Tag: ಹೌಸ್

  • ‘ಬಿಗ್ ಬಾಸ್’ ಮನೆಗೆ ಹೊಸ ರೂಪ: ಒಟಿಟಿ ಸೀಸನ್ 2ಗೆ ಸಿದ್ಧತೆ

    ‘ಬಿಗ್ ಬಾಸ್’ ಮನೆಗೆ ಹೊಸ ರೂಪ: ಒಟಿಟಿ ಸೀಸನ್ 2ಗೆ ಸಿದ್ಧತೆ

    ಳೆದ ವಾರವಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada) ಫಿನಾಲೆ ಮುಗಿಸಿಕೊಂಡಿದೆ. ಬಿಗ್ ಬಾಸ್ ಗೆದ್ದವರು ಮತ್ತು ಎಲಿಮಿನೇಟ್ ಆದವರು ಇನ್ನೂ ವಾಹಿನಿಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಅಷ್ಟರಲ್ಲಿ ಬಿಗ್ ಬಾಸ್ ಮನೆ (House) ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ರೆಡಿಯಾಗಿದೆ. ಅಂದರೆ, ಬಿಗ್ ಬಾಸ್ ಮನೆಗೆ ಹೊಸ ರೂಪ ಕೊಡುವಂತಹ ಕೆಲಸ ನಡೆಯುತ್ತಿದೆ.

    ಬಿಗ್ ಬಾಸ್ ಮನೆಗೆ ಹೊಸ ರೂಪ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ಉತ್ತರವಿದೆ. ಬಿಗ್ ಬಾಸ್ ಒಟಿಟಿ (OTT) ಸೀಸನ್ 2 ನಡೆಸಲು ವಾಹಿನಿಯು  ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಒಟಿಟಿ ಸೀಸನ್ ಮೊದಲು ಮಾಡಿ, ನಂತರ ಟಿವಿಗಾಗಿ ಬಿಗ್ ಬಾಸ್ ನಡೆಸಲಾಗಿತ್ತು. ಈ ಬಾರಿ ಉಲ್ಟಾ ಆಗಿದೆ.

    ಒಟಿಟಿ ಸೀಸನ್ ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಕಂಟೆಸ್ಟೆಂಟ್ ಯಾರೆಲ್ಲ ಇರಬೇಕು ಎನ್ನುವ ಲೆಕ್ಕಾಚಾರ ಕೂಡ ಹಾಕಲಾಗುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೆಸರುಗಳು ಹರಿದಾಡುತ್ತಿವೆ. ಕೆಲವರು ಕೆಲವರ ಹೆಸರನ್ನೂ ಸಜೆಸ್ಟ್ ಮಾಡುತ್ತಿದ್ದಾರೆ.

    ಸದ್ಯಕ್ಕೆ ಬಣ್ಣ ಬಳೆಯುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಅಧಿಕೃತವಾಗಿ ವಾಹಿನಿಯಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಜನರಂತೂ ಸಖತ್ ತಲೆ ಕೆಡಿಸಿಕೊಂಡು ಕೂತಿದ್ದಾರೆ.

  • ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

    ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

    ಇಂದಿನಿಂದ ಓಟಿಟಿಯಲ್ಲಿ ಶುರುವಾಗುತ್ತಿರುವ ಬಿಗ್ ಬಾಸ್ ಶೋಗೆ ಕ್ಷಣಗಣನೆ. ನಿನ್ನೆ ಇಡೀ ರಾತ್ರಿ ಮತ್ತು ಇವತ್ತು ಬೆಳಗ್ಗೆಯಿಂದ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಅನ್ನು ಸುದೀಪ್ ನಡೆಸಿಕೊಟ್ಟಿದ್ದಾರೆ. ಈಗಷ್ಟೇ ಅದರ ಚಿತ್ರೀಕರಣ ಮುಗಿಸಿಕೊಂಡು, ಓಟಿಟಿಯಲ್ಲಿ ತಮ್ಮ ನಿರೂಪಣೆ ಈ ಬಾರಿ ಹೇಗೆ ಬಂದಿದೆ ಎನ್ನುವುದನ್ನು ನೋಡಲು ಸ್ವತಃ ಕಿಚ್ಚ ಕಾಯುತ್ತಿದ್ದಾರೆ. ಈಗಾಗಲೇ ಕೆಲವು ತುಣುಕುಗಳನ್ನು ವೂಟ್ಸ್ ನಲ್ಲಿ ಹಾಕಲಾಗಿದ್ದು, ಈ ಬಾರಿ ಎಂದಿಗಿಂತಲೂ ಮನೆ ವಿಶೇಷವಾಗಿದೆ.

    ಈ ಮನೆಯ ಒಳಗೆ ಈಗಾಗಲೇ ಸುದೀಪ್ ಮತ್ತು ಗಾಯಕ ಕಂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೂಡ ಹೋಗಿದ್ದಾರೆ. ಇಬ್ಬರೂ ಒಟ್ಟಾಗಿ ಬಿಗ್ ಬಾಸ್ ಮನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.  ಕನ್ಫೆಷನ್ ರೂಮ್, ಗಾರ್ಡನ್ ಏರಿಯಾ, ಹಾಲ್, ಕಿಚನ್ ರೂಮ್ ಹೀಗೆ ಎಲ್ಲವನ್ನೂ ಸುತ್ತಾಡಿದ ಸುದೀಪ್, ಅವುಗಳ ಪರಿಚಯವನ್ನು ವಿಶೇಷವಾಗಿ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಗಾರ್ಡನ್ ಏರಿಯಾವನ್ನು ಪರಿಚಯ ಮಾಡಿಕೊಡುತ್ತಾ, ‘ವಿಶ್ವದಲ್ಲೇ ಅತೀ ಹೆಚ್ಚು ಗುದ್ದಾಟ ನಡೆಯುವುದು ಇದೇ ಜಾಗದಲ್ಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಅಡುಗೆ ಮನೆಯನ್ನು ‘ಅಡುಗೆ ಮನೆಯಲ್ಲಿಯೇ ಅತೀ ಹೆಚ್ಚು ಬೆಂಕಿ ಬೀಳುವುದು’ ಎಂದು ಹೇಳುವ ಮೂಲಕ ಈ ಹಿಂದಿನ ಜಗಳವನ್ನು ನೆನಪಿಸಿದರು ಸುದೀಪ್, ಇದಕ್ಕೆ ವಾಸುಕಿ ಧ್ವನಿ ಗೂಡಿಸಿ ‘ಈ ಅಡುಗೆ ಮನೆಯಲ್ಲೇ ಎಲ್ಲರೂ ಕಳ್ಳರಾಗಿ ಬಿಡ್ತಾರೆ’ ಎನ್ನುತ್ತಾ ಏನೆಲ್ಲ ಕದಿಯುತ್ತಾರೆ ಎನ್ನುವುದನ್ನು ವಿವರಿಸುತ್ತಾರೆ.

    ಇಡೀ ಮನೆ ಈ ಬಾರಿ ಕಲರ್ ಫುಲ್ ಆಗಿದೆ. ಕಳೆದ ಸೀಸನ್ ಗಿಂತಲೂ ಈ ಸಲ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ನಾನಾ ರೀತಿಯ ಬಣ್ಣಗಳಿಂದ ದೊಡ್ಮನೆ ಸಿಂಗಾರಗೊಂಡಿದೆ. ಕಂಟೆಸ್ಟೆಂಟ್ ಗಳು ಕೂರುವುದಕ್ಕಾಗಿ ಕೆಂಪು ಬಣ್ಣದ ಅರ್ಧ ವೃತ್ತಾಕಾರದ ಸೋಫಾ ಹಾಕಲಾಗಿದೆ. ಲೀವಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ದೊಡ್ಡ ಮುಖದಾಕೃತಿ ಇಡಲಾಗಿದೆ. ಇದನ್ನು ನೋಡಿದ ಸುದೀಪ್, ಥೇಟ್ ನನ್ನ ತರಹವೇ ಇದೆ ಎಂದು ಛೇಡಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]