Tag: ಹೋಮ್ ಡೆಲಿವರಿ

  • ಮನೆ ಬಾಗಿಲಿಗೆ ಕೋಲ್ಡ್ ಬಿಯರ್ ತಂದ ಮದ್ಯದ ಕಂಪನಿ ನಿರ್ದೇಶಕ

    ಮನೆ ಬಾಗಿಲಿಗೆ ಕೋಲ್ಡ್ ಬಿಯರ್ ತಂದ ಮದ್ಯದ ಕಂಪನಿ ನಿರ್ದೇಶಕ

    – ಚಿಲ್ಡ್ ಬಿಯರ್ ನೀಡಿ ಎಣ್ಣೆ ಪ್ರಿಯರ ದಾಹ ತಣಿಸಿದ
    – ಮದ್ಯ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲ

    ಲಂಡನ್: ಬ್ರಿಟನ್‍ನಲ್ಲಿ ಪಬ್‍ಗಳು ಬಂದ್ ಆಗಿವೆ. ಆದರೆ ಪೂರ್ವ ಲಂಡನ್‍ನ ವ್ಯಕ್ತಿಯೊಬ್ಬ ಬಿಯರ್ ಮಾರಲು ಉಪಾಯ ಹುಡುಕಿದ್ದು, ಕೆಗ್ಸ್ ಗಳನ್ನು ವ್ಯಾನ್‍ನಲ್ಲಿ ಪ್ಯಾಕ್ ಮಾಡಿಕೊಂಡು ಮನೆ ಮನೆಗೆ ಹಂಚುತ್ತಿದ್ದಾನೆ.

    ವ್ಯಾನ್ ಮೇಲೆ ‘ಟ್ಯಾಕ್ಟಿಕಲ್ ಬಿಯರ್ ರಿಸ್ಪಾನ್ಸ್ ಯುನಿಟ್’ ಎಂದು ಬರೆದುಕೊಂಡು ಫಾರೆಸ್ಟ್ ರೋಡ್ ಬ್ರೇವಿಂಗ್ ಕಂಪನಿಯ ನಿರ್ದೇಶಕ ಪೀಟರ್ ಬ್ರಾವ್ನ್ ಸ್ವತಃ ಬಿಯರ್ ಡೆಲಿವರಿ ಮಾಡಿ ಗ್ರಾಹಕರ ಎಣ್ಣೆ ದಾಹ ತಣಿಸುತ್ತಿದ್ದಾರೆ. ಬಾಕ್ಸ್, ಕ್ಯಾನ್ ಹಾಗೂ ಬಾಟಲಿಗಳ ಬದಲಿಗೆ ಬ್ರಾವ್ನ್ ಅವರು ವ್ಯಾನ್‍ನ ಟ್ಯಾಂಕ್‍ನಲ್ಲಿ ಬಿಯರ್ ತುಂಬಿಕೊಂಡು ನಲ್ಲಿ ಮೂಲಕ ಪಿಂಟ್ ಗ್ಲಾಸ್‍ಗಳಿಗೆ ತುಂಬಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುತ್ತಿದ್ದಾರೆ.

    ಶುಕ್ರವಾರ ಹಾಗೂ ಶನಿವಾರ ಮಾರಾಟ ಮಾಡುವಷ್ಟು ಬಿಯರ್‍ಗೆ ಇದು ಹೊಂದುವುದಿಲ್ಲ. ಆದರೆ ಆರು ವಾರಗಳ ನಂತರ ಮೊದಲ ಬಾರಿಗೆ ಗಾಜಿನ ಗ್ಲಾಸ್‍ನಲ್ಲಿ ತಣ್ಣನೆ ಬಿಯರ್ ನೋಡಿದಾಗ ಗ್ರಾಹಕರ ಮೊಗದಲ್ಲಿ ಅಘಾದ ಸಂತೋಷ ಕಾಣುತ್ತಿದೆ. ಹೀಗಾಗಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುವ ಮೂಲಕ ಸಂತೋಷ ಪಡಿಸುತ್ತಿದ್ದೇನೆ. ಅವರ ಮೊಗದಲ್ಲಿ ಹಿಂದೆಂದೂ ಕಾಣದ ಸಂತಸ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

    ಕೊರೊನಾ ಮಹಾಮಾರಿಯಿಂದಾಗಿ ಬ್ರಿಟನ್‍ನಲ್ಲಿ ಕಳೆದ ಎರಡು ತಿಂಗಳಿಂದ ಪಬ್ ಹಾಗೂ ಬಾರ್‍ಗಳು ಬಂದ್ ಆಗಿವೆ. ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದ್ದು, ಈ ಹಿನ್ನೆಲೆ ಪಬ್, ಬಾರ್ ಗಳು ಮುಚ್ಚಿವೆ. ಹೀಗಾಗಿ ಎಣ್ಣೆ ಪ್ರಿಯರು ಪರದಾಡುವಂತಾಗಿದೆ. ಆಹಾರ ಹಾಗೂ ಎಣ್ಣೆ ಮಾರಾಟಗಾರರು ಹೋಮ್ ಡೆಲಿವರಿ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಎಣ್ಣೆ ಪ್ರಿಯರನ್ನು ತಣಿಸುತ್ತಿದ್ದಾರೆ. ಆದರೆ ಪೀಟರ್ ಬ್ರಾವ್ನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿಲ್ಡ್ ಬಿಯರ್ ಡೆಲಿವರಿ ಮಾಡುತ್ತಿದ್ದಾರೆ. ಇದನ್ನು ಕಂಡ ಮದ್ಯ ಪ್ರಿಯರು ಮುಖ ಅರಳಿಸಿಕೊಂಡು ಕುಡಿದು ಸಂತಸ ಪಡುತ್ತಿದ್ದಾರೆ.

  • ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ಮುಂಬೈ: ಮದ್ಯಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೇ ತಲುಪಿಸಲು ಹೊಸ ನೀತಿ ತರಲು ಮುಂದಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಕರ್ ಬಾವಾಂಕುಲೆ, ಮದ್ಯ ಮಾರಾಟಗಾರರಿಗೆ ಇದು ಶಾಕ್ ಕೊಡುವ ಸಂಗತಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೆ ತಲುಪಿಸುವ ಹೊಸ ನೀತಿಯನ್ನ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ವಾಹನ ಚಾಲನೆಯಿಂದ ಆಗುವ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಇದನ್ನ ತಡೆಯಲು ಸರ್ಕಾರವು ಸಾರ್ವಜನಿಕರು ಆನ್‍ಲೈನ್ ನಲ್ಲಿ ಹೇಗೆ ಹಣ್ಣು-ತರಕಾರಿಗಳನ್ನ ಖರೀದಿ ಮಾಡುತ್ತಾರೋ ಅದೇ ರೀತಿಯಾಗಿ ಇ- ಪೋರ್ಟಲ್ ಮೂಲಕ ಈ ಸೇವೆಯನ್ನ ಪಡೆಯಬಹುದು ಎಂದು ಬಾವಾಂಕುಲೆ ಹೇಳಿದ್ದಾರೆ. ಇದನ್ನು ಓದಿ:  ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಆನ್‍ಲೈನ್ ನಲ್ಲಿ ಖರೀದಿ ಮಾಡುವ ವ್ಯಕ್ತಿಯ ವಯಸ್ಸನ್ನು ತಿಳಿದುಕೊಳ್ಳಲು, ಗ್ರಾಹಕರ ಆಧಾರ್ ನಂಬರ್ ಅನ್ನು ಪಡೆದುಕೊಳ್ಳಲಾಗುವುದು. ಅಕ್ರಮ ಮದ್ಯ ಸಾಗಾಣಿಕೆಯನ್ನ ತಡೆಯಲು ಸರ್ಕಾರವೂ ಎಲ್ಲಾ ಮದ್ಯ ಬಾಟಲಿಗಳ ಮೇಲೆ ಟ್ಯಾಗ್ ಗಳನ್ನ ಅಳವಡಿಸಲಾಗುತ್ತದೆ. ಈ ಟ್ಯಾಗ್‍ನ ಸಹಾಯದಿಂದ ಉತ್ಪದನೆಯ ದಿನಾಂಕ, ಸ್ಥಳ ಮತ್ತು ಮಾರಾಟದ ಮಾಹಿತಿಯನ್ನ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ: ಕುಡುಕರ ಜೇಬಿಗೆ ಕತ್ತರಿ- ಸಿಎಲ್ ಬಾರ್ ಗಳಲ್ಲಿ ದುಪ್ಪಟ್ಟು ಹಣ ವಸೂಲಿ

    ಸರ್ಕಾರದ ಈ ನಡೆಯನ್ನ ಮೆಚ್ಚಿದ ಹೈಕೋರ್ಟ್ ವಕೀಲರಾದ ಶ್ರೀರಾರ್, “ಸರ್ಕಾರದ ಈ ಕಾನೂನಿಂದ ಅಪಘಾತ ತಡೆ, ಜನರ ಸಮಯವನ್ನ ಉಳಿಸಿದಲ್ಲದೇ ಸಾಕಷ್ಟು ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(ಎನ್‍ಸಿಆರ್‍ಬಿ) ಪ್ರಕಾರ 2015 ರಲ್ಲಿ ಒಟ್ಟು ದಾಖಲಾದ 4.64 ಲಕ್ಷ ಅಪಘಾತಗಳಲ್ಲಿ ಪೈಕಿ 1.5% ಅಪಘಾತಗಳಿಗೆ ಮದ್ಯಸೇವನೆಯೇ ಕಾರಣವಾಗಿದೆ. ಒಟ್ಟು 6,295 ಮಂದಿ ಗಾಯಗೊಂಡಿದ್ದರೆ 2,958 ಮಂದಿ ಮೃತಪಟ್ಟಿದ್ದರು. ಇದನ್ನು ಓದಿ: ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv