Tag: c t ravi

  • ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಚಿಕ್ಕಮಗಳೂರು: ಕಳೆದ ನಾಲ್ಕೈದು ತಿಂಗಳಿಂದ ದಿನದಿಂದ ದಿನಕ್ಕೆ ಒಂದೊಂದು ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು (Chikkamagaluru) ನಗರಸಭೆಯ ಹೈಡ್ರಾಮಕ್ಕೆ ಪೂರ್ಣವಿರಾಮ ಬಿದ್ದಿದೆ. ಸಿ.ಟಿ.ರವಿ (C.T.Ravi) ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

    20 ವರ್ಷಗಳಿಂದ ನಗರಸಭೆಯ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಈಗ ತನ್ನದೇ ಪಕ್ಷದ ಅಧ್ಯಕ್ಷನಿಂದ ಮುಖಭಂಗವಾಗಿದೆ. ಬಿಜೆಪಿಯವರೇ ಆರಿಸಿ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಯ ಅಧ್ಯಕ್ಷನ ವಿರುದ್ಧ ಅಸಮಾಧಾನಗೊಂಡು ಅವಿಶ್ವಾಸ ಮಂಡನೆಗೆ ಮುಂದಾಗಿದ್ದ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಅವಿಶ್ವಾಸ ಮಂಡನೆಯಲ್ಲಿ ಸೋಲುವ ಮೂಲಕ ಬಿಜೆಪಿ ನಗರಸಭೆಯ ಅಧಿಕಾರ ಕಳೆದುಕೊಂಡಿದೆ. ಇದನ್ನೂ ಓದಿ: ಜಾಗತಿಕ ಮಟ್ಟದ KHIR ಸಿಟಿ ನಿರ್ಮಾಣ- 40 ಸಾವಿರ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ಕಳೆದ ಮೂರ್ನಾಲ್ಕು ತಿಂಗಳಿಂದ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅಕ್ರೋಶಗೊಂಡಿದ್ದ ನಗರಸಭೆಯ ಬಿಜೆಪಿಯ ಸದಸ್ಯರು ತಮ್ಮದೇ ಪಕ್ಷದ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲಾಗಿತ್ತು. ಅವಧಿ ಮುಗಿದರೂ ಪಕ್ಷದ ನಾಯಕರು ಸೇರಿದಂತೆ ಸಿ.ಟಿ.ರವಿ ಸೂಚನೆ ನೀಡಿದ್ದರು. ರಾಜೀನಾಮೆ ನೀಡಿ ಮತ್ತೆ ಮತ್ತೆ ವಾಪಸ್ ಪಡೆದಿದ್ದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಬಿಜೆಪಿಗೆ ಜೆಡಿಎಸ್, ಪಕ್ಷೇತರರು ಬೆಂಬಲ ನೀಡಿದ್ದರೂ ಕೂಡ ಕಾಂಗ್ರೆಸ್ ಅವಿಶ್ವಾಸ ನಿರ್ಣಯದಲ್ಲಿ ನಗರಸಭೆ ಸದಸ್ಯನಿಗೆ ಬೆಂಬಲ ನೀಡಿದ ಪರಿಣಾಮ ಬಿಜೆಪಿಗೆ ಮುಖಭಂಗವಾಗಿದೆ.

    ಇದರೊಂದಿಗೆ ಎರಡು ದಶಕಗಳಿಂದ ನಗರಸಭೆಯಲ್ಲಿ ತನ್ನ ಪಾರುಪತ್ಯ ಮೆರೆದಿದ್ದ ಬಿಜೆಪಿ ನಗರಸಭೆಯಲ್ಲಿರುವ 35 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನ ಗೆದ್ದಿತ್ತು. ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಉಳಿದಂತೆ ಕಾಂಗ್ರೆಸ್ 12, ಜೆಡಿಎಸ್ 3, ಎಸ್‌ಡಿಪಿಐ 1, ಪಕ್ಷೇತರರು 1 ಸದಸ್ಯರು ಗೆದ್ದಿದ್ದರು. ಆದರೆ, ಈಗ ಬಿಜೆಪಿಯ ಅಧ್ಯಕ್ಷ ಸ್ಥಾನದ ಕುರ್ಚಿ ಕಿತ್ತಾಟದಿಂದ ನಗರಸಭೆ ಅಧಿಕಾರವನ್ನ ಕಳೆದುಕೊಂಡಿದೆ. ಶುಕ್ರವಾರ ನಿರ್ಧಾರವಾಗಿದ್ದ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ಸಭೆಯಲ್ಲಿ ಬಿಜೆಪಿ ಸದಸ್ಯರು ಬಿಜೆಪಿ ಅಧ್ಯಕ್ಷನ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ – ಆರ್. ಅಶೋಕ್

    ನಗರದಲ್ಲಿ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎಂಎಲ್‌ಸಿ ಪ್ರಾಣೇಶ್ ನಗರಸಭೆಯ ಅವಿಶ್ವಾಸ ಸಭೆಗೆ ಗೈರಾಗಿದ್ದರು. ಇದು ಕೂಡ ವರಸಿದ್ಧಿ ವೇಣುಗೋಪಾಲ್‍ಗೆ ವರವಾಗಿ ಪರಿಣಮಿಸಿತ್ತು. ಇನ್ನು ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸಭೆಯಲ್ಲಿ ಭಾಗಿಯಾಗಿ ವರಸಿದ್ಧಿ ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಟಸ್ಥವಾಗುವ ಮೂಲಕ ಬೆಂಬಲ ಸೂಚಿಸಿದ್ದರು. ಬಿಜೆಪಿ ನಗರಸಭೆ ಸದಸ್ಯರು ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡನೆ ಮಾಡುವಲ್ಲಿ ವಿಫಲವಾಗುವ ಮೂಲಕ ಅಧಿಕಾರ ಕಳೆದುಕೊಂಡಿದೆ. ದಶಕಗಳಿಂದ ಕಾಫಿನಾಡ ನಗರಸಭೆ ಮೇಲೆ ಹಿಡಿತ ಸಾಧಿಸಿದ್ದ ಬಿಜೆಪಿಗೆ ತಮ್ಮ ಪಕ್ಷದ ಅಧ್ಯಕ್ಷನಿಂದಲೇ ಮುಖಭಂಗವಾಗಿದ್ದು, ತೀವ್ರ ಹಿನ್ನೆಡೆಯಾಗಿದೆ. ಬಿಜೆಪಿಯೊಳಗಿನ ನಗರಸಭೆ ಅಧ್ಯಕ್ಷರ ಕುರ್ಚಿಗಾಗಿ ಕಿತ್ತಾಟದಿಂದ ಅಧಿಕಾರ ಕಳೆದುಕೊಂಡಿದ್ದು ಕಾಂಗ್ರೆಸ್ ನಗರಸಭೆಯನ್ನ ಬಿಜೆಪಿ ಅಧ್ಯಕ್ಷನ ಮೂಲಕವೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬುದ್ಧಿವಂತಿಕೆಯ ಹೆಜ್ಜೆ ಇಟ್ಟಿದೆ.

  • ರಾಜ್ಯ ಸರ್ಕಾರದ್ದು ಹುಲಿ ಉಗುರು ಎಂಬ ಸದಾರಮೆ ನಾಟಕ: ಸಿ.ಟಿ. ರವಿ ವಾಗ್ದಾಳಿ

    ರಾಜ್ಯ ಸರ್ಕಾರದ್ದು ಹುಲಿ ಉಗುರು ಎಂಬ ಸದಾರಮೆ ನಾಟಕ: ಸಿ.ಟಿ. ರವಿ ವಾಗ್ದಾಳಿ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ್ದು ಹುಲಿ ಉಗುರು (Tiger Claw Row) ಎಂಬ ಸದಾರಮೆ ನಾಟಕ. ರಾಜ್ಯದ ಜನರ ದಾರಿ ತಪ್ಪಿಸಲು ಕಾಂಗ್ರೆಸ್‌ ಹುಲಿ ಉಗುರಿನ ನಾಟಕವಾಡುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ (C.T.Ravi) ವಾಗ್ದಾಳಿ ನಡೆಸಿದ್ದಾರೆ.

    ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸಿ.ಟಿ.ರವಿ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಂತರ ಹಣದ ಚರ್ಚೆಯ ದಾರಿ ತಪ್ಪಿಸುವ ನಾಟಕವನ್ನು ಕಾಂಗ್ರೆಸ್‌ ಆಡಿದೆ. ಜನರ ಆಕ್ರೋಶಕ್ಕೆ ವಿರಾಮ ಹಾಕಲು, ಕಮಿಷನ್ ಕಲೆಕ್ಟರ್ (CM), ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಅವರ ಹುಲಿ ಉಗುರು ನಾಟಕ ಇದು ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್‌ ಕೇಸ್‌ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು

    ಜನ ನೂರಾರು ವರ್ಷಗಳಿಂದ ಹುಲಿ ಉಗುರನ್ನ ಆಭರಣವಾಗಿ ಧರಿಸಿದ್ದಾರೆ. ಇಲಾಖೆಗೆ ಕಾಣದ್ದೇನು ಅಲ್ಲ. ಈಗ ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಗೆ ಜನ ಆಕ್ರೋಶಿತರಾಗಿದ್ದಾರೆ. ರೈತರಿಗೆ ವಿದ್ಯುತ್ ಪೂರೈಸುತ್ತಿಲ್ಲ, ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆ ವೈಫಲ್ಯ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ, ಪಂಚರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆ ಪಾಲು, ಸರ್ಕಾರಕ್ಕೆ ಜನರ ಎದುರು ತಲೆಯೆತ್ತಿ ನಡೆಯಲಾಗುತ್ತಿಲ್ಲ ಎಂದು ಕುಟುಕಿದ್ದಾರೆ.

    ಒಮ್ಮೆ ನಿಮ್ಮ ಮಂತ್ರಿಮಂಡಲದ ಒಳಗೆ ಇಣುಕಿ ನೋಡಿ, ಕಾಡು ಪ್ರಾಣಿ ಬಂಧನದಲ್ಲಿರಿಸಿ ಹತ್ಯೆ ಮಾಡಿದವರು ಸಿಕ್ಕಿಯಾರು. ಜನಸಾಮಾನ್ಯರಿಗೆ FSL ವರದಿ ಬರುವುದಕ್ಕೆ ಮುಂಚೆಯೇ ಬಂಧನ. ಸೆಲೆಬ್ರಿಟಿಗಳಿಗೆ ನೋಟಿಸ್… ಇದೆಲ್ಲವೂ ಈ ನಾಟಕದ ಭಾಗವಲ್ಲವೇ? ಇದು ನಿಮ್ಮ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹುಲಿ ಉಗುರಿನ ಕಂಟಕ – ಅರಣ್ಯಾಧಿಕಾರಿ ಬಂಧನ

    ಹುಲಿ ಉಗುರು ಪೆಂಡೆಂಟ್‌ ಧರಿಸಿದ ಆರೋಪದಡಿ ವರ್ತೂರು ಸಂತೋಷ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಪೆಂಡೆಂಟ್‌ ಧರಿಸಿದ್ದ ಆರೋಪ ಸ್ಯಾಂಡಲ್‌ವುಡ್‌ ನಟರಾದ ದರ್ಶನ್‌, ಜಗ್ಗೇಶ್‌ ಮೇಲೂ ಕೇಳಿಬಂದಿತ್ತು. ಈ ವೇಳೆ ಅರಣ್ಯಾಧಿಕಾರಿಗಳು ನಟ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್‌ ಕೊಟ್ಟಿದ್ದರು. ಪ್ರಕರಣ ಸಂಬಂಧ ಈಗ ವರ್ತೂರು ಸಂತೋಷ್‌ಗೆ ಜಾಮೀನು ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿದು ಹಾಳಾಗಿ ಹೋಗಿ ಅನ್ನೋದು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಸಿ.ಟಿ. ರವಿ

    ಕುಡಿದು ಹಾಳಾಗಿ ಹೋಗಿ ಅನ್ನೋದು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಸಿ.ಟಿ. ರವಿ

    ಬೆಂಗಳೂರು: ಕುಡಿದು ಹಾಳಾಗಿ ಹೋಗಿ ಅನ್ನೋದು ಕಾಂಗ್ರೆಸ್‌ನ (Congress) 6ನೇ ಗ್ಯಾರಂಟಿ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹರಿಹಾಯ್ದರು.

    ಹಳ್ಳಿ ಹಳ್ಳಿಗೂ ಮದ್ಯದ ಲೈಸೆನ್ಸ್ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಂಡತಿಗೆ ಕೊಟ್ಟ ಎರಡು ಸಾವಿರ ವಾಪಸ್ ಪಡೆಯಲು ಊರೂರಿಗೆ ಮದ್ಯದಂಗಡಿ ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಮದ್ಯದ ವಿಚಾರದಲ್ಲಿ ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಅನ್ನೋ ನಿಲುವು. ಹಳ್ಳಿಗಳಿಗೆ ಈಗಾಗಲೇ ಅನಧಿಕೃತವಾಗಿ ಮದ್ಯ ಪೂರೈಕೆ ಆಗ್ತಿದೆ. ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೂ ಇವರು ತಮ್ಮನ್ನು ಗಾಂಧಿವಾದಿಗಳು ಅಂತಾರೆ. ಈ ಗಾಂಧಿವಾದಿಗಳು ಊರೂರಿಗೆ ಮದ್ಯದಂಗಡಿ ಲೈಸೆನ್ಸ್ ಕೊಡ್ತಿದಾರೆ. ಇದು ಆರನೇ ಗ್ಯಾರಂಟಿ ಇರಬೇಕು ಎಂದು ಲೇವಡಿ ಮಾಡಿದರು.

    ಕಾಂಗ್ರೆಸ್ ಸರ್ಕಾರಕ್ಕೆ ಹೊರಗಿನ ಶಕ್ತಿಗಳಿಂದ ಪರಿಣಾಮ ಆಗಲ್ಲ. ಹೊರಗಿನ ಶಕ್ತಿಗಳಿಂದ ಅವರ ಸರ್ಕಾರ ಬೀಳಿಸುವುದು ಕಷ್ಟ. ಆದರೆ ಒಳಗಡೆ ಏನು ಬೇಕಾದರೂ ಆಗಬಹುದು. ಒಳಗಡೆ ಬಂಡಾಯ ಎದ್ದರೆ ಅದು ನಮ್ ಕೈಯಲ್ಲಿ ಇಲ್ಲ. ಕಾಂಗ್ರೆಸ್‌ಗೆ ಬಿಜೆಪಿ, ಜೆಡಿಎಸ್‌ನಿಂದ ಅಪಾಯ ಇಲ್ಲ. ಅಪಾಯ ಇದ್ದರೆ ಅದು ಒಳಗಡೆಯಿಂದ ಮಾತ್ರ. ಹೊರಗಡೆಯಿಂದ ಅಪಾಯ ಇಲ್ಲ. ಸರ್ಕಾರದ ಪತನ ಒಳಗಿಂದಲೇ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ

    ಇಸ್ರೇಲ್ ಮೇಲೆ ದಾಳಿ ಕುರಿತು ಮಾತನಾಡಿ, ಹಮಾಸ್ ಹೆಸರಿನ ಮುಸ್ಲಿಂ ಉಗ್ರಗಾಮಿಗಳು ಯೋಜನಾಬದ್ಧವಾಗಿ ಇಸ್ರೇಲ್ ಮೇಲೆ ದಾಳಿ ಮಾಡಿವೆ. ಇಷ್ಟಾದ ಮೇಲೂ ಶಾಂತಿಗಾಗಿ ಇಸ್ಲಾಂ ಅಂತಾರೆ. ಹೀಗಂತ ಅವರು ಹೇಳ್ತಾರೆ ನಾವು, ನೀವು ನಂಬಬೇಕು. ಜಗತ್ತಿನ 90% ಭಾಗ ಉಗ್ರವಾದಿ ಚಟುವಟಿಕೆಗಳು ಇಸ್ಲಾಂ ಹೆಸರಲ್ಲಿ ನಡೆದಿವೆ. 10% ಭಾಗ ಎಡಪಂಥ ಉಗ್ರ ಚಟುವಟಿಕೆಗಳು ನಡೆದಿವೆ. ಇವರಿಬ್ಬರದ್ದೇ ಅತೀ ದೊಡ್ಡ ಪಾಲು ಇರೋದು. ಯಾಕೆ ಹೀಗೆ ಅಂತ ಗಂಭೀರ ಆಲೋಚನೆ ಆಗಬೇಕಿದೆ. ಭಾರತ ಇವರ ಉಪಟಳಕ್ಕೆ ಬಹಳ ದೊಡ್ಡ ನಷ್ಟ ಅನುಭವಿಸಿದೆ. ಈಗ ಬಲಾಢ್ಯ ಸರ್ಕಾರ ಇದೆ ಅಂತ ದೇಶದಲ್ಲಿ ಉಗ್ರ ಚಟುವಟಿಕೆ ನಿಗ್ರಹವಾಗಿದೆ ಎಂದು ಸಮರ್ಥಿಸಿಕೊಂಡರು.

    ಮುಂದೆ ಯಾವಾಗ ಬೇಕಾದರೂ ತಲೆಯೆತ್ತಬಹುದು. ಇದು ಒಂದು ರೀತಿ ರಕ್ತ ಬೀಜಾಸುರನ ಸಂತತಿ ಥರ. ಮೂಲ ಪ್ರಚೋದನೆ ಬಗ್ಗೆ ಆಲೋಚಿಸಬೇಕಿದೆ. ಭಾರತ ಸೇರಿ ಅನೇಕ ದೇಶಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆ. ನಮ್ಮ ಪ್ರಧಾನಿ ಇಸ್ರೇಲ್ ಜತೆ ನಿಲ್ಲೋದಾಗಿ ಹೇಳಿರೋದು ಸಕಾರಾತ್ಮಕ ಕ್ರಮ. ಇಂಥ ಭಯೋತ್ಪಾದನ ಚಟುವಟಿಕೆ ಖಂಡಿಸುವಲ್ಲೂ ಮೀನಮೇಷ ಎಣಿಸುವ ಕಾಲ ಇತ್ತು. ಅಲ್ಲೂ ಲಾಭ ನಷ್ಟ ಎಣಿಸುವ ಪರಿಸ್ಥಿತಿ ಇತ್ತು. ಈಗ ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಹಾಕುವ ಪರಿಸ್ಥಿತಿ ಇಲ್ಲ. ಇಂಥ ಭಯೋತ್ಪಾದಕ ಚಟುವಟಿಕೆಗಳ ಮೂಲ ಬೇರು ಕಿತ್ತು ಹಾಕುವ ಕೆಲಸ ಆಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ

    ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ

    – ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್ ಎಂದ ಮಾಜಿ ಸಚಿವ

    ಬೆಂಗಳೂರು: ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ ಎಂದು ಮಾಜಿ ಸಚಿವ ಸಿ.ಟಿ. ರವಿ (C.T.Ravi) ಪ್ರಶ್ನಿಸಿದರು.

    ಬಿಜೆಪಿ (BJP) ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತಾಂಧರ ಕಟೌಟ್ ಹಾಕಿದ ಉದ್ದೇಶ ಏನು? ವಿಭಜನೆಯಿಂದ ಇನ್ನೂ ನೀವು ಸಮಾಧಾನ ಆಗಿಲ್ಲ ಅಂತ ಅರ್ಥಾನಾ? ಭಾರತದಲ್ಲಿ ಮತ್ತೊಂದು ವಿಭಜನೆಗೆ ಸರ್ಕಾರ ಪ್ರೋತ್ಸಾಹ ಕೊಡ್ತಿದೆಯಾ? ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ? ಈಗ ಎಲ್ಲಿ ಬಚ್ಚಿಟ್ಕೊಂಡಿದ್ದೀರಿ ಮರಿ ಖರ್ಗೆ? ಹೊರಗೆ ಬಂದು ಮಾತಾಡಿ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

    ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದರು. ಕುವೆಂಪು. ಅವರು ಜನಿಸಿದ ಜಿಲ್ಲೆಯಲ್ಲೇ ಮತಾಂಧರ ಅಟ್ಟಹಾಸಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ರು. ಶಾಂತಿಯ ನಾಡು ಹಾಳು ಮಾಡಲು ಒಬ್ಬ ಟಿಪ್ಪು ಸಾಲಲ್ಲ ಅಂತ ಈಗ ಔರಂಗಜೇಬ್ ಮೆರೆಸುವ ಕೆಲಸ ಆಗ್ತಿದೆ. ಮತಾಂಧರನ್ನು ಮೆರೆಸುವ ಕೆಲಸಕ್ಕೆ ಸರ್ಕಾರ ಕುಮ್ಮಕ್ಕು ಕೊಡ್ತಿದೆ ಎಂದು ಕಿಡಿಕಾರಿದರು.

    ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್. ಇಂಥವನನ್ನ ಮೆರೆಸೋದು ಸರಿಯಾ? ಪೈಗಂಬರ್ ಶಾಂತಿಯ ಸಂದೇಶ ಕೊಟ್ರು ಅಂತೀರ. ಇದೇನಾ ಶಾಂತಿಯ ಸಂದೇಶ? ಮುಂದಿನ ದಿನಗಳಲ್ಲಿ ಅಫಜಲ್ ಗುರು, ಜಿನ್ನಾ, ಬಿನ್ ಲಾಡೆನ್‌ರನ್ನೂ ಮೆರೆಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಂಭೀರ ಪ್ರಕರಣದಲ್ಲಿ ಅವರು ಶಾಸಕನ ಮನೆಗೆ ಬೆಂಕಿ ಹಾಕ್ತಾರೆ. ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಾಕ್ತಾರೆ. ಅಂಥ ಗಂಭೀರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳ ಬಿಡುಗಡೆಗೆ ತನ್ವೀರ್ ಸೇಠ್ ಪತ್ರ ಬರೀತಾರೆ. ಆ ಸಾಲಿಗೆ ಸೇರುವ ಹುಬ್ಬಳ್ಳಿ ಗಲಭೆ ಆರೋಪಿಗಳ ಬಿಡುಗಡೆಗೆ ಖುದ್ದು ಡಿಸಿಎಂ ಪತ್ರ ಬರೀತಾರೆ. ಮತಾಂಧ ಶಕ್ತಿಗಳಿಗೆ ಸರ್ಕಾರವೇ ಕುಮ್ಮಕ್ಕು ಕೊಡ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನಾವು ಸಾಬ್ರು ಗೊತ್ತಲ್ಲ; ಒಂದಾ ನಾವು, ಇಲ್ಲಾ ಅವ್ರು ಸಾಯ್ಬೇಕು- ಪೊಲೀಸ್ರ ಮುಂದೆ ಅವಾಜ್ ಹಾಕಿದ್ದವ ಅರೆಸ್ಟ್

    ಸಿದ್ದರಾಮಯ್ಯ ಋಣ ತೀರಿಸುವ ಮಾತಾಡ್ತಾರೆ. ರಾಜ್ಯದ ಋಣದ ಬಗ್ಗೆ ಅವರು ಮಾತಾಡಲಿಲ್ಲ. ಮುಸ್ಲಿಮರ ಋಣ ತೀರಿಸುವ ಬಗ್ಗೆ ಸಿದ್ದರಾಮಯ್ಯ ಮಾತಾಡ್ತಾರೆ. ಹತ್ತು ಸಾವಿರ ಕೋಟಿ ಮೀಸಲಿಡೋದಾಗಿ ಹೇಳ್ತಾರೆ. ಮುಸ್ಲಿಮರು ಮಾತ್ರ ಅವರಿಗೆ ಮತ ಹಾಕಿದ್ದಾರಾ? ನಮಗೆ ಕೋಮುವಾದಿ ಅಂತೀರಲ್ಲ, ಮುಸ್ಲಿಮರ ಓಲೈಕೆ ಕೋಮುವಾದಿ ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.

    ಟಿಪ್ಪು ಸುಲ್ತಾನ್ ಖಡ್ಗದ ಮೇಲೆ ಕಾಫೀರರ ವಿರುದ್ಧ ನನ್ನ ಯುದ್ಧ ಅಂತ ಬರೆಯಲಾಗಿದೆ. ಕಾಫೀರರು ಅಂದ್ರೆ ಯಾರು? ಅವರ ಪ್ರಕಾರ ಮುಸ್ಲಿಮರಲ್ಲದವರು ಕಾಫೀರರು ಎಂದು ಹೇಳಿದರು.

    ನಿನ್ನೆ 135 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಈ ಮೂಲಕ ನಾನೂ ಇದೀನಿ ಅಂತ ತೋರಿಸಿಕೊಳ್ತಿದ್ದಾರಾ ಗೃಹ ಸಚಿವರು? ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರದಲ್ಲಿ ಇದರ ಟ್ರೈಲರ್ ಮಾತ್ರ ಈಗ ತೋರಿಸಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಕುಡಚಿ ರಾಜೀವ್, ಪರಿಷತ್ ಸದಸ್ಯ ದೇವೇಗೌಡ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತಾಗಿದೆ: ಸಿ.ಟಿ.ರವಿ

    ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತಾಗಿದೆ: ಸಿ.ಟಿ.ರವಿ

    ಬೆಂಗಳೂರು: ಕಾವೇರಿ (Cauvery Water Dispute) ವಿಚಾರದಲ್ಲಿ ಸುಪ್ರೀಂ ಕೋರ್ಟ್‌ (Supreme Court) ಕೊಟ್ಟ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹೇಳಿದರು.

    ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬೇಕೆಂಬ ದುರುದ್ದೇಶ ನಮಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಂದಿಡಬೇಕಾದ ಉದ್ದೇಶ ಇದೆ. ನಾವು 42% ರಷ್ಟು ಮಳೆ ಕೊರತೆ ಇದ್ದರು ಕೂಡ, ವಾಸ್ತವ ಪರಿಸ್ಥಿತಿ ವಿವರಿಸಲಿಲ್ಲ. ಸಂಕಷ್ಟದ ಸ್ಥಿತಿಯಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಶಾಕ್‌ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್‌ ನೀರು ಹರಿಸುವಂತೆ ಸೂಚನೆ

    ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ಸಹಾಯ ಆಗಲಿಲ್ಲ. ತಮಿಳುನಾಡು ಕೇಳುವ ಮುಂಚೆಯೇ ಜೂನ್‌ನಿಂದಲೇ ನೀರು ಬಿಡಲು ಶುರು ಮಾಡಿದ್ದೇಕೆ? ನನಗೆ ಸಂಶಯ ಇರೋದು, ಡಿಎಂಕೆ ಬೆದರಿಕೆ ಹಾಕಿರಬಹುದಾ? ಹೈಕಮಾಂಡ್ ಒತ್ತಡ ಇತ್ತಾ? ನೀರು ಬಿಟ್ಟು ಪಂಚಾಯಿತಿ ಕರೆಯುವಂತೆ ಮಾಡಿದ್ರಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

    ನೀರು ಬಿಟ್ಟ ಮೇಲೆ ಸರ್ವಪಕ್ಷ ಸಭೆ ಕರೆದ್ರಿ. ನೀರು ಬಿಟ್ಟ ಮೇಲೆ ಸಂಸದರ ಸಭೆ ಕರೆದ್ರಿ. ಎಲ್ಲ ಆದ್ಮೇಲೆ ನಿಮ್ಮ ಬೇಡಿಕೆ ಮುಂದಿಟ್ಟಿದ್ದೀರಿ. ಕಾಂಗ್ರೆಸ್ ರಾಜಕೀಯ ನಿರ್ಣಯಗಳಿಗಾಗಿ ಕರ್ನಾಟಕ ಬಲಿಪಶು ಮಾಡಿದ್ದಾರೆ. ವಾಸ್ತವಿಕ ಸಂಕಷ್ಟದ ಪರಿಸ್ಥಿತಿಯನ್ನ ಸುಪ್ರೀಂ ಕೋರ್ಟ್‌ಗೂ ಮನವರಿಕೆ ಮಾಡಿಕೊಡಲು ಆಗಲಿಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯಿಂದ ಪ್ರತ್ಯೇಕ ಗಣೇಶನ ಪ್ರತಿಷ್ಠಾಪನೆ – ವಿಸರ್ಜನೆ ವೇಳೆ ಗುಂಪು ಘರ್ಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀವೇನಾದರೂ ಆಪರೇಷನ್‌ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೀವಿ: ಸಿ.ಟಿ. ರವಿ

    ನೀವೇನಾದರೂ ಆಪರೇಷನ್‌ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೀವಿ: ಸಿ.ಟಿ. ರವಿ

    ಬೆಂಗಳೂರು: ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡುತ್ತೇವೆ ಎಂದು ಕಾಂಗ್ರೆಸ್‌ಗೆ ಮಾಜಿ ಸಚಿವ ಸಿ.ಟಿ. ರವಿ (C.T. Ravi) ಎಚ್ಚರಿಕೆ ನೀಡಿದರು.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಎಸ್.ಟಿ. ಸೋಮಶೇಖರ್ ಅವರು ಹಿರಿಯ, ಅನುಭವಿ ಶಾಸಕರು. ಇತ್ತೀಚೆಗೆ ಕೇಳಿ ಬರುತ್ತಿರುವ ಊಹಾಪೋಹಾಗಳ‌ ಬಗ್ಗೆ ಚರ್ಚಿಸಿದ್ದಾರೆ. ಅವರ ಬೆಂಬಲಿಗರನ್ನು ಕಾಂಗ್ರೆಸ್‌ನವರು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿ, ಸ್ಥಳೀಯ ಚುನಾವಣೆಗಳಲ್ಲಿ ಕೆಟಗರಿ ಆಸೆ ತೋರಿಸಿ ಸೆಳೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಗೆದ್ದರು, ಅಧಿಕಾರಕ್ಕೆ ಏರಿದರು. ಒಂದು ಸ್ಥಿರವಾದ ಸರ್ಕಾರ ಕೊಡಲಿ ಅವರು. ನಿಮಗೆ ಸ್ಪಷ್ಟ ಬಹುಮತ ಇದ್ದರೂ ಅತಿಯಾಗಿ ಮಾಡಲು ಹೋಗಬೇಡಿ. ನಾವೇನೂ ಸುಮ್ನೆ ಕೂರುವ ಜನ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?

    ‌ನಾವೇನಾದರೂ ಮಾಡಿದರೆ ನೀವು ಮೇಲೇಳಲೂ ಆಗಲ್ಲ. ನಿಮಗೆ ನಮ್ಮವರನ್ನು ಕರೆದುಕೊಳ್ಳುವ ಅನಿವಾರ್ಯತೆ ಏನಿದೆ? ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದ್ರೆ ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೇವೆ ಎಂದು ಹೇಳಿದರು.

    ನಮ್ಮಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಅವರ ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಅವರಿಗೆ ಆಗ್ತಿಲ್ಲ. ಅವರು ಅತಿರೇಕಕ್ಕೆ ಕೈ ಹಾಕಿದರೆ ನಮಗೆ ಮುಂದೆ ಏನ್ ಮಾಡ್ಬೇಕು ಅಂತ ಗೊತ್ತು. ಚೆಸ್ ಆಟ ಏಕಮುಖ ಅಲ್ಲ. ನಮಗೆ ಚೆಕ್ ಮೇಟ್ ಕೊಡಲು ಬಂದ್ರೆ, ನಮಗೂ ಚೆಕ್ ಮೇಟ್ ಕೊಡಲು ಗೊತ್ತು. ನಾವು ಚೆಕ್ ಮೇಟ್ ಮಾಡಿದ್ರೆ ಸಣ್ಣಪುಟ್ಟ ಸೈನಿಕರಿಗೆ ಮಾಡಲ್ಲ. ನೇರ ರಾಜನಿಗೇ ಚೆಕ್ ಮೇಟ್ ಮಾಡ್ತೀವಿ ಎಂದು ಮಾರ್ಮಿಕವಾಗಿ ಮಾತನಾಡಿದರು. ಇದನ್ನೂ ಓದಿ: ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್

    ನಾನು ಎಸ್. ಟಿ. ಸೋಮಶೇಖರ್ ಜತೆ ಫೋನಿನಲ್ಲಿ ಮಾತಾಡಿದ್ದೆ. ಅವರು ಇವತ್ತು ಸಿಕ್ತೀನಿ ಅಂದಿದ್ದರು. ಅದಕ್ಕಾಗಿ ಪಕ್ಷದ ಕಚೇರಿಯಲ್ಲಿ ಅವರ ಜತೆ ಒಂದೂವರೆ ಗಂಟೆ ಮಾತಾಡಿದ್ದೇನೆ. ಅವರು ಒಂದಷ್ಟು ಸಮಸ್ಯೆಗಳನ್ನು ಹೇಳಿಕೊಂಡರು. ಅದೇನು ಬಗೆಹರಿಸದಂಥ ಸಮಸ್ಯೆ ಅಲ್ಲ. ನಾಯಕತ್ವ ಇಲ್ಲದ ಸ್ಥಿತಿಗೆ ನಾವು ಬಂದಿಲ್ಲ. ನಿರ್ಣಯ ಕೈಗೊಳ್ಳದ ಸ್ಥಿತಿಗೆ ನಾವು ಬಂದಿಲ್ಲ ಎಂದರು.

    ಕೇಂದ್ರದ ಕೆಲ ಯೋಜನೆಗಳಲ್ಲಿ ಅಕ್ರಮ‌ ಬಗ್ಗೆ ಸಿಎಜಿ ವರದಿ ವಿಚಾರವಾಗಿ ಮಾತನಡಿ, ರೀಡೂ ಪ್ರಕರಣದಲ್ಲಿ ನೀವು ಯಾವ ಕ್ರಮ ತಗೊಂಡ್ರಿ? ಮೊದಲು ರೀಡೂ ಕೇಸ್‌ನಲ್ಲಿ ಕ್ರಮ ವಹಿಸಿ. ರಾಜ್ಯದಲ್ಲೂ ಸಿಎಜಿ ವರದಿ ಕೊಟ್ಟಿದೆ, ಅಕ್ರಮ ಆಗಿದೆ ಅಂದಿದ್ದಾರೆ. ನೀವು ಇದರ ಬಗ್ಗೆ ಕ್ರಮ ಕೈಗೊಳ್ಳಿ ಮೊದಲು ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲುಷಿತ ನೀರು ಸೇವಿಸಿ ಮಡಿದವರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಕೊಡಿ: ಸಿ.ಟಿ. ರವಿ ಆಗ್ರಹ

    ಕಲುಷಿತ ನೀರು ಸೇವಿಸಿ ಮಡಿದವರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಕೊಡಿ: ಸಿ.ಟಿ. ರವಿ ಆಗ್ರಹ

    ಚಿತ್ರದುರ್ಗ: ಕಲುಷಿತ ನೀರು (Contaminated Water Tragedy) ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸರ್ಕಾರಕ್ಕೆ ಮಾಜಿ ಶಾಸಕ ಸಿ.ಟಿ. ರವಿ (C.T. Ravi) ಒತ್ತಾಯಿಸಿದರು.

    ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಬಡಾವಣೆಗೆ ಭೇಟಿ ನೀಡಿದ ಅವರು ಆಸ್ಪತ್ರೆಗೆ ತೆರಳಿ ಅಸ್ವಸ್ಥರಾಗಿದ್ದ ಜನರ ಆರೋಗ್ಯ ವಿಚಾರಿಸಿದರು. ಸಿ.ಟಿ. ರವಿ ಅವರ ಜೊತೆ ಮಾಜಿ ಸಚಿವ ಬಿ.ಸಿ. ನಾಗೇಶ್‌, ಮಾಜಿ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ, ಎಂಎಲ್‌ಸಿ ಕೆ.ಎಸ್‌. ನವೀನ್‌ ಕೂಡ ಇದ್ದರು. ಇದನ್ನೂ ಓದಿ: ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

    ಅಸ್ವಸ್ಥರ ಆರೋಗ್ಯ ವಿಚಾರಣೆ ಬಳಿಕ ಸಿ.ಟಿ.ರವಿ ಪ್ರತಿಕ್ರಿಯಿಸಿ, ರಾಜ್ಯದ ಹಲವೆಡೆ ಈ ರೀತಿಯ ಪ್ರಕರಣ ನಡೆದಿವೆ. ರಾಜ್ಯ ಸರ್ಕಾರ ಈವರೆಗೆ ಎಚ್ಚೆತ್ತುಕೊಂಡಿಲ್ಲ. ಸಾವಿನ ಬಳಿಕ ಪರಿಹಾರ ಕೊಡುವುದು ಒಂದು ಭಾಗ. ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ದರಿದ್ರ ಬಂದಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಆ ದರಿದ್ರ ಅವರಿಗೆ ಬರೋದು ಬೇಡ. ಅದು ಒಳ್ಳೆಯದೂ ಅಲ್ಲ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಕನಸು ಭಗ್ನಗೊಂಡ ಹೆಚ್‌ಡಿಕೆ, ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ: ದಿನೇಶ್‌ ಗುಂಡೂರಾವ್‌ ತಿರುಗೇಟು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ (State President) ಆಯ್ಕೆ ಸಂಬಂಧ ಒಂದಷ್ಟು ಪೂರಕ ಬೆಳವಣಿಗೆಗಳು ಚುರುಕು ಪಡೆದುಕೊಂಡಿವೆ. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ (C.T.Ravi) ಹೆಸರು ಕೈಬಿಟ್ಟಿರುವ ವರಿಷ್ಠರು, ಅವರಿಗೆ ಸೋಮವಾರ ದೆಹಲಿಗೆ (Delhi) ಬುಲಾವ್ ಕೊಟ್ಟಿರೋದು ಕುತೂಹಲ ಮೂಡಿಸಿದೆ.

    ಈ ಮಧ್ಯೆ ಭಾನುವಾರ ಬೆಳಗ್ಗೆ ಆರ್‌ಎಸ್‌ಎಸ್ (RSS) ಮುಖಂಡರನ್ನು ಸಿ.ಟಿ ರವಿ ಭೇಟಿ ಮಾಡಿರುವುದು ಈ ನಿಟ್ಟಿನಲ್ಲಿ ಇನ್ನಷ್ಟು ಪುಷ್ಠಿ ಕೊಟ್ಟಿದೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಮೇಲೆ ಗಮನ ಹರಿಸುವ ಲಕ್ಷಣ ಕಾಣಿಸುತ್ತಿದೆ. ರಾಜ್ಯ ಬಿಜೆಪಿಗೆ ಮುಂದಿನ ಸಮರ್ಥ ಸಾರಥಿಯ ಆಯ್ಕೆಗೆ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಸುಳಿವುಗಳು ಸಿಗುತ್ತಿದ್ದು, ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಮುಂದಿನ ಬಿಜೆಪಿ ಸಾರಥಿಯಾಗಿ ಮಾಜಿ ಶಾಸಕ ಸಿ.ಟಿ ರವಿ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ:‌ ಸರ್ಕಾರದಿಂದ ವರ್ಗಾವಣೆ ದಂಧೆ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ: ಬೊಮ್ಮಾಯಿ

    ಶನಿವಾರವಷ್ಟೇ ಅವರ ಹೆಸರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್ ಕೊಟ್ಟಿರೋದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ, ತಾವೀಗ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಷ್ಟೇ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲದಿದ್ದರೂ ವರಿಷ್ಠರು ಕೊಡುವ ಯಾವುದೇ ಜವಾಬ್ದಾರಿ ನಿಭಾಯಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಸೋಮವಾರ ದೆಹಲಿಗೆ ಬರುವಂತೆ ಸಿ.ಟಿ ರವಿಗೆ ಹೈಕಮಾಂಡ್ ನಾಯಕರು ಬುಲಾವ್ ಕೊಟ್ಟಿದ್ದಾರೆ. ಸೋಮವಾರ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಸಿ.ಟಿ ರವಿ ಮಾತುಕತೆ ನಡೆಸಲಿದ್ದಾರೆ. ಇನ್ನು ಇದೇ ವೇಳೆ ಭಾನುವಾರ ಬೆಳಗ್ಗೆ ಸಿ.ಟಿ ರವಿ ಬೆಂಗಳೂರಿನಲ್ಲಿ ಹಿರಿಯ ಆರ್‌ಎಸ್‌ಎಸ್ ಮುಖಂಡರನ್ನೂ ಭೇಟಿ ಮಾಡಿ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಮತ್ತು ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತ ಸಮೀಕರಣದ ಜೊತೆಗೆ ಎರಡೂ ಹುದ್ದೆಗಳಿಗೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕರನ್ನೇ ನೇಮಕ ಮಾಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕಷ್ಟೇ ನೇಮಕ ಆಗುತ್ತಾ ಅಥವಾ ಉಭಯ ಸದನಗಳ ವಿಪಕ್ಷ ನಾಯಕರ ಆಯ್ಕೆಯೂ ಫೈನಲ್ ಆಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಪ್ರವಾಹ ಬಂದ್ರೂ ವೀಡಿಯೋ ಸಂವಾದ ಬಿಟ್ರೆ ಸಿಎಂ ಏನೂ ಮಾಡಿಲ್ಲ: ಬೊಮ್ಮಾಯಿ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಸಿ.ಟಿ ರವಿ

    ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಸಿ.ಟಿ ರವಿ

    ಬೆಂಗಳೂರು: ನಾನು ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ವರಿಷ್ಠರು ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T.Ravi) ಸ್ಪಷ್ಟಪಡಿಸಿದರು.

    ನಗರದಲ್ಲಿ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಾರೆ ಎನ್ನುವ ವಿಚಾರ ಗೊತ್ತಿಲ್ಲ. ನಾನು ಈಗ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ. ರಾಜ್ಯಾಧ್ಯಕ್ಷ ಸ್ಥಾನ ಅನ್ನೋದು ಒಂದು ದೊಡ್ಡ ಜವಾಬ್ದಾರಿ. ಅದನ್ನು ಕೇಳಿ ಪಡೆಯಲು ಆಗಲ್ಲ. ಭವಿಷ್ಯ ನಿರೀಕ್ಷೆ ಮತ್ತು ಆಕಾಂಕ್ಷೆ ಇಲ್ಲ. ಭವಿಷ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು, ಯಾವಾಗ ಕೊಡಬೇಕು ಅಂತ ದೊಡ್ಡವರು ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.ರವಿಗೆ ಕೊಕ್ – ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?

    ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟ ವಿಚಾರವಾಗಿ ಮಾತನಾಡಿ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಹುದ್ದೆಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ನಾನು ಯಾವಾಗಲೂ ಕಾರ್ಯಕರ್ತ. ಆಗಲೂ, ಈಗಲೂ ನಾನು ಕಾರ್ಯಕರ್ತ. ಈಗಲೂ ಅದೇ ಸೇವಾಭಾವದಿಂದ ಕೆಲಸ ಮಾಡ್ತೀನಿ ಎಂದು ಹೇಳಿದರು.

    ಉಡುಪಿ ವೀಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಏನೂ ಇಲ್ಲ ಅಂತಿದ್ದರೆ ಆ ವಿದ್ಯಾರ್ಥಿನಿಯರನ್ನು ಯಾಕೆ ಸಸ್ಪೆಂಡ್ ಮಾಡಿದ್ರು? ಪ್ರಕರಣದಲ್ಲಿ ಹಲವು ಸಂಶಯಗಳಿವೆ. ಸರಿಯಾದ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ವಿಸಿ ನಾಲೆಗೆ ಕಾರು ಉರುಳಿ ನಾಲ್ವರ ಸಾವು ಪ್ರಕರಣ – ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಘೋಷಣೆ

    40% ಕಮಿಷನ್ ಆರೋಪ ಬಗ್ಗೆ ತನಿಖೆ ನಿರ್ಧಾರ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಖಂಡಿತ ತನಿಖೆ ಮಾಡಲಿ, ಸತ್ಯ ಬಯಲಿಗೆಳೆಯಲಿ. 40% ಯಾರು ಯಾರಿಗೆ ಕೊಟ್ಟಿದ್ದಾರೆ ಅಂತ ಯಾರಿಗೂ ಮಾಹಿತಿ ಇಲ್ಲ. ಯಾರ ಮೇಲೆ ಆರೋಪ ಇತ್ತು ಅಂತ ಸರ್ಕಾರ ಬಹಿರಂಗ ಪಡಿಸಲಿ. ಹಾಗೆಯೇ ನೈಸ್ ಅಕ್ರಮ, ರೀಡೂ ಅಕ್ರಮಗಳ ಬಗ್ಗೆಯೂ ವರದಿಗಳಿವೆ. ಸರ್ಕಾರ ಕ್ರಮ ವಹಿಸಲಿ. ಆಗ ಈ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತೆ. ಇಲ್ಲದಿದ್ದರೆ ಒಳಸಂಚು ಮಾಡಿರುವ ಅನುಮಾನ ಬರುತ್ತೆ ಎಂದರು.

    ಸಿ.ಟಿ ರವಿ ರಾಜ್ಯಾಧ್ಯಕ್ಷರಾಗ್ತಾರೆ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, ದೇವೇಗೌಡರು ನಮ್ಮ ರಾಜ್ಯದ ಹಿರಿಯರು. ದೇವೇಗೌಡರು ಅಂತಿಮ ನಿರ್ಣಯ ಆಗಿದೆ ಅಂತ ಹೇಳಿಲ್ಲ. ಚರ್ಚೆ ಆಗಿದೆ ಅಂತ ಹೇಳಿದ್ದಾರೆ. ಹೈಕಮಾಂಡ್ ನಿರ್ಣಯ ಏನು ಅಂತ ಗೊತ್ತಿಲ್ಲ. ನಾನು 35 ವರ್ಷಗಳಿಂದಲೂ ಬಿಜೆಪಿಯಲ್ಲಿದ್ದೀನಿ. ಆಗಿನಿಂದಲೂ ಯಡಿಯೂರಪ್ಪ ಆಶೀರ್ವಾದವನ್ನು ಪಡೆಯುತ್ತಾ ಬಂದಿದ್ದೇನೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾರಿ ಟು ಸೆ, ಐ ವಿಲ್ ನಾಟ್ ಆನ್ಸರ್ ದಿಸ್ ಕ್ವಷ್ಚನ್: ರಾಜ್ಯಾಧ್ಯಕ್ಷರ ಹಗ್ಗಜಗ್ಗಾಟದ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ

    ಸಾರಿ ಟು ಸೆ, ಐ ವಿಲ್ ನಾಟ್ ಆನ್ಸರ್ ದಿಸ್ ಕ್ವಷ್ಚನ್: ರಾಜ್ಯಾಧ್ಯಕ್ಷರ ಹಗ್ಗಜಗ್ಗಾಟದ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ

    ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಹಗ್ಗಜಗ್ಗಾಟ ಜೋರಾಗಿದೆ. ಈ ಕುರಿತು ಬಿಜೆಪಿ ನಾಯಕರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ ಅವರು ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಒಮ್ಮೆ ರಾಜೀನಾಮೆ ನೀಡಿದ್ದೇನೆ ಅಂತಾರೆ. ಆಮೇಲೆ ಇಲ್ಲ ಅಂತಾರೆ. ಆರ್.ಅಶೋಕ್ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ. ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಬದಲಾವಣೆ ಇಲ್ಲ ಅನಿಸುತ್ತೆ. ನನ್ನ ಗಮನಕ್ಕೆ ಬಂದಿಲ್ಲ ಅಂತಾರೆ. ಆದರೆ ಸಿ.ಟಿ.ರವಿ ಅವರು ಈ ಪ್ರಶ್ನೆಗೆ ನಾನು ಉತ್ತರ ನೀಡಲ್ಲ. ಸಾರಿ ಟು ಸೆ. ಐ ವಿಲ್ ನಾಟ್ ಆನ್ಸರ್ ದಿಸ್ ಕ್ವಷ್ಚನ್ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ಕಟೀಲ್ ಸ್ಪಷ್ಟನೆ

    ಸಿ.ಟಿ.ರವಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನಾನು ಯಾವುದೇ ರೇಸ್‌ನಲ್ಲಿ ಇಲ್ಲ. ನಾನು ಈಗಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಕಾರ್ಯಕರ್ತ ಅನ್ನೋದನ್ನ ಯಾವತ್ತೂ, ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಪಕ್ಷ ನನಗೆ ಎಕ್ಸ್‌ಪೀರಿಯನ್ಸ್ ಆಗಲು ಹಾಗೂ ಎಕ್ಸ್‌ಪೋಸ್‌ ಆಗೋದಕ್ಕೆ ಎರಡಕ್ಕೂ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ನಾನು ಯಾವ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಒಂಬತ್ತು ವರ್ಷದ ಸಾಧನೆಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ನರೇಂದ್ರ ಮೋದಿ ಸರ್ಕಾರವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಎಲ್ಲರೂ ಪಣ ತೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಸಿದ್ದರಾಮಯ್ಯ

    ಮನೆ ಮನೆಗೆ ಒಂಬತ್ತು ವರ್ಷದ ಸಾಧನೆಯನ್ನ ಮುಟ್ಟಿಸಿ ಮತ್ತೊಮ್ಮೆ ಕಮಲದ ಹೂವನ್ನ ಅರಳಿಸಬೇಕು. ದೇಶಭಕ್ತಿಯನ್ನೇ ಉಸಿರಾಗಿಟ್ಟುಕೊಂಡು ದೇಶಕ್ಕಾಗಿ ಕೆಲಸ ಮಾಡುವಂತಹ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನ ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ.