Tag: ಹೋಮ

  • ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಹುಬ್ಬಳ್ಳಿ: ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ (Quran) ಪಠಣ ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಶಾಸಕ ಬೆಲ್ಲದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು.

    ಧಾರವಾಡ (Dharwad) ಡಿಸಿ ಕಚೇರಿ ಎದುರು ಹೋಮ ಮಾಡಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರಿ ಕಚೇರಿ ಶುದ್ಧೀಕರಣ ಮಾಡೋದಾಗಿ ರುದ್ರಪಠಣ ಮಾಡಿ ಅರ್ಚಕರ ಮೂಲಕ ಹೋಮ ಮಾಡಿಸಿದ್ರು. ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

    ಮುಲ್ಲಾ ಮೋಕ್ಷ ಹೋಮ ಎಂದು ಪ್ಲೆಕಾರ್ಡ್ ಹಿಡಿದು ಕಿಡಿಕಾರಿದ್ರು. ಕಾಂಗ್ರೆಸ್ ಶಾಸಕರಿಗೆ (Congress MLAs), ಸಚಿವರಿಗೆ ದೇವರು ಒಳ್ಳೆ ಬುದ್ಧಿಕೊಡಲಿ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಮಂಗಳಾರತಿ ನೆರವೇರಿಸಿದ್ರು. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್‌ ಕಿರಗಂದೂರು

    ಬಳಿಕ ಮಾತನಾಡಿ, ಸರ್ವರನ್ನೂ ಸಮನಾಗಿ ನೋಡುವ ಸಿದ್ಧಾರೂಢ ಮಠದಲ್ಲಿ ಕುರಾನ್ ಪಠಾಣ್ ಮಾಡುವ ಕೆಲಸ ಸಂತೋಷ್ ಲಾಡ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನಡೆದಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

  • ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ರಾಮ ಜಪ

    ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ರಾಮ ಜಪ

    -ಶ್ರೀರಾಮನ ಹೋಮ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಚಿವ

    ತುಮಕೂರು: ಭಗವಾನ್ ಶ್ರೀರಾಮನನ್ನು (Lord Ram) ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅವರ ಕುಟುಂಬ ಇಂದು ರಾಮಜಪದಲ್ಲಿ ತೊಡಗಿಕೊಳ್ಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

    ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ರಾಜಣ್ಣ ಮತ್ತವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೆಎನ್ ರಾಜಣ್ಣ ಕುಟುಂಬ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ. ಮಧುಗಿರಿ (Madhugiri) ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ ಹೋಮ ಮಾಡಲಾಗಿದೆ. ನವಗ್ರಹ, ಗಣಪತಿ ಹಾಗೂ ಶ್ರೀರಾಮ ಹೋಮ ಕೈಗೊಂಡಿದ್ದು, ಕೆಎನ್ ರಾಜಣ್ಣ, ಅವರ ಪತ್ನಿ ಶಾಂತಲ ಹಾಗೂ ಕುಟುಂಬದ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು: ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್‌ ಯೋಗಿರಾಜ್‌ ಮಾತು

    ಪತ್ನಿ ಶಾಂತಲಾರ ಮನೆ ದೇವರು ಶ್ರೀರಾಮ ಹಾಗಾಗಿ ಇಂದು ವಿಶೇಷ ಪೂಜೆ ಮಾಡಿದ್ದಿವಿ ಎಂದು ಕೆ ಎನ್ ರಾಜಣ್ಣ ಪಬ್ಲಿಕ್ ಟಿ.ವಿ.ಗೆ ಹೇಳಿದ್ದಾರೆ. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳಬಹುದು. ಆದರೆ ನಾನು ಶ್ರೀರಾಮನಲ್ಲಿ ದೈವತ್ವವನ್ನೂ, ಪೂಜಾರ್ಹ ವ್ಯಕ್ತಿ ಎಂದು ನಂಬಿದ್ದೇನೆ. ಹಾಗಾಗಿ ಪೂಜೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ

    ನೂರಾರು ಕೋಟಿ ವೆಚ್ಚ ಮಾಡಿ ದೇವಸ್ಥಾನ ಕಟ್ಟೋ ಬದಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ವಾದಕ್ಕೆ ಪ್ರತಿಕ್ರಿಯಿಯಿಸಿದ ಅವರು, ದೇವಸ್ಥಾನವನ್ನು ಕಟ್ಟೋದು ತಪ್ಪಲ್ಲ. ದೇವಸ್ಥಾನದ ಅವಶ್ಯಕತೆ ಇದೆ. ಅಲ್ಲದೇ ನನ್ನ ಹೇಳಿಕೆಯ ಡ್ಯಾಮೆಜ್ ಕಂಟ್ರೋಲ್ ಗೆ ಇಂದು ರಾಮನ ಪೂಜೆ ಮಾಡಿಲ್ಲ. ನಾನೂ ಅಪ್ಪಟ ರಾಮಭಕ್ತ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್

    ಈ ಹಿಂದೆ ಸಚಿವ ಕೆಎನ್ ರಾಜಣ್ಣ ಪ್ರಭು ಶ್ರೀರಾಮಚಂದ್ರನನ್ನು ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ತುಮಕೂರಿನ ರಾಮ ದೇವಸ್ಥಾನದಲ್ಲಿ ಹೋಮ ಹವನದಲ್ಲಿ (Homa Havan) ಭಾಗಿಯಾಗುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಸಚಿವ ಕೆಎನ್ ರಾಜಣ್ಣ ಹೋಮಕ್ಕೆ ಹವಿಸ್ಸು ಹಾಕಿ ನಮಸ್ಕರಿದ್ದು, ಕುಟುಂಬ ಸಮೇತ ಹೋಮ ಕುಂಡಕ್ಕೆ ಹವಿಸ್ಸು ಸಲ್ಲಿಕೆ ಮಾಡಿದ್ದಾರೆ. ಬಳಿಕ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

  • ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಉಡುಪಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಬೇಕು (Prime Minister) ಎಂದು ಉಡುಪಿಯಲ್ಲಿ (Udupi) ಹೋಮ, ಹವನಗಳನ್ನು ಕೈಗೊಳ್ಳಲಾಗಿದೆ.

    2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರುವಂತೆ ನಡೆಸಿದ ಯಾಗ ಇದಾಗಿದ್ದು, ಕಾಪು ತಾಲೂಕು ಪಾದೆಬೆಟ್ಟು ಸುಬ್ರಮಣ್ಯ ಸನ್ನಿಧಿಯಲ್ಲಿ ಪ್ರಾರ್ಥನೆ, ಪೂಜೆ ಹಾಗೂ ಹೋಮವನ್ನು ಅರ್ಚಕರೇ ನೆರವೇರಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಲಯದ ಮೇಲೆ ನಂಬಿಕೆ ಇದೆ; ಡಿಕೆಶಿ

    ಮುಂದಿನ ಲೋಕಸಭಾ ಚುನಾವಣೆ ಉದ್ದೇಶವಾಗಿಟ್ಟುಕೊಂಡು ಹೋಮ ನಡೆಸಲಾಗಿದೆ. ಬಿಜೆಪಿ ಬಹುಮತದೊಂದಿಗೆ ಜಯಗಳಿಸುವಂತೆ ಪ್ರಾರ್ಥಿಸಿ, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಪ್ರಾರ್ಥನೆಯನ್ನು ಪೂರ್ಣಾವಧಿಯ ಸಂದರ್ಭದಲ್ಲಿ ಸಲ್ಲಿಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮ ತಾರಕ ಮಂತ್ರ ಹೋಮ, ಚಂಡಿಕಾ ಹೋಮ ನೆರವೇರಿಸಲಾಯಿತು. ಇದನ್ನೂ ಓದಿ: ಕೆಜೆ ಹಳ್ಳಿ, ಡಿಜಿ ಹಳ್ಳಿ ಪ್ರಕರಣದಲ್ಲೂ ಅಫ್ಸರ್ ಪಾಷಾ ಪಾತ್ರ – ಶೋಭಾ ಕರಂದ್ಲಾಜೆ ಆರೋಪ

    ಇದೇ ಸಂದರ್ಭ ಅಥರ್ವಶೀರ್ಷ ಮಹಾಗಣಪತಿ ಹೋಮ, ಋಷಭಸೂಕ್ತ ಹೋಮ, ಮನ್ಯುಸೂಕ್ತ ಹೋಮ ಹಾಗೂ ರುದ್ರ ಯಾಗ ನಡೆಸಲಾಯಿತು. ಒಬ್ಬ ವ್ಯಕ್ತಿಯ ಅಭಿವೃದ್ಧಿಗೆ ಮತ್ತು ಜೀವನದ ಒಳಿತಿಗಾಗಿ ಈ ಹೋಮಗಳನ್ನು ನಡೆಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್‌ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿ ಹಿರೇಮಠದಿಂದ ಮಹಾಮೃತ್ಯುಂಜಯ ಹೋಮ

    ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿ ಹಿರೇಮಠದಿಂದ ಮಹಾಮೃತ್ಯುಂಜಯ ಹೋಮ

    ಚಿಕ್ಕೋಡಿ: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwar Swamiji) ಅನಾರೋಗ್ಯ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ (Health) ಚೇತರಿಕೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ (Hukkeri Hiremath) ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.

    ಹಿರೇಮಠದ ಚಂದ್ರಶೇಖರ್‌ ಶಿವಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮಹಾಮೃತ್ಯಂಜಯ ಹೋಮದಲ್ಲಿ 20ಕ್ಕೂ ಹೆಚ್ಚು ವೇದು ವಟುಗಳು ಭಾಗಿಯಾಗಿದ್ದರು. ಸಿದ್ದೇಶ್ವರ ಸ್ವಾಮೀಜಿ ಗುಣಮುಖರಾಗಲಿ ಎಂದು ಮಹಾಮೃತ್ಯುಂಜಯ ಜಪ ಪಠಿಸಿ ಹೋಮ ಮಾಡಿ ಪ್ರಾರ್ಥನೆ ಮಡಲಾಯಿತು. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ್‌ ಶಿವಾಚಾರ್ಯ ಮಹಾಸ್ವಾಮೀಜಿ, ಸಿದ್ದೇಶ್ವರ ಶ್ರೀಗಳು ಹುಕ್ಕೇರಿ ಹಿರೇಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ‌ಶ್ರೀಗಳ ಆರೋಗ್ಯ ಚೇತರಿಕೆಯಾಗುತ್ತಿದ್ದು, ಯಾರು ಭಯ ಪಡುವ ಆತಂಕವಿಲ್ಲ. ಸುಳ್ಳು ಸುದ್ದಿಗಳಿಗೆ ಭಕ್ತರು ಕಿವಿಗೊಡೋದು ಬೇಡ. ಶ್ರೀಗಳು ಗುಣಮುಖರಾಗಲಿ. ಎಲ್ಲರೂ ಮನೆಗಳಲ್ಲಿ ಪ್ರಾರ್ಥನೆ ಪೂಜೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ

    Live Tv
    [brid partner=56869869 player=32851 video=960834 autoplay=true]

  • ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

    ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

    ಚಿಕ್ಕಮಗಳೂರು: ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ಆವರಣದಲ್ಲಿ ಮಾಂಸಹಾರ ಸೇವನೆ ಮಾಡಿದ್ದು, ಹಿಂದೂ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ.

    ದತ್ತಪೀಠದ ಉಮೇದುವಾರಿಕೆಗಾಗಿ ಎರಡು ಸಮುದಾಯಗಳು ದಶಕಗಳಿಂದ ಹೋರಾಟ ಮಾಡುತ್ತಿವೆ. ಹಾಗಾಗಿ ನ್ಯಾಯಾಲಯ ಕೂಡ ದತ್ತಪೀಠದ ಆವರಣದೊಳಗೆ ಕೆಲವೊಂದು ಆಚರಣೆಗೆ ನಿಬರ್ಂಧ ಹೇರಿದೆ. ಆದರೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ವಿವಾದಿತ ಜಾಗದಲ್ಲಿ ಪೂಜೆ ಮಾಡಿ ಮಾಂಸ ಸೇವನೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಇದನ್ನೂ ಓದಿ: ವಿವಾಹಿತೆಯ ಅನುಮಾನಾಸ್ಪದ ಸಾವು

    ದತ್ತಪೀಠದಲ್ಲಿನ ಗೋರಿಗಳಿಗೆ ಪೂಜೆ ಮಾಡಲು ಹೇಗೆ ಅವಕಾಶ ಸಿಕ್ಕಿತು ಎಂದು ಬಜರಂಗದಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಿಂದೂಗಳ ಧಾರ್ಮಿಕ ಸಭೆ-ಸಮಾರಂಭದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಬಿರಿಯಾನಿ ಬೇಯಿಸಿ ತಿಂದಿರುವುದು ಇದೀಗ ಮತ್ತೊಂದು ವಿವಾದದ ಕಿಡಿಹೊತ್ತಿಸಿದೆ.

    ಸರ್ಕಾರವೇ ನಿರ್ಮಿಸಿರುವ ಶೆಡ್: ನಿನ್ನೆ ದತ್ತಪೀಠದ ಗುಹೆಯ ಪಕ್ಕದಲ್ಲಿನ ತಾತ್ಕಾಲಿಕ ಶೆಡ್‍ನಲ್ಲಿ ಮುಸ್ಲಿಮರು ಮಾಂಸ ಬೇಯಿಸಿಕೊಂಡು ಸೇವನೆ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಕಾರರ ಪಿತ್ತ ನೆತ್ತಿಗೇರಿತ್ತು. ದತ್ತ ಜಯಂತಿ, ದತ್ತಮಾಲಾ ಅಭಿಯಾನದ ವೇಳೆ ಇಲ್ಲಿ ಹೋಮ-ಹವನ ನಡೆಸಲು ಸರ್ಕಾರವೇ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಇದು. ಈ ಶೆಡ್‍ನಲ್ಲಿ ಅನುಸೂಯ ಜಯಂತಿ, ದತ್ತಜಯಂತಿಯಂತೆ ಲೋಕ ಕಲ್ಯಾಣಾರ್ಥ ವಿವಿಧ ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುವುದು. ಆದರೆ ಅಂತಹ ಧಾರ್ಮಿಕ ಜಾಗದಲ್ಲೂ ಮಾಂಸ ಬೇಯಿಸಿದ್ದಾರೆ ಎಂದು ಹಿಂದೂ ಸಂಘಟಕರು ಮುಸ್ಲಿಮರ ವಿರುದ್ಧವೂ ಕಿಡಿಕಾರಿದ್ದಾರೆ.

    ದತ್ತಪೀಠದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಬಜರಂಗದಳ ಕಾರ್ಯಕರ್ತರು ಮುಜರಾಯಿ ಇಲಾಖೆ ಮಾಂಸಹಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಹರಿಹಾಯ್ದರು. ಹೋಮದ ಜಾಗದಲ್ಲಿ ಮಾಂಸ ಬೇಯಿಸಿ ಅಪವಿತ್ರಗೊಳಿಸಿದ್ದಾರೆ. ದತ್ತಜಯಂತಿಯಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಎಂದು ಬಜರಂಗದಳ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ

    ಅಲ್ಲಿ ಪೂಜೆ ಮಾಡಲ್ಲ, ಮತ್ತೆಲ್ಲಿ: ದತ್ತಜಯಂತಿಯಲ್ಲಿ ನಾವು ಲೋಕಕಲ್ಯಾಣಾರ್ಥ ಹೋಮ-ಹವನ ನಡೆಸುವ ಜಾಗವನ್ನು ಮುಸ್ಲಿಮರು ಅಪವಿತ್ರಗೊಳಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ಹೋಮ-ಹವನ, ಪೂಜೆ ಮಾಡುವುದಿಲ್ಲ. ಈ ಹಿಂದೆ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ನಡೆಯುತ್ತಿತ್ತು. ಇನ್ನು ಮುಂದೆ ಅದೇ ತುಳಸಿಕಟ್ಟೆ ಬಳಿ ಹೋಮ-ಹವನ ಮಾಡುತ್ತೇವೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ನಮಗೆ ಯಾವುದೇ ಪ್ರಶ್ನೆ ಮಾಡುವಂತಿಲ್ಲ. ತುಳಸಿಕಟ್ಟೆ ಬಳಿ ಹೋಮ ಮಾಡಲು ಸರ್ಕಾರ ವಿರೋಧ ತೋರಿದರೆ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

    ವಿವಾದಿತ ಗೋರಿಗಳಿಗೆ ಪೂಜೆ: ದತ್ತಪೀಠದ ಗುಹೆಯೊಳಗಿನ ಗೋರಿಗಳಿಗೆ ಮುಜಾವರ್ ಮಾತ್ರ ಪೂಜೆ ಮಾಡಬೇಕು. ಬೇರೆ ಯಾರಿಗೂ ಪೂಜೆಗೆ ಅವಕಾಶವಿಲ್ಲ. ಆದರೆ ದರ್ಶನಕ್ಕೆ ಗುಹೆಯೊಳಗೆ ಹೋಗಿದ್ದ ಮುಸ್ಲಿಂ ಭಕ್ತರೇ ಪೂಜೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿಂದೂ ಸಂಘಟನೆಗಳ ಮುಖಂಡರು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

    200 ಮೀಟರ್ ಸುತ್ತಳತೆಯಲ್ಲಿ ಮಾಂಸ ನಿಷೇಧ: 2010ರಲ್ಲಿ ಸುಪ್ರೀಂಕೋರ್ಟ್ ಕೂಡ 1999ರ ಪೂಜಾ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ. ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ ಮಾತ್ರ ದತ್ತಗುಹೆ-ಗೋರಿಗಳಿಗೆ ಪೂಜೆ ಸಲ್ಲಿಸಲು ಅವಕಾಶವಿದೆ. ಬೇರೆಯವರಿಗೆ ಪೂಜೆ-ಪುನಸ್ಕಾರಕ್ಕೆ ಅವಕಾಶವಿಲ್ಲ. ದತ್ತಜಯಂತಿ-ದತ್ತಮಾಲಾಧಾರಣೆ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ ಒತ್ತಾಯಿಸಿರುವ ಹಲವು ನಿದರ್ಶನಗಳಿವೆ. ಜೊತೆಗೆ ದತ್ತಪೀಠದ 200 ಮೀಟರ್ ಸುತ್ತಳತೆಯಲ್ಲಿ ಮುಜರಾಯಿ ಇಲಾಖೆಯ ನಿಯಮ-ನಿರ್ದೇಶನದಂತೆ ಯಾವುದೇ ರೀತಿಯ ಮಾಂಸಾಹಾರ ಮಾಡುವುದಕ್ಕೆ ಸಂಪೂರ್ಣ ನಿಷೇಧವಿದೆ. ಮಾಂಸಹಾರ ನಿಷೇಧ ಜಾರಿಯಲ್ಲಿದ್ದರೂ ಕೂಡ ಬಿರಿಯಾನಿ ಮಾಡಿ ತಿಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲಾಡಳಿತದಿಂದ ತಾತ್ಕಾಲಿಕ ಶೆಡ್ ಕ್ಲೀನ್: ಹೋಮ-ಹವನದ ಜಾಗದಲ್ಲಿ ಬಿರಿಯಾನಿ ತಿಂದ ವಿಷಯ ಹಾಗೂ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಗೊಂಡ ಜಿಲ್ಲಾಡಳಿತ ಮುಸ್ಲಿಮರು ಬಿರಿಯಾನಿ ತಿಂದಿದ್ದ ಹೋಮದ ಜಾಗವನ್ನು ಕ್ಲೀನ್ ಮಾಡಿದೆ. ತಾತ್ಕಾಲಿಕ ಶೆಡ್ ಹಾಗೂ ಅದರ ಸುತ್ತಲೂ ಬ್ಲೀಚಿಂಗ್ ಪೌಡರ್ ಹಾಕಿ ಕ್ಲೀನ್ ಮಾಡಿದ್ದು, ಈಗ ಅಲ್ಲಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಈ ಪ್ರಕರಣವನ್ನು ಖಂಡಿಸಿರುವ ವಿ.ಎಚ್.ಪಿ ಹಾಗೂ ಬಜರಂಗದಳ ಕಾರ್ಯಕರ್ತರು ದತ್ತಪೀಠದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಸುಂದರ ಪ್ರಕೃತಿ ಹಾಳು, ಪೀಠದಲ್ಲಿ ಕೆಟ್ಟ ವಾಸನೆ: ಇದೆಲ್ಲದರ ಮಧ್ಯೆ ಸಮುದ್ರಮಟ್ಟದಿಂದ ಸುಮಾರು 2,500 ಅಡಿಗೂ ಎತ್ತರದಲ್ಲಿರುವ ಸುಂದರ ಹಾಗೂ ಸ್ವಚ್ಛ ವಾತಾವರಣದಲ್ಲಿ ಬೀರುತ್ತಿರುವ ವಾಸನೆಯನ್ನ ತಡೆಯಲಾಗದಂತಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಅಡುಗೆ ಮಾಡುತ್ತಿರುವುದು, ಬಹಿರ್ದೆಸೆಗೆ ಹೋಗುತ್ತಿರುವುದು, ತಿಂದ ಪ್ಲೇಟ್‍ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಇಲ್ಲಿನ ಸೌಂದರ್ಯ ಹಾಗೂ ಸ್ವಚ್ಛತೆಯನ್ನ ಹಾಳು ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಊಹಿಸಲಾಗದಷ್ಟು. ತಣ್ಣನೆಯ ಗಾಳಿ ಬೀಸುವ ದತ್ತಪೀಠದ ಆವರಣದಲ್ಲೇ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗುವಷ್ಟು ಹಾಳುಮಾಡಿದ್ದಾರೆ. ಕೂಡಲೇ ಜಿಲ್ಲಾಡಳಿತ ದತ್ತಪೀಠದ ಪರಿಸರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ದತ್ತಪೀಠದ ಸೌಂದರ್ಯ ಹಾಳುಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪ್ರವಾಸಿಗರೇ ಅಸಮಾಧಾನ ಹೊರಹಾಕಿದ್ದಾರೆ.

  • ಕೊರೊನಾದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ತ್ರಿಮತಸ್ಥರಿಂದ ಹೋಮ

    ಕೊರೊನಾದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ತ್ರಿಮತಸ್ಥರಿಂದ ಹೋಮ

    ಧಾರವಾಡ: ಕೊರೊನಾದಿಂದ ಸಾವನ್ನಪ್ಪಿದವರ ಆತ್ಮ ತೃಪ್ತಿಯಾಗಲು ಮತ್ತು ಸದ್ಗತಿ ಹೊಂದಲೆಂದು ತ್ರಿಮತಸ್ಥರು ಹೋಮ ಹವನ ಮಾಡಿದ್ದಾರೆ.

    ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಎಷ್ಟೋ ಜನರಿಗೆ ಸರಿಯಾದ ಅಂತ್ಯಸಂಸ್ಕಾರ ಕೂಡಾ ನಡೆದಿಲ್ಲ. ಮಕ್ಕಳಿಗೆ ತಮ್ಮ ತಂದೆ ತಾಯಿಯ ಹಾಗೂ ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಆತ್ಮತೃಪ್ತಿಗಾಗಿ ಹಾಗೂ ಅವರು ಸದ್ಗತಿ ಹೊಂದಲಿ ಎಂಬ ಉದ್ದೇಶದಿಂದ ಹೋಮವನ್ನು ಮಾಡಲಾಯಿತು. ಇದನ್ನೂ ಓದಿ: ವಿಷ ಕುಡಿತೀನಿ, ಕೋವಿಡ್ ಕೇರ್ ಸೆಂಟರ್‌ಗೆ ಮಾತ್ರ ಬರಲ್ಲ- ಸೋಂಕಿತನ ರಾದ್ಧಾಂತ

    ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಮಧ್ವಾಚಾರ್ಯ, ಶಂಕಾರಾಚಾರ್ಯ, ವೈಷ್ಣವ ಪರಂಪರೆಯರು ಸೇರಿ ಈ ಹೋಮ ಮಾಡಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಗತ್ ಕಲ್ಯಾಣಕ್ಕಾಗಿ ಈ ಹೋಮ ಮಾಡಲಾಯಿತು. ಈ ಹೋಮಕ್ಕೆ ಹಲವು ಮಠಾಧೀಶರು ಕೂಡಾ ಸಮ್ಮತಿ ಸೂಚಿಸಿದ್ದರು.

    ಲೋಕ ಕಲ್ಯಾಣವಾಗಲಿ ಹಾಗೂ ಈ ಸೋಂಕು ಬೇಗನೇ ತೊಲಗಲಿ ಎಂಬ ಉದ್ದೇಶದಿಂದ ಸುಮಾರು 4 ಗಂಟೆಗಳ ಕಾಲ ಹೋಮವನ್ನು ಮಾಡಲಾಯಿತು. ಇದನ್ನೂ ಓದಿ: ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

  • ಹೋಮದಿಂದ ಕೊರೊನಾ ತೊಲಗಿಸಬಹುದು, ವಾತಾವರಣ ಶುದ್ಧವಾಗುತ್ತದೆ: ಅಭಯ್ ಪಾಟೀಲ್

    ಹೋಮದಿಂದ ಕೊರೊನಾ ತೊಲಗಿಸಬಹುದು, ವಾತಾವರಣ ಶುದ್ಧವಾಗುತ್ತದೆ: ಅಭಯ್ ಪಾಟೀಲ್

    ಬೆಳಗಾವಿ: ಹೋಮ ಹವನ ಮಾಡುವ ಮೂಲಕ ವಾತಾವರಣ ಶುದ್ಧೀಕರಿಸುತ್ತದೆ, ಸನಾತನ ಹಿಂದೂ ಸಂಸ್ಕೃತಿ, ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ಇದೀಗ ಕೊರೊನಾ ಎಲ್ಲ ಕಡೆ ಹೆಚ್ಚಾಗಿದ್ದರಿಂದ ನಮ್ಮ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿ ಗಲ್ಲಿಯಲ್ಲಿ ಆಯಾ ಭಾಗದ ಯುವಕ ಮಂಡಳಿ, ಮಹಿಳಾ ಸಂಘಗಳು ಹಾಗೂ ಅಲ್ಲಿನ ಪ್ರಮುಖರು ತಮ್ಮ ಮನೆ, ಗಲ್ಲಿಗಳಲ್ಲಿ ಹೋಮ ಮಾಡಬೇಕಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

    ಹೊಸೂರಿನಲ್ಲಿ ಸುಮಾರು 50 ಕಡೆಗಳಲ್ಲಿ ಈ ರೀತಿ ಹೋಮ ಹವನ ಮಾಡಲಾಗುತ್ತಿದೆ. ಈ ಹೋಮದಲ್ಲಿ ತುಪ್ಪ, ಅಜುವಾನ, ಅಕ್ಕಿ, ಬೇವಿನ ಸೊಪ್ಪು ಸೇರಿದಂತೆ ಇತರೆ ಪದಾರ್ಥಗಳನ್ನು ಹಾಕಿ ಹೋಮ ಮಾಡಲಾಗುತ್ತದೆ. ಬಳಿಕ ಗಾಡಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದರ ಮೂಲಕ ಹೋಮದ ಹೊಗೆ ಸಿಂಪಡಿಸಬಹದು. ಇಂದಿನಿಂದ ಇದು ಜೂನ್ 15ರ ವರೆಗೆ ಇದೇ ರೀತಿ ಹೋಮ ನಡೆಸಲಾಗುವುದು ಎಂದರು.

    ಈ ಹೋಮದಲ್ಲಿ ಬೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ,ಅಕ್ಕಿ, ಕವಡಿ, ಧೂಪ ಹಾಗೂ ಲವಂಗವನ್ನು ಈ ಹೋಮದಲ್ಲಿ ಹಾಕುತ್ತಾರೆ. ಇದರಿಂದ ವಾತಾವರಣ ಶುದ್ಧವಾಗುತ್ತದೆ. ಅಲ್ಲದೆ ಮಾಹಾಮಾರಿ ಕೊರೊನಾ ತೊಲಗಿ ಎಲ್ಲವೂ ಸರಳವಾಗಲಿದೆ ಎಂದು ತಿಳಿಸಿದರು.

  • ಮೂಢನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ – ಕ್ಷೇತ್ರದ ಪ್ರತಿ ಗಲ್ಲಿಗಳಲ್ಲಿ ಹೋಮ

    ಮೂಢನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ – ಕ್ಷೇತ್ರದ ಪ್ರತಿ ಗಲ್ಲಿಗಳಲ್ಲಿ ಹೋಮ

    ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿರುವ ಹಿನ್ನೆಲೆ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ, ಹವನ ಮೊರೆ ಹೋಗಿದ್ದಾರೆ. ಸೆಮಿ ಲಾಕ್‍ಡೌನ್ ಮಧ್ಯೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿದ್ದಾರೆ. ಜೂನ್ 15ರ ವರೆಗೆ ಕ್ಷೇತ್ರದ ಎಲ್ಲ ಕಡೆ ಹೋಮ ಮಾಡುವುದಾಗಿ ತಿಳಿಸಿದ್ದಾರೆ.

    ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರತಿ ಗಲ್ಲಿ, ಬಡಾವಣೆಯಲ್ಲಿ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಕಾರ್ಯ ನಡೆಸಲಾಗಿದೆ. ದಕ್ಷಿಣ ಮತಕ್ಷೇತ್ರದ ಎಲ್ಲ ಗಲ್ಲಿ, ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ, ಅಗ್ನಿಕುಂಡದಲ್ಲಿ ಭೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ, ಕವಡಿ ಧೂಪ ಹಾಗೂ ಲವಂಗ ಹಾಕಿ ಹೋಮ ಮಾಡಲಾಗಿದೆ.

    ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದ ಒಂದೇ ದಿನ 50 ಕಡೆಗಳಲ್ಲಿ ಹೋಮ ಮಾಡಲಾಗಿದೆ. ಜೂನ್ 15ರ ವರೆಗೆ ಕ್ಷೇತ್ರದ ಎಲ್ಲ ಕಡೆಯಲ್ಲಿ ಹೋಮ ಮಾಡಲಾಗುವುದು ಎಂದು ಅಭಯ ಪಾಟೀಲ್ ಹೇಳಿದ್ದಾರೆ.

  • ಕೊರೊನಾ ಸೋಂಕು ತಡೆ, ಲೋಕ ಕಲ್ಯಾಣಕ್ಕಾಗಿ ಹೋಮ

    ಕೊರೊನಾ ಸೋಂಕು ತಡೆ, ಲೋಕ ಕಲ್ಯಾಣಕ್ಕಾಗಿ ಹೋಮ

    ಬೆಂಗಳೂರು: ವಿಶ್ವದಾದ್ಯಂತ ಹರಡಿರುವ ಕೊರೊನಾ ಸೋಂಕು ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಗ್ರಾಮಸ್ಥರು, ನಾಗರಿಕರು ಹೋಮ ಹವನ ನಡೆಸಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ಪೂಜೆ ಕೈಗೊಂಡು, ರುದ್ರ ಮಂತ್ರ ಎಲ್ಲ ಔಷಧೀಯ, ಲಸಿಕೆಯ ಒಡೆಯನಿಗೆ ಶಾಂತಿ ಕೈಗೊಂಡಿದ್ದಾರೆ. ಉಷ್ಣಾಂಶದಿಂದ ಕ್ರಿಮಿಗಳ ನಾಶ 25 ಜನರ ಋತ್ವಿಕರಿಂದ ಹೋಮ ಹವನ ನಡೆಸಲಾಯಿತು.

    ವೇದ ಬ್ರಹ್ಮ ಶ್ರೀ ಸಂಪಿಗೆ ಶ್ರೀನಿವಾಸಮೂರ್ತಿ ಅರ್ಚಕರ ತಂಡದಿಂದ ಹೋಮದ ಪೂಜಾ ಕೈಂಕರ್ಯ ನಡೆದಿದೆ. ಗ್ರಾಮದ ಭವಾನಿ ಶಂಕರ್ ಮನೆತನದಿಂದ ಪೂಜೆ ನಡೆಸಲಾಗಿದೆ. ಇಸ್ಕಾನ್ ದೇವಾಲಯದ ಅರ್ಚಕರಿಂದ ಶ್ರೀಕೃಷ್ಣನ ಸ್ಮರಣೆ, ರುದ್ರಯಾಗದ ಮೂಲಕ ಮಾಹಾಮಾರಿ ಕೊರೊನಾ ನಿವಾರಣೆಗೆ ಪ್ರಾರ್ಥಿಸಲಾಯಿತು.

    ಪೂಜೆಯಲ್ಲಿ ಶಿವಾನಂದ ಮಠದ ರಮಾಣಾನಂದ ಸ್ವಾಮೀಜಿ, ಭವಾನಿ ಶಂಕರ್ ಬೈರೇಗೌಡ, ಮಂಜುನಾಥ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ ಇನ್ನಿತರರು ಭಾಗಿಯಾಗಿದ್ದರು. ಈ ವೇಳೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಹಲವಾರು ಧಾರ್ಮಿಕ ಕಾರ್ಯ ನಡೆದವು.

  • ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರು – ಡಿಕೆಶಿ ಭಾಗಿ

    ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರು – ಡಿಕೆಶಿ ಭಾಗಿ

    – 8 ಬಗೆಯ ಹೋಮ ನಡೆಸಲಿದ್ದಾರೆ ಕೆಪಿಸಿಸಿ ಅಧ್ಯಕ್ಷ
    – ಎಲ್ಲರ ಒಳಿತಿಗಾಗಿ ಹೋಮ

    ಬೆಂಗಳೂರು: ನೂತನ ಕೆಪಿಸಿಸಿ ಕಚೇರಿಯ ಆಡಿಟೋರಿಯಂನಲ್ಲಿ ಹೋಮ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮದಲ್ಲಿ ಭಾಗಿಯಾಗಿದ್ದಾರೆ.

    ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಮೂವರು ಅರ್ಚಕರಿಂದ ಹೋಮ ನಡೆಯುತ್ತಿದೆ. ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆಯಲಿದೆ.

    ನೂತನ ಆಡಿಟೋರಿಯಂ ಉದ್ಘಾಟನೆ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಿನ್ನೆಲೆಯಲ್ಲಿ ಹೋಮ ಮಾಡಲಾಗುತ್ತಿದೆ. ಅಲ್ಲದೇ ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಹೋಮ ಮಾಡಲಾಗುತ್ತಿದೆ. 8 ಬಗೆಯ ಹೋಮಗಳನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಆರಂಭವಾಗಿರುವ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯಾಗಲಿದೆ.

    ಹೋಮದ ನಂತರ ಡಿಕೆಶಿ ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಸಂಜೆ 5 ಗಂಟೆಗೆ ತಿರುವಣ್ಣಾಮಲೈಗೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಯಾವುದಾದರೂ ಶಾಪಗಳಿದ್ದರೆ ಭೂ ವರಹ ಹೋಮದಿಂದ ಅದು ನಿವಾರಣೆಯಾಗುತ್ತಂತೆ. ಹೀಗಾಗಿ ಡಿಕೆ ಶಿವಕುಮಾರ್ ಹೋಮ ಮಾಡಿಸುತ್ತಿದ್ದಾರೆ..

    ಈ ವೇಳೆ ಮಾತನಾಡಿದ ಡಿಕೆಶಿ, ಎಲ್ಲಾ ವಿಘ್ನಗಳನ್ನ ನಿವಾರಣೆ ಮಾಡಲಿ ಅಂತ ಶುಭ ಮೂಹೂರ್ತದಲ್ಲಿ ಪೂಜೆ ಶುರು ಮಾಡಿದ್ದೇವೆ. ಎರಡು ವರ್ಷಗಳಿಂದ ಬಿಲ್ಡಿಂಗ್ ಕೆಲಸ ನಿಂತಿತ್ತು. ಎಲ್ಲರ ಒಳಿತಿಗಾಗಿ ಮಾಡುತ್ತಿರುವ ಹೋಮ ಇದು. ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೀವಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂದರು.

    ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಡಿಕೆಶಿ, ಸದ್ಯದಲ್ಲೇ ಪದಗ್ರಹಣದ ದಿನಾಂಕ ನಿಗದಿ ಮಾಡುತ್ತೇವೆ. ಇಂದು ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡಿ, ದಿನಾಂಕ ನಿಗದಿ ಮಾಡಲಾಗುತ್ತದೆ ಎಂದರು. ಇನ್ನೂ ಲಾಕ್‍ಡೌನ್ ಮುಂದುವರಿಕೆ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನಾನೇನು ನಿರ್ಧಾರ ಮಾಡುವುದಕ್ಕೆ ಆಗಲ್ಲ. ಸರ್ಕಾರ ಏನು ತಿರ್ಮಾನ ಮಾಡುತ್ತೋ ಅದನ್ನ ಫಾಲೋ ಮಾಡುತ್ತೀವಿ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ,  ಅವರು ತಿರ್ಮಾನ ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೀವಿ ಎಂದು ಡಿಕೆಶಿ ಹೇಳಿದರು.