Tag: ಕೇಂದ್ರ ಸರ್ಕಾರ

  • 3,133 ಮೆಟ್ರಿಕ್ ಟನ್ ಕುಸುಬೆ ಬೆಳೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ – ಟಿಬಿ ಜಯಚಂದ್ರ

    3,133 ಮೆಟ್ರಿಕ್ ಟನ್ ಕುಸುಬೆ ಬೆಳೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ – ಟಿಬಿ ಜಯಚಂದ್ರ

    ನವದೆಹಲಿ: ರಾಜ್ಯದಲ್ಲಿ 2023-24ರ ಕೃಷಿ ಹಂಗಾಮಿನ ಹಿಂಗಾರಿನಲ್ಲಿ ಬೆಳೆದ 3,133 ಮೆಟ್ರಿಕ್ ಟನ್ ಕುಸುಬೆ ಬೆಳೆಯನ್ನು (Safflower Crop) ಬೆಂಬಲ ಬೆಲೆ (MSP) ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ (TB Jayachandra) ಹೇಳಿದ್ದಾರೆ.

    ರಾಜ್ಯದ ಮಧ್ಯ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 21,000 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆ ಕೃಷಿ ನಡೆಯುತ್ತಿದ್ದು, ರೈತರು (Farmers) ಸರಿಯಾದ ಬೆಲೆ ಇಲ್ಲದೇ ತೊಂದರೆ ಎದುರಿಸುತ್ತಿದ್ದರು. ಇದನ್ನು ಪರಿಗಣಿಸಿ, ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಅಪರ ಕಾರ್ಯದರ್ಶಿಯವರು ಕೇಂದ್ರ ಸಹಕಾರ ಇಲಾಖೆ ಕಾರ್ಯದರ್ಶಿಯವರಿಗೆ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರಲು ಕೋರಿದ್ದರು. ಇದನ್ನೂ ಓದಿ: ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    ಬಳಿಕ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಮನವಿಯನ್ನು ಮುತುವರ್ಜಿ ವಹಿಸಿ ಸಂಬಂಧಿಸಿದ ಇಲಾಖೆಗಳೊಡನೆ ಪತ್ರ ವ್ಯವಹಾರ ಹಾಗೂ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದಿಂದ ಅಂತಿಮವಾಗಿ ಅನುಮತಿ ಪಡೆದಿದೆ. ರಾಜ್ಯ ಸರ್ಕಾರವು ಸಂಬಂಧಿಸಿದ ನೋಡಲ್ ಏಜೆನ್ಸಿಗಳ ಸಮನ್ವಯತೆಯೊಂದಿಗೆ ಮುಂಬರುವ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಕುಸುಬೆ ಬೆಳೆ ಖರೀದಿಗೆ ಕ್ರಮ ವಹಿಸಲಿದೆ ಎಂದು ಜಯಚಂದ್ರ ವಿವರಿಸಿದರು. ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

    ಕಳೆದ ಒಂದು ದಿನದ ಹಿಂದೆಯಷ್ಟೇ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ, ರಾಗಿ, ತೊಗರಿ ಸೇರಿ 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್‌ಪಿ ಹೆಚ್ಚಿಸಿದೆ. ಭತ್ತದ ಮೇಲಿನ ಎಂಎಸ್‌ಪಿಯನ್ನು 143 ರೂಪಾಯಿ ಹೆಚ್ಚಿಸಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ. ಅದೇ ರೀತಿ ರಾಗಿಗೆ 268 ರೂ., ಗೋಧಿ 150 ರೂ., ಮೆಕ್ಕೆ ಜೋಳ 128 ರೂ., ಜೋಳ 210 ರೂ., ಸಜ್ಜೆ 150 ರೂ., ತೊಗರಿ 400 ರೂ., ಹೆಸರುಬೇಳೆ 803 ರೂ., ಉದ್ದಿನ ಬೇಳೆ 350 ರೂ., ಕಡಲೆಕಾಯಿ 527 ರೂ., ಸೂರ್ಯಕಾಂತಿ 360 ರೂ., ಸೋಯಾಬೀನ್ 300 ರೂ., ಹತ್ತಿ 400 ರೂ., ಎಳ್ಳಿ 632 ರೂ., ಹುಚ್ಚೆಳ್ಳಿ 983 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ 2 ಲಕ್ಷ ರೈತರಿಗೆ ಲಾಭವಾಗಲಿದೆ. ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೀಗ ಕುಸುಬೆ ಬೆಳೆಯನ್ನೂ ಎಂಎಸ್‌ಪಿ ಯೋಜನೆ ಅಡಿಗೆ ತಂದಿರುವುದು ರೈತರರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು

  • ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ, ರಾಗಿ, ತೊಗರಿ ಸೇರಿ 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್‌ಪಿ ಹೆಚ್ಚಿಸಿದೆ. ಭತ್ತದ ಮೇಲಿನ ಎಂಎಸ್‌ಪಿಯನ್ನು 143 ರೂಪಾಯಿ ಹೆಚ್ಚಿಸಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ. ಅದೇ ರೀತಿ ರಾಗಿಗೆ 268 ರೂ., ಗೋಧಿ 150 ರೂ., ಮೆಕ್ಕೆ ಜೋಳ 128 ರೂ., ಜೋಳ 210 ರೂ., ಸಜ್ಜೆ 150 ರೂ., ತೊಗರಿ 400 ರೂ., ಹೆಸರುಬೇಳೆ 803 ರೂ., ಉದ್ದಿನ ಬೇಳೆ 350 ರೂ., ಕಡಲೆಕಾಯಿ 527 ರೂ., ಸೂರ್ಯಕಾಂತಿ 360 ರೂ., ಸೋಯಾಬೀನ್ 300 ರೂ., ಹತ್ತಿ 400 ರೂ., ಎಳ್ಳಿ 632 ರೂ., ಹುಚ್ಚೆಳ್ಳಿ 983 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

    ಇದರಿಂದ 2 ಲಕ್ಷ ರೈತರಿಗೆ ಲಾಭವಾಗಲಿದೆ. ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಸರ್ಕಾರಿ ಗೋದಾಮಿನಲ್ಲಿ ಅಕ್ಕಿಯ ದಾಸ್ತಾನು ಸಾಕಷ್ಟು ಇರುವಾಗಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 117 ರೂ. ಹೆಚ್ಚಳ ಮಾಡಲಾಗಿದೆ.

    ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಕಟಿಸಿದ ಮೊದಲ ನಿರ್ಧಾರ ಇದಾಗಿದೆ. ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರ ಹಿಂದೆ ಹರಿಯಾಣ, ಮಹಾರಾಷ್ಟç, ಜಾರ್ಖಂಡ್, ದೆಹಲಿ ವಿಧಾನಸಭಾ ಚುನಾವಣೆಗಳ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

  • ಜು.1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿ – ಅರ್ಜುನ್ ರಾಮ್ ಮೇಘವಾಲ್

    ಜು.1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿ – ಅರ್ಜುನ್ ರಾಮ್ ಮೇಘವಾಲ್

    ಕೋಲ್ಕತ್ತಾ: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು (New Criminal Laws) ಜಾರಿಗೆ ಬರಲಿವೆ. ಐಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್, ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಎಂಬ ಮೂರು ಮಾದರಿ ಕಾನೂನುಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ತಿಳಿಸಿದ್ದಾರೆ.

    ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಜಾರಿಗೊಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಮುಂದುವರಿದು ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿದ್ದು, ಅವುಗಳ ಅನುಷ್ಠಾನಕ್ಕೆ ಅಗತ್ಯ ತರಬೇತಿ ಈಗಾಗಲೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಇಂದಿನ ಕಾಲದ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಮೂರು ಕಾಯ್ದೆಗಳನ್ನು ಜಾರಿ ಮಾಡಲಾಗುತ್ತದೆ. ಈಗಾಗಲೇ ಬಿಪಿಆರ್‌ಡಿ, ಜ್ಯೂಡಿಷಿಯಲ್ ಅಕಾಡೆಮಿಗಳು, ಕಾನೂನು ವಿಶ್ವವಿದ್ಯಾಲಯಗಳು ಅಧಿಕಾರಿಗಳಿಗೆ ತರಬೇತಿ ನೀಡುತ್ತಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ ಹುದ್ದೆ ಬಿಜೆಪಿಗೆ, ಡೆಪ್ಯೂಟಿ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ?

    2023ರ ಡಿಸೆಂಬರ್‌ನಲ್ಲಿ ಈ ಮೂರು ಕಾನೂನುಗಳನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿತ್ತು. ಬಳಿಕ ಈ ಮೂರು ಕಾಯ್ದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಆದ್ರೆ ಕೇಂದ್ರ ಸರ್ಕಾರ ಅಧಿಸೂಚನೆ ಮುಂದೂಡಿದ್ದರಿಂದ ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ. ಪ್ರಸಕ್ತ ವರ್ಷಾರಂಭದಲ್ಲಿ ಮೂರು ಕಾನೂನುಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‍ಕೌಂಟರ್ – ಹೊಂಚು ಹಾಕಿ ಕುಳಿತಿದ್ದ ನಾಲ್ವರು ನಕ್ಸಲರ ಹತ್ಯೆ

  • ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

    ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

    – ಪೆಟ್ರೋಲ್ ಮೇಲೆ ಕೇಂದ್ರದ ತೆರಿಗೆ ಕಡಿಮೆ ಮಾಡ್ಬೇಕು: ಸಿದ್ದರಾಮಯ್ಯ ಆಗ್ರಹ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ (Petrol, Diesel Price Hike) ಜನಸಾಮಾನ್ಯರಿಂದ ತೀವ್ರ ಆಕ್ರೋಶ ಕಂಡುಬರುತ್ತಿದೆ. ಇತ್ತ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್ ಹೆಚ್ಚಳವನ್ನ ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥಿಸಿಕೊಂಡಿದ್ದಾರೆ.

    ಸಿಎಂ ಪ್ರಕಟಣೆಯಲ್ಲಿ ಏನಿದೆ?
    ವ್ಯಾಟ್ ಹೆಚ್ಚಳದ ನಂತರವೂ ಬಹುತೇಕ ದಕ್ಷಿಣ ಭಾರತದ (South India) ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆ ಇರೋದು. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಇಂಧನಗಳ ಮೇಲಿನ ಮಾರಾಟ ಸುಂಕ ಪೆಟ್ರೋಲ್‌ಗೆ 25% ಇದ್ದು, ಹೆಚ್ಚುವರಿಯಾಗಿ 5.12 ರೂ. ತೆರಿಗೆ ಸಹ ಇದೆ. ಇನ್ನು ಮಹಾರಾಷ್ಟ್ರದಲ್ಲಿ ಡಿಸೇಲ್ ಮೇಲೆ 21% ತೆರಿಗೆ ಇದೆ. ಕರ್ನಾಟಕದಲ್ಲಿ ಪರಿಷ್ಕೃತಗೊಂಡ ನಂತರವೂ ಈ ಸುಂಕದ ಪ್ರಮಾಣ ಮಹಾರಾಷ್ಟ್ರಕ್ಕಿಂತ ಕಡಿಮೆ ಇದೆ. ಇದರ ಹೊರತಾಗಿ ಡಿಸೇಲ್ ದರ ಕರ್ನಾಟಕದಲ್ಲಿ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗಿಂತಲೂ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಇಂಧನಗಳ ದರ ಜನತೆಗೆ ಕೈಗೆಟುಕುವ ದರಗಳಲ್ಲಿ ಸಿಗುತ್ತಿದೆ.

    ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಆದಾಯ ಬೇರೆ ರಾಜ್ಯಗಳತ್ತ ಹರಿದುಹೋಗಲು ಕಾರಣವಾಗಿತ್ತು. ಆಗ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನಗಳ ಮೇಲೆ ತೆರಿಗೆ ಹೆಚ್ಚಳ ಮಾಡ್ತಿದ್ರೆ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಇಂಧನಗಳ ಮೇಲಿನ ತನ್ನ ಮಾರಾಟ ಸುಂಕ ಕಡಿಮೆ ಮಾಡ್ತಿತ್ತು. ಈ ಕಾರಣದಿಂದ ರಾಜ್ಯದ ಆದಾಯ ಕಡಿಮೆ ಆಯ್ತು. ಆದೇ ಹೊತ್ತಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಆದಾಯ ಹೋಗುತ್ತಿತ್ತು. ಪರೋಕ್ಷವಾಗಿ ರಾಜ್ಯದ ಆದಾಯಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕೊಕ್ಕೆ ಹಾಕಿತ್ತು.

    ಇನ್ನು 2021-22 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನ ಪೆಟ್ರೋಲ್ 13 ರೂಪಾಯಿ ಮತ್ತು ಡಿಸೇಲ್ 16 ರೂ. ಕಡಿಮೆ ಮಾಡಿತ್ತು.‌ ಸದ್ಯ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆ 19.9 ರೂಪಾಯಿ ಹಾಗೂ ಡಿಸೇಲ್ ಮೇಲೆ 18.8 ರೂ. ಇದೆ. ಇದನ್ನ ಕೇಂದ್ರ ಸರ್ಕಾರ ಜನರ ಒಳಿತಿಗೊಸ್ಕರ ಕಡಿಮೆ ಮಾಡಬೇಕು. ರಾಜ್ಯದ ವ್ಯಾಟ್ ಹೆಚ್ಚಳ ದಿಂದ ಜನರ ಸೇವೆಗಳು ಅಭಿವೃದ್ಧಿ ಕೆಲಸಗಳು ಹೆಚ್ಚು ಹಣ ನೀಡಲಿದ್ದೇವೆ. ನಾವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

  • ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಸಿಎಂ 2ನೇ ಪತ್ರ- ಪ್ರಧಾನಿಗೆ ಬರೆದ ಲೆಟರ್‌ನಲ್ಲಿ ಏನಿದೆ?

    ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಸಿಎಂ 2ನೇ ಪತ್ರ- ಪ್ರಧಾನಿಗೆ ಬರೆದ ಲೆಟರ್‌ನಲ್ಲಿ ಏನಿದೆ?

    ಬೆಂಗಳೂರು: ಭೂಗತವಾಗಿರುವ ಸಂಸದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್  ರದ್ದತಿಗೆ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎರಡನೇ ಪತ್ರವನ್ನು ಬರೆದಿದ್ದಾರೆ.

    ಬುಧವಾರ ಎರಡನೇ ಪತ್ರ ಬರೆದಿರುವ ಸಿಎಂ, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ಅನ್ನು ರದ್ದುಗೊಳಿಸಬೇಕು. ಭಾರತಕ್ಕ ವಾಪಸ್ ಕರೆತರಲು ತ್ವರಿತ ಕ್ರಮವಹಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಪತ್ರದಲ್ಲೇನಿದೆ..?: ಪ್ರಜ್ವಲ್ ರೇವಣ್ಣ ಮೇಲೆ ಆರೋಪ, ಗಂಭೀರ ಘಟನೆಗಳ ಬಗ್ಗೆ ಗಮನ ಸೆಳೆಯಲು ನಾನು ಮತ್ತೊಮ್ಮೆ ನಿಮಗೆ ಬರೆಯುತ್ತೇನೆ. ಈ ಘಟನೆಗಳು ಕರ್ನಾಟಕ ರಾಜ್ಯದ ಜನರ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ ರಾಷ್ಟ್ರವ್ಯಾಪಿ ಆತಂಕಕ್ಕೂ ಕಾರಣವಾಗಿವೆ. ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಚುನಾವಣೆಗೆ ಸ್ಪರ್ಧಿಸಿರುವ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ಮೊಮ್ಮಗ ಏಪ್ರಿಲ್ 27 ರಂದು ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ ಸಂಗತಿ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?

    2024 ರಲ್ಲಿ ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ D 1135500 ಅನ್ನು ಬಳಸಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಅವರ ವಿರುದ್ಧ ಆರೋಪಗಳು ಬಂದಾಗ, ಹೇಯ ಕೃತ್ಯಗಳು ಹೊರಬಂದ ಬಳಿಕ ಮೊದಲ ಎಫ್‍ಐಆರ್ ದಾಖಲಾಗುವ ಕೆಲವೇ ಗಂಟೆಗಳ ಮೊದಲು ಪಲಾಯನ ಮಾಡಿದ್ದಾರೆ. ದೇಶದಿಂದ ಪಲಾಯನ ಮಾಡಲು ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ರಾಜತಾಂತ್ರಿಕ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 

    ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ಕರ್ನಾಟಕ ಸರ್ಕಾರವು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಪ್ರಜ್ವಲ್ ರೇವಣ್ಣ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಕ್ರಿಮಿನಲ್ ಆರೋಪಗಳನ್ನು ಎದುರಿಸಲು ಆರೋಪಿ ಉಪಸ್ಥಿತಿಗೆ ಎಸ್‍ಐಟಿ ಪ್ರಯತ್ನಿಸುತ್ತಿದೆ. ಸಿಆರ್‍ಪಿಸಿ ಕಲಂ 41ಎ ಅಡಿಯಲ್ಲಿ ತನಿಖಾಧಿಕಾರಿಯಿಂದ ಲುಕ್‍ಔಟ್ ಸುತ್ತೋಲೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಆಗಿದೆ.‌ ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಹಿಂಪಡೆಯಲು ಕೋರ್ಟ್‌ನಿಂದ ಯಾವುದೇ ಆದೇಶ ಬಂದಿಲ್ಲ: MEA

    ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರು ಇಂದಿಗೂ ತಲೆಮರೆಸಿಕೊಂಡಿದ್ದಾರೆ. ಇದು ತೀವ್ರ ಕಳವಳಕಾರಿ ಸಂಗತಿ. ಪ್ರಜ್ವಲ್ ರೇವಣ್ಣ ವಿರುದ್ಧದ ಎಫ್‍ಐಆರ್‍ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ವಸ್ತ್ರಾಪಹರಣ ಮತ್ತು ಬಲಿಪಶುಗಳಿಗೆ ಬೆದರಿಕೆ ಹಾಕುವ ಸಲುವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆಗಳನ್ನು ವೀಡಿಯೊ-ಗ್ರಾಫಿಂಗ್ ಸ್ವರೂಪದ ಆರೋಪಗಳಿವೆ. ಸವಲತ್ತುಗಳ ದುರುಪಯೋಗ ಮತ್ತು ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆಗಳಿಗೆ ಅಸಹಕಾರ ತೋರುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು.

    ಆರೋಪಿಯ ಉಪಸ್ಥಿತಿಯನ್ನು ತನಿಖೆ ಮತ್ತು ವಿಚಾರಣೆಯನ್ನು ಎದುರಿಸಲು ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದು ಸಾಧನವಾಗಿದೆ. ಇದನ್ನ ಒತ್ತಿ ಹೇಳುವ ಅಗತ್ಯವಿಲ್ಲ. ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸುವ ನನ್ನ ಹಿಂದಿನ ಪತ್ರವು ಸಹ ಪರಿಸ್ಥಿತಿಯ ಗಂಭೀರತೆಯನ್ನ ಪ್ರಸ್ತಾಪಿಸಿತ್ತು. ಆದರೆ ನನಗೆ ತಿಳಿದಿರುವಂತೆ, ಕ್ರಮ ತೆಗೆದುಕೊಳ್ಳದಿರುವುದು ನಿರಾಶಾದಾಯಕವಾಗಿದೆ. ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪಾಸ್‌ಪೋರ್ಟ್ ಕಾಯಿದೆ, 1967 ರ ಸೆಕ್ಷನ್ 10(3)(ಎಚ್) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿ ತ್ವರಿತ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ. ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ದೇಶಕ್ಕೆ ಸುರಕ್ಷಿತವಾಗಿ ಮರಳಬೇಕು ಎಂದು ಸಿಎಂ ತಮ್ಮ ಸುದೀರ್ಘ ಪತ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಬರ ಪರಿಹಾರ ಬಿಡುಗಡೆ – ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಬರ ಪರಿಹಾರ ಬಿಡುಗಡೆ – ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ರಾಜ್ಯದ ಬರ ಪರಿಹಾರ (Drought Relief )ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀಡಿದ ಅಂತರ್ ಸಚಿವಾಲಯದ ವರದಿಯನ್ನು (Inter Ministerial Central Team’s Report) ಸಲ್ಲಿಸುವಂತೆ ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿತು.

    ಇಂದಿನ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರದ (Karnataka Government) ಪರ ವಾದ ಮಂಡಿಸಿದ ಕಪಿಲ್ ಸಿಬಲ್ (Kapil Sibal), ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ ಅದಕ್ಕಾಗಿ ಧನ್ಯವಾದಗಳು. ಆದರೆ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ ಇದು ಅಸಮಂಜಸ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಪರ ವಾದಿಸಿದ ಅರ್ಟಾನಿ ಜನರಲ್ ಆರ್ ವೆಂಕಟರಮಣಿ, ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪರಿಹಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆಯಿಂದ 6 ವರ್ಷ ಮೋದಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

     

    ಇದೇ ಅಂಶವನ್ನು ಪ್ರಸ್ತಾಪಿಸಿದ ಸಿಬಲ್, ರಾಜ್ಯಕ್ಕೆ ಆಗಮಿಸಿದ ತಜ್ಞರ ತಂಡದ ವರದಿ ಏನು ಎಂಬುದು ರಾಜ್ಯಕ್ಕೆ ತಿಳಿದಿಲ್ಲ, ಅದರ ಪ್ರತಿಯನ್ನು ರಾಜ್ಯಕ್ಕೆ ನೀಡಿಲ್ಲ. ಹೀಗಾಗಿ ಆ ಪ್ರತಿಯನ್ನು ಕೋರ್ಟ್ ಮುಂದೆ ಇಡಬೇಕು. ಅದರ ಅನ್ವಯ ಪರಿಹಾರ ನೀಡುವುದಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ಬೇಕು ಎಂದು ಅರ್ಟಾನಿ ಜನರಲ್ ಕೇಳಿದರು‌. ಇದಕ್ಕೆ ನಿರಾಕರಿಸಿದ ಪೀಠ ಮುಂದಿನ ಸೋಮವಾರದೊಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

    ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಿದ್ದು ಈ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಈಗ ಮತ್ತೆ ತಕರಾರು ಎತ್ತಿದೆ.

  • ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ

    ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ

    ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ (Drought Relief Funds) ಘೋಷಣೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಚಂಡಮಾರುತ ಹಾಗೂ ಪ್ರವಾಹ ಪರಿಹಾರವೆಂದು 275 ಕೋಟಿ ರೂ. ನೀಡಿದೆ.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ  (Karnataka Government) ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,174 ಕೋಟಿ ರೂ. ಹಣದ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನ (Supreme Court of India) ಮೊರೆ ಹೋಗಿತ್ತು. ಬಳಿಕ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್‍ಗೆ ಹೇಳಿತ್ತು. ಅದರಂತೆ ಇದೀಗ ಕೇಂದ್ರ ಸರ್ಕರ ಬರ ಪರಿಹಾರ ಘೋಷಣೆ ಮಾಡಿದೆ. ಇದನ್ನೂ ಓದಿ: ಬರ ಪರಿಹಾರ ಬಿಡುಗಡೆಗೆ ಈ ವಾರದಲ್ಲಿ ಕ್ರಮ – ಸುಪ್ರೀಂಗೆ ಕೇಂದ್ರ ಸರ್ಕಾರದ ಭರವಸೆ

    ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 22 ರಂದು ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಚುನಾವಣಾ ಆಯೋಗದ ಜೊತೆಗೆ ಈ ಬಗ್ಗೆ ಚರ್ಚಿಸಲಾಗಿದ್ದು, ಬರ ಪರಿಹಾರ ಬಿಡುಗಡೆಗೆ ಆಯೋಗ ಅನುಮತಿ ನೀಡಿದೆ. ಹೀಗಾಗಿ ಈ ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.

    ಕೇಂದ್ರ ಸರ್ಕಾರ ಭರವಸೆ ನೀಡಿರುವ ಬೆನ್ನಲ್ಲೇ ಮಧ್ಯಪ್ರವೇಶ ಮಾಡಿದ ನ್ಯಾ.ಬಿ.ಆರ್ ಗವಾಯಿ, ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವಿಷಯಗಳನ್ನು ಸೌರ್ಹಾದಯುತವಾಗಿ ಬಗೆಹರಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ತನಕ ಈ ಪ್ರಕರಣ ಬರಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು. ಬಳಿಕ ಅರ್ಜಿ ವಿಚಾರಣೆಯನ್ನು ಕೋರ್ಟ್ ಏ.29ಕ್ಕೆ ಮುಂದೂಡಿತ್ತು.

    ಕೇಂದ್ರ, ರಾಜ್ಯಕ್ಕೆ ಗೃಹ ಇಲಾಖೆ ಷರತ್ತು

    ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನ್ವಯವಾಗುವಂತೆ ಷರತ್ತನ್ನು ವಿಧಿಸಲಾಗಿದೆ.

    ಬರ ಪರಿಹಾರ ಬಿಡುಗಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವಂತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಂತಿಲ್ಲ. ರಾಜಕೀಯ ಭಾಷಣಗಳಲ್ಲೂ ಈ ಬಗ್ಗೆ ಉಲ್ಲೇಖಿಸುವಂತಿಲ್ಲ. ಬರ ಪರಿಹಾರದ ವಿಚಾರವಾಗಿ ಸುದ್ದಿಗೋಷ್ಠಿಯನ್ನು ನಡೆಸುವಂತಿಲ್ಲ. ಬರ ಪರಿಹಾರದ ಹಣವನ್ನು ಬದಲಿ ಕಾರ್ಯಗಳಿಗೆ ಬಳಸಿಕೊಳ್ಳುವಂತಿಲ್ಲ ಹಾಗೂ ನೀತಿ ಸಂಹಿತೆ ನಡುವೆ ಹೊಸ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

  • 10 ವರ್ಷಗಳಲ್ಲಿ ದೇಶದ ಚಿತ್ರಣವನ್ನೇ ಮೋದಿ ಬದಲಾಯಿಸಿದ್ರು: ಯೋಗಿ

    10 ವರ್ಷಗಳಲ್ಲಿ ದೇಶದ ಚಿತ್ರಣವನ್ನೇ ಮೋದಿ ಬದಲಾಯಿಸಿದ್ರು: ಯೋಗಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) 10 ವರ್ಷಗಳಲ್ಲಿ ಭಾರತದ ಚಿತ್ರಣವನ್ನೇ ಬದಲಾಯಿಸಿದರು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

    ಲಕ್ನೋದ ಬಿಜೆಪಿ (BJP) ರಾಜ್ಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಮತನಾಡುತ್ತಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕೊಂಡಾಡಿದರು. ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಬಲವಾದ ಆಸೆ ಜನಸಾಮಾನ್ಯರಲ್ಲಿದೆ ಎಂದು ಅವರು ಒತ್ತಿ ಹೇಳಿದರು.

    ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿವರ್ತನಾಶೀಲ ಪ್ರಯತ್ನಗಳನ್ನು ಮಾಡಿದ್ದಾರೆ. ಮೋದಿ ಅವರು ದೇಶದ ಚಿತ್ರಣವನ್ನು ಗಮನಾರ್ಹವಾಗಿ ಬದಲಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಪಿತ್ರೋಡಾ ಹೇಳಿಕೆ ಪಕ್ಷದ ಹೇಳಿಕೆಯಲ್ಲ- ಅಂತರ ಕಾಯ್ದುಕೊಂಡ ಕಾಂಗ್ರೆಸ್‌

    ಸಾಮಾನ್ಯ ಜನರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂಬ ಭಾವನೆ ಇದೆ. ಪ್ರಧಾನಿಯವರು ಕಳೆದ 10 ವರ್ಷಗಳಲ್ಲಿ ದೇಶದ ಚಿತ್ರಣವನ್ನು ಬದಲಾಯಿಸಿದ್ದಾರೆ. ಅಲ್ಲದೇ ಅವರುವ ಮಡಿರುವ ಸಕಾರಾತ್ಮಕ ಪ್ರಯತ್ನಗಳು ಭಾರತದ ಜನರ ಬೆಂಬಲವನ್ನು ಗಳಿಸಿವೆ ಎಂದು ಯೋಗಿ ಹೇಳಿದರು.

  • ಸಾಲದ ಸುಳಿಗೆ ಸಿಲುಕಲಿವೆ – ಉಚಿತ ವಿದ್ಯುತ್‌ ನೀಡುವ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ಸಾಲದ ಸುಳಿಗೆ ಸಿಲುಕಲಿವೆ – ಉಚಿತ ವಿದ್ಯುತ್‌ ನೀಡುವ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ನವದೆಹಲಿ: ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ (Free Electricity) ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇಂದ್ರ ಇಂಧನ ಸಚಿವ ಆ‌ರ್.ಕೆ. ಸಿಂಗ್ (RK Singh), ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ಸರಿ. ಆದರೆ, ಸಾಲ ಮಾಡಿ ವಿದ್ಯುತ್ ನೀಡಿದರೆ ಅದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ. ಏಕೆಂದರೆ ವಿದ್ಯುತ್ ತಯಾರಿಸಲು ಖರ್ಚು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

    ಬೇರೆಲ್ಲಾ ಉತ್ಪನ್ನಗಳಂತೆ ವಿದ್ಯುತ್ ತಯಾರಿಸಲು ಕೂಡ ಹಣ ಬೇಕು. 2022 ರಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಜನಪರ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಂಜಾಬ್‌ನ ಎಎಪಿ ಸರ್ಕಾರದ (Punjab Government) ಈಗಾಗಲೇ 2 ವರ್ಷಗಳಲ್ಲಿ 47,000 ಕೋಟಿ ರೂಪಾಯಿಗಳಷ್ಟು ಸಾಲ ಪಡೆದುಕೊಂಡಿದೆ. ಜನರಿಗೆ ಯಾವುದೇ ರಾಜ್ಯ ಸರ್ಕಾರ ವಿದ್ಯುತ್ತನ್ನು ಉಚಿತವಾಗಿ ನೀಡುತ್ತದೆಯಾದರೆ ಅಷ್ಟು ಹಣ ರಾಜ್ಯ ಸರ್ಕಾರದ ಬಳಿಯೇ ಇರಬೇಕು. ಸಾಲ ಮಾಡಿ ಹಣ ತಂದು ಜನರಿಗೆ ಉಚಿತ ವಿದ್ಯುತ್‌ ನೀಡಿದರೆ ಖಂಡಿತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ವಿದ್ಯುತ್ ಉಚಿತವಾಗಿ ಸಿಗೋದಿಲ್ಲ ಎಂದು ನಾನು ರಾಜ್ಯಗಳಿಗೆ ಹೇಳುತ್ತಲೇ ಬಂದಿದ್ದೇನೆ. ಆದರೂ ಅವು ವಿದ್ಯುತ್ತನ್ನು ಉಚಿತವಾಗಿ ನೀಡುತ್ತವೆಯಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಸಾಲದಲ್ಲಿರುವ ರಾಜ್ಯಗಳು ಉಚಿತ ವಿದ್ಯುತ್‌ನಂತಹ ಜನಪ್ರಿಯ ಯೋಜನೆಗಳಿಗಾಗಿ ಇನ್ನಷ್ಟು ಸಾಲ ಮಾಡುತ್ತಿವೆ. ಹೀಗೆ ಸಾಲದ ಸುಳಿಗೆ ರಾಜ್ಯವನ್ನು ಸಿಲುಕಿಸಬಾರದು. ಉಚಿತಗಳಿಂದಾಗಿಯೇ ಅನೇಕ ರಾಜ್ಯ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಸುಲಭವಾಗಿ ಮಾಡಿ ಮಾವಿನಕಾಯಿ ಚಿತ್ರಾನ್ನ

  • ಪುಲ್ವಾಮಾ ದಾಳಿ ಬಗೆಗಿನ ಪರಮೇಶ್ವರ್ ಹೇಳಿಕೆ ದೇಶ ವಿರೋಧಿ: ಗೌರವ್ ಭಾಟಿಯಾ

    ಪುಲ್ವಾಮಾ ದಾಳಿ ಬಗೆಗಿನ ಪರಮೇಶ್ವರ್ ಹೇಳಿಕೆ ದೇಶ ವಿರೋಧಿ: ಗೌರವ್ ಭಾಟಿಯಾ

    ನವದೆಹಲಿ: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪುಲ್ವಾಮಾ ದಾಳಿ (Pulwama Attack) ನಡೆದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ‌. ಇದು ಅತ್ಯಂತ ದುಃಖಕರ, ಆತಂಕಕಾರಿ ಹಾಗೂ ದೇಶ ವಿರೋಧಿ ಹೇಳಿಕೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಆರೋಪಿಸಿದ್ದಾರೆ.

    ಜಿ. ಪರಮೇಶ್ವರ್ (G.Parameshwar) ಹೇಳಿಕೆ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇಂದಿನ ಕಾಂಗ್ರೆಸ್‌ನ (Congress) ಪಾತ್ರ ಭಾರತ ವಿರೋಧಿ ಎಂಬುದು ನಂಬಿಕೆಗೆ ಮೀರಿದ್ದು. ಅವರ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಾಲಾಕೋಟ್ ವೈಮಾನಿಕ ದಾಳಿಯ ಸಂದರ್ಭದಲ್ಲೂ ಕಾಂಗ್ರೆಸ್, ಎಸ್‌ಪಿ (SP) ಮತ್ತು ಆಮ್ ಆದ್ಮಿ (AAP) ಪಕ್ಷಗಳು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದವು, ದಾಳಿಗೆ ಇದಕ್ಕೆ ಸಾಕ್ಷಿ ಕೇಳಿದ್ದವು. ಈಗ ಜಿ.ಪರಮೇಶ್ವರ್ ಹೇಳಿಕೆಯಲ್ಲೂ ಅದೇ ಭಾರತ ವಿರೋಧಿ ಪಾತ್ರ ಎದ್ದು ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಅಂತಹ ನಿಲುವು ಇದ್ದರೆ, ಕಾಂಗ್ರೆಸ್‌ನ ಈ ಕ್ರಮಗಳಿಗೆ ಭಾರತದಲ್ಲಿ ಸ್ಥಾನವಿಲ್ಲ ಎಂದು ಹೇಳಬಹುದು. ನೀವು ಭಾರತೀಯ ಸೇನೆಯಿಂದ ಪುರಾವೆ ಕೇಳುತ್ತೀರಿ, ನೀವು ಭಾರತೀಯರೇ ಅಥವಾ ಅಲ್ಲವೇ ಎಂದು ದೇಶದ ಜನರು ನಿಮ್ಮನ್ನು ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟ ಪ್ರಕರಣ – ತನಿಖೆಗೆ ತೆರಳಿದ್ದ ಎನ್‍ಐಎ ಅಧಿಕಾರಿಗಳ ಕಾರಿನ ಮೇಲೆ ದಾಳಿ