Tag: ಹೊಸ ತೊಡಕು

  • ಬಿಡದಿ ತೋಟದ ಮನೆಯಲ್ಲಿ ಹೆಚ್‍ಡಿಕೆ ಆಯೋಜಿಸಿದ್ದ ಔತಣಕೂಟ ರದ್ದು

    ಬಿಡದಿ ತೋಟದ ಮನೆಯಲ್ಲಿ ಹೆಚ್‍ಡಿಕೆ ಆಯೋಜಿಸಿದ್ದ ಔತಣಕೂಟ ರದ್ದು

    ರಾಮನಗರ: ಹೊಸತೊಡಕು ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿಯವರು (HD Kumaraswamy) ಬಿಡದಿ ತೋಟದ ಮನೆಯಲ್ಲಿ  ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಲಾಗಿದೆ.

    ಹೆಚ್‍ಡಿಕೆ ಬಿಡದಿ ತೋಟದ ಮನೆಯಲ್ಲಿ ಔತಣಕೂಟದ ಜೊತೆಗೆ ಒಕ್ಕಲಿಗ ನಾಯಕರ ಸಭೆಯನ್ನು ಇಂದು ಕರೆಯಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ- ಮೈತ್ರಿ ನಾಯಕರು ನಿರ್ಮಲಾನಂದ ಶ್ರೀಗಳ ಭೇಟಿಗೆ ಡಿಕೆಶಿ ಆಕ್ಷೇಪ

    ಊಟದ ವ್ಯವಸ್ಥೆ, ಚೇರ್, ಪೆಂಡಾಲ್ ಪರಿಶೀಲನೆ ನಡೆಸಿದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಸೇರಿದ್ರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತೆ. ಕುಟುಂಬಸ್ಥರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಬಹುದು. ಆದರೆ ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ. ಒಂದು ವೇಳೆ ರಾಜಕೀಯ ಮುಖಂಡರು ಬಂದ್ರೆ ಎಲ್ಲವನ್ನೂ ಸೀಜ್ ಮಾಡಿ ಕೇಸ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಎಂಸಿಸಿ ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆ ಆದ್ರೆ ಕಾನೂನು ರೀತಿಯ ಕ್ರಮವಹಿಸುತ್ತೇವೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಹೇಳಿದ್ದಾರೆ. ಜೊತೆಗೆ 50ಕ್ಕಿಂತ ಹೆಚ್ಚುವರಿ ಚೇರ್ ಶಾಮಿಯಾನವನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ.

    ಸದ್ಯ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಸಭೆ ರದ್ದು ಮಾಡಿದ್ದಾರೆ.

  • ಇಂದು ಮಟನ್‍ಗೆ ಭಾರೀ ಬೇಡಿಕೆ- ಬನ್ನೂರು ಕುರಿ ಮಾಂಸಕ್ಕೂ ಹೆಚ್ಚಿದ ಡಿಮಾಂಡ್!

    ಇಂದು ಮಟನ್‍ಗೆ ಭಾರೀ ಬೇಡಿಕೆ- ಬನ್ನೂರು ಕುರಿ ಮಾಂಸಕ್ಕೂ ಹೆಚ್ಚಿದ ಡಿಮಾಂಡ್!

    ಬೆಂಗಳೂರು: ಹಿಂದೂಗಳ ಹೊಸ ವರ್ಷ ನಿನ್ನೆಯಿಂದ ಆರಂಭವಾಗಿದೆ. ಯುಗದ ಆದಿ ಶುರುವಾಗೋ ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು. ಇಂದು ಮನೆಯವರಲ್ಲೇ ಸೇರಿ ನಾನ್ ವೆಜ್ ಮಾಡಿ ತಿನ್ನೋದು ಸಂಪ್ರದಾಯ. ಹೊಸತೊಡಕು (Hosatodaku) ಮತ್ತು ಗುರುವಾರ ರಂಜಾನ್‌ ಒಟ್ಟಿಗೆ ಇರುವುದರಿಂದ ಮಟನ್‍ಗೆ (Mutton) ಭಾರೀ ಬೇಡಿಕೆ ಶುರುವಾಗಿದೆ.

    ಹೌದು. ಇಂದು ಹೊಸತೊಡಕಿನ ದಿನ. ನಿನ್ನೆ ಯುಗಾದಿ ಹಬ್ಬ (Ugadi 2024) ಮಾಡಿ, ದೇವರಿಗೆ ದೀಪ ಹಚ್ಚಿ ಬೇವು-ಬೆಲ್ಲಾ ತಿಂದು, ಹೋಳಿಗೆಯ ರುಚಿ ನೋಡಿದ್ದವರು ಇಂದು ಬಗೆ-ಬಗೆಯ ಮಾಂಸಹಾರವನ್ನ ಮಾಡಿ ಮನೆಮಂದಿಯಲ್ಲರೂ ಸೇರಿ ಹಬ್ಬ ಮಾಡುತ್ತಾರೆ. ಮಾಂಸಹಾರ ಅಂದ್ಮೇಲೆ ಅಲ್ಲಿ ಕುರಿ, ಮೇಕೆ ಮಾಂಸ ಇಲ್ಲ ಅಂದ್ರೇ ಆಗುತ್ತಾ? ನಾರ್ಮಲ್ ಆಗಿ ಒಂದು ಕೆ.ಜಿ ತರೋರು ಕೂಡ ಹಬ್ಬದ ಕಾರಣ ಹೆಚ್ಚು ಮಾಂಸವನ್ನ ಖರೀದಿಸಿ ಭರ್ಜರಿ ಬಾಡೂಟ ಮಾಡಿ ಖುಷಿ ಪಡ್ತಾರೆ. ಇದನ್ನೂ ಓದಿ: ಏನಿದು ಚಾಂದ್ರಮಾನ, ಸೌರಮಾನ ಯುಗಾದಿ?

    ಈ ಸಲ ರಂಜಾನ್ ಕೂಡ ಜೊತೆಗೆ ಬಂದಿದ್ದು, ಹೀಗಾಗಿ ಮಟನ್‍ಗೆ ಭಾರೀ ಬೇಡಿಕೆ ಬಂದಿದ್ದು, ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಬುಧವಾರ ಕೂಡ ಆಗಿರುವುದರಿಂದ ಹೆಚ್ಚಿನ ವ್ಯಾಪಾರ ಕೂಡ ಆಗುವ ನೀರಿಕ್ಷೆ ಇದ್ದು, ಈಗಾಗಲೇ ಮಾಂಸ ವ್ಯಾಪಾರಿಗಳು ಹಬ್ಬಕ್ಕಾಗಿ ಕುರಿ ಮೇಕೆಗಳನ್ನ ರೈತರಿಂದ ಖರೀದಿಸಿದ್ದಾರೆ. ರೈತರು ಸಹ ಎರಡು ಹಬ್ಬ ಒಟ್ಟಿಗೆ ಬಂದಿರೋದ್ರಿಂದ ಹೆಚ್ಚಿನ ಲಾಭಕ್ಕೆ ಮರಿಗಳನ್ನ ಮಾರಾಟ ಮಾಡುತ್ತಿದ್ದಾರೆ.

    ಕುರಿ-ಮೇಕೆ ಮಾಂಸಕ್ಕೆ ರೇಟ್ ಒಂದಾದ್ರೆ, ದಿ ಫೇಮಸ್ ಬನ್ನೂರು ಮಟನ್‍ಗೂ ಭಾರೀ ಬೇಡಿಕೆ ಶುರುವಾಗಿದೆ. ಮಾಂಸ ಪ್ರಿಯರಂತೂ ಬನ್ನೂರು ಮಟನ್ ತಿನ್ನಲೇಬೇಕು ಅಂತ ಫಿಕ್ಸ್ ಆಗಿದ್ದಾರೆ. ಆದರೆ ಅದರ ಮಟನ್ ರೇಟ್ ಕೂಡ ಹೆಚ್ಚಾಗಿದೆ. ಅದರಲ್ಲೂ ಇವತ್ತಿನ ವಿಶೇಷ ಅಂದ್ರೆ ಗುಡ್ಡೆ ಮಾಂಸವನ್ನೇ ತಿನ್ನಬೇಕು ಅನ್ನೋದೇ ವಾಡಿಕೆ.

    ಒಟ್ಟಿನಲ್ಲಿ ಹೊಸತೊಡಕಿಗಾಗಿ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕುರಿ, ಮೇಕೆಗಳು ಬಂದಿದ್ದು, ಕೆಜಿ ಗುಡ್ಡೆ ಮಟನ್ ಮಾಂಸಕ್ಕೆ 800 ರಿಂದ 900 ರವರಗೆ ಆಗಿದೆ. ವರ್ಷಕ್ಕೆ ಒಂದು ಸಲ ಬರೋ ಹಬ್ಬ, ರೇಟ್ ಜಾಸ್ತಿ ಅದ್ರೂ ಹಬ್ಬ ಮಾಡ್ಲೇಬೇಕು ಎಂದು ಜನ ಹೊಸತೊಡಕಿನ ಮಾಂಸಹಾರವನ್ನ ಸವಿಯಲು ಖರೀದಿ ಭರಾಟೆಯಲ್ಲಿದ್ದಾರೆ.

  • ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಯುಗಾದಿ ಹಬ್ಬದ ಮಾರನೇ ದಿನ ಆಚರಣೆ ಮಾಡೋದು ಹೊಸ ತೊಡಕು. ಯುಗಾದಿಯಂದು ಸಿಹಿ ಅಡುಗೆಗಳನ್ನು ಮಾಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತೇವೆ. ಅದರ ಮರುದಿನ ಏನಿದ್ದರೂ ಎಲ್ಲೆಡೆ ಬಾಡೂಟದ್ದೇ ಕಾರುಬಾರು. ಚಿಕನ್, ಮಟನ್ ಅಂತ ವಿವಿಧ ಭಕ್ಷ್ಯಗಳನ್ನು ಮಾಡಿ, ಹೊಸ ತೊಡಕನ್ನು ಸಂಭ್ರಮಿಸುತ್ತೇವೆ. ನಾವಿಂದು ಹೊಸ ತೊಡಕಿಗೆ ಸ್ಪೆಷಲ್ ರುಚಿಯಾದ ಮಟನ್ ಕರಿ (Mutton Curry) ರೆಸಿಪಿ ಹೇಳಿಕೊಡುತ್ತೇವೆ. ಈ ದಿನ ಬಾಡೂಟ ಸವಿದು ಹೊಸತೊಡಕನ್ನು ನೀವೂ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆ.ಜಿ
    ಬೆಳ್ಳುಳ್ಳಿ – 1
    ಅರಿಶಿನ – ಚಿಟಿಕೆ
    ಲವಂಗ – 7
    ಏಲಕ್ಕಿ – 3
    ಕೆಂಪು ಮೆಣಸಿನಕಾಯಿ – 8
    ಈರುಳ್ಳಿ – 4
    ತುರಿದ ಕೊಬ್ಬರಿ – 2 ಕಪ್
    ಗಸಗಸೆ – 2 ಟೀಸ್ಪೂನ್
    ಕಾಳು ಮೆಣಸು – 8
    ಖಾರದ ಪುಡಿ – 2 ಟೀಸ್ಪೂನ್
    ಶುಂಠಿ – 1 ಇಂಚು
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 5 ಟೀಸ್ಪೂನ್ ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸರ್ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ತೊಳೆದು ಸಣ್ಣಗೆ ಕತ್ತರಿಸಿದ ಮಟನ್‌ಗೆ ರುಬ್ಬಿದ ಪದಾರ್ಥಗಳನ್ನು ಸವರಿ ಒಂದೂವರೆ ಗಂಟೆ ಇಡಿ.
    * ತುರಿದ ಕೊಬ್ಬರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕತ್ತರಿಸಿದ 1 ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಉಳಿದಿರುವ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿ, ಚಿಟಿಕೆ ಅರಿಶಿನ ಸೇರಿಸಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು.
    * ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರಿ ಸವಿಯಲು ಸಿದ್ಧ. ಇದನ್ನೂ ಓದಿ: ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

  • ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    – ಮಟನ್ ಅಂಗಡಿ ಮುಂದೆ ಸರತಿ ಸಾಲು

    ಬೆಂಗಳೂರು: ಇಂದು ಯುಗಾದಿ ಹೊಸತೊಡಕು. ಹೀಗಾಗಿ ಬೆಳಗ್ಗೆಯಿಂದಲೇ ಎಲ್ಲಾ ಕಡೆ ಮಟನ್ ಸ್ಟಾಲ್‍ಗಳತ್ತ ಜನ ಮುಖ ಮಾಡಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಅಂತೂ ಸಾವಿರಾರು ಜನ ಸೇರಿದ್ದಾರೆ. ಮಟನ್‍ಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂ ಕಂಡುಬರುತ್ತಿದೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಕೊರೊನಾ ನಿಯಮಗಳು ಕಾಗದಗಳಿಗೆ ಮಾತ್ರ ಸೀಮಿತವಾದಂತೆ ಕಾಣಿಸುತ್ತಿದೆ. ಬೆಳಗಿನ ಜಾವ 5 ಗಂಟೆಗೆ ನೈಟ್ ಕಫ್ರ್ಯೂ ಮುಗಿಯುತ್ತಿದ್ದಂತೆ ಜನ ರಸ್ತೆಗೆ ಇಳಿಯುತ್ತಿದ್ದಾರೆ. ಕಳೆದರಡು ದಿನಗಳಿಂದ ಯುಗಾದಿ ಹಿನ್ನೆಲೆ ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಇಂದು ಹೊಸ ತೊಡಕು ಹಿನ್ನೆಲೆ ಮಟನ್ ಸ್ಟಾಲ್ ಗಳ ಮುಂದೆ ಕ್ಯೂ ಕಾಣಿಸುತ್ತಿವೆ.

    ಹಾಸನದಲ್ಲಿ ಜನ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಸನದಲ್ಲಿ ಪ್ರತಿದಿನ ಸುಮಾರು 100 ರಿಂದ 150 ಜನರಿಗೆ ಕೊರೊನಾ ಪಾಸಿಟಿವ್ ಬರುತ್ತಿದೆ. ಆದರೂ ಕೂಡ ಮಟನ್ ಮಾರುಕಟ್ಟೆಗೆ ಬರುವ ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.