Tag: ಹೊಲ

  • ಬಾಯಿಗೆ ಬಟ್ಟೆ ತುರುಕಿ ವಿವಾಹಿತೆ ಮೇಲೆ ಅತ್ಯಾಚಾರ

    ಬಾಯಿಗೆ ಬಟ್ಟೆ ತುರುಕಿ ವಿವಾಹಿತೆ ಮೇಲೆ ಅತ್ಯಾಚಾರ

    ಕೋಲಾರ: ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೈಕಾಲು ಕಟ್ಟಿಹಾಕಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, 28 ವರ್ಷದ ವಿವಾಹಿತೆ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆಯ ಗ್ರಾಮದ ಚಂದ್ರಪ್ಪ ಅತ್ಯಾಚಾರವೆಸಗಿ ಸದ್ಯ ಪರಾರಿಯಾಗಿದ್ದಾನೆ.

    ಬುಧವಾರ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಯಾರೂ ಇಲ್ಲದನ್ನು ಗಮನಿಸಿರುವ ಆರೋಪಿ, ಮಹಿಳೆ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಅರೋಪಿ ಚಂದ್ರಪ್ಪನಿಗಾಗಿ ಬಲೆ ಬೀಸಿದ್ದಾರೆ.

  • ಹೊಲಕ್ಕೆ ನುಗ್ಗಿದ 8 ಅಡಿ ಉದ್ದದ ಮೊಸಳೆ- ರೈತರಲ್ಲಿ ಆತಂಕ

    ಹೊಲಕ್ಕೆ ನುಗ್ಗಿದ 8 ಅಡಿ ಉದ್ದದ ಮೊಸಳೆ- ರೈತರಲ್ಲಿ ಆತಂಕ

    ಬಾಗಲಕೋಟೆ: ರೈತರ ಹೊಲಕ್ಕೆ ಮೊಸಳೆ ನುಗ್ಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ನಡೆದಿದೆ.

    ರಮೇಶ್ ಹಂಚಿನಾಳ ಹಾಗೂ ಮಲ್ಲಪ್ಪ ಮೇಟಿ ಎಂಬವರ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಘಟಪ್ರಭಾ ನದಿಯಿಂದ ಎಂಟು ಅಡಿ ಉದ್ದದ ಮೊಸಳೆ ಹೊಲಕ್ಕೆ ನುಗ್ಗಿದ್ದು, ಮುಳ್ಳಿನ ಕಂಟಿಯಲ್ಲಿ ಸೇರಿಕೊಂಡಿದೆ.

    ಮೊಸಳೆ ಕಂಡು ರೈತರು ಆತಂಕಕ್ಕೀಡಾಗಿದ್ದು ಮೊಸಳೆ ಸ್ಥಳಾಂತರಕ್ಕೆ ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

  • ಹೈವೇಯಲ್ಲಿದ್ದ ಬಾರ್ ಹೊಲಕ್ಕೆ ಶಿಫ್ಟ್ – ಮಾಲೀಕನ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

    ಹೈವೇಯಲ್ಲಿದ್ದ ಬಾರ್ ಹೊಲಕ್ಕೆ ಶಿಫ್ಟ್ – ಮಾಲೀಕನ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

    ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿ ಇರುವ ಬಾರ್‍ಗಳನ್ನು ಸರ್ಕಾರ ಬಂದ್ ಮಾಡಿಸಿದೆ. ಆದ್ರೆ ಅದಕ್ಕೂ ವಾಮ ಮಾರ್ಗ ಕಂಡುಕೊಂಡ ಬಾರ್ ಮಾಲೀಕರು ಹೈವೇ ಪಕ್ಕದಲ್ಲಿ ಇರುವ ಹೊಲದಲ್ಲಿ ಬಾರ್ ಗಳನ್ನು ಓಪನ್ ಮಾಡಿಕೊಂಡಿವೆ.

    ಹುಬ್ಬಳ್ಳಿಯ ಗಿರಣಿ ಚಾಳದ ಪಕ್ಕದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಬಹುತೇಕ ಬಾರ್ ಗಳನ್ನು ಅಬಕಾರಿ ಇಲಾಖೆ ಬಂದ್ ಮಾಡಿಸಿತ್ತು. ಆದ್ರೆ ಅದೇ ಬಾರ್ ಮಾಲೀಕರು ಅಕ್ರಮವಾಗಿ ಹೊಲದಲ್ಲಿ ಬಾರ್ ಓಪನ್ ಮಾಡಿದ್ದಾರೆ.

    ಹೀಗಾಗಿ ಹುಬ್ಬಳ್ಳಿಯ ಗಿರಣಿ ಚಾಳ ನಿವಾಸಿಗಳು ಇದರಿಂದ ಬೇಸತ್ತು ಹೊಲದಲ್ಲಿ ತೆರೆದಿದ್ದ ಬಾರ್ ಬಂದ್ ಮಾಡಿಸಿ, ಜಿಲ್ಲಾ ಅಬಕಾರಿ ಕಚೇರಿ ಎದುರು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಈ ರೀತಿಯಲ್ಲಿ ಬಾರ್ ಗಳನ್ನು ತೆರೆಯಲು ಅನುಮತಿ ನೀಡಬಾರದು ಮತ್ತು ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.