Tag: ಹೋಮ್ ಐಸೋಲೇಷನ್

  • ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಷನ್‍ಗೆ ಹೊಸ ರೂಲ್ಸ್

    ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಷನ್‍ಗೆ ಹೊಸ ರೂಲ್ಸ್

    ಬೆಂಗಳೂರು: ಸಿಲಿಕಾನ್ ಸಿಟಿ ಅರ್ಧ ಲಕ್ಷ ಕೊರೊನಾ ಪ್ರಕರಣಗಳ ಮೈಲಿಗಲ್ಲಿಗೆ ಸನಿಹದಲ್ಲಿದ್ದು, ನಗರದಲ್ಲಿ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಇದೀಗ 15 ಸಾವಿರ ದಾಟಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೊರೊನಾ ಹತ್ತಿಕ್ಕಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

    ನಿಯಂತ್ರಣಕ್ಕೆ ಸಿಗದೆ ಗಲ್ಲಿಗಲ್ಲಿಯಲ್ಲಿ ಆರ್ಭಟಿಸುತ್ತಿರುವ ಕೊರೊನಾ ಹತ್ತಿಕ್ಕುವ ನೆಪದಲ್ಲಿ ಸರ್ಕಾರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿದ್ದು, ಇಂದು ಸಹ ಹಲವು ರೂಲ್ಸ್ ಜಾರಿ ಮಾಡಲಾಗಿದೆ. ಹೋಮ್ ಐಸೋಲೇಷನ್ ಕುರಿತು ನಿಯಮ ರೂಪಿಸಿದ್ದು, ಈ ನಿಯಮಗಳು ಯಾವ ರೀತಿ ಕಾರ್ಯನಿರ್ವಹಿಸಲಿವೆ ಕಾದು ನೋಡಬೇಕಿದೆ.

    ಹೋಮ್ ಐಸೋಲೇಷನ್ ಆಗುವುದು ಇನ್ನು ಸೋಂಕಿತರ ನಿರ್ಧಾರ ಅಲ್ಲ. ಬದಲಿಗೆ ಸೋಂಕಿತರ ಹೋಮ್ ಐಸೋಲೇಷನ್ ಬಗ್ಗೆ ಪಾಲಿಕೆ ನಿರ್ಧಾರ ಮಾಡಲಿದೆಯಂತೆ. ಅಲ್ಲದೆ ಸೋಂಕಿತರ ಮೇಲೆ ನಿಗಾ ಇಡಲು ವಾರ್ಡ್‍ಗಳಲ್ಲಿ ಪ್ರತ್ಯೇಕ ತಂಡ ರಚಿಸಲು ಮುಂದಾಗಿದ್ದು, ಸೋಂಕಿತರ ಮನೆಗೆ ತೆರಳಿ ವೈದ್ಯಕೀಯ ತಂಡದಿಂದ ಆರೋಗ್ಯ ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

    ಅಲ್ಲದೆ ಚಿಕ್ಕಪೇಟೆಯಲ್ಲಿ ವಾಣಿಜ್ಯ ವ್ಯವಹಾರಕ್ಕೆ ಹೊಸ ಐಡಿಯಾ ರೂಪಿಸಿದ್ದು, ದಿನ ಬಿಟ್ಟು ದಿನ ಅಂಗಡಿ ತೆರೆಯಲು ಚಿಂತಿಸಲಾಗಿದೆಯಂತೆ. ಒಂದು ಅಂಗಡಿ ತೆರೆದರೆ, ಅದರ ಅಕ್ಕಪಕ್ಕದ ಅಂಗಡಿ ಬಂದ್ ಮಾಡಬೇಕಂತೆ. ಅಲ್ಲದೆ ಶೇ.50ರಷ್ಟು ಸಿಬ್ಬಂದಿಯನ್ನು ಮಾತ್ರ ಇಟ್ಟುಕೊಂಡು ಕೆಲಸ ಮಾಡಬೇಕು, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ ಮಾರುಕಟ್ಟೆಗಳು ಬಂದ್ ಆಗಿರಲಿವೆ. ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯಳದಲ್ಲಿ ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡುವ ಕುರಿತು ನಿರ್ಧರಿಸಲಾಗಿದೆ.

    ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯಗಳಲ್ಲಿ ಮದ್ಯದಂಗಡಿ, ಹೂವು, ಹಣ್ಣು, ತರಕಾರಿ ವ್ಯಾಪಾರ ಸಂಪೂರ್ಣ ಬಂದ್ ಆಗಿರಲಿದೆ. ಮುಂದಿನ ಆದೇಶದವರೆಗೂ ಮಿನಿ ಲಾಕ್ ಜಾರಿಯಲ್ಲಿ ಇರಲಿದೆ ಎಂದು ಬಿಬಿಎಂಪಿ ತಿಳಿಸಿದೆ.

  • 60 ವರ್ಷ ಮೇಲ್ಪಟ್ಟವರಿಗೆ ಹೋಂ ಐಸೋಲೇಷನ್ ಕಡ್ಡಾಯ

    60 ವರ್ಷ ಮೇಲ್ಪಟ್ಟವರಿಗೆ ಹೋಂ ಐಸೋಲೇಷನ್ ಕಡ್ಡಾಯ

    ಬೆಂಗಳೂರು: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟು ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಡ್ಡಾಯವಾಗಿ ಹೋಂ ಐಸೋಲೆಷನ್ ಮಾಡಲಾಗುವುದು. ಈ ಸಂಬಂಧ ಕಾನೂನು ಜಾರಿಗೆ ಚಿಂತನೆ ನಡೆದಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

    60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರಬಾರದು. ವಾಕಿಂಗ್‍ಗೂ ಬರುವಂತಿಲ್ಲ. ಅವರನ್ನ ಮನೆ ಒಳಗೆ ಇರಿಸುವುದಕ್ಕೆ ಶೀಘ್ರವಾಗಿ ಕಾನೂನು ರೂಪಿಸ್ತೇವೆ. ಜೊತೆಗೆ ಟೆಸ್ಟಿಂಗ್ ಹೆಚ್ಚಿಸ್ತೇವೆ. ಕೋವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯೊಳಗೆ ರಿಪೋರ್ಟ್ ನೀಡಬೇಕು ಅಂತ ಲ್ಯಾಬ್‍ಗಳಿಗೆ ಸೂಚಿಸಿದ್ದೇವೆ. ಶೇ.5 ರಷ್ಟು ವೈದ್ಯರು ಕೆಲವರು ನೆಪ ಹೇಳಿ ರಜೆ ಹಾಕುತ್ತಿದ್ದಾರೆ. ಅಂತವರಿಗೆ ಮುಲಾಜಿಲ್ಲದೆ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆ.

    ಇದೇ ವೇಳೆ ಬೆಂಗಳೂರಿನಲ್ಲಿ ಸಾಕಷ್ಟು ಅಸ್ತವ್ಯಸ್ತ ಆಗಿರೋದು ನಿಜ. ನಾಳೆಯಿಂದ ಪ್ರತಿ ವಾರ್ಡ್ ನಲ್ಲಿ 2 ಆಂಬ್ಯುಲೆನ್ಸ್ ನಿಯೋಜಿಸ್ತೇವೆ. 1912 ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿ ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಎಲ್ಲೆ ಯಾರಿಗೆ ತೊಂದರೆ ಆದರು ಈ ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು, ತಕ್ಷಣ ಸ್ಪಂದಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

  • ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್-ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್-ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಬೆಂಗಳೂರು: ಕೊರೊನಾ ರೋಗ ಲಕ್ಷಣ ಇಲ್ಲದವವರಿಗೆ ಹೋಮ್ ಐಸೋಲೇಷನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಂದು ಅಧಿಕೃತ ಆದೇಶವನ್ನು ಹೊರಡಿಸಿದೆ.

    ಮೊದಲು ಕೋವಿಡ್ ಟೆಸ್ಟ್ ಮಾಡಿಸಿ ರೋಗಿ ಹೋಮ್ ಐಸೋಲೇಷನ್ ಗೆ ಅರ್ಹನಾ ಎಂಬುದನ್ನು ಆರೋಗ್ಯ ಇಲಾಖೆ ತಂಡ ಮತ್ತು ವೈದ್ಯಾಧಿಕಾರಿಗಳು ನಿರ್ಧರಿಸುತ್ತಾರೆ. ಹೋಮ್ ಐಸೋಲೇಷನ್ ಗೆ ಅರ್ಹರಲ್ಲದ ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯಗಳು ಇದ್ದರೆ ಹೋಮ್ ಐಸೋಲೇಶನ್ ಗೆ ಹಸಿರು ನಿಶಾನೆ ಸಿಗಲಿದೆ. ರೋಗಿಯ ಮನೆಯಲ್ಲಿ ಅಗತ್ಯ ಸೌಲಭ್ಯ ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡುತ್ತಾರೆ.

    ಹೋಮ್ ಐಸೋಲೇಷನ್‍ಗೆ ಒಳಪಡುವ ರೋಗಿ ಕಡ್ಡಾಯವಾಗಿ ಪ್ರೋಟೋಕಾಲ್ ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು ಸೋಂಕಿತನ ಮನೆಯಲ್ಲಿ ಅಗತ್ಯ ಸೌಲಭ್ಯಗಳಿವೆಯಾ ಎಂಬುದನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ಬಳಿಕವೇ ಹೋಮ್ ಐಸೋಲೇಷನ್ ಗೆ ಅನುಮತಿ ಸಿಗಲಿದೆ. ಹೋಮ್ ಐಸೋಲೇಷನ್ ಗೆ ಒಳಗಾದವರು ಪ್ರತಿದಿನ ಸಂಬಂಧಪಟ್ಟ ವೈದ್ಯರಿಗೆ ವರದಿ ನೀಡಬೇಕು. ಈ ಬಗ್ಗೆ ಕುಟುಂಬದವರಿಗೆ, ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರಿಗೆ ಮಾಹಿತಿ ನೀಡಬೇಕು.

    ಹೋಮ್ ಐಸೋಲೇಷನ್ ಗೆ ಒಳಗಾದವರು ಗ್ಲೌಸ್, ಸ್ಯಾನಿಟೈಸರ್, ಅಕ್ಸಿ ಮೀಟರ್, ಥರ್ಮಲ್ ಮೀಟರ್ ಬಳಸಬೇಕು. ಪ್ರೋಟೋಕಾಲ್ ಅನ್ವಯ ಚಿಕಿತ್ಸಾ ಅವಧಿ ಮುಗಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ.