Tag: ಹೋ ಡೆಲಿವರಿ

  • G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್

    G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್

    ನವದೆಹಲಿ: ಸೆಪ್ಟೆಂಬರ್ 8-10 ರಂದು ದೆಹಲಿಯಲ್ಲಿ (Delhi) ವಾಣಿಜ್ಯ ಸೇವೆಗಳನ್ನು ನಿಲ್ಲಿಸಿರುವುದರಿಂದ ಕ್ಲೌಡ್ ಕಿಚನ್‌ಗಳು, ಹೋಟೆಲ್‌ಗಳು ಬಂದ್ ಇರಲಿದ್ದು ಆನ್‌ಲೈನ್ ಫುಡ್ ಡೆಲಿವರಿ (Food Delivery) ಇರುವುದಿಲ್ಲ. ಇದರ ಜೊತೆಗೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಹೋಂ ಡೆಲಿವರಿ (Home Delivery) ಸರ್ವಿಸ್‌ಗಳನ್ನೂ ಅನುಮತಿಸಲಾಗುವುದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಗರದಲ್ಲಿ 3 ದಿನ ಲಾಕ್‌ಡೌನ್ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ಜಿ20 ಶೃಂಗಸಭೆಯ ಸಮಯದಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 7ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 10 ರ ಮಧ್ಯರಾತ್ರಿಯವರೆಗೆ ದೆಹಲಿಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

    ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10 ರವರೆಗೆ ಸಾರ್ವಜನಿಕ ರಜೆಯನ್ನು ಘೋಷಿಸಿದೆ. ನಗರದಲ್ಲಿನ ಅಂಗಡಿಗಳು, ವ್ಯಾಪಾರಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಸೆಪ್ಟೆಂಬರ್ 8, 9 ಮತ್ತು 10 ರಂದು ತಮ್ಮ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ನೀಡುವಂತೆ ಸರ್ಕಾರ ನಿರ್ದೇಶಿಸಿದೆ. ಇದನ್ನೂ ಓದಿ: ಜಿ20 ಸಭೆ – ಭದ್ರತೆಗಾಗಿ ದೆಹಲಿಯಲ್ಲಿ ಹಲವು ಮೆಟ್ರೋ ನಿಲ್ದಾಣಗಳು ಬಂದ್

    ಶೃಂಗಸಭೆಯ ಸಮಯದಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿರುತ್ತದೆ. ದೆಹಲಿಯು ವಿಶ್ವ ನಾಯಕರಿಗೆ ಆತಿಥ್ಯ ವಹಿಸಿರುವುದರಿಂದ ನಗರದಾದ್ಯಂತ ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯ ಹೋಂ ಡೆಲಿವರಿಗೆ ದೆಹಲಿಯಲ್ಲಿ ಅವಕಾಶ- ಷರತ್ತು ಅನ್ವಯ

    ಮದ್ಯ ಹೋಂ ಡೆಲಿವರಿಗೆ ದೆಹಲಿಯಲ್ಲಿ ಅವಕಾಶ- ಷರತ್ತು ಅನ್ವಯ

    ನವದೆಹಲಿ: ನಗರದಲ್ಲಿ ಕೋವಿಡ್-10 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಭಾರತೀಯ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

    ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಮಾಡಲಾಗುತ್ತಿತ್ತು.

    ಅದರಂತೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ ಎಲ್-14 ಪರವನಾಗಿ ಹೊಂದಿರುವವರಿಗೆ ಮಾತ್ರ ದೆಹಲಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಕಳೆದ ವರ್ಷ ಮೊದಲ ಬಾರಿ ಲಾಕ್‍ಡೌನ್ ಘೋಷಿಸಿದ ಬಳಿಕ ಅಂಗಡಿಗಳಲ್ಲಿ ಮದ್ಯಕೊಳ್ಳಲು ಜನ ಮುಗಿಬಿದ್ದಿದ್ದರು. ಈ ವೇಳೆ ಕೊರೊನಾ ಸೋಂಕಿನ ಹರಡುವಿಕೆ ಭೀತಿಯಿಂದ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಲಹೆ ನೀಡಿತ್ತು.

  • ಛತ್ತೀಸ್‍ಗಢದಲ್ಲಿ ಲಾಕ್‍ಡೌನ್ – ಮದ್ಯ ಹೋಂ ಡೆಲಿವರಿಗೆ ಅನುಮತಿ

    ಛತ್ತೀಸ್‍ಗಢದಲ್ಲಿ ಲಾಕ್‍ಡೌನ್ – ಮದ್ಯ ಹೋಂ ಡೆಲಿವರಿಗೆ ಅನುಮತಿ

    ರಾಯ್ಪುರ: ಕೋವಿಡ್ 19 ಲಾಕ್‍ಡೌನ್ ಸಮಯದಲ್ಲಿ ಆನ್‍ಲೈನಿನಲ್ಲಿ ಮದ್ಯ ಮಾರಾಟಕ್ಕೆ ಛತ್ತೀಸ್‍ಗಢ ಸರ್ಕಾರ ಅನುಮತಿ ನೀಡಿದೆ.

    ಲಾಕ್‍ಡೌನ್ ಸಮಯದಲ್ಲಿ ಮದ್ಯದ ಅಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ. ಈ ಕಾರಣಕ್ಕೆ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಆನ್‍ಲೈನಿನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

    ಕಳೆದ ವರ್ಷ ಸಹ ಆನ್‍ಲೈನ್ ಬುಕ್ಕಿಂಗ್ ಮತ್ತು ಹೋಮ್ ಡೆಲಿವರಿಗೆ ಸರ್ಕಾರ ಅವಕಾಶ ನೀಡಿತ್ತು. ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ.

    ಕಾಳಸಂತೆಯಲ್ಲಿ ಮದ್ಯ ಮಾರಾಟವನ್ನು ತಪ್ಪಿಸಲು ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

  • ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ!

    ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ!

    ಬೆಂಗಳೂರು: ಇನ್ನು ಮುಂದೆ ಎಣ್ಣೆ ಹೊಡೆಯೋದಕ್ಕೆ ಬಾರ್ ಗೆ ಹೋಗಬೇಕಿಲ್ಲ. ಯಾಕೆಂದರೆ ಮೊಬೈಲ್ ಆನ್ ಮಾಡಿ ಯಾವ ಎಣ್ಣೆ ಬೇಕು, ಎಷ್ಟು ಬೇಕು ಅಂತ ಬುಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಎಣ್ಣೆಯ ಪೆಟ್ಟಿಗೆ ಮನೆ ಬಾಗಿಲಲ್ಲಿ ಇರುತ್ತದೆ.

    ಆನ್‍ಲೈನ್‍ನಲ್ಲೇ ಫುಡ್ ಆರ್ಡರ್ ಮಾಡಿ ಹೋಂ ಡೆಲಿವರಿ ಮಾಡುವ ಸ್ವಿಗ್ಗಿ, ಜೋಮೋಟೋ ರೀತಿಯಲ್ಲೇ ಕರ್ನಾಟಕದಲ್ಲಿ ಆನ್‍ಲೈನ್‍ನಲ್ಲೇ ಎಣ್ಣೆ ಆರ್ಡರ್ ಮತ್ತು ಹೋಂ ಡೆಲಿವರಿ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

    `ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡಬೇಕು ಅನ್ನೋ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಇನ್ನಷ್ಟೇ ಚರ್ಚೆ ಮಾಡಬೇಕಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಆನ್‍ಲೈನ್ ಮದ್ಯ ಮಾರಾಟ ಅವಕಾಶ ಕೊಡಬೇಕು ಅನ್ನೋದಕ್ಕೆ ಕೊಡುತ್ತಿರುವ ಕಾರಣಗಳು ಹೀಗಿವೆ:
    ವರ್ಷದಿಂದ ವರ್ಷಕ್ಕೆ ಬೆಂಗಳೂರಲ್ಲಿ ಕುಡಿದು ವಾಹನ ಚಲಾಯಿಸುವ ಕೇಸ್‍ಗಳು ಹೆಚ್ಚಾಗುತ್ತಿವೆ. ಇದೇ ವರ್ಷದ ಸೆಪ್ಟೆಂಬರ್  ವರೆಗೆ ಬರೋಬ್ಬರಿ 33,234 ಕೇಸ್‍ಗಳು ದಾಖಲಾಗಿದ್ದು, ಅಪಘಾತದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಿಕ್ಕರ್ ಹೋಂ ಡೆಲಿವರಿ ಆದರೆ ಆಗ ಡ್ರಂಕ್ ಅಂಡ್ ಡ್ರೈವ್ ಕೇಸ್‍ಗೆ ಬ್ರೇಕ್ ಬೀಳುತ್ತದೆ. ಅಪಘಾತಗಳು ಕೂಡ ಕಡಿಮೆಯಾಗುತ್ತವೆ ಅನ್ನೋ ವಾದವಿದೆ.

    ಆನ್‍ಲೈನ್ ಮಾರಾಟದಿಂದ ಮದ್ಯ ಮಾರಾಟ ಹೆಚ್ಚಳವಾಗಿ ಸರ್ಕಾರದ ಬೊಕ್ಕಸಕ್ಕೆ 1500 ರಿಂದ 2,000 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆನೂ ಇದೆ. ಡಿಸ್ಕೌಂಟ್ ರೇಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್  ಗಳಿಂದ ಗ್ರಾಹಕರಿಗೂ ಕಡಿಮೆ ದುಡ್ಡಿಗೆ ಮದ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎರಡು ಸುತ್ತಿನ ಚರ್ಚೆಯನ್ನೂ ನಡೆಸಿದ್ದು, ಇನ್ನೊಂದು ಸುತ್ತಿನ ಸಮಾಲೋಚನೆ ಬಾಕಿ ಇದೆ. ಬಳಿಕ ಆ ಪ್ರಸ್ತಾಪನೆಯನ್ನು ಸಿಎಂ ಕುಮಾರಸ್ವಾಮಿ ಮುಂದೆ ಇಡಲಾಗುತ್ತದೆ. ಇದೇ ರೀತಿ ಲಿಕ್ಕರ್ ಹೋಂ ಡೆಲಿವರಿಗೆ ಮುಂದಾಗಿದ್ದ ಮಹಾರಾಷ್ಟ್ರ ಸರ್ಕಾರ ಕಡೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ನಮ್ಮ ರಾಜ್ಯದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv