Tag: ಹೊಸವರ್ಷ

  • ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್- ಜಿಲ್ಲಾಡಳಿತದ ಆದೇಶವೇನು?

    ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್- ಜಿಲ್ಲಾಡಳಿತದ ಆದೇಶವೇನು?

    ಚಿಕ್ಕಬಳ್ಳಾಪುರ: ಪ್ರವಾಸಿಗರ ನೆಚ್ಚಿನ ತಾಣವೆಂದರೆ ಅದು ನಂದಿಗಿರಿಧಾಮ. ಆದರೆ ಇಂತಹ ನಂದಿಬೆಟ್ಟದಲ್ಲಿ (Nandihills) ನೀವೇನಾದರೂ ಈ ಬಾರಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಬೇಕು ಎಂಬ ಪ್ಲ್ಯಾನ್ ಮಾಡಿಕೊಂಡಿದ್ದರೆ ಕ್ಯಾನ್ಸಲ್ ಮಾಡಿಕೊಳ್ಳಿ. ಯಾಕೆಂದರೆ ನಂದಿಬೆಟ್ಟಕ್ಕೆ ಪ್ರವಾಸಗರಿಗೆ ನಿರ್ಬಂಧ ಹೇರಲಾಗಿದೆ.

    ಹೌದು. ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರಿಗೆ ಬ್ರೇಕ್ ಬಿದ್ದಿದೆ. ಡಿಸೆಂಬರ್ 31ರ ಸಂಜೆ 06 ಗಂಟೆಯಿಂದ ಜನವರಿ 01 ರ 06 ಗಂಟೆಯವರೆಗೆ ನಿಷೇಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ತೊಡಕಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಆದೇಶವನ್ನು ನೀಡಿದೆ.

    ಇಷ್ಟು ಮಾತ್ರವಲ್ಲದೇ ನಂದಿಗಿರಿಧಾಮದಲ್ಲಿ ರೂಂ ಬುಕ್ಕಿಂಗ್ ಸಹ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಸದ್ಯ ಜಿಲ್ಲಾಡಳಿತದ ಆದೇಶದಿಂದ ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕು ಎಂದು ಕನಸು ಕಂಡಿದ್ದ ಪ್ರವಾಸಿಗರಿಗೆ ಭಾರೀ ನಿರಾಸೆಯಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

  • ಕೃಷಿ ಕೂಲಿ ಮಹಿಳೆಯರಿಂದ ಹೊಸ ವರ್ಷಾಚರಣೆ- ಗದ್ದೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ

    ಕೃಷಿ ಕೂಲಿ ಮಹಿಳೆಯರಿಂದ ಹೊಸ ವರ್ಷಾಚರಣೆ- ಗದ್ದೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಭತ್ತದ ಗದ್ದೆಯೊಂದರಲ್ಲಿ ಕೃಷಿ ಕೂಲಿ ಮಹಿಳಾ ಕಾರ್ಮಿಕರು (Women) ಕೇಕ್ (Cake) ಕತ್ತರಿಸಿ ಹೊಸವರ್ಷವನ್ನು (New Year) ಸಂಭ್ರಮದಿಂದ ಸ್ವಾಗತಿಸಿದ್ದಾರೆ.

    ಹೊಸವರ್ಷದ ಹಿನ್ನೆಲೆಯಲ್ಲಿ ಗದ್ದೆ ಮಾಲೀಕ ಕೇಕ್ ತರಿಸಿದ್ದ. ಈ ಎರಡು ಕೇಕ್ ಕತ್ತರಿಸಿ ಭತ್ತ ನಾಟಿ ಮಾಡಿ ದಣಿವಾಗಿದ್ದ ಮಹಿಳೆಯರು ಸಂಭ್ರಮಿಸಿದ್ದಾರೆ. ಭತ್ತ ನಾಟಿ ಮಾಡುವ ಕಾಯಕಕ್ಕೆ ಬಂದಿದ್ದ 30ಕ್ಕೂ ಹೆಚ್ಚು ಮಹಿಳೆಯರು ಹೊಸ ವರ್ಷದ ಮೊದಲ ದಿನ ಭತ್ತ ನಾಟಿ ಕಾರ್ಯ ಮುಗಿದ ಮೇಲೆ ಹೊಸ ವರ್ಷಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಗ್ರಾಮೀಣ ಭಾಗದ ರೈತಾಪಿ ಜನ ಯುಗಾದಿಯಂದೆ ಹೊಸವರ್ಷವನ್ನ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರಾದರೂ ಕ್ಯಾಲೆಂಡರ್ ಹೊಸ ವರ್ಷವನ್ನೂ ಕೇಕ್ ಕತ್ತರಿಸುವ ಮೂಲಕ ಕೃಷಿ ಕೂಲಿ ಕಾರ್ಮಿಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷದಲ್ಲಿ ಮದ್ಯಪ್ರಿಯರಿಂದ ಭರ್ಜರಿ ಆದಾಯ – ಅಬಕಾರಿ ಇಲಾಖೆಗೆ ಚಿನ್ನದ ಬೆಳೆ

    ಹೊಸ ವರ್ಷದಲ್ಲಿ ಮದ್ಯಪ್ರಿಯರಿಂದ ಭರ್ಜರಿ ಆದಾಯ – ಅಬಕಾರಿ ಇಲಾಖೆಗೆ ಚಿನ್ನದ ಬೆಳೆ

    ಬೆಂಗಳೂರು: ಹೊಸ ವರುಷ.. ಹೊಸ ಹರುಷ.. (Newyear) ಇಡೀ ಜಗತ್ತು 2022ರ ವರ್ಷಕ್ಕೆ ಗುಡ್‌ಬೈ ಹೇಳಿ 2023ಕ್ಕೆ ಹಾಯ್ ಹಾಯ್ ಹೇಳಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರಿನಲ್ಲಂತೂ ಮಧ್ಯರಾತ್ರಿ 12 ಗಂಟೆ ಆಗ್ತಿದ್ದಂತೆ ನ್ಯೂ ಇಯರ್‌ಗೆ ಗ್ರ್ಯಾಂಡ್‌ ವೆಲ್‌ಕಂ ಸಿಕ್ಕಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಂತೂ ಜನಸಾಗರವೇ ಹರಿದುಬಂದಿತ್ತು.

    ಹಾಡು, ಕುಣಿತ, ಮೋಜು ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡ್ರು. ಬಾರ್, ಪಬ್, ಕ್ಲಬ್‌ಗಳಲ್ಲಿ ಸೇರಿದ್ದ ಮದ್ಯ (Liquor) ಪ್ರಿಯರು ಪಾರ್ಟಿಗಳಲ್ಲಿ ಕುಡಿದು ತೂರಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಬಂದಿರುವ ಹೊಸ ವರ್ಷ ಹರುಷ ತರುವ ಜೊತೆಗೆ ಭರ್ಜರಿ ಆದಾಯವನ್ನೂ ತಂದುಕೊಟ್ಟಿದೆ. ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಸೇಲ್ ಆಗಿದ್ದು, ಅಬಕಾರಿ ಇಲಾಖೆಗೆ (Excise Department) 657 ಕೋಟಿ ರೂ. ಆದಾಯ ತಂದುಕೊಟ್ಟಿದೆ.

    ಯಾವ ದಿನ ಎಷ್ಟು ಮಾರಾಟ?

    • ಡಿಸೆಂಬರ್ 27 – 3.57 ಲಕ್ಷ ಲೀಟರ್ ಐಎಂಎಫ್ಎ‌ಲ್ (ಇಂಡಿಯನ್ ಮೇಡ್ ಫಾರೀನ್ ಲಿಕ್ಕರ್), 2.41 ಲಕ್ಷ ಲೀಟರ್ ಬಿಯರ್
    • ಡಿಸೆಂಬರ್ 28 – 2.31 ಲಕ್ಷ ಲೀಟರ್ ಐಎಂಎಫ್ಎ‌ಲ್, 1.67 ಲಕ್ಷ ಲೀಟರ್ ಬಿಯರ್
    • ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಐಎಂಎಫ್ಎ‌ಲ್, 1.93 ಲಕ್ಷ ಲೀಟರ್ ಬಿಯರ್
    • ಡಿಸೆಂಬರ್ 30 ರಂದು 2.93 ಲಕ್ಷ ಲೀಟರ್ ಐಎಂಎಫ್ಎ‌ಲ್, 2.59 ಲಕ್ಷ ಲೀಟರ್ ಬಿಯರ್
    • ಡಿಸೆಂಬರ್ 31 ರಂದು 3.00 ಲಕ್ಷ ಲೀಟರ್ ಐಎಂಎಫ್ಎ‌ಲ್, 2.41 ಲಕ್ಷ ಲೀಟರ್ ಬಿಯರ್
    • ಸೆಂಬರ್ 31ರ ಒಂದೇ ದಿನ 3 ಲಕ್ಷ ಲೀಟರ್ ಐಎಂಎಫ್ಎ‌ಲ್, 2.41 ಲಕ್ಷ ಲೀಟರ್ ಬಿಯರ್

    ಡಿ.23 ರಿಂದ 31ರ ವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇದರಿಂದ ಡಿಸೆಂಬರ್ 31ರ ಒಂದೇ ದಿನ ಬರೋಬ್ಬರಿ 181 ಕೋಟಿ ರೂ. ಮದ್ಯ ಮಾರಾಟವಾಗಿದ್ದು, ಕಳೆದ 9 ದಿನಗಳಲ್ಲಿ ಅಂದ್ರೆ ಡಿ. 23 ರಿಂದ ಡಿ.31ರ ವರೆಗೆ 1,262 ಕೋಟಿ ಮೊತ್ತದ ಮದ್ಯ ಮಾರಾಟವಾಗಿದ್ದರಿಂದ ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ಆದಾಯ ಹರಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ

    ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ

    ಬೆಂಗಳೂರು: ಹೊಸ ವರ್ಷ (New Year) ಆಚರಣೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ 2023ರನ್ನು ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿ ಭರ್ಜರಿ ಸಿದ್ಧವಾಗಿದೆ. ಆದರೆ ಸಿಲಿಕಾನ್‌ ಸಿಟಿ ಬೆಂಗಳೂರಿನ (Bengaluru) ಚರ್ಚ್‌ ಸ್ಟ್ರೀಟ್‌ನಲ್ಲಿ (Church Street) ಲವರ್‌ ಮುಟ್ಟಿದ್ದಕ್ಕೆ ಮಾರಾಮಾರಿ ನಡೆದಿದೆ.

    ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಲವರ್ ಫುಲ್ ಗರಂ ಆಗಿದ್ದಾನೆ. ನೂಕುನುಗ್ಗಲಿನಲ್ಲಿ ತನ್ನ ಹುಡುಗಿ ಮುಟ್ಟಿದ್ದಕ್ಕೆ ದುಷ್ಕರ್ಮಿಗೆ ಆಕೆಯ ಪ್ರಿಯಕರ ಹೊಡೆದಿದ್ದಾನೆ. ಈ ವೇಳೆ ಹೊಡೆಸಿಕೊಂಡ ದುಷ್ಕರ್ಮಿ ಎಸ್ಕೇಪ್‌ ಆಗಿದ್ದಾನೆ. ಇದನ್ನೂ ಓದಿ:  ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?

    ಚರ್ಚ್ ಸ್ಟ್ರೀಟ್‌ನಲ್ಲಿ ಸಂಭ್ರಮಾಚರಣೆ ಮಿತಿಮೀರುತ್ತಿದೆ. ಸಂಭ್ರಮಾಚರಣೆ ಹೆಸರಿನಲ್ಲಿ ಯುವತಿಯರಿಗೆ ಕೆಲ ದುಷ್ಕರ್ಮಿಗಳು ತೊಂದರೆ ನೀಡುತ್ತಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಇಲ್ಲಿ ಒಬ್ಬೇ ಒಬ್ಬರು ಪೊಲೀಸ್ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಇದನ್ನೂ ಓದಿ:   ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಂದ್ – ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವಾಹನ ಸವಾರರು

    Live Tv
    [brid partner=56869869 player=32851 video=960834 autoplay=true]

  • ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

    ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

    ಬೆಂಗಳೂರು: 2022ಕ್ಕೆ ಟಾಟಾ ಹೇಳಿ, 2023ಕ್ಕೆ ಹಾಯ್ ಹಾಯ್ ಹೇಳಲು ಇನ್ನು ಕೆಲವೇ ಗಂಟೆಯಷ್ಟೇ ಬಾಕಿ. ಈಗಾಗಲೇ ಬೆಂಗಳೂರು (Bengaluru), ಮೈಸೂರು (Mysuru), ಹುಬ್ಬಳ್ಳಿ(Hubballi), ಕಲಬುರಗಿ, ಬೆಳಗಾವಿ (Belagavi), ಮಂಗಳೂರು (Managaluru) ಸೇರಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ಎಲ್ಲರೂ ರಂಗು ರಂಗಾಗಿದ್ದಾರೆ.

    12 ಗಂಟೆ ಯಾವಾಗ ಆಗುತ್ತಪ್ಪಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳು ಯುವ ಸಮೂಹದಿಂದ ಕಿಕ್ಕಿರಿಯುತ್ತಿವೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಲರ್‌ಫುಲ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಈಗಾಗಲೇ ಇಂದಿರಾನಗರ ಚರ್ಚ್ ಸ್ಟ್ರೀಟ್ ಬಂದ್ ಆಗಿದ್ದು, ದುಬಾರಿ ಚಾರ್ಜ್ ನಡುವೆಯೂ ಪಬ್‍ಗಳಿಗೆ ಫುಲ್ ಬೇಡಿಕೆ ಕೇಳಿಬರುತ್ತಿವೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಬ್‍ಗಳು ಭರ್ತಿಯಾಗಿದ್ದು, ಪಬ್‍ಗಳು ಹೊಸ ವರ್ಷದ ಪಾರ್ಟಿಗೆ ದರ ಹೆಚ್ಚಿಸಿದೆ. ಪ್ರತಿಬಾರಿಗಿಂತ ಇಂದು ಶೇ.50ರಷ್ಟು ಏರಿಕೆ ಆಗಿದ್ದು, 2.5 ಸಾವಿರ ಇದ್ದ ಚಾರ್ಚ್ 4.5 ರಿಂದ 5 ಸಾವಿರ ಚಾರ್ಚ್ ಮಾಡಲಾಗುತ್ತಿದೆ. ದುಪ್ಪಟ್ಟು ಚಾರ್ಚ್ ನಡುವೆಯೂ ಪಾರ್ಟಿ ಪ್ರೀಯರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ

    ವಾಚ್ ಟವರ್, ವುಮೆನ್ ಸೇಫ್ ಹೌಸ್ ನಿರ್ಮಿಸಲಾಗಿದೆ. ಸಿಸಿಟಿವಿಗಳ ಕಣ್ಗಾವಲು, ಆರೆಂಜ್ ಸ್ಕ್ವಾಡ್ ಕೂಡ ಇದೆ. ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಸುಕಿನಜಾವ 2 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಉಳಿದೆಲ್ಲಾ ಫ್ಲೈಓವರ್ ಬಂದ್ ಆಗಿವೆ. ಇದನ್ನೂ ಓದಿ:  ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ: ಅಮಿತ್‌ ಶಾ

    Live Tv
    [brid partner=56869869 player=32851 video=960834 autoplay=true]

  • ಡಿ.31ರ ರಾತ್ರಿ ನಂದಿ ಬೆಟ್ಟಕ್ಕೆ ನೋ ಎಂಟ್ರಿ – ಪಾರ್ಟಿ ಪ್ರಿಯರಿಗೆ ನಿರಾಸೆ

    ಡಿ.31ರ ರಾತ್ರಿ ನಂದಿ ಬೆಟ್ಟಕ್ಕೆ ನೋ ಎಂಟ್ರಿ – ಪಾರ್ಟಿ ಪ್ರಿಯರಿಗೆ ನಿರಾಸೆ

    ಚಿಕ್ಕಬಳ್ಳಾಪುರ: ಹೊಸ ವರ್ಷ (New Year) 2023ನ್ನು ಸ್ವಾಗತಿಸೋಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ನ್ಯೂ ಇಯರ್ ಸೆಲೆಬ್ರೇಷನ್ ಹೆಸರಲ್ಲಿ ಸಂಭ್ರಮ, ಮೋಜು, ಮಸ್ತಿ ಅಂತ ಬಹುತೇಕರು ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಂತ ನೀವು ನಂದಿಬೆಟ್ಟದಲ್ಲಿ (Nandi Hills) ನ್ಯೂ ಇಯರ್ ಸ್ವಾಗತಿಸೋಣ, ಸಂಭ್ರಮಿಸೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ನಿಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಿ ಯಾಕೆಂದರೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮ ಅಂದರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೇವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,600 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತಮದ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್. ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2023ನ್ನು ಸ್ವಾಗತಿಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ನಿರಾಸೆ ಮಾಡಿದ್ದು, ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಧಿಕಾರಿ ಎನ್.ಎಂ ನಾಗರಾಜು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಬಂದು 80 ಲಕ್ಷ ದರೋಡೆ

    ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2023 ಜನವರಿ 1ರ ಬೆಳಗ್ಗೆ 6 ಗಂಟೆವರೆಗೂ ನಂದಿಗಿರಿಧಾಮಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಅತಿಥಿ ಗೃಹಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.31ರ ರಾತ್ರಿ ಬೆಟ್ಟದ ಮೇಲೆ ಯಾರೂ ಉಳಿದುಕೊಳ್ಳುವಂತಿಲ್ಲ. ಮೋಜು ಮಸ್ತಿ ಪಾರ್ಟಿ ಸೆಲೆಬ್ರೇಷನ್ ಹೆಸರಲ್ಲಿ ಅಪಘಾತ ಅನಾಹುತ ಅವಘಡಗಳಾಗಬಹುದು. ರಾತ್ರಿ ವೇಳೆ ಬೆಟ್ಟದ ಮೇಲೆ ಸಂಚಾರ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿದ ಕಾರಣ ಸಾರ್ವಜನಿಕರು ಗಿರಿಧಾಮಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಬೆಟ್ಟ, ಚನ್ನಗಿರಿ ಬೆಟ್ಟ, ಆವುಲಬೆಟ್ಟ, ಕೈವಾರ ಬೆಟ್ಟಕ್ಕೂ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆ ಆ ಬೆಟ್ಟಗಳಿಗೂ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಕೊರೊನಾಗೆ ಇಡೀ ಜಗತ್ತೇ ತತ್ತರಿಸಿದ್ರೆ, ಈ 2 ದೇಶಗಳಲ್ಲಿ ಮಾತ್ರ ಒಂದೇ ಒಂದು ಕೇಸ್‌ ಇಲ್ಲ

    ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್, ಹೋಮ್‍ಸ್ಟೇ ಮಾಲೀಕರ ಜೊತೆ ಸಭೆ ನಡೆಸಿರುವ ಪೊಲೀಸರು, ಲಾಭದ ಆಸೆಗೆ ಬಿದ್ದು ಸರ್ಕಾರ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನವರಿ 1 ರ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು ಅಂದು ಎಂದಿನಂತೆ ಬಂದು ಹೋಗಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಕ್ಕೆ ಬೆಂಗ್ಳೂರಲ್ಲಿ ಪೊಲೀಸ್ ರೂಲ್ಸ್ ಜಾರಿ- ಕಿರಿಕ್, ಕಿತಾಪತಿ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮ

    ಹೊಸ ವರ್ಷಕ್ಕೆ ಬೆಂಗ್ಳೂರಲ್ಲಿ ಪೊಲೀಸ್ ರೂಲ್ಸ್ ಜಾರಿ- ಕಿರಿಕ್, ಕಿತಾಪತಿ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮ

    ಬೆಂಗಳೂರು: ಇನ್ನೇನು ಎರಡು ದಿನದಲ್ಲಿ ನಾವು ಮತ್ತೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಬಾರಿಯ ನ್ಯೂ ಇಯರ್ (New Year Celebration) ಆಚರಣೆಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವೊಂದು ಪೊಲೀಸ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ರೂಲ್ಸ್ ಗಳನ್ನು ಅನುಸರಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಹೊಸ ವರ್ಷ ಆಚರಣೆ ಹಿನ್ನೆಲೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy), ಈಗ ವೀಡಿಯೋ ಕಾನ್ಫರೆನ್ಸ್ ಮೂಲಕ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದೆ. 8 ಸಾವಿರದ 500 ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಟ್ರಾಫಿಕ್ ನ ಎಲ್ಲಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಹಿಳೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ ಎಂದರು.

     

     

    ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಮಧ್ಯರಾತ್ರಿ 1 ಗಂಟೆಯ ತನಕ ಮಾತ್ರ ಅವಕಾಶ ನೀಡಲಾಗುತ್ತಿದೆ. ಶಬ್ದಮಾಲಿನ್ಯ ನಿಯಂತ್ರಣಕ್ಕೆ ಎಸಿಪಿ ಮಟ್ಟದಲ್ಲಿ ಟೀಂ ಮಾಡಲಾಗಿದೆ. ಜನಸಂದಣಿಯ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. 4,000 ಕ್ಯಾಮರಾ ಸಿಸಿ ಟಿವಿ ಕ್ಯಾಮೆರಾ (CCTV Camera) ಗಳನ್ನು ಹಾಕಲಾಗುತ್ತೆ. ಬೆಂಗಳೂರು ಎಲ್ಲಾ ಕಡೆಯೂ ಹೈಕ್ವಾಲಿಟಿ ಕ್ಯಾಮೆರಾಗಳು ಇವೆ. ಮಹಿಳೆಯರಿಗೆ ಐ ಲ್ಯಾಂಡ್ಸ್ ಗಳು ಇರುತ್ತೆ, ಟವರ್ ವಾಚ್ ಗಳು ಇರುತ್ತೆ ಎಂದು ವಿವರಿಸಿದರು.

    ವೈದ್ಯ ಇಲಾಖೆಯ ಜೊತೆ ಮಾತನಾಡಲಾಗಿದೆ. ಕೆಲವೊಂದು ಬೆಡ್ ಗಳನ್ನು ಮೀಸಲು ಮಾಡಲಾಗಿದೆ. ಅಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಡ್ರಗ್ಸ್ ಬಗ್ಗೆಯೂ ಎಚ್ಚರಿಕೆಯನ್ನು ವಹಿಸಲಾಗಿದೆ. ಪರವಾನಿಗೆ ಇರುವ ಪಿಸ್ತೂಲ್, ರಿವಾಲ್ವರ್ ಗಳನ್ನು ಸಂಭ್ರಮಾಚರಣೆ ಸ್ಥಳಕ್ಕೆ ತರುವಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ಜನರಲ್ಲಿ ನಮ್ಮದೊಂದು ಮನವಿ ಮಾಡುತ್ತೇವೆ. ರಸ್ತೆಯ ಬದಿಯಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡರೆ ತಕ್ಷಣ ಪೊಲೀಸರಿಗೆ ತಿಳಿಸಿ. ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗುತ್ತಾರೆ. ಅನುಮಾನಸ್ಪದ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಇದೇ ವೇಳೆ ಅವರು ವಿನಂತಿಸಿಕೊಂಡರು.

    ಸಾರ್ವಜನಿಕರು ಹೆಚ್ಚಾಗಿ ಪಬ್ಲಿಕ್ ವೆಹಿಕಲ್ ಬಳಸಿ. ಬಿಎಂಟಿಸಿ, ಮೆಟ್ರೋ ಎರಡು ಕೂಡ ಕಾರ್ಯ ನಿರ್ವಹಿಸುತ್ತವೆ. ರಾತ್ರಿ 9 ಗಂಟೆಯ ಬಳಿಕ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಪ್ಲೈಓವರ್ ಹೊರತು ಪಡಿಸಿ ಎಲ್ಲಾ ಪ್ಲೈ ಓವರ್ ಬಂದ್ ಮಾಡಲಾಗುವುದು. ಎಲಿವೇಟೆಡ್ ರಸ್ತೆಯಲ್ಲಿ 9 ಗಂಟೆಯ ನಂತರ ಸಂಚಾರಕ್ಕೆ ಅವಕಾಶ ಇಲ್ಲ. ರಾತ್ರಿ 9 ಗಂಟೆಯ ನಂತರ ನೈಸ್ ರೋಡ್ ದ್ವಿಚಕ್ರ ವಾಹನ ಇಲ್ಲ. ಡ್ರ್ಯಾಗ್ ರೈಸಿಂಗ್ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತೆ ಎಂದು ತಿಳಿಸಿದರು.

    ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸಂದೀಪ್ ಪಾಟೀಲ್, ಸಂಚಾರಿ ಮುಖ್ಯಸ್ಥ ಸಲೀಂ, ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮುಂಬೈನಲ್ಲಿ ಹೊಸವರ್ಷದಿಂದ ವಾಟರ್‌ ಟ್ಯಾಕ್ಸಿ ಸೇವೆ ಆರಂಭ – ದರ ಎಷ್ಟು?

    ಮುಂಬೈನಲ್ಲಿ ಹೊಸವರ್ಷದಿಂದ ವಾಟರ್‌ ಟ್ಯಾಕ್ಸಿ ಸೇವೆ ಆರಂಭ – ದರ ಎಷ್ಟು?

    ಮುಂಬೈ: ನಾವಿ ಮುಂಬೈನಿಂದ ದಕ್ಷಿಣ ಮುಂಬೈಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದ ವಾಟರ್‌ ಟ್ಯಾಕ್ಸಿಯು 2022ರ ಜನವರಿ ತಿಂಗಳಿಂದ ಮುಂಬೈನಲ್ಲಿ ಸೇವೆ ಆರಂಭವಾಗಲಿದೆ.

    ವಾಟರ್‌ ಟ್ಯಾಕ್ಸಿ ಸೇವೆಯು ದಕ್ಷಿಣ ಮುಂಬೈ ಮತ್ತು ನಾವಿ ಮುಂಬೈ ನಡುವೆ, ಫೆರ್ರಿ ವಾರ್ಫ್‌ನಲ್ಲಿರುವ ಡೊಮೆಸ್ಟಿಕ್‌ ಕ್ರೂಸ್‌ ಟರ್ಮಿನಲ್‌ ಮತ್ತು ಬೆಲಾಪುರ್‌ ಹಾಗೂ ನೆರೂಲ್‌ನಲ್ಲಿರುವ ಟರ್ಮಿನಲ್‌ನಿಂದ ಸಾರಿಗೆ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ

    ವಾಟರ್‌ ಟ್ಯಾಕ್ಸಿ ಸೇವೆಗೆ ಅಂತಾರಾಷ್ಟ್ರೀಯ ಕ್ರೂಸ್‌ ಟರ್ಮಿನಲ್‌, ರೇವಾಸ್‌ನಿಂದ ಡೊಮೆಸ್ಟಿಕ್‌ ಕ್ರೂಸ್‌ ಟರ್ಮಿನಲ್‌ (ಡಿಸಿಟಿ), ಧರ್ಮತಾರ್‌, ಕರಂಜಾಡೆ, ಡೊಮೆಸ್ಟಿಕ್‌ ಕ್ರೂಸ್‌ ಟರ್ಮಿನಲ್‌, ನೆರೂಲ್‌, ಐರೋಲಿ, ವಾಶಿ, ಖಂಡೇರಿ, ದ್ವೀಪಗಳು ಮತ್ತು ಜವಾಹರ್‌ಲಾಲ್‌ ಸೇರಿದಂತೆ ವಿವಿಧ ಮಾರ್ಗಗಳನ್ನು ಸರ್ಕಾರ ನಿಗದಿಪಡಿಸಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್

    ಜನವರಿ ಮೊದಲ ವಾರದಿಂದಲೇ ವಾಟರ್‌ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಸದ್ಯಕ್ಕೆ ಮೂರು ಆಪರೇಟರ್‌ ವ್ಯವಸ್ಥೆ ಮಾಡಲಾಗಿದೆ. 2-3 ತಿಂಗಳಲ್ಲಿ ನಾಲ್ಕನೇ ಆಪರೇಟರ್‌ ವ್ಯವಸ್ಥೆ ಮಾಡಲಾಗುವುದು.

    ಡೊಮೆಸ್ಟಿಕ್‌ ಟರ್ಮಿನಲ್‌ನಿಂದ (ಡಿಸಿಟಿ) ನಾವಿ ಮುಂಬೈ ಪ್ರಯಾಣಕ್ಕೆ ಒಬ್ಬ ಪ್ರಯಾಣಿಕರಿಗೆ 1,200ರಿಂದ 15,000 ರೂ. ಟಿಕೆಟ್‌ ದರ ಇರಲಿದೆ. ಮುಂಬೈನ ಡಿಸಿಟಿಯಿಂದ ಜವಾಹರ್‌ಲಾಲ್‌ ನೆಹರೂ ಮತ್ತು ನಾವಿ ಮುಂಬೈಗೆ 800ರಿಂದ 1,100 ರೂ. ದರ ಇದೆ.

  • ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ: ಅಶೋಕ್

    ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ: ಅಶೋಕ್

    ಬೆಂಗಳೂರು: ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಓಮಿಕ್ರಾನ್ ತಡೆಗೆ ನೈಟ್ ಕರ್ಫ್ಯೂ ಹೇರುವುದರ ಬಗ್ಗೆ ಯಾವುದೇ ಚಿಂತನೆಯನ್ನು ನಡೆಸಿಲ್ಲ. ಬದಲಿಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

    ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆಗೊಳಿಸುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಓಮಿಕ್ರಾನ್ ಆತಂಕದಿಂದಾಗಿ ಕ್ರಿಸ್ ಮಸ್ ಹಾಗೂ ಹೊಸವರ್ಷಕ್ಕೆ ನಿರ್ಬಂಧ ಅಗತ್ಯವಾಗಿದೆ. ಓಮಿಕ್ರಾನ್ ಬೇರೆ ಬೇರೆ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಇಂದು ಬೆಂಗಳೂರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯನ್ನು ಪಡೆಯಲಾಗಿದೆ. ಹೊಸವರ್ಷ ಆಚರಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

    ಈಗಾಗಲೇ ಸಭೆ ಸಮಾರಂಭಗಳಿಗೆ 500 ಜನರು ಸೇರಬಹುದು ಎಂದು ಹೇಳಲಾಗಿದೆ. ಆದರೆ ಕ್ರಿಸ್‌ಮಸ್ ಸಂದರ್ಭದಲ್ಲಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಾಳೆಯೊಳಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಹೊಸವರ್ಷ ಆಚರಣೆ ಸಂದರ್ಭದಲ್ಲಿ ಸ್ಟ್ರೀಟ್ ಸಂಭ್ರಮದ ಬಗ್ಗೆ ಮಾತನಾಡಿದ ಅವರು, ಸ್ಟ್ರೀಟ್ ಸಂಭ್ರಮದ ಬಗ್ಗೆ ಹೆಚ್ಚು ಭಯವಿದೆ. ಈ ಸಂದರ್ಭದಲ್ಲಿ ತಬ್ಬಿಕೊಂಡು ಮುದ್ದಾಡುವ ಸಂಭ್ರಮ ಜೋರಾಗಿರುತ್ತದೆ. ಇದರಿಂದಾಗಿ ಕೊರೊನಾ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸ್ಟ್ರೀಟ್ ಸಂಭ್ರಮಕ್ಕೆ ಬ್ರೇಕ್ ಹಾಕುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುವುದು ಎಂದರು. ದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

    ಎಂಜಿ ರೋಡ್, ಬ್ರಿಗೇಡ್ ರೋಡ್ ಸಂಭ್ರಮಕ್ಕೆ ನಿರ್ಬಂಧ ಹಾಕುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿಬಂಧನೆಯನ್ನು ತರುತ್ತೇವೆ. ಅದಕ್ಕೆ ಕಡಿವಾಣ ಹಾಕಬೇಕಾ ಅಥವಾ ನಿಬಂಧನೆ ಹೇರಬೇಕಾ ಎನ್ನುವುದರ ಕುರಿತು ಚರ್ಚೆ ನಡೆಸಲಾಗುವುದು. ಎಂದು ಮಾಹಿತಿ ನೀಡಿದರು.

  • ರಾಜ್ಯದಲ್ಲಿ ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಸಾಧ್ಯತೆ

    ರಾಜ್ಯದಲ್ಲಿ ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಮಧ್ಯೆ ಕೊರೊನಾ 3ನೇ ಅಲೆ ಆತಂಕ ಹೆಚ್ಚಾಗಿದೆ. ಹೆಮ್ಮಾರಿಗೆ ತಡೆ ಒಡ್ಡಲು ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ರಾಜ್ಯದಲ್ಲಿ ಡಿಸೆಂಬರ್ 22ರಿಂದ ಜನವರಿ 2ರವರೆಗೆ ಮತ್ತೆ ನೈಟ್ ಕರ್ಫ್ಯೂ ಜಾರಿಗೆ ಸಲಹೆ ನೀಡಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೆ ಶಿಫಾರಸು ಮಾಡಿದ್ದು, ಈ ಹತ್ತು ದಿನಗಳ ಅವಧಿಯಲ್ಲಿ ಪಬ್, ರೆಸ್ಟೋರೆಂಟ್, ಮಾಲ್‍ಗಳಿಗೆ ಷರತ್ತು ವಿಧಿಸುವ ಸಾಧ್ಯತೆಯಿದೆ. ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ನಿರ್ಬಂಧ ವಿಧಿಸುವಂತೆ ಶಿಫಾರಸು ಮಾಡಿದೆ. ಇದನ್ನೂ ಓದಿ: ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ: ಡಿಕೆಶಿ

    ದೇಗುಲ, ಚರ್ಚ್, ಮಸೀದಿಗಳಲ್ಲೂ ಕಠಿಣ ನಿಯಮ ಜಾರಿ ಮಾಡುವ ನಿರೀಕ್ಷೆಯಿದೆ. ಧಾರ್ಮಿಕ ಕೇಂದ್ರಗಳಲ್ಲಿ ಡಬಲ್ ಡೋಸ್ ಲಸಿಕೆ ಆದ್ರಷ್ಟೇ ಅವಕಾಶ ನೀಡುವ ಸಾಧ್ಯತೆಯಿದೆ. ಈ ಸಂಬಂಧ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ. ಈ ನಡುವೆ ಲಸಿಕೆ ಹಂಚಿಕೆಯಲ್ಲಿ ಕರ್ನಾಟಕ ಹೊಸ ದಾಖಲೆ ಸೃಷ್ಟಿಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಶೇ.100ರಷ್ಟು ವ್ಯಾಕ್ಸಿನೇಷನ್ ಆಗಿದೆ. ರಾಜ್ಯದಲ್ಲಿ ಈವರೆಗೂ 8.17 ಕೋಟಿ ಲಸಿಕೆ ಹಂಚಿಕೆ ಮಾಡಿದೆ. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್