Tag: c t ravi

  • ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್ ಹೇಗೆ ಮಾಡ್ತಾರೆ: ಸಿ.ಟಿ.ರವಿ ಪತ್ನಿ

    ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಪ್ರಕರಣ ಸಂಬಂಧ, ಅಪಘಾತದಿಂದ ದುರ್ಮರಣ ಹೊಂದಿರುವ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಆದ್ರೆ ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ. ಹೀಗಾಗಿ ಮದ್ಯಪಾನ ಹೇಗೆ ಮಾಡ್ತಾರೆ ಎಂದು ಸಿ.ಟಿ ರವಿ ಅವರ ಪತ್ನಿ ಪಲ್ಲವಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತನ್ನ ಪತಿ ಮದ್ಯ ಸೇವಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಮಾಧ್ಯಮದಲ್ಲಿ ಈ ಬಗ್ಗೆ ನೋಡಿ ನನಗೆ ಬೇಸರವಾಗಿ, ಶಾಕ್ ಆಯ್ತು. ಅವರು ನೀರು ಕುಡಿಯೋದು ಬಿಟ್ಟು, ಬೇರೆ ಏನು ಕುಡಿದಿರೋದು ನನಗೆ ಗೊತ್ತಿಲ್ಲ. ಬೆಳಗ್ಗೆ 6.30ಕ್ಕೆ ವಿಮಾನ ಇತ್ತು. ಹಾಗಾಗಿ ಕಾರಿನಲ್ಲಿ ರಾತ್ರಿ 12 ಗಂಟೆಗೆ ಮನೆಯಿಂದ ಹೊರಟ್ಟಿದ್ದರು. ನನ್ನ ಪತಿ ಕಾರು ಡ್ರೈವ್ ಮಾಡುವುದನ್ನು ಬಿಟ್ಟು 15 ವರ್ಷ ಆಗಿದೆ. ಬಹುಷ: ಅವರಿಗೆ ಡ್ರೈವಿಂಗ್ ಮರೆತೇ ಹೋಗಿದೆ. ಕಾರನ್ನು ಡ್ರೈವರ್ ಓಡಿಸುತ್ತಿದ್ದರು ಎಂದು ಪಲ್ಲವಿ ಅವರು ತಿಳಿಸಿದ್ದಾರೆ.  ಇದನ್ನೂ ಓದಿ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ

    ಅಪಘಾತದಿಂದ ಸ್ವಲ್ಪ ಎದೆಗೆ ಪೆಟ್ಟು ಬಿದ್ದಿದೆ ಎಂದು ಪತಿ ಹೇಳಿದ್ದರು. ಮೃತರ ಕುಟುಂಬಕ್ಕೆ ನಮ್ಮ ಕೈಯಲ್ಲಿ ಏನಾಗುತ್ತೋ ಆ ರೀತಿಯ ಸಹಾಯ ಮಾಡ್ತೇವೆ. ಅಪಘಾತದಿಂದ ನನಗೆ ಶಾಕ್ ಆಯ್ತು. ಎರಡು ಯುವಕರು ಜೀವ ಕಳೆದುಕೊಂಡಿದ್ದಾರೆ. ಅದು ನಿಜವಾಗಿಯೂ ಬೇಸರದ ವಿಷಯ. ಈ ಅಪಘಾತ ಆಕಸ್ಮಿಕ, ಈ ಅಪಘಾತದಿಂದ ನಮಗೆ ನೋವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

    https://www.youtube.com/watch?v=YPEOa75NnvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ಇದ್ದವರು ಕೇಸ್ ಮುಚ್ಚಿಹಾಕ್ತಾರೆ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ- ಮೃತ ಶಶಿಕುಮಾರ್ ತಂದೆ ಕಣ್ಣೀರು

    ಹಣ ಇದ್ದವರು ಕೇಸ್ ಮುಚ್ಚಿಹಾಕ್ತಾರೆ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ- ಮೃತ ಶಶಿಕುಮಾರ್ ತಂದೆ ಕಣ್ಣೀರು

    ರಾಮನಗರ: ಶಾಸಕ ಸಿಟಿ ರವಿ ಕಾರು ಅಪಘಾತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಶಶಿಕುಮಾರ್ ಅವರ ತಂದೆ ಜಯರಾಮ್ ಅವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭಾನುವಾರ ಪ್ರವಾಸ ಮುಗಿಸಿಕೊಂಡು ಸುನಿಲ್ ಹಾಗೂ ಶಶಿಕುಮಾರ್ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಮಗೆ ಅಪಘಾತದ ವಿಷಯ ತಿಳಿದಿದೆ. ತಾಯಿ ಬಳಿ ನನ್ನ ಮಗ ಫೋನ್‍ನಲ್ಲಿ ಮಾತನಾಡಿದ್ದ. ಬೆಂಗಳೂರು ಸಮೀಪದಲ್ಲೇ ಇದ್ದೇನೆ, ಮನೆಗೆ ಬೇಗ ಬರುತ್ತೇನೆ ಅಂದಿದ್ದ. ಆದ್ರೆ ಈ ರೀತಿ ಮನೆಗೆ ಹೆಣವಾಗಿ ಬರುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಬಡವರು ಈ ರೀತಿ ಅಪಘಾತ ಮಾಡಿದ್ದರೆ ಬಿಡುತ್ತಿದ್ದರಾ? ಅವರು ರಾಜಕಾರಣಿ ಅಂತ ಸುಮ್ಮನೆ ಆರೋಪಿಗೆ ತಕ್ಕ ಶಿಕ್ಷೆ ನೀಡಿ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಶಶಿಕುಮಾರ್ ತಂದೆ ಕಣ್ಣೀರಿಟ್ಟಿದ್ದಾರೆ.

    ನಾವು ಬಡವರು, ಬಹಳ ಕಷ್ಟ ಪಟ್ಟು ಮಕ್ಕಳನ್ನು ಸಾಕಿದ್ದೇವೆ. ಮೂತ್ರವಿಸರ್ಜನೆ ಮಾಡುತ್ತ ನಿಂತಿದ್ದ ಮಕ್ಕಳಿಗೆ ಕಾರು ಡಿಕ್ಕಿ ಹೊಡೆದು ಅವರನ್ನು ರಸ್ತೆಯಲ್ಲೇ ಬಿಟ್ಟು ಸಿ.ಟಿ ರವಿ ಹೋಗಿದ್ದಾನೆ. ಮಗನ ಮದುವೆ ಮಾಡಬೇಕು ಅಂತಿದ್ದೆ. ಎದೆ ಎತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ನಮ್ಮ ಮಕ್ಕಳಿಗೆ ನ್ಯಾಯ ಕೊಡಿಸಿ. ನಮಗೂ ವಯಸಾಯ್ತು ಮಗ ನಮಗೆ ಆಧಾರವಾಗಿ ಇರುತ್ತಾನೆ ಅಂದುಕೊಂಡಿದ್ದೆ. ಈಗ ನಮಗೆ ಯಾರು ಗತಿ? ಯಾರು ನಮ್ಮನ್ನು ಸಾಕುತ್ತಾರೆ. ಮಕ್ಕಳೇ ನಮಗೆ ಆಸ್ತಿ, ಅವರನ್ನೇ ಕಳೆದುಕೊಂಡ ಮೇಲೆ ಏನು ಮಾಡಿದರು ಪ್ರಯೋಜನವಿಲ್ಲ ಎಂದು ರೋಧಿಸುತ್ತಿದ್ದಾರೆ.

    ಶ್ರೀಮಂತರು, ರಾಜಕಾರಣಿಗಳು ತಮ್ಮ ಬಲದಿಂದ ನಮ್ಮಂತ ಬಡವರಿಗೆ ಸಹಾಯ ಮಾಡಲು ಬರುವವರನ್ನು ಕೊಂದುಬಿಡುತ್ತಾರೆ. ಬಂದವರಿಗೆ ಬೆಲೆಯಿಲ್ಲ, ನನ್ನ ಮಗ ನನಗೆ ಬೇಕು. ನಮಗೆ ನ್ಯಾಯ ಕೊಡಿಸಿ. ಬಡವರ ಮಕ್ಕಳು ಅಂತ ಈ ಪ್ರಕರಣವನ್ನು ಮುಚ್ಚಿಹಾಕಬೇಡಿ. ಹಣ ಇರುವವರು ತಮ್ಮ ತಪ್ಪಿಗೆ ಯಾರನ್ನೋ ಆರೋಪಿ ಮಾಡಿ ಕೇಸ್ ಮುಚ್ಚಿಹಾಕುತ್ತಾರೆ. ಆಗ ನಾವು ಏನು ಮಾಡೋಕು ಅಗಲ್ಲ. ನಮ್ಮ ನೋವು ಕೇಳೋರು ಯಾರು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈಗಾಗಲೇ ಅಪಘಾತದಲ್ಲಿ ಮೃತಪಟ್ಟ ಸುನಿಲ್ ಹಾಗೂ ಶಶಿಕುಮಾರ್ ಅವರ ಮೃತದೇಹವನ್ನು ಅವರ ಸ್ವಗ್ರಾಮದತ್ತ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    https://www.youtube.com/watch?v=CG4X-v7Ije4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕಿತ್ಸೆ ಪಡೆದು ಮುಂಜಾನೆ 5 ಗಂಟೆಗೆ ಸಿ.ಟಿ ರವಿ ಡಿಸ್ಜಾರ್ಜ್

    ಚಿಕಿತ್ಸೆ ಪಡೆದು ಮುಂಜಾನೆ 5 ಗಂಟೆಗೆ ಸಿ.ಟಿ ರವಿ ಡಿಸ್ಜಾರ್ಜ್

    ಬೆಂಗಳೂರು: ಕಾರು ಅಪಘಾತಕ್ಕೊಳಗಾಗಿ ಶಾಸಕ ಸಿ.ಟಿ ರವಿ ಅವರು ಬೆಳಗ್ಗಿನ ಜಾವ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಮುಂಜಾನೆ ಸುಮಾರು 5 ಗಂಟೆ  ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದಾರೆ.

    ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಸಿಟಿ ರವಿ ಅವರ ಫಾರ್ಚೂನರ್ ಕಾರು ಕೂಡ ಪಲ್ಟಿಯಾಗಿತ್ತು. ಪರಿಣಾಮ ಸಿ.ಟಿ ರವಿ ಸೇರಿದಂತೆ ಮೂರು ಜನರಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಹೀಗಾಗಿ ಬೆಳಗ್ಗಿನ ಜಾವ ಸುಮಾರು 3.00 ಗಂಟೆಗೆ ಶಾಸಕ ಸಿ.ಟಿ ರವಿ ಆಸ್ಪತ್ರೆಗೆ ದಾಖಲಾಗಿದ್ದರು.

    ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾದ್ದರಿಂದ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಬೆಳಗ್ಗೆ ಸುಮಾರು 5 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಸಿಟಿ ರವಿ ಅವರ ಫಾರ್ಚೂನರ್ ಕಾರು, ರಸ್ತೆ ಬದಿ ನಿಂತಿದ್ದ ಸುನಿಲ್ ಗೌಡ ಮತ್ತು ಶಶಿಕುಮಾರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇತ್ತ ಸಿಟಿ ರವಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಕುಣಿಗಲ್ ತಾಲೂಕಿನ ಆಸ್ಪತ್ರೆ ಎದುರು ಮೃತ ಸ್ನೇಹಿತರು ಮತ್ತು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಅಪಘಾತ ಮಾಡಿ ಓಡಿ ಹೋದ ಸಿ.ಟಿ.ರವಿ ಸ್ಥಳಕ್ಕೆ ಬರುವಂತೆ ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೂತ್ರ ವಿಸರ್ಜನೆ ಮಾಡ್ತಿದ್ದವರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ- ಇಬ್ಬರ ದುರ್ಮರಣ

    ಮೂತ್ರ ವಿಸರ್ಜನೆ ಮಾಡ್ತಿದ್ದವರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ- ಇಬ್ಬರ ದುರ್ಮರಣ

    ತುಮಕೂರು: ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

    ಸುನಿಲ್ ಗೌಡ ಮತ್ತೆ ಶಶಿಕುಮಾರ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರ ಮೃತದೇಹವನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ.

    ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಸಿಟಿ ರವಿ ಅವರ ಫಾರ್ಚೂನರ್ ಕಾರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸುನಿಲ್ ಗೌಡ ಮತ್ತು ಶಶಿಕುಮಾರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮುನಿರಾಜು, ಜಯಚಂದ್ರ, ಪುನೀತ್ ಹಾಗೂ ಮಂಜುನಾಥ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸಿಟಿ ರವಿ ಮತ್ತು ಆತನ ಜೊತೆ ಪ್ರಯಾಣಿಸುತ್ತಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಂಗಳೂರಿಗೆ ಸಾಗಿಸಲಾಗಿದೆ.

    ಸಿ.ಟಿ ರವಿ ಅವರ ಕಾರಿನಲ್ಲಿ ಮೂರು ಜನ ಇದ್ದರು. ಘಟನೆಯ ಬಳಿಕ ಶಾಸಕರು ಬೇರೆ ಕಾರು ಹತ್ತಿ ಹೊರಟು ಹೋಗಿದ್ದಾರೆ. ಆದ್ರೆ ಬಳಿಕ ನಮ್ಮನ್ನು ಯಾರೂ ಕೆಳೋಕೆ ಬಂದಿಲ್ಲ ಎಂದು ಗಾಯಾಳು ಪುನೀತ್ ಆರೋಪಿಸಿದ್ದಾರೆ. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ: ಸಿ.ಟಿ ರವಿ ಕಿಡಿ

    ಚಿಕ್ಕಮಗಳೂರು: ಹೊಟ್ಟೆಯೊಳಗೆ ವಿಷ ಇಟ್ಕೊಂಡಿರೋ ಎರಡು ಪಕ್ಷ ಒಟ್ಟಾಗಿ ಅಧಿಕಾರ ಮಾಡಿದ್ರೆ ಹೀಗೆ ಆಗುತ್ತೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಂಡು ಈಗ ಬಿಜೆಪಿಯನ್ನೇ ದೋಷಿಸುತ್ತಿದ್ದಾರೆ ಅಂತ ಶಾಸಕ ಸಿ.ಟಿ ರವಿ ಮೈತ್ರಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿ ಸರ್ಕಾರ ಜನ ಬಯಸಿದ್ದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ನೀಚ ಮುಖ್ಯಮಂತ್ರಿ ಅಂತ ಹೇಳಿದ್ದರು. ನಾನು ಎಂದಿಗೂ ಸಿದ್ದರಾಮಯ್ಯಗೆ ಆ ರೀತಿ ಹೇಳುವುದಿಲ್ಲ. ರಾಜಕೀಯವಾಗಿ ವಿರೋಧ ಇರಬಹುದು ಆದ್ರೆ ವೈಯಕ್ತಿಕವಾಗಿ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇರಡು ಪಕ್ಷ ಮೈತ್ರಿ ಮಾಡಿಕೊಂಡಿದೆ ಅಷ್ಟೇ. ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಆಗುತ್ತದೆ. ಅವರವರ ಒಳ ಮುನಿಸುಗಳನ್ನು ಮುಚ್ಚಿಟ್ಟು ಎಲ್ಲದಕ್ಕೂ ಬಿಜೆಪಿ ಅವರನ್ನು ದೂರುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈತ್ರಿ ಸರ್ಕಾರ ಬಂದ ಮೇಲೆ ನಾನೊಬ್ಬ ಸಾಂದರ್ಭಿಕ ಶಿಶು, ಅಸಹಾಯಕತೆಯಲ್ಲಿದ್ದೇನೆ, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ, ಕ್ಲರ್ಕ್‍ಗಿಂತ ಕಡೆಯಾಗಿದ್ದೇನೆ ಅಂತ ಸಿಎಂ ಕುಮಾರಸ್ವಾಮಿಯವರೇ ಹೇಳಿದ್ದರು. ಇತೀಚೆಗೆ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಿದ್ರೆ ಹುಷಾರ್ ಅಂತ ಹೇಳಿದ್ದರು. ರೇವಣ್ಣ ಅವರು ನಮ್ಮ ಸಚಿವ ಖಾತೆ ಬಗ್ಗೆ ಒತ್ತಡ ಹೇರೋಕೆ ಅವರ್ಯಾರು ಅಂತ ಹೇಳಿಕೆ ನೀಡಿದ್ದರು. ರಾಜಕೀಯ ಹೇಗೆ ಮಾಡಬೇಕು ಗೊತ್ತಿದೆ ಅದನ್ನ ಜೆಡಿಎಸ್‍ನಿಂದ ಕಲಿಯಬೇಕಾಗಿಲ್ಲ ಅಂತ ದಿನೇಶ್ ಗುಂಡುರಾವ್ ಹೇಳಿದ್ದರು. ಇದ್ಯಾವುದನ್ನು ನಾವು ಹೇಳಿದ್ದಲ್ಲ ಮೈತ್ರಿ ನಾಯಕರೇ ಮಾತನಾಡಿದ್ದು. ಇಷ್ಟೆಲ್ಲ ಪರಸ್ಪರ ವಿರೋಧ ಇಟ್ಟುಕೊಂಡಿರುವವರು ಹೇಗೆ ಉತ್ತಮ ಸರ್ಕಾರ ನಡೆಸ್ತಾರೆ ಅಂತ ಪ್ರಶ್ನಿಸಿದರು.

    ಸರ್ಕಾರ ಉರುಳಿಸುವ ಕೆಲಸ ನಾವು ಮಾಡ್ತಿಲ್ಲ. ಅವರೇ ಮಾಡಿಕೊಳ್ಳುತ್ತಿದ್ದಾರೆ. ನಾವು ಸರ್ಕಾರ ಬೀಳಲಿ ಅಂತನೇ ಕಾಯುತ್ತಿದ್ದೇವೆ. ಅದನ್ನೆ ಜನರು ಬಯಸುತ್ತಿದ್ದಾರೆ. ಶಾಸಕರು ಸಭೆಗಳಿಗೆ ಹೋಗಿಲ್ಲ ಅಂದರೆ ನಮ್ಮನ್ನ ಯಾಕೆ ದೂರುವುದು. ಬಿಜೆಪಿಯವರು ಗುರುಗ್ರಾಮಕ್ಕೆ ಹೋದರೆ ಮೈತ್ರಿ ನಾಯಕರಿಗೆ ಭಯ ಯಾಕೆ? ಅವರಲ್ಲಿನ ಬಂಡಾಯ ಶಮನ ಮಾಡುವುದು ನಮ್ಮ ಕೆಲಸವಲ್ಲ. ನಾವು ಕಾಂಗ್ರೆಸ್ ಹೈಕಮಾಂಡಲ್ಲ. ಸರ್ಕಾರ ಬಿದ್ರೆ ಜನರಿಗೂ ಖುಷಿಯಾಗುತ್ತೆ ಜೊತೆಗೆ ನಮಗೂ ಖುಷಿಯಾಗುತ್ತೆ ಎಂದರು.

    ಬಳಿಕ ಬಿಜೆಪಿ ಶಾಸಕರು ಮೈತ್ರಿ ನಾಯಕರ ಜೊತೆ ಸೇರುವ ಕುರಿತಾಗಿ ಪ್ರತಿಕ್ರಿಯಿಸಿ, ಮೈತ್ರಿ ನಾಯಕರಿಗೆ ಅವರ ಶಾಸಕರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ನಮ್ಮ ಶಾಸಕರ ಮೇಲೆ ಹೇಗೆ ಕೈಹಾಕುತ್ತಾರೆ. ಮೈತ್ರಿ ಸರ್ಕಾರ 7 ತಿಂಗಳುಗಳಲ್ಲಿ ಮಾಡಿರುವ ಒಳ್ಳೆ ಕೆಲಸಗಳನ್ನು ಪಟ್ಟಿ ಮಾಡಿಸಿ. ಜಗಳ ಮಾಡುವುದನ್ನು ಬಿಟ್ಟರೆ ಏನೂ ಕೆಲಸ ಮಾಡಿಲ್ಲ ಅಂತ ಸಿ.ಟಿ ರವಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಆರ್ಥಿಕತೆ ಉತ್ತಮಗೊಂಡಿದ್ದರಿಂದ ಕಾಂಗ್ರೆಸ್ಸಿಗೆ ಹತಾಶೆ: ಸಿಟಿ ರವಿ

    ದೇಶದ ಆರ್ಥಿಕತೆ ಉತ್ತಮಗೊಂಡಿದ್ದರಿಂದ ಕಾಂಗ್ರೆಸ್ಸಿಗೆ ಹತಾಶೆ: ಸಿಟಿ ರವಿ

    ಮಂಗಳೂರು: ದೇಶದ ಆರ್ಥಿಕತೆ ಉತ್ತಮಗೊಂಡಿದ್ದರಿಂದ ಕಾಂಗ್ರೆಸ್ ಹತಾಶೆ ವ್ಯಕ್ತಪಡಿಸುತ್ತಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕತೆ ಉತ್ತಮಗೊಂಡಿದೆ. ಬಿಜೆಪಿಯ ಈ ಸಾಧನೆಯನ್ನು ಸಹಿಸಲು ಆಗದೇ ಕಾಂಗ್ರೆಸ್ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದರು.

    ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬೇನಾಮಿ ಉದ್ಯಮಿಗಳಿಗೆ ಸಾಲ ಕೊಟ್ಟಿತ್ತು. ವಿಜಯ್ ಮಲ್ಯ, ನೀರವ್ ಮೋದಿ ಬೇಕಾಬಿಟ್ಟಿ ಸಾಲ ಪಡೆದು ದೇಶ ಬಿಟ್ಟಿದ್ದಾರೆ. 800 ಕೋಟಿ ಆಸ್ತಿ ಮೌಲ್ಯವಿರುವ ವಿಜಯ್ ಮಲ್ಯಗೆ ಆರು ಸಾವಿರ ಕೋಟಿ ಸಾಲ ನೀಡಿತ್ತು. ನೀರವ್ ಮೋದಿಗೆ 12 ಸಾವಿರ ಕೋಟಿ ರೂ. ನೀಡಿದ್ದಲ್ಲಿ ಆಗಿನ ಹಣಕಾಸು ಮಂತ್ರಿಗಳ ಪಾತ್ರ ಏನು ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ರವಿ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜನಾರ್ದನ ರೆಡ್ಡಿ ಮೇಲೆ ಬಿಜೆಪಿ ಅವಲಂಬನೆಯಾಗಿಲ್ಲ: ಸಿ.ಟಿ.ರವಿ

    ಜನಾರ್ದನ ರೆಡ್ಡಿ ಮೇಲೆ ಬಿಜೆಪಿ ಅವಲಂಬನೆಯಾಗಿಲ್ಲ: ಸಿ.ಟಿ.ರವಿ

    ಚಿಕ್ಕಮಗಳೂರು: ಬಿಜೆಪಿಯು ಗಾಲಿ ಜನಾರ್ದನ ರೆಡ್ಡಿ ಮೇಲೆ ಅವಲಂಬಿತವಾಗಿ ರಾಜ್ಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಅವರ ಬಂಧನದಿಂದ ನಮಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾವು ಬಿಜೆಪಿಯನ್ನು ಮಣಿಸಲು ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ ಈ ಪ್ರಕರಣ ಜನಾರ್ದನ ರೆಡ್ಡಿಗೆ ಬಿಟ್ಟಿದ್ದು, ಅವರೇ ಎದುರಿಸುತ್ತಾರೆ. ಈ ಹಿಂದೆಯೇ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದಕ್ಕೆ ಪಕ್ಷದಿಂದ ಯಾವುದೇ ಜವಾಬ್ದಾರಿ ಕೊಡದೆ ದೂರವಿಡಲಾಗಿತ್ತು ಎಂದು ತಿಳಿಸಿದರು. ಇದನ್ನು ಓದಿ: ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

    ಜನಾರ್ದನ ರೆಡ್ಡಿ ಬಿಜೆಪಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 2013ರ ಲೋಕಸಭಾ ಚುನಾವಣೆ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಗುರುತಿಸಿಕೊಂಡಿಲ್ಲ. ಈಗ ಮೈತ್ರಿ ಸರ್ಕಾರ ಜನಾರ್ದನ ರೆಡ್ಡಿಯನ್ನು ಹೆದರಿಸಿದರೆ ಬಿಜೆಪಿ ಪರಿಣಾಮ ಬೀರುತ್ತದೆ ಅಂತಾ ತಿಳಿಸಿದೆ. ಆದರೆ ನಮಗೆ ಈ ಪ್ರಕರಣದಿಂದ ಯಾವುದೇ ಸಮಸ್ಯೆಯಾಗಲ್ಲ ಎಂದು ಹೇಳಿದರು.

    ಈ ಪ್ರಕರಣಕ್ಕೆ ನಮ್ಮ ಪಕ್ಷ ಯಾವುದೇ ಸಂಬಂಧವಿಲ್ಲ. ಎಲ್ಲವನ್ನೂ ಅವರೇ ಎದುರಿಸುತ್ತಾರೆ ಎಂದು ರವಿ ತಿಳಿಸಿದರು. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2019ರಲ್ಲಿ ಮಂಡ್ಯದಲ್ಲಿ ಬಿಜೆಪಿ ಬರುತ್ತೆ: ಅಂಕಿ ಸಂಖ್ಯೆಯ ಮಾಹಿತಿ ಕೊಟ್ಟ ಸಿಟಿ ರವಿ

    2019ರಲ್ಲಿ ಮಂಡ್ಯದಲ್ಲಿ ಬಿಜೆಪಿ ಬರುತ್ತೆ: ಅಂಕಿ ಸಂಖ್ಯೆಯ ಮಾಹಿತಿ ಕೊಟ್ಟ ಸಿಟಿ ರವಿ

    ಬೆಂಗಳೂರು: ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಸೋಲಾಗಿರಬಹುದು. ಆದರೆ 2019ರಲ್ಲಿ ಮಂಡ್ಯದಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಸಿ.ಟಿ ರವಿ ತಮ್ಮ ಟ್ವಿಟ್ಟರಿನಲ್ಲಿ, “2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಡ್ಯದಲ್ಲಿ 86,993 ಮತಗಳನ್ನು ಪಡೆದಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 2,44,377 ಮತಗಳನ್ನು ಪಡೆದಿದ್ದಾರೆ. 1,57,384 ಮತಗಳು ಹೆಚ್ಚಾಗಿದ್ದು, ಮಂಡ್ಯದ ಜನರು ನಮ್ಮ ಮೇಲೆ ಇನ್ನೂ ನಂಬಿಕೆ ಇಟ್ಟಿದ್ದಾರೆ. 2019ಕ್ಕೆ ನಾವು ಇದನ್ನು ಉಪಯೋಗಿಸಿಕೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಈ ಮೊದಲು ಸಿ.ಟಿ ರವಿ ತಮ್ಮ ಟ್ವಟ್ಟರಿನಲ್ಲಿ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ. ಮುಂದೆ ದೊಡ್ಡ ಗುರಿ ಇದೆ ಎಂದು ಬರೆದು ಕಾರ್ಯಕರ್ತರನ್ನು ತಮ್ಮ ಟ್ವೀಟ್ ಮೂಲಕ ಹುರಿದುಂಬಿಸಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಡ್ಡಿ ಸಮೇತ ಚುಕ್ತಾ ಮಾಡ್ತೀವಿ: ಸಿ.ಟಿ.ರವಿ

    ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಡ್ಡಿ ಸಮೇತ ಚುಕ್ತಾ ಮಾಡ್ತೀವಿ: ಸಿ.ಟಿ.ರವಿ

    ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಾತ್ಕಾಲಿಕ ಯಶಸ್ಸು ಕಂಡಿದ್ದರೂ ನಾವು ಬೇರೆ ಬೇರೆ ರಾಜ್ಯಗಳಲ್ಲಿ ಬಡ್ಡಿ ಸಮೇತ ಚುಕ್ತಾ ಮಾಡುವ ಮೂಲಕ ಉತ್ತರ ನೀಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

    ಬಿಬಿಎಂಪಿ ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ಅಲ್ಲಿಯೂ ಮೈತ್ರಿ ಮಾಡಿಕೊಂಡು ನಮ್ಮನ್ನು ಅಧಿಕಾರದಿಂದ ದೂರವಿಟ್ಟಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಬಡ್ಡಿ ಸಮೇತ ಚುಕ್ತಾ ಮಾಡುತ್ತೇವೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಹಾಗೂ ಜೆಪಿಎಸ್ ಮೈತ್ರಿ ಪ್ರಜಾಪ್ರಭುತ್ವದ ಅಪಹಾಸ್ಯ. ಚುನಾವಣೆಯಲ್ಲಿ ಪರಸ್ಪರ ವಾಗ್ದಾಳಿ ನಡೆಸಿ, ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಈ ಸಮ್ಮಿಶ್ರ ಸರ್ಕಾರ ಜನಮತಕ್ಕೆ ವಿರೋಧವಾಗಿದ್ದು, ಪ್ರಜಾಪ್ರಭುತ್ವದ ಸುಧಾರಣೆಗೆ ಇದು ಮಾರಕವಾಗಿದೆ. ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಸುಧಾರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಸರ್ಕಾರ ಅದಾಗೇ ಬೀಳೋವರೆಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ

    ಚಿಕ್ಕಮಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅದಾಗೇ ಬೀಳುವವರೆಗೂ, ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಹೊಟ್ಟೆ ತುಂಬುವವರೆಗೂ ಅಥವಾ ಹಿಟ್ಟು ಖಾಲಿಯಾಗೋವರೆಗೂ ಈ ಸರ್ಕಾರ ಇರಬಹುದು. ಈ ಸರ್ಕಾರ ಅದಾಗೇ ಅದು ಬೀಳೂವವರೆಗೂ, ನಾವು ಬೀಳಿಸುವ ಕೆಲಕ್ಕೆ ಕೈ ಹಾಕಲ್ಲ ಎಂದರು.

    ಜನರ ಬಯಕೆಯಲ್ಲೂ ಈ ಸರ್ಕಾರ ಇರಬೇಕೆಂದು ಇಲ್ಲ. ಅಷ್ಟೇ ಅಲ್ಲದೆ ಇರಬೇಕೆಂಬ ರೀತಿಯಲ್ಲಿ ಕೆಲಸ, ಕಾರ್ಯಗಳನ್ನ ಈ ಸರ್ಕಾರ ಮಾಡುತ್ತಿಲ್ಲ. ನಾನು ಮೊದಲೇ ಹೇಳಿದಂತೆ ಹಿಟ್ಟು ಹಳಸಿತ್ತು ನಾಯಿ ಕಾದಿತ್ತು ಎಂಬಂತಾಗಿದೆ ಈ ಸರ್ಕಾರದ ಪಾಡು ಎಂದು ವ್ಯಂಗ್ಯವಾಡಿದರು.

    ಈ ವೇಳೆ ವಿವೇಕಾನಂದರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಭಗವಾನರ ಹೇಳಿಕೆಗೂ ತಿರುಗೇಟು ನೀಡಿದ ಅವರು, ಕೆಲವರು ಪ್ರಚಾರದಲ್ಲಿ ಇರಲು ಹಾಗೂ ನಮಗೆ ಈ ರೀತಿಯೂ ಬುದ್ಧಿ ಭ್ರಮಣೆಯಾಗಿದೆ ಎಂದು ತೋರಿಸೋದಕ್ಕೆ ಕೆಲ ಹೇಳಿಕೆಯನ್ನ ಕೊಡುತ್ತಿರುತ್ತಾರೆ. ಭಗವಾನ್ ಹೇಳಿಕೆ ಹೊಸದೇನಲ್ಲ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews