Tag: c t ravi

  • ಮಠಾಧೀಶರ ಲಾಬಿಯಿಂದ ಯಡಿಯೂರಪ್ಪ ಬೆಳೆದಿಲ್ಲ: ಬಿ.ವೈ ರಾಘವೇಂದ್ರ

    ಮಠಾಧೀಶರ ಲಾಬಿಯಿಂದ ಯಡಿಯೂರಪ್ಪ ಬೆಳೆದಿಲ್ಲ: ಬಿ.ವೈ ರಾಘವೇಂದ್ರ

    – ಬಿಜೆಪಿ ಯಡಿಯೂರಪ್ಪ ಕಟ್ಟಿದ ಕಲ್ಪವೃಕ್ಷ

    ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಸಂಸದ ಬಿ.ವೈ ರಾಘವೆಂದ್ರರವರು ಕೂಡ ಸುಳಿವು ನೀಡಿದ್ದಾರೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಎಸ್‍ವೈ ಪುತ್ರ, ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಂಡಿದೆ. ಹೈಕಮಾಂಡ್ ಹೇಗೆ ಹೇಳುತ್ತಾರೋ ಅದನ್ನು ಕೇಳುತ್ತೀನಿ. ಯಾವತ್ತು ಹೈಕಮಾಂಡ್ ಹೇಳುತ್ತೊ ಆಗ ರಾಜೀನಾಮೆ ನೀಡಲು ತಯಾರಿದ್ದೇನೆ ಎಂದು ಯಡಿಯೂರಪ್ಪನವರು ಈ ಹಿಂದೆ ಮಾಧ್ಯಮಗಳಿಗೆ ನೇರವಾಗಿ ಹೇಳಿದ್ದರು. ಸದ್ಯ ಇಂತಹ ಸಂದರ್ಭದಲ್ಲಿ ಅವರಿಗೆ ನೈತಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಠಾಧೀಶರು ಜಾತ್ಯತೀತವಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಠಾಧೀಶರನ್ನು ಉಪಯೋಗಿಸಿಕೊಂಡು ಯಡಿಯೂರಪ್ಪನವರು ಲಾಬಿ ಮಾಡುತ್ತಿದ್ದಾರೆ ಎಂದು ಕೆಲವು ವ್ಯಕ್ತಿಗಳು ಹೇಳಿಕೆ ನೀಡುತ್ತಿದ್ದಾರೆ. ಆ ತಂತ್ರ ರಾಜಕಾರಣ ಯಡಿಯೂರಪ್ಪನವರು ತಮ್ಮ ಜೀವನದಲ್ಲಿ ಇಂದಿಗೂ, ಹಿಂದೆಯೂ, ಮುಂದೆಯೂ ಮಾಡುವುದಿಲ್ಲ. 40 ವರ್ಷಗಳ ಕಾಲ ರಾಜಕೀಯದಲ್ಲಿ ತಮ್ಮ ತಂದೆಯವರೊಟ್ಟಿಗೆ ಮಠಾಧೀಶರು ಇದ್ದರು. ಅವರ ಆಶೀರ್ವಾದದಿಂದ ನಾವು ಇಷ್ಟು ಬೆಳೆದಿದ್ದೇವೆ. ಹೀಗಾಗಿ ಹಗುರವಾಗಿ ಸ್ವಾಮೀಜಿಗಳ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದು ಸಿ.ಟಿರವಿಗೆ ಟಾಂಗ್ ಕೊಟ್ಟರು.

    ಯಡಿಯೂರಪ್ಪನವರಿಗೆ ಬಿಜೆಪಿ ಪಕ್ಷ ಎಲ್ಲ ನೀಡಿದೆ. ಅವರಿಗೆ ತೃಪ್ತಿ ಕೂಡ ಇದೆ. ಇಲ್ಲಿಯವರೆಗೂ ಪಕ್ಷದಲ್ಲಿ ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಮುಂದೆ ಕೂಡ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಒಬ್ಬ ಮನುಷ್ಯನಿಗೆ ಸ್ವಾಭಿಮಾನ ಬಹಳ ಮುಖ್ಯ. ಈ ಹಿಂದೆ ಸ್ವಾಭಿಮಾನ ಪ್ರಶ್ನೆ ಬಂದಾಗ ಹೇಗೆ ನಡೆದುಕೊಂಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ನಮ್ಮ ತಂದೆ ಇಂದು ನೇರವಾಗಿಯೇ ಹೇಳಿದ್ದಾರೆ. 75 ವರ್ಷ ಮೇಲ್ಪಟ್ಟವರಿಗೆ ಸಂಘಟನೆ ರಾಷ್ಟ್ರಮಟ್ಟದಲ್ಲಿ ತುಂಬಾ ಜನ ಹಿಂದೆ ಸರಿದಿದ್ದಾರೆ. ಸಂಘಟನೆಗಳು ಯಾವತ್ತಿಗೂ ನಿಂತ ನೀರಲ್ಲ. ಬಿಜೆಪಿ ಎಂಬ ಕಲ್ಪವೃಕ್ಷವನ್ನು ನೆಟ್ಟಿದ್ದೇನೆ ಅದರ ಫಲವನ್ನು ಮುಂದೆ ಎಲ್ಲರೂ ಉಪಯೋಗಿಸಿಕೊಳ್ಳಿ ಎಂದು ಹೇಳಿದ್ದರು ಅಂತ ರಾಘವೇಂದ್ರ ತಿಳಿಸಿದ್ದಾರೆ.

    ಇಂದು ಸಿಎಂ ಬಿ.ಎಸ್ ಯಡಿಯೂರಪ್ಪನವರು ಜುಲೈ 25ರ ಬಳಿಕ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ರಾಜೀನಾಮೆ ವಿಚಾರ ಕುರಿತಂತೆ ಸುಳಿವು ನೀಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಕ್ರಾಂತಿಗೆ ಬಿಜೆಪಿ ಹೈಕಮಾಂಡ್ ಸಿದ್ಧತೆ..?

  • ಉಗ್ರರಿಗೆ ಬಿರಿಯಾನಿ ಕೊಡುವ ರಾಜಕಾರಣ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

    ಉಗ್ರರಿಗೆ ಬಿರಿಯಾನಿ ಕೊಡುವ ರಾಜಕಾರಣ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

    ಚಿಕ್ಕಮಗಳೂರು: ಉಗ್ರರಿಗೆ ಬಿರಿಯಾನಿ ನೀಡುವ ರಾಜಕಾರಣ ವ್ಯವಸ್ಥೆ ಈಗ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಇದ್ದಾರೆ. ಅವರು ಸಮರ್ಥರಿದ್ದಾರೆ. ಅವರು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಪಕ್ಷಕ್ಕೆ ಅವರೇ ಸೂಕ್ತ ಸಲಹೆ ನೀಡುತ್ತಾರೆ. ನಾನು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಎಲ್ಲದೂ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

    ಇದೇ ವೇಳೆ ಮಂಗಳೂರಿನಲ್ಲಿ ಗೋಡೆಮೇಲಿನ ದೇಶದ್ರೋಹದ ಬರವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಉಗ್ರವಾದಿಗಳಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ. ಕಾಶ್ಮೀರದಲ್ಲೇ ತಲೆ-ಬಾಲ ಕತ್ತರಿಸಿದ್ದೇವೆ. ಇಲ್ಲಿ ಬಾಲ ಬಿಚ್ಚಿದ್ರೆ ಬಾ; ಮಾತ್ರವಲ್ಲ, ಉಳಿದಿದ್ದನ್ನೂ ಕಟ್ ಮಾಡ್ತೇವೆ ಎಂದರು. ಉಗ್ರವಾದಿಗಳು ಹೋಗಬೇಕಿರೋದು ಮಸಣಕ್ಕೆ ಮಾತ್ರ. ಉಗ್ರರನ್ನ ಮಸಣಕ್ಕೆ ಕಳಿಸುವ ಕೆಲಸವನ್ನ ಪೊಲೀಸರು ಹಾಗೂ ಸೈನಿಕರು ಸಮರ್ಥವಾಗಿ ಮಾಡಿದ್ದಾರೆ. ಉಗ್ರವಾದಿಗಳಿಗೆ ಬಿರಿಯಾನಿ ಕೊಡೋ ಕಾಲ ಹೋಯ್ತು. ಅವರಿಗೆ ಬಿರಿಯಾನಿ ನೀಡುವ ರಾಜಕಾರಣದ ವ್ಯವಸ್ಥೆ ಈಗಿಲ್ಲ. ಅವರಿಗೆ ಮಣಿ ಹಾಕಿ, ಅವರು ಹೇಳಿದಂತೆ ಕೇಳುವ ರಾಜಕೀಯ ವ್ಯವಸ್ಥೆಯೂ ಈಗಿಲ್ಲ. ಈಗ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡೋ ಕಾಲ ಎಂದು ಎಚ್ಚರಿಸಿದ್ರು.

    ದೇಶದ್ರೋಹಿ ಚಟುವಟಿಕೆಯನ್ನ ನಾವು ಒಪ್ಪಲ್ಲ. ಅದನ್ನ ಸಹಿಸುವ ಹಾಗೂ ಒಪ್ಪುವ ವ್ಯವಸ್ಥೆಯೂ ಈಗಿಲ್ಲ. ಸಿಎಂ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಯವರ ಹೇಳಿಕೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ, ತಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿರೋರನ್ನ ಅವರ ರಕ್ಷಣೆಯ ಪರ ಮಾತನಾಡ್ತೀರಾ ಎಂದರು. ಸಂತ್ರಸ್ತ ಶಾಸಕ ದೂರು ನೀಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪ್ರಾಥಮಿಕ ತನಿಖೆ ಹಂತದಲ್ಲಿದೆ. ತನಿಖೆಯ ನಂತರವಷ್ಟೆ ಗೊತ್ತಾಗಬೇಕು ಎಂದರು. ತನಿಖೆಗೂ ಮುಂಚೆಯೇ ಆರೋಪ ಮಾಡಲು ಮುಂದಾಗುತ್ತೀರಾ. ಈಗ ದೂರು ಬಂದಿದೆಯಲ್ಲಾ ಅಲ್ಲಿ ಯಾಕೆ ಅಸಹಾಯಕರಾಗಿದ್ದೀರಾ. ಯಾಕೆ ರಕ್ಷಣೆ ಮಾಡ್ತೀದ್ದೀರಾ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

  • ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ – ಸಿದ್ದರಾಮಯ್ಯಗೆ ಸಿಟಿ ರವಿ ಟ್ವೀಟೇಟು

    ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ – ಸಿದ್ದರಾಮಯ್ಯಗೆ ಸಿಟಿ ರವಿ ಟ್ವೀಟೇಟು

    – ನಿಮ್ಮ ಪಾರ್ಟಿ ಮನೆಯೊಂದು ನೂರು ಬಾಗಿಲಾಗಿದೆ

    ಬೆಂಗಳೂರು: ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

    ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಟ್ವಿಟ್ಟರ್ ವಾರ್ ನಡೆಯುತ್ತಿದೆ. ಇಂದು ನಳಿನ್ ಅವರನ್ನು ಸಿದ್ದರಾಮಯ್ಯ ಕಾಡುಮನುಷ್ಯನಿಗೆ ಹೊಲಿಕೆ ಮಾಡಿದಕ್ಕೆ ಬಿಜೆಪಿ ನಾಯಕರು ಸಿದ್ದರಾಮಯ್ಯನ ಮೇಲೆ ಮುಗಿಬಿದ್ದಿದ್ದಾರೆ. ಈಗ ಸಿಟಿ ರವಿಯವರೂ ಕೂಡ ಸರಣಿ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.

    ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ. ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೇ ಹಿಂದೊಂದು ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡದ್ದನ್ನು ಮರೆಯದಿರಿ ಎಂದು ಟ್ವೀಟ್ ಮಾಡಿದ್ದಾರೆ.

    ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ನೋವನ್ನು ತೋಡಿಕೊಳ್ಳುವ ದಾರಿಯಿಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೀಳಾಗಿ ಮಾತನಾಡಿದ್ದು ದುರದೃಷ್ಟಕರ ಮತ್ತು ಅತ್ಯಂತ ಕೀಳು ಮಟ್ಟದ ರಾಜಕೀಯ. ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಬಿಎಸ್‍ವೈಯವರೆ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಮೊದಲು ನಿಮ್ಮ ಮನೆಯ ಯಜಮಾನ ಯಾರು ಅನ್ನುವುದನ್ನು ನಿರ್ಧಾರ ಮಾಡಿ. ಮನೆಯೊಂದು ನೂರು ಬಾಗಿಲು ಎಂಬಂತೆ ಇರುವ ನಿಮ್ಮ ಪಕ್ಷವನ್ನು, ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಕಾಲೆಳೆದಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯನವರೇ ನಿಮ್ಮ ಖಾತೆ ಹ್ಯಾಕ್ ಆಗಿದ್ಯಾ- ಕಟೀಲ್ ಪ್ರಶ್ನೆ

    ನಮ್ಮ ಪಕ್ಷ ವಿಧಾನ ಪರಿಷತ್ತಿನ 4 ಸ್ಥಾನಗಳನ್ನು ಹಾಗೂ ವಿಧಾನಸಭೆಯ 2 ಕ್ಷೇತ್ರಗಳಲ್ಲಿ ಜಯಶಾಲಿಯಾಗುತ್ತದೆ. ಹಾಗಾಗಿ ಸೋಲನ್ನು “ಯಾರ ತಲೆಗೆ ಕಟ್ಟುವುದು” ಎಂಬ ವಿಚಾರ ನಿಮ್ಮ ಪಕ್ಷಕ್ಕೆ ಅನ್ವಯವಾಗುವಂತದ್ದು. ನೀವು ಬಿಜೆಪಿಯ ಚಿಂತೆ ಬಿಟ್ಟುಬಿಡಿ. ಕಳೆದ ಚುನಾವಣೆಯ ಸಮಯದಲ್ಲಿ “ಇದೇ ನನ್ನ ಕೊನೆಯ ಚುನಾವಣೆ” ಎಂದಿದ್ದಿರಿ. ಇತ್ತೀಚೆಗೆ “ಮತ್ತೊಮ್ಮೆ ಮುಖ್ಯಮಂತ್ರಿಯಾದರೆ” ಎಂಬ ಹೊಸ ಆಸೆಯನ್ನು ವ್ಯಕ್ತಪಡಿಸಿದ್ದೀರಿ. ಇದು ಯಾರನ್ನು “ಕೆಡವುವ ಟಾಸ್ಕ್” ಎಂದು ನಾವು ಕೇಳಬಹುದಲ್ಲವೇ ಮಾಜಿ ಮುಖ್ಯಮಂತ್ರಿಯವರೆ ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

    ಕಸ ಗುಡಿಸುವವರ, ಬಂಡೆ ಒಡೆಯುವ ಶ್ರಮಿಕ ವರ್ಗದ ಬಗೆಗಿನ ನಿಮ್ಮ ಹೇಳಿಕೆಗಳು ಅವರ ವೃತ್ತಿ ಧರ್ಮಕ್ಕೆ ಅವಮಾನ ಮಾಡುವಂತದ್ದು. ಪೂಜ್ಯ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂಬುದನ್ನು ಶ್ರುತಪಡಿಸುತ್ತದೆ. ಶ್ರಮಿಕ ವರ್ಗ ಗೌರವಯುತವಾಗಿ ಬದುಕುವ ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಿ ಮಾಜಿ ಮುಖ್ಯಮಂತ್ರಿಯವರೆ. ಇನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ನೀವು ಆಡಿರುವ ಮಾತುಗಳು ಯಾವುದೇ ಪ್ರತಿಕ್ರಿಯೆಗೆ ಯೋಗ್ಯವಾದದ್ದಲ್ಲ. ಇಂತಹ ಮಾತುಗಳ ಬಗ್ಗೆ ದಾಸಶ್ರೇಷ್ಠ ಶ್ರೀ ಪುರಂದರದಾಸರು ಶತಮಾನಗಳ ರಚಿಸಿದ್ದ ಕೀರ್ತನೆ ನಿಮಗೆ ಗೊತ್ತಿರಬೇಕಲ್ಲವೇ ಎಂದಿದ್ದಾರೆ.

  • ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ: ಸಿ.ಟಿ.ರವಿ

    ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ: ಸಿ.ಟಿ.ರವಿ

    ಬೆಂಗಳೂರು: ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯ ಚುರುಕುಗೊಳಿಸಿದೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಪ್ರೇರಿತ ದಾಳಿಯಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್ ನಿವಾಸದ ಬಳಿಯೂ ಕೈ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಸಿಬಿಐ ದಾಳಿ ವೇಳೆ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಿಕ್ಕ 50 ಲಕ್ಷ ರೂ. ಹಣವನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿ.ಟಿ.ರವಿ ಅವರು ಹೆಸರು ಹೇಳದೇ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಟ್ರಬಲ್ ಶೂಟರ್ ಇಂದು ಸಿಬಿಐಗೆ ಲಾಕ್ ಆಗಿದ್ದು ಹೇಗೆ?

    ಇಂಧನ ಇಲಾಖೆಯಲ್ಲಿರುವಾಗ ಡಿಕೆಶಿಯವರ ಒಟ್ಟು 60 ಕೋಟಿ ಅಕ್ರಮ ಹಣದ ವಹಿವಾಟಿನ ಬಗ್ಗೆ ಇಡಿ ಹಾಗೂ ಐಟಿ ಲೆಕ್ಕ ಹಾಕಿದೆ. ವಿದ್ಯುತ್ ಇಲಾಖೆಯಲ್ಲಿ ಏಜೆನ್ಸಿ ಮೂಲಕ ಭಾರೀ ಅಕ್ರಮ ಹಣ ವಹಿವಾಟಿನ ಆರೋಪ ಇದ್ದು, ಇದಕ್ಕೆ ಪೂರಕ ಸಾಕ್ಷಿಯನ್ನು ಇಡಿ ಹಾಗೂ ಐಟಿ ಇಲಾಖೆ ಕಲೆ ಹಾಕಿವೆ. ಅದರ ಆಧಾರದ ಮೇಲೆ ಇಂದು ಸಿಬಿಐ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡಿಕೆಶಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಹೈಡ್ರಾಮಾ

    ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ರಾಜಕೀಯ ಪ್ರೇರಿತ ದಾಳಿ ಆಗಿದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾರ್ಗೆಟ್ ಆಗುತ್ತಿದ್ದರು. ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಈ ಹಿಂದೆಯೂ ದಾಳಿಗಳು ನಡೆದಿದ್ದು, ಪ್ರಕರಣಗಳ ಮುಂದುವರಿದ ರೈಡ್ ಇದಾಗಿರಬಹುದು. ದಾಳಿ ಯಾಕಾಯ್ತು? ಹೇಗೆ ಆಯ್ತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿದ್ದರಾಮಯ್ಯನವರಿಗಿಂತ ಡಿ.ಕೆ.ಶಿವಕುಮಾರ್ ದೊಡ್ಡ ನಾಯಕ ಅಲ್ಲ. ಹಾಗಾಗಿ ಇದು ರಾಜಕೀಯ ದುರುದ್ದೇಶ ಹೊಂದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?

  • ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    -ನಾನು ರೈತ ಚಳುವಳಿಯಿಂದ ಬಂದವನು
    -ರೈತರ ತಾಕತ್ತೇನೆಂದು ನನಗೆ ಗೊತ್ತು

    ಚಿಕ್ಕಮಗಳೂರು: ಕಾಂಗ್ರೆಸ್, ಜೆಡಿಎಸ್ ಹೋರಾಟ ರೈತರ ಪರವೆಂದು ಅನ್ನಿಸೋದಿಲ್ಲ. ಅವರದ್ದು ದಲ್ಲಾಳಿಗಳ ಪರ ಹೋರಾಟ. ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಇಲ್ಲಿ ಕಮ್ಯುನಿಸ್ಟ್ರು ಕೂಗಾಡ್ತಾರೆ. ಅವರ ರಾಜ್ಯವಿರುವ ತ್ರಿಪುರದಲ್ಲಿ ಎಪಿಎಂಸಿಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಜನರು ತಿರಸ್ಕರಿಸಿದ್ದಾಹರೆ. ರೈತರು ನಮ್ಮ ಜತೆಯೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ್ದ ಬೇಡಿಯನ್ನ ಕಳಚುವ ಕೆಲಸ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ರೈತ ದೇಶದಲ್ಲಿ ಎಲ್ಲಿ ಬೇಕಾದ್ರು ತಾವು ಬೆಳೆದ ಬೆಳೆಯನ್ನ ಮಾರಬಹುದು ಎಂಬ ಅನುಮತಿ ಕೊಟ್ಟಿದೆ. ಮೊದಲು ಎಪಿಎಂಸಿಯಲ್ಲೇ ಮಾರಬೇಕು ಎಂದು ಮಾಡಿದ್ದರು. ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದು. ಎಲ್ಲಿ ಬೆಲೆ ಜಾಸ್ತಿ ಇರುತ್ತೋ ಅಲ್ಲಿಗೆ ಹೋಗಿ ಮಾರುತ್ತಾರೆ. ಅದರಿಂದ ರೈತರ ಶೋಷಣೆ ತಪ್ಪಿದೆ. ಸ್ಫರ್ದೆ ಬರುತ್ತೆ ಜೊತೆಗೆ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಬರುತ್ತೆ ಎಂದರು. ಊರಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಅವನು ಹೇಳಿದ್ದೇ ದರ. ಆದರೆ 10 ಜನ ಬಂದರೆ ಸ್ಪರ್ಧೆ ಬರುತ್ತೆ. ಲಾಭ ಬರುತ್ತೆ. ರೈತ ವಿಚಾರಿಸುತ್ತಾನೆ. ಯಾರಿಗೆ ಮಾರಿದರೆ ಲಾಭ ಬರುತ್ತೋ, ಯಾರು ಜಾಸ್ತಿ ರೇಟ್ ಕೊಡ್ತಾರೋ ಅವನಿಗೆ ಮಾರುತ್ತಾರೆ ಎಂದಿದ್ದಾರೆ.

    ಎಲ್ಲದಕ್ಕೂ ವಿರೋಧ ಮಾಡಬೇಕು. ಬಿಜೆಪಿ-ಮೋದಿ ವಿರೋಧಿಸಬೇಕು. ಅದಕ್ಕೆ ಮುಖವಾಡ ತೊಟ್ಟಿಕೊಂಡು ಈ ಕೆಲಸ ಮಾಡುತ್ತಾರೆ ಅಷ್ಟೆ. ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದಿದ್ದಾರೆ. ಈಗಿರೋ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದು ಇದೆ. ಬೆಳೆದಿರೋನು ರೈತ, ಬೆವರು ಸುರಿಸಿರೋನು ರೈತ. ಅವನಿಗೆ ಇಷ್ಟ ಬಂದೆಡೆ ಮಾರಾಟ ಮಾಡುತ್ತಾನೆ. ತಿದ್ದುಪಡಿ ಮಾಡಿರೋ ಕಾಯ್ದೆ ದೇಶದಲ್ಲಿ ಎಲ್ಲಿ ಬೇಕಾದ್ರು ಮಾರಬಹುದು. ಈ ಕಾಯ್ದೆ ರೈತನಿಗೆ ಸ್ವತಂತ್ರ ಕೊಟ್ಟಿರೋದು. ಅವನಿಗೆ ಸಹಾಯ ಮಾಡಿರೋ ಕಾಯ್ದೆ ಇದು ಎಂದಿದ್ದಾರೆ. ಮುಂಚೆ ಮೋಸ ಮಾಡಿರೋ ಕಾಯ್ದೆ ಇತ್ತು. ದಲ್ಲಾಳಿಗಳು ಬಲಿತಿದ್ರು. ಈಗ ರೈತ ಬಲಿಯುತ್ತಾನೆ. ತಾತ್ಕಾಲಿಕವಾಗಿ ಸುಳ್ಳು ಹೇಳಿಕೊಂಡು ತಿರುಗಬಹುದು. ಮುಂದೆ ಹೋಗ್ತಾ-ಹೋಗ್ತಾ ಸತ್ಯ ಏನು ಅಂತ ಗೊತ್ತಾಗುತ್ತಲ್ಲ ಎಂದರು. ನಾವು ಜನಜಾಗೃತಿ ಮಾಡ್ತೀವಿ. 90 ಪರ್ಸೆಂಟ್ ರೈತರು ನಮ್ಮ ಜೊತೆ ಇದ್ದಾರೆ. ಅದಕ್ಕೆ ಯಾರೂ ರೈತರು ಬೀದಿಗೆ ಇಳಿದಿಲ್ಲ.

    ನಾನು ರೈತ ಚಳುವಳಿಯಿಂದ ಬಂದವನು : ನಾನು ರೈತ ಚಳುವಳಿಯಿಂದ 1983, 84, 85ರವರೆಗೂ ರೈತ ಚಳುವಳಿಯಲ್ಲಿದ್ದು, ಅಲ್ಲಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದೋನು. ರೈತರ ತಾಕತ್ತೇನು ಅಂತ ನನಗೆ ಗೊತ್ತು. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರನೂ ಉಳಿಯಲ್ಲ. ಇವರ ಜೊತೆ ಯಾರು ಬೀದಿಗೆ ಇಳಿದವರು. ದಿನಾ ಬಿಜೆಪಿ ವಿರೋಧಿಸುವ ಒಂದು ಸೆಟ್ ಜನ ಮಾತ್ರ ಇಂದು ಬೀದಿಗೆ ಇಳಿದವರು. ಅವರು ದಿನಾ ಬೈಯೋರು. ಚೀನಾ-ಭಾರತ ಯುದ್ಧವಾದರೆ ಭಾರತವನ್ನ ಬೈಯೋರು. ಭಾರತ-ಪಾಕಿಸ್ತಾನ ಜಗಳ ಮಾಡಿದರೆ ಭಾರತವನ್ನೇ ಬೈಯೋರು. ಈ ಜನ ಮಾತ್ರ ಇಂದು ಬೀದಿಗೆ ಇಳಿದವರು. ರೈತರು ನಮ್ಮ ಜೊತೆಯೇ ಇದ್ದಾರೆ ಎಂದಿದ್ದಾರೆ.

  • ಡ್ರಗ್ ಮಾಫಿಯಾದಲ್ಲಿ ಮೇನ್ ಆ್ಯಕ್ಟರ್ ಗಳು ಸಿಗ್ತಾರಾ ನೋಡ್ಬೇಕು: ಸಿ.ಟಿ.ರವಿ

    ಡ್ರಗ್ ಮಾಫಿಯಾದಲ್ಲಿ ಮೇನ್ ಆ್ಯಕ್ಟರ್ ಗಳು ಸಿಗ್ತಾರಾ ನೋಡ್ಬೇಕು: ಸಿ.ಟಿ.ರವಿ

    ಚಿಕ್ಕಮಗಳೂರು: ಡ್ರಗ್ ಮಾಫಿಯಾದಲ್ಲಿ ಇಲ್ಲಿಯವರೆಗೆ ಸಹ ಕಲಾವಿದರು ಸಿಗುತ್ತಿದ್ದರು. ಈಗ ಮೇನ್ ಆ್ಯಕ್ಟರ್ ಗಳು ಸಿಗತ್ತಾರಾ ನೋಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ಚಿಕ್ಕಮಗಳೂರಿನ ನಗರಸಭೆಯಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಎಂಬುವುದು ವ್ಯವಸ್ಥಿತವಾದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಜಾಲ. ಡ್ರಗ್ಸ್ ಪ್ರಕರಣದ ತನಿಖೆಯನ್ನ ಗಂಭೀರವಾಗಿ ನಡೆಸಲಾಗುತ್ತಿದೆ. ಈ ಡ್ರಗ್ಸ್ ರಾಕೆಟ್‍ನಲ್ಲಿ ಯಾರಿದ್ದಾರೆ? ವ್ಯಾಪಾರ ಯಾರದ್ದು? ಎಂಬುದು ತನಿಖೆಯ ಬಳಿಕ ತಿಳಿಯಲಿದೆ ಎಂದರು.

    ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಡ್ರಗ್ ಮಾಫಿಯಾ ಬಗ್ಗೆ ತಮಗೆ ಗೊತ್ತಿರುವ ಮಾಹಿತಿ ನೀಡಲಿ. ಅವರಿಗೆ ರಕ್ಷಣೆ ಇದ್ದೆ ಇದೆ. ಅವರಿಗೆ ರಕ್ಷಣೆಯನ್ನ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡ್ತಾರೆ ಎಂದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ ಸಹಕಾರ ನಮಗೆ ಅಗತ್ಯವಿದೆ. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಅವರಿಗೆ ಪೊಲೀಸ್ ಇಲಾಖೆ ರಕ್ಷಣೆಯ ವ್ಯವಸ್ಥೆ ಮಾಡುತ್ತದೆ. ಹೀಗಾಗಿ ಅವರು ತನಿಖೆಗೆ ಸಹಕರಿಸಬೇಕು. ಈ ಜಾಲವನ್ನ ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಇಂದ್ರಜಿತ್ ಲಂಕೇಶ್ ಅವರ ಸಹಕಾರ ಬೇಕು ಎಂದು ತಿಳಿಸಿದರು.

  • ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಚಿಕ್ಕಮಗಳೂರು: ಕಾಂಗ್ರೆಸ್ ಒಳಗಿನ ಬಣ ರಾಜಕೀಯಕ್ಕೆ ಬಲಿಪಶು ಅಖಂಡ ಶ್ರೀನಿವಾಸ್ ಮೂರ್ತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ನವೀನ್ ಸಮರ್ಥನೆಗೂ ನಿಂತುಕೊಂಡಿಲ್ಲ. ನವೀನ್ ಪ್ರತಿಕ್ರಿಯೆ ನೀಡಿದ್ದಾನೆ. ನಾನು ರಾಮ-ಕೃಷ್ಣನ ಬಗ್ಗೆ ಹಾಕಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು ಎಂದು. ಅದರ ಬಗ್ಗೆಯೂ ತನಿಖೆಯಾಗಬೇಕು. ತಪ್ಪು ಮಾಡಿದ್ದರೆ ನವೀನ್‍ಗೂ ಶಿಕ್ಷೆಯಾಗಬೇಕು. ರಾಮ-ಕೃಷ್ಣನ ಮೇಲೆ ಪೋಸ್ಟ್ ಹಾಕಿದವರ ಮೇಲೂ ಶಿಕ್ಷೆಯಾಗಬೇಕು. ಆ ಮೂಲಕ ಕಾನೂನು ಕೈಗೆತ್ತಿಕೊಂಡಿರೋರ್ಗೂ ಶಿಕ್ಷೆ ಆಗಬೇಕು ಎಂದಿದ್ದಾರೆ.

    ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದು ಪ್ರಾಯೋಜಿತವಾಗಿರುವಂತಹ ದಾಳಿ ಎಂದರು. ಈಗ ಏಕೆ ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಬಾಯಿ ಮುಚ್ಚಿಕೊಂಡು ಇದ್ದಾರೆ. ಎಲ್ಲಿದೆ ಅಹಿಂದಾ ಪ್ರೇಮ. ರೋಷನ್ ಬೇಗ್ ಕೊಟ್ಟದ್ದು ಒಂದೇ ಸ್ಟೇಟ್ಮೆಂಟ್. ಒಂದೇ ಸ್ಟೇಟ್ಮೆಂಟ್‍ಗೆ ಅವರನ್ನ ಪಕ್ಷದಿಂದ ಅಮಾನತು ಮಾಡಿದರು. ಆರು ಬಾರಿ ಎಂ.ಎಲ್.ಎ. ಆಗಿದ್ದವರು. 30 ವರ್ಷ ಕಾಂಗ್ರೆಸ್ ಪಾರ್ಟಿಯ ಲೀಡ್ರು. ಒಂದೇ ಸ್ಟೇಟ್ಮೆಂಟ್‍ಗೆ ಉಚ್ಛಾಟನೆ. ತನ್ವೀರ್ ಸೇಠ್ ಮೇಲೆ ಮಾರಾಣಾಂತಿಕ ಹಲ್ಲೆ ಆಯ್ತು. ಏನಾಯ್ತು? ಏನಿಲ್ಲ. ಅಂದ್ರೆ ಏನ್ ಪ್ರೀತಿ. ಈಗ ಅಹಿಂದಾದಲ್ಲಿ ಯಾವ್ಯಾವುದನ್ನ ಕೈಬಿಟ್ಟಿದ್ದಾರೆಂದು ನೋಡಬಹುದಲ್ಲ ಎಂದರು.

    ಬುದ್ಧಿ ಜೀವಗಳು ಲದ್ದಿ ತಿನ್ನುತ್ತಿರಬಹುದು ಎಂದ ಸಿ.ಟಿ.ರವಿ, ನೆಪ ಏನೇ ಇರಬಹುದು. ಟಾರ್ಗೇಟ್ ಆಗಿರೋದು ಹಿಂದೂಗಳು. ವಾಹನ ಸುಟ್ಟಿದ್ದಾರೆ. ಮನೆಗಳ ಮೇಲೆ ದಾಳಿ ಆಗಿದೆ. ಸಿಕ್ಕವರ ಮೇಲೆಲ್ಲಾ ಆಗಿಲ್ಲ. ಪೊಲೀಸ್ ಹಾಗೂ ಹಿಂದೂಗಳ ಟಾರ್ಗೆಟ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದಿದ್ದಾರೆ.

  • ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಚಿಕ್ಕಮಗಳೂರು: ಕಾಂಗ್ರೆಸ್ ಒಳಗಿನ ಬಣ ರಾಜಕೀಯಕ್ಕೆ ಬಲಿಪಶು ಅಖಂಡ ಶ್ರೀನಿವಾಸ್ ಮೂರ್ತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ನವೀನ್ ಸಮರ್ಥನೆಗೂ ನಿಂತುಕೊಂಡಿಲ್ಲ. ನವೀನ್ ಪ್ರತಿಕ್ರಿಯೆ ನೀಡಿದ್ದಾನೆ. ನಾನು ರಾಮ-ಕೃಷ್ಣನ ಬಗ್ಗೆ ಹಾಕಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು ಎಂದು. ಅದರ ಬಗ್ಗೆಯೂ ತನಿಖೆಯಾಗಬೇಕು. ತಪ್ಪು ಮಾಡಿದ್ದರೆ ನವೀನ್‍ಗೂ ಶಿಕ್ಷೆಯಾಗಬೇಕು. ರಾಮ-ಕೃಷ್ಣನ ಮೇಲೆ ಪೋಸ್ಟ್ ಹಾಕಿದವರ ಮೇಲೂ ಶಿಕ್ಷೆಯಾಗಬೇಕು. ಆ ಮೂಲಕ ಕಾನೂನು ಕೈಗೆತ್ತಿಕೊಂಡಿರೋರ್ಗೂ ಶಿಕ್ಷೆ ಆಗಬೇಕು ಎಂದಿದ್ದಾರೆ.

    ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದು ಪ್ರಾಯೋಜಿತವಾಗಿರುವಂತಹ ದಾಳಿ ಎಂದರು. ಈಗ ಏಕೆ ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಬಾಯಿ ಮುಚ್ಚಿಕೊಂಡು ಇದ್ದಾರೆ. ಎಲ್ಲಿದೆ ಅಹಿಂದಾ ಪ್ರೇಮ. ರೋಷನ್ ಬೇಗ್ ಕೊಟ್ಟದ್ದು ಒಂದೇ ಸ್ಟೇಟ್ಮೆಂಟ್. ಒಂದೇ ಸ್ಟೇಟ್ಮೆಂಟ್‍ಗೆ ಅವರನ್ನ ಪಕ್ಷದಿಂದ ಅಮಾನತು ಮಾಡಿದರು. ಆರು ಬಾರಿ ಎಂ.ಎಲ್.ಎ. ಆಗಿದ್ದವರು. 30 ವರ್ಷ ಕಾಂಗ್ರೆಸ್ ಪಾರ್ಟಿಯ ಲೀಡ್ರು. ಒಂದೇ ಸ್ಟೇಟ್ಮೆಂಟ್‍ಗೆ ಉಚ್ಛಾಟನೆ. ತನ್ವೀರ್ ಸೇಠ್ ಮೇಲೆ ಮಾರಾಣಾಂತಿಕ ಹಲ್ಲೆ ಆಯ್ತು. ಏನಾಯ್ತು? ಏನಿಲ್ಲ. ಅಂದ್ರೆ ಏನ್ ಪ್ರೀತಿ. ಈಗ ಅಹಿಂದಾದಲ್ಲಿ ಯಾವ್ಯಾವುದನ್ನ ಕೈಬಿಟ್ಟಿದ್ದಾರೆಂದು ನೋಡಬಹುದಲ್ಲ ಎಂದರು.

    ಬುದ್ಧಿ ಜೀವಗಳು ಲದ್ದಿ ತಿನ್ನುತ್ತಿರಬಹುದು ಎಂದ ಸಿ.ಟಿ.ರವಿ, ನೆಪ ಏನೇ ಇರಬಹುದು. ಟಾರ್ಗೇಟ್ ಆಗಿರೋದು ಹಿಂದೂಗಳು. ವಾಹನ ಸುಟ್ಟಿದ್ದಾರೆ. ಮನೆಗಳ ಮೇಲೆ ದಾಳಿ ಆಗಿದೆ. ಸಿಕ್ಕವರ ಮೇಲೆಲ್ಲಾ ಆಗಿಲ್ಲ. ಪೊಲೀಸ್ ಹಾಗೂ ಹಿಂದೂಗಳ ಟಾರ್ಗೆಟ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದಿದ್ದಾರೆ.

  • ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ: ಸಚಿವ ಸಿ.ಟಿ.ರವಿ ಕಿಡಿ

    ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ: ಸಚಿವ ಸಿ.ಟಿ.ರವಿ ಕಿಡಿ

    ಬೆಂಗಳೂರು: ಕೆಜಿ ಹಳ್ಳಿ ಘಟನೆಗೆ ಪೊಲೀಸರೇ ಕಾರಣ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸಿ.ಟಿ.ರವಿ ಆಕ್ರೋಶ ಹೊರ ಹಾಕಿದ್ದಾರೆ.

    ಸಾಲು ಸಾಲು ಟ್ವೀಟ್ ಮಾಡಿರುವ ಸಚಿವರು, ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ ಡಿಕೆ ಹೇಳಿಕೆ ಬಾಂಧವರದ್ದೇನು ತಪ್ಪಿಲ್ಲ. ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ ಗಲಭೆ ಎಬ್ಬಿಸಿದವರು ಬೆಂಕಿ ಹಾಕಿದವರ ಬಗ್ಗೆ ಮರುಕ! ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಬಹುದು. ನವೀನ್ ಕಳೆದ ಬಾರಿ ಬಿಜೆಪಿಗೆ ವೋಟು ಹಾಕಿದ್ದಾನೆ, ಡಿಕೆಶಿ ಹೇಳಿಕೆ, ವೋಟು ಸೀಕ್ರೆಟ್, ಡಿಕೆಶಿಗೆ ತಿಳಿದಿದ್ದು ಹೇಗೆ? ಸುಳ್ಳೇ ಇವರ ಮನೆ ದೇವರು ಎಂದು ಕಿಡಿಕಾರಿದ್ದಾರೆ.

    ಡಿಕೆಶಿ ಹೇಳಿದ್ದೇನು?: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಾಟೆಗೆ ಪೊಲೀಸರು ನೇರ ಕಾರಣ. ವಿವಾದಾತ್ಮಕ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮಕೈಗೊಂಡಿದ್ದರೆ ಗಲಾಟೆ ನಡೆಯುತ್ತಿರಲಿಲ್ಲ ಎಂದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

  • ಸಚಿವ ಸಿ.ಟಿ.ರವಿಗೆ ಕೊರೊನಾ ಪಾಸಿಟಿವ್

    ಸಚಿವ ಸಿ.ಟಿ.ರವಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಸಚಿವ ಸಿ.ಟಿ.ರವಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

    ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪ್ರಾಣೇಶ್, ಅಜೇಯ್ ಸಿಂಗ್, ಪುಟ್ಟಣ್ಣಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಕೊರೊನಾ ತಗುಲಿದೆ. ಎಲ್ಲರೂ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಈ ಹಿಂದೆಯೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಸಿ.ಟಿ.ರವಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದರು. ನೆಗೆಟಿವ್ ವರದಿ ಬಂದ ಬಳಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕೊರೊನಾ ಆತಂಕದ ಹಿನ್ನೆಲೆ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.