ಚಿತ್ರದುರ್ಗ: ಕಬ್ಬಿಣದ ಕಂಬ ನೆಡುವ ವೇಳೆ ವಿದ್ಯುತ್ ತಂತಿಗೆ ತಗುಲಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಕಾಳಘಟ್ಟ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಶ್ರೀನಿವಾಸ್ ಎಂಬವರ ತೋಟದಲ್ಲಿ ಅಡಿಕೆ ಶೆಡ್ ನಿರ್ಮಾಣ ವೇಳೆ ಘಟನೆ ನಡೆದಿದೆ. ಶೆಡ್ ನಿರ್ಮಾಣ ಮಾಡಲು ಆಗಮಿಸಿದ್ದ ಗ್ಯಾರೆಹಳ್ಳಿಯ ರೈತ ಶ್ರೀನಿವಾಸ್ (35), ದಾವಣಗೆರೆ ಮೂಲದ ಕಾರ್ಮಿಕ ನಜೀರ್ (30), ಫಾರುಕ್ (30) ಮೃತ ಕಾರ್ಮಿಕರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಹೆಚ್ಚಾದ ತಲಾದಾಯ – ಶರಣ್ ಪ್ರಕಾಶ್ ಪಾಟೀಲ್
ಚಿತ್ರದುರ್ಗ: ಸಬ್ಸಿಡಿ ಲೋನ್ ಕೊಡಿಸುತ್ತೇವೆ ಎಂದು ನಂಬಿಸಿ ಜನರನ್ನು ವಂಚಿಸುವ ವಂಚಕರ ಕಥೆ ಹೊಸದೇನಲ್ಲ. ಆದರೆ ವಿಶೇಷಚೇತನರೊಬ್ಬರಿಗೆ (Disabled Person) ಸರ್ಕಾರದಿಂದ ವಿಶೇಷ ಸ್ಕೀಂ (Govt Scheme) ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿರುವ ಪ್ರಕರಣ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.
ಸೊಂಟ ಸ್ವಾಧೀನವಿಲ್ಲದೇ ತೆವಳುವ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ನಿವಾಸಿ ಜಯಪ್ರಕಾಶ್ ಎಂಬ ವಿಶೇಷಚೇತನ ಗಾಂಧಿ ಸರ್ಕಲ್‌ನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂದು ಪರಿಚಯ ಮಾಡಿಕೊಂಡ ಮಂಜುನಾಥ್ ಎಂಬ ಆಸಾಮಿ, ನಿಮಗೆ ವಿಕಲಚೇತನರ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇವೆ. ಅದರಿಂದ ನೀವು ಕಟ್ಟಿದ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ. ಅದು ನಿಮ್ಮ ಮುಂದಿನ ಜೀವನೋಪಾಯಕ್ಕೆ ಸಹಕಾರಿಯಾಗಲಿದೆ ಎಂದು ಜಯಪ್ರಕಾಶ್ ಅವರನ್ನು ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: Haveri | ಕೋಟಿ ಕೋಟಿ ಖರ್ಚು ಮಾಡಿ ರೈತರಿಗಾಗಿ ನಿರ್ಮಿಸಿದ ಮೆಗಾ ಮಾರ್ಕೆಟ್ ಪಾಳು
ಈ ಸ್ಕೀಂನಿಂದ ನನಗೂ ಒಳ್ಳೆಯ ಹೆಸರು ಬರಲಿದೆ ಎಂದು ಹೇಳಿ 13,500 ರೂ. ಹಣ ಪಡೆದು ಜಯಪ್ರಕಾಶ್‌ಗೆ ವಂಚಿಸಿದ್ದಾರೆ. ಹಣಕಟ್ಟಿ ಹಲವು ತಿಂಗಳಾದರು ಹಣ ಬಾರದ ಹಿನ್ನೆಲೆಯಲ್ಲಿ ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಕೇಳಿದಾಗ, ಸರ್ಕಾರವು ಆ ಸ್ಕೀಂ ನಿಲ್ಲಿಸಿದೆ ಎಂದು ತಪ್ಪಿಸಿಕೊಂಡು ಓಡಾಡುತ್ತಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಕ್ಕಲಪುರದಲ್ಲಿ ಬೋನಿಗೆ ಸೆರೆಯಾದ ಚಿರತೆ – ರೈತರು ನಿರಾಳ
ಅಲ್ಲದೇ ಇವರ ಮತ್ತೋರ್ವ ಸ್ನೇಹಿತ ವೆಂಕಟೇಶ ಎಂಬ ಆಸಾಮಿ ಕೂಡ ಮನೆ ಸಮಸ್ಯೆಗಾಗಿ ಇವರಿಂದ 20 ಸಾವಿರ ರೂ. ಹಣವನ್ನು ಸಾಲವಾಗಿ ಪಡೆದು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಇದರಿಂದ ಮನನೊಂದ ಜಯಪ್ರಕಾಶ್, ಪ್ರಾಂಸರಿ ಪತ್ರ ಸೇರಿದಂತೆ ಇತರೆ ದಾಖಲೆಗಳ ಸಹಿತ ಚಿತ್ರದುರ್ಗ ನಗರ ಠಾಣೆ ಪೊಲೀಸರು ಹಾಗೂ ಎಸ್ಪಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನನ್ನ ಜೀವನ ಕಷ್ಟಕರವಾಗಿದೆ ಎಂದು ಜಯಪ್ರಕಾಶ್ ಅಸಹಾಯಕತೆ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಡಾ ಕುರಿತು ಇ.ಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಇನ್ನು ಈ ಬಗ್ಗೆ ವಂಚಿಸಿರೋ ಮಂಜುನಾಥ್‌ನನ್ನು ಕೇಳಿದಾಗ, ಜಯಪ್ರಕಾಶ್ ಅವರ ಆರೋಪವನ್ನು ಅಲ್ಲೆಗಳೆದಿದ್ದಾನೆ. ಆದರೆ ಮತ್ತೋರ್ವ ವೆಂಕಟೇಶ್ ಮಾತ್ರ ಹಣವನ್ನು ಪಡೆದಿರುವುದನ್ನು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಹೊರತು ಹಣ ಹಿಂತಿರುಗಿಸಿಲ್ಲ. ಹೀಗಾಗಿ ವಿಕಲಚೇತನ ಗಳಿಸಿದ ಹಣ ಕೊಟ್ಟು ಕಂಗಾಲಾಗಿರೋದು ವಿಪರ್ಯಾಸ ಎನಿಸಿದೆ. ಇದನ್ನೂ ಓದಿ: Kotekar Bank Robbery | ಗುಪ್ತಚರ ಇಲಾಖೆ ಸಹಾಯದಿಂದ ಆರೋಪಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್
ಚಿತ್ರದುರ್ಗ: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದೆ.
6 ತಿಂಗಳ ಹಿಂದಷ್ಟೇ ಗೀತಾ ಪತಿ ಬಸವರಾಜ ಹೃದಾಯಾಘಾತದಿಂದ ಮೃತಪಟ್ಟಿದ್ದರು. ಪತಿ ಬಸವರಾಜ ಸಾವಿನಿಂದ ಪತ್ನಿ ಹಾಗೂ ಪುತ್ರಿ ಬಹಳಷ್ಟು ನೊಂದಿದದ್ದರು. ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ತಾಯಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು
ಚಿತ್ರದುರ್ಗ: ಬರದನಾಡಲ್ಲಿ ಕೆರೆ ತುಂಬಿದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಆದರೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಎಂಎ ಹಟ್ಟಿ ಹಾಗು ಹಂಪನೂರು ಗ್ರಾಮಗಳ ಕೆರೆಗಳು ಭರ್ತಿಯಾಗಿ ರೈತರನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿವೆ. ರೈತರ ಕೈಗೆ ಬಂದ ಬೆಳೆಗಳು ಬಾಯಿಗೆ ಬಾರದ ಸ್ಥಿತಿ ಬಂದೊದಗಿದೆ.
ನಿರಂತರ ಮಳೆಯಿಂದಾಗಿ ಎಂಎ ಹಟ್ಟಿ ಕೆರೆ ಭರ್ತಿಯಾಗಿದೆ. ಹಂಪನೂರು ಕೆರೆ ಕೋಡಿ ಬಿದ್ದಿದೆ. ಹೀಗಾಗಿ ರೈತರಿಗೆ ಒಂದೆಡೆ ಸಂತಸವಾಗಿದೆ. ಆದರೆ ಮತ್ತೊಂದೆಡೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಾಗಿ 16 ಎಕರೆ ಕೆರೆಯಂಗಳವನ್ನು ವಶಪಡಿಸಿಕೊಂಡಿದ್ದು, ಸರಾಗವಾಗಿ ಹರಿಯುತಿದ್ದ ಕೆರೆಕೋಡಿ ನೀರಿಗೆ ಎಂಎಹಟ್ಟಿ ಬಳಿ ಗ್ರಾಮಸ್ಥರು ತಡೆ ಹಾಕಿದ್ದಾರೆ. ಅಡ್ಡಲಾಗಿ ಮರಳಿನ ಚೀಲಗಳನ್ನು ಇಡಲಾಗಿದೆ. ಇದರಿಂದಾಗಿ ಎಂಎಹಟ್ಟಿ ಕೆರೆ ಕೋಡಿಯ ನೀರು ಸರಾಗವಾಗಿ ಹರಿಯದೇ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!
ಕೆರೆಹಿಂಬಂದಿಯ ಜಮೀನುಗಳಲ್ಲಿ ಸತತ ಎರಡು ತಿಂಗಳಿಂದ ನೀರು ನಿಂತು ನೂರಾರು ಎಕರೆಯಲ್ಲಿ ಬೆಳೆದ ಅಡಿಕೆ ಕಟಾವಿಗೆ ಅಡ್ಡಿಯಾಗಿದೆ. ಇನ್ನು ಲಕ್ಷಾಂತರ ರೂ. ಬಂಡವಾಳ ಹೂಡಿ ಬೆಳೆದ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಂಗಾಲಾಗಿದ್ದಾರೆ. ಜೊತೆಗೆ ರೈತರ ಕೈಗೆ ಬಂದ ಫಲವತ್ತಾದ ತೋಟ ಹೆಚ್ಚಿನ ಶೀತದಿಂದ ಹಾಳಾಗುವ, ಅಡಿಕೆ ಕೊಳೆರೋಗಕ್ಕೆ ತುತ್ತಾಗುವ ಆತಂಕ ನಿರ್ಮಾಣವಾಗಿದೆ. ಮೆಕ್ಕೆಜೋಳ ಸಹ ಕಟಾವು ಮಾಡಲಾಗದೇ ನೀರಲ್ಲೇ ಕೊಳೆಯುತ್ತಿದೆ. ಹೀಗಾಗಿ ಅನ್ನದಾತರ ಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ
ಇನ್ನು ಈ ಬಗ್ಹೆ ಹಲವು ಬಾರಿ ಸಂಬಂಧಪಟ್ಟ ಚಿತ್ರದುರ್ಗ ತಹಶೀಲ್ದಾರ್ ಹಾಗು ಹೆದ್ದಾರಿ ಪ್ರಾಧಿಕಾರದ ಗಮನಕ್ಕ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಎಂಎ ಹಟ್ಟಿ ಗ್ರಾಮಸ್ಥರು ಕೋಡಿ ನೀರು ಹರಿಯಲು ಬಿಡುತ್ತಿಲ್ಲ. ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ. ಕಟಾವಿಗೆ ಬಂದ ಬೆಳೆಗಳೆಲ್ಲಾ ನೀರು ಪಾಲಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಮಾತ್ರ ನಿದ್ರಾವಸ್ಥೆಯಲ್ಲಿದ್ದಾರೆಂದು ರೈತರು ಕಿಡಿಕಾರಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೆದ್ದಾರಿ ತಡೆ ನಡೆಸಲಾಗುವುದು ಎಂಬ ಎಚ್ಚರಿಕೆ ನೊಂದ ರೈತರಿಂದ ಕೇಳಿಬಂದಿದೆ. ಇದನ್ನೂ ಓದಿ: ಜಾನುವಾರು ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ ಖದೀಮರ ಬಂಧನ
ಚಿತ್ರದುರ್ಗ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ. ಪಿಯುಸಿಯಲ್ಲಿ 97% ಅಂಕ ಗಳಿಸಿದ ರಾಜ್ಯದ 7ನೇ ಟಾಪರ್. ಆದರೆ ಕುಟುಂಬದಲ್ಲಿನ ಬಡತನಿಂದಾಗಿ ಆಕೆಯ ಮುಂದಿನ ವಿದ್ಯಾಭ್ಯಾಸದ ಕನಸು ಕಮರಿಹೋಗಿತ್ತು. ಈ ವಿಷಯ ತಿಳಿದ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿನಿಯ ಕನಸನ್ನು ನನಸಾಗಿಸಲು ಬೆಳಕಾಗಿದೆ. ಇದು ಪಬ್ಲಿಕ್ ಟಿವಿಯ ಬೆಳಕು ಇಂಪ್ಯಾಕ್ಟ್.
ಹೀಗೆ ತಂದೆಯೊಂದಿಗೆ ಕಾಲೇಜಿಗೆ ದಾಖಲಾಗಲು ತೆರಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ದೀಪಿಕಾ ಅಂತ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿರಂಜನ ಹಾಗೂ ನಿರ್ಮಲ ದಂಪತಿ ಪುತ್ರಿ. ಈಕೆ ದ್ವಿತೀಯ ಪಿಯುಸಿಯಲ್ಲಿ 97.28%ರಷ್ಟು ಅಂಕ ಗಳಿಸಿದ್ದಾರೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಏಳನೇ ಟಾಪರ್. ಹೀಗಾಗಿ ವಿದ್ಯಾರ್ಥಿನಿಗೆ ಸಿಎ ಮಾಡಬೇಕೆಂಬ ಕನಸಿದ್ದು, ಆದರೆ ಮನೆಯ ಬಡತನದಿಂದ ಜೀವನ ಸಾಗಿಸೋದೇ ಕಷ್ಟಕರ ಆಗಿತ್ತು. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆ, ಪ್ರವಾಹ, ಭೂಕುಸಿತ- ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ
ಇಬ್ಬರು ಮಕ್ಕಳನ್ನು ಓದಿಸಲಾಗದ ಸ್ಥಿತಿಯಲ್ಲಿದ್ದ ದೀಪಿಕಾ ತಂದೆ ನಿರಂಜನ್ ಮಗಳ ಉನ್ನತ ವ್ಯಾಸಂಗಕ್ಕೆ ನೆರವು ಕಲ್ಪಿಸುವಂತೆ ಪಬ್ಲಿಕ್ ಟಿವಿಗೆ ಮನವಿ ಮಾಡಿದ್ರು. ಪಬ್ಲಿಕ್ ಟಿವಿ ಮೂಲಕ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘುಚಂದನ್ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಕೈಜೋಡಿಸಿದ್ದಾರೆ. ತಮ್ಮ ಟ್ರಸ್ಟ್‍ನಿಂದ 3 ಬಾರಿ 50 ಸಾವಿರ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಇದರಿಂದಾಗಿ ಸಂತಸಗೊಂಡ ವಿದ್ಯಾರ್ಥಿನಿ ನೆರವು ನೀಡಿದ ರಘುಚಂದನ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಸರ್‍ಗೆ ಧನ್ಯವಾದ ಹೇಳಿದ್ದಾರೆ.
ಕಡು ಬಡತನದಲ್ಲಿದ್ದ ಕುಟುಂಬಕ್ಕೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ದಾರಿದೀಪವಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ಭವಿಷ್ಯವನ್ನು ನಿಮ್ಮ ಪಬ್ಲಿಕ್ ಟಿವಿ ಉಜ್ವಲಗೊಳಿಸಿದೆ.
ಚಿತ್ರದುರ್ಗ: ಖಾಸಗಿ ಬಸ್ಸೊಂದು (Private Bus) ಪಲ್ಟಿಯಾಗಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ಪಟ್ಟಣದ ಕಣಿವೆ ಬಳಿ ನಡೆದಿದೆ.
ಬೆಂಗಳೂರಿನಿಂದ (Bengaluru) ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್‌ಕೋಚ್ ಬಸ್ ಬೆಳಗ್ಗಿನ ಜಾವ 4:30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಬಸ್‌ನಲ್ಲಿ 50 ಜನ ಪ್ರಯಾಣ ಬೆಳೆಸಿದ್ದು, ಬಸ್ ಪಲ್ಟಿಯಿಂದಾಗಿ 38 ಜನರು ಗಾಯಗೊಂಡಿದ್ದಾರೆ. ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಉಳಿದ ಗಾಯಾಳುಗಳಿಗೆ ಹೊಳಲ್ಕೆರೆ (Holalkere) ತಾಲೂಕು ಆಸ್ಪತ್ರೆಯಲ್ಲಿ ನೆಲದ ಮೇಲೆ ಬೆಡ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮುಂಜಾನೆ ಬೆಂಗಳೂರಿನ ಟೈಯರ್ ಗೋಡೌನ್‍ನಲ್ಲಿ ಅಗ್ನಿ ಅವಘಡ
ಚಿತ್ರದುರ್ಗ: ದಾಖಲೆ ಇಲ್ಲದೆ ಚಿತ್ರದುರ್ಗದಿಂದ (Chitradurga) ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 8 ಕೋಟಿ ರೂ. ಹಣವನ್ನು (Money) ಹೊಳಲ್ಕೆರೆ ಪೊಲೀಸರು (Holalkere Police) ಜಪ್ತಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಬಳಿ ಇನೋವಾ ಕಾರಿನಲ್ಲಿ ತೆರಳುತಿದ್ದ ಚಾಲಕ ಸಚಿನ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾರಿನಲ್ಲಿ ತಂಬಾಕು ಚೀಲಗಳಲ್ಲಿ ತುಂಬಲಾಗಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಹಣ ಚಿತ್ರದುರ್ಗದ ಅಡಿಕೆ ವರ್ತಕರಿಗೆ ಸೇರಿದ್ದು ಎಂಬ ಅನುಮಾನವಿದ್ದು, ಖಚಿತ ಮಾಹಿತಿಗಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಲಾಗಿದೆ. ವಿಚಾರಣೆ ಬಳಿಕ ಈ ಹಣ ಯಾರಿಗೆ ಸೇರಿದ್ದು ಹಾಗೂ ಯಾವ ಕಾರಣಕ್ಕೆ ಸಾಗಿಸಲಾಗುತ್ತಿತ್ತು ಎಂಬುದು ತಿಳಿಯಲಿದೆ ಎಂದು ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿಯ ದರ್ಶನಕ್ಕೆ ಪ್ರಾಯೋಗಿಕ ಹಾರಾಟ
ಚಿತ್ರದುರ್ಗ: ಕಂದಾಯ ಇಲಾಖೆ (Department of Revenue) ಪ್ರಧಾನ ಕಾರ್ಯದರ್ಶಿ (Principal Secretary) ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ (Holalkere) ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಬುಧವಾರ ರಾತ್ರಿ 10 ಗಂಟೆಯ ಸಮಯದಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಎಂಬವರಿಗೆ ಸೇರಿದ ಕಾರು (Car) ರಿವರ್ಸ್ ತೆಗೆಯುವ ಸಂದರ್ಭ ಕುನಗಲಿ ಗ್ರಾಮದ ಬಸವರಾಜಪ್ಪ (68) ಅವರ ಬೈಕ್‌ಗೆ (Bike) ಡಿಕ್ಕಿಯಾಗಿದೆ. ಘಟನೆಯಿಂದ ಬೈಕ್ ಸವಾರ ಬಸವರಾಜಪ್ಪಗೆ ಗಂಭೀರ ಗಾಯಗಳಾಗಿದ್ದವು. ಇದನ್ನೂ ಓದಿ: ಮಾಜಿ ಸಂಸದರ ಪತ್ನಿಯ ಕತ್ತಿಗೆ ಕೈ ಹಾಕಿ ಮಾಂಗಲ್ಯ ಸರ ಕಳ್ಳತನ
ಗಂಭೀರ ಗಾಯಗೊಂಡಿದ್ದ ಪರಿಣಾಮ ಬಸವರಾಜಪ್ಪನನ್ನು ಶಿವಮೊಗ್ಗ (Shivamogga) ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕಂದಾಯ ಸಚಿವರಾದ ಕೃಷ್ಣಭೈರೇಗೌಡರ ಜೊತೆಗೆ ಮುಖ್ಯ ಕಾರ್ಯದರ್ಶಿ ತೆರಳಿದ್ದ ವೇಳೆ ಅಪಘಾತವಾಗಿದೆ (Accident) ಎಂದು ತಿಳಿದುಬಂದಿದೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಧನುಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟಿಬೆಟಿಯನ್ ಕಾಲೋನಿಯಲ್ಲಿ ಮಾಜಿ ಸೈನಿಕನಿಂದ ಯುವಕನ ಹತ್ಯೆ
ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ (Holalkere BJP MLA Chandrappa) ಹೆಸರನ್ನು ಬರೆದಿಟ್ಟು ಗ್ರಾಮ ಪಂಚಾಯತ್ ಕ್ಲರ್ಕ್ (Village Panchayat Clerk) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga ) ಜಿಲ್ಲೆಯ ಹೊಸದುರ್ಗದ ಜಾನಕಲ್ ಬಳಿ ನಡೆದಿದೆ.
ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಪಂಚಾಯತ್‌ನ ತಿಪ್ಪೇಸ್ವಾಮಿ ಆತ್ಮಹತ್ಯೆಗೆ (Suicide) ಶರಣಾದ ಕ್ಲರ್ಕ್. ಅಕ್ರಮ ಖಾತೆ ಮಾಡಿಕೊಡುವ ವಿಚಾರಕ್ಕೆ ಹೊಳಲ್ಕೆರೆ ಕ್ಷೇತ್ರದ ಶಾಸಕಎಂ. ಚಂದ್ರಪ್ಪ,ತಾಪಂ ಇಒ ರವಿ ಹಾಗೂ ಗ್ರಾಪಂ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಒತ್ತಡ ಹೇರಿದ್ದರು. ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಅವರ ಕಿರುಕುಳ ತಾಳಲಾರದೇ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮರಣ ಪತ್ರದಲ್ಲಿ ಮೃತ ತಿಪ್ಪೇಸ್ವಾಮಿ ಉಲ್ಲೇಖಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಗೆ ತಿಪ್ಪೇಸ್ವಾಮಿಯವರ ಪುತ್ರಿ ಆಶಾ ರಾಜಶೇಖರ್ ದೂರು ನೀಡಿದ್ದಾರೆ. ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಗ್ರಾ.ಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು ಮಾತ್ರ ದೂರು ದಾಖಲಾಗಿದೆ.
ಈ ಸಂಬಂಧ ದೂರುದಾರರಾದ ಆಶಾ ಅವರನ್ನು ಸಂಪರ್ಕಿಸಿ ಡೆತ್ ನೋಟಲ್ಲಿ ಶಾಸಕರ ಹೆಸರಿದೆ. ಆದರೆ ನೀವ್ಯಾಕೆ ದೂರಿನಲ್ಲಿ ಕೇವಲ ಗ್ರಾಪಂ ಸದಸ್ಯರ ವಿರುದ್ಧ ದೂರು ನೀಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಈ ಪ್ರಕರಣದ ಸಂಬಂಧ ಏನು ಹೇಳುವುದಿಲ್ಲ.ನಾವು ದುಃಖದಲ್ಲಿದ್ದೇವೆ ಎಂದು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.
ಚಿತ್ರದುರ್ಗ ಎಸ್ಪಿ ಪರಶುರಾಮ್ ಅವರನ್ನು ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ದೂರವಾಣಿ ಮೂಲಕ ಸಂಪರ್ಕಿಸಿದೆ. ಆಗ ಅವರು ಈ ಸಂಬಂಧ ದೂರುದಾರರು ದೂರಿನಲ್ಲಿ ನೀಡಿರುವ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಒಂದು ವೇಳೆ ಪ್ರಕರಣದ ಸಂಬಂಧ ಅಗತ್ಯವಿದ್ದರೆ ಶಾಸಕರನ್ನು ವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಸದುರ್ಗ ಠಾಣೆ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.
ಚಿತ್ರದುರ್ಗ: ಹೊಳಲ್ಕೆರೆ (Holalkere) ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿದೆ. ಈ ಬಾರಿ ಚುನಾವಣೆಗೆ ಹೊಳಲ್ಕೆರೆ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಮಾಜಿ ಸಚಿವ ಆಂಜನೇಯ (Anjaneya), ಬಿಜೆಪಿಯಿಂದ (BJP) ಎಂ.ಚಂದ್ರಪ್ಪ (M.Chandrappa), ಜೆಡಿಎಸ್ (JDS) ಪಕ್ಷದಿಂದ ಇಂದ್ರಜಿತ್ ನಾಯ್ಕ್ (Indrajith Naik) ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಟಿಹೆಚ್‌ಒ ಡಾ.ಜಯಸಿಂಹ (Dr.Jayasimha) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಆಂಜನೇಯ:
ಮಾಜಿ ಸಚಿವ ಆಂಜನೇಯ ಕಳೆದ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಆದರೆ ಸಚಿವರಾಗಿದ್ದ ಸಮಯದಲ್ಲಿ ಜನರ ಕೈಗೆ ಸಿಗಲಿಲ್ಲವೆಂಬ ಕಾರಣಕ್ಕೆ ಹೊಳಲ್ಕೆರೆ ಮತದಾರರು ಅವರನ್ನು ಸೋಲಿಸಿದ್ದರು.
ಎಂ.ಚಂದ್ರಪ್ಪ:
ಬಿಎಸ್‌ವೈ ಬೆಂಬಲಿಗರು ಆಂಜನೇಯ ಅವರ ವಿರುದ್ಧ ಎಂ.ಚಂದ್ರಪ್ಪ ಅವರನ್ನು ಗೆಲ್ಲಿಸಿದ್ದರು. ಆದರೆ ಈ ಬಾರಿ ಚಂದ್ರಪ್ಪ ವಿರುದ್ಧ ವಿರೋಧಿ ಅಲೆಯಿದೆ. ಸರ್ಕಾರದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಗೂಟದ ಕಾರಲ್ಲಿ ಓಡಾಡಿದ ಚಂದ್ರಪ್ಪ, ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂಬ ಆರೋಪವಿದೆ.
ಕಳೆದ ಬಾರಿ ಸೋತರೂ ಸಹ ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆಂಜನೇಯ ಅವರ ಪರ ಜನರಿಗೆ ಸ್ವಲ್ಪ ಅನುಕಂಪವಿದೆ. ಹಾಗೆಯೇ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಆಂಜನೇಯ ಅವರ ಸರಳತೆ ಹಾಗೂ ಸೌಜನ್ಯತೆ ಹೊಳಲ್ಕೆರೆಯಲ್ಲಿ ವರ್ಕೌಟ್ ಆಗುತ್ತಾ ಎನ್ನುವುದು ಸದ್ಯದ ಕುತುಹೂಲ.
ಈ ಕ್ಷೇತ್ರದಲ್ಲಿ ಸಿರಿಗೆರೆ ಮಠ ಹಾಗೂ ಸಾದರ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಸಿರಿಗೆರೆ ಮಠಾಧಿಪತಿಯ ಕೃಪಾಕಟಾಕ್ಷ ಪಡೆದವರ ಗೆಲುವು ಸುಲಭವೆಂಬ ಚರ್ಚೆ ನಡೆಯುತ್ತಿದೆ. ಇವರಿಬ್ಬರ ಮಧ್ಯೆ ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಜಯಸಿಂಹ ಕ್ಷೇತ್ರದಲ್ಲಿ ಹೊಸಮುಖವಾಗಿದೆ.
ಡಾ.ಜಯಸಿಂಹ:
ಡಾ.ಜಯಸಿಂಹ ಸರಳ ಮತ್ತು ಮೃದು ಸ್ವಭಾವದವರಾಗಿದ್ದಾರೆ. ಅಲ್ಲದೇ ಇವರು ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಪರ ಕ್ಷೇತ್ರದ ಜನರ ಒಲವಿದೆ. ಬಿಜೆಪಿ, ಕಾಂಗ್ರೆಸ್ ಮಧ್ಯೆ ಮೂರನೆಯವರಾದ ಜಯಸಿಂಹ ಅವರಿಗೆ ಮತದಾರರು ಮಣೆ ಹಾಕಿದರೂ ಅಚ್ಚರಿ ಪಡುವಂತಿಲ್ಲ. ಅಲ್ಲದೇ ಲಂಬಾಣಿ ಸಮುದಾಯ ಸಹ ಒಳಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಅಭಿಯಾನ ನಡೆಸುತ್ತಿದ್ದು, ಈ ನಡೆ ಜಯಸಿಂಹ ಅವರಿಗೆ ವರವಾಗಬಹುದು.
ಜೆಡಿಎಸ್‌ನಿಂದ ಸ್ಪರ್ಧಿಸಿರುವ ಇಂದ್ರಜಿತ್ ನಾಯ್ಕ್ ಸಹ ಲಂಬಾಣಿ ಸಮುದಾಯದವರಾದರೂ ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ. ಹೀಗಾಗಿ ಹೊಳಲ್ಕೆರೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಆಂಜನೇಯ ಅವರಿಗೆ ಸಹಕಾರಿಯಾಗಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
ಒಟ್ಟು ಮತದಾರರು: 1,97,248
ಪುರುಷರು: 1,17,885
ಮಹಿಳೆಯರು: 1,17,079