Tag: c t ravi

  • ಮತ್ತೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಸದ್ದು: ಯಾರು ಏನು ಹೇಳಿದ್ರು?

    ಮತ್ತೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಸದ್ದು: ಯಾರು ಏನು ಹೇಳಿದ್ರು?

    ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹಗರಣ ಆರೋಪ ಪ್ರಸ್ತಾಪವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

    ಆರಂಭದಲ್ಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಚರ್ಚೆಗೆ ರಾಮದಾಸ್ ಅವಕಾಶ ಕೇಳಿದರು. ರಾಮದಾಸ್ ಮನವಿಯನ್ನು ಬೆಂಬಲಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ಈ ಹಿಂದೆ ನಾನು ವಾಚ್ ವಿಚಾರವನ್ನೂ ಪ್ರಸ್ತಾಪಿಸಿದ್ದೆ. ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹಾಗಾಗಿ ಎಐಸಿಸಿ ಕಿಕ್ ಬ್ಯಾಕ್ ವಿಚಾರವನ್ನು ಪ್ರಸ್ತಾಪಿಸಿದ್ದ ರಾಮದಾಸ್ ಅವರಿಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡರು.

    ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರವೇಶಿಸಿ, ರಾಮದಾಸ್ ಅವರು ಹಿಟ್ ಅಂಡ್ ರನ್ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳನ್ನು ಒದಗಿಸಲಿ. ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ತೋರಿಸಿದರೆ ನಾವು ಕೂಡಾ ಚರ್ಚೆ ನಡೆಸಲು ಸಿದ್ಧ ಎಂದು ಉತ್ತರಿಸಿದರು.

    ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಚಾರಿತ್ರ್ಯವಧೆಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಎಐಸಿಸಿ ಒಂದು ಐತಿಹಾಸಿಕ ಸಂಸ್ಥೆ. ಆಧಾರಗಳಿಲ್ಲದೆ ಎಐಸಿಸಿ ವಿರುದ್ಧ ಆರೋಪ ಮಾಡುವಂತಿಲ್ಲ. ಹಾಗಾಗಿ ದಾಖಲೆಗಳನ್ನು ಇಟ್ಟರೆ ಚರ್ಚೆಗೆ ಅವಕಾಶ ಕೊಡ್ತೀನಿ ಎಂದು ಸ್ಪೀಕರ್ ರಮೇಶ್ ಕುಮಾರ್ ರಾಮದಾಸ್‍ಗೆ ಖಡಕ್ ಸೂಚನೆ ನೀಡಿದರು.

    ಸ್ಪೀಕರ್ ಹೇಳಿದ ಕೂಡಲೇ ಮಧ್ಯಪ್ರವೇಶಿಸಿದ ಸಿಟಿ ರವಿ, ಇದು ಹಿಟ್ ಆಂಡ್ ರನ್ ಅಲ್ಲ ಇದು ಹಿಡ್ ಆಂಡ್ ಕ್ಯಾಚ್. ಹೀಗಾಗಿ ರಾಮದಾಸ್ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಿಟಿ ರವಿ ಅವರಿಂದ ಈ ಮಾತು ಬಂದ ಕೂಡಲೇ ಸದನದಲ್ಲಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ ಕಾರಣ ಗದ್ದಲ ಉಂಟಾಯಿತು. ಆಗ ಸಿಟಿ ರವಿ, ಕಾಂಗ್ರೆಸ್ಸಿನವರು ಸತ್ಯ ಹರಿಶ್ಚಂದ್ರರೇ ಅಂತಾನೇ ಭಾವಿಸೋಣ, ಚರ್ಚೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಾರಾ ಮಹೇಶ್, ಯಾರು ಯಾರು ಹರಿಶ್ಚಂದ್ರರು ಎನ್ನುವುದು ಗೊತ್ತಿದೆ. ನೀವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ನಾವು ಬಹಳ ಹರಿಶ್ಚಂದ್ರರನ್ನು ನೋಡಿದ್ದೇವೆ ಎಂದು ತಿರುಗೇಟು ನೀಡಿದರು. ಇದಕ್ಕೆ ಸಿಟಿ ರವಿ ಆಕ್ಷೇಪ ವ್ಯಕ್ತಪಡಿಸಿ ಈ ವಿಚಾರಕ್ಕೂ ಅದಕ್ಕೆ ಏನ್ ಸಂಬಂಧ? ಸಾರಾ ಮಹೇಶ್‍ಗೆ ಉಳಿವಿನ ಪ್ರಶ್ನೆ ಇರಬೇಕು ಎಂದು ವ್ಯಂಗ್ಯವಾಡಿದರು.

    ಆರಂಭದಿಂದಲೂ ಇಂದಿರಾ ಕ್ಯಾಂಟೀನ್ ಚರ್ಚೆಗೆ ಪಟ್ಟು ಹಿಡಿದಿದ್ದ ರಾಮದಾಸ್ ಸದನದ ಬಾವಿಗೆ ಇಳಿದು, ಹಿಟ್ ಆಂಡ್ ರನ್ ಪದ ಬಳಕೆಯಿಂದ ನನಗೆ ಅವಮಾನವಾಗಿದೆ. ಈ ಪದವನ್ನು ಕಡತದಿಂದ ತೆಗೆಯಬೇಕು ಎಂದು ಪ್ರತಿಭಟಿಸಿದರು. ಕೊನೆಗೆ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಸೂಚನೆ ಮೇರೆಗೆ ಕೃಷ್ಣಭೈರೇಗೌಡ ಅವರು ಬಳಸಿದ್ದ ಹಿಟ್ ಆಂಡ್ ರನ್ ಪದವನ್ನು ಕಡತದಿಂದ ತೆಗೆಯಲಾಯಿತು. ಪದ ತೆಗೆದ ಬಳಿಕ ಪ್ರತಿಭಟನೆ ಕೈ ಬಿಟ್ಟು ರಾಮದಾಸ್ ತಮ್ಮ ಸೀಟ್‍ಗೆ ತೆರಳಿ ಕುಳಿತುಕೊಂಡರು.

  • ಬಿಎಸ್‍ವೈ ನಮ್ಮ ನಾಯಕ, ಹೈಕಮಾಂಡ್ ಟಿಕೆಟ್ ನಿರ್ಧಾರ ಮಾಡ್ತಾರೆ: ಸಿಟಿ ರವಿ

    ಬಿಎಸ್‍ವೈ ನಮ್ಮ ನಾಯಕ, ಹೈಕಮಾಂಡ್ ಟಿಕೆಟ್ ನಿರ್ಧಾರ ಮಾಡ್ತಾರೆ: ಸಿಟಿ ರವಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ಹಾಗೂ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಲ್ಲಿ ಅಸಮಾಧಾನ ಉಂಟಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿಟಿ ರವಿ ಹಾಗೂ ಸೋಮಣ್ಣ ಸಂಧಾನ ಸಭೆ ನಡೆಸಿದರು.

    ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಸಿ.ಟಿ.ರವಿ, ಲಿಂಗಸುಗೂರು ಮತ್ತು ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ ಎಂದು ತಿಳಿಸಿದರು.

    ಈ ವೇಳೆ ಮಾಧ್ಯಮಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಿಂದೆ ಡಾ. ಶಿವರಾಜ್ ಪಾಟೀಲ್ ಮತ್ತು ಮಾನಪ್ಪ ವಜ್ಜಲ್ ಹೆಸರು ಘೊಷಿಸಿದ್ದಾರಲ್ಲ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ ಸಿಟಿ ರವಿ, ನಾನು ಯಡಿಯೂರಪ್ಪ ಅವರ ಹೇಳಿಕೆಯನ್ನು ವಿರೋಧಿಸುವಿಲ್ಲ. ಅವರು ನಮ್ಮ ಪಕ್ಷದ ಮುಖವಾಣಿ. ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಸ್ಪಷ್ಟ ಪಡಿಸಿದರು.

    ಪಾರ್ಲಿಮೆಂಟರಿ ಬೋರ್ಡ್ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಿದೆ ಅಂತ ಅತೃಪ್ತ 12 ಜನ ಆಕಾಂಕ್ಷಿಗಳ ಜೊತೆ ಸಭೆ ಮಾಡಿದ ಬಳಿಕ ಸಿಟಿ ರವಿ ಹೇಳಿದರು.

  • ಆರಂಭದಲ್ಲಿ ಇವಿಎಂ ಚೆನ್ನಾಗಿತ್ತು, ನಂತ್ರ ಹ್ಯಾಕ್ ಆಗಿದೆ ಅಂತಿದ್ದಾರೆ: ಸಿಟಿ ರವಿ

    ಆರಂಭದಲ್ಲಿ ಇವಿಎಂ ಚೆನ್ನಾಗಿತ್ತು, ನಂತ್ರ ಹ್ಯಾಕ್ ಆಗಿದೆ ಅಂತಿದ್ದಾರೆ: ಸಿಟಿ ರವಿ

    ಬೆಂಗಳೂರು: ಬೆಳಗ್ಗೆ 8.45 ರಿಂದ 8.45ರವರೆಗೆ ಕಾಂಗ್ರೆಸ್ಸಿನವರಿಗೆ ಇವಿಎಂ ತುಂಬಾ ಚೆನ್ನಾಗಿ ಕೆಲಸ ಮಾಡಿತ್ತು. ಆದರೆ ಈಗ ಅವರು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಬಿಜಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.

    ಗುಜರಾತ್ ಜನ ಸ್ಪಷ್ಟವಾಗಿ ಅಭಿವೃದ್ಧಿಯನ್ನು ನೋಡಿ ನಮ್ಮ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಮೀಸಲಾತಿ ಹೋರಾಟ ಮತ್ತು ರಾಹುಲ್ ಗಾಂಧಿಯ ದೇವಾಲಯ ಭೇಟಿಯನ್ನ ಜನ ತಿರಸ್ಕರಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಗುಜರಾತಿನಲ್ಲಿ ನಿಜವಾಗಿ ಬಿಜೆಪಿ ಜಯಗಳಿಸಿದರೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಹೊಗಳುತ್ತಿರುವುದು ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

  • ಗೌರಿ ಲಂಕೇಶ್ ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಸಾಲಲ್ಲ, 10 ಕೋಟಿಗೆ ಏರಿಸಿ: ಸಿಟಿ ರವಿ

    ಗೌರಿ ಲಂಕೇಶ್ ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಸಾಲಲ್ಲ, 10 ಕೋಟಿಗೆ ಏರಿಸಿ: ಸಿಟಿ ರವಿ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ಹಂತಕರ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಮೊತ್ತವನ್ನು ನಿಗದಿಪಡಿಸಿದೆ. ಆದರೆ ಈ ಬಹುಮಾನದ ಮೊತ್ತವನ್ನು 10 ಕೋಟಿ ರೂ. ಗೆ ಸರ್ಕಾರ ಹೆಚ್ಚಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಹಂತಕರ ಸುಳಿವಿನ ಬಗ್ಗೆ ಮಾಹಿತಿ ನೀಡುವ ಬಹುತೇಕ ಜನರಿಗೆ 10 ಲಕ್ಷ ರೂ. ಮೊತ್ತವನ್ನು ಹಂಚಲು ಸಾಧ್ಯವಿಲ್ಲ. ಅಲ್ಲದೆ ರಾಮಚಂದ್ರ ಗುಹಾ, ರಾಹುಲ್ ಗಾಂಧಿ ಅಂತಹವರಿಗೆ ಇಷ್ಟು ಕಡಿಮೆ ಮೊತ್ತ ಕೊಡಲು ಸಾಧ್ಯವಿಲ್ಲ. ಹೀಗಾಗಿ ಈ ಮೊತ್ತವನ್ನು 10 ಕೋಟಿ ರೂ ಬಹುಮಾನ ಮೊತ್ತ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

    ಇಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಮೇಲೆ ಆರೋಪ ಮಾಡುತ್ತಿರುವರು, ಮುಂದೆ ಸತ್ಯ ಹೊರ ಬಂದಾಗ ಅವರು ಮುಖಕ್ಕೆ ಬುರ್ಕಾ ಹಾಕಿಕೊಂಡು ಒಡಾಡಬೇಕಾಗುತ್ತದೆ. ಅಲ್ಲದೆ ಇದು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಪ್ರತಿರೋಧ ಸಮಾವೇಶವಲ್ಲ, ಇದು ಬಿಜೆಪಿ-ಆರ್‍ಎಸ್‍ಎಸ್ ವಿರೋಧಿ ಸಮಾವೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಆರ್‍ಎಸ್‍ಎಸ್ ಅನ್ನು ವಿರೋಧಿಸುವುದು ರಾಹುಲ್ ಗಾಂಧಿ ಅವರಿಗೆ ಪರಂಪರೆಯಿಂದ ಬಂದಂತಹ ಬಳುವಳಿಯಾಗಿದೆ. ಅಂದು ನೆಹರು ಗಾಂಧಿ ಹತ್ಯೆಗೆ ಸಂಬಂಧಿಸಿದ ಗುರೂಜಿ ಗೋಲ್ವಾಲ್ಕರ್ ಅವರನ್ನು ಜೈಲಿಗೆ ಕಳುಹಿಸಿದ್ದರು. ಆಮೇಲೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ವ್ಯಂಗ್ಯವಾಗಿ ಹೇಳಿದರು.

  • 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಠೇವಣಿ ಕಳೆದುಕೊಳ್ಳುತ್ತಾರೆ: ಸಿ.ಟಿ.ರವಿ

    2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಠೇವಣಿ ಕಳೆದುಕೊಳ್ಳುತ್ತಾರೆ: ಸಿ.ಟಿ.ರವಿ

    – ಎಸಿಬಿ ಆಲ್ ಕಲೆಕ್ಷನ್ ಬ್ಯುರೋ ಆಗಿದೆ

    ರಾಯಚೂರು: ಮಾರ್ಚ್ 11ರ ನಂತರ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ. ಉತ್ತರ ಪ್ರದೇಶದ ಫಲಿತಾಂಶದ ಬಳಿಕ ಬೇರೆ ಬೇರೆ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ

    ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆ. ನಾವು ಸ್ಟೀಲ್ ಬ್ರಿಡ್ಜ್ ವಿರೋಧಿಗಳಲ್ಲ. 1300 ಕೋಟಿ ಯೋಜನೆಯನ್ನು 2100 ಕೋಟಿ ರೂ. ಗೆ ಕಾಮಗಾರಿ ಕೊಡಲು ಸರ್ಕಾರ ಮುಂದಾಗಿತ್ತು. ಮುಂಗಡವಾಗಿ 65 ಕೋಟಿ ಕಪ್ಪ ತೆಗೆದುಕೊಂಡಿದ್ದಕ್ಕೆ ನಾವು ಈ ಯೋಜನೆಯನ್ನು ವಿರೋಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಠೇವಣಿ ಹೋಗುತ್ತೆ: ಹೈಕಮಾಂಡ್ ಗೆ ಕಪ್ಪ ನೀಡಿದ ದಾಖಲೆಯ ಡೈರಿ ನಕಲು ಅಲ್ಲ. ಯಾವ ತನಿಖೆ ಬೇಕಾದ್ರು ನಡೆಸಲಿ ಯಾರು ಯಾರು ಎಷ್ಟು ಹಣ ತಿಂದಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಸಿಎಂ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅಂತಿದ್ದಾರೆ. ಆದ್ರೆ ಅವರ ಹತ್ತಿರ ನಷ್ಟವಾಗಲು ಏನೂ ಉಳಿದಿಲ್ಲ. ಉಳಿದಿರುವುದು ಠೇವಣಿ ಒಂದೇ. ಅದನ್ನೂ 2018 ರ ಚುನಾವಣೆಯಲ್ಲಿ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

    ಕಲೆಕ್ಷನ್ ಬ್ಯುರೋ: ಎಸಿಬಿ ಯಲ್ಲಿ ಹಲವು ಆರೋಪ ಹೊತ್ತಿರುವವರೇ ಸ್ಥಾನಪಡೆಯುತ್ತಿದ್ದಾರೆ. ದಾಳಿಗೊಳಗಾದವರು ಆಯಾಕಟ್ಟಿನ ಹುದ್ದೆಗಳನ್ನ ಪಡೆಯುತ್ತಾರೆ. ಹೀಗಾಗಿ ಎಸಿಬಿ ಆಲ್ ಕಲೆಕ್ಷನ್ ಬ್ಯೂರೋ ಆಗಿದೆ. ಎಸಿಬಿಯನ್ನು ಕೈಬಿಟ್ಟು ಲೋಕಾಯುಕ್ತವನ್ನು ಬಲಪಡಿಸಿಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು.

    ಸಾಲ ಮನ್ನಾ ಮಾಡಲಿ: ರಾಜ್ಯದ 160 ತಾಲೂಕಿನಲ್ಲಿ ಭೀಕರ ಬರಗಾಲವಿದೆ. ಹೀಗಾಗಿ ರಾಜ್ಯಸರ್ಕಾರ ಮೊದಲು ತನ್ನ ಕರ್ತವ್ಯ ನಿರ್ವಹಿಸಲಿ. ತನ್ನ ಪಾಲಿನ ಸಾಲ ಮನ್ನಾ ಮಾಡಲಿ. ರಾಜ್ಯ ನಿಯೋಗದ ಜೊತೆ ನಾವು ಕೇಂದ್ರಕ್ಕೆ ಒತ್ತಡ ಹೇರುತ್ತೇವೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.