Tag: ಹೆಲಿಕಾಪ್ಟರ್ ಪತನ

  • ಅರ್ಧಗಂಟೆ ಅಂತರದಲ್ಲಿ 2 ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

    ಅರ್ಧಗಂಟೆ ಅಂತರದಲ್ಲಿ 2 ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

    – ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರತ್ಯೇಕ ಅಪಘಾತ

    ವಾಷಿಂಗ್ಟನ್‌/ಬೀಜಿಂಗ್‌: ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಅಮೆರಿಕ ನೌಕಾಪಡೆಯ (US Navy) ಒಂದು ಹೆಲಿಕಾಪ್ಟರ್‌, ಒಂದು ಫೈಟರ್‌ ಜೆಟ್‌ ಪತನಗೊಂಡಿದೆ. ಘಟನೆಯಲ್ಲಿ ಎಲ್ಲಾ ಐವರು ಸೇನಾ ಸಿಬ್ಬಂದಿಯನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

    ವರದಿಗಳ ಪ್ರಕಾರ, ಮೊದಲ ಅಪಘಾತ ಭಾನುವಾರ 2:45ರ ಸುಮಾರಿಗೆ ನಡೆದಿದೆ. ʻಬ್ಯಾಟಲ್ ಕ್ಯಾಟ್ಸ್ʼ ಸ್ಕ್ವಾಡ್ರನ್-73ಕ್ಕೆ ಸೇರಿದ MH-60R ಸೀ ಹಾಕ್ ಹೆಲಿಕಾಪ್ಟರ್ ವಿಮಾನವಾಹಕ ನೌಕೆ ʻUSS ನಿಮಿಟ್ಜ್ʼನಿಂದ ಹೊರಟು ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅಪಘಾತಕ್ಕೀಡಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕ್ಯಾರಿಯರ್‌ ಸ್ಟ್ರೈಕ್‌ ಗ್ರೂಪ್‌-11 ಹಾಗೂ ನೌಕಾಪಡೆಯ ರಕ್ಷಣಾ ತಂಡಗಳು ತ್ವರಿತ ಕಾರ್ಯಾಚರಣೆ ಶುರು ಮಾಡಿದ್ದವು. ಈ ವೇಳೆ ಮೂವರು ಸಿಬ್ಬಂದಿಯನ್ನ ರಕ್ಷಣೆ ಮಾಡಿದವು. ಇದನ್ನೂ ಓದಿ: ಎಐ ಸಚಿವೆ ಈಗ ಗರ್ಭಿಣಿ, 83 ಮಕ್ಕಳ ತಾಯಿಯಾಗ್ತಾರೆ: ಅಲ್ಬೇನಿಯಾ ಪ್ರಧಾನಿಯ ವಿಲಕ್ಷಣ ಘೋಷಣೆ

    ಇದಾದ 30 ನಿಮಿಷಗಳಲ್ಲೇ ಮಧ್ಯಾಹ್ನ 3:15ರ ಸುಮಾರಿಗೆ 2ನೇ ದುರಂತ ನಡೆದಿದೆ. ʻಫೈಟಿಂಗ್ ರೆಡ್‌ಹಾಕ್ಸ್ʼ ಸ್ಕ್ವಾಡ್ರನ್ 22ರ F/A-18F ಸೂಪರ್ ಹಾರ್ನೆಟ್ ಫೈಟರ್ ಜೆಟ್ (Fighter Jet Crash) ಸಹ ಅದೇ ವಿಮಾನವಾಹಕ ನೌಕೆಯಿಂದ (ಯುದ್ಧ ಹಡಗು) ಟೇಕಾಫ್ ಆಗಿ, ಬಳಿಕ ಸಮುದ್ರಕ್ಕೆ ಅಪ್ಪಳಿಸಿತು. ಜೆಟ್‌ನಲ್ಲಿದ್ದ ಇಬ್ಬರು ಫೈಟರ್‌ ಪೈಲಟ್‌ಗಳು ಪ್ಯಾರಾಚೂಚ್‌ ಮೂಲಕ ಜೀವ ಉಳಿಸಿಕೊಂಡರು. ಇದನ್ನೂ ಓದಿ: ಮಂಗಳೂರು| ಭಾರತೀಯ ತಟ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ

    ಎರಡೂ ದುರಂತಗಳಲ್ಲಿ ಎಲ್ಲಾ ಐವರು ಸಿಬ್ಬಂದಿಯನ್ನ ರಕ್ಷಣೆ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ಕಳಿಸಲಾಗಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ. ಎರಡೂ ಅಪಘಾತಕ್ಕೆ ನಿಖರ ಕಾರಣಗಳ ಬಗ್ಗೆ ಅಮೆರಿಕ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ದೇಶಾದ್ಯಂತ SIR – ಮೊದಲ ಹಂತದ 10-15 ರಾಜ್ಯಗಳ ವೇಳಾಪಟ್ಟಿ ಇಂದು ಪ್ರಕಟ

  • ಲ್ಯಾಂಡಿಂಗ್ ಟೆಸ್ಟ್ ವೇಳೆ ಪಾಕ್‌ನ ಸರ್ಕಾರಿ ಹೆಲಿಕಾಪ್ಟರ್ ಪತನ – ಐವರು ಸಾವು

    ಲ್ಯಾಂಡಿಂಗ್ ಟೆಸ್ಟ್ ವೇಳೆ ಪಾಕ್‌ನ ಸರ್ಕಾರಿ ಹೆಲಿಕಾಪ್ಟರ್ ಪತನ – ಐವರು ಸಾವು

    ಇಸ್ಲಾಮಾಬಾದ್: ಹೊಸದಾಗಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್ ಮೇಲೆ ಲ್ಯಾಂಡಿಂಗ್ ಟೆಸ್ಟ್ ನಡೆಸುತ್ತಿದ್ದಾಗ ಪಾಕಿಸ್ತಾನದ ಸರ್ಕಾರಿ ಹೆಲಿಕಾಪ್ಟರ್ ಪತನಗೊಂಡು ಐವರು ಸಾವನ್ನಪ್ಪಿರುವ ಘಟನೆ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ (Gilgit-Baltistan) ನಡೆದಿದೆ.

    ಸೋಮವಾರ (ಸೆ.01) ಗಿಲ್ಗಿಟ್-ಬಾಲ್ಟಿಸ್ತಾನ್‌ನ ಡೈಮರ್ ಜಿಲ್ಲೆಯ ಚಿಲಾಸ್‌ನ ಥೋರ್ ಪ್ರದೇಶದ ಬಳಿ ಈ ಅವಘಡ ಸಂಭವಿಸಿದೆ. ಪರಿಣಾಮ ಇಬ್ಬರು ಪೈಲಟ್ ಸೇರಿ ಮೂವರು ತಂತ್ರಜ್ಞರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಹೊಸದಾಗಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಪರೀಕ್ಷೆ ನಡೆಸುತ್ತಿದ್ದಾಗ Mi-17 ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಐದು ಜನರೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಇತ್ತೀಚಿಗೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ (Khyber Pakhtunkhwa) ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ MI-17 ಸರ್ಕಾರಿ ಹೆಲಿಕಾಪ್ಟರ್ ಪತನಗೊಂಡಿತ್ತು. ಅದಾದ ಕೆಲವು ದಿನಗಳ ನಂತರ ಇದೀಗ ಮತ್ತೊಂದು ಹೆಲಿಕಾಪ್ಟರ್ ಪತನಗೊಂಡಿದೆ.ಇದನ್ನೂ ಓದಿ: ಭೋವಿ ನಿಗಮದಲ್ಲಿ 60% ಕಮಿಷನ್‌, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್‌

  • ಘಾನಾದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ಸಚಿವರು ಸೇರಿ 8 ಮಂದಿ ಸಾವು

    ಘಾನಾದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ಸಚಿವರು ಸೇರಿ 8 ಮಂದಿ ಸಾವು

    ಘಾನಾ: ಇಲ್ಲಿನ ರಾಜಧಾನಿ ಅಕ್ರಾದಿಂದ (Accra) ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಘಾನಾ ವಾಯುಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ (Military Helicopter) ಪತನಗೊಂಡು ಇಬ್ಬರು ಸಚಿವರು ಸೇರಿ ಎಂಟು ಜನ ಸಾವನ್ನಪ್ಪಿದ್ದಾರೆ.

    ಬುಧವಾರ (ಆ.6) ಬೆಳಿಗ್ಗೆ ಅಕ್ರಾದಿಂದ ಚಿನ್ನದ ಗಣಿಗಾರಿಕಾ ಪ್ರದೇಶವಾದ ಒಬುವಾಸಿಗೆ ಹೋಗುತ್ತಿದ್ದ Z9 ಮಿಲಿಟರಿ ಹೆಲಿಕಾಪ್ಟರ್ ಘಾನಾದ ದಕ್ಷಿಣದಲ್ಲಿರುವ ಅಶಾಂತಿ ಎಂಬಲ್ಲಿ ಪತನಗೊಂಡಿದೆ. ಈ ವೇಳೆ ಘಾನಾದ ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ, ಪರಿಸರ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಮೃತಪಟ್ಟಿರುವುದಾಗಿ ಘಾನಾ ಸರ್ಕಾರ ದೃಢಪಡಿಸಿದೆ.ಇದನ್ನೂ ಓದಿ: ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್

    ಇನ್ನುಳಿದಂತೆ ಮೂವರು ಅಧಿಕಾರಿಗಳು ಹಾಗೂ ಮೂವರು ಹೆಲಿಕಾಪ್ಟರ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    Z9 ಮಿಲಿಟರಿ ಹೆಲಿಕಾಪ್ಟರ್‌ನ್ನು ಸಾಮಾನ್ಯವಾಗಿ ಸಾರಿಗೆ ಹಾಗೂ ವೈದ್ಯಕೀಯ ಸಂಬಂಧಿತ ವಸ್ತುಗಳನ್ನು ಸ್ಥಳಾಂತರಿಸಲು ಉಪಯೋಗಿಸುತ್ತಾರೆ. ಸದ್ಯ ಈ ಅವಘಡವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಲಾಗಿದೆ. ಇದು ಕಳೆದ ಒಂದು ದಶಕದಲ್ಲಿ ಘಾನಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ.

    ಇದಕ್ಕೂ ಮುನ್ನ 2014ರಲ್ಲಿ ಹೆಲಿಕಾಪ್ಟರ್‌ವೊಂದು ಕರಾವಳಿಯಲ್ಲಿ ಪತನಗೊಂಡು ಮೂರು ಜನರು ಸಾವನ್ನಪ್ಪಿದ್ದರು. 2021ರಲ್ಲಿ ವಿಮಾನವೊಂದು ರನ್‌ವೇ ದಾಟಿದ ಬಳಿಕ ಪ್ರಯಾಣಿಕರಿದ್ದ ಬಸ್‌ಗೆ ಡಿಕ್ಕಿ ಹೊಡೆದು 10 ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ

  • ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

    ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

    ಡೆಹ್ರಾಡೂನ್: ಕೇದಾರನಾಥಕ್ಕೆ (Kedarnath) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ (Uttarakhand) ಗೌರಿಕುಂಡ (Gaurikund) ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ.

    ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ತ್ರಿಜುಗಿನಾರಾಯಣ ಮತ್ತು ಗೌರಿಕುಂಡ ನಡುವೆ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ವಿ. ಮುರುಗೇಶನ್ ತಿಳಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

    ಹವಾಮಾನ ವೈಪರೀತ್ಯದದಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಳಗಿನ ಜಾವ 5:20ರ ಸುಮಾರಿಗೆ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿದಿದೆ.

    ಘಟನೆ ಸಂಬಂಧ ಕಮೀಷನರ್ ವಿನಯ್ ಶಂಕರ್ ಪಾಂಡೆ ಪ್ರತಿಕ್ರಿಯಿಸಿ, ಹೆಲಿಕ್ಯಾಪ್ಟರ್ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್ ಚೌಹನ್, ಒಂದು ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ಕೂಡ ಇದೇ ಹೆಲಿಕಾಪ್ಟರ್‌ನಲ್ಲಿ ಇದ್ದರು. ಈ ಹೆಲಿಕಾಪ್ಟರ್ ಆರ್ಯನ್ ಕಂಪನಿಗೆ ಸೇರಿದೆ ಎಂದು ತಿಳಿಸಿದ್ದಾರೆ.

    ಹೆಲಿಕಾಪ್ಟರ್ ದುರಂತದ ಬಗ್ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಎಕ್ಸ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋವು ತರಿಸಿದೆ. ಸ್ಥಳೀಯ ರಕ್ಷಣಾ ತಂಡಗಳು, ಸ್ಥಳಿಯ ಆಡಳಿತಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  • ಉತ್ತರಾಖಂಡ | ಭಾಗೀರಥಿ ನದಿ ಬಳಿ ಖಾಸಗಿ ಹೆಲಿಕಾಪ್ಟರ್ ಪತನ – ಐವರು ದುರ್ಮರಣ

    ಉತ್ತರಾಖಂಡ | ಭಾಗೀರಥಿ ನದಿ ಬಳಿ ಖಾಸಗಿ ಹೆಲಿಕಾಪ್ಟರ್ ಪತನ – ಐವರು ದುರ್ಮರಣ

    ಡೆಹ್ರಾಡೂನ್‌: ಗಂಗಾ ನದಿಯ ಮೂಲ ತೊರೆಗಳಲ್ಲಿ ಒಂದಾದ ಗಂಗೋತ್ರಿ ಕಡೆಗೆ ಹೊರಟಿದ್ದ ಖಾಸಗಿ ಹೆಲಿಕಾಪ್ಟರ್‌ ಪತನಗೊಂಡು (Private Chopper Crash) ಐವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು, ಸೇನಾ ಸಿಬ್ಬಂದಿ, ವಿಪತ್ತು ನಿರ್ವಹಣಾ QRT ತಂಡ, 108 ಆಂಬ್ಯುಲೆನ್ಸ್, ಭಟ್ವಾರಿಯ ಬಿಡಿಒ, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ಪ್ರಾಥಮಿಕ ವರದಿಗಳ ಪ್ರಕಾರ, ಖಾಸಗಿ ಹೆಲಿಕಾಪ್ಟರ್‌ನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ (Hospital) ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್‌ ಉಚಿತ ಮರುಹೊಂದಿಕೆ ಆಫರ್‌

  • ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

    ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

    – ದೇಶದಲ್ಲಿ 5 ದಿನ ಶೋಕಾಚರಣೆ

    ಟೆಹ್ರಾನ್:‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Risi) ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ನಿಧನರಾದ ನಂತರ ಇರಾನ್ ದೊಡ್ಡ ಘೋಷಣೆಯೊಂದನ್ನು ಮಾಡಿದೆ. ರೈಸಿ ಅವರ ಸಾವಿನ ಬಳಿಕ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಸಲು ಇರಾನ್ ನಿರ್ಧರಿಸಿದೆ. ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ (Iran Presidential Election) ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

    ಸರ್ಕಾರ ಮತ್ತು ಸಂಸತ್ತಿನ ಮುಖ್ಯಸ್ಥರ ಸಭೆಯಲ್ಲಿ 14 ನೇ ಅಧ್ಯಕ್ಷೀಯ ಚುನಾವಣೆಯನ್ನು ಜೂನ್ 28 ರಂದು ನಡೆಸಲು ನಿರ್ಧರಿಸಲಾಯಿತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶದಲ್ಲಿ 5 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮಂಗಳವಾರ ಭಾರತದಲ್ಲಿ ಶೋಕಾಚರಣೆ

    ಹೆಲಿಕಾಪ್ಟರ್ ಪತನ: ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಭಾನುವಾರದಂದು ದಟ್ಟವಾದ ಮಂಜಿನಿಂದಾಗಿ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಪರ್ವತ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಪ್ರತಿಕೂಲ ಹವಾಮಾನದಿಂದಾಗಿ, ಶೋಧ ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳವನ್ನು ತಲುಪಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಕೊನೆಗೆ ಸೋಮವಾರ ಮುಂಜಾನೆ ಅವಘಡ ನಡೆದ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು. ಈ ಅಪಘಾತದಲ್ಲಿ ಇರಾನ್‌ನ ವಿದೇಶಾಂಗ ಸಚಿವರೂ ಮೃತಪಟ್ಟಿದ್ದಾರೆ.

  • ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ನವದೆಹಲಿ/ಟೆಹ್ರಾನ್: ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿದ್ದ ಇರಾನ್ (Iran Helicopter Tragedy) ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Risi) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಎಕ್ಸ್ ಮಾಡಿರುವ ಪ್ರಧಾನಿ ಮೋದಿ (Narendra Modi), ಇರಾನ್‍ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇರಾನ್‍ನ ಜನರು ಈ ದುಃಖದ ಸಮಯದಲ್ಲಿ ಇರಾನ್‍ನೊಂದಿಗೆ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಘಟನೆ ವಿವರ: ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಜರ್ ಬೈಜಾನ್‍ನ ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನವಾಗಿತ್ತು.‌ ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

    ಕಡಿದಾದ ಪರ್ವತ ಶ್ರೇಣಿಯ ಕಣಿವೆ ಭಾಗದಲ್ಲಿ ಪ್ರತಿಕೂಲ ವಾತಾವರಣದ ನಡುವೆ ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಡ್ರೋನ್ ಮೂಲಕ ಪತನಗೊಂಡ ಹೆಲಿಕಾಪ್ಟರ್ ಅವಶೇಷ ಪತ್ತೆ ಮಾಡಲಾಗಿತ್ತು. ಹೆಲಿಕಾಪ್ಟರ್ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.

    ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವ ಹೊಸೈನ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲ 9 ಮಂದಿ ಬಲಿಯಾಗಿದ್ದಾರೆ. ಈ ಹೆಲಿಕಾಪ್ಟರ್ ನಲ್ಲಿ ಪೂರ್ವ ಅಜರ್‍ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ಮೂವರು ಇರಾನ್ ಅಧಿಕಾರಿಗಳು ಹಾಗೂ ಭದ್ರತಾ ತಂಡದ ಸದಸ್ಯರಿದ್ದು, ಎಲ್ಲರೂ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

  • ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರ್ವತಗಳ ಮಧ್ಯೆ ಪತನ: ವರದಿ

    ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರ್ವತಗಳ ಮಧ್ಯೆ ಪತನ: ವರದಿ

    – ದಟ್ಟ ಮಂಜಿನಲ್ಲಿ ಪರ್ವತಗಳಲ್ಲಿ ರಕ್ಷಣಾ ಕಾರ್ಯಾಚರಣೆ; ಇನ್ನೂ ಸಿಗದ ಸುಳಿವು

    ಟೆಹ್ರಾನ್: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌, ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ದಟ್ಟ ಮಂಜಿನಿಂದಾಗಿ ಪತನವಾಗಿದೆ ಎಂದು ಇರಾನ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಜರ್‌ಬೈಜಾನ್‌ನ ಗಡಿಗೆ ಭೇಟಿ ನೀಡಿ ಹಿಂತಿರುಗುವ ಮಾರ್ಗದಲ್ಲಿ ದಟ್ಟ ಮಂಜಿನಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ಅಪಘಾತಕ್ಕೀಡಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅಪಘಾತ

    ಹೆಲಿಕಾಪ್ಟರ್ ಅಪಘಾತದಿಂದಾಗಿ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಅವರು ಅಪಾಯದಲ್ಲಿದ್ದಾರೆ. ಅವರಿಗೆ ಏನೂ ಆಗಿಲ್ಲ ಎಂಬ ಭರವಸೆಯಲ್ಲಿದ್ದೇವೆ. ಆದರೆ ಅಪಘಾತದ ಸ್ಥಳದ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    ಕೆಟ್ಟ ಹವಾಮಾನವು ರಕ್ಷಣಾ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತಿದೆ. ಭಾರೀ ಮಂಜಿ ಇರುವ ಪರ್ವತ ಪ್ರದೇಶದಲ್ಲಿ ರಕ್ಷಣಾ ತಂಡಗಳು ಕಾಲ್ನಡಿಗೆಯಲ್ಲಿ ಹುಡುಕಾಟದಲ್ಲಿ ಕಾರ್ಯನಿರತವಾಗಿವೆ. ದೇಶದಾದ್ಯಂತ ರೈಸಿಗಾಗಿ ಪ್ರಾರ್ಥಿಸಲಾಗುತ್ತಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

    63 ವಯಸ್ಸಿನ ರೈಸಿ 2021 ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ವಹಿಸಿಕೊಂಡಾಗಿನಿಂದ ನೈತಿಕತೆಯ ಕಾನೂನುಗಳನ್ನು ಬಿಗಿಗೊಳಿಸುವಂತೆ ಆದೇಶಿಸಿದ್ದರು. ವಿಶ್ವ ಶಕ್ತಿಗಳೊಂದಿಗೆ ಪರಮಾಣು ಮಾತುಕತೆಗಳನ್ನು ತಳ್ಳಿಹಾಕಿದ್ದರು.

  • ಹೆಲಿಕಾಪ್ಟರ್‌ ಪತನ; ಕೀನ್ಯಾದ ರಕ್ಷಣಾ ಪಡೆಗಳ ಮುಖ್ಯಸ್ಥ ಸೇರಿ 10 ಮಂದಿ ಸಾವು

    ಹೆಲಿಕಾಪ್ಟರ್‌ ಪತನ; ಕೀನ್ಯಾದ ರಕ್ಷಣಾ ಪಡೆಗಳ ಮುಖ್ಯಸ್ಥ ಸೇರಿ 10 ಮಂದಿ ಸಾವು

    ನೈರೋಬಿ: ಕೀನ್ಯಾದ ರಕ್ಷಣಾ ಮುಖ್ಯಸ್ಥರು (Kenya Military Chief) ಮತ್ತು ಇತರ ಒಂಬತ್ತು ಉನ್ನತ ಅಧಿಕಾರಿಗಳು ಗುರುವಾರ ಮಿಲಿಟರಿ ಹೆಲಿಕಾಪ್ಟರ್ (Helicopter Crash) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.

    ಗುರುವಾರ ಮಧ್ಯಾಹ್ನ 2:20 ರ ಸಮಯಕ್ಕೆ ನಮ್ಮ ರಾಷ್ಟ್ರವು ದುರಂತ ಹೆಲಿಕಾಪ್ಟರ್‌ ಅಪಘಾತವನ್ನು ಅನುಭವಿಸಿದೆ. ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಅವರ ನಿಧನವನ್ನು ಘೋಷಿಸಲು ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ರುಟೊ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕಚೇರಿಯಲ್ಲೇ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿದ 28 ಗೂಗಲ್‌ ಸಿಬ್ಬಂದಿ ವಜಾ

    ರಾಜಧಾನಿ ನೈರೋಬಿಯ ವಾಯುವ್ಯಕ್ಕೆ 400 ಕಿಲೋಮೀಟರ್ (250 ಮೈಲುಗಳು) ದೂರದಲ್ಲಿರುವ ಎಲ್ಜಿಯೊ ಮರಕ್ವೆಟ್ ಕೌಂಟಿಯಲ್ಲಿ ಹೆಲಿಕಾಪ್ಟರ್‌ ಪತನವಾಯಿತು. ಅವಘಡಕ್ಕೆ ಕಾರಣ ತಿಳಿಯಲು ಕೀನ್ಯಾ ವಾಯುಪಡೆಯು ತನಿಖಾ ತಂಡವನ್ನು ಕಳುಹಿಸಿದೆ ಎಂದು ರುಟೊ ಹೇಳಿದ್ದಾರೆ.

    ಹೆಲಿಕಾಪ್ಟರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ರಾಜಧಾನಿ ನೈರೋಬಿಯ ವಾಯುವ್ಯಕ್ಕೆ ಸುಮಾರು 400 ಕಿಮೀ (250 ಮೈಲುಗಳು) ಎಲ್ಗೆಯೊ ಮರಕ್ವೆಟ್ ಕೌಂಟಿಯಲ್ಲಿ ಪತನಗೊಂಡಿದೆ ಎಂದು ರುಟೊ ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ನಿಷೇಧ ಹೇರಿದ ಪಾಕ್‌ ಸರ್ಕಾರ

    ಒಗೊಲ್ಲಾ ಅವರು ವಾಯುಪಡೆಯ ಕಮಾಂಡರ್ ಮತ್ತು ರಕ್ಷಣಾ ಪಡೆಗಳ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ಕಳೆದ ವರ್ಷದ ಏಪ್ರಿಲ್‌ನಲ್ಲಿ ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

  • ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಪತನವಾಗಿರುವ ಆಘಾತಕಾರಿ ಘಟನೆ ಗುರುವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವರ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮಚ್ನಾ ಗ್ರಾಮದ ಬಳಿ ಸೇನೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದ ವೇಳೆ ಹೆಲಿಕಾಪ್ಟರ್‌ನಲ್ಲಿ ಮೂರು ಮಂದಿ ಇದ್ದರು ಎನ್ನಲಾಗಿದೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ

    ಹೆಲಿಕಾಪ್ಟರ್ ಪತನದಿಂದಾಗಿ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ 2 ತಿಂಗಳಲ್ಲಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಅಪಘಾತವಾಗಿರುವ 3ನೇ ಘಟನೆ ಇದಾಗಿದೆ. ಇದನ್ನೂ ಓದಿ: ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ