Tag: ಹೊಸವರ್ಷ ಆಚರಣೆ

  • ವೈರಲ್ ಆಯ್ತು ಪೊಲೀಸರ ಹೊಸ ವರ್ಷಾಚರಣೆ ವಿಡಿಯೋ- ಅರಕ್ಷಕರ ನಾಚ್‍ಗಾನಕ್ಕೆ ಜನ ಗರಂ

    ವೈರಲ್ ಆಯ್ತು ಪೊಲೀಸರ ಹೊಸ ವರ್ಷಾಚರಣೆ ವಿಡಿಯೋ- ಅರಕ್ಷಕರ ನಾಚ್‍ಗಾನಕ್ಕೆ ಜನ ಗರಂ

    ಚಿತ್ರದುರ್ಗ: ಜಿಲ್ಲೆಯಲ್ಲಿ ಹೊಸ ವರ್ಷಕ್ಕೆ ಸಾರ್ವಜನಿಕ ಸಭೆ-ಸಮಾರಂಭ ಮಾಡದಂತೆ ಎಸ್ಪಿ ಸೂಚನೆ ನೀಡಿ, ಬಳಿಕ ಪೊಲೀಸರೇ ಪಾರ್ಟಿ ಮಾಡಿಕೊಂಡು ನ್ಯೂ ಇಯರ್ ಆಚರಣೆ ಮಾಡಿದಕ್ಕೆ ಜನರು ಗರಂ ಆಗಿದ್ದಾರೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನ ಪೊಲೀಸರ ಹಾಡು, ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಸದುರ್ಗ ಪಟ್ಟಣದ ಎಪಿಎಂಸಿ ಯಾರ್ಡಿನಲ್ಲಿ ಪೊಲೀಸರೆಲ್ಲ ಸೇರಿ ಭರ್ಜರಿ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಆದ್ರೆ ಈ ಭರ್ಜರಿ ಪಾರ್ಟಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದಕ್ಕೆ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜನವರಿ 1ರಂದು ಹೊಸದುರ್ಗ ಪೊಲೀಸರು ಹೊಸ ವರ್ಷಕ್ಕೆ ಪಾರ್ಟಿ ಮಾಡಿದ್ದಾರೆ. ಸಂಭ್ರಮಾಚರಣೆಯಲ್ಲಿ ಪೊಲೀಸರು ಜಬರ್ದಸ್ತ್ ಆಗಿ ನಾಚ್‍ಗಾನಾ ಕೂಡ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ಹಾಡಿಗೆ ಪೇದೆಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಪಾರ್ಟಿಯಲ್ಲಿ ಹೊಸದುರ್ಗ ಠಾಣೆ ಸಿಪಿಐ ರುದ್ರಪ್ಪ, ಪಿಎಸ್‍ಐ ಶಿವನಂಜ ಶೆಟ್ಟಿ, ಪಿಎಸ್‍ಐ ಗುರುಪ್ರಸಾದ್ ಹಾಗೂ ಇತರೇ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಹೊಸದುರ್ಗ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮೋಜು ಮಸ್ತಿ ಮಾಡುತ್ತಿರೋ ವಿಡಿಯೋ ಈಗ ವೈರಲ್ ಆಗಿದೆ.

    ಅಹಿತಕರ ಘಟನೆ ನಡೆಯಬಾರೆಂದು, ಹೊಸ ವರ್ಷಕ್ಕೆ ಸಾರ್ವಜರ್ನಿಕ ಸಭೆ-ಸಮಾರಂಭ ಮಾಡದಂತೆ ಎಸ್ಪಿ ಸೂಚನೆ ನೀಡಿದ್ದರು. ಆದ್ರೆ ಜನಸಮಾನ್ಯರಿಗೆ ಸಂಭ್ರಮಿಸಲು ಅವಕಾಶ ನೀಡದೇ ಕರ್ತವ್ಯ ಪಾಲಿಸಬೇಕಾದ ಪೊಲೀಸರೇ ಕರ್ತವ್ಯ ಮರೆತು ಡಾನ್ಸ್ ಮಾಡಿದ್ದಾರೆ. ಪೊಲೀಸರ ಈ ವರ್ತನೆಗೆ ಸ್ಥಳೀಯರು ಕಿಡಿಕಾರುತ್ತಿದ್ದಾರೆ.

    ಜನರಿಗೊಂದು ನ್ಯಾಯ, ಪೊಲೀಸರಿಗೊಂದು ನ್ಯಾಯ. ನಮಗೆ ಪಾರ್ಟಿ ಮಾಡಬೇಡಿ ಅಂತ ಸೂಚನೆ ನೀಡಿ ಅವರು ಹೀಗೆ ಮಾಡೋದು ಸರಿನಾ, ಅಂತ ಪೊಲೀಸರ ವಿರುದ್ಧ ಸ್ಥಳೀಯರು ಫುಲ್ ಗರಂ ಆಗಿದ್ದಾರೆ.

    https://www.youtube.com/watch?v=hTnXpYMBA_8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv