ಚಿಕ್ಕಮಗಳೂರು: ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವರು ಎಂದು ಎಂಎಲ್‍ಸಿ ಸಿ.ಟಿ.ರವಿ (C.T Ravi) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಧರ್ಮಸ್ಥಳದಲ್ಲಿ ಮೃತದೇಹಗಳಿಗಾಗಿ ಉತ್ಖನನ (Dharmasthala Mass Burial Case) ನಡೆಯುತ್ತಿದೆ. ಪ್ರಾಮಾಣಿಕವಾಗಿ-ಪಾರದರ್ಶಕವಾಗಿ ತನಿಖೆಯಾಗಬೇಕು. ತನಿಖೆಗೆ ಮೊದಲೇ ಆಧಾರ ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋಕೆ ಯಾರಿಗೂ ಅಧಿಕಾರವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Dharmasthala Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ
ಎಸ್‍ಡಿಪಿಐ ಕಮ್ಯುನಲ್ ಟ್ರ್ಯಾಕ್ ರೆಕಾರ್ಡ್ ಸಂಘಟನೆ ಅದು ಧರ್ಮಸ್ಥಳದ ವಿರುದ್ಧ ಹೋರಾಡುತ್ತಿದೆ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರವೇ ನಡೆದಿದೆ. ನಾವು ವೀರೇಂದ್ರ ಹೆಗ್ಗಡೆಯವರನ್ನು ದೇವತಾ ಮನುಷ್ಯ ಎಂದು ಭಾವಿಸಿದ್ದೀವೆ. ಪರೋಪಕಾರ ಜೀವನದ ಅವರ ಬದುಕಿಗೆ ಅಷ್ಟು ಅರ್ಥವಿದೆ. ಅವರಿಂದ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಎಂದಿದ್ದಾರೆ.
- ಜಿಎಸ್ಟಿ ನೋಟಿಸ್ ವಿರುದ್ಧ ಸಣ್ಣ ವರ್ತಕರ ಪ್ರತಿಭಟನೆಗೆ ಬಿಜೆಪಿ ಬೆಂಬಲ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡುವ ಮೂಲಕ ಡಿಜಿಟಲ್ ಇಂಡಿಯಾ ಅನ್ನು ಹಿಮ್ಮೆಟ್ಟಿಸುವುದಕ್ಕೆ ಷಡ್ಯಂತ್ರ ಮಾಡಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಐ ಪಾವತಿಯಲ್ಲಿ ಜಾಗತಿಕ ದಾಖಲೆ ಬರೆದಿದೆ. ಆದರೆ ಕಾಂಗ್ರೆಸ್ ಸರ್ಕಾರದವರು ಜನರಿಗೆ ಆತಂಕ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ. ಅಂದರೆ ಕೇಂದ್ರದ ಸರ್ಕಾರದ ಡಿಜಿಟಲ್ ವಹಿವಾಟು ಯೋಜನೆಯ ಪ್ರಯತ್ನಕ್ಕೆ ಭಯ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ನೋಟಿಸ್ ಪರಿಣಾಮದಿಂದ ಸಣ್ಣ ವ್ಯಾಪಾರಿಗಳು ಭಯಗೊಂಡು ಯುಪಿಐ ಪಾವತಿ ಇಲ್ಲ. ನಗದು ಮಾತ್ರ ಎಂದು ಬೋರ್ಡ್ ಹಾಕಿದ್ದಾರೆ. ಭಯಪಡಿಸಿದ ಪರಿಣಾಮ ಮಧ್ಯವರ್ತಿಗಳು ಮತ್ತು ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ದೂರು ಕೂಡ ಬಂದಿದೆ. ಆದಕಾರಣ ರಾಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸನ್ನು ಸರ್ಕಾರ ಹಿಂಪಡೆದು ಭಯದ ವಾತಾವರಣದಿಂದ ಸಣ್ಣ ವ್ಯಾಪಾರಿಗಳನ್ನು ಪಾರು ಮಾಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!
ರಾಜ್ಯ ಸರ್ಕಾರದ್ದೇ ಕೋತಿಯ ಪಾತ್ರ
ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹಣಕಾಸು ಇಲಾಖೆಯ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಿರ್ದೇಶನದ ಮೇಲೆಯೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಉಪ ಮುಖ್ಯಮಂತ್ರಿಗಳು ಹೇಳಿದ ರೀತಿಯಲ್ಲಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಇದೆ. ಆದರೆ, ಇಲ್ಲಿ ಕೋತಿ ಯಾರು ಎಂದು ಸಿಟಿ ರವಿ ಪ್ರಶ್ನಿಸಿದರು.
ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಕೇಂದ್ರವನ್ನು ಏಕೆ ದೂರುತ್ತಿದ್ದೀರಿ ಎಂದು ಕೇಳಿದರು. ಇಲ್ಲಿ ಕೋತಿ ಕೆಲಸವನ್ನು ಮಾಡಿರುವುದು ನೀವು ಕೇಂದ್ರದ ಮೇಲೆ ತಪ್ಪು ಬರುವ ರೀತಿಯಲ್ಲಿ ನಿಮ್ಮ ಹೇಳಿಕೆಗಳು ತಪ್ಪು ಸಂದೇಶ ಕೊಡುತ್ತಿವೆ. ಅಲ್ಲಿಗೆ ಕೋತಿ ಕೆಲಸ ಮಾಡಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಬಹಳ ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಿ ಕಿರುಕುಳ – ಡ್ಯಾಂಗೆ ಹಾರಿ ಯುವತಿ ಆತ್ಮಹತ್ಯೆ
ಇಡೀ ದೇಶದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಮಾತ್ರ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಹೋಗಿದೆ. ಕೇರಳ, ಮಹಾರಾಷ್ಟ್ರ ಸೇರಿ ಎಲ್ಲಾ ಕಡೆ ನೋಟಿಸ್ ನೀಡಿದ್ದರೆ ಕೇಂದ್ರ ತೆಗೆದುಕೊಂಡಿರುವ ತೀರ್ಮಾನವೆಂದು ನೀವು ಆರೋಪ ಮಾಡಿದರೆ ಅದನ್ನು ಒಪ್ಪಬಹುದಾಗಿತ್ತು. ಮಹಾರಾಷ್ಟ್ರದಲ್ಲಿ ಸಣ್ಣ ವ್ಯಾಪಾರಿಗಳು, ಹೂವು, ತರಕಾರಿ, ಊಟದ ಗಾಡಿ, ಮಾಂಸವನ್ನು ಮಾರಾಟ ಮಾಡುವವರು ಇಂತಹವರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಏಕೆ ನೋಟಿಸ್ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಸೇವಾ ವಲಯಕ್ಕೆ ತೆರಿಗೆ ವಿನಾಯಿತಿ ಇರುವಂತದ್ದು ವಾರ್ಷಿಕ ವಹಿವಾಟು ಒಂದೂವರೆ ಕೋಟಿ ರೂ. ಮೀರಿದರೆ ಶೇ.1 ರಷ್ಟು ತೆರಿಗೆ. ಅದರಲ್ಲೂ ಶೇ.1 ರಲ್ಲಿ ಕೇಂದ್ರದ ಜಿಎಸ್‍ಟಿ ಶೇ.0.5 ರಷ್ಟು ಹೋದರೆ ರಾಜ್ಯದ ಎಸ್‍ಜಿಎಸ್‍ಟಿಗೆ ಶೇ.0.5 ರಷ್ಟು ಪಾವತಿಸುವ ಬಗ್ಗೆ ಪತ್ರಿಕೆಯಲ್ಲಿ ವಿವರವಾಗಿ ನಮೂದಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕೇಂದ್ರದ ನೀತಿಯ ಪರಿಣಾಮವೆಂದು ಏಕೆ ಆರೋಪ ಹೊರಿಸುತ್ತೀರಿ ಎಂದು ಕೇಳಿದರು.
ನಿಮ್ಮ ಸರ್ಕಾರದ ಎಡವಟ್ಟು ಎಂದು ಮೊದಲು ಒಪ್ಪಿಕೊಳ್ಳಿ. ನೀವು ಕೊಟ್ಟಿರುವ ನೋಟಿಸ್ ವಾಪಸ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಸಣ್ಣ ವ್ಯಾಪಾರಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ, ಸದರಿ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲವಿದೆ. ಬಿಜೆಪಿ ಮುಖಂಡರು ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ
ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ರಾಜಮಾರ್ಗಗಳು ಇವೆ. ಅದನ್ನು ಬಿಟ್ಟು ಸಣ್ಣ ವ್ಯಾಪಾರಿಗಳಿಗೆ ಬರೆಹಾಕುವ ಕೆಲಸವನ್ನು ಮಾಡಬೇಡಿ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಸಿ.ಟಿ. ರವಿ ಒತ್ತಾಯಿಸಿದರು. ಬೆಂಗಳೂರು ಐಟಿ ವಲಯದ ರಾಜಧಾನಿ. ಈ ಐಟಿ ವಲಯಕ್ಕೆ ಡಿಜಿಟಲ್ ಪಾವತಿ ಮಾದರಿಯಾಗಿತ್ತು. ತರಕಾರಿ ವ್ಯಾಪಾರ ಮಾಡುವವರು ಡಿಜಿಟಲ್‍ನಲ್ಲಿ ಪಾವತಿ ಮಾಡಿಕೊಳ್ಳುತ್ತಾರೆ ಎಂದು ಅಂತರಾಷ್ಟ್ರೀಯ ಸುದ್ದಿಯಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಸರ್ಕಾರ ಭಯಪಡಿಸುವ ನಿರ್ಧಾರದಿಂದ ವಾಪಸ್ ಸರಿಯಬೇಕು ಎಂದು ಆಗ್ರಹಿಸಿದರು.
– ಈ ಥರ ಅವಮಾನ ಮಾಡಿಸಿಕೊಂಡು ಶಿವಕುಮಾರ್ ಹೇಗೆ ಸುಮ್ನಿರ್ತಾರೆ?
ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಈ ರೀತಿ ಅವಮಾನ ಮಾಡಿಸಿಕೊಂಡು ಡಿಕೆಶಿ ಹೇಗೆ ಸುಮ್ಮನೆ ಇರುತ್ತಾರೆ ಎಂದು ಎಮ್‍ಎಲ್‍ಸಿ ಸಿ.ಟಿ ರವಿ (C.T Ravi) ಕುಟುಕಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಸಿಎಂ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಅವರಿಗೆ ಶಾಸಕರ ಬೆಂಬಲವೇ ಇಲ್ಲ ಎಂದು ಹೇಳಿದ್ದಾರೆ. 136 ಶಾಸಕರು ಅವರ ಅಧ್ಯಕ್ಷತೆಯಲ್ಲೇ ಗೆದ್ದಿದ್ದು. ಇದು ಶಾಲಿನಲ್ಲಿ ಸುತ್ತಿ ಹೊಡೆಯೋದಲ್ಲ, ಹಾಗೇ ಹೊಡೆದಿರೋದು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ ಕ್ಲಿಯರ್ ಮೆಸೇಜ್ – ಬೆಂಗಳೂರಲ್ಲಿ ಆಪ್ತರು ದಿಲ್ ಖುಷ್
ಶಾಲಿನಲ್ಲಿ ಸುತ್ತಿ ಹೊಡುದ್ರೆ ಶಾಲು ಅಂತ ಹೇಳ್ಬೋದು, ಇದು ಹಾಗಲ್ಲ, ಡೈರೆಕ್ಟ್. ಇದನ್ನು ಡಿ.ಕೆ ಶಿವಕುಮಾರ್ ಸಹಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಂದು ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಮಾಧ್ಯಮಗಳ ಜೊತೆ ಮಾತಾಡುತ್ತ, ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಚರ್ಚೆ ಅನ್ನೋದು ಸುಳ್ಳು. ಡಿ.ಕೆ.ಶಿವಕುಮಾರ್ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ. ಇರೋ ಬೆಂಬಲಿಗರ ಸಂಖ್ಯೆ ಕಡಿಮೆ ಇದೆ. ಅವರಿಗೆ ಕೆಲವರು ಬೆಂಬಲ ನೀಡಿದ್ದಾರೆ. ಸುರ್ಜೇವಾಲಾ ಯಾರಿಗೂ ಅಧಿಕಾರ ಬದಲಾವಣೆ ಪ್ರಶ್ನೆ ಕೇಳಿಲ್ಲ. ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಏನ್ ದಬಾಕಿರೋದು? ಹೆಂಗಸರು ಬೀದಿ ಸುತ್ತೋ ಹಾಗೆ ಮಾಡಿದ್ದೇ ಸಿಎಂ – ಮಹಿಳಾ ಅಧಿಕಾರಿ ಮಾತಾಡಿದ ವಿಡಿಯೋ ವೈರಲ್
ಬೆಂಗಳೂರು: ಕಾಂಗ್ರೆಸ್ (Congress) ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ ಎಂದು ಬಿಜೆಪಿ (BJP) ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾತನಾಡಿದರು. ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯ ನಡೆದು ತಣ್ಣಗಾಗಿತ್ತು. ಆಗ ಕೃತ್ಯ ಎಸಗಿದಾತ ಮಾನಸಿಕ ಅಸ್ವಸ್ಥ ಎಂದಿದ್ದರು. ಅದರ ನಂತರ ಭಟ್ಕಳದಲ್ಲಿ ಪ್ರಕರಣ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು, ಹೊಸನಗರ, ಬೆಳಗಾವಿಯಲ್ಲಿ ಇಂಥ ಘಟನೆಗಳಾಗಿವೆ. ಅಂದರೆ ಹಸುವಿನ ಕೆಚ್ಚಲು ಕತ್ತರಿಸುವ ಇಷ್ಟೊಂದು ಮಾನಸಿಕ ಅಸ್ವಸ್ಥರು ಯಾಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹುಟ್ಟಿಕೊಂಡರು ಎಂದು ಕೇಳಿದರು. ಇದನ್ನೂ ಓದಿ: ಶಿವಮೊಗ್ಗ | ಎರಡೇ ದಿನದಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ
ಹುಣ್ಣಿಮೆ ಬಂದಾಗ ಕೆಲವರಿಗೆ ಹುಚ್ಚು ಕೆದರುತ್ತಂತೆ. ಕಾಂಗ್ರೆಸ್ ಬಂದಾಗ ಈ ಹುಚ್ಚು ಹೆಚ್ಚಾಗುತ್ತದೆಯೇ? ಎಂದ ಅವರು, ಇದು ಪ್ರತ್ಯೇಕ ಘಟನೆ ಅಲ್ಲ; ಗೋವನ್ನು ದೇವರೆಂದು ಪೂಜಿಸುವ ಸಂಸ್ಕೃತಿಯನ್ನು ವಿರೋಧಿಸುವ ವಿಕೃತಿ ಇರುವವರು ಇಂಥ ಕೆಲಸ ಮಾಡುತ್ತಿದ್ದಾರೆ. ಸಕಲ ಜೀವಿಗಳಿಗೂ ಲೇಸನ್ನೇ ಬಯಸು ಎಂಬ ಬಸವಣ್ಣನವರ ತತ್ವವನ್ನು ವಿರೋಧಿಸುವ ಮಾನಸಿಕತೆ ಇದರ ಹಿಂದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ನದಿಗೆ ಉರುಳಿದ ಕಾರು – ಮಹಿಳೆ ದುರ್ಮರಣ
ಬೆಂಗಳೂರು: ಸರ್ಕಾರಕ್ಕೂ ಆರ್‌ಸಿಬಿಗೂ (RCB) ಏನ್ ಸಂಬಂಧ! ಅದು ಹೇಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದ್ರು? ರಾಯಲ್ ಚಾಲೆಂಜರ್ಸ್ ಅಂದ್ರೆ ಏನು..!? ವಿಸ್ಕಿ ಪ್ರಚಾರಕ್ಕೆ ಅಂತಾ ಮಲ್ಯ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ ಕಾರ್ಯಕ್ರಮ ಮಾಡಿದ್ರಾ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯಗೆ (Siddaramaiah) ತಿರುಗೇಟು ನೀಡಿದ ರವಿ, ಆರ್‌ಸಿಬಿ ನಮ್ಮ ರಾಜ್ಯವನ್ನ ಪ್ರತಿನಿಧಿಸಿತ್ತಾ? ರಾಜ್ಯದ ಆಟಗಾರರು ಯಾರು ಇದ್ರು? ಮಾಲೀಕರು ಕರ್ನಾಟಕದವರು ಇದ್ರಾ? ಸರ್ಕಾರಕ್ಕೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇರಲಿಲ್ಲವಾ? ರಾಜ್ಯದ ಮರ್ಯಾದೆ ಹರಾಜು ಹಾಕಿದ್ದಾರೆ. ಸರ್ಕಾರ ಅನುಮತಿ ಕೊಡದಿದ್ದರೆ ಅಭಿಮಾನಿಗಳು ಸ್ಟೇಡಿಯಂಗೆ ಬರ್ತಾ ಇರಲಿಲ್ಲ. ಇದು ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ. ಅದಕ್ಕೆ ರಾಜೀನಾಮೆ ಕೇಳ್ತಿರೋದು ಅಂತಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ
ಆರ್ಗನೈಸೈಡ್ ಕ್ರೈಂ ಬೇರೆ, ಆಕಸ್ಮಿಕ ಘಟನೆ ಬೇರೆ. ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿದ್ದು ಆರ್ಗನೈಸೈಡ್ ಕ್ರೈಂ. ಅಹಮದಾಬಾದ್‌ನಲ್ಲಿ ನಡೆದಿರುವುದು ಆಕಸ್ಮಿಕ ಘಟನೆ. ಬೇರೆ ರಾಜ್ಯಗಳಲ್ಲಿ ಆರ್ಗನೈಸೈಡ್ ಕ್ರೈಂ ನಡೆದಿದ್ರೆ, ಅಲ್ಲಿ ಹೋಗಿ ರಾಜೀನಾಮೆ ಕೇಳಲಿ ಎಂದು ಟಾಂಗ್ ಕೊಟ್ಟರು.
ಇದೇ ವೇಳೆ ರಾಮಲಿಂಗಾರೆಡ್ಡಿಗೆ ತಿರುಗೇಟು ನೀಡಿದ ಸಿ.ಟಿ.ರವಿ, ರಾಮಲಿಂಗಾರೆಡ್ಡಿಗೆ ಮನುಷ್ಯತ್ವ ಇದ್ರೆ 11 ಜನರ ಸಾವಿನ ಸಂಕಟ ಕೇಳಲಿ. ಅವರ ಮನೆಗೆ ಹೋಗಿ ನೋಡಲಿ. ಇವರು ಏಕೆ ಅನುಮತಿ ಕೊಟ್ರು? ಇವರು ಅನುಮತಿ ಕೊಟ್ಟಿದ್ದಕ್ಕೆ ಸ್ಟೇಡಿಯಂಗೆ ಬಂದಿದ್ದು. ಸಿಎಂ, ಡಿಸಿಎಂಗೂ ಮನುಷ್ಯತ್ವ ಇಲ್ಲ. ಒಬ್ಬರು ದೋಸೆ ತಿನ್ನಲು ಹೋಗ್ತಾರೆ, ಇನ್ನೊಬ್ಬರು ಕಪ್‌ಗೆ ಮುತ್ತಿಡ್ತಾರೆ ಎಂದು ಸಿಎಂ, ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ
ಚಿಕ್ಕಮಗಳೂರು: ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣ ಒಡವೆ ಅಂಗಡಿ, ಪೋರ್ಶೆ ಕಾರು ಶೋರೂಂ, ಬಾರ್‌ಗೆ ಹೋಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆಗೆ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ವಿ. ನಾವು ಮಾಹಿತಿ ಕೊಟ್ಟರೂ ಸಿಐಡಿ ಸರಿಯಾಗಿ ತನಿಖೆ ಮಾಡಲಿಲ್ಲ. ಈಗ ಇಡಿ ರೇಡ್ ಮಾಡಿರೋದನ್ನ ನಾನು ಸ್ವಾಗತಿಸುತ್ತೇನೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಪರಿಶಿಷ್ಟ ಪಂಗಡದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆ, ವಾಹನ-ಭೂ ಖರೀದಿಗೆ ಬಳಕೆ ಆಗಬೇಕಾದ ಹಣ ಚುನಾವಣೆ ಅಕ್ರಮ, ಬಾರ್, ಕಾರು ಶೋ ರೂಂಗೆ ಬಳಕೆಯಾಗೋದು ದರೋಡೆಗಿಂತ ಕ್ರೂರವಾಗಿರೋದು. ವ್ಯವಸ್ಥೆಯೊಳಗೆ ಇರೋರೆ ಮಾಡಿದ ದರೋಡೆ, ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ವೈಜ್ಞಾನಿಕ ವರದಿ ಎಂದು ಸಮರ್ಥನೆ ಮಾಡಿತ್ತು. ಸಿಎಂ ಅದನ್ನ ತಮ್ಮ ಮಹತ್ವಾಕಾಂಕ್ಷೆ ಎಂದು ಹೇಳುತ್ತಿದ್ದರು. ಕಾಂತರಾಜ್ ವರದಿ ಬಳಿಕ ಜಯಪ್ರಕಾಶ್ ಹೆಗ್ಡೆ ಸ್ಕೂಟ್ನಿ ಮಾಡಿದ್ದೇನೆ ಎಂದಿದ್ರು. ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಈಗ ಮತ್ತೆ ಜಾತಿ ಗಣತಿ ಅಂತಿದ್ದಾರೆ. ಹಾಗಾದ್ರೆ ಮೊದಲಿನ ವರದಿ ಅವೈಜ್ಞಾನಿಕ ಅಂತ ಒಪ್ಕೊಳ್ತೀರಾ? ವೈಜ್ಞಾನಿಕ ಎಂದು ಒಪ್ಪಿಕೊಳ್ಳುವುದಾದರೆ ಸರ್ಕಾರದ ಹಣವನ್ನು ವಸೂಲಿ ಮಾಡಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿಯನ್ನು ಪ್ರಕಟ ಮಾಡಿದೆ. ಜನಗಣತಿ ಹಾಗೂ ಜಾತಿ ಗಣತಿ ಮಾಡುವ ಸಂವಿಧಾನದತ್ತ ಅಧಿಕಾರವಿರುವುದು ಕೇಂದ್ರಕ್ಕೆ, ರಾಜ್ಯಕ್ಕಲ್ಲ. ರಾಜಕೀಯ ಕಾರಣಕ್ಕೆ ವಿಷಯಾಂತರ ಮಾಡಲು ಈಗ ಮತ್ತೆ ಜಾತಿಗಣತಿ ಎನ್ನುತ್ತಿದ್ದಾರೆ. ನಿಮ್ಮ ಇಚ್ಛಾಶಕ್ತಿ ಇಲ್ಲದ ರಾಜಕೀಯ ತೆವಲಿಗೆ ಮತ್ತೆ, ಜಾತಿ ದುರ್ಬಳಕೆಗೆ ಮತ್ತೆ ನೂರಾರು ಕೋಟಿ ಖರ್ಚು ಮಾಡಬೇಕಾ? ಜಾತಿ ಎತ್ತು ಕಟ್ಟಲು ಸರ್ಕಾರದ ಹಣ ಬೇಕಾ? ಇದು ಕಾಂಗ್ರೆಸ್ ಹಣ ಅಲ್ಲ, ಜನರ ತೆರಿಗೆ ಹಣ. ಕಾಂತರಾಜ್ ವರದಿ ವೈಜ್ಞಾನಿಕ ಎಂದು ಜನರಿಗೆ ಮಂಕು ಬೂದಿ ಎರಚಲು ಸುಳ್ಳು ಹೇಳಿದ್ರಾ? ನಿಮ್ಮ ‘ಕೈ’ ಕಮಾಂಡ್ ಒತ್ತಡಕ್ಕೆ ವರದಿ ಬಲಿಯಾಯ್ತಾ? ನ್ಯಾಯ ಕುಡಿಸುತ್ತೇನೆ ಎಂದು ಹೇಳುತ್ತಿದ್ರಲ್ಲ, ತಿheಡಿe is ಥಿouಡಿ ಇಚ್ಛಾಶಕ್ತಿ. ಕಾಂತರಾಜ್, ಜಯಪ್ರಕಾಶ್ ವರದಿ, ದಲಿತರು, ಹಿಂದುಳಿದವರು ಯಾರಿಗೂ ನ್ಯಾಯ ಇಲ್ಲ… ಎಲ್ಲಿದೆ ನ್ಯಾಯ, ನಿಮ್ಮ ನಂಬಿದವರಿಗೆ ಯಾರಿಗೂ ನ್ಯಾಯ ಇಲ್ಲ ಎಂದು ಕಿಡಿಕಾರಿದರು.
ತುಮಕೂರು ಜಿಲ್ಲೆಯನ್ನ ಬೆಂಗಳೂರು ಉತ್ತರ ಮಾಡುವ ವಿಚಾರ ಬಗ್ಗೆ ಮಾತನಾಡಿ, ಕೆಂಪೇಗೌಡರು ಬೆಂದಕಾಳೂರು ಎಂಬ ಹಳ್ಳಿಯನ್ನೇ ಬ್ರಾಂಡ್ ಮಾಡಿದ್ರು. ಸಿಂಗಾಪುರ ಒಂದು ಕಾಲದಲ್ಲಿ ರೋಗಗ್ರಸ್ಥವಾಗಿದ್ದ ಸಣ್ಣ ಹಳ್ಳಿ. ಸಿಂಗಾಪುರವನ್ನು ಅಲ್ಲಿಯವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು. ಇವರಿಗೆ ಭವಿಷ್ಯದಲ್ಲಿ ತನ್ನ ಊರನ್ನೇ ಬ್ರಾಂಡ್ ಮಾಡುವ ತಾಕತ್ತು ಇಲ್ವಾ. ಬೆಂಗಳೂರು ಹೆಸರಿನಲ್ಲೇ ಇವರು ತಮ್ಮ ಬೇಳೆ ಬೇಯಿಸಿಕೊಳ್ಳಬೇಕಾ? ತುಮಕೂರಿಗೂ ಒಂದು ಐಡೆಂಟಿಟಿ ಕೊಡುವ ತಾಕತ್ತು ಇವರಿಗಿಲ್ವಾ? ಹಳ್ಳಿಯನ್ನೇ ಬ್ರಾಂಡ್ ಮಾಡುವ ದಾರ್ಶನಿಕರು ಇರುವ ಕಡೆ ಇವರು ಬೆಂಗಳೂರು ಹೆಸರಲ್ಲೇ ಬೇಳೆ ಬೇಯಿಸಿಕೊಳ್ಳಬೇಕಾ? ತುಮಕೂರಿನ್ನೇ ಜಾಗತೀಕ ಮಟ್ಟದಲ್ಲಿ ಬೆಳೆಸೋಕೆ ಇವರಿಗೆ ಬರೋದಿಲ್ವಾ? ಇವರು ಕೆಂಪೇಗೌಡರ ಹೆಸರಲ್ಲೇ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
– ಬೆಂಗ್ಳೂರನ್ನ ಸರಿ ಮಾಡದೋರು, ರಾಜ್ಯವನ್ನು ಹೇಗೆ ಸರಿ ಮಾಡ್ತಾರೆ?
ಬೆಂಗಳೂರು: ಭಾರೀ ಮಳೆಯಿಂದ (Rain) ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರಗಳಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಬೇಸರ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರಾಜ್ಯ-ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತದೆ. ಆದರೆ, ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ. ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲ್ಯಾನಡ್ ಬೆಂಗಳೂರು ಇತ್ತು. ಈಗ ಅನ್ ಪ್ಲ್ಯಾನಡ್ ಬೆಂಗಳೂರಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!
ಕಂದಾಯ ನಿವೇಶನ, ಲೂಟಿ ಹೊಡೆಯಲು ರಾಜಕಾಲುವೆ, ಕೆರೆಗಳನ್ನೇ ನುಂಗಿರೋದು, ರಾಜಕಾಲುವೆ ಒತ್ತುವರಿ ಕೂಡ ದಂಧೆಯಾಗಿದೆ. ಇದೇನಾ ಬ್ರಾಂಡ್ ಬೆಂಗಳೂರು? ಪ್ರತಿವರ್ಷ ಸಾವಿರಾರು ಕೋಟಿ ರೂ. ಹಣ ಹಾಕ್ತೀವಿ, ಈ ಹಣ ಎಲ್ಲಿ ಹೋಗ್ತಿದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಆದಾಯದಲ್ಲಿ 70% ಬೆಂಗಳೂರಿಂದ ಬರುತ್ತದೆ. ಇದು ಇವರಿಗೆ ಕರೆಯೋ ಹಸುವಾಗಿದೆ, ಕರೆಯುತ್ತಲೇ ಇರಬೇಕು. ಬೆಂಗಳೂರನ್ನು ಸರಿ ಮಾಡದೋರು, ರಾಜ್ಯವನ್ನು ಹೇಗೆ ಸರಿ ಮಾಡ್ತಾರೆ? ಈ ಸರ್ಕಾರ ಬ್ರಾಂಡ್ ಬೆಂಗಳೂರು ಅನ್ನುತ್ತೆ, ಇದೇನಾ ಬ್ರಾಂಡ್ ಬೆಂಗಳೂರು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮಳೆ ಕಾಟ – KSRTC ಮೇಲೆ ಉರುಳಿಬಿದ್ದ ಮರ
ಬೆಂಗಳೂರು: ಕಾಂಗ್ರೆಸ್‌ನವರು ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವ್ರು ಆಪರೇಷನ್ ಸಿಂಧೂರದ(Operation Sindoor) ಬಗ್ಗೆ ಅಪಸ್ವರದ ಮಾತಾಡ್ತಿದ್ದಾರೆ. ಯಾಕೆ ಕದನ ನಿಲ್ಲಿಸಿದ್ರಿ ಅಂತಿದ್ದಾರೆ. ಇನ್ನು ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದ್ರು ಅಂದಿದ್ದಾರೆ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಕೊತ್ತೂರು ಮಂಜುನಾಥ್ ಇವರಿಗೆಲ್ಲ ಆಪರೇಷನ್ ಸಿಂಧೂರದ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ ಎಂದರು. ಇದನ್ನೂ ಓದಿ: ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
ಜೊತೆಗೆ ಕಾಂಗ್ರೆಸ್‌ನವ್ರಲ್ಲೇ ದ್ವಂದ್ವ ಕಾಣ್ತಿದೆ. ಇಡೀ ದೇಶ ಯುದ್ಧ ಬೇಕು ಅನ್ನುವಾಗ ಸಿದ್ದರಾಮಯ್ಯ(Siddaramaiah) ಯುದ್ಧ ಬೇಡ ಅಂದ್ರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ ಹಾಕಿಕೊಂಡು ಸುದ್ದಿಗೋಷ್ಠಿ ಮಾಡಿ ಸೈನಿಕರನ್ನು ಶ್ಲಾಘಿಸಿದರು. ಇಡೀ ಕ್ರೆಡಿಟ್ ಸೈನ್ಯಕ್ಕೆ ಅಂದ ಸಿದ್ದರಾಮಯ್ಯ ಈಗ ಅಪಪ್ರಚಾರ ಯಾಕೆ ಮಾಡ್ತಿದ್ದಾರೆ. ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆನೋ ಅಥವಾ ರಾಜಕೀಯ ನಾಯಕತ್ವಕ್ಕೋ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್!
ಪ್ರಧಾನಿ ಮೋದಿಯವರು ಸೇನೆಗೆ ಎಲ್ಲಾ ಸ್ವಾತಂತ್ರ‍್ಯ ಕೊಟ್ಟಿದ್ರು. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಂದ್ ಮಾಡಿದ್ರು, ಪಾಕ್ ಉಗ್ರ ಪೋಷಕ ರಾಷ್ಟ್ರ ಅಂತ ಇಡೀ ಜಗತ್ತಿಗೆ ಹೇಳಿದ್ದಾರೆ. 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ನೂರಾರು ಉಗ್ರರನ್ನ ನರಕಕ್ಕೆ ಕಳಿಸಿದ್ದಾರೆ. ಆ ಉಗ್ರರಿಗೆ ಜನ್ನತ್ ಸಿಗಲ್ಲ ಅಂದ್ರು. ಯುದ್ಧ ನಿಲ್ಲಿಸಿಲ್ಲ. ಇದು ತಾತ್ಕಾಲಿಕ ಅಷ್ಟೇ, ಮತ್ತೆ ಯುದ್ಧ ಶುರುವಾದ್ರೆ ಅವರ ತಲೆ, ಬಾಲ ಎರಡೂ ಕಟ್ ಆಗುತ್ತದೆ. ಭಯೋತ್ಪಾದನೆಯ ಮೂಲ ಕಿತ್ತು ಹಾಕಲು ಕಾಂಗ್ರೆಸ್(Congress) ಕೂಡಾ ನಮ್ಮ ಜೊತೆ ಕೈ ಜೋಡಿಸಲಿ ಎಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಅರೆಸ್ಟ್ – ಚಿನ್ನಾಭರಣ ಸೇರಿ 7.89 ಲಕ್ಷ ಮೌಲ್ಯದ ವಸ್ತು ಜಪ್ತಿ
ಭಯೋತ್ಪಾದನೆ(Terrorism) ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್‌ನವರು ಪೋಷಿಸುತ್ತಿದ್ದಾರೆ. ಕಾಂಗ್ರೆಸ್‌ನವರ ಮನಸ್ಥಿತಿ ಬದಲಾಗಬೇಕು. ಭಯೋತ್ಪಾದನೆಯೆ ಡಿಎನ್‌ಎ ಕಿತ್ತು ಹಾಕಿ ಮೊದಲು. ಆ ಡಿಎನ್‌ಎ ಕರ್ನಾಟಕದಲ್ಲೂ ಇದೆ, ಜಗತ್ತಲ್ಲೂ ಇದೆ. ಮೊದಲು ಇದನ್ನ ಮಟ್ಟ ಹಾಕಬೇಕು ಎಂದು ಗುಡುಗಿದರು.
ಭಯೋತ್ಪಾದನೆ ಮೂಲಕ್ಕೆ 1400 ವರ್ಷಗಳ ಇತಿಹಾಸ ಇದೆ. ಬದಲಾದ ಸಂದರ್ಭ, ಬದಲಾದ ರೀತಿಯಲ್ಲಿ ಅದು ನಡೀತಿದೆ. ಕರ್ನಾಟಕದಲ್ಲೂ ಭಯೋತ್ಪಾದಕರ ಕೇಂದ್ರಗಳಿವೆ. ಮತದ ಹೆಸರಲ್ಲಿ ಅಲ್ಲಿ ಏನು ಕಲಿಸ್ತಿದ್ದಾರೆ? ಅದಕ್ಕೆ ಯಾರ ಪೋಷಣೆ ಇದೆ? ನಮ್ಮ ಪೋಷಣೆ ಪ್ರಶಂಸೆ ಸೇನೆಗೆ ಅಂತಾ ಕಾಂಗ್ರೆಸ್‌ನವರು ಹೇಳಿದ್ರು. ಹಾಗಾದ್ರೆ ಟೀಕೆ ಯಾರಿಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ
ತಾಜ್ ಹೊಟೇಲ್ ಮೇಲೆ ದಾಳಿ ಆದಾಗ, ವಾರಣಾಸಿ ಸ್ಫೋಟ, ರೈಲು ಸ್ಫೋಟ, ಮಾಲೇಗಾಂವ್ ಸ್ಫೋಟ, ಅಹಮದಾಬಾದ್ ಬಾಂಬ್ ಸ್ಫೋಟ, ದೆಹಲಿ ಬಾಂಬ್ ಸ್ಫೋಟ, ಪುಣೆ ಬಾಂಬ್ ಸ್ಫೋಟ ಇದೆಲ್ಲ ಆದಾಗ ಕಾಂಗ್ರೆಸ್‌ನವರು ಯಾವ ಕ್ರಮ ಕೈಗೊಂಡರು. ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು? ಕಾಂಗ್ರೆಸ್‌ನವ್ರು ಸೇನೆಗೆ ಸ್ವಾತಂತ್ರ‍್ಯ ಕೊಟ್ಟಿದ್ರಾ? ಆಗೆಲ್ಲ ಭಯೋತ್ಪಾದನೆ ಬೇರು ಸಮೇತ ಕಿತ್ತು ಹಾಕಬೇಕು ಅಂತ ಅನಿಸಿಲಿಲ್ಲ. ಈಗ ಅನಿಸ್ತಿರೋದ್ರ ಹಿಂದೆ ಕಾರಣ ಏನಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಡೀ ದೇಶ, ಸೇನೆ, ಸೈನಿಕರು ಮೋದಿ ಪಾದಗಳಿಗೆ ನಮಸ್ಕರಿಸುತ್ತಾರೆ: ಡಿಸಿಎಂ ವಿವಾದಾತ್ಮಕ ಹೇಳಿಕೆ
ಭಯೋತ್ಪಾದನೆಯ ಮೂಲ ಡಿಎನ್‌ಎನಲ್ಲೇ ಇದೆ. ಆ ಡಿಎನ್‌ಎ ಕಿತ್ತು ಹಾಕಬೇಕು. ಇಥಿಯೋಪಿಯಾ, ಸೂಡಾನ್, ಹಮಾಸ್ ಭಯೋತ್ಪಾದನೆ, ಆಫ್ಘಾನಿಸ್ತಾನ, ಇರಾಕ್, ಇರಾನ್, ಟ್ವಿನ್ ಟವರ್ ಸ್ಫೋಟ ಇದಕ್ಕೆಲ್ಲಾ ಯಾವ ಭಯೋತ್ಪಾದನೆಯ ಡಿಎನ್‌ಎ ಕಾರಣ? ಈ ಡಿಎನ್‌ಎ ಅನ್ನು ಮತಬ್ಯಾಂಕ್‌ಗಾಗಿ ಪೋಷಿಸ್ತಿರೋರು ಯಾರು? ದೆ ಆರ್ ಮೈ ಬ್ರದರ್ಸ್ ಅಂದವರು ಯಾರು? ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಾಕ್ಷಿ ಕೇಳಿದವ್ರು ಇದೇ ಕಾಂಗ್ರೆಸ್‌ನವರು. ಈಗ ಪಾಕ್ ಉಗ್ರರ ಮೇಲಿನ ದಾಳಿಗೆ ಭಾರತ ಜಾಗತಿಕ ಸಾಕ್ಷ್ಯ ಕೊಟ್ಟಿದೆ ಎಂದರು.
– ಪಿಎಫ್‌ಐ, ಎಸ್‌ಡಿಪಿಐ ಅವ್ರ ಕೇಸ್ ವಾಪಾಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾ? – ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್‌ನ ಓಲೈಕೆ ರಾಜಕೀಯ ಕಾರಣ
ಬೆಂಗಳೂರು: ಕಾಂಗ್ರೆಸ್‌ನವ್ರು ದನಗಳ್ಳರು ಸತ್ತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(Suhas Shetty) ಮನೆಗೆ ಭೇಟಿ ಕೊಡದ ಕಾಂಗ್ರೆಸ್ ನಾಯಕರ ನಡೆಗೆ ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದನಗಳ್ಳರಾಗಿದ್ದ ಇದ್ರಿಸ್ ಪಾಷ ಹಾಗೂ ಕಬೀರ್ ಸತ್ತಾಗ ಕಾಂಗ್ರೆಸ್ ನಾಯಕರು(Congress Leaders) ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ, ಒಬ್ರಿಗೆ 10 ಲಕ್ಷ ರೂ. ಇನ್ನೊಬ್ಬರಿಗೆ 25 ಲಕ್ಷ ರೂ. ಪರಿಹಾರವನ್ನೂ ಕೊಟ್ಟು ಬಂದ್ರು. ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಕೇಸ್‌ಗಳನ್ನು ವಾಪಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾಗಿದ್ರಾ? ಅವರ ಮೇಲೆ ದೊಂಬಿ ಗಲಭೆ, ಠಾಣೆಗೆ ಬೆಂಕಿ ಹಾಕಿದ ಕೇಸ್‌ಗಳಿವೆ. ಯಾರ್ಯಾರು ಯಾವ್ಯಾವ ಕಾರಣಕ್ಕೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಬಿಚ್ಚಿ ಹೇಳಬೇಕಾ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ
ಸುಹಾಸ್ ಶೆಟ್ಟಿ ಹತ್ಯೆ ನಂತರ ಸರ್ಕಾರ ಏನು ಕ್ರಮ ತಗೊಂಡಿದೆ. ಎಸ್‌ಡಿಪಿಐ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯುವಾಗ ದಿನೇಶ್ ಗುಂಡೂರಾವ್‌ಗೆ(Dinesh Gundu Rao) ಅವಮಾನ ಆಗಲಿಲ್ಲ? ಸುಹಾಸ್ ಶೆಟ್ಟಿ ರೌಡಿಶೀಟರ್ ಅನ್ನೋದು ಅವಮಾನನಾ ನಿಮಗೆ? ಯಾರ್ಯಾರು ರೌಡಿಶೀಟರ್‌ಗಳನ್ನಿಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳಬೇಕಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದ ದತ್ತು ಪುತ್ರ ಅರೆಸ್ಟ್
ಬಿಜೆಪಿ ಅವಧಿಯಲ್ಲಿ ಸುಹಾಸ್ ಶೆಟ್ಟಿ ಹೆಸರಿನಲ್ಲಿ ರೌಡಿಶೀಟ್ ಓಪನ್ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ. ಈ ವಿಚಾರಗಳು ಸಚಿವರಿಗೆ ಅಥವಾ ಶಾಸಕರಿಗೆ ಗೊತ್ತೇ ಇರಲ್ಲ. ಎಷ್ಟೋ ಸಲ ಆರೋಪಿಗೇ ಈ ವಿಚಾರ ಗೊತ್ತಿರಲ್ಲ. ಪೊಲೀಸರು ಅವರ ದಾಖಲೆಗಾಗಿ ರೌಡಿಶೀಟ್ ಓಪನ್ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಟಕ್ಕರ್ ಕೊಟ್ಟರು.
ಕಲಬುರಗಿ: ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ. ದೇಶಕ್ಕಾಗಿ ಬಲಿಯಾಗಲು ನಾನು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಖಾನ್(Zameer Ahmed Khan) ಪುನರುಚ್ಚರಿಸಿದರು.
ಕಲಬುರಗಿಯಲ್ಲಿ(Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ(Pakistan) ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ. ನಮ್ಮ ಪಕ್ಷದಿಂದ ಬೆಂಬಲವಿದೆ ಎಂದು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್!
ಜಮೀರ್ ಯುದ್ದಕ್ಕೆ ಹೋಗೋದು ಬೇಡ, ಇಲ್ಲಿರೋ ಕುನ್ನಿಗಳನ್ನ ಕೊಲ್ಲಲಿ ಎಂದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗ್ತೇನೆ. ಸಿ.ಟಿ.ರವಿಗೆ(C T Ravi) ಏನು ಕೆಲಸ ಇಲ್ಲ. ಅದಕ್ಕಾಗಿ ಮಾತನಾಡ್ತಾರೆ. ನಮಗೆ ನಮ್ಮ ದೇಶ ಮುಖ್ಯ. ಅದಕ್ಕಾಗಿ ನಾನು ಯುದ್ಧಕ್ಕೆ ಹೋಗ್ತೇನೆ ಅಂದಿದ್ದೆ ಎಂದು ಹೇಳಿದರು.