Tag: c t ravi

  • 20ಕ್ಕೂ ಹೆಚ್ಚು ಸರ್ಕಾರಿ ನೌಕರರ ಆತ್ಮಹತ್ಯೆ, ಸಿಎಂ ಮಾನವೀಯತೆ ಸತ್ತಂತೆ ಇದ್ದಾರೆ: ಸಿ.ಟಿ ರವಿ

    20ಕ್ಕೂ ಹೆಚ್ಚು ಸರ್ಕಾರಿ ನೌಕರರ ಆತ್ಮಹತ್ಯೆ, ಸಿಎಂ ಮಾನವೀಯತೆ ಸತ್ತಂತೆ ಇದ್ದಾರೆ: ಸಿ.ಟಿ ರವಿ

    – ಇದಕ್ಕೆ ಸಿದ್ದರಾಮಯ್ಯನವರ ರಾಜೀನಾಮೆಯೇ ಪ್ರಾಯಶ್ಚಿತ್ತ

    ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ನೌಕರರು ಸರ್ಕಾರದ ಕಾರಣ ಮುಂದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಮಾತ್ರ ಕಣ್ಣಿದ್ದು ಕುರುಡರಂತೆ, ಕಿವಿಯಿದ್ದು ಕಿವುಡರಂತೆ, ಹೃದಯವಿದ್ದು ಮಾನವೀಯತೆ ಸತ್ತಂತೆ ಇದ್ದಾರೆ ಎಂದು ಎಮ್‍ಎಲ್‍ಸಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಚಿವರು, ಶಾಸಕರು, ಸಿಬ್ಬಂದಿ, ಸರ್ಕಾರದ ಬೇಜವಾಬ್ದಾರಿ, ಸಂಬಳ ನೀಡದೇ ಇರುವುದರ ಕಾರಣ ನೀಡಿ ಡೆತ್ ನೋಟ್ ಬರೆದಿಟ್ಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಹೃದಯ ಇದೆಯೋ? ಇಲ್ವೋ ಗೊತ್ತಿಲ್ಲ, ಮಾನವೀಯತೆ ಸತ್ತಿರೋದು ಗೊತ್ತಾಗ್ತಿದೆ. ಇದು ಸರ್ಕಾರದ ಪ್ರಾಯೋಜಿತ ಕೊಲೆ, ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ನಕ್ಸಲರು ಇಷ್ಟ ಆಗ್ತಾರೆ, ದೇಶಭಕ್ತರನ್ನು ಕಂಡ್ರೆ ಅಸಹನೆ: ಸಿ.ಟಿ ರವಿ

    ಈ ಸಾವಿಗೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯೇ ಪ್ರಾಯಶ್ಚಿತ್ತ. ಆದರೆ ಸರ್ಕಾರ ಹೃದಯಹೀನ ಸರ್ಕಾರವಾಗಿ, ಮಾನವೀಯತೆ ಸತ್ತಂತೆ ವರ್ತಿಸುತ್ತಿದೆ. ದಪ್ಪ ಚರ್ಮ ಅನ್ನೋಣ ಅಂದ್ರೆ ಆ ದಪ್ಪ ಚರ್ಮಕ್ಕಾದ್ರು ಸ್ವಲ್ಪ ನಾಟುತ್ತೆ. ಚಡಿ ಏಟು ನಾಟದಿದ್ರು, ಕರೆಂಟ್ ಶಾಕ್ ಆದ್ರೂ ನಾಟುತ್ತೆ. ಇದು ದಪ್ಪ ಚರ್ಮವೋ, ಸತ್ತಿರೋ ಚರ್ಮವೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

  • ಕಾಂಗ್ರೆಸ್‌ಗೆ ನಕ್ಸಲರು ಇಷ್ಟ ಆಗ್ತಾರೆ, ದೇಶಭಕ್ತರನ್ನು ಕಂಡ್ರೆ ಅಸಹನೆ: ಸಿ.ಟಿ ರವಿ

    ಕಾಂಗ್ರೆಸ್‌ಗೆ ನಕ್ಸಲರು ಇಷ್ಟ ಆಗ್ತಾರೆ, ದೇಶಭಕ್ತರನ್ನು ಕಂಡ್ರೆ ಅಸಹನೆ: ಸಿ.ಟಿ ರವಿ

    ಚಿಕ್ಕಮಗಳೂರು: ಕಾಂಗ್ರೆಸ್‌ಗೆ (Congress) ನಕ್ಸಲರು, ನಗರ ನಕ್ಸಲರು ಆತ್ಮೀಯರಾಗ್ತಾರೆ. ಆದರೆ ದೇಶಭಕ್ತರನ್ನು ಕಂಡರೆ ಅವರಿಗೆ ಆಗಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರಿದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಆರ್‌ಎಸ್ಎಸ್ ಇರುವುದು ಜನರ ಮನಸ್ಸಿನಲ್ಲಿ. ದೇಶ ಹಾಳು ಮಾಡುವ ವಿಚಾರ ಆಗಿದ್ರೆ ಸಂಘ ಇಷ್ಟು ದೊಡ್ಡ ಮಟ್ಡಕ್ಕೆ ಬೆಳೆಯುತ್ತಿರಲಿಲ್ಲ. ಸಂಘದಲ್ಲಿರುವುದು ನಿಸ್ವಾರ್ಥ ದೇಶಪ್ರೇಮ, ಅದು ಬೆಳೆಯುತ್ತಲೇ ಇದೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಮೂಗುದಾರ

    ಕಾಂಗ್ರೆಸ್ ಸೇವಾದಳ ಅದಕ್ಕೂ ನೂರು ವರ್ಷ, ಯಾರಾದರೂ ನೆನಪಿಸುತ್ತಾರಾ? ನಮಗೆ ಗಣವೇಷವನ್ನು ಸರಬರಾಜು ಮಾಡಲು ಆಗದಂತಹ ಮಟ್ಟಕ್ಕೆ ಬೇಡಿಕೆ ಬಂದಿದೆ. ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುವ ಜನ ದೇಶ ಬಲ ಆಗಬೇಕೆಂದು ಬಯಸುತ್ತಾರೆ. ದೂರ ಇಟ್ಟರೆ ದೇಶಕ್ಕೆ ನಷ್ಟವಾಗಲಿದೆ. ಇದರ ಲಾಭವನ್ನು ಅರಾಜಕವಾದಿಗಳು, ಭಾರತ್ ತೇರೆ ತುಕಡೆ ಹೂಂಗೆ, ಇನ್ಷಾ ಅಲ್ಲಾ ಅನ್ನೋರು ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ನಕ್ಸಲರು, ನಗರ ನಕ್ಸಲರು ಕಾಂಗ್ರೆಸ್‌ನವರಿಗೆ ಆತ್ಮೀಯರಾಗುತ್ತಾರೆ. ದೇಶಭಕ್ತಿಯ ಸಂಘಟನೆ ಕಂಡರೆ ಅಸಹನೆ ಆಗುತ್ತೆ, ಯಾರನ್ನ ದೇಶದ್ರೋಹಿಗಳು ಎನ್ನಬೇಕು? ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಶಿಸ್ತು ಕ್ರಮ ಕೈಗೊಳ್ಳಿ: ಪ್ರಿಯಾಂಕ್‌ ಪತ್ರ

  • ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

    ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

    ಬೆಂಗಳೂರು: ಆರ್‌ಎಸ್‌ಎಸ್ ದೇಶಭಕ್ತಿಯ ಸಂಸ್ಕಾರವನ್ನು ಕೊಡುತ್ತದೆ. ಆರ್‌ಎಸ್‌ಎಸ್, ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನೇ ಪ್ರಧಾನಮಂತ್ರಿ, ಸಂಘದ ಸೇವಕನೇ ಕೇಂದ್ರದ ಗೃಹ ಮಂತ್ರಿ, ಸಂಘದ ಸೇವಕನೇ ರಕ್ಷಣಾ ಸಚಿವ, ಸಂಘದ ಸೇವಕನೇ ಉಪರಾಷ್ಟ್ರಪತಿ ಇವೆಲ್ಲವೂ ಆಗಿರಬೇಕಾದರೆ ಪ್ರಿಯಾಂಕ್‌ ಖರ್ಗೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ಸವಾಲ್

    ಅವರ ಪೂರ್ವಾಗ್ರಹದ ದ್ವೇಷವಾದರೆ ಅದಕ್ಕೆ ಕಾಲ ತಕ್ಕ ಉತ್ತರ ಕೊಡುತ್ತದೆ. ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಯಾಕೆಂದರೆ ಸಂಘ ರಾಷ್ಟ್ರೀಯ ಹಿತದಲ್ಲಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾರೆ ಎಂದು ಹೇಳಿದರು.

    ಹಿಂದೂ ಎಂಬುದಕ್ಕೂ ಸುಪ್ರೀಂ ಕೋರ್ಟ್ ಹೇಳಿರುವ ವ್ಯಾಖ್ಯಾನವನ್ನೇ ಆಧಾರವಾಗಿ ಸಂಘ ಬಳಕೆ ಮಾಡಿಕೊಳ್ಳುತ್ತದೆ. ಸ್ವದೇಶಿ ವಿಚಾರವನ್ನು ಮುಂದಿಟ್ಟಿದೆ. ಅಂದರೆ ಸ್ವಭಾಷೆ, ಸ್ವಭೂಷ, ಸ್ವಭೋಜನ ಮತ್ತು ಪರಿಸರ ಸಂರಕ್ಷಣೆ ಈ ವಿಚಾರವನ್ನು ದೇಶದ ಜನರ ಮುಂದೆ ಇಟ್ಟಿದೆ. ಇದರಲ್ಲಿ ಯಾವುದು ಇವರಿಗೆ ಅಪಥ್ಯವಾಗಿ ಕಾಣುತ್ತಿದೆ. ಅಂದರೆ ಮಾತೃ ಭಾಷೆಯಲ್ಲಿ ವ್ಯವಹರಿಸಿ ಎಂಬುದು ಅಪಥ್ಯವೇ? ಸ್ವದೇಶಿಗೆ ಒತ್ತು ನೀಡಬೇಕು ಎಂಬುದು ಅಪಥ್ಯವೇ ಎಂದು ಪ್ರಶ್ನಿಸಿದರು.

    ಪ್ರತೀ ಗ್ರಾಮದಲ್ಲೂ ದೇವಾಲಯ ಸರ್ವರಿಗೂ ಮುಕ್ತವಾಗಬೇಕು. ಹಿಂದೂ ಸಮಾಜಕ್ಕೆ ಒಂದೇ ಸ್ಮಶಾನ ಇರಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಮತೀಯ ಓಲೈಕೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳಿಗೆ ಸಂಘ ಅರ್ಥವಾಗುವುದಕ್ಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ RSS ಬ್ಯಾನ್ ಮಾಡಲು ಆಗ್ಲಿಲ್ಲ, ಇವರಿಂದ ಆಗುತ್ತಾ?: ಯತ್ನಾಳ್ ಟಾಂಗ್

    ಸಭ್ಯತೆಯ ಪಾಠ ಮರೆತ ಡಿ.ಕೆ.ಶಿವಕುಮಾರ್ ಎಷ್ಟೇ ಸ್ನೇಹವಿದ್ದರೂ ಸಾರ್ವಜನಿಕವಾಗಿ ಸಭ್ಯವಾಗಿ ನೆಡೆದುಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ ಶಾಸಕ ಮುನಿರತ್ನ ಅವರನ್ನು ಸಭ್ಯತೆಯಿಂದ ನಡೆಸಿಕೊಂಡಿಲ್ಲ. ಯಾಕೆಂದರೆ ಒಬ್ಬ ಶಾಸಕರಾದ ಮುನಿರತ್ನ ಅವರನ್ನು ಕರೆದಿರುವ ರೀತಿ ಸರಿಯಲ್ಲ. ಅವರು ಸಾರ್ವಜನಿಕ ಸಭ್ಯತೆಯ ಪಾಠವನ್ನು ಮರೆತಿದ್ದಾರೆ ಎಂದು ಟೀಕಿಸಿದರು.

    ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಪ್ರಾಯೋಜಿತ ಯಾವುದೇ ಕಾರ್ಯಕ್ರಮವಾಗಲಿ ಶಿಷ್ಟಾಚಾರ ಪಾಲಿಸಲೇಬೇಕು. ಅದು ಸಂವಿಧಾನ ಶಾಸಕರಿಗೆ ನೀಡಿರುವ ಅಧಿಕಾರ. ಪಕ್ಷದ ಕಾರ್ಯಕ್ರಮವಾದರೆ ನಮ್ಮ ಆಕ್ಷೇಪಣೆ ಇಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ. ಈಗ ಅವರು ಸ್ಪಷ್ಟಪಡಿಸಲಿ. ಅದು ಸರ್ಕಾರದ ಕಾರ್ಯಕ್ರಮವೇ? ಅಥವಾ ಪಕ್ಷದ ಕಾರ್ಯಕ್ರಮವೇ ಎಂದು ಕೇಳಿದರು.

    ಸರ್ಕಾರಿ ಕಾರ್ಯಕ್ರಮಕ್ಕೆ ಆದರೆ ಮುನಿರತ್ನ ಅವರ ಹಕ್ಕು ಹಾಗೂ ಶಾಸಕರ ಹಕ್ಕು. ಸರ್ಕಾರದ ಕಾರ್ಯಕ್ರಮದಲ್ಲಿ ಅವರನ್ನ ಆಮಂತ್ರಿಸಿಲ್ಲವೆಂದರೆ ಅದು ಅಪರಾಧ ಮತ್ತು ಹಕ್ಕುಚ್ಯುತಿ ಆಗುತ್ತದೆ. ಯಾರು ಪ್ರಜಾಪ್ರಭುತ್ವದ ಮೌಲ್ಯವನ್ನು ಅಳವಡಿಸಿಕೊಂಡಿದ್ದಾರೋ ಅವರಿಗೆ ಜನಪ್ರತಿನಿಧಿಯ ಭಾವನೆಗಳು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ತಾನು ಸರ್ವಾಧಿಕಾರಿ ಎಂದು ಭಾವಿಸಿದೆ. ಆ ಕಾರಣದಿಂದಾಗಿ ಉಪಮುಖ್ಯಮಂತ್ರಿಗಳು ಶಾಸಕರ ಹಕ್ಕಿಗೆ ಕತ್ತರಿ ಹಾಕುವ ಕುಮ್ಮಕ್ಕಿಗೆ ಅವಕಾಶ ಕೊಟ್ಟಿದ್ದು ತಪ್ಪು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ಸರ್ಕಾರಕ್ಕೆ ಕಪ್ಪುಚುಕ್ಕಿ. ಶಿಷ್ಟಾಚಾರ ಉಲ್ಲಂಘಿಸಿದವರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.

  • ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

    ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

    – ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರ ಪ್ರೇಮಪತ್ರದಲ್ಲಿ ಉಲ್ಲೇಖ!

    ಚಿಕ್ಕಮಗಳೂರು: ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಹಾಗೂ ಅತಿವೃಷ್ಠಿ ಇವೆಲ್ಲಾ ರಾಜ್ಯದ ದಾಖಲೆಯಾಗಿದ್ದು ಅದರ ಸಂಭ್ರಮಕ್ಕೆ ಔತಣಕೂಟ ಮಾಡುತ್ತಿದ್ದಾರೆ ಎಂದು ಸಿಎಂ ಡಿನ್ನರ್‌ ಮೀಟಿಂಗ್‌ಗೆ ಎಂಎಲ್‌ಸಿ ಸಿ.ಟಿ ರವಿ (C.T Ravi) ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ (Siddaramaiah) ಔತಣಕೂಟ (Dinner Meeting) ಆಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರು ಪ್ರೇಮಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 10 ಜಿಲ್ಲೆಗಳು ಅತಿವೃಷ್ಠಿಯಿಂದ ಕಂಗೆಟ್ಟು ಹೋಗಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಇದನ್ನೆಲ್ಲಾ ಸಂಭ್ರಮಾಚರಣೆ ಮಾಡಬೇಕಲ್ವಾ ಅದಕ್ಕೆ ಔತಣಕೂಟ ಆಯೋಜಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಯಾಕೆ ಅಂತ ಗೊತ್ತಿಲ್ಲ: ಚೆಲುವರಾಯಸ್ವಾಮಿ

    ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್ ವಿಚಾರವಾಗಿ, ರಾಜ್ಯದಲ್ಲಿ ಮಂತ್ರಿಯಾಗಲು ಬಿಹಾರ ಚುನಾವಣೆಗೆ 300 ಕೋಟಿ ರೂ. ದೇಣಿಗೆ ಆರೋಪವಿದೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆಯಾಗಿದೆ. ಭ್ರಷ್ಟಾಚಾರರಿಗಳಿಗೆ, ಕಾಳಸಂತೆಕೋರರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಬಂದಿದೆ. 60ರ ದಶಕದಿಂದಲೂ ಕಾಂಗ್ರೆಸ್ ಕಾಳಸಂತೆಕೋರರಿಗೆ ಪ್ರೋತ್ಸಾಹ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲಾ ಕಾಳಸಂತೆಯ ಪ್ರಮಾಣ ಹೆಚ್ಚು ಎಂದು ವಾಗ್ದಾಳಿ ನಡೆಸಿದ್ದಾರೆ.

    ಯಾವ ಮೂಲದಿಂದ ಬೇಕಾದರೂ ಹಣ ಮಾಡಲಿ, ಒಟ್ಟು ಹಣ ಮಾಡಿದ್ದರೆ ಕಾಂಗ್ರೆಸ್ ಅವರಿಗೆ ಮಣೆ ಹಾಕುತ್ತೆ. ಇದು ಕಾಂಗ್ರೆಸ್‌ನಲ್ಲಿರುವ ವ್ಯವಸ್ಥೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆ. ಅನುಮಾನವಿದ್ದರೆ 40 ಜನರ ಟ್ರ್ಯಾಕ್ ರೆಕಾರ್ಡ್ ನೋಡಿ ನಿಮಗೆ ಅರ್ಥವಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

  • ಶತ್ರು ದೇಶಕ್ಕೆ ಜಿಂದಾಬಾದ್ ಅಂದ್ರೆ, ದೇವರ ಮೇಲೆ ಕಲ್ಲು ತೂರಿದ್ರೆ ಬೆರಕೆಯವ್ರು ಸುಮ್ನಿರಬಹುದು, ಶುದ್ಧ ರಕ್ತದವರಲ್ಲ: ಸಿ.ಟಿ ರವಿ

    ಶತ್ರು ದೇಶಕ್ಕೆ ಜಿಂದಾಬಾದ್ ಅಂದ್ರೆ, ದೇವರ ಮೇಲೆ ಕಲ್ಲು ತೂರಿದ್ರೆ ಬೆರಕೆಯವ್ರು ಸುಮ್ನಿರಬಹುದು, ಶುದ್ಧ ರಕ್ತದವರಲ್ಲ: ಸಿ.ಟಿ ರವಿ

    – ಎಸ್‍ಐಟಿ ತನಿಖೆಗೆ ಕಾಣದ ಕೈ ನಿಯಂತ್ರಣ?

    ಚಿಕ್ಕಮಗಳೂರು: ದೇವರ ಮೇಲೆ ಕಲ್ಲು ತೂರಿದ್ರೆ, ಉಗಿದ್ರೆ, ಪೆಟ್ರೋಲ್ ಬಾಂಬ್ ಹಾಕಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ರೆ ನೋಡಿಕೊಂಡು ಹೇಡಿಗಳು, ಬೆರಕೆಯವರು ಸುಮ್ಮನಿರಬಹುದು, ಶುದ್ಧ ರಕ್ತದವರು ಸುಮ್ಮನಿರಲ್ಲ ಎಂದು ಎಂಎಲ್‍ಸಿ ಸಿ.ಟಿ ರವಿ (C.T Ravi) ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ತಲೆ ಕಡೀರಿ, ತೊಡೆ ಮುರೀರಿ ಎಂದು ಸಿ.ಟಿ ರವಿ ತಮ್ಮ ಮಕ್ಕಳಿಗೆ ಹೇಳ್ತಾರಾ? ಎಂಬ ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಶುದ್ಧ ರಕ್ತದವರು ನನ್ನ ಜೊತೆ ನಿಂತಿದ್ದಾರೆ. ಬೆರಕೆಯವರು ಬೆರಕೆ ರೀತಿ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಹೊಗಳಿದ ಶಾಂತಿದೂತರಿಂದ ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು: ಸಿಟಿ ರವಿ ಆಕ್ರೋಶ

    ಧರ್ಮಸ್ಥಳದ ಬುರುಡೆ ಪ್ರಕರಣದ ವಿಚಾರವಾಗಿ, ಎಸ್‍ಐಟಿ ತನಿಖೆ ಬಗ್ಗೆ ಅವರು ಅಸಮಾಧಾನ ಹೊರಹಾಕಿದರು. ಒಬ್ಬ ಬುರುಡೆ ಮಾಸ್ಕ್ ಮ್ಯಾನ್ ಮಾತು ಕೇಳಿ ಸರ್ಕಾರ ಮರ್ಯಾದೆ ಕಳೆದುಕೊಂಡಿದೆ. ಧರ್ಮಾಧಿಕಾರಿ, ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಬರುವಂತೆ ವರ್ತಿಸಿ ಇದ್ದ 3 ಕಾಸಿನ ಮರ್ಯಾದೆಯನ್ನೂ ಹರಾಜು ಹಾಕಿಕೊಂಡಿದೆ. ಈಗ ಮತ್ತೊಬ್ಬನ ಮಾತು ಕೇಳಿ ಲಂಗೋಟಿಯನ್ನೂ ಬಿಚ್ಕೊಂಡು ಬೆತ್ತಲಾಗಬೇಕೆಂದಿದ್ರೆ ಅವರ ಹಣೆಬರಹ ಎಂದಿದ್ದಾರೆ.

    ಎಸ್‍ಐಟಿ ತನಿಖೆಗೆ ಕಾಣದ ಕೈ ನಿಯಂತ್ರಣ ಹೇರುತ್ತಿರುವ ಅನುಮಾನ ಬರುತ್ತಿದೆ. ಅಪಪ್ರಚಾರ ಮಾಡಿದ ಯೂಟ್ಯೂಬರ್ಸ್, ಬುಲ್ಡೋಜರ್ ಇಟ್ಟು ಧರ್ಮಸ್ಥಳ ಉಡಾಯಿಸಬೇಕೆಂದೋರು ಬೀದಿಯಲ್ಲೇ ಓಡಾಡ್ತಿದ್ದಾರೆ. ಷಡ್ಯಂತ್ರ ಮಾಡ್ದೋರು ಯಾರೆಂದು ಇಂದಿಗೂ ಸ್ಪಷ್ಟಪಡಿಸಿಲ್ಲ. ತನಿಖೆಯನ್ನು ಹಳ್ಳ ಹಿಡಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿರೋ ಅನುಮಾನ ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ: ಸಿ.ಟಿ ರವಿ ಕಿಡಿ

  • ಜಾತಿ ಜನಗಣತಿ | ದುಡ್ಡು ಹೊಡಿಯೋಕೆ ಇಂತಹ ಸ್ಕೀಮ್ ಹುಡುಕ್ತೀರಾ? – ಸಿ.ಟಿ ರವಿ ಕಿಡಿ

    ಜಾತಿ ಜನಗಣತಿ | ದುಡ್ಡು ಹೊಡಿಯೋಕೆ ಇಂತಹ ಸ್ಕೀಮ್ ಹುಡುಕ್ತೀರಾ? – ಸಿ.ಟಿ ರವಿ ಕಿಡಿ

    – ಕಾಂತರಾಜು ವರದಿ ತಿಪ್ಪೆಗೆ ಹಾಕ್ತೀರಾ?

    ಚಿಕ್ಕಮಗಳೂರು: ದುಡ್ಡು ಹೊಡಿಯೋಕೆ ಜಾತಿ ಜನಗಣತಿಯಂತಕ (Caste Census) ಸ್ಕೀಮ್ ಹುಡುಕ್ತೀರಾ ಎಂದು ಸರ್ಕಾರದ ವಿರುದ್ಧ ಎಂಎಲ್‌ಸಿ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಜನಗಣತಿ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಮನೆ ಮನೆಗೂ ಹೋಗಿ ಅಕ್ಯೂರೇಟ್ ಸಮೀಕ್ಷೆ ಎಂದು ಹೇಳಿದ್ರಿ. ಈಗ ಕಾಂತರಾಜು ವರದಿ ತಿಪ್ಪೆಗೆ ಹಾಕ್ತೀರಾ? ಯಾರ ಮನೆ ದುಡ್ಡು, ನಿಮ್ಮ ಮನೆಯದ್ದಾ ಇಲ್ಲ, ನಿಮ್ಮ ಫಾದರ್ ಮನೆಯದ್ದಾ? ಎಂದು ಸರ್ಕಾರಕ್ಕೆ ಕಟುವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ: ಸಿ.ಟಿ ರವಿ ಕಿಡಿ

    ಕೇಂದ್ರ ಸರ್ಕಾರವೇ ಜಾತಿ, ಜನ ಗಣತಿ ಎರಡನ್ನೂ ಮಾಡ್ತಿದೆ. ಹೀಗಿರುವಾಗ ನಮ್ಮದು ಶೈಕ್ಷಣಿಕ ಸಮೀಕ್ಷೆ ಅಂತ ಹೆಸರಿಡೋದು ಯಾವ ಲಾಜಿಕ್? ಶೈಕ್ಷಣಿಕ ಸಮೀಕ್ಷೆ ಅಂದು ಬ್ರಾಹ್ಮಣ -ಕ್ರಿಶ್ಚಿಯನ್, ಒಕ್ಕಲಿಗ-ಕ್ರಿಶ್ಚಿಯನ್, ಬಿಲ್ಲವ-ಕ್ರಿಶ್ಚಿಯನ್ ಅಂತ ಹೊಸ ಕಾಲಂ ಸೇರಿಸಿದ್ದೀರಾ? ಸದ್ಯ, ಮುಸ್ಲಿಂ-ಕ್ರಿಶ್ಚಿಯನ್ ಅನ್ನೋ ವರ್ಗವನ್ನ ಸೇರಿಸಿಲ್ಲ. ನಿಮಗೆ ಈ ರೀತಿ ಮಾಡಲು ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

    ಸಂಪುಟದಲ್ಲೇ ಸಹಮತ ಬರದಿದ್ದ ಸಮೀಕ್ಷೆಯನ್ನ ತಿಪ್ಪೆಗೆ ಹಾಕಿ, ಮತ್ತೆ ಜಾತಿ-ಜಾತಿಗಳ ನಡುವೆ ಭಿನ್ನತೆ ತಂದು ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

  • ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ: ಸಿ.ಟಿ ರವಿ ಕಿಡಿ

    ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಕೇಸ್ ಆಗಲಿಲ್ಲ, ನಮ್ಮ ಮೇಲೆ ಎಫ್‍ಐಆರ್ ಆಗುತ್ತೆ: ಸಿ.ಟಿ ರವಿ ಕಿಡಿ

    ಚಿಕ್ಕಮಗಳೂರು: ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಸುಮೋಟೋ ಕೇಸ್ ಆಗಲಿಲ್ಲ. ಆದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಟ್ಟವರ ಮೇಲೆ ಎಫ್‍ಐಆರ್ ಆಗಿದೆ ಎಂದು ಎಂಎಲ್‍ಸಿ ಸಿ.ಟಿ.ರವಿ (C.T Ravi) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಮಂಡ್ಯದ ಮದ್ದೂರು ಪ್ರಕರಣ (Maddur Violence) ಸಂಬಂಧ ತಮ್ಮ ವಿರುದ್ಧ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ದಾಖಲಾದ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ಪ್ರಧಾನಿಯನ್ನ ಕೊಲ್ಬೇಕು ಎಂದವರ ಮೇಲೆ ಸುಮೋಟೋ ಕೇಸ್ ದಾಖಲಾಗಲಿಲ್ಲ. ಆದರೆ, ಕ್ರಿಯೆಗೆ ತಕ್ಕ ಕೊಟ್ಟರೆ ಮಾತ್ರ ಎಫ್‍ಐಆರ್ ಆಗುತ್ತೆ ಎಂದು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ

    ಪಾಕಿಸ್ತಾನ ಜಿಂದಾಬಾದ್ ಎಂದರೂ ಸುಮ್ಮನಿರಬೇಕು. ಕಲ್ಲು ಹೊಡೆದು, ಪೆಟ್ರೋಲ್ ಬಾಂಬ್ ಹಾಕಿದರೂ ಸಹಿಸಿಕೊಳ್ಳಬೇಕು. ಸಹನೆಗೂ ಒಂದು ಮಿತಿ ಇದೆ ಅಲ್ವಾ? ಎಷ್ಟು ದಿನ ಅಂತ ಸಹಿಸಿಕೊಳ್ಳೋದು? ಯಾವ ಮತಗ್ರಂಥಗಳು ತಾನೇ ಅಸಹಿಷ್ಣುತೆಯನ್ನ ಪ್ರಚೋದನೆ ಮಾಡುತ್ತವೆ. ಗಣಪತಿ ನೋಡಿದ ಕೂಡಲೇ ಉಗಿಯಬೇಕು ಅನ್ಸತ್ತೆ ಅಂದ್ರೆ ಆ ಪ್ರಚೋದನೆ ಎಲ್ಲಿಂದ ಬರುತ್ತೆ. ಮನೆಯಲ್ಲೇ ಅಪ್ಪ-ಅಮ್ಮ ಹೇಳಿಕೊಟ್ರಾ? ಮದರಸಾಗಳಲ್ಲಿ ಹೇಳಿಕೊಟ್ರಾ? ಅಥವಾ ಹುಟ್ಟುವಾಗಲೇ ಭಯೋತ್ಪಾದಕರ ಬ್ಲಡ್ ಬೆರಕೆಯಾಗಿ ಹುಟ್ಟಿವೆಯೋ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಲ್ಲು ಹೊಡೆದವರೇ ಒಪ್ಪಿಕೊಂಡ್ರು ನಮ್ಮಿಂದ ತಪ್ಪಾಗಿದೆ ಅಂತ. ಆದ್ರೆ, ಅವರಿಗೆ ಮಾತ್ರ ಕೇಸ್ ಹಾಕಿದ್ರೆ ಬೇಜಾರಾಗ್ತಾರೆ ಅಂತ ನನ್ನ ಮೇಲೆ ಹಾಗೂ ಯತ್ನಾಳ್ ಮೇಲೆ ಕೇಸ್ ಹಾಕಿದ್ದಾರೆ. ಪಾಪ ಅವರಿಗೆ ಸಂಕಟ ಆಗುತ್ತಿದೆ. ಉದಯಗಿರಿ-ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡ್ದೋರ ಕೇಸ್ ಹಿಂಪಡೆಯಲು ಶಿಫಾರಸು ಮಾಡಿದ್ದೀರಿ. ನಮ್ಮ ಮೇಲೆ ಕೇಸ್ ಹಾಕೋಕೆ ನಿಮಗ್ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

    ಸತ್ಯ ಹೇಳಿದರೆ ಕೇಸ್ ಹಾಕ್ತಾರೆ. ಇಲ್ಲ ಸಿಎಂ ಹೇಳಿದಂತೆ ಸುಳ್ಳು ಹೇಳಬೇಕು. ಇಸ್ಲಾಂ ಅಂದ್ರೆ ಶಾಂತಿ, ಶಾಂತಿ ಇರೋ ಇಸ್ಲಾಂ ಜಗತ್ತಿನ ಭಯೋತ್ಪಾದನೆಗೆ ಬೀಜ-ಗೊಬ್ಬರ-ನೀರು ಹಾಕ್ತಿರೋದು. ಅದರ ಹೆಸರಿನಲ್ಲೇ ಜಗತ್ತಿನ 30ಕ್ಕೂ ಹೆಚ್ಚು ನಾಗರೀಕತೆಗಳನ್ನ ನಾಶ ಮಾಡಿದ್ದು, ಅದರ ಹೆಸರಿನಲ್ಲೇ ಬಾಮಿಯಾನ್‍ನಲ್ಲಿ ನಗುತ್ತಾ ನಿಂತಿದ್ದ ಬುದ್ಧನ ವಿಗ್ರಹವನ್ನ ನಾಶಮಾಡಿದ್ದು, ಅದರ ಹೆಸರಿನಲ್ಲೇ ಭಾರತದ ರಾಷ್ಟ್ರೀಯ ಲಾಂಛನ ಅಶೋಕಚಕ್ರವನ್ನ ಕಲ್ಲಿನಿಂದ ಕುಟ್ಟಿ-ಕುಟ್ಟಿ ಒಡೆದು ಹಾಕಿದ್ದು. ಸತ್ಯ ಹೇಳಿದರೆ ಕೇಸ್ ಹಾಕ್ತಾರೆ. ಸಿಎಂ ರೀತಿ ಸುಳ್ಳು ಹೇಳಿದರೆ ಹೇ… ಹಮಾರಾ ಹೈ… ಹಮಾರಾ ಹೈ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮದ್ದೂರು ಗಲಭೆ | ಪ್ರಚೋದನಕಾರಿ ಭಾಷಣಕ್ಕಾಗಿ ಯತ್ನಾಳ್, ಸಿ.ಟಿ ರವಿ ವಿರುದ್ಧ FIR: ಪರಮೇಶ್ವರ್

  • ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಸಿ.ಟಿ ರವಿ

    ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಸಿ.ಟಿ ರವಿ

    ಚಿಕ್ಕಮಗಳೂರು: ಹಿಂದೂ ಮಹಾಸಭಾ ಗಣಪತಿ (Hindu Mahasabha Ganapathi) ವಿಸರ್ಜನಾ ಮೆರವಣಿಗೆ ವೇಳೆ ತಮಟೆ ಶಬ್ಧಕ್ಕೆ ಎಂಎಲ್‍ಸಿ ಸಿ.ಟಿ.ರವಿ (C.T Ravi) ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದ ಓಂಕಾರೇಶ್ವರ ದೇಗುಲದ ಬಳಿ ನಡುರಸ್ತೆಯಲ್ಲಿ ಕಾರ್ಯಕರ್ತರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮೆರವಣಿಗೆ ಸಾಗುತ್ತಿದೆ. ಮೆರವಣಿಗೆಯಲ್ಲಿ ಡಿಜೆ ಶಬ್ಧಕ್ಕೆ ಯುವತಿಯರು ಹಾಗೂ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಎನ್‍.ಆರ್‌ಪುರ ಪೊಲೀಸ್ ಜೀಪಿಗೆ ಬಿತ್ತು ದಂಡ

    ಚಿಕ್ಕಮಗಳೂರು ನಗರದ ವಿಜಯಪುರ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದೆ. ಒಂದೆಡೆ ಯುವಕರು, ಮತ್ತೊಂದೆಡೆ ಯುವತಿಯರ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಚಿಕ್ಕಮಗಳೂರು ನಗರದಾದ್ಯಂತ ಖಾಕಿ ಹೈ ಅಲರ್ಟ್ ಆಗಿದೆ. ಇದನ್ನೂ ಓದಿ: ನಾಳೆ ರಕ್ತ ಚಂದ್ರ ಗ್ರಹಣ – ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆಗೆ ನಿರಂತರ ಜಲಾಭಿಷೇಕ

  • ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    – ಸರ್ಕಾರವೂ ಧರ್ಮಸ್ಥಳ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ಅನುಮಾನ ಪಡಬೇಕಾಗುತ್ತೆ; ಎಂಎಲ್‌ಸಿ

    ಬೆಂಗಳೂರು: 24 ಕೊಲೆಗಳ ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿಸಿದ್ದಾರೆ ಅಂತ ಮಹೇಶ್‌ ತಿಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ಈ ಬಗ್ಗೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಒತ್ತಾಯಿಸಿದರು.

    ವಿಧಾನಸೌಧ ಆವರಣದಲ್ಲಿ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ಅವರು, ಧರ್ಮಸ್ದಳದ (Dharmasthala) ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಧರ್ಮಸ್ಥಳದ ವಿರದ್ಧ ಅಪಪ್ರಚಾರ ನಡೆಯುತ್ತಿದ್ದು ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಕನ್ವರ್ಟ್‌ ಆದವರು, ಮತಾಂತರಕ್ಕೆ ಬೆಂಬಲ‌ ನೀಡುವವರು ಹೋಗಿ ಹೋರಾಟ ಮಾಡ್ತಾರಾ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

    ಧರ್ಮಸ್ಥಳಕ್ಕಿಂತ ಮಾಸ್ಕ್ ಮ್ಯಾನ್ ಮೇಲೆ‌ ಶ್ರದ್ದೆನಾ?
    ಅನಾಮಿಕ‌ ತೋರಿಸಿದ 16 ಜಾಗಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಅವನ‌ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಯುಟ್ಯೂಬ್‌, ಸೋಶಿಯಲ್ ಮೀಡಿಯಾದವರೂ (Social Media) ಸೇರಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳೇ ಷಡ್ಯಂತ್ರ ಆಗಿದೆ ಅಂದಿದ್ದಾರೆ. ನಮಗೂ ಅದೆ ಅನುಮಾನ ಅನಾಮಿಕನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸೋಷಿಯಲ್‌ ಮೀಡಿಯಾ ಯೂಟ್ಯೂಬ್‌ನಲ್ಲಿ ಮಾತನಾಡಿದವರ ವಿರುದ್ಧವೂ ಕ್ರಮ ತಗೆದುಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ಮಾಸ್ಕ್ ಮ್ಯಾನ್ ಮೇಲೆ‌ ಇವರಿಗೆ ಶ್ರದ್ದೆನಾ? ಕೋಟ್ಯಂತರ ಜನರ ಭಕ್ತಿಯ ಧಾರ್ಮಿಕ ಕೇಂದ್ರದ ಮೇಲೆ ಇವರಿಗೆ ಶ್ರದ್ದೆನಾ? ಅಂತ ಪ್ರಶ್ನೆ ಮಾಡಿದರು.

    ಎಡ ಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೇ ಸಿಎಂ 24 ಕೊಲೆ‌ ಮಾಡಿದ್ದಾರೆ ಅಂತ ಮಹೇಶ್ ತಿಮ್ಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂತ ನಾನು ನಂಬಲ್ಲ. ಕಾನೂನು ಎಲ್ಲರಿಗೂ ಒಂದೇ ಹಾಗೇನಾದರು ಸಾಕ್ಷ್ಯಗಳಿದ್ದರೆ, ಹೋಗಿ ದೂರು ಕೊಡಲಿ. ಈ ವಿಚಾರದಲ್ಲಿ ಆಧಾರ ಇಲ್ಲದೇ ಆರೋಪ ಮಾಡಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಆರೋಪದ ಬಗ್ಗೆ ಸಹಾ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

    ಧರ್ಮಸ್ದಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗಿತ್ತದೆ. ಮುಂದೆ ಭಕ್ತರು ಹಾಗೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

  • ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ ಮತಾಂತರ ಮಾಫಿಯಾ: ಸಿ.ಟಿ ರವಿ

    ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ ಮತಾಂತರ ಮಾಫಿಯಾ: ಸಿ.ಟಿ ರವಿ

    – ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ ಟೀಂ

    ಮಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra), ಎಂಎಲ್‍ಸಿ ಸಿ.ಟಿ ರವಿ (C.T Ravi) ಹಾಗೂ ಶಾಸಕರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

    ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಸಿ.ಟಿ ರವಿ ಪ್ರತಿಕ್ರಿಯಿಸಿ, ಬಿಜೆಪಿ ತನಿಖೆಯನ್ನ ಪ್ರಶ್ನಿಸುವುದಿಲ್ಲ. ತನಿಖೆಗೆ ಮುಂಚೆಯೇ ಅಪರಾಧಿ ಸ್ಥಾನ ಕೊಟ್ಟಿದ್ದಾರೆ. ಈ ಷಡ್ಯಂತರ ಹಿಂದೆ ಮತಾಂಧತೆ ಇದೆ. ಇದರ ಹಿಂದೆ ಮತಾಂತರ ಮಾಫಿಯಾ ಇದೆ. ಲಾಭ ಪಡೆಯುವ ಹುನ್ನಾರವು ಸೇರಿದೆ. ನ್ಯಾಯ ಕೊಡಿಸುವ ನೆಪದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದರ ಹಿಂದೆ ಇರುವವರ ವಿರುದ್ಧ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬುರುಡೆ ಸಿಕ್ಕಿದ್ದೆಲ್ಲಿ? ತಂದಿದ್ದೆಲ್ಲಿ? – ಅನಾಮಿಕ ದೂರುದಾರನ ತೀವ್ರ ವಿಚಾರಣೆ

    ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ತನಿಖೆ ಅಗಬೇಕು. ಡಿ.ಕೆ ಶಿವಕುಮಾರ್ ಅವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ ಎಂದು ಹೇಳಿದ್ದಾರೆ. ಷಡ್ಯಂತ್ರ ಯಾರು ಮಾಡ್ತಿದ್ದಾರೆ? ಈ ವಿಚಾರವನ್ನು ಬಹಿರಂಗಪಡಿಸಬೇಕು. ಈಗ ಸತ್ಯ ಹೇಳುವುದಕ್ಕೆ ಸೂಕ್ತ ಕಾಲ ಎಂದು ಒತ್ತಾಯಿಸಿದರು.

    ಅನಾಮಿಕನ ಹಿನ್ನೆಲೆಯೂ ತನಿಖೆ ಆಗಬೇಕು. ಅನಾಮಿಕನ ಹಿಂದಿರುವ ಶಕ್ತಿಯ ಬಗ್ಗೆಯೂ ತನಿಖೆ ಆಗಬೇಕು. ದುರುದಾರ ಹೇಳಿದ ಹಾಗೇ ಗುಂಡಿ ತೋಡಲಾಗಿದೆ. ಅಲ್ಲಿ ಏನು ಸಿಕ್ಕಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್‌