Tag: ಹೊಸ ಪಕ್ಷ

  • ಹೊಸ ಪಕ್ಷ ಕಟ್ಟಲು ಹೊರಟ ದಳಪತಿ ಖ್ಯಾತ ನಟ ವಿಜಯ್

    ಹೊಸ ಪಕ್ಷ ಕಟ್ಟಲು ಹೊರಟ ದಳಪತಿ ಖ್ಯಾತ ನಟ ವಿಜಯ್

    ಮಿಳಿನ ಖ್ಯಾತ ನಟ ದಳಪತಿ ವಿಜಯ್ (Vijay) ರಾಜಕೀಯ ಕಣಕ್ಕೆ ಇಳಿಯಲಿದ್ದಾರೆ ಎಂದು ಹಲವಾರು ತಿಂಗಳಿಂದ ಹೇಳಲಾಗುತ್ತಿದೆ. ಈ ನಡುವೆ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಲೋಕಸಭೆ ಚುನಾವಣೆಗೆ ಅವರ ಹೊಸ ಪಕ್ಷದಿಂದಲೇ ಸ್ಪರ್ಧಿಸುವ ಸಿದ್ಧತೆಯನ್ನೂ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ (New Party) ನೋಂದಣಿಗಾಗಿ ಅವರು ದೆಹಲಿಯನ್ನೂ ಎಡತಾಕಿದ್ದಾರಂತೆ.

    ಈ ಹಿಂದೆ ಅವರು ಅಭಿಮಾನಿಗಳು ಮತ್ತು ಆಪ್ತರ ಜೊತೆ ವಿಜಯ್ ನಿರಂತರ ಮೀಟಿಂಗ್ ಮಾಡಿದ್ದರ ಬಗ್ಗೆ ಸುದ್ದಿ ಆಗಿತ್ತು. ವಿಜಯ್ ರಾಜಕಾರಣಕ್ಕೆ ಬಂದರೆ, ಅವರನ್ನು ಬೆಂಬಲಿಸುವುದಾಗಿ ಅಜಿತ್ ಫ್ಯಾನ್ಸ್ ಹೇಳಿಕೊಂಡಿದ್ದರು. ಹಾಗಾಗಿ ವಿಜಯ್ ಎಂಟ್ರಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

    ತಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

     

    ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ವಿಜಯ್, ಇದೀಗ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗೆ ಬಂದಿದ್ದಾರೆ. ನಿರಂತರವಾಗಿ ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿದ್ದಾರೆ. ತಮಿಳುನಾಡಿನಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಬಂದ ಮಕ್ಕಳಿಗೆ ಬಹುಮಾನ ನೀಡಿದ್ದಾರೆ. ಅದು ತಾಲ್ಲೂಕು  ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಗಣನೇ ತೆಗೆದುಕೊಳ್ಳದೇ ಮತಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಬಹುಮಾನ ನೀಡಿದ್ದಾರೆ. ಹಾಗಾಗಿ ಈ ಬಾರಿಯ ಸುದ್ದಿ ಹುಸಿ ಆಗಲಾರದು ಎನ್ನುವುದು ಅವರ ಆಪ್ತರ ನಂಬಿಕೆ.

  • ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್‌

    ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್‌

    ಶ್ರೀನಗರ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಗುಲಾಂ ನಬಿ ಆಜಾದ್ ಅವರು ಹೊಸ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ. ಜಮ್ಮುವಿನಲ್ಲಿ ಬೃಹತ್‌ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೊಸ ಪಕ್ಷದ ಹೆಸರು ಮತ್ತು ಧ್ವಜವನ್ನು ಜನರೇ ನಿರ್ಧರಿಸುತ್ತಾರೆ.

    ಜಮ್ಮುವಿನ ಸೈನಿಕ್ ಮೈದಾನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಆಜಾದ್, ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: 8 ವರ್ಷದಲ್ಲಿ ಭಾರತ ದುರ್ಬಲವಾಗಿದೆ, ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ: ರಾಹುಲ್ ಕಿಡಿ

    ನಾನು ನನ್ನ ಪಕ್ಷಕ್ಕೆ ಹೆಸರನ್ನು ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ. ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ನೀಡುತ್ತೇನೆ. ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಆಜಾದ್ ನೇತೃತ್ವದ ಪಕ್ಷವು ಬಿಜೆಪಿ ಅಥವಾ ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಅಥವಾ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಯ್ಕೆ ಹೊಂದಿದೆ. ಆದರೆ ಆಜಾದ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಅವರಿಗೂ (ಬಿಜೆಪಿ) ಮತ್ತು ನನಗೂ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಸೈಕಿಯಾ ಈಗ ಅಸ್ಸಾಂನಲ್ಲಿ ಡಿಎಸ್‌ಪಿ ಆಫೀಸರ್‌

    ಗುಲಾಂ ನಬಿ ಆಜಾದ್‌ ಅವರು ಈಚೆಗೆ ಕಾಂಗ್ರೆಸ್‌ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಅಲ್ಲದೇ ಹೊಸ ಪಕ್ಷ ಸ್ಥಾಪಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

    ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೊಸ ಪ್ರಾದೇಶಿಕ ಪಕ್ಷ ಕಟ್ತಾರಾ ಅನ್ನೋ ಗುಮಾನಿಯೊಂದು ಎದ್ದಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ ಜಿದ್ದು ಪಕ್ಷ ಕಟ್ಟುವ ನಿರ್ಧಾರವಾಗಿ ಬದಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

    ಮಂಡ್ಯ ಗಣಿ ಗಲಾಟೆಯಲ್ಲೂ ಹೊಸ ಪ್ರಾದೇಶಿಕ ಪಕ್ಷದ ರಚನೆ ಕೇಳಿ ಬಂದಿದೆ. ಗಣಿ ಗದ್ದಲದ ಸದ್ದಿನ ನಡುವೆ ಪ್ರಾದೇಶಿಕ ಪಕ್ಷ ಹುಟ್ಟುಹಾಕುವ ವಿಚಾರ ಮುನ್ನೆಲೆಗೆ ಬಂದಿದೆ. ಸುಮಲತಾ ಗಣಿ ಹೋರಾಟಕ್ಕೆ ಅಂಬರೀಶ್ ಅಭಿಮಾನಿಗಳು ಸಾಥ್ ನಿಡಿದ್ದಾರೆ. ಸಂಸದೆ ಎದುರು ಅಂಬರೀಷ್ ಅಭಿಮಾನಿಗಳು ಪಕ್ಷ ಆರಂಭಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಸ್ವಾಭಿಮಾನಿ ಪ್ರಾದೇಶಿಕ ಪಕ್ಷ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಅಂಬಿ ಅಭಿಮಾನಿಗಳ ಒತ್ತಾಯಕ್ಕೆ ಸುಮಲತಾ ಅವರು ಮಣಿಯುತ್ತಾರಾ..?, ಹೊಸದೊಂದು ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಇತ್ತ ಸುಮಲತಾ ಮನಸಲ್ಲೂ ಇಂಥದ್ದೊಂದು ಆಲೋಚನೆ ಬಂದಿರಬಹುದಾ ಎಂಬ ಕುತೂಹಲಕ್ಕೆ ಕಾರಣ ಮೊನ್ನೆ ಸುಮಲತಾ ನೀಡಿರುವ ಹೇಳಿಕೆ. ಇತ್ತೀಚೆಗೆ ಮಂಡ್ಯದ ಲಕ್ಷಾಂತರ ಜನ, ಅಂಬಿ, ದರ್ಶನ್, ಯಶ್ ಅಭಿಮಾನಿಗಳ ಸಪೋರ್ಟ್ ಇದೆ ಅಂತ ಸುಮಲತಾ ಹೇಳಿದ್ದರು. ಈ ಹೇಳಿಕೆ ಮೂಲಕ ಪಕ್ಷ ಕಟ್ಟೋ ಸುಳಿವು ಕೊಟ್ರಾ ಸಂಸದೆ ಸುಮಲತಾ ಎಂಬ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಾಗಿದೆ- ಸುಮಲತಾಗೆ ಸಿದ್ದರಾಮಯ್ಯ ಪ್ರಶ್ನೆ

    ಸದ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾರಿಗೆ ಭರಪೂರ ಬೆಂಬಲವೂ ಸಿಗುತ್ತಿದೆ. ಹೀಗಾಗಿ ಹೆಚ್‍ಡಿಕೆ ವಿರುದ್ಧದ ಜಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವೇ ಹೊಸ ಪಕ್ಷಕ್ಕೆ ನಾಂದಿ ಹಾಡುತ್ತಾ..?, ಅದರಲ್ಲೂ ಸುಮಲತಾ ಅವರ ಹೋರಾಟದ ಜಿದ್ದು ಪಕ್ಷ ಕಟ್ಟೋವರೆಗೂ ಎಳೆದೊಯ್ಯತ್ತಾ?, ಭವಿಷ್ಯದ ರಾಜಕೀಯದ ಕನಸಿನ ಬೀಜ ಹೊಸ ಪಕ್ಷದ ಮೂಲಕ ಮೊಳೆಯುತ್ತಿದೆಯಾ ಎಂಬ ಹಲವಾರು ಚರ್ಚೆಗಳು ನಡೆಯುತ್ತಿದೆ.

    ಹೊಸ ಪಕ್ಷದ ವಿಚಾರದಲ್ಲಿ ಸದ್ಯದ ಸನ್ನಿವೇಶ ಅಪಕ್ವವಾಗಿದೆ. ಆದರೆ ಅಂಥದ್ದೊಂದು ಆಲೋಚನೆ ಸುಮಲತಾ ಮತ್ತು ಅವರ ಬಳಗದಲ್ಲಿ ಇದೆ ಎನ್ನಲಾಗುತ್ತಿದೆ. ಒಂದೊಮ್ಮೆ ಹೊಸ ಪಕ್ಷ ಕಟ್ಟದಿದ್ರೆ ಸುಮಲತಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಕೂಡ ಮೂಡಿದೆ. ಈಗಿನ ಹೋರಾಟ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದು ಪಕ್ಷೇತರರಾಗಿರುವುದರಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯಾವುದಾದರೊಂದು ರಾಷ್ಟ್ರೀಯ ಪಕ್ಷ ಸೇರಬಹುದಾ ಸುಮಲತಾ ಎಂಬ ಚರ್ಚೆಯೂ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷ ಸೇರೋ ಪ್ಲಾನ್ ಇಲ್ದಿದ್ರೆ ಬೇರೆ ರಾಜಕೀಯ ಲೆಕ್ಕಾಚಾರ ಏನಾದ್ರೂ ಹೆಣೆಯಬಹುದು ಎನ್ನಲಾಗಿದೆ.

  • ಮುದ್ದೆ ಉಂಡು ನಿದ್ದೆ ಮಾಡಿ, ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ: ವಿಶ್ವನಾಥ್‍ಗೆ ನಂಜಯ್ಯನಮಠ ಟಾಂಗ್

    ಮುದ್ದೆ ಉಂಡು ನಿದ್ದೆ ಮಾಡಿ, ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ: ವಿಶ್ವನಾಥ್‍ಗೆ ನಂಜಯ್ಯನಮಠ ಟಾಂಗ್

    ಬಾಗಲಕೋಟೆ: ಹೊಟ್ಟೆ ತುಂಬಾ ಮುದ್ದೆ ಉಂಡು, ನಿದ್ದೆ ಮಾಡ್ಕೊಂಡಿರಿ. ಹೊಸ ಪಕ್ಷ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರಿಗೆ ಕಾಂಗ್ರೆಸ್ ನಾಯಕ ಎಸ್.ಜಿ.ನಂಜಯ್ಯನಮಠ ಟಾಂಗ್ ಕೊಟ್ಟಿದ್ದಾರೆ.

    ಅನರ್ಹ ಶಾಸಕರು ಸೇರಿ ಹೊಸ ಪಕ್ಷ ಕಟ್ಟುವುದಾಗಿ ವಿಶ್ವನಾಥ್ ಅವರು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಂಜಯ್ಯನಮಠ ಅವರು ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಕಾಲು, ಆರೋಗ್ಯ ಸರಿಯಿಲ್ಲ. ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ. ಕಾಂಗ್ರೆಸ್ಸಿನಲ್ಲಿ ಬೆಳೆದಿರಿ, ಜೆಡಿಎಸ್‍ನಲ್ಲಿ ಪುನರ್ಜನ್ಮ ಪಡೆದಿರಿ. ಕೊನೆಗೆ ಜೆಡಿಎಸ್‍ನ ಜೀವವನ್ನೇ ತೆಗೆದುಕೊಂಡಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ನಿಮಗೆ ಮಂಗಳಾರತಿ ಮಾಡಲು ಮತದಾರರು ಸಿದ್ದರಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

    ಹೊಸ ಪಕ್ಷವನ್ನು ಕಟ್ಟಿ, ಇದ್ದದ್ದನ್ನು ಕಳೆದುಕೊಂಡವರ ಇತಿಹಾಸ ನೋಡಿಲ್ಲವೆ? ದೇವರಾಜ ಅರಸು, ಬಂಗಾರಪ್ಪನವರು, ಆರ್. ಗುಂಡೂರಾಯರು, ಯಡಿಯೂರಪ್ಪ, ಬಿ. ಶ್ರೀರಾಮಲು ಅವರ ಪರಿಸ್ಥಿತಿ ಏನಾಯಿತು ಎನ್ನುವುದನ್ನ ಅರ್ಥ ಮಾಡಿಕೊಳ್ಳಿ. ನೀವು ಬುದ್ಧಿವಂತರಿದ್ದೀರಿ, ಹೆಚ್ಚಿಗೆ ಓದಿರಿ, ಹೆಚ್ಚಿಗೆ ಬರೆಯಿರಿ, ಹೊಟ್ಟೆ ತುಂಬ ಮುದ್ದೆ ಉಂಡು, ಕಣ್ಣು ತುಂಬ ನಿದ್ದೆ ಮಾಡಿ ಎಂದು ಹಳೆಯ ಸ್ನೇಹಿತನಿಗೆ ಸಲಹೆ ರೂಪದಲ್ಲಿ ನಂಜಯ್ಯನಮಠ ಟಾಂಗ್ ನೀಡಿದರು.