Tag: ಹೋಟೆಲ್ ರೂಮ್

  • ಪ್ರಿಯಕರನೊಂದಿಗೆ ಹೋಟೆಲ್ ರೂಮಿನಲ್ಲಿದ್ದ ಪತ್ನಿ – ಪತಿ ದಿಢೀರ್ ಎಂಟ್ರಿ

    ಪ್ರಿಯಕರನೊಂದಿಗೆ ಹೋಟೆಲ್ ರೂಮಿನಲ್ಲಿದ್ದ ಪತ್ನಿ – ಪತಿ ದಿಢೀರ್ ಎಂಟ್ರಿ

    – ಸಿಕ್ಕಿಬಿದ್ದ ಹೆಂಡ್ತಿಗೆ ಪತಿಯಿಂದ ಚಪ್ಪಲಿ ಏಟು
    – ಮಹಿಳೆಯ ಪತಿ ಬರ್ತಿದ್ದಂತೆ ಪ್ರೇಮಿ ಎಸ್ಕೇಪ್

    ಲಕ್ನೋ: ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಹೋಟೆಲ್ ರೂಮಿನಲ್ಲಿದ್ದಾಗಲೇ ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಅಲ್ಲದೇ ಆಕೆಗೆ ಪತಿ ಚಪ್ಪಲಿಯಿಂದ ಥಳಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಆಗ್ರಾದ ತಾಜ್‍ಗಂಜ್ ಪ್ರದೇಶದ ಹೋಟೆಲ್‍ವೊಂದರಲ್ಲಿ ಈ ಘಟನೆ ನಡೆದಿದೆ. ಪತಿ ರೆಡ್ ಹ್ಯಾಂಡಾಗಿ ಸಿಕ್ಕ ಪತ್ನಿಗೆ ಚಪ್ಪಲಿಯಿಂದ ಥಳಿಸಿದ್ದು, ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ತಾಜ್‍ಗಂಜ್ ಪ್ರದೇಶದ ಮಹಿಳೆ ಮದುವೆಯಾಗಿದ್ದರೂ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಪತಿಗೆ ಮೋಸ ಮಾಡುತ್ತಿದ್ದಳು. ಇತ್ತೀಚೆಗೆ ಈ ಬಗ್ಗೆ ಪತಿಗೂ ಅನುಮಾನ ಬಂದಿದೆ. ಮಹಿಳೆ ತನ್ನ ಪ್ರಿಯಕರನ ಜೊತೆ ಮಂಗಳವಾರ ತಾಜ್‍ಗಂಜ್ ಪ್ರದೇಶದಲ್ಲಿರುವ ಹೋಟೆಲ್‍ಗೆ ಬಂದಿದ್ದಳು. ನಂತರ ಇಬ್ಬರೂ ಒಂದು ರೂಮ್ ಬುಕ್ ಮಾಡಿಕೊಂಡು ಹೋಟೆಲ್ ರೂಮಿಗೆ ಹೋಗಿದ್ದಾರೆ.

    ಇತ್ತ ಪತಿಯ ನಡವಳಿಕೆಯಿಂದ ಅನುಮಾನಗೊಂಡಿದ್ದ ಪತಿ ಹೋಟೆಲ್‍ಗೆ ಹೋಗಿರುವ ಬಗ್ಗೆ ತಿಳಿದು ಅಲ್ಲಿಗೆ ಬಂದಿದ್ದಾನೆ. ನಂತರ ಏಕಾಏಕಿ ಇಬ್ಬರಿದ್ದ ರೂಮಿಗೆ ನುಗ್ಗಿದ್ದಾನೆ. ಈ ವೇಳೆ ಪತ್ನಿ ತನ್ನ ಪ್ರಿಯಕರನೊಂದಿಗೆ ಬೆಡ್ ಮೇಲಿದ್ದುದ್ದನ್ನು ನೋಡಿ ಕೋಪಗೊಂಡಿದ್ದಾನೆ. ಮಹಿಳೆಯ ಪತಿ ರೂಮಿಗೆ ಬರುತ್ತಿದ್ದಂತೆ ಪ್ರಿಯಕರ ಎಸ್ಕೇಪ್ ಆಗಿದ್ದಾನೆ.

    ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಗೆ ಮೊದಲು ಕಪಾಳಮೋಕ್ಷ ಮಾಡಿದ್ದಾನೆ. ನಂತರ ಚಪ್ಪಲಿ ತೆಗೆದುಕೊಂಡು ಆಕೆಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಮಹಿಳೆ ಮಾತನಾಡಲು ಅವಕಾಶ ನೀಡುವಂತೆ ಅನೇಕ ಬಾರಿ ಬೇಡಿಕೊಂಡಿದ್ದಾಳೆ. ಆದರೂ ಪತ್ನಿಯ ಮಾತು ಕೇಳಿಸಿಕೊಳ್ಳದೆ ಹೊಡೆದಿದ್ದಾನೆ. ಪತಿ ಹೋಟೆಲ್‍ಗೆ ಹೋಗುವಾಗ ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದನು. ಅವರು ಪತ್ನಿಗೆ ಹೊಡೆಯುವುದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಇಬ್ಬರು ಮನೆಯವರನ್ನು ಯಾರ ಮೇಲೂ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ಗುರುವಾರ ಪತಿ ಚಪ್ಪಲಿಯಿಂದ ಪತ್ನಿಗೆ ಹೊಡೆಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಪತಿ ಮಹಿಳೆಯ ಕೆನ್ನೆಗೆ ಚಪ್ಪಲಿಯಿಂದ ಹೊಡೆಯುತ್ತಿದ್ದು, ಮಹಿಳೆ ಕೂಡ ವಿರೋಧಿಸಿದ್ದಾಳೆ. ವಿಡಿಯೋ ವೈರಲ್ ಆದ ನಂತರ ಮತ್ತೆ ಪೊಲೀಸರು ಮಹಿಳೆ, ಆಕೆಯ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ. ಒಂದು ವೇಳೆ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

  • ಹೋಟೆಲ್ ರೂಮ್ ವಿಚಾರದಲ್ಲಿ ರೈನಾ ಕಿರಿಕ್- ಐಪಿಎಲ್ ತೊರೆಯಲು ಇದೇನಾ ಕಾರಣ?

    ಹೋಟೆಲ್ ರೂಮ್ ವಿಚಾರದಲ್ಲಿ ರೈನಾ ಕಿರಿಕ್- ಐಪಿಎಲ್ ತೊರೆಯಲು ಇದೇನಾ ಕಾರಣ?

    ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಭಾಗಿಯಾಗಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಲ್ಲಿ ಸುರೇಶ್ ರೈನಾ ಏಕಾಏಕಿ ಭಾರತಕ್ಕೆ ವಾಪಸ್ ಆಗಲು ಹೋಟೆಲ್ ರೂಮ್ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆ.29 ರಂದು ಸುರೇಶ್ ರೈನಾ ಕೌಟುಂಬಿಕ ಕಾರಣದಿಂದ ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ ಎಂದು ಸಿಎಸ್‍ಕೆ ಹೇಳಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರಿಗೆ ನೀಡಲಾಗಿದ್ದ ಹೋಟೆಲ್ ರೂಮ್‍ನಂತೆಯೇ ತಮಗೂ ಕೊಠಡಿ ಬೇಕು ಎಂದು ರೈನಾ ತಂಡದ ಮ್ಯಾನೇಜ್‍ಮೆಂಟ್ ಜೊತೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕೊರೊನಾ ಕಾರಣದಿಂದ ಈ ಬಾರಿ ಹೆಚ್ಚಿನ ಜಾಗೃತಿಗಳನ್ನು ಕೈಗೊಳ್ಳುತ್ತಿದ್ದು, ಕುಟುಂಬದ ಸುರಕ್ಷತೆಗೆ ಸುಸಜ್ಜಿತ ಕೊಠಡಿ ನೀಡದಿರುವುದೇ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಸಿಎಸ್‍ಕೆ ತಂಡದ ಮಾಲೀಕರು ಆಡಿದ ಮಾತುಗಳು ಸದ್ಯ ಈ ಅನುಮಾನಕ್ಕೆ ಕಾರಣವಾಗಿದೆ.

    ಔಟ್‍ಲುಕ್ ವರದಿ ಮಾಡಿರುವಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಬಿಸಿಸಿಐ ಅಧ್ಯಕ್ಷ, ಸಿಎಸ್‍ಕೆ ತಂಡದ ಮಾಲೀಕ ಶ್ರೀನಿವಾಸನ್, ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ. ನಾನು ಯಾರನ್ನು ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಆದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿದ್ದರೆ ಹಿಂತಿರುಗಿ ಎಂದು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕ್ರಿಕೆಟಿಗರೂ ಪ್ರೈಮಾ ಡೊನ್ನಾಸ್ (ಮುಖ್ಯ ಮಹಿಳಾ ಗಾಯಕಿ)ರಂತೆ. ಹಳೆ ದಿನಗಳ ಮನೋಧರ್ಮದ ನಟರಂತೆ. ಆದರೆ ಸೂಪರ್ ಕಿಂಗ್ಸ್ ತಂಡ ಯಾವಾಗಲೂ ಕುಟುಂಬದಂತೆಯೇ ಇದ್ದು, ಎಲ್ಲಾ ಹಿರಿಯ ಆಟಗಾರರು ಉತ್ತಮ ಬಾಂಧವ್ಯ ಕಲಿತ್ತಿದ್ದಾರೆ. ನಾನು ಧೋನಿ ಅವರೊಂದಿಗೆ ಮಾತನಾಡಿದ್ದು, ಸೋಂಕಿನ ಸಂಖ್ಯೆಗಳು ಹೆಚ್ಚಾಗಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದಾರೆ. ಅವರೊಂದಿಗೆ ಜೂಮ್ ಕರೆಯ ಮೂಲಕ ಮಾತನಾಡಿ, ಸುರಕ್ಷಿತವಾಗಿರಲು ಹೇಳಿದ್ದೇನೆ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಇದನ್ನೂ ಓದಿ: ಐಪಿಎಲ್ ಶೆಡ್ಯೂಲ್‍ನಲ್ಲಿ ಬದಲಾವಣೆ- ಮೊದಲ ಪಂದ್ಯದಿಂದ ಚೆನ್ನೈ ಔಟ್

    ಈ ಬಾರಿಯ ಆವೃತ್ತಿ ಇನ್ನೂ ಪ್ರಾರಂಭವಾಗಿಲ್ಲ. ರೈನಾ ಅವರು ಏನನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಖಂಡಿತ ಅರಿತುಕೊಳ್ಳುತ್ತಾರೆ. ಆದರೆ ಈ ಆವೃತ್ತಿಯ ಎಲ್ಲಾ ಹಣವನ್ನು (11 ಕೋಟಿ ರೂ.) ಅವರು ಕಳೆದುಕೊಳ್ಳಲಿದ್ದಾರೆ ಎಂದು ಸಿಎಸ್‍ಕೆ ಮಾಲೀಕ ಹೇಳಿದ್ದಾರೆ. ಸದ್ಯ ಶ್ರೀನಿವಾಸನ್ ಅವರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೇಯಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ- ಚಹರ್ ಕಮೆಂಟ್ ವೈರಲ್

    ದುಬೈಗೆ ಪ್ರಯಾಣ ಬೆಳೆಸಿದ್ದ ಚೆನ್ನೈ ತಂಡದ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ 12 ಮಂದಿಗೆ ಕೊರೊನಾ ಪಾಟಿಸಿವ್ ವರದಿ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ರೈನಾ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದಲೇ ಹೆಚ್ಚಿನ ಸುರಕ್ಷಿತೆ ಹೊಂದಿರುವ ಹೋಟೆಲ್ ಕೊಠಡಿ ಪಡೆಯಲು ಕೇಳಿದ್ದರು. ಈ ಹಂತದಲ್ಲಿ ತಂಡದ ಮ್ಯಾನೇಜ್‍ಮೆಂಟ್‍ನೊಂದಿಗೆ ಅಸಮಾಧಾನದಿಂದ ರೈನಾ ಟೂರ್ನಿಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಧೋನಿ ಸಹ ರೈನಾ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಸ್‍ಕೆ ತಂಡದ ಬೌಲರ್ ಸೇರಿ 12 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ

    C SRINIVASAN
  • ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ನವದೆಹಲಿ: ಸಾಮಾಜಿಕ ಜಾಲತಾಣದಿಂದ ಪರಿಚಯವಾಗಿದ್ದ ಗೆಳೆಯನ ಜೊತೆ ತನ್ನ ಹುಟ್ಟುಹಬ್ಬ ಆಚರಿಸಲು ಹೋಟೆಲ್ ಬುಕ್ ಮಾಡಿದ್ದ ವಿವಾಹಿತ ಮಹಿಳೆ ಬರ್ಬರವಾಗಿ ಕೊಲೆಯಾದ ಘಟನೆ ದೆಹಲಿಯ ಅಲಿಪುರದಲ್ಲಿ ನಡೆದಿದೆ.

    ಅಲಿಪುರದಲ್ಲಿರುವ ಓಯೋ ಹೋಟೆಲ್‍ನಲ್ಲಿ ಈ ಕೊಲೆ ನಡೆದಿದೆ. 33 ವರ್ಷದ ಮಹಿಳೆಯನ್ನು ವಿಕ್ಕಿ ಮನ್(21) ಕೊಲೆ ಮಾಡಿದ್ದಾನೆ. ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ವಿಕ್ಕಿ ಪರಿಚಯವಾಗಿದ್ದನು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಸೋಮವಾರ ಮಹಿಳೆಯ ಹುಟ್ಟುಹಬ್ಬವಿತ್ತು. ಹೀಗಾಗಿ ಆಕೆ ವಿಕ್ಕಿ ಜೊತೆ ಹುಟ್ಟುಹಬ್ಬದ ಪಾರ್ಟಿ ಮಾಡಲು ರೂಮ್ ಬುಕ್ ಮಾಡಿದ್ದಳು. ರಾತ್ರಿ ಇಬ್ಬರೂ ರೂಮ್‍ನಲ್ಲಿ ಮದ್ಯ ಸೇವಿಸುತ್ತ ಪಾರ್ಟಿ ಮಾಡುತ್ತಿದ್ದರು.

    ಈ ವೇಳೆ ವಿನಾಕಾರಣ ಮಹಿಳೆ ವಿಕ್ಕಿಯ ಕೆನ್ನೆಗೆ ಬಾರಿಸಿದ್ದಾಳೆ. ಇದಕ್ಕೆ ಕೋಪಗೊಂಡು ವಿಕ್ಕಿಯೂ ಮಹಿಳೆಗೆ ತಿರುಗಿಸಿ ಎರಡೇಟು ಕೊಟ್ಟಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ ಕೈಯಲ್ಲಿದ್ದ ಮದ್ಯವನ್ನು ವಿಕ್ಕಿ ಮೈಮೇಲೆ ಎರಚಿದ್ದಾಳೆ. ಹೀಗೆ ಇಬ್ಬರ ನಡುವೆ ವಿನಾಕಾರಣ ಜಗಳ ಶುರುವಾಗಿ ಬಳಿಕ ಅದು ತಾರಕಕ್ಕೇರಿ, ಸಿಟ್ಟಿನಲ್ಲಿದ್ದ ವಿಕ್ಕಿ ಮಹಿಳೆಯ ಕತ್ತು ಹಿಸುಕಿ ಹೋಟೆಲ್‍ನಿಂದ ಎಸ್ಕೇಪ್ ಆಗಿದ್ದಾನೆ.

    ವಿಕ್ಕಿ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಸಿಬ್ಬಂದಿ ಆತನ ಬಳಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಆಗ ನಾನು ಮನೆಗೆ ಹೋಗುತ್ತಿದ್ದೇನೆ, ಮಹಿಳೆ ರೂಮ್‍ನಲ್ಲಿಯೇ ಇದ್ದಾಳೆ. ಆದಷ್ಟು ಬೇಗ ಹಿಂದಿರುಗುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಹೋಟೆಲ್ ಸಿಬ್ಬಂದಿ ತಿಂಡಿ ಕೊಡಲು ಹೋದಾಗ ಬಾಗಿಲು ತಟ್ಟಿದರೂ ತೆಗೆಯದ್ದನ್ನು ನೋಡಿ ಬೀಗ ಒಡೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಕಿವಿ, ಮೂಗಿನಿಂದ ರಕ್ತ ಸುರಿದ ಸ್ಥಿತಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡು ಗಾಬರಿಗೊಂಡು ಹೋಟೆಲ್ ಮಾಲೀಕನಿಗೆ ಮಾಹಿತಿ ಕೊಟ್ಟಿದ್ದಾರೆ.

    ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಈ ಸಂಬಂಧ ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಮಹಿಳೆ ಹಾಗೂ ವಿಕ್ಕಿ ಕಳೆದ 5 ತಿಂಗಳಿಂದ 6-7 ಬಾರಿ ಇದೇ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು. ಹೀಗಾಗಿ ಅವರು ರಾತ್ರಿ ದೊಡ್ಡದಾಗಿ ಹಾಡು ಹಚ್ಚಿ ಪಾರ್ಟಿ ಮಾಡುತ್ತಿದ್ದರೂ ನಾವು ಏನು ಹೇಳಿರಲಿಲ್ಲ. ಬರ್ತಡೇ ಪಾರ್ಟಿ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆವು. ಆದರೆ ಬೆಳಗ್ಗೆ ರೂಮ್‍ನಲ್ಲಿ ನೋಡಿದರೆ ಮಹಿಳೆಯ ಕೊಲೆ ಆಗಿತ್ತು ಎಂದು ತಿಳಿಸಿದ್ದಾರೆ.

    ಸದ್ಯ ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ರೂಮ್‍ನಲ್ಲಿ ಏನಾಯ್ತು ಎಂದು ವಿಕ್ಕಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ವಿಚಾರಣೆ ವೇಳೆ ಮೃತ ಮಹಿಳೆ ವಿವಾಹಿತೆ ಹಾಗೂ ಆಕೆಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸಂಗತಿ ಕೂಡ ತಿಳಿದು ಬಂದಿದೆ.