Tag: c t ravi

  • ಸಿ.ಟಿ.ರವಿಯ ಹಿಂದುತ್ವಕ್ಕೆ ಮನುಷ್ಯ ಧರ್ಮದ ಪ್ರತಿಪಾದನೆ‌ ಮೂಲಕ‌ ಸಿದ್ದರಾಮಯ್ಯ ಟಕ್ಕರ್ – ಕಾರ್ಯಕ್ರಮದಲ್ಲಿ ಏಟು ಎದಿರೇಟು

    ಸಿ.ಟಿ.ರವಿಯ ಹಿಂದುತ್ವಕ್ಕೆ ಮನುಷ್ಯ ಧರ್ಮದ ಪ್ರತಿಪಾದನೆ‌ ಮೂಲಕ‌ ಸಿದ್ದರಾಮಯ್ಯ ಟಕ್ಕರ್ – ಕಾರ್ಯಕ್ರಮದಲ್ಲಿ ಏಟು ಎದಿರೇಟು

    ಬೆಂಗಳೂರು: ನೆಲಮಂಗಲದಲ್ಲಿ ಸೋಮವಾರ ದೇವಾಂಗ ಸಮುದಾಯದ ಶ್ರೀಗಳಾದ ದಯಾನಂದ ಪುರಿ ಮಹಾಸ್ವಾಮಿಗಳ 33 ನೇ ಪೀಠಾರೋಹಣದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಈ ಸಮಾರಂಭ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಧ್ಯೆ ಜಾತಿ, ಧರ್ಮಗಳ ಕುರಿತ ಮಾತಿನ ದಂಗಲ್‌ಗೆ ಸಾಕ್ಷಿಯಾಯ್ತು.

    ಸಮಾರಂಭದಲ್ಲಿ ಮೊದಲು ಮಾತಾಡಿದ ಸಿ.ಟಿ.ರವಿ, ಹಿಂದೂ ಸಮಾಜಕ್ಕೆ ಜಾತೀಯತೆ ಮುಳ್ಳಿನ ರೀತಿ‌ ಕಾಡ್ತಿದೆ. ಜಾತಿ ಮತ್ತು ಜಾತೀಯತೆ ಮಧ್ಯೆ ಅಂತರ ಇದೆ.‌ ಜಾತಿ ಅಸ್ಮಿತೆಯಾದರೆ, ಜಾತೀಯತೆ ಅಪರಾಧ. ಅಸ್ಪೃಶ್ಯತೆ ಇಡೀ ದೇಶವನ್ನು ದುರ್ಬಲಗೊಳಿಸಿದೆ. ಹಿಂದೂ ಸಮಾಜವನ್ನೂ ದುರ್ಬಲಗೊಳಿಸಿದೆ.‌ ಅಸ್ಪೃಶ್ಯತೆ ತೊಲಗಿಸಲು ಸ್ವಾಮೀಜಿಗಳು ನೇತೃತ್ವ ವಹಿಸಬೇಕು.‌ ಅಸ್ಪೃಶ್ಯತೆ, ಜಾತೀಯತೆಗೆ ಚಿಕಿತ್ಸೆ ಕೊಡಬೇಕು. ಇವು ಹಿಂದೂ ಸಮಾಜದ ಒಳಗಿನ ಮುಳ್ಳುಗಳು.‌ ಹೊರಗಿನಿಂದಲೂ ಮತಾಂಧತೆ ಎಂಬ ಮುಳ್ಳು ಹಿಂದೂ ಸಮಾಜಕ್ಕೆ ಚುಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನೂ ಹಿಂದೂ ಇದೀನಿ ಅಂತ ಕೊಲೆ ಮಾಡಬೇಕನ್ನೋದು ಯಾವ ನ್ಯಾಯ – ಸಚಿವ ಶಂಕರ ಪಾಟೀಲ್

    ಕೆಲವರು ಮತಗಳ ಆಸೆಗಾಗಿ ಮತಾಂಧತೆಗೆ ಇನ್ನೂ ಕಾವು ಕೊಡ್ತಿದ್ದಾರೆ. ಕೆಲ ರಾಜಕಾರಣಿಗಳು ಈ ಕೆಲಸ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು. ನಮ್ಮ ದೇಶ ಮತಾಂಧತೆಯ ಕೊಡಲಿಗೆ ತುಂಡಾಯ್ತು.‌ ಅದೇ ಮತಾಂಧತೆಗೆ ಕೆಲವರು ಪ್ರೋತ್ಸಾಹ ಕೊಡ್ತಿದ್ದಾರೆ. ಹೀಗಾದರೆ ಹಿಂದೂ ಸಮಾಜ ಉಳಿಯುತ್ತಾ? ಹಿಂದೂ ಕೆಲಸ ದುರ್ಬಲಗೊಳಿಸುವ ಹೀನ ಕೆಲಸ ಯಾರೂ ಮಾಡಬಾರದು ಎಂದು ಹಿಂದುತ್ವದ ಪರ ಮಾತಾಡುವ ಮೂಲಕ ಸಿದ್ದರಾಮಯ್ಯರನ್ನು ಕೆಣಕಿದರು.

    ಸಿ.ಟಿ.ರವಿ ಭಾಷಣವನ್ನು ವೇದಿಕೆ ಮೇಲೆ ಆಸೀನರಾಗಿದ್ದ ಸಿದ್ದರಾಮಯ್ಯ ತದೇಕಚಿತ್ತದಿಂದಲೇ ಕೇಳಿಸಿಕೊಂಡರು. ಸಿ.ಟಿ.ರವಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಭಾಷಣದಲ್ಲಿ ಹಿಂದೂ ಸಮಾಜ ಉಳೀಬೇಕು ಎಂದ ಸಿ.ಟಿ.ರವಿಗೆ ತಿರುಗೇಟು ಕೊಟ್ಟರು. ನಮ್ಮೆಲ್ಲರಲ್ಲೂ ಮನುಷ್ಯತ್ವ ಇರಬೇಕು. ನಾವು ಸ್ವಾರ್ಥಿಗಳಾಗ್ತಿದ್ದೀವಿ.‌ ಕಾಯಿಲೆ ಬಂದಾಗ ರಕ್ತ ಬೇಕಿರುತ್ತೆ ಅನ್ಕೊಳ್ಳಿ. ಆಗ ನನಗೆ ಹಿಂದೂ ಧರ್ಮದವರ ರಕ್ತ ಕೊಡಿ ಅಂತ ಕೇಳ್ತೀವಾ? ಯಾವ ಧರ್ಮದ್ದೋ ರಕ್ತ ಕೊಡಿ, ಬದುಕಬೇಕಯ್ಯ ನಾನು ಅಂತೀವಿ ಅಲ್ವಾ? ಮುಸ್ಲಿಂ, ಕ್ರೈಸ್ತ ಇನ್ಯಾವುದೇ ಧರ್ಮ ಆಗಿರಲಿ ಮೊದಲು ರಕ್ತ ಕೊಡಿ ಅಂತೀವಿ. ರಕ್ತ ಪಡೆದು ಬದುಕಿದ ಮೇಲೆ ನಾವು ಇವನಾರವ ಇವನಾರವ ಅಂದ್ರೆ ಸರಿ ಆಗುತ್ತಾ? ಬದುಕುವುದಕ್ಕೆ ಯಾರ ರಕ್ತ ಬೇಕಾದ್ರೂ ದೇಹದೊಳಗೆ ಸೇರಿಸ್ಕೋತೀವಿ.‌ ನಾನು ಕುರುಬ, ಹಿಂದೂ ರಕ್ತನೇ ಬೇಕು ಅಂದ್ರೆ ಸತ್ ಹೋಗ್ತೀವಿ. ಜೀವ ಉಳಿಸ್ಕೊಳ್ಳೋಕೆ ರಕ್ತ ಬೇಕು ಅಷ್ಟೇ ಎಂಬ ಉದಾಹರಣೆ ಕೊಡುತ್ತಾ ಸಿ.ಟಿ.ರವಿ ಹಿಂದುತ್ವ ವಾದಕ್ಕೆ ತಿರುಗೇಟು ಕೊಟ್ಟರು. ಇದನ್ನೂ ಓದಿ: 15 ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ವಿರುದ್ಧ ರಾಜ್ಯದಲ್ಲೂ ಕಾರ್ಯಾಚರಣೆ

    ಸಿ.ಟಿ.ರವಿ ಪ್ರಸ್ತಾಪಿಸಿದ ಜಾತಿ ಬಗ್ಗೆಯೂ ಸಿದ್ದರಾಮಯ್ಯ ಟಕ್ಕರ್ ಕೊಟ್ಟರು. ಯಾವ ಸಮಾಜದಲ್ಲಿ ನೆಮ್ಮದಿ, ಮನುಷ್ಯತ್ವ ಇರಲ್ವೋ ಅಂಥ ಸಮಾಜ ಅಭಿವೃದ್ಧಿ ಆಗಲ್ಲ. ಯಾವ ನಾಡಿನಲ್ಲಿ ಶಾಂತಿ, ಸಾಮರಸ್ಯ ಇರುತ್ತೋ ಆ ನಾಡು, ದೇಶ ಅಭಿವೃದ್ಧಿ ಆಗುತ್ತೆ. ಇದನ್ನು ಪ್ರತಿಯೊಬ್ಬ ಭಾರತೀಯ ಅರ್ಥ ಮಾಡ್ಕೋಬೇಕು.‌ ಜಾತಿ ವ್ಯವಸ್ಥೆ ನಾವು ಮಾಡಿದ್ದಲ್ಲ. ನಾನು‌ ಕುರುಬರ ಜಾತೀಲಿ ಹುಟ್ಬೇಕು ಅಂತ ಅರ್ಜಿ ಹಾಕಿರಲಿಲ್ಲ ದೇವರಿಗೆ.‌ ಜಾತಿ ವ್ಯವಸ್ಥೆ ಇತ್ತು ಹುಟ್ಟಿದೀವಿ ಅಷ್ಟೆ. ಎಲ್ಲ ಧರ್ಮಗಳಿಗಿಂತಲೂ ಮನುಷ್ಯ ಧರ್ಮವೇ ಶ್ರೇಷ್ಠ. ದಯೆ ಇಲ್ಲದ ಧರ್ಮ‌ ಇಲ್ಲ. ಬಸವಣ್ಣ ಜಾತ್ಯತೀತ, ವರ್ಗ, ಜಾತಿ ರಹಿತ ಸಮ ಸಮಾಜದ ಕನಸು ಕಂಡಿದ್ದರು. ಸಂವಿಧಾನ ಜಾರಿಗೆ ಬಂದಾಗಲೇ ಅಸ್ಪೃಶ್ಯತೆ ತೊಡೆದು ಹಾಕಲಾಗಿದೆ. ಅಸ್ಪೃಶ್ಯತೆ ಪಾಲನೆ ಮಾಡ್ತಿರೋರು ಸಂವಿಧಾನ ವಿರೋಧಿಗಳು. ಸಮಾಜ ಸರ್ವ ಜನಾಂಗದ ಶಾಂತಿಯ ತೋಟದ ಹಾಗಿರಬೇಕು ಅಂದ್ರು ಕುವೆಂಪು. ಶಾಂತಿಯ ತೋಟ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮನುಷ್ಯ ಧರ್ಮದ ಮಹತ್ವ ತಿಳಿಸಿದರು. ಇವರಿಬ್ಬರ ವಾದ ಸರಣಿಯನ್ನೂ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಆಸಕ್ತಿಯಿಂದ ಆಲಿಸಿದರು.

  • ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ: ಸಿ.ಟಿ.ರವಿ

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ: ಸಿ.ಟಿ.ರವಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಕಾರ್ಯಕರ್ತ. ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಲು ನಾನು ಬದ್ಧ. ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಎಲ್ಲಾ ಬದಲಾವಣೆ ಆಗುತ್ತಿರುತ್ತೆ. ಕಾಲಕಾಲಕ್ಕೆ ಎಲ್ಲರೂ ಬದಲಾವಣೆ ಆಗುತ್ತಿರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಂದೂಡಲು ಸಂಸದರೇ ಮನವಿ ಮಾಡಿದ್ದರು: ಪ್ರಹ್ಲಾದ್ ಜೋಶಿ

    ಅಂದಹಾಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಏಪ್ರಿಲ್ 16, 17ರಂದು ನಡೆಯಲಿದ್ದು ಆ ಬಳಿಕ‌ ಸರ್ಕಾರ ಮತ್ತು ಪಕ್ಷ ಮಟ್ಟದಲ್ಲಿ ಬದಲಾವಣೆ ಆಗಲಿದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗ ತೊಡಗಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬಹುದು ಎಂಬ ಲೆಕ್ಕಚಾರಗಳು ನಡೆಯುತ್ತಿವೆ.‌ ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿಗೆ ಕಾಳಿ ಸ್ವಾಮೀಜಿ ಧನ್ಯವಾದ

  • ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ

    ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ

    ಬೆಂಗಳೂರು: ಮುಸ್ಲಿಮರು ಅವರ ದೇವರಿಗೆ ಒಪ್ಪಿಸಿದ ಹಲಾಲ್ ಮಾಂಸ ಅವರ ದೇವರಿಗೆ ಪ್ರಿಯ ನಮ್ಮ ದೇವರಿಗೆ ಎಂಜಲು ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.

    ಹಲಾಲ್ ಮಾಂಸಕ್ಕೆ ಹಿಂದು ಸಂಘಟನೆಗಳು ಬಹಿಷ್ಕಾರ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ಹೇಳುವ ರೈಟ್ಸ್ ಇದೆಯೋ ಹಾಗೇ. ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮಗಿದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದ್ಯಾ? ಸಮಾರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ. ಹಾಗಂತ ಸಮಾರಸ್ಯ ಒನ್ ವೇ ಅಲ್ಲ, ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನುವುದಕ್ಕೆ ರೆಡಿಯಾದರೆ, ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲಾ ಈಗಲೂ ಒಪ್ಪಿಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?

    ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು ಅಂತ ನೀವು ಯಾಕೆ ಹೇಳುತ್ತೀರಾ? ಹೇಳುವುದಕ್ಕೆ ಏನು ರೈಟ್ಸ್ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    Eshwarappa

    ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ವಿಚಾರ: ರಾಜಕಾರಣದಲ್ಲಿ ಬಹಳ ಸಂಗತಿಗೆ ಆಧಾರ ಇರುವುದಿಲ್ಲ. ಆಧಾರ ಇದ್ದರೆ ಆಗಲೇ ಸಂಬಂಧಪಟ್ಟವರ ಮೇಲೆ ದೂರು ಕೊಡಬೇಕಿತ್ತು. ಈಶ್ವರಪ್ಪ ಕಳೆದ ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದವರು. ಹಿಂದೆ ಇಲ್ಲದ ಆರೋಪ ಈಗ ಮಾಡುತ್ತಿದ್ದಾರೆ ಅಂದರೆ ಭವಿಷ್ಯ ರಾಜಕಾರಣ ಇರಬಹುದು. ನೇರವಾಗಿ ಮಾತಾಡುವವರಿಗೆ ಶತ್ರುಗಳ ಹೆಚ್ಚಾಗಿರುತ್ತಾರೆ. ನಾನು ನಂಬುವುದಿಲ್ಲ, ಅವರ ಹೆಸರಲ್ಲಿ ಮೋಸ ಮಾಡಿರಬಹುದು. ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು ಎಂದಿದ್ದಾರೆ.

  • ಡಿಕೆಶಿ ಬ್ಲಡ್ ಡೇಂಜರ್, ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ- ಸಿ.ಟಿ ರವಿ

    ಡಿಕೆಶಿ ಬ್ಲಡ್ ಡೇಂಜರ್, ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ- ಸಿ.ಟಿ ರವಿ

    ನವದೆಹಲಿ: ಗಂಡಸ್ತನ ಭಾಷೆ ಬಳಸುವುದು ಹಳೆ ಮೈಸೂರು ಭಾಗದಲ್ಲಿ ಸಹಜ, ಅದಕ್ಕೆ ತೋಳು ಏರಿಸಿಕೊಂಡು ಜಗಳಕ್ಕೆ ಹೋಗುವುದು ತಪ್ಪು, ಮಾತಿಗೆ ಮಾತಿನಲ್ಲೇ ಉತ್ತರ ಕೊಡುವುದು ಪ್ರಜಾಪ್ರಭುತ್ವದ ಸೊಗಸು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

    ನಿನ್ನೆ ರಾಮನಗರದಲ್ಲಿ ನಡೆದ ಸಚಿವ ಅಶ್ವಥ್ ನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ ಜಗಳಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ ಅವರ ಗಂಡಸ್ಥನ ಪದ ಬಳಕೆಯನ್ನು ಸಮರ್ಥಿಸಿಕೊಂಡರು.

    ಸಂಸದ ಡಿ.ಕೆ ಸುರೇಶ್, ಸಚಿವರ ಮೇಲೆ ಹಲ್ಲೆಗೆ ಮುಂದಾಗಿರುವುದು ಖಂಡನೀಯ, ಗೂಂಡಾಗಿರಿ ಮೂಲಕ ಅಭಿಪ್ರಾಯ ಭೇದ ಹತ್ತಿಕ್ಕಲು ಸಾಧ್ಯವಿಲ್ಲ, ಸಂಸದರಿಗೆ ಅಭಿವೃದ್ಧಿ ಬಗ್ಗೆ ಹೇಳುವುದಕ್ಕೆ ಅವಕಾಶ ಇತ್ತು ಅದನ್ನು ಬಿಟ್ಟು ಗೂಂಡಾಗಿರಿ, ದೌರ್ಜನ್ಯ ಮೂಲಕ ಹೇಳುವುದಕ್ಕೆ ಹೊಗಿದ್ದಾರೆ ಇದು ಸರಿಯಾದ ನಡೆಯಲ್ಲ ಎಂದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

    ಡಿ.ಕೆ ಸುರೇಶ್ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸುತ್ತಾರೆ ಎಂದುಕೊಂಡಿದ್ದೆ ಆದರೆ ಸಿದ್ದರಾಮಯ್ಯ ಸುರೇಶ್ ನಡೆಯನ್ನು ಖಂಡಿಸಿಲ್ಲ. ತಮ್ಮನ ನಡೆ ಸಮರ್ಥಿಸುವ ಭರದಲ್ಲಿ ನಮ್ಮ ರಕ್ತವೇ ಬೇರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಈ ಮೂಲಕ ಡಿ.ಕೆ ಶಿವಕುಮಾರ್ ತಮ್ಮ ರಕ್ತ ಅಪಾಯಕಾರಿ ರಕ್ತ ಎಂದು ತೋರಿಸಿದ್ದಾರೆ. ಕನಕಪುರದ ರಾಜಕೀಯ ರಾಜ್ಯಕ್ಕೆ ವಿಸ್ತರಿಸಿದರೆ ಪ್ರಜಾಪ್ರಭುತ್ವ ಅಂತ್ಯವಾಗುತ್ತೆ ಎಂದು ಟೀಕಿಸಿದರು. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

    ಅಶ್ವಥ್ ನಾರಾಯಣ ಡಿ.ಕೆ ಸುರೇಶ್ ಅವರನ್ನು ಪ್ರೇರೆಪಿಸಿಲ್ಲ, ಅವರನ್ನೇನು ನಿರ್ವೀರ್ಯರು ಅಂತಾ ಹೇಳಿಲ್ಲ, ಗಂಡಸ್ತನ ಎನ್ನುವುದು ಅಸಂಸದೀಯ ಪದ ಅಲ್ಲ ಅದು ಮೈಸೂರು ಭಾಗದಲ್ಲಿ ಸಹಜ ಎಂದು ಹೇಳಿದರು.ಇದನ್ನೂ ಓದಿ:  ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

  • ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಬೆಂಗಳೂರು: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ. ಅವರೇನಾದರೂ ತಮ್ಮನ್ನು ಭಸ್ಮಾಸುರ ಅಂತ ಅಂದುಕೊಂಡಿದ್ದರೆ ಹೇಗೆ ಕಾಂಗ್ರೆಸ್‌ನವರ ತಲೆಯ ಮೇಲೆಯೇ ಕೈ ಇಡಿಸಬೇಕು ಎನ್ನುವುದು ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಿದರೆ ಸುಟ್ಟು ಭಸ್ಮವಾಗುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು,  ಡಿ.ಕೆ.ಶಿವಕುಮಾರ್ ವಸಿಷ್ಠರು ಅಲ್ಲ, ವಿಶ್ವಾಮಿತ್ರನೂ ಅಲ್ಲ. ಅವರೇನಾದರೂ ತಮ್ಮನ್ನು ಭಸ್ಮಾಸುರ ಅಂತ ಅಂದುಕೊಂಡಿದ್ದರೆ, ಹೇಗೆ ಕಾಂಗ್ರೆಸ್‌ನವರ ತಲೆ ಮೇಲೆಯೇ ಕೈ ಇಡಿಸಬೇಕು ಎನ್ನುವುದು ನಮಗೆ ಗೊತ್ತಿದೆ. ಅವರೇ ಶಾಪಗ್ರಸ್ಥರು, ಬೇಲ್ ಮೇಲೆ ಹೊರಬಂದಿದ್ದಾರೆ. ಬೇಲ್ ಕ್ಯಾನ್ಸಲ್ ಆದರೆ ಜೈಲಿಗೆ ಹೋಗಬೇಕು. ದೇವಾಲಯ ಸಮಾಜದ ಸ್ವತ್ತು, ಅದನ್ನು ಸಮಾಜಕ್ಕೆ ವಾಪಸ್ ನೀಡುತ್ತೇನೆ ಎಂಬ ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

    ಬಿಜೆಪಿ ತರುವ ಎಲ್ಲ ಪರಿವರ್ತನೆಗಳನ್ನು ವಿರೋಧಿಸುವ ಕಾಂಗ್ರೆಸ್ ಚಾಳಿ ಅಪಾಯಕಾರಿಯಾದದ್ದು, ಪೌರತ್ವ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸಿತು. ಆರ್ಟಿಕಲ್ 370 ರದ್ದತಿಗೂ ಕಾಂಗ್ರೆಸ್ ವಿರೋಧಿಸಿತ್ತು. ಹೊಸ ಶಿಕ್ಷಣ ನೀತಿಯನ್ನು ಕೂಡ ವಿರೋಧಿಸಿತ್ತು. ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ ಮನಸ್ಥಿತಿ ಕಾಂಗ್ರೆಸ್‍ಗೆ ಇಲ್ಲ. ಅದಕ್ಕೆ ಒಂದು ಕುಟುಂಬಕ್ಕೆ ಜೋತು ಬಿದ್ದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿತ್ತು. ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯನ್ನು ವಿರೋಧಿಸಿತ್ತು. ಮತಾಂತರ ಆಗಬೇಕು ಅಂತ ಬಯಸುವವರಿಗೆ ನಿಯಮ ರೂಪಿಸಿದರೂ ವಿರೋಧಿಸಲು ಪ್ರಾರಂಭಿಸಿದ್ದಾರೆ. ಈಗ ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಲು ಹೊರಟಿರುವುದನ್ನೂ ಕಾಂಗ್ರೆಸ್ ವಿರೋಧಿಸುತ್ತಿದೆ. ಲವ್ ಜಿಹಾದ್‍ಗೂ ವಿರೋಧವಿತ್ತು. ತಾಲಿಬಾನ್ ಮನಸ್ಥಿತಿ ಮತಾಂಧತೆ ಆದರೆ, ಕಾಂಗ್ರೆಸ್‍ಗೆ ಇರುವುದು ಮತದ ಮೇಲಿನ ಅಂಧತೆ. ಒಟ್ಟಾರೆ ತಾಲಿಬಾನ್‍ಗೂ ಸ್ಪರ್ಧೆ ಒಡ್ಡುವಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

  • ಪ್ರಧಾನಿ ಹೋದಲ್ಲೆಲ್ಲ ಮೋದಿ…ಮೋದಿ… ಅಂತಾರೆ, ಸಿದ್ರಾಮಯ್ಯರ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬಹುದಷ್ಟೇ: ಸಿ.ಟಿ.ರವಿ

    ಪ್ರಧಾನಿ ಹೋದಲ್ಲೆಲ್ಲ ಮೋದಿ…ಮೋದಿ… ಅಂತಾರೆ, ಸಿದ್ರಾಮಯ್ಯರ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬಹುದಷ್ಟೇ: ಸಿ.ಟಿ.ರವಿ

    ಚಿಕ್ಕಮಗಳೂರು: ನರೇಂದ್ರ ಮೋದಿ ಅವರು ಹೋದಲ್ಲೆಲ್ಲ ಮೋದಿ… ಮೋದಿ… ಅಂತಾರೆ ಸಿದ್ದರಾಮಯ್ಯ ಅವರ ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದು ಅಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

    ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಕೇಳಿಸಿಕೊಳ್ಳಿ, ಇಂಗ್ಲೆಂಡ್ ಅಧ್ಯಕ್ಷ ಬೋಯಿಂಗ್ ಜಾನ್ಸನ್ ‘ಒನ್ ಸನ್, ಒನ್ ಮೂನ್, ಒನ್ ವಲ್ಡ್ ಒನ್ ನರೇಂದ್ರ ಮೋದಿ’ ಎಂದಿದ್ದಾರೆ. ಇಸ್ರೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಜನಪ್ರಿಯರೆಂದರೆ ನರೇಂದ್ರ ಮೋದಿ ಎಂದಿದ್ದಾರೆ. ಕರ್ನಾಟಕದಿಂದ ಹೊರ ಹೋದರೆ ಸಿದ್ದರಾಮಯ್ಯನವರ ಹೆಸರನ್ನು ಯಾರು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮತದಾರರ ಬಳಿ ಆಣೆ ಪ್ರಮಾಣ ಮಾಡಿಸಿದ ಬಿಜೆಪಿ ನಾಯಕ

    ಸಂಸ್ಕೃತದಲ್ಲಿ ಯದ್ಭಾವಂ ತದ್ಭವತಿ ಎಂಬ ಶ್ಲೋಕ ಇದೆ. ನಾನು ಹೇಗಿದ್ದೇನೋ ಅದೇ ರೀತಿ ಉಳಿದವರು ಎಂದು ಭಾವಿಸುತ್ತಾರೆ ಎಂದು. ಆದರೆ, ಜಗತ್ತಿನ ದೃಷ್ಟಿಯಲ್ಲಿ ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ. ಬಾವಿಯೊಳಗಿನ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ತಿಳಿದುಕೊಳ್ಳುತ್ತೆ. ಅವರು ಬಾವಿಯೊಳಗಿರುವ ಕಪ್ಪೆ ಅಲ್ಲ ಎಂದರು.

    ಇಸ್ರೇಲ್ ಅಧ್ಯಕ್ಷ ನೀವು ನಮ್ಮ ಪಕ್ಷಕ್ಕೆ ಸೇರಿ ಎಂದು ನರೇಂದ್ರ ಮೋದಿಗೆ ತಮಾಷೆಯಾಗಿ ಪ್ರಶಂಸೆ ಮಾಡಿದ್ದಾರೆ. ಮೋದಿ ಎಲ್ಲಿಗೆ ಹೋದರು ಮೋದಿ… ಮೋದಿ ಅನ್ನುತ್ತಾರೆ. ಕರ್ನಾಟಕದಿಂದ ಆಚೆ ಹೋದರೆ ಸಿದ್ದರಾಮಯ್ಯನವರ ಹೆಸರನ್ನು ಯಾರು ಹೇಳುತ್ತಾರೆ? ರಾಹುಲ್ ಗಾಂಧಿ ಹೆಸರನ್ನೇ ಯಾರೂ ಹೇಳುವುದಿಲ್ಲ. ದೇಶದ ಪ್ರಧಾನಿ ಆಫ್ರಿಕಾ, ಅಮೆರಿಕ, ಆಸ್ಟ್ರೇಲಿಯಾ ಎಲ್ಲಿ ಹೋದರು ಮೋದಿ ಮೋದಿ ಅನ್ನುತ್ತಾರೆ. ಸಿದ್ದರಾಮಯ್ಯನವರ ಹೆಸರನ್ನು ಯಾರಾದರೂ ಹೇಳುವವರು ಇದ್ದರೆ ಅದು ಪಾಕಿಸ್ತಾನದಲ್ಲಿ ಅಷ್ಟೆ ಎಂದು ಕುಟುಕಿದರು.

    ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಳ್ಳದಿದ್ದರೆ ಡಿ.ಕೆ.ಶಿವಕುಮಾರ್ ಶಾಸಕರಾಗೋದಕ್ಕೆ ತಿಣುಕಾಡಬೇಕಿತ್ತು. ಡಿ.ಕೆ.ಸುರೇಶ್ ಸಂಸದರೂ ಆಗುತ್ತಿರಲಿಲ್ಲ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮತದಾರರಿಗೆ ಆಮಿಷವೊಡ್ಡಿದ ಕೈ ನಾಯಕರು: ಭಗವಂತ ಖೂಬಾ ವಾಗ್ದಾಳಿ

    ಬಿಜೆಪಿ ಅಲೆಯಲ್ಲೂ ಜೆಡಿಎಸ್ ಬೆಂಬಲ ಇದ್ದ ಕಾರಣಕ್ಕೆ ಸುರೇಶ್ ಸಂಸದರಾಗಿ ಆಯ್ಕೆಯಾದರು. ಜೆಡಿಎಸ್ ಎಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲಿ ನಾವು ಬೆಂಬಲ ಕೇಳಿದ್ದೇವೆ. ಜೆಡಿಎಸ್ ಕೈನಲ್ಲಿ ಸ್ವಲ್ಪ ಮತಗಳಿವೆ ಎಂದು ನಾವು ಕೇಳಿದ್ದೇವೆ. ಅವರು ಎಲ್ಲೂ ಹಾಕುತ್ತೇವೆ ಎಂದು ಹೇಳಿಲ್ಲ. ಒಪ್ಪಂದವಾಗಿಲ್ಲ. ಮತದಾರರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದು ಗೊತ್ತು. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋ ಕಥೆ ಹೇಳಿದರೆ ಅದು ಅವರಿಗೆ ಅನ್ವಯವಾಗುತ್ತೆ ಎಂದು ಕಾಂಗ್ರೆಸ್-ಡಿಕೆಶಿ ವಾಗ್ದಾಳಿ ನಡೆಸಿದರು.

    ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದು ನಾವ? ಅವರನ್ನು ಇಳಿಸುವುದಕ್ಕೆ ಅವರದ್ದೇ ಪಕ್ಷದ ಶಾಸಕರನ್ನು ಕಳಿಸಿದ್ದು ಯಾರು? ಕೂರಿಸಿ ಕಾಲೆಳೆಯುವುದನ್ನು ಮಾಡಿರುವುದು ಅವರೇ. ನಮ್ಮ ಸಂಬಂಧ ಜನರ ಜೊತೆ, ಒಪ್ಪಂದವೆಲ್ಲಾ ಕಾಂಗ್ರೆಸ್‍ಗೆ ಬಿಟ್ಟಿದ್ದು ಎಂದರು.

  • ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ: ಸಿ.ಟಿ.ರವಿ

    ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ: ಸಿ.ಟಿ.ರವಿ

    -ಕಾಂಗ್ರೆಸ್‍ನಲ್ಲಿರುವವರೆಲ್ಲಾ ನಾಯಕರು, ವೇದಿಕೆ ಕೆಳಗೆ ಕುಳಿತುಕೊಳ್ಳಲು ಕಾರ್ಯಕರ್ತರೇ ಇಲ್ಲ

    ಶಿವಮೊಗ್ಗ: ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ. ಹೀಗಾಗಿಯೇ ಬಿಜೆಪಿಯ ಜನ ಸ್ವರಾಜ್ ಯಾತ್ರೆಯನ್ನು ಕಾಂಗ್ರೆಸ್‍ನವರು ಟೀಕಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜನ ಸ್ವರಾಜ್ ಯಾತ್ರೆಯಲ್ಲಿ ದೊರೆತ ಜನ ಬೆಂಬಲ ಗಮನಿಸಿದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಕ್ಕು ಹೆಚ್ಚು ಸ್ಥಾನ ಗೆಲ್ಲಲ್ಲಿದೆ. ಇದರಿಂದಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈಗಾಗಿಯೇ ಸಿದ್ದರಾಮಯ್ಯ ಅವರು ಅಸಂಬದ್ದವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    ರಾಜ್ಯದಲ್ಲಿ ಬಿಜೆಪಿ ನಾಲ್ಕು ತಂಡಗಳಲ್ಲಿ ರಾಜ್ಯದ ಉದ್ದಗಲಕ್ಕೂ ಜನ ಸ್ವರಾಜ್ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದೆ. ಜನ ಸ್ವರಾಜ್ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಜನ ಬೆಂಬಲ ಕಾಂಗ್ರೆಸ್‍ನವರಿಗೆ ಸಹಿಸಲು ಆಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದರು. ಇದನ್ನೂ ಓದಿ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್

    ಕಾಂಗ್ರೆಸ್‍ನವರಿಗೆ ಜನ ಬೆಂಬಲ ಇಲ್ಲ. ಹೀಗಾಗಿ ಬಿಜೆಪಿಯ ಜನ ಸ್ವರಾಜ್ ಯಾತ್ರೆ ಬಗ್ಗೆ ಕಾಂಗ್ರೆಸ್ ವಿರೋಧ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಖುರ್ಚಿಗಾಗಿ ಜಗಳ ನಡೆಯುತ್ತಿದೆ. ವೇದಿಕೆ ಮೇಲೆ ಯಾರು ಯಾರು ಕುಳಿತುಕೊಳ್ಳಬೇಕು. ಬಲಭಾಗದಲ್ಲಿ ಯಾರು ಕುಳಿತುಕೊಳ್ಳಬೇಕು. ಎಡ ಭಾಗದಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬ ಬಗ್ಗೆ ಅವರಲ್ಲಿಯೇ ಗೊಂದಲ ಇದೆ. ಅಲ್ಲದೇ ಕಾಂಗ್ರೆಸ್‍ನಲ್ಲಿ ಇರುವವರೆಲ್ಲಾ ನಾಯಕರು, ವೇದಿಕೆ ಕೆಳಗೆ ಕುಳಿತುಕೊಳ್ಳಲು ಕಾರ್ಯಕರ್ತರೇ ಇಲ್ಲ. ಇದಕ್ಕಾಗಿಯೇ ವೇದಿಕೆ ಮೇಲೆ ಯಾರು ಕುಳಿತುಕೊಳ್ಳಬಾರದು. ಎಲ್ಲರೂ ಕೆಳಗಡೆಯೇ ಕುಳಿತುಕೊಳ್ಳಬೇಕು ಎಂಬ ಹೊಸ ನಿಯಮವನ್ನು ಕಾಂಗ್ರೆಸ್‍ನವರು ಜಾರಿಗೊಳಿಸಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

  • ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸರ್ಕಾರ ಗೋವಾದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಪ್ರತಿಪಕ್ಷಗಳು ಈ ಬಗ್ಗೆ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಹಾಗೂ ಗೋವಾ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

    SATYAPAL MALIK

    ಗೋವಾ ಮುಖ್ಯಮಂತ್ರಿ ಆಡಳಿತ ಕುರಿತು ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಆದರೂ ಪ್ರತಿಪಕ್ಷಗಳು ವಿವಾದ ಸೃಷ್ಟಿಸುತ್ತಿರುವುದು ಸಲ್ಲ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅವರ ಸಂಪುಟ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.

  • ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಬೆಂಗಳೂರು: ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ‘ಕಂಬಳಿ’ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕುರುಬ ಸಮುದಾಯದ ಸಂಕೇತವಾಗಿರುವ ಕಂಬಳಿ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ನಾಯಕರು ಹಗ್ಗಜಗ್ಗಾಟ ನಡೆಸುತ್ತಿದ್ದಾರೆ.

    C.T.RAVI TWEET

    ಸಮಾವೇಶವೊಂದರಲ್ಲಿ ಕಂಬಳಿಯನ್ನು ಹೊದ್ದುಕೊಂಡು ಸಮುದಾಯಕ್ಕೆ ಭರವಸೆ ನುಡಿಗಳನ್ನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಮುಸಲ್ಮಾನ ಸಮುದಾಯದ ಟೋಪಿ ಹಾಕಿರುವ ಸಿದ್ದರಾಮಯ್ಯ ಅವರ ಫೋಟೊವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಆಗ್ಲೇಬೇಕುಂತ ರಗ್ಗು ಹೊದ್ದು ಮಲಗಿದ್ದ ಸಿದ್ದರಾಮಯ್ಯರನ್ನು ಕರ್ಕೊಂಡು ಬಂದಿದ್ದು ನಾನು: ಹೆಚ್‍ಡಿಕೆ

    siddaramaiah

    “ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ?” ಎಂದು ಕುಟುಕಿದ್ದಾರೆ.

    ಟೀಕಿಸುವ ಭರದಲ್ಲಿ ಸಿ.ಟಿ.ರವಿ ಅವರು ಕೀಳುಮಟ್ಟದ ಪದ ಬಳಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಪರಸ್ಪರ ಕೀಳುಮಟ್ಟದ ಭಾಷೆ ಬಳಸಿ ವಾಕ್ಸಮರ ನಡೆಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ತಾಯಿ ದ್ರೋಹಿಗಳು: ಸಿದ್ದರಾಮಯ್ಯ

  • ಚೌತಿಯಂದು ನೇಗಿಲು ಹಿಡಿದು ರೈತರಾದ ಸಿ.ಟಿ.ರವಿ

    ಚೌತಿಯಂದು ನೇಗಿಲು ಹಿಡಿದು ರೈತರಾದ ಸಿ.ಟಿ.ರವಿ

    -ಹೊಲದಲ್ಲಿ ಉಳುಮೆ ಮಾಡಿ ಸಿ.ಟಿ.ರವಿ ಹಬ್ಬ ಆಚರಣೆ

    ಚಿಕ್ಕಮಗಳೂರು: ಗಣೇಶ ಚತುರ್ಥಿ ದಿನದಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೊಲದಲ್ಲಿ ಉಳುಮೆ ಮಾಡುವ ಮೂಲಕ ರೈತರ ಯೋಗಕ್ಷೇಮ ವಿಚಾರಿಸಿ ವಿನೂತನವಾಗಿ ಹಬ್ಬ ಆಚರಿಸಿದ್ದಾರೆ.

    ಇಂದು ತಾಲೂಕಿನ ಹಿರೇಮಗಳೂರು ಬಳಿ ನಡೆಯುತ್ತಿದ್ದ ಕೆರೆ ಏರಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಇದೇ ವೇಳೆ ಸಗನೀಪುರ ಗ್ರಾಮದ ಹೊಲದಲ್ಲಿ ರೈತರು ಉಳುಮೆ ಮಾಡುತ್ತಿರುವುದ್ದನ್ನು ಕಂಡು ಹೊಲಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಹಬ್ಬದ ದಿನ ಉಳುಮೆ ಮಾಡುತ್ತಿದ್ದೀರಾ, ಬನ್ನಿ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ ಅಂತ ರೈತರಿಂದ ಎತ್ತುಗಳನ್ನು ಪಡೆದು ಹೊಲದಲ್ಲಿ ಉಳುಮೆ ಮಾಡಿದ್ದಾರೆ. ಇದನ್ನೂ ಓದಿ:  ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಉಳುಮೆ ಮಾಡುವಾಗ ರೈತರಂತೆ ನೇಗಲನ್ನು ಕಾಲಿನಲ್ಲಿ ಮೆಟ್ಟಿ ಉಳುಮೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಸಿ.ಟಿ. ರವಿ ಉಳುಮೆ ಶೈಲಿಯನ್ನು ಕಂಡು ರೈತರು ಕೂಡ ಆಶ್ಚರ್ಯಗೊಂಡಿದ್ದಾರೆ. ಭಾಷಣಗಳಲ್ಲಿ ಆಗಾಗ ನಾನು ರೈತರ ಮಗ ಎಂದು ಹೇಳುತ್ತಿದ್ದ ಅವರು, ಹಬ್ಬದಂದೇ ರೈತರ ಹೊಲದಲ್ಲಿ ಉಳುಮೆ ಮಾಡಿ ಹೊಲದಲ್ಲಿ ಹಬ್ಬ ಆಚರಿಸಿ, ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಳಿಕ ರೈತರ ಯೋಗಕ್ಷೇಮ ವಿಚಾರಿಸಿ, ರೈತರಿಗೆ ಗಣಪತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ತಾಲೂಕಿನ ಕುರುವಂಗಿ, ಸಗನೀಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ರೌಂಡ್ ಹಾಕಿ ರೈತರ ಆರೋಗ್ಯ, ಬೇಕು-ಬೇಡಗಳನ್ನು ವಿಚಾರಿಸಿದ್ದಾರೆ. ಇದನ್ನೂ ಓದಿ:  ಹಾಸನದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ – ಮಷಿನ್‍ ಸಂಪೂರ್ಣ ಜಖಂ