Tag: ಹೊಳೆಲ್ಕೆರೆ

  • ಮದ್ಯಪಾನಿಯಿಂದ ಜಮೀನು ಖರೀದಿಸಿದ್ದಕ್ಕೆ ವಿರೋಧ – ದಂಪತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

    ಮದ್ಯಪಾನಿಯಿಂದ ಜಮೀನು ಖರೀದಿಸಿದ್ದಕ್ಕೆ ವಿರೋಧ – ದಂಪತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

    ಚಿತ್ರದುರ್ಗ: ಮದ್ಯಪಾನಿ ವಿರುದ್ಧ ದೌರ್ಜನ್ಯವೆಸಗಿ ಜಮೀನು ಖರೀದಿಸಿದ್ದನ್ನು ವಿರೋಧಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹೊಳಲ್ಕೆರೆ (Holalkere) ತಾಲೂಕಿನ ಗಂಗಸಮುದ್ರದಲ್ಲಿ ನಡೆದಿದೆ.

    ಗಂಗಸಮುದ್ರ ಗ್ರಾಮದ ಗಂಗಾಧರಪ್ಪ ಮತ್ತು ಹೊಸದುರ್ಗ (Hosadurga) ತಾಲ್ಲೂಕಿನ ಹೇರೂರು ಗ್ರಾಮದ ರಾಮಚಂದ್ರಪ್ಪ ಎಂಬುವವರ ನಡುವೆ ಬಹಳ ಕಾಲದಿಂದ ಜಮೀನಿನ ವಿವಾದ ಇತ್ತು. ತೀವ್ರ ಮದ್ಯಪಾನಿಯಾಗಿದ್ದ ರಾಮಚಂದ್ರಪ್ಪನನ್ನು ಬೆದರಿಸಿ ಗಂಗಾಧರಪ್ಪ ಮತ್ತು ಇತರರು ಜಮೀನಿನ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ರಾಮಚಂದ್ರಪ್ಪನ ಪುತ್ರ ಅಣ್ಣಪ್ಪ ಹಾಗೂ ಆತನ ಹೆಂಡತಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ

    ಆಗ ಗ್ರಾಮಸ್ಥರ ಅಣ್ಣಪ್ಪನಿಗೆ 2 ಎಕರೆ ಹಾಗೂ ಉಳಿದ 3 ಎಕರೆ ಜಮೀನನ್ನು ಗಂಗಾಧರಪ್ಪ ಹಾಗೂ ಇತರರಿಗೆ ಎಂದು ತೀರ್ಮಾನಿಸಿ, ಪತ್ರ ಬರೆಸಿ ಕೊಟ್ಟಿದ್ದರು. ಇಷ್ಟಾದರೂ ಗಂಗಾಧರಪ್ಪ ಅಣ್ಣಪ್ಪನ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದಾನೆ. ಇದನ್ನೂ ಪ್ರಶ್ನಿಸಿದ್ದಕ್ಕೆ ಕುಡುಗೋಲಿನಿಂದ ಅಣ್ಣಪ್ಪ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಗಾಯಗೊಂಡಿರುವ ದಂಪತಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಗುಂಪಿನಿಂದಲೂ ದೂರು ಪ್ರತಿದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪ್ರಕರಣದ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಎಸ್‌ಪಿ ಪರಶುರಾಮ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ – ತಾಯಿ ನೇಣಿಗೆ ಶರಣು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಚಾರ ನಿಯಮ ಉಲ್ಲಂಘಿಸಿ ನಾಪತ್ತೆಯಾಗಿದ್ದ ಚಾಲಕ ಕೊಳೆತ ಶವವಾಗಿ ಪತ್ತೆ

    ಸಂಚಾರ ನಿಯಮ ಉಲ್ಲಂಘಿಸಿ ನಾಪತ್ತೆಯಾಗಿದ್ದ ಚಾಲಕ ಕೊಳೆತ ಶವವಾಗಿ ಪತ್ತೆ

    ಚಿತ್ರದುರ್ಗ: ಸಂಚಾರ ನಿಯಮ ಉಲ್ಲಂಘಿಸಿ ಹಣ ಕಟ್ಟಲಾಗದೇ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಹೊಳಲ್ಕೆರೆ (Holalkere) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ದಾವಣಗೆರೆಯ (Davanagere) ಜಗಳೂರಿನ ಬಸವಂತ್ ಕುಮಾರ್ (37) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈತ ಹೊಳಲ್ಕೆರೆಯ ಕಣಿವೆ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಎಂಬ ಆರೋಪದಡಿ ಲಾರಿಯನ್ನು ಪೊಲೀಸರು ತಡೆದಿದ್ದರು. ಬಳಿಕ ದಂಡ ಕಟ್ಟಲು ಹಣ ಇಲ್ಲದ ಕಾರಣ ಪೊಲೀಸರು ಲಾರಿಯನ್ನು ಠಾಣೆಗೆ ತಂದಿದ್ದರು. ಹಣ ಕಟ್ಟಲಾಗದೆ ಚಾಲಕ ರಾತ್ರಿ ಪೂರ್ತಿ ಠಾಣೆಯ ಮುಂಭಾಗದಲ್ಲಿ ಕಳೆದಿದ್ದ. ಇದನ್ನೂ ಓದಿ: ಜಿಹಾದಿ ಮನಸ್ಥಿತಿಗಳು ನಮ್ಮ ಮನೆಗೆ ಬಂದ್ರೆ, ಕೋವಿ ಹೊರಬರುತ್ತೆ ಎಂದಿದ್ದ VHP ಮುಖಂಡನ ವಿರುದ್ಧ ಕೇಸ್

    ಮರುದಿನ ಬೆಳಗ್ಗೆ ಬಸವಂತ್ ಕುಮಾರ್ ಲಾರಿಯನ್ನು ಅಲ್ಲಿಯೇ ಬಿಟ್ಟು ತೆರಳಿದ್ದ. ಬಳಿಕ 25 ದಿನಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಪೋಷಕರು ಪೊಲೀಸ್ ಠಾಣೆ ಹಾಗೂ ಎಸ್ಪಿ ಕಚೇರಿ ಬಳಿ ಆತನನ್ನು ಹುಡುಕಿಕೊಡುವಂತೆ ಪ್ರತಿಭಟಿಸಿದ್ದರು. ಅಲ್ಲದೇ ಪೊಲೀಸರನ್ನೇ ಅನುಮಾನಿಸಿದ್ದರು. ಈಗ ಹೊಳೆಲ್ಕೆರೆ ಸ್ಮಶಾನದ ಬಳಿ ಆತನ ಮೃತದೇಹ ನೇಣು ಬಿಗಿದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ತೀವ್ರ ಮದ್ಯಪಾನದಿಂದಾಗಿ ಆತನ ಲಿವರ್ ಡ್ಯಾಮೇಜ್ ಆಗಿದ್ದು, ಅನಾರೋಗ್ಯಕ್ಕೊಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]