Tag: ಹ್ಯಾಕ್ ಐ

  • ಅವೇಂಜರ್ಸ್ ನಟ ಜೆರ್ಮಿಗೆ ಅಪಘಾತ, ಸ್ಥಿತಿ ಚಿಂತಾಜನಕ

    ಅವೇಂಜರ್ಸ್ ನಟ ಜೆರ್ಮಿಗೆ ಅಪಘಾತ, ಸ್ಥಿತಿ ಚಿಂತಾಜನಕ

    ಹಾಲಿವುಡ್ ನ ಖ್ಯಾತ ನಟ, ಅವೇಂಜರ್ಸ್ (Avengers) ಸರಣಿಯ ಮೂಲಕ ಮನೆಮಾತಾಗಿರುವ ನಟ ಜೆರ್ಮಿ ರನ್ನರ್ (Jeremy Runner)ಗೆ ಅಪಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಅವೇಂಜರ್ಸ್ ಸರಣಿಯಲ್ಲಿ ಹ್ಯಾಕ್ ಐ ಪಾತ್ರ ನಿರ್ವಹಿಸುತ್ತಿದ್ದ ಇವರು ದಟ್ಟ ಮಂಜು ಮಧ್ಯ ಕಾರು ಚಲಾಯಿಸುತ್ತಿರುವಾಗ ಅಪಘಾತಕ್ಕೀಡಾಗಿದೆ (Accident) ಎಂದು ಹೇಳಲಾಗುತ್ತಿದೆ. ಅಪಘಾತವಾದ ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜೆರ್ಮಿ ವಾಸಿಸುತ್ತಿದ್ದ ನೆವಾಡಾದಲ್ಲಿ ಹಲವು ದಿನಗಳಿಂದ ಹಿಮಪಾತವಾಗುತ್ತಿದೆ. ಇಡೀ ಪ್ರದೇಶದ ಹಿಮದಿಂದ ಮುಚ್ಚಿದೆ. ಅಲ್ಲದೇ ವಿದ್ಯುತ್ ಕೂಡ ಕೈಕೊಟ್ಟಿದೆ. ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿಯನ್ನು ರಾಕೇಶ್ ಅಡಿಗ ಗೆಲ್ಲಬೇಕಿತ್ತು: ಹೀಗೊಂದು ಅಭಿಯಾನ

    ತೀವ್ರ ಗಾಯಗೊಂಡಿದ್ದ ಅವರನ್ನು ರಸ್ತೆ ಸಂಚಾರಕ್ಕೆ ಅನುಕೂಲ ಇಲ್ಲದ ಕಾರಣದಿಂದಾಗಿ ಏರ್ ಲಿಫ್ಟ್ ಮಾಡಲಾಗಿದೆ. ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರಂತೆ ವೈದ್ಯರು. ಹಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು, ಆಸ್ಕರ್ ಪ್ರಶಸ್ತಿ ವಿಜೇತ ‘ಹರ್ಟ್ ಲಾಕರ್’ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಫೇಮಸ್ ಅಂತ ಆಗಿದ್ದು ಅವೇಂಜರ್ಸ್ ಸೀರಿಸ್ ಮೂಲಕ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]