Tag: ಹೋರಾಟಗಾರ್ತಿ

  • ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ತಿರುವನಂತಪುರಂ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ. ಇದೀಗ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಹೋರಾಟಗಾರ್ತಿ ಬಿಂದು ಅಮ್ಮಿಣಿ ತಮ್ಮ ಮುಖವನ್ನು ಮುಚ್ಚಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಿದ್ದಾರೆ. ಹಲ್ಲೆಯಿಂದ ಅಮ್ಮಿಣಿಗೆ ಗಾಯವಾಗುತ್ತಿದ್ದಂತೆ ವ್ಯಕ್ತಿ ಕಾಂಪೌಂಡ್ ಹಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಅಮ್ಮಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಐವರು ಮಹಿಳೆಯರು ಇಂದು ಶಬರಿಮಲೆಗೆ ಪ್ರವೇಶ ಮಾಡಲು ನಿರ್ಧರಿಸಿದ್ದರು.

    ಇಂದು ಬೆಳಗ್ಗೆ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರು, “ಇಂದು ಸಂವಿಧಾನದ ದಿನವಾಗಿದ್ದು, ಇಂದೇ ನಾವು ಶಬರಿಮಲೆ ಪ್ರವೇಶಿಸುತ್ತೇವೆ. ನಾವು ದೇವಾಲಯ ಪ್ರವೇಶಿಸುವುದನ್ನು ರಾಜ್ಯ ಸರ್ಕಾರದಿಂದ ಅಥವಾ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಸಿಕ್ಕರೂ ಸಿಗದಿದ್ದರೂ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ನಾನು ಕೇರಳವನ್ನು ಬಿಟ್ಟು ಹೋಗುತ್ತೇನೆ” ಎಂದು ಪ್ರತಿಕ್ರಿಯಿಸಿದರು.

    ನನ್ನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸುವವರು ನನ್ನ ಕಾರಿನ ನಂಬರ್ ಗಮನಿಸಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ಕಳೆದ ವರ್ಷ ಕೂಡ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಗ ಹೋರಾಟಗಾರರು ಅವರನ್ನು ತಡೆದಿದ್ದರು.

  • ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    ತನ್ನ ಅವಳಿ ಮಕ್ಕಳನ್ನ ಎತ್ತಿ ಮುದ್ದಾಡಿದ ಇರೋಮ್ ಶರ್ಮಿಳಾ

    – ಮಕ್ಕಳಿಗೆ ನಿಕ್ಸ್ ಶಖಿ, ಆಟುಮನ್ ಎಂದು ನಾಮಕರಣ

    ಬೆಂಗಳೂರು: ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಅವರು ತಮ್ಮ ಅವಳಿ ಮಕ್ಕಳ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

    ಇರೋಮ್ ಶರ್ಮಿಳಾ ಅವರು ಅವಳಿ ಹೆಣ್ಣು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಆ ಮಕ್ಕಳಿಗೆ ನಿಕ್ಸ್ ಶಖಿ ಮತ್ತು ಆಟುಮನ್ ಎಂದು ನಾಮಕರಣ ಮಾಡಿದ್ದಾರೆ. ನಿಕ್ಸ್ ಶಖಿ 2.16 ಕೆಜಿ ಹಾಗೂ ಆಟುಮನ್ 2.14 ಕೆಜಿ ತೂಕವಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.

    ಮಣಿಪುರದ ಇರೋಮ್ ಶರ್ಮಿಳಾ ಅವರು ಗರ್ಭಿಣಿಯಾದಾಗಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ವಿಶ್ವ ಅಮ್ಮಂದಿರ ದಿನವೇ (ಮೇ 12) ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪಾದ ವೀಣೆಕರ್ ಮತ್ತು ತಂಡದಿಂದ ಹೆರಿಗೆ ಮಾಡಿಸಿದ್ದರು.

    ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

    ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿ 15 ವರ್ಷಗಳ ಕಾಲ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

    2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ವಿಧಾನಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.

  • ವಿಶ್ವ ಅಮ್ಮಂದಿರ ದಿನವೇ ತಾಯಿಯಾದ್ರು ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ

    ವಿಶ್ವ ಅಮ್ಮಂದಿರ ದಿನವೇ ತಾಯಿಯಾದ್ರು ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾ

    ಬೆಂಗಳೂರು: ವಿಶ್ವ ಅಮ್ಮಂದಿರ ದಿನವೇ ಉಕ್ಕಿನ ಮಹಿಳೆ ಖ್ಯಾತಿಯ ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ತಾಯಿಯಾಗಿದ್ದಾರೆ.

    ನಗರದ ಮಲ್ಲೇಶ್ವರಂನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಇರೋಮ್ ಶರ್ಮಿಳಾ ಅವರು ಇಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

    ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.

    2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.