Tag: ಸಮಾಜವಾದಿ ಪಕ್ಷ

  • ಅಖಿಲೇಶ್ ಯಾದವ್ ಬಾಬುವಾಗಿಯೇ ಇರ್ತಾರೆ: ಯೋಗಿ ವ್ಯಂಗ್ಯ

    ಅಖಿಲೇಶ್ ಯಾದವ್ ಬಾಬುವಾಗಿಯೇ ಇರ್ತಾರೆ: ಯೋಗಿ ವ್ಯಂಗ್ಯ

    ಲಕ್ನೋ: ಅಖಿಲೇಶ್ ಯಾದವ್ ಅವರು ತಮ್ಮ ಜೀವನುದ್ದಕ್ಕೂ ಚಿಕ್ಕ ಹುಡುಗನಾಗಿಯೇ(ಬಾಬು) ಇರುತ್ತಾನೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಖಿಲೇಶ್ ಯಾದವ್ ಅವರನ್ನು ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸರ್ಕಾರದ ಯೋಜನೆಗಳನ್ನು ಮೇಲ್ವಿಚಾರಣೆ ನಿರ್ವಹಿಸಲು ಇ-ಡ್ಯಾಶ್‍ಬೋರ್ಡ್ ಬಳಸುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡಿದರು.

    ಅಖಿಲೇಶ್ ಯಾದವ್ ಅವರು ಗ್ಯಾಜೆಟ್‍ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಟ್ಯಾಬ್ಲೆಟ್‍ಗಳು ಮತ್ತು ಸ್ಮಾರ್ಟ್‍ಫೋನ್ ಗಳ ವಿತರಣೆಯನ್ನು ವಿಳಂಬ ಮಾಡಿದರು ಎಂದು ಅಖಿಲೇಶ್ ಯಾದವ್ ಅವರ ‘ಬಾಬಾ ಮುಖ್ಯಮಂತ್ರಿಯಾಗಿದ್ದಾರೆ’ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

    ಅಖಿಲೇಶ್ ಯಾದವ್ ಅವರು ನೀಡಿರುವ ಹೇಳಿಕೆಯೂ ಬಾಲಿಶವಾಗಿದೆ. ಇದರಿಂದಾಗಿ ಅವರು ಜೀವನುದ್ದಕ್ಕೂ ಬಾಬುವಾಗೇ(ಚಿಕ್ಕ ಮಗು) ಉಳಿಯುತ್ತಾರೆ. ಅವರು ಮೌಲ್ಯ ಮತ್ತುಸಂಸ್ಕೃತಿಯಿಂದ ದೂರವಿರುತ್ತಾರೆ ಎಂದು ಕಿಡಿಕಾರಿದರು.

    ತಮ್ಮ ಸರ್ಕಾರವು ಉತ್ತಮ ಆಡಳಿತದ ಭಾಗವಾಗಿ ಐಟಿಯನ್ನು ಬಳಸುತ್ತಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಧ್ಯವರ್ತಿಗಳು ಅಭಿವೃದ್ಧಿ ಯೋಜನೆಗಳ ಹಣವನ್ನು ಲೂಠಿ ಮಾಡಿತ್ತು. ಇದನ್ನು ತಡೆಯಲು ನಮ್ಮ ಸರ್ಕಾರವು ಇ-ಟೆಂಡರ್ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅಖಿಲೇಶ್‍ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬಿಜೆಪಿಯ ಮುಸ್ಲಿಂ ವಿರೋಧಿ ಪೋಸ್ಟ್‌ ಡಿಲೀಟ್‌ ಮಾಡಿದ ಟ್ವಿಟ್ಟರ್‌

  • ಭಯೋತ್ಪಾದಕ ಒಸಾಮಾನನ್ನು ʼಜೀʼ ಎನ್ನುತ್ತಿದ್ದರು: ಕಾಂಗ್ರೆಸ್‌, ಎಸ್‌ಪಿ ವಿರುದ್ಧ ಮೋದಿ ಆರೋಪ

    ಭಯೋತ್ಪಾದಕ ಒಸಾಮಾನನ್ನು ʼಜೀʼ ಎನ್ನುತ್ತಿದ್ದರು: ಕಾಂಗ್ರೆಸ್‌, ಎಸ್‌ಪಿ ವಿರುದ್ಧ ಮೋದಿ ಆರೋಪ

    ಲಕ್ನೋ: ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್‌ ಪಕ್ಷದ ನಾಯಕರು, ಉಗ್ರರ ಮೇಲೆ ಮೃದು ಧೋರಣೆ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆ ಹಾರ್ಡೋಯಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ನಾಯಕರ ವರ್ತನೆ ಇನ್ನಷ್ಟು ಆತಂಕಕಾರಿಯಾಗಿದೆ. ಇವರು ಒಸಾಮಾ ಅವರಂತಹ ಭಯೋತ್ಪಾದಕರನ್ನು ʼಜೀʼ ಎಂದು ಸಂಬೋಧಿಸುತ್ತಾರೆ. ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರ ನಿರ್ಮೂಲನೆಗಾಗಿ ಇವರು ಕಣ್ಣೀರು ಹಾಕಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    2008ರ ಅಹಮದಾಬಾದ್‌ ಸರಣಿ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನೆನಪಿಸಿಕೊಂಡ ಮೋದಿ, ಕೆಲವು ಪಕ್ಷಗಳು ಭಯೋತ್ಪಾಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂದು ಕುಟುಕಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆದಿದ್ದ 14 ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಆಗಿನ ಸಮಾಜವಾದಿ ಸರ್ಕಾರ ಹಲವು ಭಯೋತ್ಪಾದಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಆದೇಶ ನೀಡಿತ್ತು. ಈ ಭಯೋತ್ಪಾದಕರು ಸ್ಫೋಟದ ಮೇಲೆ ಸ್ಫೋಟಗಳನ್ನು ನಡೆಸುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಜರುಗಿಸಲು ಸಮಾಜವಾದಿ ಪಕ್ಷ ಬಿಡುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಅಖಿಲೇಶ್‌ ಯಾದವ್‌ ಅವರ ಪಕ್ಷವು ಪಾಕಿಸ್ತಾನ ಮತ್ತು ಮಹಮ್ಮದ್‌ ಅಲಿ ಜಿನ್ನಾ ಅವರ ಬೆಂಬಲಿಗರು ಎಂದು ಚುನಾವಣಾ ಪ್ರಚಾರದ ಪೂರ್ವದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದರು. ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ʼಮೌಲಾನಾ ಮುಲಾಯಂʼ ಎಂದು ಬಿಜೆಪಿ ನಾಯಕರು ಕರೆದಿದ್ದರು. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

  • ಎಸ್‍ಪಿ ಹಿರಿಯ ನಾಯಕ ಅಹ್ಮದ್ ಹಸನ್ ನಿಧನ – ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡ ಸಾವು

    ಎಸ್‍ಪಿ ಹಿರಿಯ ನಾಯಕ ಅಹ್ಮದ್ ಹಸನ್ ನಿಧನ – ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡ ಸಾವು

    ಲಕ್ನೋ: ಉತ್ತರ ಪ್ರದೇಶ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಹ್ಮದ್ ಹಸನ್ ಅವರು ಇಂದು ನಿಧನರಾಗಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ಹಜ್ನಾ ಬೇಗಂ(75) ಕೂಡ ಕೊನೆಯುಸಿರೆಳೆದಿದ್ದಾರೆ.

    ದಂಪತಿ ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಹ್ಮದ್ ಹಸನ್ ಅವರನ್ನು ಕೆಲವು ದಿನಗಳ ಹಿಂದೆ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು ಅವರ ಅಳಿಯ ಫಿದಾ ಹುಸೇನ್ ಅನ್ಸಾರಿ ತಿಳಿದ್ದಾರೆ.

    ಇಂದು ಅಂಬೇಡ್ಕರ್‌ನಗರ ಜಿಲ್ಲೆಯ ಅವರ ಪೂರ್ವಜರ ಸ್ಥಳವಾದ ಜಲಾಲ್‍ಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಹ್ಮದ್ ಹಸನ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ರಾಜಕೀಯಕ್ಕೆ ಕರೆತಂದರು. ಆರು ಬಾರಿ ಎಂಎಲ್‍ಸಿಯಾಗಿದ್ದ ಅವರು ಎಸ್‍ಪಿ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿ ನೇಮಕಗೊಂಡಿದ್ದರು.

    ಹಸನ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಹ್ಮದ್ ಹಾಸನ್ ಅವರ ನಿಧನ ನಮಗೆಲ್ಲರಿಗೂ ಅತೀವ ದುಃಖ ತಂದಿದೆ. ಹೃತ್ಪೂರ್ವಕ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.

    ಡಿಸೆಂಬರ್‌ನಲ್ಲಿ ಸದನದ ಕಲಾಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹಸನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಯಿತು. ಅಲ್ಲದೇ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಸನ್ ಅವರನ್ನು ಭೇಟಿ ಮಾಡಿದ್ದರು.

  • ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ

    ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ

    ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಭಯೋತ್ಪಾದನೆಯನ್ನು ಹರಡಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ವಿಧಾನಸಭಾ ಮೂರನೇ ಹಂತದ ಚುನಾವಣೆಗೂ ಮುನ್ನ ಪ್ರಚಾರ ನಡೆಸಿದ ಅವರು, ತಾವು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಬ್ಬರೂ ಕೂಡ ರಾಜ್ಯದಲ್ಲಿ ಮತ್ತೆ ಗೆದ್ದರೆ ಬಿಜೆಪಿ ಪ್ರತಿ ವರ್ಷ ಎರಡು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ:  40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

    ಬಂದಾ ಜಿಲ್ಲೆಯ ತಿಂದವಾರಿ ವಿಧಾನಸಭೆ ಕ್ಷೇತ್ರದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಸೈಕಲ್ ಸರ್ಕಾರ (ಸಮಾಜವಾದಿ ಪಕ್ಷದ ಚಿಹ್ನೆ) ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶವು ದೇಶಾದ್ಯಂತ ಭಯೋತ್ಪಾದನೆಯನ್ನು ಹರಡಿಸುತ್ತದೆ. ಈ ಮುನ್ನ ಅಖಿಲೇಶ್ ನೇತೃತ್ವದ ಸರ್ಕಾರದಲ್ಲಿ 2,000 ರೈತರು ಹಸಿವಿನಿಂದ ಸತ್ತಿದ್ದರು. ಆದರೆ ತಮ್ಮ ಮತ್ತು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಎರಡು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಮತ್ತು ಹೋಳಿ, ದೀಪಾವಳಿ ಸಮಯದಲ್ಲಿ ಪದವಿ ಓದುತ್ತಿರುವ ಯುವತಿಯರಿಗೆ ಸ್ಕೂಟಿ ನೀಡುತ್ತೇವೆ ಎಂದು ಹೇಳಿದ್ದಾರೆ.

     

    ಮತ್ತೊಂದೆಡೆ ಮುಖ್ಯಮಂತ್ರಿ ಯೋಗಿ ಆದಿಯಾನಾಥ್ ನೇತೃತ್ವದಲ್ಲಿ ರಾಯ್‍ಬರೇಲಿಯ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ಅವರು, ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಬಾಹುಬಲಿಗಳಿಲ್ಲ. ಭಜರಂಗಬಲಿ ಮಾತ್ರ ಇದೆ. ವಿರೋಧ ಪಕ್ಷಗಳು (ಎಸ್‍ಪಿ, ಬಿಎಸ್‍ಪಿ ಮತ್ತು ಕಾಂಗ್ರೆಸ್) ಬಡವರ ಹೆಸರಿನಲ್ಲಿ ಮತಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಯಾವುದೇ ಪ್ರಧಾನಿ ಬಡವರಿಗೆ ಒಳ್ಳೆಯದನ್ನು ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

    ಕೆಲವು ದಿನಗಳ ಹಿಂದೆ ಅಖಿಲೇಶ್ ಯಾದವ್ ಕಾನೂನು ಸುವ್ಯವಸ್ಥೆಯಲ್ಲಿ ಏನಾಗಿದೆ ಎಂದು ಕೇಳಿದ್ದರು. ಇದಕ್ಕೆ ಬಿಜೆಪಿ ಯಾರ ಕನ್ನಡಕ ಹಳದಿಯಾಗಿದೆಯೋ ಅವರು ಹಳದಿ ಬಣ್ಣವನ್ನು ನೋಡುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ 72% ದರೋಡೆ, 62% ಕಳ್ಳತನ, 31% ಕೊಲೆ, 29% ಅಪಹರಣ, 50% ಅತ್ಯಾಚಾರ ಕಡಿಮೆಯಾಗಿದೆ ಎಂದು ಟ್ವೀಟ್ ಮಾಡಿದೆ.

  • ಸಮಾಜವಾದಿ ಪಕ್ಷದವರು ರಾಮಭಕ್ತರಿಗೆ ಗುಂಡು ಹಾರಿಸಲಿಲ್ಲವೇ: ಜೆಪಿ ನಡ್ಡಾ ಪ್ರಶ್ನೆ

    ಸಮಾಜವಾದಿ ಪಕ್ಷದವರು ರಾಮಭಕ್ತರಿಗೆ ಗುಂಡು ಹಾರಿಸಲಿಲ್ಲವೇ: ಜೆಪಿ ನಡ್ಡಾ ಪ್ರಶ್ನೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಿಡಿಕಾರಿದ್ದಾರೆ.

    ಸುಲ್ತಾನಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಪಿ ನಡ್ಡಾ, ಸಮಾಜವಾದಿ ಪಕ್ಷದವರು ರಾಮಭಕ್ತರ ಮೇಲೆ ಗುಂಡು ಹಾರಿಸಲಿಲ್ಲವೇ? ರಾಮ ಜನ್ಮಭೂಮಿ ವಿವಾದವನ್ನು ಕಾಂಗ್ರೆಸ್‌ ಪಕ್ಷದವರು ಮುಂದೂಡಿರಲಿಲ್ಲವೇ? ಬಿಜೆಪಿಗೆ ಲಾಭವಾಗುತ್ತೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಆಯೋಧ್ಯೆ ರಾಮಮಂದಿರ ನಿರ್ಧಾರವನ್ನು ತಡೆ ಹಿಡಿಯಲು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಮನಃಪೂರ್ವಕವಾಗಿ ಸಮಾಜವಾದಿ ಪಕ್ಷದೊಂದಿಗಿಲ್ಲ: ಬಿಜೆಪಿ

    ತ್ರಿವಳಿ ತಲಾಕ್‌ ನಿಷೇಧಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿತು. ಅದನ್ನು ತೆಗೆಯುವಷ್ಟು ತಾಕತ್ತು ಯಾವ ರಾಜಕೀಯ ಪಕ್ಷಕ್ಕೂ ಇರಲಿಲ್ಲ. ಇದನ್ನು ಹೋಗಲಾಡಿಸಲು ಮತ್ತು ಮುಸ್ಲಿಂ ಸಹೋದರಿಯರಿಗೆ ಸ್ವಾತಂತ್ರ್ಯ ನೀಡಲು ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುಪ್ರೀಂ ಆದೇಶವನ್ನು ತಂದರು ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10 ರಿಂದ ಆರಂಭವಾಗಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್‌

  • ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಲಕ್ನೊ: ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ಪಡೆಯ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ಮೈನ್‍ಪುರಿ ಜಿಲ್ಲೆಯ ಕರ್ಹಾಲ್‍ನಲ್ಲಿ ದಾಳಿ ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ.

    ಮೈನ್‍ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ನಡೆಸಿದ ದಾಳಿಯು ಪಕ್ಷದ ನೈಜ ಸ್ವರೂಪವನ್ನು ತೋರಿಸುತ್ತದೆ ಎಂದು ಹಿಂದಿಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಿನ್ನೆ ಬಿಜೆಪಿ ಸಂಸದೆ ಗೀತಾ ಶಾಕ್ಯಾ ಅವರ ಮೇಲೂ ಹಲ್ಲೆ ನಡೆದಿದೆ. ಎರಡೂ ಘಟನೆಗಳ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಅಖಿಲೇಶ್ ಯಾದವ್ ಅವರು ತಮ್ಮ ಭದ್ರಕೋಟೆಯಾದ ಕರ್ಹಾಲ್‍ನಲ್ಲಿ ಸೋಲುವ ಭಯದಿಂದ ಎಸ್‍ಪಿ ಸಿಂಗ್ ಬಘೇಲ್ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಅವರ ಮುದ್ದಿನ ಗೂಂಡಾಗಳಿಂದ ದಾಳಿ ನಡೆಸಿದ್ದಾರೆ. ದಾಳಿ ಮಾಡಿರುವುದರಿಂದ ನಿಮ್ಮ ಸೋಲನ್ನು ನೀವು ಖಚಿತಪಡಿಸಿಕೊಂಡಿದ್ದೀರಿ. ಇದು ಹೊಸ ಸಮಾಜವಾದಿ ಪಕ್ಷವೇ? ನಿಮ್ಮ ವಿರುದ್ಧ ಸ್ಪರ್ಧಿಸುವವರ ಮೇಲೆ ದಾಳಿ ನಡೆಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ದನ್ನೂ ಓದಿ: ಟರ್ಬನ್ ಧರಿಸಿದವರೆಲ್ಲಾ ‘ಸರ್ದಾರ್’ ಆಗೋದಿಲ್ಲ: ಪ್ರಿಯಾಂಕಾ ಗಾಂಧಿ

    ಇನ್ನೂ ಈ ಘಟನೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಬಾಘೇಲ್ ಮೇಲಿನ ದಾಳಿಯು ಅಖಿಲೇಶ್ ಯಾದವ್ ಸೋಲಿನ ರುಚಿಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಜನರ ಆಶೀರ್ವಾದದಿಂದ ಖಚಿತವಾಗಿದೆಯೇ ಹೊರತು ಗೂಂಡಾಗಳ ಭಯೋತ್ಪಾದನೆಯಿಂದಲ್ಲ ಎಂದು ಟಾಂಗ್ ನೀಡಿದ್ದಾರೆ.

    ಘಟನೆ ಕುರಿತಂತೆ ಮೈನ್‍ಪುರಿ ಪೊಲೀಸರು ಸಹ ಟ್ವೀಟ್‍ನಲ್ಲಿ, ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕರ್ಹಾಲ್‍ನ ಎಸ್‍ಎಚ್‍ಒಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ. ದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

  • ನಾಪತ್ತೆಯಾಗಿದ್ದ ದಲಿತ ಮಹಿಳೆ ಶವವಾಗಿ ಹೂತಿಟ್ಟ ಸ್ಥಿತಿಯಲ್ಲಿ ಮಾಜಿ ಸಚಿವನ ಆಶ್ರಮದ ಬಳಿ ಪತ್ತೆ!

    ನಾಪತ್ತೆಯಾಗಿದ್ದ ದಲಿತ ಮಹಿಳೆ ಶವವಾಗಿ ಹೂತಿಟ್ಟ ಸ್ಥಿತಿಯಲ್ಲಿ ಮಾಜಿ ಸಚಿವನ ಆಶ್ರಮದ ಬಳಿ ಪತ್ತೆ!

    ಲಕ್ನೋ: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ 22 ವರ್ಷ ವಯಸ್ಸಿನ ದಲಿತ ಮಹಿಳೆ ಶವವು ಸಮಾಧಿಯಾಗಿದ್ದ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಮಾಜಿ ಸಚಿವನ ಆಶ್ರಮದ ಬಳಿ ಪತ್ತೆಯಾಗಿದೆ.

    ಉತ್ತರ ಪ್ರದೇಶದ ಉನ್ನಾವೊದ ದಲಿತ ಮಹಿಳೆ ನಾಪತ್ತೆಯಾಗಿದ್ದರು. ಹೂತಿಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಆಕೆಯ ಮೃತದೇಹವನ್ನು, ಮಾಜಿ ಸಚಿವ ಫತೇಹ್‌ ಬಹದ್ದೂರ್‌ ಸಿಂಗ್‌ ನಿರ್ಮಿಸಿರುವ ಆಶ್ರಮದ ಬಳಿಯ ಖಾಲಿ ಜಾಗದಿಂದ ಹೊರತೆಗೆದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

    ಫತೇಹ್‌ ಬಹದ್ದೂರ್‌ ಪುತ್ರ ರಾಜೋಲ್‌ ಸಿಂಗ್‌ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ರಾಜೋಲ್‌ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ನಂತರ ಎಸ್‌ಒಜಿ ತಂಡ ಗುರುವಾರ ಮಹಿಳೆಯ ದೇಹವನ್ನು ಹೊರತೆಗೆದಿದೆ. ಮೃತದೇಹವನ್ನು ಆಶ್ರಮದ ಬಳಿಯ ಜಾಗದಲ್ಲಿ ಹೂಳಲಾಗಿತ್ತು. ಶವವನ್ನು ಹೂತಿಟ್ಟ ಸ್ಥಳವನ್ನು ಗುರುತಿಸಲು ನಾವು ಗುಪ್ತಚರ ಮತ್ತು ಮೊಬೈಲ್‌ ಕಣ್ಗಾವಲು ಬಳಸಿದ್ದೇವೆ ಎಂದು ಉನ್ನಾವೊ ಎಎಸ್‌ಪಿ ಶಶಿ ಶೇಖರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಅಕ್ರಮ ಸಂಬಂಧ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    POLICE JEEP

    ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

    ಡಿ.8 ರಂದು ಮಹಿಳೆ ಕಾಣೆಯಾಗಿದ್ದರು. ನನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್‌ ಸಿಂಗ್‌ ಅಪಹರಣ ಮಾಡಿದ್ದಾನೆ ಎಂದು ಮಹಿಳೆ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

  • ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

    ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

    ಲಕ್ನೋ: ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್‌ ಇರುವುದು ತಮ್ಮ ಕುಟುಂಬದವರ ರಕ್ಷಣೆಗಾಗಿ ಮತ್ತು ರಾಜಪ್ರಭುತ್ವವನ್ನು ಪ್ರೋತ್ಸಾಹಿಸಲು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ.

    ಶಹಜಹನ್‌ಪುರದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರ ಡಬಲ್‌ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದೊಳಗೆ ಹೊಸ ಜಿಲ್ಲೆಗಳ ರಚನೆ: ಜಗನ್ ಮೋಹನ್ ರೆಡ್ಡಿ

    ಎಸ್‌ಪಿ, ಬಿಜೆಪಿ, ಕಾಂಗ್ರೆಸ್‌ ತಮ್ಮ ಕುಟುಂಬದವರಿಗಾಗಿ ಇದೆ. ನಾವು ರಾಷ್ಟ್ರವಾದದ ಬಗ್ಗೆ ಮಾತನಾಡಿದರೆ ಅವರು ಜಾತಿವಾದದ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿ ಕುರಿತು ಮಾತನಾಡಿದರೆ, ಅವರು ಧರ್ಮ ಮತ್ತು ಸ್ಮಶಾನಗಳ ಬಗ್ಗೆ ಮಾತನಾಡುತ್ತಾರೆ. ನಾವು ಕಬ್ಬಿನ ಬಗ್ಗೆ ಮಾತನಾಡಿದರೆ ಅವರು ಜಿನ್ನಾ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದ್ದಾರೆ.

    ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೋವಿಡ್‌-19 ಲಸಿಕೆ ಅಪಪ್ರಚಾರ ಮಾಡುವವರು, ಅಪರಾಧವನ್ನು ಉತ್ತೇಜಿಸುವ, ಮಾಫಿಯಾ ರಾಜ್‌ಗೆ ಪ್ರೋತ್ಸಾಹ ನೀಡುವವರಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ತಮ್ಮದೇ ಆದ ನೈತಿಕ ಜವಾಬ್ದಾರಿ ಇದೆ: ಆಶಿಶ್ ಮಿಶ್ರಾ ಜಾಮೀನಿಗೆ ಪ್ರಿಯಾಂಕಾ ಕಿಡಿ

    ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ (ಅಖಿಲೇಶ್‌ ಯಾದವ್‌) ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ನಾನು ಕೇಳಿದೆ. ಅವರು ಸ್ಮಶಾನಗಳ ಗೋಡೆಗಳನ್ನು ಮಾಡಿದ್ದಾರಂತೆ. ಇಂದು ಬಿಜೆಪಿ 1 ಕೋಟಿ ಯುವಕರಿಗೆ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸುತ್ತಿರುವಾಗ, ಸಮಾಜವಾದಿ ಪಕ್ಷವು ಈ ಗ್ಯಾಜೆಟ್‌ಗಳನ್ನು ಯುವಕರಿಗೆ ವಿತರಿಸಬಾರದು ಎಂದು ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಚಿಂತಿಸಬೇಡಿ, ನಾವು ಮತ್ತೆ ಅಧಿಕಾರಕ್ಕೆ ಬಂದರೆ ಖಂಡಿತಾ ನೀಡುತ್ತೇವೆ. ಅದನ್ನು 2 ಕೋಟಿ ಯುವಕರಿಗೆ ವಿತರಿಸುತ್ತೇವೆ. ನಮ್ಮ ಯುವಕರು ಬುದ್ಧವಂತರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಲಕ್ನೋ: ಹಿಜಬ್ ಧರಿಸಿದ್ದ ಮಹಿಳೆ ಬೆನ್ನ ಮೇಲೆ ಯುವಕನೊಬ್ಬ ಸಮಾಜವಾದಿ ಪಕ್ಷದ ಸ್ಟಿಕ್ಕರ್ ಅಂಟಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಮಹಿಳೆಯೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ಭಾರತವನ್ನು ಆವರಿಸುತ್ತ ಇದೆ. ಈ ಪರಿಣಾಮ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022ರ ಮೊದಲ ಹಂತದ ಮತದಾನ ಪ್ರಾರಂಭವಾಗುವುದಕ್ಕೂ ಮುನ್ನ ಪ್ರಚಾರ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತ, ಬುರ್ಖಾ ಧರಿಸಿದ ಮಹಿಳೆ ಬೆನ್ನಿನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ್ದಾನೆ.

    ಈ ವೀಡಿಯೋವನ್ನು ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋದಲ್ಲಿ ಒಬ್ಬ ಎಸ್‍ಪಿ ಕಾರ್ಯಕರ್ತ ತನ್ನ ಪಕ್ಷದ ಪೋಸ್ಟರ್ ಅನ್ನು ಮುಸ್ಲಿಂ ಮಹಿಳೆ ಬೆನ್ನ ಮೇಲೆ ಅಂಟಿಸುತ್ತಿರುವುದು ಕಂಡುಬಂದಿದೆ. ಇದಾದ ನಂತರ ಆತ ಮಹಿಳೆಯನ್ನು ಎಳೆದಾಡಿದ್ದಾನೆ. ಈ ಘಟನೆ ಲಕ್ನೋದಲ್ಲಿ ನಡೆದಿದೆ. ಇದು ಕೆಂಪು ಟೋಪಿಯ ಕಪ್ಪು ಶೋಷಣೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಂದಿಗೆ ಎಸ್‍ಪಿ ನಾಯಕನ ಅನುಚಿತ ವರ್ತನೆಯನ್ನು ನೋಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ವೀಡಿಯೋವನ್ನು ಅನುರಾಗ್ ಅವರು ಮೊದಲ ಹಂತದ ಮತದಾನಕ್ಕೂ ಮುನ್ನ ಹಂಚಿಕೊಂಡಿದ್ದು, ಪಕ್ಷಕ್ಕೆ ನಿಮ್ಮ ಮತ ಹಾಕಬೇಡಿ ಎಂದು ಪರೋಕ್ಷವಾಗಿ ಜನರಿಗೆ ಕರೆ ಕೊಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದಂತೆ ಮುಸ್ಲಿಂ ಮಹಿಳೆ ಮತ್ತು ಪೋಸ್ಟರ್ ಅಂಟಿಸಿದ ಯುವಕ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಮಹಿಳೆ-ಯುವಕ ಹೇಳಿದ್ದೇನು?
    ಯುವಕ ಮೊಹಮ್ಮದ್ ಜೈನುದ್ ಈ ಕುರಿತು ಮಾಹಿತಿ ನೀಡಿದ್ದು, ನಾವು ಅಕ್ಕ-ತಮ್ಮ. ನಾವಿಬ್ಬರು ಸಮಾಜವಾದಿ ಪಕ್ಷದ ಪ್ರಚಾರ ಮಾಡುತ್ತಿದ್ದ ವೇಳೆ ವೀಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಬುರ್ಖಾಧಾರಿ ಶಬ್ಬೋ ಈ ಕುರಿತು ಪ್ರತಿಕ್ರಿಯಿಸಿದ್ದು, ಜೈನುದ್ ನನ್ನ ಕಿರಿಯ ಸಹೋದರ. ನಾವು ಒಟ್ಟಾಗಿ ಸಮಾಜವಾದಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೆವು. ಪರಸ್ಪರ ತಮಾಷೆ ಮಾಡುತ್ತಿದ್ದೆವು. ಈ ಸಮಯದಲ್ಲಿ ನನಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬಿಜೆಪಿ ಪಕ್ಷದವರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  • ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಲಕ್ನೋ: ಪಂಚರಾಜ್ಯಗಳ ಚುನಾವಣೆಯ ಕೇಂದ್ರಬಿಂದುವಾಗಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ತಮ್ಮ ಪ್ರಣಾಳಿಕೆಗಳಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಈ ನಡುವೆ ಸಮಾಜವಾದಿ ಪಕ್ಷದೊಂದಿಗೆ (ಎಸ್‌ಪಿ) ಮೈತ್ರಿ ಸಾಧಿಸಿರುವ ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಅಚ್ಚರಿ ಮೂಡಿಸುವಂತಹ ಭರವಸೆಯೊಂದನ್ನು ನೀಡಿದೆ.

    ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಬೈಕ್‌ಗಳಲ್ಲಿ ಟ್ರಿಪಲ್‌ ರೈಡ್‌ಗೆ ಅನುಮತಿ ನೀಡಲಾಗುವುದು ಎಂದು ಎಸ್‌ಬಿಎಸ್‌ಪಿ ಅಧ್ಯಕ್ಷ ಹಾಗೂ ಯುಪಿ ಮಾಜಿ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್

    ಬೈಕ್‌ಗಳಲ್ಲಿ ಟ್ರಪಲ್‌ ರೈಡ್‌ಗೆ ಅನುಮತಿ ನೀಡುತ್ತೇವೆ. ಅಂತಹವರಿಗೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ರಾಜ್‌ಭರ್‌ ತಿಳಿಸಿದ್ದಾರೆ.

    ಸೀಮಿತ ಆಸನ ಸಾಮರ್ಥ್ಯವಿರುವ ರೈಲುಗಳ ಕೋಚ್‌ಗಳಲ್ಲಿ ನೂರಾರು ಜನರು ಪ್ರಯಾಣಿಸುತ್ತಾರೆ. ಅವರಿಗೆ ಸರ್ಕಾರವಾಗಲಿ ಅಥವಾ ರೈಲ್ವೆ ವಿಭಾಗದವರಾಗಲಿ ದಂಡ ಹಾಕುತ್ತಾರೆಯೇ ಎಂದು ರಾಜ್‌ಭರ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಿಜಬ್‌ ವಿವಾದ ಇಲ್ಲ, ನಿಷೇಧ ಪ್ರಸ್ತಾಪವೂ ಇಲ್ಲ: ಗೃಹ ಸಚಿವ

    ಫೆ.10ರಿಂದ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಮಾರ್ಚ್‌ 10ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.