Tag: ಹೊಸ ವರ್ಷಾಚರಣೆ

  • ಹೊಸ ವರ್ಷಾಚರಣೆಗೆ ಕ್ಷಣಗಣನೆ – ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ ಜನವೋ ಜನ

    ಹೊಸ ವರ್ಷಾಚರಣೆಗೆ ಕ್ಷಣಗಣನೆ – ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ ಜನವೋ ಜನ

    ವಿಜಯಪುರ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಜಿಲ್ಲೆಯ ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ (Golgumbaz) ಪ್ರವಾಸಿಗರ ದಂಡು ಬರುತ್ತಿದೆ.ಇದನ್ನೂ ಓದಿ: New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    2025ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿರುವ ಜನರು, ಕುಟುಂಬ ಸಮೇತರಾಗಿ ಬಂದು ಗೋಲಗುಂಬಜ್ ವೀಕ್ಷಿಸುತ್ತಿದ್ದಾರೆ.

    ಸ್ಥಳೀಯರು ಮಾತ್ರವಲ್ಲದೇ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಿದ್ದಾರೆ. ಇನ್ನೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕೆಲ ಶಾಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕಾಗಿ ಗೋಲಗುಂಜ್ ವೀಕ್ಷಣೆಗೆ ಬರುತ್ತಿದ್ದಾರೆ.ಇದನ್ನೂ ಓದಿ: ಅಂಗನವಾಡಿಗೆ ತೆರಳಿದ್ದ 3ರ ಬಾಲಕಿಗೆ ಹಾವು ಕಚ್ಚಿ ಸಾವು

     

  • ಪ್ರವಾಸಿಗರ ಸ್ವರ್ಗ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ

    ಪ್ರವಾಸಿಗರ ಸ್ವರ್ಗ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಹೊಸ ವರ್ಷದ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಎಂದಿನಂತೆ ಪ್ರವಾಸಿಗರಿಗೆ ಹಂಪಿಗೆ (Hampi) ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಹಲವೆಡೆ ಧಾರ್ಮಿಕ ಕ್ಷೇತ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.ಇದನ್ನೂ ಓದಿ: ಬೈಕ್, ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ – 3 ಮಂದಿ ಸಾವು

    ಹೊಸ ವರ್ಷಾಚರಣೆ ಹಿನ್ನೆಲೆ ಇಂದು (ಡಿ.31) ಹಾಗೂ ನಾಳೆ (ಜ.01) ಲಕ್ಷಾಂತರ ಪ್ರವಾಸಿಗರು ಹಂಪಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಹಂಪಿ ಪ್ರವಾಸಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುವ ಸಾಧ್ಯತೆ ಇದೆ. ಹಂಪಿ ಭೇಟಿಗೆ ಬರುವ ಪ್ರವಾಸಿಗರು, ತುಂಗಭದ್ರಾ ಜಲಾಶಯ ಹಾಗೂ ಅಂಜನಾದ್ರಿಗೂ ಭೇಟಿ ನೀಡಲಿದ್ದಾರೆ.

    ಹೊಸ ವರ್ಷಾಚರಣೆ ನೆಪದಲ್ಲಿ ಧಾರ್ಮಿಕ ಕ್ಷೇತ್ರ ಹಂಪಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಜಯನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.ಇದನ್ನೂ ಓದಿ: ತಮಿಳುನಾಡು | ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

  • ಹೊಸ ವರ್ಷಾಚರಣೆಗೆ ನಂದಿಗಿರಿಧಾಮ ಬಂದ್ – ಗೆಸ್ಟ್‌ಹೌಸ್‌ ಬುಕ್ಕಿಂಗ್ ಸಹ ರದ್ದು!

    ಹೊಸ ವರ್ಷಾಚರಣೆಗೆ ನಂದಿಗಿರಿಧಾಮ ಬಂದ್ – ಗೆಸ್ಟ್‌ಹೌಸ್‌ ಬುಕ್ಕಿಂಗ್ ಸಹ ರದ್ದು!

    ಚಿಕ್ಕಬಳ್ಳಾಪುರ: ಹೊಸವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandi Giridhama) ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶಿಸಿದ್ದಾರೆ.ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    ಚಿಕ್ಕಬಳ್ಳಾಪುರದ (Chikkaballapura) ವಿಶ್ವವಿಖ್ಯಾತ ನಂದಿಗಿರಿಧಾಮವನ್ನು ಹೊಸವರ್ಷಾಚರಣೆ ಹಿನ್ನೆಲೆ ಬಂದ್ ಮಾಡಲಾಗಿದ್ದು, ಡಿ.31 ರಂದು ಸಂಜೆ 6 ರಿಂದ ಜನವರಿ 1 ಬೆಳಿಗ್ಗೆ 7ರವರೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

    ಜೊತೆಗೆ ನಂದಿಗಿರಿಧಾಮದ ಮೇಲಿನ ಅತಿಥಿ ಗೃಹಗಳ ಬುಕ್ಕಿಂಗ್ ಸಹ ರದ್ದು ಮಾಡಲಾಗಿದೆ. ಜ.01 ರಂದು ಬೆಳಿಗ್ಗೆ 07 ಗಂಟೆಯ ನಂತರ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್

     

     

  • ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದಲ್ಲಿ ಹೆಚ್ಚುವರಿ ಬಿಎಂಟಿಸಿ (BMTC) ಬಸ್‌ಗಳು ಕಾರ್ಯನಿರ್ವಹಿಸಲಿವೆ.

    ಡಿ.31 ರಾತ್ರಿಯಿಂದ ಜ.1ರಂದು ಮುಂಜಾನೆ 2 ಗಂಟೆಯವರೆಗೂ ಎಂ.ಜಿ.ರಸ್ತೆಯಿಂದ (MG Road) ನಗರದ ವಿವಿಧ ಭಾಗಗಳಿಗೆ ಹೆಚ್ಚು ಬಸ್‌ಗಳು ಸಂಚರಿಸಲಿವೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು

    ಬಸ್ ಮಾರ್ಗ ಸಂಖ್ಯೆ                     ಎಲ್ಲಿಂದ                               ಎಲ್ಲಿಗೆ
    ಜಿ-3                                          ಬ್ರಿಗೇಡ್ ರಸ್ತೆ                 ಎಲೆಕ್ಟ್ರಾನಿಕ್ಸ್ ಸಿಟಿ
    ಜಿ-4 ಜಿಗಣಿ
    ಜಿ-2                                 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ       ಸರ್ಜಾಪುರ
    ಜಿ-6                                           ಕೆಂಗೇರಿ                        ಕೆ.ಹೆಚ್.ಬಿ. ಕ್ವಾರ್ಟ್ರ್ಸ್‌
    ಜಿ-7                                  ಜನಪ್ರಿಯ ಟೌನ್ ಶಿಪ್
    ಜಿ-8                                     ನೆಲಮಂಗಲ
    ಜಿ-9                            ಯಲಹಂಕ ಉಪನಗರ 5ನೇ ಹಂತ
    ಜಿ-10                                      ಯಲಹಂಕ
    ಜಿ-11                                       ಬಾಗಲೂರು
    317-ಜಿ                                   ಹೊಸಕೋಟೆ
    ಎಸ್‌ಬಿಎಸ್-13ಕೆ                       ಚನ್ನಸಂದ್ರ
    ಎಸ್‌ಬಿಎಸ್-1ಕೆ                       ಕಾಡುಗೋಡಿ
    13                                          ಬನಶಂಕರಿ

    ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಿಂದಲೂ ಹೆಚ್ಚುವರಿ ಬಸ್ ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆಗನುಸಾರ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

  • ಹೊಸ ವರ್ಷಾಚರಣೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

    ಹೊಸ ವರ್ಷಾಚರಣೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಹೊಸ ವರ್ಷ ಆಚರಣೆಗೆ (New Year) ದಿನಗಣನೆ ಶುರುವಾಗಿದೆ. ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಬಿಬಿಎಂಪಿ (BBMP) ಮಾರ್ಗಸೂಚಿ ಬಿಡುಗಡೆ ಮಾಡಿದೆ.

    ಗೃಹ ಸಚಿವ ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಮಾಜಿ ಸಿಎಂ ಹೆಚ್‌ಡಿಕೆ ಕುಟುಂಬಕ್ಕೆ ಆಹ್ವಾನ

    ಪಾಲಿಸಬೇಕಾದ ಅಂಶಗಳೇನು?
    ಹೊಸ ವರ್ಷಾಚರಣೆ ಸಮಯದಲ್ಲಿ ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತಹ ಸ್ಥಳಗಳಲ್ಲಿ ಲಭ್ಯವಿರುವ ಎಲ್ಲಾ ಅಂಬುಲೆನ್ಸ್‌ಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಅಗತ್ಯ ಕ್ರಮ ವಹಿಸಬೇಕು.

    ಹೆಚ್ಚಿನ ಸಂಖ್ಯೆಯ ಜನರು ಸಂಚರಿಸುವ ಮಾರ್ಗಗಳು/ಸ್ಥಳಗಳಲ್ಲಿರುವ ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಬೇಕು ಹಾಗೂ ಹೆಚ್ಚುವರಿಯಾಗಿ ಫೆಡ್‌ ಲೈಟ್‌ಗಳನ್ನು ಅಳವಡಿಸಬೇಕು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ- ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ

    ರಸ್ತೆ ರಿಪೇರಿ ಕಾಮಗಾರಿಯ ನಡೆಯುತ್ತಿರುವ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ, ರಿಫ್ಲೆಕ್ಟಿಂಗ್‌ ಸ್ಟಿಕ್ಕರ್ಸ್‌, ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ರಸ್ತೆ ಉಬ್ಬುಗಳು ಸ್ಪಷ್ಟವಾಗಿ ವಾಹನ ಚಾಲಕರಿಗೆ ಕಾಣುವಂತೆ ಅಗತ್ಯ ಕ್ರಮ ವಹಿಸಬೇಕು.

    ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್‌ ಮಾರ್ಕ್‌ ರಸ್ತೆ, ಕಬ್ಬನ್‌ ಪಾರ್ಕ್‌, ಟ್ರಿನಿಟಿ ಸರ್ಕಲ್‌, ಹಲಸೂರು ಕೆರೆ, ಫೀನಿಕ್ಸ್‌ ಮಾಲ್‌, ಕೋರಮಂಗಲ, ಸ್ಟಾರ್‌ ಹೋಟೆಲ್‌ಗಳು, ಕ್ಲಬ್‌ ಇತರೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಲಿದ್ದು, ಜನರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಬಿಎಂಪಿ ತಿಳಿಸಿದೆ. ಇದನ್ನೂ ಓದಿ: ಲೀಟರ್ ಹಾಲಿಗೆ 1.50 ರೂ. ಇಳಿಸಿ ಮನ್ಮುಲ್ ಆದೇಶ

  • ನ್ಯೂ ಇಯರ್ ಪಾರ್ಟಿ ವೇಳೆ ಕಿರಿಕ್ – ಸ್ನೇಹಿತರಿಂದಲೇ ಯುವಕನ ಕೊಲೆ

    ನ್ಯೂ ಇಯರ್ ಪಾರ್ಟಿ ವೇಳೆ ಕಿರಿಕ್ – ಸ್ನೇಹಿತರಿಂದಲೇ ಯುವಕನ ಕೊಲೆ

    ಚಿಕ್ಕಬಳ್ಳಾಪುರ:  ನ್ಯೂ ಇಯರ್ ಸೆಲೆಬ್ರೇಷನ್ (New Year) ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ.

    ದೊಡ್ಡ ಗಂಜೂರು ಗ್ರಾಮದ ನವೀನ್ (30) ಕೊಲೆಯಾದ ಯುವಕ. ಸ್ನೇಹಿತರೆಲ್ಲಾ ಸೇರಿ ಕಳೆದ ರಾತ್ರಿ ದೊಡ್ಡ ಗಂಜೂರು ಗ್ರಾಮದ ಬಳಿ ನ್ಯೂ ಇಯರ್ ಸೆಲೆಬ್ರೇಷನ್ ಸಂಬಂಧ ಕೇಕ್ ಕಟ್ ಮಾಡಿ ಕಂಠಪೂರ್ತಿ ಕುಡಿದು ಮೋಜಿ ಮಸ್ತಿ ಮಾಡಿದ್ದಾರೆ. ಕೇಕ್ ಕಟ್ ಮಾಡಿದ ನಂತರ ಐಮರೆಡ್ಡಿಹಳ್ಳಿ ಗ್ರಾಮದ ಬಳಿ ಇರುವ ಡಾಬಾ ಒಂದರಲ್ಲಿ ಮತ್ತೆ ಮದ್ಯಪಾನ ಮಾಡಿ ಪಾರ್ಟಿ (Party) ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದ್ದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪುನೀತ್ ಬಿಯರ್ ಬಾಟಲಿಯಿಂದ ನವೀನ್ ತಲೆಗೆ ಹಲ್ಲೆ ಮಾಡಿದ್ದು ತೀವ್ರ ರಕ್ತಸ್ರಾವವಾಗಿ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹೊಸ ವರ್ಷ ಪಾರ್ಟಿ – ಕಟ್ಟಡದಿಂದ ಬಿದ್ದು ಯುವಕ ಸಾವು

    ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೂವರು ಆರೋಪಿಗಳಾದ ದೊಡ್ಡ ಗಂಜೂರು ಗ್ರಾಮದ ಅರ್ಜುನ್, ಚೇತನ್, ಹಾಗೂ ಪುನೀತ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    ಬೆಂಗಳೂರು: ಹೊಸ ವರ್ಷಾಚರಣೆ  ಹಿನ್ನೆಲೆ ನಿನ್ನೆ ಮಧ್ಯರಾತ್ರಿ ಕೋರಮಂಗಲದ (Kormangala) ಮುಖ್ಯ ರಸ್ತೆಯಲ್ಲಿ 40 ಸಾವಿರಕ್ಕೂ ಅಧಿಕ ಜನ ಒಂದೇ ಜಾಗದಲ್ಲಿ ಸೇರಿದ್ರು. 100ಕ್ಕೂ ಹೆಚ್ಚು ಬಾರ್, ಪಬ್, ರೆಸ್ಟೋರೆಂಟ್‍ಗಳು ಕಿಕ್ಕಿರಿದಿದ್ದವು. ಖಾಸಗಿ ಪಬ್ ಕಾರಿಡರ್‌ನಲ್ಲಿ ಪ್ರೇಮಿಗಳು ಮೈಮರೆತು ಅಸಭ್ಯವಾಗಿ ವರ್ತಿಸ್ತಿದ್ರು. ಇದನ್ನು ನೋಡ್ಕೊಂಡು ರಸ್ತೆ ಬ್ಲಾಕ್‍ಮಾಡಿ ನಿಂತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.

    ಪಬ್‍ಗಳೆಲ್ಲವೂ ಹೌಸ್ ಫುಲ್ ಆಗಿದ್ದವು. 12 ಗಂಟೆಯ ನಂತರ ಪಬ್‍ಗಳಿಂದ ಹೊರ ಬಂದ ನೂರಾರು ಯುವತಿಯರು, ಕುಡಿದು ಅಮಲು ಹೆಚ್ಚಾಗಿ ಬೀದಿ ಬೀದಿಗಳಲ್ಲಿ ಬಿದ್ದಿದ್ರು. ರಾಣಿ ಚೆನ್ನಮ್ಮ ಪಡೆ, ಮಹಿಳಾ ಪೊಲೀಸರು ಕುಡಿದು ಪ್ರಜ್ಞೆ ತಪ್ಪಿ ಬಿದ್ದ ಯುವತಿಯರನ್ನು ಪೊಲೀಸ್ ಚೌಕಿಗಳಲ್ಲಿ ಬಿಟ್ಟು ಕಂಟ್ರೋಲ್ ಮಾಡಿದ್ರು. ಇನ್ನೊಂದೆಡೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಗಲಾಟೆ ನಡೀತು. ಬಳಿಕ ಪೊಲೀಸರು ಜನಜಂಗುಳಿಯನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಹೊಸ ವರ್ಷದಲ್ಲಿ ಮದ್ಯಪ್ರಿಯರಿಂದ ಭರ್ಜರಿ ಆದಾಯ – ಅಬಕಾರಿ ಇಲಾಖೆಗೆ ಚಿನ್ನದ ಬೆಳೆ

    ಈ ನಡುವೆ ನಗರದಲ್ಲಿ ನಡೆದ ನ್ಯೂ ಇಯರ್ ಸೆಲೆಬ್ರೇಷನ್ (New Year Celebration) ದೊಡ್ಡ ದಾಖಲೆ ಎಂದೇ ಹೇಳಬಹುದು. ಯಾಕಂದ್ರೆ ಪೊಲೀಸರು (Police) ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬ್ರಿಗೇಡ್ ರೋಡ್ (Brigade Road), ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ (MG Road) ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ

    ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!

    ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!

    ಬೆಂಗಳೂರು: ಚೀನಾ (China) ದಲ್ಲಿ ದಾಂಗುಡಿ ಇಟ್ಟಿರುವ ಬಿಎಫ್.7 ಆತಂಕದ ಮಧ್ಯೆ ರಾಜ್ಯ ಸರ್ಕಾರ ಕೊರೊನಾ (Corona Virus) ಗೆ ಮೂಗುದಾರ ಹಾಕಲು ಮುಂದಾಗಿದೆ. ರಾಜ್ಯಾದ್ಯಂತ ಮತ್ತೆ ಮಾಸ್ಕ್ (Mask) ಕಡ್ಡಾಯ ರೂಲ್ಸ್ ಜಾರಿ ಮಾಡಲಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ.

    ಹೊಸ ವರ್ಷದ ಆಚರಣೆಗೆ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದ್ದಲ್ಲದೇ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಡೆಡ್‍ಲೈನ್ ನೀಡಲಾಗಿದೆ. ಪಾರ್ಟಿಗಳಲ್ಲಿ ಹಿರಿಯರು, ಮಕ್ಕಳು, ಗರ್ಭಿಣಿಯರು ಭಾಗಿದಂತೆ ಪಾರ್ಟಿ ಆಯೋಜಕರು ನೋಡಿಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆ ನಂತರ ಎಂಜಿ ರೋಡ್, ಬ್ರಿಗೇಡ್ ರೋಡ್ (Brigade Road) ಸೇರಿದಂತೆ ಇತರೆಡೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಮತ್ತು ಪಬ್, ಹೋಟೆಲ್, ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆ ನಂತರ ಬಂದ್ ಮಾಡುವುದು ಕಡ್ಡಾಯವಾಗಿದೆ.

    ಬಾರ್ ಪಬ್‍ಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಟೇಬಲ್ ಇದ್ದಷ್ಟು ಮಾತ್ರ ಪಾರ್ಟಿಗೆ ಅವಕಾಶ ಕೊಡುವಂತೆ ಸೂಚನೆ ನೀಡಲಾಗಿದೆ. ಡಬಲ್ ಡೋಸ್ ಇಲ್ಲದಿದ್ದರೂ, ಒಳ ಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಕರ್ನಾಟಕಕ್ಕೆ ಯಾಕೋ ಡಿಸೆಂಬರ್ ಕೊರೊನಾ ಕಂಟಕ ಮಾಸವಾಗಿ ಪರಿಣಮಿಸಿದೆ. 2020, 2021, 2022 ಈ ಮೂರು ವರ್ಷಗಳು ಕೂಡ ವರ್ಷಾಚರಣೆಗೆ ಕೊರೊನಾ ಅಡ್ಡಿ ಆಗಿದೆ. ಈ ವರ್ಷವೂ ಕೊರೊನಾ ಅಬ್ಬರ ಮುಗಿಯಿತು ಅನ್ನೋವಷ್ಟರಲ್ಲಿ ವರ್ಷಾಂತ್ಯಕ್ಕೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಮುಂದಿನ 2-3 ತಿಂಗಳು ಕೊರೊನಾ ನಿರ್ಣಾಯಕವಾಗಿದ್ದು ಸದ್ಯ ಸರ್ಕಾರದ ರೂಲ್ಸ್ ಪಾಲಿಸುವುದು ಅನಿವಾರ್ಯವಾಗಿದೆ.

    ಕೊರೊನಾಗಾಗಿ ಒಟ್ಟು 50,817 ಬೆಡ್‍ಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ. ಒಟ್ಟಾರೆ ಹೊಸ ವರ್ಷಾಚರಣೆಗೆ ಸಿದ್ಧಗೊಂಡ ಬೆಂಗಳೂರಿಗೆ ಬಿಗ್ ಶಾಕ್ ಎದುರಾಗಿದೆ. ಬೇಕಾಬಿಟ್ಟಿ ಜನರ ಓಡಾಟಕ್ಕೆ ನಿರ್ಬಂಧ ಹೇರಿರೋ ಸರ್ಕಾರ, ಕೊರೊನಾ ಕಂಟ್ರೋಲಿಗೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್‌ (Police Pink Squad) ಫೀಲ್ಡಿಗಿಳಿದಿದೆ.

    ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಹೊಸ ವರ್ಷವನ್ನು ಬಹಳ ಸರಳವಾಗಿ ಬರಮಾಡಿಕೊಳ್ಳಲಾಯಿತು. ಮಹಾಮಾರಿ ಕೊರೊನಾ ವೈರಸ್, ಓಮಿಕ್ರಾನ್ ಆತಂಕದಿಂದ ಭಾರೀ ಸಡಗರಕ್ಕೆ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಳವಾಗಿಯೇ ಹೊಸ ವರ್ಷವನ್ನು ಆಚರಣೆ ಮಾಡಿಕೊಳ್ಳಲಾಯಿತು. ಆದರೆ ವಿದೇಶಗಳಲ್ಲಿ ಭಾರೀ ಸಂಭ್ರಮ, ಸಡಗರದಿಂದಲೇ ನ್ಯೂ ಇಯರ್ ಅನ್ನು ವೆಲ್ ಕಮ್ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಳೆ ಸಿಂಚನವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಮಳೆ ಬಂದ ಕಾರಣವೂ ಜನ ಬೇಗ ಮನೆ ಸೇರಿಕೊಂಡರು. ಪ್ರತಿ ವರ್ಷದ ಹೊಸ ವರ್ಷಕ್ಕೆ ಬೆಂಗಳೂರಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಿದೆ. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಂಡೋಪತಂಡವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜಮಾಯಿಸಿ, ರೋಡ್‍ಗಳನ್ನು ಬಂದ್ ಮಾಡಿದ್ರು.

    ಹೊಸ ವರ್ಷ ಬಂತು ಅಂದ್ರೆ ಜನ ಬೆಂಗಳೂರಿನ ಈ ರೋಡ್‍ಗೆ ಬರೋದು ಮೋಜು ಮಸ್ತಿ ಮಾಡೋದು ಸಾಮಾನ್ಯ. ಆದರೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ಮತ್ತು ಮೂರನೇ ಅಲೆಯ ಭಯಕ್ಕೆ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಹಾಗಾಗಿ ಬೆಂಗಳೂರಿನ ಬ್ರೀಗೆಡ್ ರೋಡ್ ಖಾಲಿಯಾಗಿದೆ.ಬ್ರಿಗೇಡ್ ರೋಡ್‍ನ ಪಬ್ ಅಂಡ್ ಬಾರ್ ರೆಸ್ಟೋರೆಂಟ್‍ಗಳು ನ್ಯೂ ಇಯರ್ ಸೆಲೆಬ್ರೇಷನ್ ಟೈಮ್ ನಲ್ಲಿ ಕಾಲಿಡಲು ಸಹ ಜಾಗವಿಲ್ಲದಂತೆ ತುಂಬಿ ತುಳುಕುತ್ತಿತ್ತು. ಆದರೇ ಈ ವರ್ಷ ಮೂರನೇ ಅಲೆಯ ಭೀತಿಗೆ ಸರ್ಕಾರ ಮಾಡಿರೋ ಟಫ್ ರೂಲ್ಸ್ ಕಾರಣದಿಂದ ಖಾಲಿ ಖಾಲಿಯಾಗಿದೆ. ಸಂಜೆ 6 ಗಂಟೆಗೇ ಈ ಪ್ರಮುಖ ರೋಡ್‍ಗಳ ಬಂದ್ ಮಾಡಿರೋದಕ್ಕೆ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಯುಬಿ ಸಿಟಿಯ ರಸ್ತೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ರಂಗು ರಂಗಾಗಿರುತ್ತಿದ್ದ ಯುಬಿ ಸಿಟಿ ಇಂದು ಸಂಪೂರ್ಣ ಕಳೆಗುಂದಿದೆ. ಡಿಜೆ ಮೋಜು ಮಸ್ತಿ ಇಲ್ಲದ ರಸ್ತೆಯಲ್ಲಿ ಮನೆಗಳತ್ತ ಜನ ಮುಖ ಮಾಡಿದ್ದಾರೆ. ಪಬ್, ರೆಸ್ಟೋರೆಂಟ್‍ಗಳ ಮುಂದೆ ಜನರಿಗಿಂತ ಪೊಲೀಸರೇ ಹೆಚ್ಚಿದ್ದರು. ಕೋರಮಂಗಲದಲ್ಲಿ 80 ಅಡಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಜನ ಪಬ್‍ಗಳಿಗೆ ಬೆರಳೆಣಿಕೆ ಜನ ಬಂದಿದ್ದರು. ರಾತ್ರಿ 9.30ರ ಒಳಗೆ ಊಟ ಮುಗಿಸಿಕೊಂಡರು. ಇನ್ನು ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಕ್ಲಬ್, ಪಬ್‍ಗೆಳಿಗೆ ಎಂಟ್ರಿ ಕೊಡೋ ರೋಡ್‍ಗಳ ಕಡೆ ಹೆಚ್ಚು ನಿಹಾ ವಹಿಸಿದ್ದರು. ಗಲಾಟೆ ಮಾಡುವವರನ್ನ ವಶಕ್ಕೆ ಪಡೆಯಲು ಬಿಎಂಟಿಸಿ ಮತ್ತು ಟಿಟಿ ವೆಹಿಕಲ್ ಕರೆಸಿಕೊಂಡಿದ್ದಾರೆ.

    ಇಂದಿರಾನಗರದಲ್ಲೂ ನ್ಯೂ ಇಯರ್ ಸಂಭ್ರಮ ಕಳೆಗುಂದಿದೆ. ಇಂದಿರಾನಗರ ಸುತ್ತಮುತ್ತ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಂಭ್ರಮ ಇರಲಿಲ್ಲ. 80 ಅಡಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಿದರು. ಯುವತಿಯರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಸೇಫ್ಟಿ ಐಲ್ಯಾಂಡ್ ಅನ್ನು ಪೊಲೀಸರೇ ನಿರ್ಮಿಸಿದ್ದಾರೆ. ನೈಟ್ ಕಫ್ರ್ಯೂಗೆ ಸಮಯ ಸಮೀಪಿಸುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಂತ ಹಂತವಾಗಿ ಶಾಪ್‍ಗಳು, ಮಳಿಗೆಗಳ ಮಾಲೀಕರು ಬಾಗಿಲು ಹಾಕಿದರು. 10 ಗಂಟೆಯೊಳಗೆ ಮನೆ ಸೇರಿಕೊಳ್ಳಲು ಹೊರಡಿದರು.

    ಇತ್ತ ಹುಬ್ಬಳ್ಳಿಯಲ್ಲಿ ರಾತ್ರಿ 8ಗಂಟೆ ಹೊತ್ತಿಗೆ ಪಬ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಯುವಕ ಯುವತಿಯರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ರು. ರ್ಯಾಪರ್ ಚಂದನ್‍ಶೆಟ್ಟಿ ಪತ್ನಿ ನಿವೇದಿತಾ ಜೊತೆ ಉಡುಪಿಯ ಮಲ್ಪೆಯಲ್ಲಿ ಕಾಣಿಸಿಕೊಂಡಿದ್ರು. ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೂರಾರು ಜನ ಮೀನಿನ ಖಾದ್ಯವನ್ನು ಸವಿಯುತ್ತ ಬೀಚ್ ಬದಿಯಲ್ಲಿ ಫ್ಯಾಮಿಲಿ ಸಮೇತ ಎಂಜಾಯ್ ಮಾಡುತ್ತಾ ಹೊಸವರ್ಷವನ್ನು ಆಚರಿಸಿದ್ರು. ಬೀಚ್ ರೆಸ್ಟೋರೆಂಟ್ ಫ್ರೆಶ್ ಫಿಶ್ ಫ್ರೈ ಹೋಟೆಲ್ ಗಳಲ್ಲಿ ಜನ ತಮ್ಮ ಇಷ್ಟದ ಆಹಾರವನ್ನು ಸೇವಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡ್ರು.

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಆದ್ರೆ ಕಾರವಾರದ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನಲೆಯಲ್ಲಿ ಎಂಟುಗಂಟೆ ಕಳೆದರೂ ಅಂಗಡಿಮುಂಗಟ್ಟುಗಳು ಬಂದ್ ಆಗದೇ ತೆರೆದಿದ್ದು ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ನಿರತರಾದರು. ಬೆಳಗಾವಿಯ ಪಂಚತಾರಾ ಹೋಟೆಲ್‍ಗಳು ಖಾಲಿ ಖಾಲಿ ಆಗಿವೆ. ಸರ್ಕಾರದ ಮಾರ್ಗ ಸೂಚಿಯಂತೆ ರಾತ್ರಿ 10 ಗಂಟೆಗೆ ಹೊಟೇಲ್‍ಗಳು ಬಂದ್ ಆಗಿವೆ.