Tag: ಹೋಳಿಗೆ

  • ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಬೆಂಗಳೂರು: ಇಡ್ಲಿ (Idli) ಬಳಿಕ ಹೋಳಿಗೆ (Holige) ಪ್ರಿಯರಿಗೆ ಶಾಕ್ ಎದುರಾಗಿದೆ. ಇದೀಗ ಹೋಳಿಗೆಯೂ ನಿಮ್ಮ ಆರೋಗ್ಯಕ್ಕೆ ಕಂಟಕ ತರಬಹುದು. ಹೋಳಿಗೆ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ (Plastic) ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.

    ಪ್ಲಾಸ್ಟಿಕ್ ಕವರ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುವುದು ಕ್ಯಾನ್ಸರ್‌ಗೆ (Cancer) ಕಂಟಕವಾಗಬಹುದು. ಪ್ಲಾಸ್ಟಿಕ್ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಬಹುದು. ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಅಧಿಕಾರಿಗಳ ತಪಾಸಣೆಯಲ್ಲಿ ಈ ಶಾಕಿಂಗ್ ವಿಚಾರ ಬಯಲಾಗಿದೆ. ಇದನ್ನೂ ಓದಿ: ಕೆಆರ್‌ ನಗರ ರೇಪ್‌ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ – ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

    ಮೈಸೂರಿನ ಎರಡು ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ವೇಳೆ ಪ್ಲಾಸ್ಟಿಕ್ ಕವರ್ ಬಳಸಿ ಹೋಳಿಗೆ ತಯಾರು ಮಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?

  • ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ

    ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ

    ರಮಹಾಲಕ್ಷ್ಮಿ ಹಬ್ಬದ ಎಂದಾಕ್ಷಣ ನಮಗೆ ಅಡುಗೆಯಲ್ಲಿ ನೆನಪಾಗುವುದೇ ‘ಹೋಳಿಗೆ’. ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ ಹೋಳಿಗೆ ಆಗ್ರಸ್ಥಾನದಲ್ಲಿದೆ. ಅದರಲ್ಲಿಯೂ ಈ ವರಮಹಾಲಕ್ಷ್ಮಿ ಹಬ್ಬದಲ್ಲಿ ‘ಹೋಳಿಗೆ’ ವಿಶೇಷ ರೆಸಿಪಿಯಾಗಿರುತ್ತೆ. ಅದಕ್ಕೆ ಇಂದು ನೀವು ಸುಲಭವಾಗಿ ಮತ್ತು ಬೇಗ ಹೇಗೆ ‘ಹೋಳಿಗೆ’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಮೈದಾ – 1 ಕಪ್
    * ಕಡ್ಲೆ ಬೇಳೆ – 1 ಕಪ್
    * ಅರಿಶಿನ – 2 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್


    * ನೀರು – ಅರ್ಧ ಕಪ್
    * ಎಣ್ಣೆ – ಅರ್ಧ ಕಪ್
    * ಬೆಲ್ಲ – 1 ಕಪ್
    * ಏಲಕ್ಕಿ ಪುಡಿ / ಎಲಾಚಿ ಪು – 1 ಟೀಸ್ಪೂನ್
    * ಬೇಕಾಗಿರುವಷ್ಟು ತುಪ್ಪ

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ 1 ಕಪ್ ಮೈದಾ, 1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ತಯಾರಿಸಿ.
    * ಹಿಟ್ಟಿಗೆ ಹೆಚ್ಚು ಎಣ್ಣೆಯನ್ನು ಹಾಕಿ ಮೃದುವಾಗಿ ಕಲಸಿ. ಕನಿಷ್ಠ 3 ಗಂಟೆಗಳ ಕಾಲ ಮುಚ್ಚಿ ಇಡಿ.
    * ಪ್ರೆಶರ್ ಕುಕ್ಕರ್‍ನಲ್ಲಿ ಕಡ್ಲೆ ಬೇಳೆ, 1 ಕಪ್ ನೀರು ,1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ 2 ಸೀಟಿಗಳಿಗೆ ಬೇಯಿಸಿರಿ.
    * 10 ನಿಮಿಷಗಳ ಕಾಲ ಹಾಗೆ ಇಡಿ, ಇದರಿಂದ ನೀರನ್ನು ಹೊರಹಾಕಿ. ಅದಕ್ಕೆ 1 ಕಪ್ ಬೆಲ್ಲವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ತನಕ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.


    * ಹೆಚ್ಚುವರಿಯಾಗಿ 1 ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ, 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
    * ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಬೇಡಿ. ಇಲ್ಲಿಗೆ ನಿಮ್ಮ ಹೋಳಿಗೆ ಮಿಶ್ರಣ ರೆಡಿ.
    * ಹಿಟ್ಟಿನ ಮಿಶ್ರಣವನ್ನು ಸಣ್ಣ ಚೆಂಡಿನ ಗಾತ್ರ ಮಾಡಿ ಅದನ್ನು ಚಪ್ಪಟೆಯಾಕಾರದಲ್ಲಿ ತಟ್ಟಿ ನಂತರ ಹೋಳಿಗೆ ಮಿಶ್ರಣವನ್ನು ಮಧ್ಯದಲ್ಲಿ ಇಟ್ಟು ಜೋಳದ ರೊಟ್ಟಿಯಂತೆ ತಟ್ಟಿ.

    * ಇತ್ತ ಮೊದಲೇ ಗ್ಯಾಸ್ ಆನ್ ಮಾಡಿಟ್ಟುಕೊಂಡು ಹೋಳಿಗೆ ತಟ್ಟಿದ ತಕ್ಷಣ ತವಾದ ಮೇಲೆ ಹಾಕಿ ಬೇಯಿಸಿ. ಅದರ ಮೇಲೆ ತುಪ್ಪ ಹಾಕಿ.
    * ಎರಡು ಬದಿಯು ಚೆನ್ನಾಗಿ ಬೇಯಿಸಿ.

    – ಅಂತಿಮವಾಗಿ, ತುಪ್ಪ / ತೆಂಗಿನ ಹಾಲು / ಮಾವಿನ ರಸಾಯನದೊಂದಿಗೆ ಹೋಳಿಗೆ / ಒಬ್ಬಟ್ಟು ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ನಟಿ ರಮ್ಯಾಗೆ ‘ಕಾಯಿ ಹೋಳಿ’ಗೆ ಇಷ್ಟವಂತೆ, ನಿಮಗೆ ಏನಿಷ್ಟ ಅಂತ ಕೇಳಿದ್ದಾರೆ ಹೇಳಿ..

    ನಟಿ ರಮ್ಯಾಗೆ ‘ಕಾಯಿ ಹೋಳಿ’ಗೆ ಇಷ್ಟವಂತೆ, ನಿಮಗೆ ಏನಿಷ್ಟ ಅಂತ ಕೇಳಿದ್ದಾರೆ ಹೇಳಿ..

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸಿನಿಮಾ ರಿಲೀಸ್, ಹಾಡುಗಳಿಗೆ ಸ್ಪಂದನೆ, ಟ್ರೈಲರ್ ರಿಲೀಸ್ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳ ಕುರಿತು ಅವರು ಅಧಿಕೃತ ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳ ಜತೆ ವ್ಯವಹರಿಸುತ್ತಲೇ ಇದ್ದಾರೆ. ಈ ಬಾರಿ ಅವರು ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಯುಗಾದಿ ಅಂದಾಕ್ಷಣ ಹೋಳಿಗೆ ಇರಲೇಬೇಕು. ಅದರಲ್ಲೂ ನಾನಾ ಬಗೆಯ ಹೋಳಿಗೆಗಳನ್ನು ಮಾಡಲಾಗುತ್ತದೆ. ಹಾಗಾಗಿ ನಿಮಗೆ ಯಾವ ಹೋಳಿಗೆ ಇಷ್ಟ ಎಂದು ಕೇಳಿದ್ದಾರೆ. ಹಾಗಂತ ನೀವು ಇಷ್ಟ ಬಂದದ್ದನ್ನು ಹೇಳುವ ಹಾಗಿಲ್ಲ. ಅವರೇ ಆಪ್ಷನ್ ಕೂಡ ಕೊಟ್ಟಿದ್ದಾರೆ. ಅದರ ಪ್ರಕಾರ ನೀವು ಯಾವ ಹೋಳಿಗೆ ನಿಮಗೆ ಇಷ್ಟವೆಂದು ಹೇಳಬೇಕು. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    RAMYA

    ಅಷ್ಟಕ್ಕೂ ಅವರು ಕೊಟ್ಟಿರುವ ಆಪ್ಷನ್ ನಲ್ಲಿ ಎರಡು ಹೋಳಿಗೆಗಳು ಮಾತ್ರ ಇವೆ. ಒಂದು ಕಾಯಿ ಹೋಳಿಗೆ ಮತ್ತೊಂದು ಬೇಳೆ ಹೋಳಿಗೆ. ಇವೆರಡರಲ್ಲಿ ಮಾತ್ರ ನಿಮ್ಮ ಇಷ್ಟದ ಹೋಳಿಗೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತೊಂದು ಹೇಳುವುದಕ್ಕೂ ಅವರು ಅವಕಾಶವನ್ನು ಕೊಟ್ಟಿಲ್ಲ.

    ಆದರೆ, ತಮಗಿಷ್ಟವಾದ ಹೋಳಿಗೆಯನ್ನೂ ಅವರು ಹೇಳಿಕೊಂಡಿದ್ದು, ಕಾಯಿ ಹೋಳಿಗೆಯೇ ಅವರಿಗೆ ಫೆವರೆಟ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಮೊನ್ನೆಯಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಹಿಗ್ಗಾಮುಗ್ಗಾ ಹೊಗಳಿದ್ದ ರಮ್ಯಾ, ಡಿಂಪಲ್ ರಚಿತಾ ಅವರನ್ನು ಬಾಯ್ತುಂಬಾ ಹೊಗಳಿದ್ದರು. ರಚಿತಾ ರಾಮ್ ಕೂಡ ರಮ್ಯಾ ಅವರ ಬಗ್ಗೆ ಗೌರವದ ಮಾತುಗಳನ್ನು ಆಡಿದ್ದರು. ಮತ್ತೆ ಸಿನಿಮಾ ರಂಗಕ್ಕೆ ಬರುವಂತೆ ಕರೆ ನೀಡಿದ್ದರು. ರಮ್ಯಾ ಬಹುಶಃ ಸಿನಿಮಾ ರಂಗಕ್ಕೆ ಮತ್ತೆ ಬರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಸಿನಿಮಾ ಸಂಬಂಧಿ ಸಾಕಷ್ಟು ಚಟುವಟಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.