Tag: ಹ್ಯಾಕರ್

  • Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    – ಪ್ಯಾನ್, ಬ್ಯಾಂಕ್‌ ಖಾತೆ ವಿವರ, ಮೊಬೈಲ್ ಸಂಖ್ಯೆ ಸೇರಿ ಪ್ರಮುಖ ಡೇಟಾ ಕಳವು

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸೈಬರ್‌ ಪ್ರಕರಣವೊಂದು (Cyber Case) ಬೆಳಕಿಗೆ ಬಂದಿದೆ. ಭಾರತದ ಪ್ರಮುಖ ಆರೋಗ್ಯ ವಿಮಾ ಸಂಸ್ಥೆ ಸ್ಟಾರ್‌ ಹೆಲ್ತ್‌ ನಲ್ಲಿ (Star Health Insurance) ಕೋಟ್ಯಂತರ ಪ್ರಮಾಣದ ಡೇಟಾ ಕಳವಾಗಿದೆ ಎಂದು ವರದಿಯಾಗಿದೆ.

    ಕೋಟ್ಯಂತರ ಗ್ರಾಹಕರ ಸೂಕ್ಷ್ಮ, ವೈಯಕ್ತಿಕ ಹಾಗೂ ವಿಮೆಗೆ ಸಂಬಂಧಿಸಿದ ವಿವರಗಳನ್ನು ಕಳುವು ಮಾಡಲಾಗಿದೆ. ಕದ್ದ ಡೇಟಾಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಬಗ್ಗೆ ಖುದ್ದು ಹ್ಯಾಕರ್‌ (Hacker) ಹೇಳಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ತಾನು 3.1 ಕೋಟಿಗಿಂತಲೂ ಹೆಚ್ಚು ಗ್ರಾಹಕರಿಗೆ ಸಂಬಂಧಿಸಿದ 7.24TB ಡೇಟಾವನ್ನು (7240 GB) ಹ್ಯಾಕ್‌ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಳವು ಮಾಡಿದ ಈ ಡೇಟಾವನ್ನು 1.50 ಲಕ್ಷ ಡಾಲರ್‌ಗೆ (1.26 ಕೋಟಿ ರೂ.) ಮಾರಾಟ ಮಾಡಲು ಡೇಟಾಗಳನ್ನ ಪಟ್ಟಿ ಮಾಡಲಿದ್ದೇನೆ. ಹೆಚ್ಚುವರಿಯಾಗಿ ಹೊಂದಿರುವ 1 ಲಕ್ಷ ಗ್ರಾಹಕರ ಸಣ್ಣ ಡೇಟಾ ಸೆಟ್‌ಗಳನ್ನು ಪ್ರತಿ ತಲಾ 10 ಸಾವಿರ ಡಾಲರ್‌ಗೆ (8.40 ಲಕ್ಷ ರೂ.) ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಈ ಡೇಟಾ ಉಲ್ಲಂಘನೆಯು ದೇಶದಲ್ಲಿ ದತ್ತಾಂಶ ರಕ್ಷಣೆ ಮತ್ತು ಭದ್ರತೆ ಬಗ್ಗೆ ಗಮನಾರ್ಹ ಕಾಳಜಿಯನ್ನು ಹುಟ್ಟುಹಾಕಿದೆ. ಬಳಕೆದಾರರು ಕೂಡಲೇ ತಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳುವಂತೆ ಸೈಬರ್‌ ತಜ್ಞರು ಸೂಚಿಸಿದ್ದಾರೆ.

    ಏನೇನು ಡೇಟಾ ಕಳವು?
    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ ಕದ್ದ ಡೇಟಾಗಳಲ್ಲಿ ಗ್ರಾಹಕರ ಹೆಸರು, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸಗಳು, ಜನ್ಮದಿನಾಂಕ, ಗೌಪ್ಯ ವೈದ್ಯಕೀಯ ದಾಖಲೆಗಳು, ವಸತಿ ವಿಳಾಸಗಳು, ಬ್ಯಾಂಕ್‌ ಸ್ಥಿತಿ ವಿವರ, ಆರೋಗ್ಯ ಕಾರ್ಡ್ ಸಂಖ್ಯೆಗಳು ಸೇರಿ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: 10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಕೊಂಡು ಏನು ಮಾಡ್ತೀರಿ? : ಹೆಚ್‌ಡಿಕೆ ಕಿಡಿ

    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) ಅಮರ್‌ಜೀತ್ ಖನುಜಾ ಅವರೇ ಮಾಹಿತಿಯನ್ನು ನೇರವಾಗಿ ನನಗೆ ಮಾರಾಟ ಮಾಡುವ ಮೂಲಕ ಡೇಟಾ ಸೋರಿಕೆಯ ಪಾಲುದಾರರಾಗಿದ್ದಾರೆ. 3.1 ಕೋಟಿ ಗ್ರಾಹಕರ ಡೇಟಾವನ್ನು 43,000 ಯುಎಸ್‌ ಡಾಲರ್‌ಗೆ (36.14 ಲಕ್ಷ ರೂ.)ಗೆ ಮಾರಾಟ ಮಾಡಿದ್ದಾರೆ ಎಂದು ಖುದ್ದು ಹ್ಯಾಕರ್‌ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

  • 20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

    20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

    ವಾಷಿಂಗ್ಟನ್: ಸುಮಾರು 20 ಕೋಟಿಗೂ ಅಧಿಕ ಟ್ವಿಟ್ಟರ್ (Twitter) ಬಳಕೆದಾರರ ಇ-ಮೇಲ್ ವಿಳಾಸ (Email Addresses) ಸೋರಿಕೆಯಾಗಿರುವುದಾಗಿ (Leaked) ವರದಿಯಾಗಿದೆ.

    ಹ್ಯಾಕರ್‌ಗಳು (Hackers) 20 ಕೋಟಿಗೂ ಅಧಿಕ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸವನ್ನು ಕದ್ದು, ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

    ಈ ಬಗ್ಗೆ ಇಸ್ರೇಲ್‌ನ ಸೈಬರ್ ಭದ್ರತೆ ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್‌ನ ಸಹ ಸಂಸ್ಥಾಪಕ ಅಲೋನ್ ಗಾಲ್ ತಮ್ಮ ಲಿಂಕ್ಡ್ಇನ್‌ನಲ್ಲಿ ತಿಳಿಸಿದ್ದು, ದುರದೃಷ್ಟವಶಾತ್ ಇಂತಹ ದೊಡ್ಡ ಪ್ರಮಾಣದ ಹ್ಯಾಕಿಂಗ್‌ಗೆ ನಿಗದಿತ ಫಿಶಿಂಗ್ ಹಾಗೂ ಡಾಕ್ಸಿಂಗ್ ಕಾರಣವಾಗಿದೆ. ಇದು ನಾನು ನೋಡಿದ ಅತ್ಯಂತ ದೊಡ್ಡ ಸೋರಿಕೆಗಳಲ್ಲಿ ಒಂದಾಗಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    ಗಾಲ್ ಈ ಬಗ್ಗೆ ಮೊದಲ ಬಾರಿ ಕಳೆದ ವರ್ಷ ಡಿಸೆಂಬರ್ 24 ರಂದು ವರದಿಯನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಟ್ವಿಟ್ಟರ್ ಯಾವುದೇ ರೀತಿಯ ಪ್ರತಿಕ್ರಿಯೆನ್ನು ನೀಡಿರಲಿಲ್ಲ. ಟ್ವಿಟ್ಟರ್ ಇಲ್ಲಿಯವರೆಗೆ ಇ-ಮೇಲ್ ಸೋರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಕೂಡಾ ಇನ್ನೂ ಸ್ಪಷ್ಟವಾಗಿಲ್ಲ.

    ವರದಿಗಳ ಪ್ರಕಾರ, ಬುಧವಾರ ಟ್ವಿಟ್ಟರ್ ಬಳಕೆದಾರರ ಇ-ಮೇಲ್‌ಗಳು ಹ್ಯಾಕರ್ ಫೋರಂನ ಸ್ಕ್ರೀನ್ ಶಾಟ್‌ಗಳ ರೂಪದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಕೃತ್ಯದ ಹಿಂದಿನ ಹ್ಯಾಕರ್‌ಗಳ ಗುರುತು ಅಥವಾ ಸ್ಥಳದ ಬಗ್ಗೆ ಸುಳಿವು ಸಿಕ್ಕಿಲ್ಲ. ಇ-ಮೇಲ್ ಸೋರಿಕೆ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಿಂತಲೂ ಮೊದಲೇ ನಡೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದನ್ನೂ ಓದಿ: ಭಾರತದಲ್ಲಿ 5.9 – ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುಪಾರಿ ಹ್ಯಾಕರ್ ಆದ ಸಾಫ್ಟ್‌ವೇರ್‌ ಇಂಜಿನಿಯರ್ – ಮಹಿಳೆಯ ಮೊಬೈಲ್‍ನಿಂದ ನಗ್ನ ವೀಡಿಯೋ ಕಳುಹಿಸಿ ಜೈಲು ಪಾಲು

    ಸುಪಾರಿ ಹ್ಯಾಕರ್ ಆದ ಸಾಫ್ಟ್‌ವೇರ್‌ ಇಂಜಿನಿಯರ್ – ಮಹಿಳೆಯ ಮೊಬೈಲ್‍ನಿಂದ ನಗ್ನ ವೀಡಿಯೋ ಕಳುಹಿಸಿ ಜೈಲು ಪಾಲು

    ಕಾರವಾರ: ವಿವಾಹಿತ ಮಹಿಳೆಯ ಮೊಬೈಲ್ (Mobile) ಹ್ಯಾಕ್ ಮಾಡಿ ಫೋಟೋಗಳನ್ನು ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಹಣದ ಬೇಡಿಕೆ ಇಟ್ಟಿದ್ದ ಹೊನ್ನಾವರ ಮೂಲದ ಹ್ಯಾಕರ್‌ನನ್ನು (Hacker) ಹರಿಯಾಣ ಪೊಲೀಸರು (Police) ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

    ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಇಮ್ದಾದ್ ಮುಲ್ಲಾ ಪೊಲೀಸರು ವಶಕ್ಕೆ ಪಡೆದ ಆರೋಪಿ. ಹರಿಯಾಣ ಪೊಲೀಸರು ಹೊನ್ನಾವರಕ್ಕೆ ಬಂದು ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಇಮ್ದಾದ್ ಮುಲ್ಲಾನನ್ನು ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ 22 ವರ್ಷದ ಲೀನಾ ನಾಗವಂಶಿ ಆತ್ಮಹತ್ಯೆ?

    ವೈಯಕ್ತಿಕ ದ್ವೇಷದಿಂದ ಅಮೆರಿಕ (America) ಮೂಲದ ಮಹಿಳೆ ಹರಿಯಾಣದ ಗುರುಗ್ರಾಮ ಮೂಲದ ವಿವಾಹಿತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಸಂಚು ಹೂಡಿದ್ದಳು. ಅದಕ್ಕಾಗಿ ಹ್ಯಾಕರ್‌ಗಳನ್ನು ಹುಡುಕುತ್ತ, ಆ್ಯಪ್‍ವರ್ಕ್ ಡಾಟ್ ಕಾಮ್ ವೆಬ್‍ಸೈಟ್ ಮೂಲಕ ಇಮ್ದಾದ್ ಮುಲ್ಲಾನ ಸಂಪರ್ಕ ಮಾಡಿದ್ದಾಳೆ. ತಾನು ಸೂಚಿಸಿದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ, ಆಕೆಯ ನಂಬರ್‌ನಿಂದ ಬೇರೆಯವರಿಗೆ ಆಕೆಯ ನಗ್ನ ವೀಡಿಯೋ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಇಮ್ದಾಲ್ ಮುಲ್ಲಾನಿಗೆ ಸುಪಾರಿ ಕೊಟ್ಟಿದ್ದಳು. ಸುಪಾರಿ ಪಡೆದಿದ್ದ ಇಮ್ದಾದ್, ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ, ಆಕೆಯ ಫೋಟೋಗಳನ್ನು ಮೊಬೈಲ್‍ನಿಂದ ಪಡೆದುಕೊಂಡಿದ್ದ.

    ಆ ಬಳಿಕ ಆಕೆಯ ಫೋಟೋವನ್ನು ನಗ್ನವಾಗಿರುವಂತೆ ಎಡಿಟ್ ಮಾಡಿ, ನಕಲಿ ಅಶ್ಲೀಲ ವೀಡಿಯೋಗಳನ್ನೂ ತಯಾರಿಸಿ, ಆಕೆಯ ನಂಬರ್‌ನಿಂದಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ನಂಬರ್‌ಗಳಿಗೆ ಪ್ರತಿನಿತ್ಯ ಬೆಳಗ್ಗೆ, ರಾತ್ರಿ ಕಳುಹಿಸುತ್ತಿದ್ದ. ವಿಷಯ ತಿಳಿದ ಮಹಿಳೆ ತನ್ನದೇ ನಂಬರ್‌ನಿಂದ ವೀಡಿಯೋ, ಫೋಟೋಗಳು ಶೇರ್ ಆಗುತ್ತಿರುವುದರಿಂದ ಗಾಬರಿಗೊಂಡು, ಮಾನಸಿಕ ಹಿಂಸೆಗೆ ಗುರಿಯಾಗಿದ್ದಳು. ಅಲ್ಲದೆ ಆಕೆಯ ಸಾಂಸಾರಿಕ ಜೀವನದಲ್ಲೂ ಸಾಕಷ್ಟು ಒಡಕು ಮೂಡಿತ್ತು. ಇದರಿಂದ ಬೇಸತ್ತ ಮಹಿಳೆ ಗುರುಗ್ರಾಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹರಿಯಾಣ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿರುವಾಗ ಅಮೆರಿಕ ಮೂಲದ ಮಹಿಳೆಯ ಜೊತೆ ದೂರು ನೀಡಿದ ಮಹಿಳೆಗೆ ವೈಯಕ್ತಿಕ ದ್ವೇಷವಿರುವುದು ತಿಳಿದು ಬಂದಿದೆ. ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಚಂದಾವರ ಮೂಲದ ಹ್ಯಾಕರ್‌ನ ಕೈವಾಡ ಇರುವ ಬಗ್ಗೆ ತಿಳಿದುಬಂದಿದ್ದು, ಈತನನ್ನ ಹೊನ್ನಾವರದಿಂದ ವಶಕ್ಕೆ ಪಡೆದು ಹರಿಯಾಣಕ್ಕೆ ಕರೆದೊಯ್ದು ಅಲ್ಲಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

    ಐಷಾರಾಮಿ ಜೀವನದ ಆಸೆಗೆ ಬಿದ್ದು ಹ್ಯಾಕರ್ ಆದ:
    ಆರೋಪಿ ಇಮ್ದಾದ್ ಐಷಾರಾಮಿ ಜೀವನ ನಡೆಸುವ ಆಸೆಗೆ ಬಿದ್ದಿದ್ದ ಹೀಗಾಗಿ ಹ್ಯಾಕಿಂಗ್ ಫುಲ್ ಟೈಮ್ ಉದ್ಯೋಗ ಮಾಡಿಕೊಂಡಿದ್ದ. ಹಲವರ ಮೊಬೈಲ್ ಹ್ಯಾಕ್ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಬಂದ ಹಣದಿಂದ ಐಷಾರಾಮಿ ಕಾರು, ಬೈಕ್ ಕೊಂಡು ಎಂಜಾಯ್ ಮಾಡುತಿದ್ದ. ಈತನ ಐಷಾರಾಮಿ ಜೀವನಕ್ಕೆ ಇಡೀ ತಾಲೂಕಿನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ 2017ರಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮುಗಿಸಿದ ನಂತರ ಅಮೆರಿಕನ್ ಮೆಡಿಕಲ್ ಕೇರ್, ಜಸ್ಟ್ ಪೇ ಸೇರಿದಂತೆ ಹಲವು ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದ ಇಮ್ದಾದ್, ಯುಪಿಐ ಸಾಫ್ಟ್‌ವೇರ್‌ ಡೆವಲಪರ್ ಆಗಿ ಸಹ ಕೆಲಸ ಮಾಡಿದ್ದ. ನಂತರ ಮರಳಿ ಊರಿಗೆ ಬಂದು ಅ್ಯಪ್‍ವರ್ಕ್ ಡಾಟ್ ಕಾಮ್‍ನಲ್ಲಿ ಎಥಿಕಲ್ ಹ್ಯಾಕರ್ ಆಗಿ ಸೇರಿಕೊಂಡಿದ್ದ. ಈತನ ಬಳಿ ಐಷಾರಾಮಿ ಬಿಎಂಡಬ್ಲ್ಯೂ ಕಾರು, ಬಿಎಂಡಬ್ಲ್ಯೂ ಬೈಕ್‍ಗಳೂ ಇದ್ದು, ಶೋಕಿ ಜೀವನ ನಡೆಸುತ್ತಿದ್ದ. ಇದನ್ನೂ ಓದಿ: ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್‌ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ

    ಗಂಟೆಗೆ 50 ಸಾವಿರ!
    ಆರೋಪಿ ಇಮ್ದಾದ್, ಹ್ಯಾಕಿಂಗ್ ಕೆಲಸಕ್ಕಾಗಿ ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಎನ್ನಲಾಗಿದೆ. ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಲು ಸಹ ಅಮೆರಿಕ ಮೂಲದ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಎನ್ನುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಈತನ ಜಾಲ ದೊಡ್ಡದಾಗಿದ್ದು ಹೆಚ್ಚಿನ ತನಿಖೆ ನಂತರ ಮಾಹಿತಿ ಹೊರಬರಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ನವದೆಹಲಿ: ನಗರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (AIIMS) ಕಂಪ್ಯೂಟರ್ ಸಿಸ್ಟಮ್ ಮೇಲೆ ಇತ್ತೀಚೆಗೆ ಸೈಬರ್ ದಾಳಿ (Cyber Attack) ನಡೆದಿದ್ದು, ಈ ದಾಳಿಯ ಮೂಲ ಚೀನಾವಾಗಿದೆ (China) ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿದೆ.

    ವರದಿಗಳ ಪ್ರಕಾರ 100 ಸರ್ವರ್‌ಗಳಲ್ಲಿ (40 ಭೌತಿಕ ಹಾಗೂ 60 ವರ್ಚುವಲ್) 5 ಭೌತಿಕ ಸರ್ವರ್‌ಗಳನ್ನು ಹ್ಯಾಕ್ ಮಾಡುವಲ್ಲಿ ಅಪರಾಧಿಗಳು ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಲಾಗಿದೆ. ಇದೀಗ ಲಕ್ಷಗಟ್ಟಲೆ ರೋಗಿಗಳ ವಿವರಗಳು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.

    ನವೆಂಬರ್ 23 ರಂದು ಮೊದಲ ಬಾರಿ ಏಮ್ಸ್ ಆಸ್ಪತ್ರೆಯ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದು ಹ್ಯಾಕರ್‌ಗಳ (Hacker) ದಾಳಿಯಿಂದಾಗಿರುವುದಾಗಿ ಏಮ್ಸ್ ತಿಳಿಸಿತ್ತು. ಸುಮಾರು 3-4 ಕೋಟಿ ರೋಗಿಗಳ ವಿವರ ಸೋರಿಕೆಯಾಗಿರುವ ಭೀತಿ ಉಂಟಾಗಿದ್ದು, ಬಳಿಕ ಹ್ಯಾಕರ್‌ಗಳು ಏಮ್ಸ್ನಿಂದ ಸುಮಾರು 200 ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಜಿ7 ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರದಲ್ಲಿ ರಷ್ಯಾದಿಂದ ಭಾರತ ತೈಲ ಖರೀದಿ

    ಬಳಿಕ ಡಿಸೆಂಬರ್ 2 ರಂದು ಆಸ್ಪತ್ರೆಯ 5 ಮುಖ್ಯ ಸರ್ವರ್‌ಗಳು ಸೈಬರ್ ದಾಳಿಗೆ ಒಳಗಾಗಿತ್ತು. ಇದರಿಂದ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗಳಿಗೆ ಹಾನಿಯಾಗಿತ್ತು. ಈ ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್‌ಗಳು ನಡೆಸಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿದ್ದವು.

    ಡಿಸೆಂಬರ್ 4 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿಯೂ ಸೈಬರ್ ದಾಳಿಯಾಗಿರುವುದಾಗಿ ವರದಿಯಾಗಿದೆ. ಆದರೆ ಏಮ್ಸ್ನಲ್ಲಿ ನಡೆದಿರುವಷ್ಟು ದಾಳಿ ತೀವ್ರವಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    Live Tv
    [brid partner=56869869 player=32851 video=960834 autoplay=true]

  • 50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

    50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

    ನವದೆಹಲಿ: ಇಲ್ಲಿಯವರೆಗೆ ಕೇಳರಿಯದ ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ (Data Leak) ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ (WhatsApp) ಬಳಕೆದಾರರ ಡೇಟಾ ಸೋರಿಕೆಯಾಗಿದ್ದು, ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ ವರದಿ ತಿಳಿಸಿದೆ.

    ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ 84 ದೇಶಗಳ ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿ ಒಳಗೊಂಡಿದೆ. ಈಜಿಪ್ಟ್, ಇಟಲಿ, ಫ್ರಾನ್ಸ್, ಬ್ರಿಟನ್, ರಷ್ಯಾ ಹಾಗೂ ಭಾರತವೂ ಸೇರಿದಂತೆ ಲಕ್ಷಾಂತರ ಬಳಕೆದಾರರ ಸಂಖ್ಯೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ.

    ವರದಿಗಳ ಪ್ರಕಾರ, 84 ದೇಶಗಳ ಪೈಕಿ ಈಜಿಪ್ಟ್‌ನ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, 4.5 ಕೋಟಿ ಜನರ ಮಾಹಿತಿ ಇದರಲ್ಲಿ ಸೇರಿವೆ. ಇಟಲಿಯ 3.5 ಕೋಟಿ ಹಾಗೂ ಅಮೆರಿಕದ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದ 60 ಲಕ್ಷ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂಬುದನ್ನು ವರದಿ ತಿಳಿಸಿದೆ. ಇದನ್ನೂ ಓದಿ: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ- ಹೊಸ ಮೀಟರ್‌ನಲ್ಲಿ ದುಪ್ಪಟ್ಟು ಬಿಲ್

    ವಾಟ್ಸಪ್ ಬಳಕೆದಾರರ ಮಾಹಿತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಕ್ತಿ ವಿವಿಧ ದೇಶಗಳ ಬಳಕೆದಾರರ ಡೇಟಾಗಳ ಬೆಲೆಯನ್ನೂ ನಿಗದಿಪಡಿಸಿದ್ದಾನೆ. ಅಮೆರಿಕದ ಬಳಕೆದಾರರ ಡೇಟಾಗಾಗಿ 5.61 ಲಕ್ಷ ರೂ., ಬ್ರಿಟನ್ ಬಳಕೆದಾರರ ಡೇಟಾಗೆ 1.61 ಲಕ್ಷ ರೂ. ಹಾಗೂ ಜರ್ಮನಿಯ ಬಳಕೆದಾರರ ಡೇಟಾಗಳಿಗಾಗಿ 2.04 ಲಕ್ಷ ರೂ. ನಿಗದಿಪಡಿಸಿದ್ದಾನೆ. ಆದರೆ ಹ್ಯಾಕರ್ (Hacker) ಈ ಡೇಟಾಗಳನ್ನು ಹೇಗೆ ಪಡೆದಿದ್ದಾನೆ ಎಂಬ ಬಗ್ಗೆ ಮಾಹಿತಿಯಿಲ್ಲ.

    ಡೇಟಾ ಸೋರಿಕೆಯಿಂದಾಗಿ ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ಗಳಿಗೆ ಹೊಡೆತ ಬಿದ್ದಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ, ಭಾರತದ 60 ಲಕ್ಷ ದಾಖಲೆಗಳು ಸೇರಿದಂತೆ 50 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಸೋರಿಕೆಯಾದ ಡೇಟಾಗಳಲ್ಲಿ ಫೋನ್ ನಂಬರ್ ಮತ್ತು ಇತರ ವಿವರಗಳು ಒಳಗೊಂಡಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕಟ್

    Live Tv
    [brid partner=56869869 player=32851 video=960834 autoplay=true]

  • ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ನವದೆಹಲಿ: ಈ ತಿಂಗಳ ಆರಂಭದಲ್ಲಷ್ಟೇ ಕಾರ್ಯಾಚರಣೆ ಆರಂಭಿಸಿದ್ದ ದೇಶೀಯ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಡೇಟಾಗೆ ಹ್ಯಾಕರ್‌ಗಳು ಕನ್ನ ಹಾಕಿರುವುದಾಗಿ ವರದಿಯಾಗಿದೆ. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

    ಸಂಸ್ಥೆಯ ಲಾಗ್‌ಇನ್ ಹಾಗೂ ಸೈನ್ ಅಪ್ ಸೇವೆಗಳಿಗೆ ಸಂಬಂಧಿಸಿದ ದೋಷಗಳು ಉಂಟಾಗಿರುವುದು ತಿಳಿದುಬಂದಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ. ಇದರ ಪರಿಣಾಮವಾಗಿ ಪ್ರಯಾಣಿಕರ ಹೆಸರು, ಲಿಂಗ, ಇ-ಮೇಲ್ ವಿಳಾಸ ಹಾಗೂ ಫೋನ್ ನಂಬರ್‌ಗಳು ಸೋರಿಕೆಯಾಗಿವೆ. ಈ ವಿವರಗಳನ್ನು ಹೊರತುಪಡಿಸಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಥವಾ ಪಾವತಿಯ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕಂಪನಿ ಖಚಿತಪಡಿಸಿದೆ. ಇದನ್ನೂ ಓದಿ: ಗಾಡಿ ಕದಿಯಲು ಹ್ಯಾಂಡಲ್‍ಗೆ ಒದ್ದು ಲಾಕ್ ಮುರಿಯಲು ಪ್ರಯತ್ನ!

     

    ಡೇಟಾ ಸೋರಿಕೆ ಬಗ್ಗೆ ನಮಗೆ ತಿಳಿದು ಬಂದ ತಕ್ಷಣವೇ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನಧಿಕೃತ ಪ್ರವೇಶವನ್ನು ನಿಲ್ಲಿಸಿದ್ದೇವೆ. ಹೆಚ್ಚಿನ ಭದ್ರತೆಗಳನ್ನು ಸೇರಿಸಿ, ಈಗ ನಾವು ಲಾಗ್ ಇನ್ ಹಾಗೂ ಸೈನ್ ಅಪ್ ಸೇವೆಗಳನ್ನು ಪುನರಾರಂಭಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ

    ಸುಮಾರು ಒಂದು ದಶಕದ ಬಳಿಕ ಪ್ರಾರಂಭವಾದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಆಕಾಶ ಏರ್ ಆಗಸ್ಟ್ 7 ರಂದು ಉದ್ಘಾಟನೆಗೊಂಡು ಮುಂಬೈನಿಂದ ಅಹಮದಾಬಾದ್‌ಗೆ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತು. ಈ ತಿಂಗಳ ಆರಂಭದಲ್ಲಿ ನಿಧನರಾದ ಬಿಲಿಯನೇರ್ ಮತ್ತು ಷೇರು ಮಾರುಕಟ್ಟೆ ತಜ್ಞ ರಾಕೇಶ್ ಜುಂಜುನ್‌ವಾಲಾ ಅವರು ಆಕಾಶ ಏರ್‌ನಲ್ಲಿ ಗಣನೀಯ ಹೂಡಿಕೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಐಫೋನ್, ಮ್ಯಾಕ್‌ಗಳಿಗೆ ಹ್ಯಾಕರ್‌ಗಳ ಭೀತಿ! – ಆಪಲ್ ಎಚ್ಚರಿಕೆ

    ಐಫೋನ್, ಮ್ಯಾಕ್‌ಗಳಿಗೆ ಹ್ಯಾಕರ್‌ಗಳ ಭೀತಿ! – ಆಪಲ್ ಎಚ್ಚರಿಕೆ

    ವಾಷಿಂಗ್ಟನ್: ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳ ನಿಯಂತ್ರಣವನ್ನು ಹ್ಯಾಕರ್‌ಗಳು ವಶಪಡಿಸಿಕೊಳ್ಳಲು ಸಾಧ್ಯವಾಗುವಂತಹ ದೋಷದ ಬಗ್ಗೆ ಆಪಲ್ ಎಚ್ಚರಿಕೆ ನೀಡಿದೆ. ಹಾಗೂ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವಂತೆ ಬಳಕೆದಾರರಿಗೆ ಒತ್ತಾಯಿಸಿದೆ.

    ಆಪಲ್ ಡಿವೈಸ್‌ಗಳಲ್ಲಿ ದೋಷ ಕಂಡುಬಂದಿದ್ದು, ಅದನ್ನು ಲಾಭವಾಗಿ ಉಪಯೋಗಿಸಿಕೊಂಡು ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಕಂಪನಿ ತಿಳಿಸಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ಕೇಳಿಕೊಂಡಿದೆ. ಇದನ್ನೂ ಓದಿ: 2 ವಿಮಾನಗಳು ಪರಸ್ಪರ ಡಿಕ್ಕಿ – ಹಲವರು ಸಾವು

    ತಾಂತ್ರಿಕ ದೋಷಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಆಪಲ್ ಸಾಧನಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿದೆ ಎಂದಿದೆ. ಆದರೆ ಈಗಾಗಲೇ ಎಷ್ಟರ ಮಟ್ಟಿಗೆ ಆಪಲ್ ಡಿವೈಸ್‌ಗಳು ಹ್ಯಾಕರ್‌ಗಳ ವಶವಾಗಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳಿಗೆ ಈಗಾಗಲೇ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ. ಇದನ್ನೂ ಓದಿ: ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ 10 ಅಪ್ಲಿಕೇಶನ್‍ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ

    ನಿಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ 10 ಅಪ್ಲಿಕೇಶನ್‍ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ

    ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಕೆಲವು ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡುವ ಮೊದಲು ಬಹಳ ಜಾಗರೂಕರಾಗಿರುವುದು ಅಗತ್ಯ. ಕೆಲವು ಅಪ್ಲಿಕೇಶನ್‍ಗಳು ನಿಮ್ಮ ಫೋನ್‍ನ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತವೆ ಎಂಬ ವಿಷಯ ತಿಳಿದುಬಂದಿದೆ. 3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಬ್ಯಾಂಕಿಂಗ್ ಟ್ರೋಜನ್ ಮಾಲ್‍ವೇರ್ ಅನ್ನು ಡೌನ್‍ಲೋಡ್ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

    ಸಾಮಾನ್ಯವಾಗಿ ಡೌನ್‍ಲೋಡ್ ಮಾಡುವ ಅಪ್ಲಿಕೇಶನ್‍ಗಳು ನಾಲ್ಕು ಬಗೆಯ ಮಾಲ್‍ವೇರ್‌ಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲಿ ಒಂದು ಬ್ಯಾಂಕಿಂಗ್ ಸಂಬಂಧಿತ ವಿವರಗಳನ್ನು ಹ್ಯಾಕರ್‌  ಕಳುಹಿಸುವ ಮೂಲಕ ನಿಮ್ಮ ಹಣಕಾಸನ್ನು ಅಪಾಯಕ್ಕೆ ತಂದೊಡ್ಡುತ್ತವೆ.

    ಕ್ಯೂಆರ್ ಕೋಡ್ ರೀಡರ್, ಡಾಕ್ಯುಮೆಂಟ್ ಸ್ಕ್ಯಾನರ್, ಫಿಟ್‍ನೆಸ್ ಮಾನಿಟರ್ ಹಾಗೂ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಪ್ಲಾಟ್‍ಫಾರ್ಮ್‍ಗಳಂತಹ ಜನಪ್ರಿಯ ಅಪ್ಲಿಕೇಶನ್‍ ಹೆಸರಿನಲ್ಲಿ ಮಾಲ್‌ವೇರ್‌ಗಳನ್ನು ಬಿಡುತ್ತಾರೆ. ಹೀಗಾಗಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರದಲ್ಲಿರುವುದು ಒಳಿತು ಎಂದು  ಸಂಶೋಧಕರು ತಿಳಿಸಿದ್ದಾರೆ.

    10 ಅಪ್ಲಿಕೇಶನ್‌ಗಳು ಯಾವುದು?
    1. ಟು ಫ್ಯಾಕ್ಟರ್ ಅಥೆಂಟಿಕೇಟರ್
    2. ಪ್ರೊಟೆಕ್ಷನ್ ಗಾರ್ಡ್
    3. ಕ್ಯೂಆರ್ ಕ್ರಿಯೇಟರ್‍ಸ್ಕ್ಯಾನರ್
    4. ಮಾಸ್ಟರ್ ಸ್ಕ್ಯಾನರ್ ಲೈವ್
    5. ಕ್ಯೂಆರ್ ಸ್ಕ್ಯಾನರ್ 2021
    6. ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನರ್- ಸ್ಕ್ಯಾನ್ ಟು ಪಿಡಿಎಫ್
    7. ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನರ್
    8. ಕ್ಯೂಆರ್ ಸ್ಕ್ಯಾನರ್
    9. ಕ್ರಿಪ್ಟೋ ಟ್ರ್ಯಾಕರ್
    10. ಜಿಮ್ ಆಂಡ್ ಫಿಟ್ನೆಸ್ ಟ್ರೇನರ್

    ಹ್ಯಾಕರ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದಿಯಲು ನಾಲ್ಕು ರೀತಿಯ ಮಾಲ್‍ವೇರ್‌ಗಳನ್ನು ಡೆವಲಪ್‌ ಮಾಡುತ್ತಾರೆ. ಈ ಆಪ್‍ಗಳು ಫೋನ್‍ಗಳಲ್ಲಿ ಇನ್‌ಸ್ಟಾಲ್‌ ಆಗುವವರೆಗೆ ಮಾಲ್‍ವೇರ್‌ಗಳು ನಿಷ್ಕ್ರಿಯವಾಗಿ ಇರುತ್ತದೆ. ಆಪ್ ಇನ್‌ಸ್ಟಾಲ್‌ ಆದ ಬಳಿಕ ಆವುಗಳು ಸಕ್ರಿಯವಾಗುತ್ತದೆ. ಇದನ್ನೂ ಓದಿ: ಏರ್‌ಟೆಲ್‌ ಪ್ರಿಪೇಯ್ಡ್‌ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ

    ಅನ್ಸಾಟಾ ಎಂಬ ಮಾಲ್‍ವೇರ್ ಅತ್ಯಂತ ಸಾಮಾನ್ಯವಾಗಿದ್ದು, ಇದನ್ನು 2 ಲಕ್ಷ ಆಂಡ್ರಾಯ್ಡ್ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನು ಸುಧಾರಿತ ಬ್ಯಾಂಕಿಂಗ್ ಟ್ರೋಜನ್ ಎಂದು ಕರೆಯಲಾಗಿದೆ. ಏಲಿಯನ್, ಹೈಡ್ರಾ ಹಾಗೂ ಎರ್ಮಾಕ್ ಎಂಬ ಮೂರು ಮಾಲ್‍ವೇರ್‌ಗಳನ್ನು ಕಂಡು ಹಿಡಿಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಲೈಟ್, ಪೇಪಾಲ್‍ನಂತಹ ಜನಪ್ರಿಯ ಅಪ್ಲಿಕೇಶನ್‍ಗಳು ಸೇರಿದಂತೆ ಹಲವಾರು ಮಾಲ್‍ವೇರ್‍ಗಳಿಗೆ ತುತ್ತಾದ ಅಪ್ಲಿಕೇಶನ್‍ಗಳನ್ನು ಸಂಶೋಧಕರು ಪಟ್ಟಿ ಮಾಡಿದ್ದಾರೆ. ಗೂಗಲ್ ಈಗಾಗಲೇ ಮಾಲ್‍ವೇರ್‌ಗಳನ್ನು ಹೊಂದಿದ ಅಪ್ಲಿಕೇಶನ್‍ಗಳನ್ನು ತೆಗೆದುಹಾಕಿದೆ. ಇಂತಹ ಹಲವು ಅಪ್ಲಿಕೆಶನ್‍ಗಳನ್ನು ಗುರುತಿಸಿ ತೆಗೆದು ಹಾಕುವ ಕೆಲಸವನ್ನೂ ಮಾಡುತ್ತಿದೆ.

    ಮಾಲ್‍ವೇರ್ ಎಂದರೇನು?
    ಮಾಲ್‍ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್‌ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನಿನ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ.