Tag: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ

  • ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

    ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

    ಚಿಕ್ಕಮಗಳೂರು: ಪಾಕಿಸ್ತಾನದ (Pakistan) ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ (Indian Army) ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ (Horanadu Annapoorneshwari Temple) 10 ಲಕ್ಷ ರೂ. ದೇಣಿಗೆ ನೀಡಲಾಗಿದೆ.

    ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿಯವರು ಚೆಕ್ ಹಸ್ತಾಂತರಿಸಿದರು. ಇದನ್ನೂ ಓದಿ: ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

    ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಗುರುವಾರ ರಾತ್ರಿ ಪಾಕ್‌ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್‌ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್‌ ತತ್ತರಿಸಿ ಹೋಗಿದೆ. ಇಷ್ಟಾದರೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.

    ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್‌ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ (Indian Army) ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.

    ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿತ್ತು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

  • ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯ ಚಂಡಿಕಾಯಾಗದಲ್ಲಿ ಭಾಗಿಯಾದ ಬಿಎಸ್‍ವೈ ಕುಟುಂಬ

    ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯ ಚಂಡಿಕಾಯಾಗದಲ್ಲಿ ಭಾಗಿಯಾದ ಬಿಎಸ್‍ವೈ ಕುಟುಂಬ

    – ಅನ್ನಪೂರ್ಣೇಶ್ವರಿಗೆ ರಥೋತ್ಸವ ಸೇವೆ

    ಚಿಕ್ಕಮಗಳೂರು: ಲೋಕಸಭಾ ಚುನಾವಣೆ (General Elections 2024) ಹೊತ್ತಲ್ಲಿ ಟೆಂಪಲ್ ರನ್ ಮುಂದುವರಿಸಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B. S. Yediyurappa), ಕುಟುಂಬ ಸಮೇತರಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ (Horanadu Sri Annapoorneshwari Temple) ಭೇಟಿ ನೀಡಿದ್ದಾರೆ. ಇಂದು ಮುಂಜಾನೆಯಿಂದ ದೇವಾಲಯದಲ್ಲಿ ನಡೆಯುತ್ತಿರುವ ಚಂಡಿಕಾಯಾಗದಲ್ಲಿ ಅವರು ಭಾಗಿಯಾಗಿದ್ದಾರೆ.

    ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಶನಿವಾರ ರಾತ್ರಿ 9 ಗಂಟೆಗೆ ದೇವಾಲಯಕ್ಕೆ ಆಗಮಿಸಿ, ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲೇ ತಂಗಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಯಾಗದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್

    ಶನಿವಾರ ರಾತ್ರಿ ಬಿಎಸ್‍ವೈ ಕುಟುಂಬದ ವತಿಯಿಂದ ಹೊರನಾಡಲ್ಲಿ ರಥೋತ್ಸವ ಸೇವೆ ಸಹ ನಡೆಯಿತು. ಈ ವೇಳೆ ಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಯಡಿಯೂರಪ್ಪ, ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಎಳೆದರು. ರಥೋತ್ಸವ ಸೇವೆಯಲ್ಲಿ ಯಡಿಯೂರಪ್ಪ ಅವರ ಇಡೀ ಕುಟುಂಬ ಪಾಲ್ಗೊಂಡಿತ್ತು. ಇದನ್ನೂ ಓದಿ: Exclusive: ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಕುಕ್ಕರ್‌, ಸೀರೆ ಆರೋಪಕ್ಕೆ ಡಿ.ಕೆ.ಸುರೇಶ್‌ ಟಾಂಗ್‌