Tag: ಹೊಸ ನೋಟು

  • ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಹೊಸ 500, 2 ಸಾವಿರ ರೂ. ನೋಟುಗಳ ಕುರಿತ ಸ್ಫೋಟಕ ಸುದ್ದಿ..!

    ಬೆಂಗಳೂರು: ಹೊಸ 500 ಮತ್ತು 2000 ರೂ ಮುಖಬೆಲೆಯ ನೋಟುಗಳ ಮರು ಬಳಕೆಯೇ ಅಸಾಧ್ಯ ಎಂದು ನೂತನ ನೋಟುಗಳ ಕುರಿತ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

    500 ಮತ್ತು 1000 ರೂ. ನೋಟುಗಳನ್ನು ಒಂದು ಬಾರಿ ಬಳಕೆಯಾದರೆ, ಮತ್ತೆ ಆ ನೋಟುಗಳನ್ನು ಬಳಸಲು ಸಾಧ್ಯವೇ ಇಲ್ಲ. ಎಟಿಎಂಗಳಲ್ಲಿ ಈ ನೋಟುಗಳನ್ನು ಇಡಲು ಸಾಧ್ಯವಾಗುತ್ತಿಲ್ಲ. ಈಗ ನೋಟು ನಿಷೇಧ ಬಳಿಕ ಬಂದಿರುವ 500 ಮತ್ತು 2 ಸಾವಿರ ರೂ. ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ ಎಂದು ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.

    2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರರು ನೋಟು ನಿಷೇಧ ಮಾಡಿದ್ದರು. ಬಳಿಕ 500 ಹಾಗೂ 2000 ರೂ. ಮುಖಬೆಲೆಯನ್ನು ಚಲಾವಣೆಗೆ ತಂದಿದ್ದಾರೆ. ಈ ಮೊದಲೆ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ಮತ್ತೆ ಹೊಸ ನೋಟುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಒಂದು ಬಾರಿ ನೂತನ ನೋಟುಗಳನ್ನು ಬಳಸಿದರೆ ಮತ್ತೆ ಎಟಿಎಂಗೆ ಬಳಸಿದ ನೋಟುಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಳಸಿದ ನೋಟನ್ನು ಎಟಿಎಂಗೆ ಹಾಕಿದರೆ, ಜನರು ಹಣ ಡ್ರಾ ಮಾಡುವಾಗ ಎಟಿಎಂನಲ್ಲಿ ಅಳವಡಿಸಿರುವ ಸೆನ್ಸಾರ್ ಬಳಸಿದ ನೋಟನ್ನು ಸೆನ್ಸಾರ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಳಸಿದ ನೋಟುಗಳನ್ನು ‘ಅನುಪಯುಕ್ತ ನೋಟು’ ಗಳೆಂದು ವಿಂಗಡಿಸಿ ಆರ್ ಬಿಐ  ಗೆ ಬ್ಯಾಂಕುಗಳು ವಾಪಸ್ ಕಳಿಸುತ್ತಿದೆ ಎಂದು ವರದಿಯಾಗಿದೆ.

    ಆರ್ ಬಿಐ ಈ ಬಗ್ಗೆ ಪ್ರತಿಕ್ರಿಯಿಸಿ, ನೋಟಿನ ಗುಣಮಟ್ಟ ಉತ್ತಮವಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಆದರೆ ಬ್ಯಾಂಕ್ ಗಳು ಮಾತ್ರ ಬಳಸಿದ ನೋಟುಗಳನ್ನು ಅನುಪಯುಕ್ತ ನೋಟು ಎಂದು ವಾಪಸ್ ಕಳುಹಿಸುತ್ತಿದೆ. ಇದೇ ರೀತಿ ಅನುಪಯುಕ್ತ ನೋಟುಗಳನ್ನು ವಾಸಪ್ ಕಳುಹಿಸಿದರೆ ನೋಟುಗಳ ಚಲಾವಣೆಯಲ್ಲಿ ಕಡಿಮೆಯಾಗುತ್ತದೆ. ಮತ್ತೆ ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

    ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಶೀಘ್ರದಲ್ಲೇ ಹೊಸ ವಿನ್ಯಾಸದ 10 ರೂ. ನೊಟುಗಳನ್ನ ಬಿಡುಗಡೆಗೊಳಿಸಿದೆ. ಸದ್ಯ ಹೊಸ ನೋಟುಗಳ ಚಿತ್ರವನ್ನ ಆರ್‍ಬಿಐ ಬಿಡುಗಡೆ ಮಾಡಿದೆ.

    ಹೊಸ 10 ರೂ. ನೋಟಿನಲ್ಲಿ ಕೊನಾರ್ಕ್ ಸೂರ್ಯ ದೇವಾಲಯ(ಸನ್ ಟೆಂಪಲ್) ನ ಚಿತ್ರವಿದೆ. ಮಹಾತ್ಮಾ ಗಾಂಧಿ ಹೊಸ ಸರಣಿಯ ಈ ನೋಟುಗಳಲ್ಲಿ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.

    ನೋಟಿನ ಬಣ್ಣ ಕಂದು(ಚಾಕ್ಲೆಟ್ ಬ್ರೌನ್) ಆಗಿದ್ದು, ಇತರೆ ಡಿಸೈನ್‍ಗಳಿವೆ. ನೋಟಿನ ಮುಂಭಾಗದ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರವಿದೆ. ಸಣ್ಣ ಅಕ್ಷರದಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 10ರ ಮುದ್ರಣವಿದೆ. ಮಹಾತ್ಮಾ ಗಾಂಧೀಜಿ ಚಿತ್ರದ ಬಲಭಾಗಕ್ಕೆ ಆರ್‍ಬಿಐ ಗವರ್ನರ್ ಸಹಿ, ಆರ್‍ಬಿಐ ಲಾಂಛನ ಹಾಗೂ ಅಶೋಕ ಸ್ತಂಭದ ಲಾಂಛನವಿದೆ. ಮಹಾತ್ಮಾ ಗಾಂಧಿ ಚಿತ್ರ ಹಾಗೂ 10 ರೂ. ವಾಟರ್‍ಮಾರ್ಕ್ ಇದೆ. ಮೇಲಿನ ಎಡಭಾಗ ಹಾಗೂ ಕೆಳಗಿನ ಬಲಭಾಗದಲ್ಲಿ ಸಣ್ಣ ಗ್ರಾತದಿಂದ ದೊಡ್ಡದ್ದಕ್ಕೆ ಸಾಗುವ ನಂಬರ್ ಪ್ಯಾನೆಲ್ ಇದೆ.

    ನೋಟಿನ ಹಿಂಭಾಗದಲ್ಲಿ ನೋಟು ಮುದ್ರಣದ ವರ್ಷ, ಸ್ವಚ್ಛ ಭಾರತ್ ಲಾಂಛನ ಹಾಗೂ ಘೋಷವಾಕ್ಯ ಮತ್ತು ಭಾಷೆಗಳ ಪ್ಯಾನೆಲ್ ಇದೆ. ಸೂರ್ಯ ದೇವಾಲಯ ಚಿತ್ರ ಹಾಗೂ ದೇವನಾಗರಿಯಲ್ಲಿ ಸಂಖ್ಯೆ 10 ಮುದ್ರಿಸಲಾಗಿದೆ. ನೋಟಿನ ಅಳತೆ 63ಮಿಮಿ * 123ಮಿಮಿ ಇರಲಿದೆ.

    ಈ ಹಿಂದಿನ ಸರಣಿಯಲ್ಲಿ ಬಿಡುಗಡೆಗೊಂಡಿರೋ ಹಳೇ 10 ರೂ. ನೋಟುಗಳು ಕೂಡ ಚಲಾವಣೆಯಲ್ಲಿ ಇರಲಿವೆ ಎಂದು ಆರ್‍ಬಿಐ ತಿಳಿಸಿದೆ.

    2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.

    ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್‍ ಬಿಐ ಬಿಡುಗಡೆ ಮಾಡಿತ್ತು.

  • ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?

    ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?

    ನವದೆಹಲಿ: ಹೊಸ 2 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳ ನಕಲು ತಡೆಯುವ ಸಲುವಾಗಿ ಪ್ರತಿ 3-4 ವರ್ಷಗಳಿಗೊಮ್ಮೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಈ ನೋಟುಗಳ ಭದ್ರತಾ ವೈಶಿಷ್ಟ್ಯಗಳನ್ನು ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.

    ನೋಟ್‍ಬ್ಯಾನ್ ಆದ ಬಳಿಕ ಕಳೆದ 4 ತಿಂಗಳಲ್ಲಿ ಹೆಚ್ಚಿನ ಮೊತ್ತದ ನಕಲಿ ನೋಟ್‍ಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ನಿಧಾರವನ್ನು ತೆಗೆದುಕೊಳ್ಳಲಾಗಿದೆ.

    ಈ ಬಗ್ಗೆ ಗುರುವಾರದಂದು ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಹಣಕಾಸು ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹ್ರಿಶಿ ಈ ಸಭೆಯಲ್ಲಿ ಭಾಗವಹಿಸಿದ್ದರು.

    ಈ ನಿಧಾರದ ಬಗ್ಗೆ ಗೃಹ ಇಲಾಖೆಯ ಅಧಿಕಾರಿಗಳು ಪ್ರಸ್ತಾಪಿಸಿ, ಬಹುತೇಕ ಮುಂದುವರಿದ ದೇಶಗಳು ತಮ್ಮ ಕರೆನ್ಸಿ ನೋಟ್‍ಗಳ ಭದ್ರತಾ ವೈಶಿಷ್ಟ್ಯಗಳನ್ನು 3-4 ವಷಗಳಿಗೊಮ್ಮೆ ಬದಲಾಯಿಸುತ್ತವೆ. ಆದ್ದರಿಂದ ಭಾರತವೂ ಕೂಡ ಈ ನಿಯಮ ಅನುಸರಿಸುವುದು ಅವಶ್ಯಕ ಎಂದು ಹೇಳಿದ್ದಾರೆ.

    ನೋಟ್‍ಬ್ಯಾನ್ ಗಿಂತಲೂ ಮುಂಚೆ ಇದ್ದ ಗರಿಷ್ಠ ಮುಖಬೆಲೆಯ 1 ಸಾವಿರ ರೂ. ನೋಟಿನಲ್ಲಿ ದೀರ್ಘ ಕಾಲದ ವರೆಗೆ ಯಾವುದೇ ದೊಡ್ಡ ಬದಲಾವಣೆ ಆಗಿರಲಿಲ್ಲ.

    ಇತ್ತೀಚೆಗೆ ಜಪ್ತಿ ಮಾಡಲಾದ ಹಲವು ನಕಲಿ ನೋಟ್‍ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹೊಸ 2 ಸಾವಿರ ರೂ. ನೋಟಿನಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಅನುಕರಿಸಿರುವುದು ಪತ್ತೆಯಾಗಿದೆ. ಇವುಗಳಲ್ಲಿ ನೋಟಿನಲ್ಲಿನ ಪಾರದರ್ಶಕ ಭಾಗ, ವಾಟರ್ ಮಾರ್ಕ್, ಅಶೋಕ ಸ್ತಂಭ, ಎಡಭಾಗದಲ್ಲಿನ 2000 ರೂ. ಮುದ್ರಣ, ದೇವನಾಗರಿ ಲಿಪಿಯಲ್ಲಿರೋ ನೋಟಿನ ಮುಖಬೆಲೆಯ ಮುದ್ರಣವೂ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಚಂದ್ರಯಾನ್‍ನ ಚಿತ್ರ, ಸ್ವಚ್ಛ ಭಾರತ ಲಾಂಛನ ಹಾಗೂ ನೋಟು ಮುದ್ರಣದ ವರ್ಷವನ್ನ ನೋಟಿನ ವಿರುದ್ಧ ಭಾಗದಲ್ಲಿ ನಕಲು ಮಾಡಲಾಗಿದೆ. ನಕಲಿ ನೋಟುಗಳ ಮುದ್ರಣ ಹಾಗೂ ಪೇಪರ್ ಗುಣಮಟ್ಟ ಕಳಪೆಯಾಗಿದ್ರೂ ಅವು ಒರಿಜಿನಲ್ ನೋಟುಗಳನ್ನೇ ಹೋಲುವಂತಿವೆ.

    ನೋಟುಗಳ ಭದ್ರತಾ ವೈಶಿಷ್ಟ್ಯಗಳನ್ನ 3-4 ವರ್ಷಗಳಿಗೊಮ್ಮೆ ಬದಲಾಯಿಸೋದ್ರಿಂದ ದೊಡ್ಡ ಪ್ರಮಾಣದಲ್ಲಿ ನಕಲಿ ನೋಟುಗಳಿಗೆ ಬ್ರೇಕ್ ಹಾಕಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    2016ರಲ್ಲಿ ಕೋಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಸ್ಯೂಟ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 400 ಕೋಟಿ ರೂ. ಮೌಲ್ಯದಷ್ಟು ನಕಲಿ ನೋಟು ಚಲಾವಣೆಯಲ್ಲಿದೆ ಎಂದು ವರದಿಯಾಗಿತ್ತು.