Tag: ಹೊಸ ಜಿಲ್ಲೆ

  • 19 ಹೊಸ ಜಿಲ್ಲೆಗಳ ರಚನೆ – 50ಕ್ಕೇರಿದ ರಾಜಸ್ಥಾನ ಜಿಲ್ಲೆಗಳು

    19 ಹೊಸ ಜಿಲ್ಲೆಗಳ ರಚನೆ – 50ಕ್ಕೇರಿದ ರಾಜಸ್ಥಾನ ಜಿಲ್ಲೆಗಳು

    ಜೈಪುರ: ರಾಜಸ್ಥಾನ (Rajasthan) ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಶುಕ್ರವಾರ 19 ಹೊಸ ಜಿಲ್ಲೆಗಳನ್ನು ರಚಿಸಿರುವುದಾಗಿ ಘೋಷಣೆ ಮಾಡಿದ್ದಾರೆ.

    ಶುಕ್ರವಾರ ರಾಜಸ್ಥಾನದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ (Budget Session) ಹೊಸ ಜಿಲ್ಲೆಗಳು ಮತ್ತು ವಿಭಾಗಗಳ ರಚನೆಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: 130 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮ – ಮುಸ್ಲಿಮರಿಗೆ ಕಡಿಮೆ ಟಿಕೆಟ್ ಸಾಧ್ಯತೆ

    ಹೊಸ ಜಿಲ್ಲೆಗಳು ಯಾವುವು?
    ಅನೂಪ್‌ಗಢ, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್ ನಗರ, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ, ಖೈರ್ತಾಲ್, ನೀಮ್ಕಥಾನ, ಫಲೋಡಿ, ಸಾಲುಂಬರ್, ಸಂಚೋರ್, ಶಹಪುರ (ಭಿಲ್ವಾರ) ಹೊಸ ಜಿಲ್ಲೆಗಳಾಗಿವೆ. ಇದನ್ನೂ ಓದಿ: ನನ್ನ ದೇಹ ಮಾರಿ ಕೋಟಿಗಟ್ಟಲೆ ಸಂಪಾದಿಸಿದ್ರು, ನನಗೆ ನ್ಯಾಯ ಕೊಡಿಸಿ – ಪೊಲೀಸರ ಮೊರೆಹೋದ ಸಂತ್ರಸ್ತೆ

    ಈ ಹೊಸ 19 ಜಿಲ್ಲೆಗಳೊಂದಿಗೆ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಬನ್‌ಸ್ವಾರಾ, ಪಾಕಿ ಹಾಗೂ ಸಿಕಾರ ಮೂರು ಹೊಸ ವಿಭಾಗಗಳನ್ನು ಗುರುತಿಸಲಾಗಿದ್ದು, ರಾಜ್ಯದ ಒಟ್ಟು ವಿಭಾಗಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

  • ತೀವ್ರ ಸ್ವರೂಪ ಪಡೆದ ಜಮಖಂಡಿ ಜಿಲ್ಲಾ ಬೇಡಿಕೆ – ಇಂದು ಬಂದ್

    ತೀವ್ರ ಸ್ವರೂಪ ಪಡೆದ ಜಮಖಂಡಿ ಜಿಲ್ಲಾ ಬೇಡಿಕೆ – ಇಂದು ಬಂದ್

    ಬಾಗಲಕೋಟೆ: ಜಮಖಂಡಿ ಹೊಸ ಜಿಲ್ಲೆ ಮಾಡಬೇಕು ಎಂಬ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಇಂದು ಜಮಖಂಡಿ ನಗರ ಬಂದ್‍ಗೆ ಕರೆ ನೀಡಲಾಗಿದೆ.

    ಜಮಖಂಡಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಿದ್ದು, ಅಂಗಡಿಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಇದರ ಜೊತೆಗೆ ಬಸ್ ಸಂಚಾರ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಇಂದು ಬಂದ್ ಆಗಲಿದೆ.

    ಈ ಬಂದ್‍ನಲ್ಲಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಂದ್‍ನಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಭಾಗಿಯಾಗಲಿದ್ದು, ಜಮಖಂಡಿ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಮತ್ತು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಭಾಗಿಯಾಗಲಿದ್ದಾರೆ.

    ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಯಲಿದ್ದು, ಹೋರಾಟದ ನೇತೃತ್ವವನ್ನು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿ ಸದಸ್ಯರು, ಜಮಖಂಡಿ ಭಾಗದ 25ಕ್ಕೂ ಹೆಚ್ಚು ಮಠಾಧೀಶರು ಮತ್ತು ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನಾ ರ್ಯಾಲಿ ಶುರುವಾಗಲಿದ್ದು, ಹನುಮಾನ ಚೌಕದಿಂದ ದೇಸಾಯಿ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ಸಾಗಲಿದೆ.

    ಈಗಾಗಲೇ ಹೊಸ ಜಿಲ್ಲೆ ಹೋರಾಟಕ್ಕೆ ಶಾಸಕರಾದ ಆನಂದ ನ್ಯಾಮಗೌಡ ಮತ್ತು ಸಿದ್ದು ಸವದಿ ಬೆಂಬಲಿಸೋದಾಗಿ ಹೇಳಿದ್ದು, ನಾಳೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಹೋರಾಟಗಾರರು ಸಿಎಂಗೆ ಹೊಸ ಜಿಲ್ಲೆ ಮಾಡಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.