Tag: ಹೋರಾಟಗಾರರು

  • ಕನ್ನಡ ಬರಲ್ಲ ಎಂದು ನಾನು ಹೇಳಿಲ್ಲ ಅಂದರಂತೆ ರಶ್ಮಿಕಾ

    ಕನ್ನಡ ಬರಲ್ಲ ಎಂದು ನಾನು ಹೇಳಿಲ್ಲ ಅಂದರಂತೆ ರಶ್ಮಿಕಾ

    ಬೆಂಗಳೂರು: ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ ಎಂದು ಕೆಲ ಕನ್ನಡ ಪರ ಹೋರಾಟಗಾರರು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದರು. ಆದರೆ ಇದರ ಬಗ್ಗೆ ಕ್ರಮ ಕೈಗೊಳ್ಳದ ಫಿಲ್ಮ್ ಚೇಂಬರ್ ಅನ್ನು ಮತ್ತೆ ಹೋರಾಟಗಾರರು ಪ್ರಶ್ನಿಸಿದ್ದಾರೆ.

    ಈ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್, ರಶ್ಮಿಕಾ ಜೊತೆ ನಾವು ಮಾತನಾಡಿದ್ದೇವೆ. ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದ್ದಾರೆ. “ನನಗೆ ಕನ್ನಡ ಮಾತಾಡಲು ಬರಲ್ಲ ಎಂದು ಹೇಳಿಲ್ಲ. ಬದಲಾಗಿ ಎಲ್ಲಾ ಭಾಷೆಯನ್ನು ಮಾತನಾಡುವಾಗ ಬಾಯಿ ತೊದಲುತ್ತೆ ಎನ್ನುವ ಅರ್ಥದಲ್ಲಿ ಹೇಳಿದ್ದೇನೆ” ಎಂದು ಅವರು ಹೇಳಿದರು ಎಂದು ಜೈರಾಜ್ ತಿಳಿಸಿದ್ದಾರೆ.

    ನಡೆದಿದ್ದೇನು?
    ಕೆಲ ದಿನಗಳ ಹಿಂದೆ ತಮಿಳ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದು ತೆಲುಗು ತಮಿಳಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಎಂದು ಹೇಳಿದ್ದರು. ಕನ್ನಡ ನಾಡಿನಲ್ಲಿ ಬೆಳೆದು ಕನ್ನಡ ಬರುವುದಿಲ್ಲ ಎಂದು ಹೇಳಿ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದೆಂದು ಫಿಲ್ಮ್ ಚೇಂಬರ್‍ಗೆ ಕೆಲ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದರು.

  • ಅಯ್ಯಪ್ಪ ಹೆಣ್ಣುಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಯಾನ: ಮಹಿಳಾ ಹೋರಾಟಗಾರ್ತಿ

    ಅಯ್ಯಪ್ಪ ಹೆಣ್ಣುಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಯಾನ: ಮಹಿಳಾ ಹೋರಾಟಗಾರ್ತಿ

    ಧಾರವಾಡ: ಅಯ್ಯಪ್ಪ ಹೆಣ್ಣಮಕ್ಕಳಿಗೆ ಹುಟ್ಟಿಲ್ಲ, ಅವನು ಗಂಡಸರಿಗೆ ಹುಟ್ಟಿದ್ದಾನೆ. ಅದಕ್ಕಾಗಿ ಹೆಣ್ಣನ್ನು ಅಯ್ಯಪ್ಪ ದೇವಾಸ್ಥಾನಕ್ಕೆ ಪ್ರವೇಶಿಸಲು ಬಿಡೋದಿಲ್ಲವೇನು ಎಂದು ಮಹಿಳಾ ಹೋರಾಟಗಾರ್ತಿಯೊಬ್ಬರು ಪ್ರಶ್ನಿಸಿ ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಕಲಬುರಗಿ ಮೂಲದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಅಯ್ಯಪ್ಪ ಸ್ವಾಮಿ ದೇವರು ಹೆಣ್ಣಿಗೆ ಹುಟ್ಟಿಲ್ಲ, ಗಂಡಸರಿಗೆ ಹುಟ್ಟಿದ್ದು. ಅದಕ್ಕೆ ನಮ್ಮನ್ನು ಅಯ್ಯಪ್ಪ ದೇವಸ್ಥಾನಕ್ಕೆ ಬಿಡೊಲ್ಲವೇನು? ಎಲ್ಲರಿಗೂ ಜನ್ಮ ನೀಡೋದು ತಾಯಿ. ಗಂಡಸರಿಗೆ ಮಗು ಹುಟ್ಟೊದಕ್ಕೆ ಸಾಧ್ಯವೇನು? ತೃತೀಯ ಲಿಂಗಿಗಳು, ಕಿನ್ನರಿಯರಿಗೆ ಕೇಳಿ ನೋಡಿ, ಅವರು ನೀವೇಷ್ಟು ಬೇಕೂಫ್ ಅಂತ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.

    ನಾವು ಮಹಿಳೆಯರು ಒಂದಾಗಿದ್ದರೆ ನಿಮ್ಮ ವಿರುದ್ಧ ಕುಸ್ತಿ ಮಾಡಲು ನಿಂತಿಲ್ಲ. ನಿಮಗೆ ಬಡೆದು ಬುದ್ಧಿಹೇಳಲು ನಿಂತಿದ್ದೇವೆ. ನಾವು ನಿಮ್ಮ ಮನೆ ಒಳಗಿರುವ ದೇವರ ಕೋಣೆಗೆ ಬರ್ತೀವಿ ಅಂತ ಹೇಳಿಲ್ಲ. ಮಠದೊಳಗೆ ಬರ್ತೀವಿ ಅಂತ ಹೇಳಿಲ್ಲ. ಯಾವುದು ಸಾರ್ವಜನಿಕ ದೇವಸ್ಥಾನ ಇದೆ ಅಲ್ಲಿ ಬರ್ತೀವಿ ಅಂತ ಹೇಳಿದ್ದೇವೆ. ನಮ್ಮ ರೊಕ್ಕ ಮೈಲಿಗೆ ಆಗೋದಿಲ್ಲ. ಮಕ್ಕಳೇ ನಮಗೆ ಮೈಲಿಗೆ ಆಗುತ್ತಾ ಎಂದು ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಂತ ಹೋರಾಡುವ ಪುರುಷರಿಗೆ ಪ್ರಶ್ನಿಸಿದ್ದಾರೆ.

    ಮಹಿಳಾ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಮೀನಾಕ್ಷಿ ಬಾಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಮುಧೋಳದಲ್ಲಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ

    ಬಾಗಲಕೋಟೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಯಿತು.

    ಮುಧೋಳ ನಗರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕ ಧ್ವಜವನ್ನು ಬಿಟ್ಟು ಹೊಸ ಧ್ವಜವನ್ನು ರಚಿಸಿ ಧ್ವಜಾರೋಹಣ ನಡೆಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.

    ಸೆಪ್ಟೆಂಬರ್ 23 2018 ರಂದು ಬಾಗಲಕೋಟೆ ನಗರದಲ್ಲಿ ಹೋರಾಟ ಸಮಿತಿ ಸದಸ್ಯರು ಪಂಚನಿರ್ಣಯ ಕೈಗೊಂಡಿದ್ದರು. ಆಗ ಜನವರಿ 1ರಂದು ಪ್ರತ್ಯೇಕ ಧ್ವಜಾರೋಹಣದ ಮಾಡಬೇಕು ಎಂದು ಹೋರಾಟಗಾರರು ನಿರ್ಧರಿಸಿದ್ದರು. ಇಂದು ಧ್ವಜಾರೋಹಣ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಪ್ರತ್ಯೇಕ ಧ್ವಜವು 4 ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ಉತ್ತರ ಕರ್ನಾಟಕದ ನಕ್ಷೆಯನ್ನು ಒಳಗೊಂಡಿದೆ. ಕೇಸರಿ, ಹಳದಿ, ಹಸಿರು ಬಣ್ಣದ ಮಧ್ಯೆ ನೀಲಿ ವರ್ಣದ ಉತ್ತರ ಕರ್ನಾಟಕ ನಕ್ಷೆಯ ಧ್ವಜವನ್ನು ಅನಾವರಣ ಮಾಡಲಾಗಿದೆ. ಈ ಪ್ರತ್ಯೇಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿದಂತೆ ಇತರೇ ಹೋರಾಟಗಾರರು ಭಾಗಿಯಾಗಿದ್ದರು.

    ಒಟ್ಟು ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಒಳಗೊಂಡ ನಕ್ಷೆಯನ್ನು ಧ್ವಜದ ಮಧ್ಯೆ ರೂಪಿಸಲಾಗಿದೆ. ಹಾಗೆಯೇ ಕೇಸರಿ ಬಣ್ಣ ಧೈರ್ಯ, ಶೌರ್ಯದ ಸಂಕೇತವಾದರೆ, ಹಳದಿ ಹೊಸತನದ ಸಂಕೇತ, ಹಸಿರು ಸಮೃದ್ಧಿಯ ಸಂಕೇತ ಹಾಗೂ ನೀಲಿ ವಿಶಾಲತೆಯ ಸಂಕೇತ ಎಂದು ಹೊಸ ಧ್ವಜದಲ್ಲಿ ಬಳಸಿರುವ ಬಣ್ಣಗಳ ಕುರಿತು ಹೋರಾಟಗಾರರು ತಿಳಿಸಿದರು.

    ಈ ವೇಳೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಭಾಷಣ ಮಾಡಿ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಹೀಗೆ ನೂತನ ಧ್ವಜವನ್ನು ಸೃಷ್ಟಿಸಿ ಧ್ವಜಾರೋಹಣ ಮಾಡಿದ್ದೇವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ. ಆಗ ಇಲ್ಲಿನ ಮನೆ ಮನೆಯಲ್ಲೂ ಈ ಧ್ವಜವನ್ನು ಹಾರಿಸೋಣ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv