಸ್, ಬರ್ತ್, ಡೆತ್‌ಸರ್ಟಿಫಿಕೇಟ್‌ಗೂ ಡಬಲ್. ಚಂಬಲ್ ಕಣಿವೆ ಡಕಾಯಿತರು ರಾತ್ರಿ ಬರುತ್ತಿದ್ದರು ಕಳ್ಳತನಕ್ಕೆ. ಆದರೆ, ಕಾಂಗ್ರೆಸ್‌ನವರು ಹಗಲು ವೇಳೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಸರ್ಕಾರಕ್ಕೆ ಇದೆಯಾ? ಇಡೀ ರಾಜ್ಯದಲ್ಲಿ ಜನಾಕ್ರೋಶ ಎದ್ದಿದೆ. ಮುಲ್ಲಾಗಳ ಕಣ್ಣಿಗೆ ಬೆಣ್ಣೆ, ಎಸ್ಸಿ-ಎಸ್ಟಿಗಳಿಗೆ ಸುಣ್ಣ. ಕಾಂಗ್ರೆಸ್ ಕೆಟ್ಟ ಸರ್ಕಾರ. ಅದನ್ನು ಕಿತ್ತು ಎಸೆಯುವವರೆಗೂ ಹೋರಾಟ ಮುಂದುವರೆಸಿ. ಕಾಂಗ್ರೆಸ್ ಸರ್ಕಾರ ಕಿತ್ತೆಸೆದು ಬಿಜೆಪಿ ಸರ್ಕಾರ ತನ್ನಿ ಎಂದು ಜನತೆಗೆ ಕರೆ ನೀಡಿದರು.
ಶಾಸಕ ಶ್ರೀರಾಮುಲು ಮಾತನಾಡಿ, 2028 ರಲ್ಲಿ ಪ್ರೀತಂಗೌಡ ಸೇರಿ ಏಳಕ್ಕೆ ಏಳು ಬಿಜೆಪಿ (ಹಾಸನದಲ್ಲಿ) ಗೆಲ್ಲಬೇಕು. ಕಾಂಗ್ರೆಸ್ ಸರ್ಕಾರ ಈ ರಾಜ್ಯದಿಂದ ತೊಲಗಬೇಕು. ಎಲ್ಲಾ ಮಂತ್ರಿಗಳು ಭಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾರು ಹೆಚ್ಚು ಹಣ ಕಲೆಕ್ಷನ್ ಮಾಡ್ತಾರೋ, ಅವರು ಐದು ವರ್ಷ ಸಚಿವರು. ಜನರೆಲ್ಲರೂ ಬಿಜೆಪಿ ಜೊತೆ ಬರಬೇಕಿದೆ. ಇದು 420, ಪಿಕ್‌ಪ್ಯಾಕೆಟ್ ಸರ್ಕಾರ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಣವನ್ನು ಬೇರೆ ಬೇರೆ ಕಡೆ ಉಪಯೋಗಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಗೆಲ್ಲಬೇಕು, ಕಮಲ ಅರಳಬೇಕು ಎಂದರು.
– ಕಾಂಗ್ರೆಸ್ ಆಡಳಿತ ಮಾಡಿದ್ದು 22 ತಿಂಗಳು.. ಅದರಲ್ಲಿ 18 ತಿಂಗಳು ಬೆಲೆ ಏರಿಕೆಯದ್ದೇ ಸುದ್ದಿ
ನವದೆಹಲಿ: ಬೆಲೆ ಏರಿಕೆ ಮಾಡುತ್ತೇವೆ ಅಂತ ಮುಂಚೆ ಹೇಳಿದ್ದರೆ ಕಾಂಗ್ರೆಸ್ 50 ಸೀಟ್ ಕೂಡ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಯುಗಾದಿ, ರಂಜಾಬ್ ಒಟ್ಟಿಗೆ ಬಂತಲ್ಲ ಅದಕ್ಕೆ ಸರ್ಕಾರ ಹೀಗೆ ಮಾಡಿದೆ. ಆಳ್ವಿಕೆ ಮಾಡಿದ 22 ತಿಂಗಳು, ಅದರಲ್ಲಿ 18 ತಿಂಗಳು ಬೆಲೆ ಏರಿಕೆ ಸುದ್ದಿ. ಹಾಲಿನ ಬೆಲೆ, ಆಲ್ಕೋಹಾಲ್‌ನಿಂದ ಹಿಡಿದು ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ರು. ಹೇಳದೆ ಬೆಲೆ ಏರಿಕೆ ಮೂಲಕ ಬರೆ ಹಾಕಲಾಗುತ್ತಿದೆ. ಇದನ್ನು ಮುಂಚೆ ಹೇಳಿದ್ದರೆ 50 ಸೀಟು ಗೆಲ್ಲುತ್ತಿರಲಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ಕಸ ಸಂಗ್ರಹಣೆಗೂ ಸೆಸ್ ವಿಧಿಸಲಾಗುತ್ತಿದೆ. ಬ್ರ‍್ಯಾಂಡ್ ಬೆಂಗಳೂರು ಅಂತಾರೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿ. ಜನರು ಶಾಪ ಹಾಕುತ್ತಿದ್ದಾರೆ. ಹಿಮಾಲಯದಲ್ಲಿ ಶೌಚಾಲಯಕ್ಕೂ ಟ್ಯಾಕ್ಸ್ ಹಾಕಿದ್ದರು. ಹಾಗೇ ರಾಜ್ಯದಲ್ಲಿ ಉಸಿರಾಡುವ ಗಾಳಿಗೆ ಟ್ಯಾಕ್ಸ್ ಹಾಕಬಹುದು ಎಂದು ಲೇವಡಿ ಮಾಡಿದ್ದಾರೆ.
ಕೋರ್ಟ್ ಕೇಸ್ ನಿಮಿತ್ಯ ದೆಹಲಿಗೆ ಬಂದಿದ್ದೆ. ಹಾಗೆಯೇ ಬಿಜೆಪಿ ಕಚೇರಿಗೆ ಭೇಟಿ ಮಾಡಿ ಬಂದೆ. ಯತ್ನಾಳ್ ವಿಚಾರಕ್ಕೆ ಸಂಬAಧಿಸಿ ಏನೂ ಮಾತನಾಡಲ್ಲ. ಎಲ್ಲವನ್ನು ಕಾಲಕ್ಕೆ ಬಿಡುತ್ತೇನೆ. ಈಗ ಏನ್ ಮಾಡಿದ್ರೂ ತಪ್ಪಾಗುತ್ತೆ. ಯತ್ನಾಳ್ ಹೊಸ ಪಕ್ಷ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಸಮಯ ಎಲ್ಲವನ್ನು ನಿರ್ಧಾರ ಮಾಡಲಿದೆ. ಬಿಜೆಪಿ ಕಾಂಗ್ರೆಸ್ ಯಾರಿಗೆ ಎಫೆಕ್ಟ್ ಆಗುತ್ತೆ ಗೊತ್ತಿಲ್ಲ. ಹಿಂದೆಯೂ ಬಹಳ ಜನರು ಪಕ್ಷ ಸ್ಥಾಪಿಸಿದವರು ಯಶಸ್ವಿಯಾಗಿಲ್ಲ, ಡ್ಯಾಮೇಜ್ ಮಾಡಬಹುದು ಎಂದು ತಿಳಿಸಿದ್ದಾರೆ.
ಶಾಸಕರ ಪುತ್ರನಿಂದ ಮೊಲ ಬೇಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅರಣ್ಯ ಕಾಯ್ದೆ ಜನರಿಗೂ, ಮಂತ್ರಿಗಳಿಗೂ ಅನ್ವಯ ಆಗುತ್ತೆ. ಹಿಂದೆ ಪ್ರಭಾವಿ ರಾಜಕೀಯ ಮನೆಯಲ್ಲಿ ಅತಿಥಿಗಳಿಗೆ ಕಾಡು ಪ್ರಾಣಿ ಸಾಕಿ ಹತ್ಯೆ ಮಾಡಿ ಊಟಕ್ಕೆ ನೀಡಲಾಗುತ್ತಿತ್ತು. ಈ ವಿಷಯದಲ್ಲಿ ಸರ್ಕಾರ ಏನ್ ಮಾಡುತ್ತೆ ನೋಡೋಣ ಎಂದಿದ್ದಾರೆ.
ಬೆಂಗಳೂರು: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಈ ಒಂದು ಮಂತ್ರದ ಮೂಲಕ ಎಲ್ಲರಿಗೂ ಯೋಜನೆ ತಲುಪುವಂತೆ ಮಾಡಲಾಗಿದೆ. ಯಾವುದೇ ಯೋಜನೆಯಲ್ಲಿ ಜಾತಿ ಯಾವುದೆಂದು ನರೇಂದ್ರ ಮೋದಿಯವರು ಕೇಳಿಲ್ಲ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ್‍ಧನ್ ಖಾತೆ ಕೊಟ್ಟರು. ಜಾತಿ ಯಾವುದೆಂದು ಕೇಳಿ ಕೊಟ್ಟಿದ್ದಾರಾ? ಕಿಸಾನ್ ಸಮ್ಮಾನ್ ಕೊಡುವಾಗ ನಿಮ್ಮ ಜಾತಿ ಯಾವುದೆಂದು ಕೇಳಿದ್ದಾರಾ? ಎಲ್ಲರಿಗೂ ಅಕ್ಕಿ ಕೊಡುವಾಗ ಜಾತಿ ಯಾವುದೆಂದು ಕೇಳಿ ಕೊಟ್ಟರೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ‘ಸೌಗತ್-ಎ-ಮೋದಿ’ ಅಭಿಯಾನದಡಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್ ಕಿಟ್
ಜಾತಿ ಕೇಳುವುದು, ಮತಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ. ಅದು ಮೋದಿಯವರ ನೀತಿಯಲ್ಲ ಎಂದು ತಿಳಿಸಿದರು. ಪ್ರಿಯಾಂಕ್ ಖರ್ಗೆಯವರೇ ಪೇಪರ್ ಓದಿದ್ದರೆ ಪೂರ್ತಿ ಓದಿ. ಇದು ಸರ್ಕಾರದ ಕಾರ್ಯಕ್ರಮವಲ್ಲ ಎಂಬುದು ಅರ್ಥವಾಗುತ್ತದೆ. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾವು ತಾನು ಖಾಸಗಿಯಾಗಿ ರಂಜಾನ್ ಹಿನ್ನೆಲೆಯಲ್ಲಿ ಮೋದಿಯವರ ಹೆಸರಿನಲ್ಲಿ 32 ಲಕ್ಷ ಕಿಟ್ ವಿತರಿಸುತ್ತಿದೆ. ಅದು ಸರ್ಕಾರ ಮಾಡುವುದಲ್ಲ. ಬಿಜೆಪಿ ಮಾಡುತ್ತಿರುವುದೂ ಅಲ್ಲ. ಬಿಜೆಪಿಯ ಒಂದು ಮೋರ್ಚಾವು ಮೋದಿಯವರ ಹೆಸರಿನಲ್ಲಿ ಕಿಟ್ ನೀಡುತ್ತಿದೆ. ಸರ್ಕಾರದ ಕಾರ್ಯಕ್ರಮ ಬೇರೆ, ಒಬ್ಬ ವ್ಯಕ್ತಿ, ಮೋರ್ಚಾ ಮಾಡುವ ಕಾರ್ಯಕ್ರಮವೇ ಬೇರೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ಸಿನದು ಒಂದು ಕಣ್ಣಿಗೆ ಬೆಣ್ಣೆ
ಬಿಜೆಪಿ ಸರ್ಕಾರವು ಎಲ್ಲ ಜಾತಿಯವರಿಗೆ ಸೌಲಭ್ಯ ಕಲ್ಪಿಸಿದೆ. ಜಾತಿ ಮುಖ ನೋಡಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದು ಕೇವಲ ಕಾಂಗ್ರೆಸ್ ಪಕ್ಷ ಎಂದು ಸಿ.ಟಿ.ರವಿ ಆಕ್ಷೇಪಿಸಿದರು. ಇದು ಸರ್ಕಾರದ ದುಡ್ಡಲ್ಲ, ಮೈನಾರಿಟಿ ಮೋರ್ಚಾದ ಅಧ್ಯಕ್ಷರ ಕಾರ್ಯಕ್ರಮ. ನೀವು ಸರ್ಕಾರದ ದುಡ್ಡಲ್ಲಿ ಮುಸ್ಲಿಮರಿಗೆ ಮಾತ್ರ ಮದುವೆಗೆ ಮೊತ್ತ ಕೊಡುವ ಶಾದಿ ಭಾಗ್ಯ ತಂದಿದ್ದೀರಿ. ಮೊನ್ನೆ ಸಂವಿಧಾನ ವಿರೋಧಿಯಾಗಿ ಶೇ.4ರಷ್ಟು ಮತೀಯ ಆಧಾರಿತ ಮೀಸಲಾತಿಯನ್ನು ನೀವು ಡಾ.ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿ ತಂದಿದ್ದೀರಿ? ಸಂವಿಧಾನದಲ್ಲಿ ಮತೀಯ ಆಧಾರಿತ ಮೀಸಲಾತಿಗೆ ಎಲ್ಲಿ ಅವಕಾಶ ಇದೆ ಎಂದು ಕೇಳಿದರು. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಆ ವ್ಯತ್ಯಾಸವೇ ಗೊತ್ತಿಲ್ಲದೇ ನೀವು ಮಾತನಾಡುತ್ತೀರಲ್ಲವೇ? ನಮ್ಮ ಯಾವುದೇ ಯೋಜನೆಗಳಲ್ಲಿ ಜಾತಿ, ಮತಗಳನ್ನು ಪರಿಗಣಿಸಿಲ್ಲ. ಜಾತಿ-ಮತ ಪರಿಗಣಿಸಿ ಸಮಾಜ ಒಡೆಯುವ ಕೆಲಸ, ದೇಶ ಒಡೆಯುವ ಕೆಲಸ ಮಾಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಟೀಕಿಸಿದರು.
– ಮುಲ್ಲಾ, ಮುಸ್ಲಿಂ ಗುರುಗಳ ಗೌರವಧನ ಹೆಚ್ಚಿಸಿದ್ದಾರೆ – ಕೃಷ್ಣ ಮೇಲ್ದಂತೆ, ತುಂಗಭದ್ರಾ ಯೋಜನೆಗೆ ಬಿಡಿಗಾಸು ಕೊಟ್ಟಿಲ್ಲ ಎಂದು ಎಂಎಲ್‌ಸಿ ಕಿಡಿ
ಬೆಳಗಾವಿ: ಇದು ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು ಎಂದು ರಾಜ್ಯ ಬಜೆಟ್ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈವರೆಗಿನ ಸಿಎಂ ಮಾಡಿದ ಸಾಲಕ್ಕಿಂತಲೂ ಹೆಚ್ಚಿನ ಸಾಲ ಮಾಡಿದ್ದಾರೆ. 4 ಲಕ್ಷ ಕೋಟಿ ಅಷ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಸಾಲ 1.27 ಲಕ್ಷ ಕೋಟಿ. ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ಕೊಟ್ಟಿದ್ದರೆ ತೆರಿಗೆ ಸಂಗ್ರಹ ಆಗ್ತಿತ್ತು. ಕಳೆದ ವರ್ಷ 3.22 ಲಕ್ಷ ಕೋಟಿ ಖರ್ಚು ಮಾಡ್ತೇವಿ ಅಂತಾ ಹೇಳಿದ್ರು. ಇದುವರೆಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶೇ.55 ರಷ್ಟು ಖರ್ಚು ಮಾಡಿದ್ದಾರೆ. ಇನ್ನುಳಿದ 45 ದಿನದಲ್ಲಿ ಉಳಿದ 45 ರಷ್ಟು ಖರ್ಚು ಮಾಡಲು ಸಾಧ್ಯವಾಯ್ತು ಎಂದು ಬೇಸರ ಹೊರಹಾಕಿದ್ದಾರೆ.
ಸರ್ಕಾರದ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ. ನೀರು, ವಿದ್ಯುತ್, ಪ್ರಾಪರ್ಟಿ, ಬಿತ್ತನೆ, ಬೀಯರ್, ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವುದು ಚಾರುವಾಕನ ನೀತಿ ಆಗಿತ್ತು. ನಾನು ಸಿಎಂ ಕೇಳ್ತೀನಿ, ನೀವು ಸಾಲ ಮಾಡಿದ್ದೀರಿ. ತುಪ್ಪ ಯಾರು ತಿನ್ನುತ್ತಿದ್ದಾರೆ? ಜನರ ಮೇಲೆ ಸಾಲ ಹೊರಿಸಿದೀರಿ. ನಿಮ್ಮ ಸರ್ಕಾರದಲ್ಲಿ ತುಪ್ಪ ತಿಂತಿರೋರು ಯಾರು ಎಂದು ಪ್ರಶ್ನಿಸಿದ್ದಾರೆ.
ಈ ಬಜೆಟ್‌ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್‌ನ ಕೋಮುವಾದಿ ರಾಜಕಾರಣ ತೋರಿಸುತ್ತದೆ. ಮುಸ್ಲಿಮರ ಸರಳ ಮದುವೆಗೆ ಐವತ್ತು ಸಾವಿರ. ವೋಟ್ ತಗೊಳ್ಳೋವಾಗ ಹಿಂದೂಗಳು ಬೇಕು ನಿಮಗೆ. ಅಧ್ಯಕ್ಷರು ನಾವು ಹಿಂದೂವಾಗಿ ಹುಟ್ಟಿದ್ದೇವೆ ಅಂತಾರೆ. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದು ಸಾಕಾಗಿಲ್ವಾ? ಬೇರೆ ಜಾತಿಯಲ್ಲಿ ಬಡವರು ಇಲ್ವಾ? ಅವರಿಗೆ ಯಾಕೆ ಶುಲ್ಕ ಕಡಿತವಿಲ್ಲ? ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು ಎಂದು ಸರ್ಕಾರದ ಕಾಲೆಳೆದಿದ್ದಾರೆ.
ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸ್ ವಾಪಸ್ ತೆಗೆಯುತ್ತೀರಿ. ಮುಸ್ಲಿಮರಿಗೆ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಆಗಿದೆ. ಮುಲ್ಲಾ, ಮುಸ್ಲಿಂ ಗುರುಗಳ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಕಳೆದ ವರ್ಷವೂ ಬಜೆಟ್‌ನಲ್ಲಿ ಹೇಳಿದ್ರು, ಆದ್ರೆ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟರೂ ಇವರು ಆರೋಪ ಮಾಡ್ತಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲ. ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಅಟಲ್‌ಜೀ ಅವರ ಸಂಘಟನೆ, ಹೋರಾಟ ಇವೆಲ್ಲವೂ ಇವತ್ತಿನ ಕಾರ್ಯಕರ್ತರಿಗೆ ಪ್ರೇರಣಾಶಕ್ತಿಯಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B S Yediyurappa) ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಪ್ರಮುಖರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ವಾಜಪೇಯಿ ಅವರು ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಹಲವು ಬಾರಿ ಪ್ರವಾಸವನ್ನು ಮಾಡಿದ್ದೇನೆ. ಸಂಘಟನೆಯನ್ನು ಬಲಪಡಿಸಲು ಅವರು ಹಲವಾರು ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದರು ಎಂದು ಹಳೆ ಕ್ಷಣವನ್ನು ಮೆಲುಕು ಹಾಕಿದರು. ಇದನ್ನೂ ಓದಿ: 43 ಬಾಲ್‌ಗೆ 81 ರನ್ ಚಚ್ಚಿದ ಎಲ್ಲಿಸ್ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ
ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂಗೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವ ವಿಚಾರಕ್ಕೆ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದು, ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು ಎಂದು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ. ಸಿದ್ದರಾಮಯ್ಯ ಕುಟುಂಬದವರು 14 ಸೈಟ್ ವಾಪಸ್ ಕೊಟ್ಟರು. ಜಿಲ್ಲಾಧಿಕಾರಿಗಳು ವರದಿ ಕೊಟ್ಟಿದ್ದಾರೆ. ಇದ್ದವರು ಮೂರು ಜನ, ಕದ್ದವರು ಯಾರು ಎಂದು ಪ್ರಶ್ನಿಸಿದರು.
ಲೋಕಾಯುಕ್ತ ತನಿಖೆ ಎಸಿಬಿ ದಾರಿಯಲ್ಲೇ ಇಳಿದಿದೆ. ಕ್ಲೀನ್‌ಚಿಟ್ ಕೊಟ್ಟಿರೋದು ದುರದೃಷ್ಟಕರ. ಲೋಕಾಯುಕ್ತದಿಂದ ಸಮಗ್ರ ತನಿಖೆಯಾಗಿಲ್ಲ. ಹಣ ವರ್ಗಾವಣೆ ಆಗಿರೋದನ್ನು ಇ.ಡಿ ಪತ್ತೆ ಹಚ್ಚಿದೆ. ಅಪರಾಧ ನಡೆಸಿದ ಅಪರಾಧಿ ಯಾರು ಎಂಬುದನ್ನು ಲೋಕಾಯುಕ್ತ ಹೇಳಿಲ್ಲ. ಏನು ನಡೆದೇ ಇಲ್ವಾ ಹಾಗಾದ್ರೆ? ಸತ್ಯವನ್ನ ಸಮಾಧಿ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.
ನಮ್ಮ ಪಕ್ಷದ ವರಿಷ್ಠರ ಜೊತೆ ಸಮಾಲೋಚನೆ ಮಾಡಿ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡ್ತೀವಿ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಶಾಸಕರಾಗಿ ಮಾತಾಡ್ತಿದ್ದಾರೋ ಗೊತ್ತಿಲ್ಲ. ವಕೀಲರಾಗಿ ಕೆಲಸ ಮಾಡೋದಕ್ಕೆ ಫೀ ಸಿಗುತ್ತೆ. ಶಾಸಕರಾಗಿ ಮಾತಾಡೋದಕ್ಕೂ ಫೀ ಸಿಗುತ್ತೋ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.
ನವದೆಹಲಿ: ಮುಜರಾಯಿ, ಕಂದಾಯ ದಾಖಲೆಗಳನ್ನು ಪರಿಶೀಲಿಸಬೇಕು, ಗೆಜೆಟ್ ನೋಟಿಫಿಕೇಷನ್ ಪರಿಶೀಲನೆ ಮಾಡಿ ದಾಖಲೆಗಳ ಆಧಾರದ ಮೇಲೆ ದತ್ತಪೀಠ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.
ದತ್ತಪೀಠ ವಿವಾದದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ದತ್ತಾತ್ರೇಯ ಪೀಠ, ಬಾಬಾ ಬುಡನಗಿರಿ ದರ್ಗಾ ಎರಡು ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿದೆ. ಎರಡನ್ನು ಒಂದೇ ಮಾಡುವ ಪ್ರಯತ್ನ ಮಾಡಬಾರದು. ಭೂ ದಾಖಲೆಗಳ ಆಧಾರದ ಮೇಲೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು. ಇವರ ತುಷ್ಟೀಕರಣ ನೀತಿ ಅನುಮಾನ ಹುಟ್ಟಿಸುತ್ತೆ. ಹೀಗಾಗಿ, ಕಾನೂನು ಹೋರಾಟದ ದೃಷ್ಟಿಯಿಂದ ವಕೀಲರ ಭೇಟಿಗೆ ದೆಹಲಿಗೆ ಆಗಮಿಸಿರುವುದಾಗಿ ಹೇಳಿದರು.
ಉದಯಗಿರಿ ಕೋಮುಗಲಭೆ ವಿಚಾರವಾಗಿ ಮಾತನಾಡಿದ ಅವರು, ಗಲಭೆಕೋರರು ಆರ್‌ಎಸ್‌ಎಸ್‌ನವರು ಎಂದು ಆರೋಪ ಮಾಡಿದ್ದಾರೆ. ಈಗ ಪ್ರಕರಣದಲ್ಲಿ ಯಾರು ಬಂಧಿತರು? ಅವರಿಗೆ ಬದ್ಧತೆ ಇದ್ರೆ, ನೈತಿಕತೆ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಕ್ಷಮೆಯಾಚನೆ ಮಾಡದೆ ಇದ್ದರೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕೋಮುಗಲಭೆಯಲ್ಲಿ ಬಿಜೆಪಿ ನಾಯಕರು ಇದ್ದಾರೆಯೇ ಎಂದು ಪ್ರಿಯಾಂಕ್ ಖರ್ಗೆಯವ್ರ ಫ್ಯಾಕ್ಟ್ ಚೆಕ್ ಸಂಸ್ಥೆ ಪರೀಕ್ಷೆ ಮಾಡಲು ಆ ಸಂಸ್ಥೆ ಸತ್ತಿದಿಯೋ, ಬದುಕಿದೆಯೋ? ಸುಳ್ಳು ಆರೋಪ ಮಾಡಿದ ಲಕ್ಷ್ಮಣ್ ವಿರುದ್ದ ಕ್ರಮ ಆಗಬೇಕು. ಈಗ ಬಂಧಿತರಾಗಿರುವ ಆರೋಪಿಗಳು ಆರ್‌ಎಸ್‌ಎಸ್‌ನವರಲ್ಲ ಎಂದು ಅರಿತುಕೊಳ್ಳಬೇಕು ಎಂದರು.
ಮಾಜಿ ಸಿಎಂ ದೇವರಾಜ್ ಅರಸು ದಾಖಲೆ ಮುರೀತಾರೆ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. 10 ವರ್ಷನೋ 20 ವರ್ಷನೋ ಅವರೇ ಇರಲಿ. ಅವರ ಪಕ್ಷದಲ್ಲೇ ಸ್ಪರ್ಧೆ ಇದೆ. ನಾವ್ಯಾರು ಅವರು ಇರೋದು ಬೇಡ ಅನ್ನುತ್ತಿಲ್ಲ. ಸಿದ್ದರಾಮಯ್ಯ ಅರಸು ದಾಖಲೆ ಮುರೀತಾರೆ ಇಲ್ಲವೋ ಗೊತ್ತಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆಯಲ್ಲಿ ದಾಖಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲು ಅಡಿಗೆ 100 ರೂ. ಕೊಡಬೇಕು. ಬಿಲ್ಡರ್ಸ್ ರೋಸಿ ಹೋಗಿದ್ದಾರೆ. ಅತೀ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದಾಖಲೆಯಾಗಿದೆ. ಇವರು 100% ಲೂಟಿ ಮಾಡಿ ದಾಖಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯತ್ನಾಳ್ ಬಣದ ಹೋರಾಟದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ನಾನು ನನಗೆ ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ. ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ ಎಂದರು.