Tag: ಹೋಂಗಾರ್ಡ್

  • ಅಡ್ಡಗಟ್ಟಿದ್ದಕ್ಕೆ ಹೋಂಗಾರ್ಡ್ ಮೇಲೆಯೇ ಬೈಕ್ ಹತ್ತಿಸಿದ

    ಅಡ್ಡಗಟ್ಟಿದ್ದಕ್ಕೆ ಹೋಂಗಾರ್ಡ್ ಮೇಲೆಯೇ ಬೈಕ್ ಹತ್ತಿಸಿದ

    – ಮರ್ಮಾಂಗ, ತಲೆಗೆ ಪೆಟ್ಟು

    ಮೈಸೂರು: ವಾಹನ ತಪಾಸಣೆಯ ವೇಳೆ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಬೈಕ್ ಸವಾರನೊಬ್ಬನನ್ನು ತಡೆಯಲು ಯತ್ನಿಸಿದಕ್ಕೆ ಹೋಂಗಾರ್ಡ್ ಮೇಲೆಯೇ ವಾಹನ ಹರಿಸಿದ ಘಟನೆ ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯ ಎಪಿಎಂಸಿ ಬಳಿ ನಡೆದಿದೆ.

    ಹೋಂಗಾರ್ಡ್ ಶಿವದಾಸ್ ಮೇಲೆ ಸವಾರ ಬೈಕ್ ಹರಿಸಿದ್ದಾನೆ. ಹುಲ್ಲಹಳ್ಳಿ ರಸ್ತೆಯ ಎಪಿಎಂಸಿ ಬಳಿ ಸಂಚಾರಿ ಪಿಎಸ್‍ಐ ಜೊತೆ ಹೋಂಗಾರ್ಡ್ ವಾಹನ ತಪಾಸಣೆ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಇಲ್ಲದೆ ತೆರಳುತ್ತಿದ್ದ ಬೈಕ್ ಸವಾರನನ್ನು ತಡೆಯಲು ಹೋಂಗಾರ್ಡ್ ಯತ್ನಿಸಿದ್ದಾರೆ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಸವಾರ ತನ್ನ ಬೈಕನ್ನು ಹೋಂಗಾರ್ಡ್ ಮೇಲೆಯೇ ಹತ್ತಿಸಿ, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಬೈಕ್ ಹರಿದ ಪರಿಣಾಮ ಹೋಂಗಾರ್ಡ್ ಅವರ ಮರ್ಮಾಂಗ ಹಾಗೂ ತಲೆಗೆ ಪೆಟ್ಟು ಬಿದಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಕತ್ತಲಾದ್ರೂ ಮನೆಗೆ ಕಳುಹಿಸದ ಅಧಿಕಾರಿಗಳು – ಮಡಿಕೇರಿಯಲ್ಲಿ ಲೇಡಿ ಹೋಮ್‍ಗಾರ್ಡ್ಸ್ ಕಣ್ಣೀರು

    ಕತ್ತಲಾದ್ರೂ ಮನೆಗೆ ಕಳುಹಿಸದ ಅಧಿಕಾರಿಗಳು – ಮಡಿಕೇರಿಯಲ್ಲಿ ಲೇಡಿ ಹೋಮ್‍ಗಾರ್ಡ್ಸ್ ಕಣ್ಣೀರು

    ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಿರಾಶ್ರಿತರ ಜೊತೆ ಮಹಿಳಾ ಪೊಲೀಸರು ಕೂಡ ಪರಿತಾಪ ಪಡುವಂತಾಗಿದೆ. ರಾತ್ರಿಯಾದ್ರೂ ಮನೆಗೆ ಕಳುಹಿಸದಕ್ಕೆ ಮಹಿಳಾ ಹೋಂಗಾರ್ಡ್ ಗಳು ಕಣ್ಣೀರಿಟ್ಟಿದ್ದಾರೆ.

    ವಾಲ್ಮೀಕಿ ಭವನದ ಮುಖ್ಯ ರಸ್ತೆಯಲ್ಲಿ ಬಂದೋಬಸ್ತ್ ಗೆಂದು ನಿಯೋಜಿಸಿದ್ದ ಗೃಹ ರಕ್ಷಕದಳದ ಮಹಿಳಾ ಸಿಬ್ಬಂದಿಯನ್ನು ಕತ್ತಲೆಯಲ್ಲಿ ರಾತ್ರಿ 8 ಗಂಟೆಯಾದ್ರೂ ರಿಲೀವ್ ಮಾಡದೇ ಕರ್ತವ್ಯ ಮುಂದುವರಿಸಿ ಅಂತ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ. ರಾತ್ರಿ ವೇಳೆ ಕರ್ತವ್ಯ ನಿಭಾಯಿಸುತ್ತಿದ್ದೇವೆ ಕನಿಷ್ಠ ಇಲಾಖೆಯಿಂದ ಟಾರ್ಚ್ ಕೂಡ ನೀಡಿಲ್ಲ ಅಂತ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಸ್ಥಳಕ್ಕೆ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಭೇಟಿ ನೀಡಿ ಮಹಿಳಾ ಸಿಬ್ಬಂದಿ ಆಲಿಸಿ ಸಂಬಂಧಪಟ್ಟವರೊಂದಿಗೆ ಮಾತನಾಡ್ತೀನಿ ಅಂತ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಧಗಂಟೆ ಕದಲದೆ ರಸ್ತೆ ಮಧ್ಯೆ ಕುಳಿತ – ವಾಹನ ಸಂಚಾರಕ್ಕೆ ಕುಡುಕನ ಕಿರಿಕಿರಿ

    ಅರ್ಧಗಂಟೆ ಕದಲದೆ ರಸ್ತೆ ಮಧ್ಯೆ ಕುಳಿತ – ವಾಹನ ಸಂಚಾರಕ್ಕೆ ಕುಡುಕನ ಕಿರಿಕಿರಿ

    ಮೈಸೂರು: ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ಕುಳಿತ ಪಾನಮತ್ತನೊಬ್ಬ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡಿದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

    ಕೆ.ಜಿ. ಕೊಪ್ಪಲಿನ ರೈಲ್ವೇ ಸೇತುವೆ ಬಳಿ ವೃತ್ತದ ಮಧ್ಯೆ ಕುಳಿತು ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾನೆ. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂಗಾರ್ಡ್ ಕುಡುಕನನ್ನು ಕದಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಆ ಕುಡುಕ ವಾಹನ ಸಂಚಾರಕ್ಕೆ ಅಡ್ಡಿಯಾದರೂ ಹೋಂ ಗಾರ್ಡ್ ಮನವಿಗೆ ಸ್ಪಂದಿಸದೆ ಕಿರಿಕಿರಿ ಮುಂದುವರಿಸಿದ್ದಾನೆ.

    ಸುಮಾರು ಅರ್ಧಗಂಟೆ ಕಾಲ ಇದೇ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದಾನೆ. ಬಳಿಕ ಕೆಲ ಸ್ಥಳೀಯ ಯುವಕರು ಬಂದು ಕುಡುಕನನ್ನು ಸ್ಥಳದಿಂದ ಕದಲಿಸಲು ಯತ್ನಿಸಿದ್ದಾರೆ. ಆದರು ಆತ ಕದಲಿಲ್ಲ. ನಂತರ ಯುವಕರು ಬಲವಂತವಾಗಿ ಸ್ಥಳದಿಂದ ಎಳೆದು ರಸ್ತೆಯಿಂದ ಹೊರ ಕರೆದುಕೊಂಡು ಹೋಗಿದ್ದಾರೆ. ಈ ಕುಡುಕನ ಹಾವಳಿಯಿಂದ ಕೆಲಕಾಲ ವಾಹನ ಸವಾರರಿಗೆ ಕಿರಿಕಿರಿಯಾಗಿತ್ತು.

  • ಮಹಿಳಾ ಹೋಂಗಾರ್ಡ್ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಬಿತ್ತು ಗೂಸಾ

    ಮಹಿಳಾ ಹೋಂಗಾರ್ಡ್ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಬಿತ್ತು ಗೂಸಾ

    ಮಡಿಕೇರಿ: ಕರ್ತವ್ಯನಿರತ ಮಹಿಳಾ ಹೋಂಗಾರ್ಡ್ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಗೂಸಾ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ಸಮೀಪದ ನೀರುಕೊಲ್ಲಿಯ ಬಾಬು ಎಂಬುವನ ವಿರುದ್ಧ ಅನುಚಿತ ವರ್ತನೆ ತೋರಿದ ಆರೋಪ ಮಾಡಲಾಗಿದ್ದು, ಪ್ರಸ್ತುತ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಡಿಕೇರಿ ನಗರದ ತಿಮ್ಮಯ್ಯ ವೃತ್ತದಲ್ಲಿ ಇಂದು ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಹೋಂಗಾರ್ಡ್ ಬಳಿ ಕಂಠ ಪೂರ್ತಿ ಕೂಡಿದು ಬಂದ ಆರೋಪಿ ಬಾಬು ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಅವರ ಕೈಮುಟ್ಟಲು ಯತ್ನಿಸಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಹೋಂಗಾರ್ಡ್ ಸ್ಥಳದಲ್ಲೇ ಆರೋಪಿಗೆ ಗೂಸಾ ನೀಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಈ ವೇಳೆ ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸರು ಹಾಗೂ ನಗರ ಠಾಣಾ ಪೊಲೀಸರು ಘಟನೆಗೆ ಸಾಕ್ಷಿಯಾಗಿದ್ದು, ವ್ಯಕ್ತಿಯ ವಿರುದ್ಧ ಮಡಿಕೇರಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರುವ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಮಹಿಳಾ ಹೋಂಗಾರ್ಡ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    https://www.youtube.com/watch?v=4f_slkGJl9I