Tag: ಕೇಂದ್ರ ಸರ್ಕಾರ

  • ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ!

    ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ!

    ನವದೆಹಲಿ: ರಾಜ್ಯದಲ್ಲಿ ಸಂಪುಟ ಸರ್ಜರಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲು ತಯಾರಿ ನಡೆಯುತ್ತಿದೆ.

    ಇದಕ್ಕಾಗಿ `ಪಿ’ ಹಾಗೂ `ಎನ್’ ಎಂಬ ಸಿಂಪಲ್ ಫಾರ್ಮುಲಾವನ್ನು ಬಳಸಿದ್ದಾರೆ ಇದರಲ್ಲಿ ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ ಎಂಬುವುದನ್ನು ಸುಲಭವಾಗಿ ಕಂಡುಹಿಡಿಯಲಾಗುತ್ತದೆ.

    ಇದಕ್ಕಾಗಿ ಈಗಾಗಲೇ ವಿಶೇಷ ಎಕ್ಸೆಲ್ ಶೀಟ್ ಒಂದನ್ನು ಕ್ರಿಯೇಟ್ ಮಾಡಲಾಗಿದೆ ಎಂಬುವುದಾಗಿ ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಈ ಶೀಟ್ ಕಾಲಮ್ ನಲ್ಲಿ ಪಿ(ಪಾಸಿಟಿವ್) ಮತ್ತು ಎನ್(ನೆಗೆಟಿವ್) ಎಂದು ಬರೆಯಲಾಗಿದೆ. ಪ್ರತೀ ಸಚಿವರ ಹೆಸರಿನ ಎದುರು ಪಿ ಅಥವಾ ಎನ್ ಎಂಬುವುದಾಗಿ ನಮೂದಿಸಲಾಗುತ್ತದೆ. ಈ ಶೀಟ್ ನನ್ನು ಈಗಾಗಲೇ ಮೋದಿ ಮತ್ತು ಅಮಿತ್ ಶಾ ರೆಡಿಮಾಡಿದ್ದು, ಯಾರು ಸಂಪುಟದಲ್ಲಿ ಉಳಿಯುತ್ತಾರೆ ಹಾಗೂ ಯಾರು ಔಟ್ ಆಗುತ್ತಾರೆ ಎಂಬುವುದನ್ನು ಘೋಷಿಸಲಷ್ಟೇ ಬಾಕಿಯಿದೆ. ಈ ಶೀಟ್ ರೆಡಿ ಮಾಡಲೆಂದು ಅಮಿತ್ ಶಾ ಕಳೆದ ಕೆಲ ವಾರಗಳ ಹಿಂದೆಯೇ ಉನ್ನತ ಮಟ್ಟದ ಸಭೆ ನಡೆಸಿದ್ದರು.

    ಒಟ್ಟಿನಲ್ಲಿ ಹೊಸಬರಿಗೆ ಮಣೆ ಹಾಕೋದರ ಜೊತೆಗೆ ಹಳೇ ಸಚಿವರ ಖಾತೆಗೂ ಮೋದಿ ಕೊಕ್ಕೆ ಹಾಕ್ತಾರೆ ಅಂತ ಹೇಳಲಾಗ್ತಿದೆ. ಜೊತೆಗೆ ಕರ್ನಾಟಕದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಸಿಗುತ್ತೆ ಅಂತಾ ಹೇಳಲಾಗ್ತಿದೆ. ಹಾಗಿದ್ರೆ ಯಾರ್ಯಾರ ಖಾತೆಗೆ ಕೊಕ್ಕೆ ಬೀಳುತ್ತೆ? ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ? ಅಂತ ನೋಡೋದಾದ್ರೆ..

    ಯಾರ್ಯಾರು ಔಟ್..!?
    ಜಲಸಂಪನ್ಮೂಲ ಸಚಿವೆ ಉಮಾಭಾರತಿ, ಕೌಶಲ್ಯ ಅಭಿವೃದ್ಧಿ ಸಚಿವ ರಾಜಿವ್ ಪ್ರತಾಪ್ ರೂಡಿ, ಆರೋಗ್ಯ ಖಾತೆಯ ರಾಜ್ಯ ಸಚಿವ ಫಗಲ್‍ಸಿಂಗ್ ಕುಲಾಸ್ತೆ, ರಾಜ್ಯ ಖಾತೆಯ ಕೃಷಿ ಸಚಿವ ಸಂಜು ಬಾಲ್ಯಾನ್, ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂಎನ್. ಪಾಂಡೆ ಔಟಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಯಾರ ಖಾತೆ ಬದಲಾವಣೆ..?
    ನಿತಿನ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಜೊತೆಗೆ ರೈಲ್ವೆ ಖಾತೆ, ಸುರೇಶ್ ಪ್ರಭು ಅವರಿಗೆ ಪರಿಸರ ಖಾತೆ, ಸ್ಮೃತಿ ಇರಾನಿ ಅವರ ಜವಳಿ ಖಾತೆಗೆ ಕೊಕ್ಕೆ, ಅರುಣ್ ಜೇಟ್ಲಿ ಅವರ ಹೆಚ್ಚುವರಿ ರಕ್ಷಣಾ ಖಾತೆಗೆ ಕೊಕ್ಕೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ರಾಜ್ಯದಿಂದ ಯಾರು ಇನ್..?
    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆ ಸಂಸದ ಶಿವಕುಮಾರ್ ಉದಾಸಿ, ಬಳ್ಳಾರಿ ಸಂಸದ ಶ್ರೀರಾಮುಲು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಎಐಡಿಎಂಕೆ ಮತ್ತ ಜೆಡಿ(ಯು) ಕೂಡ ಸಂಪುಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುವುದಾಗಿ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಭಾನುವಾರ ಪ್ರಧಾನಿ ಮೋದಿ ಬ್ರಿಕ್ಸ್ ಸಮಿತಿಯಲ್ಲಿ ಪಾಲ್ಗೊಳ್ಳುವದಕ್ಕಿಂತಲೂ ಮೊದಲು ಅಂದ್ರೆ ಶನಿವಾರ ಸಂಪುಟ ವಿಸ್ತರಣೆ ಮಾಡುಲಾಗುವುದು ಎಂಬುವುದಾಗಿ ತಿಳಿದುಬಂದಿದೆ.

  • ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

    ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

    ಬೆಂಗಳೂರು: 2003ರಿಂದ ಏಳು ಜನ ಮುಖ್ಯಮಂತ್ರಿಗಳು ಬಂದ್ರೂ ಮಹದಾಯಿ ಯೋಜನೆಗೆ ಮುಕ್ತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಅಫಿಡೇವಿಟ್ ಆಧರಿಸಿ ಗುರುವಾರದಂದು ಸುಪ್ರೀಂಕೋರ್ಟ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಅಂತ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

    ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಾದ್ರೆ ಪರವಾನಿಗೆ ಮುಖ್ಯ. ಜೊತೆಗೆ ನ್ಯಾಯಾಧೀಕರಣದ ಅಂತಿಮ ಆದೇಶ ಬರೋವರೆಗೂ ಯೋಜನೆ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ಆದ್ರೆ 2003ರಲ್ಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ನೀಡಿತ್ತು. ಈ ವಿಷಯ ಆರ್‍ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ. ಹೀಗಿದ್ರೂ ಯಾಕೆ ಯಾರೊಬ್ಬರೂ ಪ್ರಶ್ನೆ ಮಾಡ್ತಿಲ್ಲ? ರಾಜ್ಯ ಬಿಜೆಪಿಯವರು ಯಾಕೆ ಸುಮ್ಮನಿದ್ದಾರೆ? ರಾಜ್ಯ ಸರ್ಕಾರವೂ ಯಾಕೆ ಸೈಲೆಂಟಾಗಿದೆ? 770 ದಿನಗಳಿಂದ ಮಹದಾಯಿಗಾಗಿ ಹೋರಾಟ ನಡೆತೀರೋದು ಯಾರಿಗೂ ಕಾಣಿಸ್ತಿಲ್ವಾ ಅನ್ನೋದು ಈಗಿರುವ ಯಕ್ಷ ಪ್ರಶ್ನೆ.

    ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಣ್ಣಿಗೆ ಮಣ್ಣೆರಚಿದ್ರೆ, ರಾಜ್ಯ ಸರ್ಕಾರದ ಸೋಮಾರಿತನವೂ ಇದ್ರಲ್ಲಿದೆ:
    > 1999ರಲ್ಲಿ ಮಹದಾಯಿ ಯೋಜನೆಗೆ ನಿರ್ಧಾರ, 2000ರಲ್ಲಿ ಅಂದಾಜು ಪಟ್ಟಿ ತಯಾರಿ.
    > 2002ರಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಹದಾಯಿ ಯೋಜನೆ ಪ್ರಸ್ತಾವನೆ ಸಲ್ಲಿಕೆ.
    > 2003ರಲ್ಲಿ ಅರಣ್ಯ ಇಲಾಖೆ, ಪರಿಸರ ಇಲಾಖೆಯಿಂದ ಮಹದಾಯಿ ಯೋಜನೆಗೆ ಅನುಮತಿ ಸಿಕ್ತು.
    > ಆಗಿನ ಕೇಂದ್ರ ಪರಿಸರ ಸಚಿವ ಬಾಲು ಅನುಮತಿ ಕೊಟ್ಟಿದ್ರು. ಆಗ ಸಿಎಂ ಆಗಿದ್ದು ಎಸ್.ಎಂ.ಕೃಷ್ಣ.
    > 7.56 ಟಿಎಂಸಿ ನೀರಿನ ಬಳಕೆಯ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು.
    > ಆದ್ರೆ ಯೋಜನೆ ವಿರೋಧಿಸಿ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
    > ಆಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುಮತಿನೇ ಕೊಟ್ಟಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಸುಳ್ಳು ಅಫಿಡೆವಿಟ್ ಸಲ್ಲಿಸಿತ್ತು.
    > ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಾಧೀಕರಣದಲ್ಲೇ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿತ್ತು.
    > ಆದ್ರೆ ಪ್ರಶ್ನೆ ಇರೋದು ರಾಜ್ಯ ಸರ್ಕಾರಕ್ಕೆ 2003ರಲ್ಲಿ ಅನುಮತಿ ಸಿಕ್ಕಿದ್ದು ಗೊತ್ತಾಗಲಿಲ್ಲವಾ ಅನ್ನೋದು.
    > ಈಗ ರಾಜ್ಯ ಸರ್ಕಾರದ ಸೋಮಾರಿತನದಿಂದ ನ್ಯಾಯಾಧೀಕರಣದ ಮುಂದೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • 11 ಲಕ್ಷ ಪ್ಯಾನ್‍ ಕಾರ್ಡ್ ಗಳನ್ನ ನಿಷ್ಕ್ರಿಯಗೊಳಿಸಿದ ಸರ್ಕಾರ- ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯೋದು ಹೇಗೆ?

    11 ಲಕ್ಷ ಪ್ಯಾನ್‍ ಕಾರ್ಡ್ ಗಳನ್ನ ನಿಷ್ಕ್ರಿಯಗೊಳಿಸಿದ ಸರ್ಕಾರ- ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯೋದು ಹೇಗೆ?

    ನವದೆಹಲಿ: ಒಂದಕ್ಕಿಂತ ಹೆಚ್ಚು ಪ್ಯಾನ್‍ಕಾರ್ಡ್‍ಗಳನ್ನ ಹೊಂದುವ ಮೂಲಕ ವಂಚನೆ ಎಸಗುವುದನ್ನ ತಡೆಯಲು ಕೇಂದ್ರ ಸರ್ಕಾರ ಈ ವರ್ಷ ಜುಲೈ 27ರವರೆಗೆ ಸುಮಾರು 11.4 ಲಕ್ಷ ಪ್ಯಾನ್‍ಕಾರ್ಡ್‍ಗಳನ್ನ ನಿಷ್ಕ್ರಿಯಗೊಳಿಸಿದೆ.

    ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಪ್ಯಾನ್‍ಕಾರ್ಡ್‍ನೊಂದಿಗೆ ಆಧಾರ್ ನಂಬರ್ ಸಂಯೋಜನೆಯನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿತ್ತು. ಜುಲೈ 1 ರಿಂದ ಪ್ಯಾನ್‍ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ಯಾನ್‍ಕಾರ್ಡ್ ಮಾತ್ರ ಹೊಂದಬಹುದಾಗಿದೆ. ಈ ಹಿಂದೆ ಸುಳ್ಳು ಮಾಹಿತಿಯುಳ್ಳ ನಕಲಿ ಪ್ಯಾನ್‍ಕಾರ್ಡ್‍ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನ ಸರ್ಕಾರ ತನಿಖೆ ಮಾಡಿತ್ತು.

    ನಿಮ್ಮ ಪ್ಯಾನ್‍ಕಾರ್ಡ್ ವ್ಯಾಲಿಡಿಟಿ ಚೆಕ್ ಮಾಡೋದು ಹೇಗೆ:
    1. ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಇರುವ ಅಧಿಕೃತ ವೆಬ್‍ಸೈಟ್  incometaxindiaefiling.gov.in ಗೆ ಲಾಗ್ ಇನ್ ಆಗಬೇಕು.

    2. ವೆಬ್‍ಸೈಟ್‍ನ ಹೋಮ್‍ಪೇಜ್‍ನಲ್ಲಿ ಎಡಬದಿಯ ಕಾಲಮ್‍ನಲ್ಲಿ ಸರ್ವೀಸಸ್ ಎಂಬ ಶೀರ್ಷಿಕೆಯಡಿಯಿರುವ ನೋ ಯುವರ್ ಪ್ಯಾನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ

    3. ನಿಮ್ಮ ಹೆಸರು, ಲಿಂಗ, ಜನ್ಮದಿನಾಂಕ, ಪ್ಯಾನ್‍ಕಾರ್ಡ್ ನೊಂದಾಯಿಸಲು ಬಳಸಿದ ಮೊಬೈಲ್ ನಂಬರ್ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನ ನೀಡಿ ಸಬ್‍ಮಿಟ್ ಬಟನ್ ಒತ್ತಿ. ನಿಮ್ಮ ನೊಂದಾಯಿಯ ಮೊಬೈಲ್ ನಂಬರ್‍ಗೆ ಒಂದು ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಬರುತ್ತದೆ.


    4. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ನೋಂದಣಿಯಾಗಿದ್ದರೆ ಒಂದು ನೋಟಿಸ್ ಪಾಪ್ ಅಪ್ ಆಗುತ್ತದೆ. “ಒಂದಕ್ಕಿಂತ ಹೆಚ್ಚು ದಾಖಲೆ ಇದೆ. ದಯವಿಟ್ಟು ಹೆಚ್ಚಿನ ಮಾಹಿತಿ ನೀಡಿ ಎಂದು ಕೇಳುತ್ತದೆ”. ನಂತರ ಹೊಸ ಪೇಜ್‍ಗೆ ನಿಮ್ಮನ್ನು ಕೊಂಡೊಯ್ದು ನಿಮ್ಮ ಪ್ಯಾನ್ ವ್ಯಾಲಿಡಿಟಿ ಬಗ್ಗೆ ತೋರಿಸುತ್ತದೆ.
    5. ನಿಮ್ಮ ಪ್ಯಾನ್‍ಕಾರ್ಡ್ ಆ್ಯಕ್ಟೀವ್ ಆಗಿದ್ದರೆ ಆ್ಯಕ್ಟೀವ್ ಎಂದು ತೋರಿಸುತ್ತದೆ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

  • ಸಂಸದ ಪ್ರತಾಪ್ ಸಿಂಹ ಸಂಬಳದ ಮಾಹಿತಿಯನ್ನು ಹಂಚಿಕೊಂಡಿದ್ದು ಯಾಕೆ?

    ಸಂಸದ ಪ್ರತಾಪ್ ಸಿಂಹ ಸಂಬಳದ ಮಾಹಿತಿಯನ್ನು ಹಂಚಿಕೊಂಡಿದ್ದು ಯಾಕೆ?

    ಮೈಸೂರು: ಜಿಯೋ ಸಿಮ್‍ನಲ್ಲಿ ಅನಿಯಮಿತ ಕರೆ ಹಾಗೂ ಡೇಟಾ ಸಿಗುವ ಕಾಲದಲ್ಲಿ, ಸಂಸದರಿಗೆ ನೀಡುವ 15 ಸಾವಿರ ಫೋನ್ ಬಿಲ್ ನಿಲ್ಲಿಸಿ, ಎಂಬ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ತನ್ನ ಸಂಬಳದ ಚೀಟಿಯನ್ನು ಟ್ವಿಟರ್‍ ಹಾಗೂ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಟೀಕಾಕಾರರ ಹಾಗೂ ಟ್ವಿಟರಿಗರಿಗೆ ತಿರುಗೇಟು ನೀಡಿರುವ ಸಂಸದ, ಕೇಂದ್ರ ಸರ್ಕಾರ ನೀಡುವ ತಮ್ಮ ವೇತನವನ್ನ ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದಾರೆ. ಪ್ರತಿ ಸಂಸದ ತಿಂಗಳಿಗೆ 1 ಲಕ್ಷದ 10 ಸಾವಿರ ಸಂಬಳ ಪಡೆಯುತ್ತಾರೆ. 50 ಸಾವಿರ ಸಂಬಳ, 15 ಸಾವಿರ ಕಚೇರಿ ನಿರ್ವಹಣೆ, 45 ಸಾವಿರ ಕ್ಷೇತ್ರ ನಿರ್ವಹಣೆಗೆ ಹಣ ನೀಡುತ್ತಾರೆ.

    ವಾಸ್ತವವಾಗಿ ಒಂದು ಲ್ಯಾಂಡ್ ಲೈನ್ ಬಿಲ್ ಬಿಟ್ಟರೆ ಮತ್ಯಾವುದೆ ಹಣವನ್ನ ಫೋನ್ ಗಾಗಿ ನೀಡುವುದಿಲ್ಲ. ಒಟ್ಟು 1 ಲಕ್ಷದ 10 ಸಾವಿರ ಸಂಬಳ ನೀಡುವ ಕೇಂದ್ರ ಸರ್ಕಾರ ಎಲ್ಲವನ್ನು ಅದರಲ್ಲೆ ಬಳಸು ಎಂದಿದೆ. ಆದರೂ ಕೆಲವರು 15 ಸಾವಿರ ಫೋನ್ ಬಿಲ್ ಎಂದು ಟೀಕಿಸುತ್ತಾರೆ. ಇದಕ್ಕಾಗಿ ನೋಡಿ ನನ್ನ ಸಂಬಳದ ಚೀಟಿ ಎಂದು ಬರೆದು ಟ್ವಿಟರ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಕಿದ್ದಾರೆ.

    ಏನಿದು ಕ್ಯಾಂಪೇನ್?: 399 ರೂಪಾಯಿಗೆ ಅನಿಯಮಿತ ಕರೆ ಮತ್ತು ಇಂಟರ್ ನೆಟ್ ಡಾಟಾ ಸಿಗುತ್ತಿರುವ ಕಾಲದಲ್ಲಿ ಸಂಸದರಿಗೆ ದೂರವಾಣಿಗಾಗಿ ತಿಂಗಳಿಗೆ 15 ಸಾವಿರ ರೂಪಾಯಿ ಕೊಡುತ್ತಿರುವುದು ದೊಡ್ಡ ಜೋಕ್. ಇದಕ್ಕಾಗಿ ತಿಂಗಳಿಗೆ 11 ಕೋಟಿ ರೂಪಾಯಿ ಯನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದೆ. ಇದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿತ್ತು.

     

  • ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿಯಾದ್ರೂ ರಮ್ಯಾ ನೋ ರಿಯಾಕ್ಷನ್

    ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿಯಾದ್ರೂ ರಮ್ಯಾ ನೋ ರಿಯಾಕ್ಷನ್

    ಮಂಡ್ಯ: ಸದಾ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ಒಂದಲ್ಲ ಒಂದು ಕಾರಣಕ್ಕೆ ಟೀಕಿಸುತ್ತಿದ್ದ ಮಾಜಿ ಸಂಸದೆ ರಮ್ಯಾ ಇದೀಗ ತಮ್ಮದೇ ಪಕ್ಷದ ಸಚಿವರ ಮನೆ ಮೇಲೆ ಐಟಿ ದಾಳಿ ಮಾಡಿದಾಗ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಕಳೆದ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್, ಸಂಬಂಧಿಕರು ಹಾಗೂ ಅವರ ಆಪ್ತರ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದೆ. ನಿರಂತರವಾಗಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅಲ್ಲದೇ ಈ ಕುರಿತು ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ಕೇಳಿ ಬರ್ತಾ ಇದೆ. ಈ ದಾಳಿ ಒಂದು ರಾಜಕೀಯ ಪ್ರೇರಿತವಾಗಿದೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿದೆ. ಆದ್ರೆ ಪ್ರತಿ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ ಜರಿಯುತ್ತಿದ್ದ ರಮ್ಯಾ ಇದೀಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಗೊಂದಲಕ್ಕೀಡುಮಾಡಿದೆ.

    ಅಲ್ಲದೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾರ್ಯನಿರತರಾಗರೋ ರಮ್ಯಾ ತಮ್ಮ ಮಂಡ್ಯದಲ್ಲಿರೋ ನಿವಾಸಕ್ಕೆ ಭೇಟಿ ನೀಡದೆ ತಿಂಗಳುಗಳೇ ಕಳೆದಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

  • ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ ಅವರ ಮಾನ ಹೋಗಿತ್ತು. ಇದೀಗ ತಪ್ಪು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಶೋಭಾ ಕರಂದ್ಲಾಜೆ ಮಯಾ9ದೆ ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪತ್ರ ಪಕ್ಕಾ ಪೊಲಿಟಿಕಲ್ ಗಿಮಿಕ್ ಆಗಿದ್ದು, ಈ ಪತ್ರ ನೋಡಿದರೇನೆ ಅವರ ಮನಸ್ಥಿತಿ ಅನ್ನೋದು ಗೊತ್ತಾಗುತ್ತದೆ. ಇವೆಲ್ಲಾ ಓಟಿಗಾಗಿ ಮಾಡುತ್ತಿರುವ ಕೆಲಸ ಎಂದು ಅವರು ಹೇಳಿದರು.

    ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ತವರನ್ನು ಬದುಕಿಸ್ತಾರೆ, ಬದುಕಿದವರನ್ನು ಪತ್ರದಲ್ಲೇ ಸಾಯಿಸುತ್ತಾರೆ ಎಂದು ಗರಂ ಆಗಿ ಉತ್ತರಿಸಿದರು.

    ಅವರ ಪತ್ರದಲ್ಲಿ ವಿನಾಯಕ ಬಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹತ್ಯೆಯಾಗಿದ್ದಾರೆ. ಆದ್ರೆ ಅವರ ಹೆಸರು ಸೇರಿಸಿಲ್ಲ. ಯಾಕೆ ಅವರು ದಕ್ಷಿಣ ಕನ್ನಡದವರು ಅಲ್ವಾ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಬದುಕಿದ್ದವರನ್ನು ಕೊಲೆ ಮಾಡಲಾಗಿದೆ ಎಂದು ಕೇಂದ್ರಕ್ಕೆ ಸುಳ್ಳು ವರದಿ ಕೊಟ್ಟ ಶೋಭಾ!

  • ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

    ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳು ಇನ್ನು ಮುಂದೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಅಲ್ಲ ಅವುಗಳ ಎಕ್ಸ್​ಪೈರಿ ದಿನಾಂಕ ಮತ್ತು ಗ್ರಾಹಕ ಸೇವೆಗಳ ಮಾಹಿತಿಯನ್ನು ನೀಡಬೇಕು.

    ಹೌದು. ಆನ್‍ಲೈನ್ ತಾಣಗಳಲ್ಲಿ ಇಲ್ಲಿಯವರೆಗೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಹಾಕಲಾಗುತಿತ್ತು. ಗ್ರಾಹಕರಿಗೆ ವಂಚನೆ ಆಗುತ್ತಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜನವರಿ 2018ರ ನಂತರ ಕಡ್ಡಾಯವಾಗಿ ಎಂಆರ್‍ಪಿ ಜೊತೆ ಎಕ್ಸ್​ಪೈರಿ ದಿನಾಂಕವನ್ನು ಪ್ರಕಟಿಸಬೇಕೆಂದು ಆನ್‍ಲೈನ್ ಶಾಪಿಂಗ್ ಕಂಪೆನಿಗಳಿಗೆ ಸೂಚಿಸಿದೆ.

    ಆನ್‍ಲೈನ್ ತಾಣಗಳು ಎಂಆರ್‍ಪಿ ಜೊತೆಗೆ, ಉತ್ಪಾದನಾ ದಿನಾಂಕ, ಎಕ್ಸ್​ಪೈರಿ ದಿನಾಂಕ, ಪ್ರಮಾಣದ ಮಾಹಿತಿ, ಯಾವ ದೇಶದಲ್ಲಿ ತಯಾರಾಗಿದೆ, ಗ್ರಾಹಕ ಸೇವೆಯ ಮಾಹಿತಿಯನ್ನು ತೋರಿಸಬೇಕಾಗುತ್ತದೆ.

    ಲೀಗಲ್ ಮೆಟ್ರೊಲಜಿ ಕಾಯ್ದೆ(ಪ್ಯಾಕ್ ಮಾಡಿದ ಸರಕು) ಪ್ರಕಾರ ಈ ಎಲ್ಲ ಮಾಹಿತಿಗಳನ್ನು ತೋರಿಸುವಂತೆ ಕೇಂದ್ರ ಸರ್ಕಾರ ಕಂಪೆನಿಗಳಿಗೆ 6 ತಿಂಗಳ ಡೆಡ್‍ಲೈನ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜನವರಿ 1ರಿಂದ ಆನ್‍ಲೈನ್ ತಾಣಗಳು ಸರ್ಕಾರ ಕೇಳಿರುವ ಮಾಹಿತಿಗಳನ್ನು ದಪ್ಪ ಅಕ್ಷರದಲ್ಲಿ ನಲ್ಲಿ ತೋರಿಸಬೇಕು. ಒಂದು ವೇಳೆ ಉಲ್ಲಂಘನೆ ಎಸಗಿದ್ದು ಕಂಡು ಬಂದಲ್ಲಿ ಆ ಕಂಪೆನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

    ಆನ್‍ಲೈನ್ ಶಾಪಿಂಗ್ ತಾಣಗಳಿಂದ ಆಗುತ್ತಿರುವ ವಂಚನೆಯ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾಯ್ದೆ ತಿದ್ದುಪಡಿ ಮಾಡಿ ಈ ಕಾನೂನು ತಂದಿದೆ.

    ಇದನ್ನೂ ಓದಿ: ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

     

  • ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

    ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

    ಬೆಂಗಳೂರು: ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಳುತ್ತಿದೆ. ಕೇಂದ್ರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅವಕಾಶ ಕೊಟ್ಟರೆ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಬಹಿರಂಗ ಸವಾಲೆಸೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿದ್ದು, ಆ ಬಳಿಕ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸವಾಲು ಎಸೆದಿದ್ದಾರೆ.

    ರಾಜ್ಯದ ಆಡಳಿತ ಕಾಂಗ್ರೆಸ್ ಕೈಯಲ್ಲಿದೆಯೇ ಹೊರತು ಬಿಜೆಪಿ ಕೈಯಲ್ಲಿ ಇಲ್ಲ. ಮಾನ್ಯ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಇಂದೇ ರಾಜೀನಾಮೆ ಕೊಡಲಿ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕೊಡಲಿ. ಕೇವಲ 24 ಗಂಟೆಯಲ್ಲಿ ಕರಾವಳಿಯಲ್ಲಿ ಶಾಂತಿ ಕಾಪಾಡುತ್ತೇವೆ. ಯಾಕಂದ್ರೆ ಇವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ನಂದಿಸುವ ಕೆಲಸ ಮಾಡಲ್ಲ. ಆದ್ರೆ ಇದನ್ನ ನಂದಿಸೋರು ಯಾರು ಅಂತಾ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: RSS ಕಾರ್ಯಕರ್ತನ ಮೇಲೆ ಹಲ್ಲೆ: ಬಂಟ್ವಾಳ ಮತ್ತೆ ಉದ್ವಿಗ್ನ – ವಾಹನ ಸಂಚಾರ ಅಸ್ತವ್ಯಸ್ಥ

    ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಇವರ ಯೋಗ್ಯತೆಗೆ ಒಂದ್ ಮೀಟಿಂಗ್ ಮಾಡಿಲ್ಲ. ಈ ಎಲ್ಲ ಘಟನೆಗಳಿಗೆ ಸಿಎಂ ಸಿದ್ದರಾಮಯ್ಯನವರೇ ಕಾರಣ. ಸಿಎಂ ಅವರೇ ಕರಾವಳಿಯ ಸಚಿವರು, ಶಾಸಕರನ್ನ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಡಿವಿಎಸ್ ವಾಗ್ದಾಳಿ ನಡೆಸಿದರು.

    ಕೇಂದ್ರ ಕಾನೂನು ಬಗ್ಗೆ ಸೂಚನೆ ಕೊಟ್ರೆ ಅಧಿಕಾರ ಹಸ್ತಕ್ಷೇಪ, ಮೂಗು ತೂರಿಸ್ತಾರೆ ಅಂತಾರೆ. ಯಾವುದೇ ರೀತಿ ಕಟ್ಟು ನಿಟ್ಟಿನ ಸೂಚನೆ ಕೊಡ್ತಿಲ್ಲ 4 ವರ್ಷ ಆಯ್ತು. ಇದು ಕೊನೆಯ ವರ್ಷ. ಬಹುಶಃ ಈ ಕೊನೆಯ ವರ್ಷವೇ ಸಿದ್ದರಾಮಯ್ಯ ಪೊಲಿಟಿಕಲ್ ಕೆರಿಯರ್ ಗೆ ಕಡೆಯ ವರ್ಷ ಆಗಬಹುದು ಎಂಬು ಡಿವಿಎಸ್ ಭವಿಷ್ಯ ನುಡಿದರು.

    ಇದನ್ನೂ ಓದಿ:  ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಇದನ್ನೂ ಓದಿ:  ಪೆಟ್ರೋಲ್ ಕೇಳೋ ನೆಪದಲ್ಲಿ ಮಂಗ್ಳೂರಿನಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

    ಇದನ್ನೂ ಓದಿ:  ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    ಇದನ್ನೂ ಓದಿ: ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

     

     

     

     

     

     

  • ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೆ ಬಂದ ನಂತರ ಉತ್ಪನ್ನಗಳ ಮೇಲೆ ಪರಿಷ್ಕೃತ ಎಂಆರ್‍ಪಿ ಮುದ್ರಿಸದೇ ಇದ್ದರೆ ತಯಾರಕರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಮೊದಲ ತಪ್ಪಿಗೆ 25 ಸಾವಿರ ರೂ., ಎರಡನೇ ಬಾರಿ ಸಿಕ್ಕಿಬಿದ್ದರೆ 50 ಸಾವಿರ ರೂ., ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ತಯಾರಕರಿಗೆ ವಾರ್ನಿಂಗ್ ನೀಡಿದೆ.

    ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, ಜಿಎಸ್‍ಟಿ ಬಂದ ಮೇಲೆ ಕೆಲ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರೆ, ಕೆಲ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಈಗಾಗಲೇ ನಾವು ತಯಾರಕರಿಗೆ ಹೊಸ ಎಂಆರ್‍ಪಿ ಹಾಕುವಂತೆ ಸೂಚಿಸಿದ್ದೇವೆ. ಒಂದು ವೇಳೆ ಹೊಸ ಎಂಆರ್‍ಪಿ ಹಾಕದೇ ಹಳೇ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

    ತಯಾರಕರು ಎಂಆರ್‍ಪಿ ಹಾಕದೇ ವಂಚಿಸಿದ್ದು ಕಂಡು ಬಂದಲ್ಲಿ ಮೊದಲ ತಪ್ಪಿಗೆ 25 ಸಾವಿರ ರೂ. ಎರಡನೇ ಬಾರಿ ಸಿಕ್ಕಿಬಿದ್ದರೆ 25 ಸಾವಿರ ರೂ., ಎರಡನೇ ಬಾರಿ 50 ಸಾವಿರ ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆ ಇಲ್ಲ ಎಂದು ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.

    ಜಿಎಸ್‍ಟಿ ಬಂದ ನಂತರ ಆರಂಭದಲ್ಲಿ ಕೆಲ ಸಮಸ್ಯೆಗಳು ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳು ನಿವಾರಣೆಯಾಗಲಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದೇ ಇರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

    ಈಗಾಗಲೇ ಸ್ಟಾಕ್ ಇರುವ ಉತ್ಪನ್ನಗಳಿಗೆ ಹೊಸ ಎಂಆರ್‍ಪಿ ಹಾಕಿ ಸೆಪ್ಟೆಂಬರ್ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜುಲೈ 1ರ ಬಳಿಕ ತಯಾರಕರು ಉತ್ಪನ್ನಗಳ ಮೇಲೆ ಮೂಲ ಎಂಆರ್‍ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್‍ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು ಎಂದು ಪಾಸ್ವಾನ್  ತಿಳಿಸಿದರು.

    ಇದನ್ನೂ ಓದಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

  • ಜಿಎಸ್‍ಟಿ ಎಫೆಕ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ

    ಜಿಎಸ್‍ಟಿ ಎಫೆಕ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಿದೆ.

    ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ಈಗ ಈ ಬೆಲೆ 477.46 ರೂ.ಗೆ ತಲುಪಿದೆ.

    ಕೋಲ್ಕತ್ತಾದಲ್ಲಿ 480.32 ರೂ. ಇದ್ದರೆ, ಚೆನ್ನೈನಲ್ಲಿ 465.56 ರೂ. ಇದೆ. ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ದೆಹಲಿಯಲ್ಲಿ 564 ರೂ. ಇದೆ.

    ಇಂಡಿಯನ್ ಆಯಿಲ್ ವೆಬ್‍ಸೈಟ್ ಪ್ರಕಾರ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 477 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 561 ರೂ. ಇರಲಿದೆ. 5 ಕೆಜಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 177.50 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 209.50 ರೂ. ಇರಲಿದೆ.

    ಜೂನ್ 2011ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ ಕಂಡಿತ್ತು.

    ಏರಿದ್ದು ಯಾಕೆ?
    ಜಿಎಸ್‍ಟಿಯಲ್ಲಿ ಎಲ್‍ಪಿಜಿ ಶೇ.5ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದು,  ಈ ಹಿಂದೆ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಸಿರು ಇಂಧನಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ. ಶೇ.2ರಿಂದ ಶೇ. 4ರಷ್ಟು ವ್ಯಾಟ್ ಶುಲ್ಕ ಮಾತ್ರ ವಿಧಿಸಲಾಗುತಿತ್ತು. ಜಿಎಸ್‍ಟಿ ಜಾರಿ ನಂತರ ಇಂಧನಕ್ಕೆ ತೆರಿಗೆ ವಿಧಿಸದ ರಾಜ್ಯಗಳಲ್ಲಿ ಎಲ್‍ಪಿಜಿ ಬೆಲೆ ಏರಿಕೆಯಾಗಿದೆ.

    ಇಷ್ಟೇ ಅಲ್ಲದೇ ಜೂನ್ ನಿಂದ ಸಬ್ಸಿಡಿ ಮೊತ್ತ ಕಡಿಮೆಯಾಗಿದೆ. ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.

    1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ.