Tag: ಹೊಯ್ಸಳ ಪೊಲೀಸ್

  • ಮಲ್ಲೇಶ್ವರಂ ಹೊಯ್ಸಳ ಪೊಲೀಸರಿಂದ ಹಫ್ತಾ ವಸೂಲಿ – ವೀಡಿಯೋ ವೈರಲ್

    ಮಲ್ಲೇಶ್ವರಂ ಹೊಯ್ಸಳ ಪೊಲೀಸರಿಂದ ಹಫ್ತಾ ವಸೂಲಿ – ವೀಡಿಯೋ ವೈರಲ್

    ಬೆಂಗಳೂರು: ಮಲ್ಲೇಶ್ವರಂ (Malleshwaram) ಹೊಯ್ಸಳ ಪೊಲೀಸರಿಂದ(Hoysala Police) ರಾಜಾರೋಷವಾಗಿ ಹಫ್ತಾ ವಸೂಲಿ ಮಾಡಿದ್ದು ಇದೀಗ ಸಾಕ್ಷಿ ಸಮೇತ ದಕ್ಷ ಪೊಲೀಸರ ಬಣ್ಣ ಬಯಲಾಗಿದೆ.

    ಪಾನಿಪುರಿ, ಹೋಟೆಲ್, ಬಾರ್, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಸೇರಿದಂತೆ ರಸ್ತೆಪಕ್ಕದ ಅಂಗಡಿಗಳಲ್ಲಿ ಪ್ರತಿ ದಿನ ಇಂಚ ವಸೂಲಿ ನಡೆಯುತ್ತಿರು ಫೋಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ – ಇಂದು ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯಾಗುವ ಸಾಧ್ಯತೆ

    ಎಕ್ಸ್ಕ್ಲೂಸಿವ್ ಮಗಾ ಎನ್ನುವ ಎಕ್ಸ್ ಖಾತೆಯಲ್ಲಿ ವಿಡಿಯೋ ಸಮೇತವಾಗಿ ನಗರ ಕಮಿಷನರ್‌ಗೆ ಟ್ವೀಟ್ ಮಾಡಲಾಗಿದೆ. ರಸ್ತೆಪಕ್ಕದ ಅಂಗಡಿಗಳಲ್ಲಿ ಪ್ರತಿ ದಿನ ಹಣ ವಸೂಲಿ. ಹಲವು ಕಡೆ ನಿಂತಿರುವ ಬೆಂಗಳೂರಿನ ದಕ್ಷ ಪೊಲೀಸರು ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    KA02G4721 ಹೊಯ್ಸಳ ವಾಹನ ಪೋಟೋ ವಿಡಿಯೋ ಸಮೇತ ಟ್ವೀಟ್ ಮಾಡಿದ್ದು ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೋದಿ ಉದ್ಘಾಟಿಸಿದ್ದ ಶಿವಾಜಿ ಮಹರಾಜ್‌ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

  • ಅಕ್ಕನೊಂದಿಗೆ ಸಲುಗೆಯಿಂದಿದ್ದ ವ್ಯಕ್ತಿಯ ಹತ್ಯೆಗೆ ಸುಪಾರಿ- ತಮ್ಮನ ಬಂಧನ

    ಅಕ್ಕನೊಂದಿಗೆ ಸಲುಗೆಯಿಂದಿದ್ದ ವ್ಯಕ್ತಿಯ ಹತ್ಯೆಗೆ ಸುಪಾರಿ- ತಮ್ಮನ ಬಂಧನ

    ಬೆಂಗಳೂರು: ಅಕ್ಕನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯೊಬ್ಬನ ಹತ್ಯೆಗೆ ಸುಪಾರಿ ಕೊಟ್ಟ ಆರೋಪಿಯನ್ನು ಚಿಕ್ಕಜಾಲ ಪೊಲೀಸರು (Chikkajala Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹೇಮಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ತನ್ನ ಅಕ್ಕನ ಜೊತೆ ಶಶಾಂಕ್ ಎಂಬಾತ ಸಲುಗೆಯಿಂದ ಇದ್ದಿದ್ದಕ್ಕೆ ಆರೋಪಿ ಆತನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ. ಸುಪಾರಿ ಪಡೆದಿದ್ದ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿ ಹಣ ಕೊಟ್ಟಿದ್ದು ಬಾಯ್ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ತಲೆಗೆ 25 ಲಕ್ಷ ಬಹುಮಾನ ಘೋಷಿಸಲ್ಪಟ್ಟ ನಾಯಕ ಸೇರಿ 29 ನಕ್ಸಲರು ಬಲಿ

    ಸೋಮವಾರ ರಾತ್ರಿ ಮಂಕಿ ಕ್ಯಾಪ್ ಹಾಕಿಕೊಂಡು ಮಾರಕಾಸ್ತ್ರ ಹಿಡಿದು ಶಶಾಂಕ್‍ಗಾಗಿ ಚಿಕ್ಕಜಾಲ ಬಳಿಯ ಗಂಟಿಗಾನಹಳ್ಳಿಯಲ್ಲಿ ಸುಪಾರಿ ಗ್ಯಾಂಗ್ ಕಾಯುತ್ತಿತ್ತು. ಈ ವೇಳೆ ಹೊಯ್ಸಳ ಪೊಲೀಸರು (Hoysala Police) ರೌಂಡ್ಸ್‌ಗೆ ತೆರಳಿದ್ದಾಗ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿತ್ತು. ಬಳಿಕ ತನಿಖೆ ವೇಳೆ ಸುಪಾರಿ ನೀಡಿದ್ದ ಹೇಮಂತ್ ರೆಡ್ಡಿ ಹೆಸರನ್ನು ಹಂತಕರ ಗ್ಯಾಂಗ್ ಬಾಯ್ಬಿಟ್ಟಿತ್ತು.

    ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಳ್ಳತನ ಮಾಡಿದ್ದ ಎಎಸ್‌ಐ ಬೈಕನ್ನೇ ಬಳಸಿ ದರೋಡೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

  • ಹೊಯ್ಸಳ ಪೊಲೀಸರ ಮೇಲೆ ಲಾಂಗ್ ಬೀಸಿದ ಸುಲಿಗೆಕೋರರು

    ಹೊಯ್ಸಳ ಪೊಲೀಸರ ಮೇಲೆ ಲಾಂಗ್ ಬೀಸಿದ ಸುಲಿಗೆಕೋರರು

    – ಹೋಂಗಾರ್ಡ್ ಗೆ ಲಾಂಗ್‍ನಿಂದ ಹಲ್ಲೆ, ಎಎಸ್‍ಐ ಬಚಾವ್

    ಬೆಂಗಳೂರು: ನಗರದಲ್ಲಿ ಸುಲಿಗೆಗಾರರ ಹವಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‍ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಹೊಯ್ಸಳ ಪೊಲೀಸರ ಮೇಲೆ ದಾಳಿಯ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

    ಎರಡು ಡಿಯೋ ಬೈಕ್ ನಲ್ಲಿ ಮುಸುಕು ಹಾಕಿಕೊಂಡು ನಾಲ್ವರು ಸುಲಿಗೆಕೋರರು ಬಂದಿದ್ದಾರೆ. ಈ ವೇಳೆ ನಗರದ ಬಿಇಎಲ್ ಸರ್ಕಲ್‍ನಲ್ಲಿ ರಾತ್ರಿ ಸುಮಾರು 2.30 ಕ್ಕೆ ಪಾರ್ಕ್ ಮಾಡಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಕ್ಯಾಬ್ ಚಾಲಕರ ಬಳಿಯಿದ್ದ ಹಣ, ಪರ್ಸ್, ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್ ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ.

    ಹಣ ಕಳೆದುಕೊಂಡ ಕ್ಯಾಬ್ ಚಾಲಕ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ದರೋಡೆಕೋರರ ಬೆನ್ನತ್ತಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಪರಿಣಾಮ ಹೋಂಗಾರ್ಡ್ ಹನುಮಂತರಾಜು ಎಂಬವರ ತಲೆಗೆ ಲಾಂಗಿನಿಂದ ಹೊಡೆದು ಪರಾರಿಯಾಗಿದ್ದಾರೆ.

    ಸದ್ಯಕ್ಕೆ ಹೋಂಗಾರ್ಡ್ ಹನುಮಂತರಾಜು ಅವರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಯ್ಸಳದಲ್ಲಿದ್ದ ಎಎಸ್‍ಐ ಮೋಪುರಿ ಎಂಬವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬಿಸಿದ್ದಾರೆ.