Tag: ಹೊಸವರ್ಷ

  • ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಬೆಂಗಳೂರು: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಬಂಪರ್ ಆಫರ್ ನೀಡಲು ಮುಂದಾಗಿದೆ.

    ಪಾಲಿಕೆ ಆಸ್ಪತ್ರೆಯಲ್ಲಿ ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ವಗುವಿಗೆ ಅದೃಷ್ಟ ಲಕ್ಷ್ಮಿ ಒಲಿದಿದೆ. ಹೊಸ ವರ್ಷದ ಮಧ್ಯರಾತ್ರಿ 12 ಗಂಟೆಗೆ ಹುಟ್ಟುವ ಮೊದಲ ಮಗುವಿಗೆ ಅಂದರೆ 2018ನೇ ವರ್ಷದ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಮೇಯರ್ 5 ಲಕ್ಷ ರೂ. ಮೊತ್ತದ ನಗದು ಉಡುಗೊರೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

    ಮಗುವಿನ ಹೆಸರಲ್ಲಿ ಮತ್ತು ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ಮಾಡಿಸಿ, ಆ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. ಆ ಮಗುವಿಗೆ 18 ವರ್ಷವಾದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಹಣ ಬಳಕೆ ಮಾಡಿಕೊಳ್ಳಬಹುದು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ. ಸಹಜ ಹೆರಿಗೆ ಮೂಲಕ ಹುಟ್ಟುವ ಮಗುವಿಗೆ ಮಾತ್ರ ಈ ಸದಾವಕಾಶ ಲಭಿಸಲಿದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಸಂಪತ್ ರಾಜ್, ಇವತ್ತಿನ ಕಾಲದಲ್ಲಿ ಹೆಣ್ಣು ಮಗು ಅಂದರೆ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹೆಣ್ಣು ಮಕ್ಕಳು ನಮ್ಮಂತೆ ಸರಿ ಸಮಾನರಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅಂತಹ ಹೆಣ್ಣು ಮಕ್ಕಳು ಎಷ್ಟು ಮುಖ್ಯ ಎಂದು ನಾವು ಪ್ರೋತ್ಸಾಹಿಸುವ ಸಲುವಾಗಿ ಈ ರೀತಿಯ ಯೋಜನೆಯನ್ನು ಮಾಡಿದ್ದೇವೆ ಅಂದ್ರು.

    ಮಧ್ಯರಾತ್ರಿ ಸಹಜ ಹೆರಿಗೆಯಿಂದ ಜನಿಸಿದ ಮಗುವಿಗೆ 5 ಲಕ್ಷ ರೂ. ಜಾಯಿಂಟ್ ಅಕೌಂಟ್ ಮಾಡಿಸಿ ಹಾಕುತ್ತೇವೆ. ಅದರ ಬಡ್ಡಿಯನ್ನು ಮಗುವಿನ ಉತ್ತಮ ಶಿಕ್ಷಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ರು.

     

     

  • ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನಲೆ ಪೂರ್ವ ಸಿದ್ಧತೆಯ ಭದ್ರತೆ ವೀಕ್ಷಿಸಲು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಭೇಟಿ ನೀಡಿದರು.

    ಮುಂಜಾಗ್ರತಾ ಕ್ರಮವಾಗಿ ಎಲ್ಲೆಲ್ಲಿ ಸಿಸಿಟಿವಿ, ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಎಷ್ಟು ಸಿಬ್ಬಂದಿ ಭದ್ರತೆ ನಿಯೋಜನೆಗೆ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿದ್ರು.

    ಇನ್ನು ಭದ್ರತೆಯಲ್ಲಿರುವ ಎಲ್ಲಾ ಪೊಲೀಸರಿಗೆ ಇದೇ ಮೊದಲ ಬಾರಿಗೆ ರಿಫ್ಲೆಕ್ಟ್ ಜಾಕೆಟ್ಸ್, ಹೈ ಡೆಫಿನೇಷನ್ 500 ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಅನಿವಾರ್ಯ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗುವುದೆಂದು ಅವರು ತಿಳಿಸಿದರು.

  • ನ್ಯೂ ಇಯರ್ ಗೆ ಸನ್ನಿ ಬರ್ತಾಳೆಂದು ಕಾಯ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

    ನ್ಯೂ ಇಯರ್ ಗೆ ಸನ್ನಿ ಬರ್ತಾಳೆಂದು ಕಾಯ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

    ಬೆಂಗಳೂರು: ಹೊಸ ವರ್ಷ ಆಚರಣೆಗೆ ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಕುರಿತು ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಸ್ವತಃ ಸನ್ನಿ ನಾನು ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು

    ಕರವೇ ಸಂಘಟನೆ ವಿರೋಧ ವ್ಯಕ್ತಪಡಿಸಿದ್ರಿಂದ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸನ್ನಿ ಕಾರ್ಯಕ್ರಮಕ್ಕೆ ಪರ್ಮಿಷನ್ ಕೊಡಬಾರದು ಅಂತಾ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದ ಬೆನ್ನಲ್ಲೇ ಸನ್ನಿ ಕೂಡ ಪ್ರತಿಕ್ರಿಯಿಸಿದ್ದಾರೆ. ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    ಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಸೀರೆ ಉಟ್ಕೊಂಡು ಬರಲಿ- `ಸನ್ನಿ ನೈಟ್ಸ್’ ಆಯೋಜಕರಿಗೆ ಕರವೇ ಸವಾಲು

    ಸದ್ಯ ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಸರ್ಕಾರದ ನಿಲುವಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ನಡೆಯನ್ನ ಕೋರ್ಟ್ ಹೇಗೆ ನೋಡುತ್ತದೆ ಎಂಬ ಕುತೂಹಲ ಹುಟ್ಟಿದೆ.