Tag: ಹೋಳಿ ಆಚರಣೆ

  • ಹೋಳಿ ಆಚರಣೆ ಬಳಿಕ ಕೆರೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಶವವಾಗಿ ಪತ್ತೆ

    ಹೋಳಿ ಆಚರಣೆ ಬಳಿಕ ಕೆರೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಶವವಾಗಿ ಪತ್ತೆ

    ರಾಯಚೂರು: ಜಿಲ್ಲೆಯಲ್ಲಿ ಹೋಳಿ ಆಚರಣೆ ಬಳಿಕ ಸ್ನಾನಕ್ಕೆಂದು ಕೆರೆಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

    ರಾಯಚೂರು (Raichuru) ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಸ್ನಾನಕ್ಕೆಂದು ಹೊಂಡಕ್ಕೆ ಜಿಗಿದ ಓರ್ವ ವ್ಯಕ್ತಿ ನೀರು ಪಾಲಾಗಿದ್ದರು. ನಾಪತ್ತೆಯಾಗಿದ್ದವರನ್ನು ಜಾಗೀರವೆಂಕಟಾಪುರ ಗ್ರಾಮದ ಸೋಮನಗೌಡ (45) ಎಂದು ತಿಳಿಯಲಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್‌ ಆಪ್ತ ವಶಕ್ಕೆ

    ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೂ ರಾಯಚೂರು ತಾಲೂಕಿನ ಆರ್‌ಡಿಎಸ್ ಕಾಲುವೆಗೆ ಸ್ನಾನಕ್ಕೆಂದು ಹೋಗಿದ್ದ ಯರಗೇರಾ ಗ್ರಾಮದ ಮಹಾದೇವ (30) ನಾಪತ್ತೆಯಾಗಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿತ್ತು.

    ಶನಿವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ನಿಮ್ಮ ಉಗ್ರವಾದದ ದಾಖಲೆ ಪ್ರಪಂಚದ ಮುಂದಿದೆ: ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್‌ಗೆ ಭಾರತ ತಿರುಗೇಟು

     

  • ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

    ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

    ಜಾರ್ಖಂಡ್: ಹೋಳಿ ಆಚರಣೆ (Holy Celebration) ಯ ವೇಳೆ ನನ್ನ ಮೇಲೆ ಬಣ್ಣ ಎರಚಬೇಡಿ ಎಂದ ವೃದ್ಧೆಯನ್ನು ಯುವಕರ ಗುಂಪೊಂದು ಥಳಿಸಿ ಕೊಲೆಗೈದ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಮೃತಳನ್ನು ಮುಟ್ಟಿ ದೇವಿ ಎಂದು ಗುರುತಿಸಲಾಗಿದೆ. ಬಲಬದ್ಧಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 65 ವರ್ಷದ ವೃದ್ಧೆಯನ್ನು ಪಾನಮತ್ತ ಯುವಕರ ಗುಂಪು ಹತ್ಯೆ ಮಾಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಹೋಳಿ ಬಣ್ಣದಾಟದ ಸಮಯದಲ್ಲಿ ಕೆಲವೊಮ್ಮೆ ಬಲವಂತವಾಗಿ ಬಣ್ಣ ಎರಚಲಾಗುತ್ತದೆ. ಅಂತೆಯೇ ಇದನ್ನು ವೃದ್ಧೆಯೊಬ್ಬರು ವಿರೋಧಿಸಿದ್ದಾರೆ. ಈ ವೇಳೆ ಪಾನಮತ್ತ ಯುವಕರು ಆಕೆಗೆ ಥಳಿಸಿದ್ದಾರೆ. ಬಳಿಕ ಆಕೆ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಈ ಸಂಬಂಧ ಮೃತ ಮಹಿಳೆಯ ಪುತ್ರ ಮುರಾರಿ ಸಿಂಗ್, ಇದು ಯಾವುದೇ ದ್ವೇಷಕ್ಕಾಗಿ ನಡೆದ ಪ್ರಕರಣವಲ್ಲ, ನಾವು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದರು ಮತ್ತು ಜೋರಾಗಿ ಗಲಾಟೆ ಮಾಡುತ್ತಿದ್ದರು. ತಾಯಿ ಅವರ ಗೂಂಡಾಗಿರಿಯನ್ನು ವಿರೋಧಿಸಿದ್ದು, ಅವರು ಆಕೆಯ ಪ್ರಾಣ ಹೋಗುವವರೆಗೂ ಥಳಿಸಿದ್ದಾರೆ. ಇತ್ತ ತಾಯಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ ಪೊಲೀಸರು ಬರುವ ಮೊದಲೇ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದರು.