Tag: ಹೊಟ್ಟೆನೋವು

  • ಹೊಟ್ಟೆ ನೋವಿನ ಚಿಕಿತ್ಸೆಗೆ ಬಂದವ ಸಾವು- ಪುತ್ತೂರಿನ ಖ್ಯಾತ ವೈದ್ಯರ ವಿರುದ್ಧ ಆರೋಪ

    ಹೊಟ್ಟೆ ನೋವಿನ ಚಿಕಿತ್ಸೆಗೆ ಬಂದವ ಸಾವು- ಪುತ್ತೂರಿನ ಖ್ಯಾತ ವೈದ್ಯರ ವಿರುದ್ಧ ಆರೋಪ

    ಮಂಗಳೂರು: ಹೊಟ್ಟೆ ನೋವಿನ (Stoamch Pain) ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ಹುಡುಗ ಸಾವನ್ನಪ್ಪಿದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ನಡೆದಿದೆ.

    ಮೃತ ದುರ್ದೈವಿಯನ್ನು ಸೃಜಿತ್(17) ಎಂದು ಗುರುತಿಸಲಾಗಿದ್ದು, ಈತ ಸುಳ್ಯದ (Sullia) ಪೈಚಾರ್ ಶಾಂತಿನಗರ ನಿವಾಸಿ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೃಜಿತ್‍ನನ್ನು ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ (Chethana Hospital Puttur) ದಾಖಲಿಸಲಾಗಿತ್ತು. ಅಂತೆಯೇ ಖ್ಯಾತ ವೈದ್ಯ ಸೃಜಿತ್‍ಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಅಂದು ರಾತ್ರಿ ವೇಳೆ ಆರೋಗ್ಯ ಸ್ಥಿತಿ ಗಂಭೀರವಿದೆ. ಹೀಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ.

    ಇದೀಗ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯಿಂದ ಸೃಜಿತ್ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಚೇತನಾ ಆಸ್ಪತ್ರೆಯ ವೈದ್ಯರು ವೆಂಟಿಲೇಟರ್ ವ್ಯವಸ್ಥೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆರೋಪಿಸಿ ಸೃಜಿತ್ ಶವವನ್ನ ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿ ಲೋಪವೆಸಗಿದ ಖ್ಯಾತ ವೈದ್ಯರನ್ನ ಬಂಧಿಸಲು ಪಟ್ಟು ಹಿಡಿದರು. ಮೃತನ ಮನೆಯವರಿಗೆ ಪರಿಹಾರ ನೀಡುವಂತೆಯೂ ಒತ್ತಾಯಿಸಲಾಯಿತು.

    ಮೂರು ದಿನಗಳ ಒಳಗೆ ಲೋಪವೆಸಗಿದ ವೈದ್ಯರನ್ನ ಬಂಧಿಸಬೇಕು. ಇಲ್ಲದಿದ್ದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಘಟನೆ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಆತ್ಮಹತ್ಯೆ

    ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಆತ್ಮಹತ್ಯೆ

    ದಾವಣಗೆರೆ: ಬಹು ದಿನಗಳಿಂದ ಹೊಟ್ಟೆ ನೋವಿನಿಂದ (Stomach Pain) ಬಳಲುತ್ತಿದ್ದ ಶಿಕ್ಷಕನೊಬ್ಬ (Teacher) ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಪಟ್ಟಣದಲ್ಲಿ ನಡೆದಿದೆ.

    ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ  ಕೃಷ್ಣನಾಯ್ಕ್ (42) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಇವರು ಮೈಸೂರಿನಲ್ಲಿ (Mysuru) ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರು, ನಾಲ್ಕು ದಿನಗಳ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಸಹ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಚನ್ನಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರು ಹೊಂದಿರುವವರು ಎಚ್ಚರ – ಮೈಸೂರಿನಲ್ಲಿ ಸಕ್ರಿಯವಾಗಿದೆ ಹೈಟೆಕ್ ಕಳ್ಳರ ಗ್ಯಾಂಗ್

    ಕೆರೆಯ ವಾಕಿಂಗ್ ಪಾತ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಜನರಿಗೆ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ. ಕೂಡಲೇ ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಕೆರೆಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ

  • ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ (Telangana CM) ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು ಭಾನುವಾರ ಹೊಟ್ಟೆನೋವಿನ (Abdominal Pain) ಹಿನ್ನೆಲೆ ಹೈದರಾಬಾದ್‌ನ (Hyderabad) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದ ಮುಖ್ಯಸ್ಥ ಕೆಸಿಆರ್ ಅವರು ಹೊಟ್ಟೆನೋವಿನ ಹಿನ್ನೆಲೆ ನಗರದ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೊಟ್ಟೆಯಲ್ಲಿ ಕಂಡುಬಂದಿರುವ ಹುಣ್ಣಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಇದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಸೂಕ್ತವಾದ ಔಷಧಿ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಶೂಟೌಟ್ ಕೇಸ್- A3 ಆರೋಪಿ ಲಿಂಬಾವಳಿ ಹೇಳಿಕೆ ಕೂಡ ದಾಖಲು

    ಕೆಸಿಆರ್ (KCR) ಆಸ್ಪತ್ರೆ ದಾಖಲಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ತೆಲಂಗಾಣದ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಕೆ ಚಂದ್ರಶೇಖರ್ ರಾವ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: RRR-ನಾಟು ನಾಟು ಹಾಡಿಗೆ ಆಸ್ಕರ್ : ಸಂತಸ ವ್ಯಕ್ತ ಪಡಿಸಿದ ಲಹರಿ ವೇಲು

  • ಜ್ವರ, ತಾಳಲಾರದ ಹೊಟ್ಟೆ ನೋವು ಸಮಸ್ಯೆ – ಕರುಳಕುಡಿ ಕೊಂದು ತಾಯಿಯೂ ಸೂಸೈಡ್

    ಜ್ವರ, ತಾಳಲಾರದ ಹೊಟ್ಟೆ ನೋವು ಸಮಸ್ಯೆ – ಕರುಳಕುಡಿ ಕೊಂದು ತಾಯಿಯೂ ಸೂಸೈಡ್

    ಬೆಂಗಳೂರು: ಜ್ವರ ಹಾಗೂ ಹೊಟ್ಟೆ ನೋವು ತಾಳಲಾರದೆ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಆರ್ ಆರ್ ನಗರದ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತರನ್ನು ದೀಪಾ (31) ಮತ್ತು ಈಕೆಯ ಪುತ್ರಿ ರೀಯಾ(3) ಎಂದು ಗುರುತಿಸಲಾಗಿದೆ. ಚಿಕಿತ್ಸೆ ಪಡೆದರೂ ಅನಾರೋಗ್ಯ ಕಮ್ಮಿಯಾಗಿರಲಿಲ್ಲ. ಹೀಗಾಗಿ ಜಿಗುಪ್ಸೆಗೊಳಗಾಗಿದ್ದ ದೀಪ ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿದ್ದಾರೆ. ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬ್ರಹ್ಮವರ ಮೂಲದ ದೀಪ ಹಾಗೂ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿರೋ ಆದರ್ಶ್ ಅವರನ್ನು 2017 ರಲ್ಲಿ ವರಿಸಿದ್ದರು. ಮದ್ವೆಯಾದಗಿನಿಂದಲೂ ಮಂತ್ರಿ ಅಪಾಟ್ರ್ಮೆಂಟ್ ನಲ್ಲಿ ದಂಪತಿ ವಾಸವಾಗಿದ್ದಾರೆ. ಇದನ್ನೂ ಓದಿ: ಸುಳ್ಳಾದ ಆತ್ಮಹತ್ಯೆ ನಾಟಕ – ಪತಿಗೆ ಮೂಹೂರ್ತ ಇಟ್ಟಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಮಗುವನ್ನು ಕೊಂದು ದೀಪ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ “Nobody is responsible for it i just felt life is full of shits i am sorry mom and divya Love you shona” ಎಂದು ಉಲ್ಲೇಖಿಸಿದ್ದಾರೆ.

    Live Tv

  • ಹೊಟ್ಟೆ ನೋವು- 11 ತಿಂಗಳ ಹಸುಗೂಸಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾದ ತಾಯಿ

    ಹೊಟ್ಟೆ ನೋವು- 11 ತಿಂಗಳ ಹಸುಗೂಸಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾದ ತಾಯಿ

    ದಾವಣಗೆರೆ: ಬಹು ದಿನಗಳಿಂದ ಇದ್ದ ಹೊಟ್ಟೆನೋವು ತಾಳಲಾರದೆ 11 ತಿಂಗಳ ಮಗುವಿಗೆ ನೇಣು ಬಿಗಿದು, ತಾನು ನೇಣಿಗೆ ಶರಣಾದ ಮನಕಲುಕುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಶ್ವೇತಾ (26) ಮತ್ತು 11 ತಿಂಗಳ ಜಾಹ್ನವಿ ಮೃತ ದುರ್ದೈವಿಗಳಾಗಿದ್ದು, ಇಂದು ಬೆಳಗ್ಗೆ ಮನೆ ಮುಂದೆ ಚರಂಡಿ ಕಾಮಗಾರಿಗಾಗಿ ಜೆಸಿಬಿ ಬಂದಿದ್ದರಿಂದ ಶ್ವೇತಾಳ ತಂದೆ ತಿಮ್ಮಪ್ಪ ಕೆಲಸಗಾರರಿಂದ ಜೆಸಿಬಿಯ ಕೆಲಸ ಮಾಡಿಸುತ್ತಿದ್ದರು. ಮನೆಯಲ್ಲಿ ಶ್ವೇತಾ ಮತ್ತು ಜಾಹ್ನವಿ ಮಾತ್ರ ಇದ್ದರು. ಅಲ್ಲದೆ ಉಳಿದವರು ತೋಟದಲ್ಲಿ ಪೂಜೆ ನಡೆಯುತ್ತಿದ್ದರಿಂದ ಎಲ್ಲರು ೂ ಅಲ್ಲಿಗೆ ಹೋಗಿದ್ದರು.

    ಮನೆಯಲ್ಲಿ ಶ್ವೇತಾ ಹಾಗೂ 11 ತಿಂಗಳ ಮಗು ಮಾತ್ರ ಇದ್ದು, ಬಹು ದಿನಗಳಿಂದ ತಾಳಲಾರದ ಹೊಟ್ಟೆ ನೋವು ಇದ್ದುದರಿಂದ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಲಾಗಿತ್ತು. ಆದರೂ ಗುಣಮುಖರಾಗಿರಲಿಲ್ಲ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ಶ್ವೇತಾ ತನ್ನ ಮಗುವಿಗೆ ನೇಣು ಬಿಗಿದು, ತಾನೂ ನೇಣು ಬಿಗಿದುಕೊಂಡು ಸಾವನ್ನಪ್ಪಿದಾಳೆ ಎಂದು ಪೊಲೀಸ್ ಠಾಣೆಯ ದೂರಿನಲ್ಲಿ ದಾಖಲಾಗಿದೆ. ಶ್ವೇತಾಳ ತಂದೆ ತಿಮ್ಮಪ್ಪ ನೀರು ಕುಡಿಯಲೆಂದು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮನೆಯ ಅಟ್ಟದ ಮೇಲೆ ತೊಲೆಗೆ ಮಗುವನ್ನು ನೇಣು ಹಾಕಿ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಪಿಎಸ್‍ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದರ್ಶನ್‍ಗೆ ಅನಾರೋಗ್ಯ – ಮುಂಜಾನೆ ಆಸ್ಪತ್ರೆಗೆ ದಾಖಲು

    ದರ್ಶನ್‍ಗೆ ಅನಾರೋಗ್ಯ – ಮುಂಜಾನೆ ಆಸ್ಪತ್ರೆಗೆ ದಾಖಲು

    ಮೈಸೂರು: ನಟ ದರ್ಶನ್‍ಗೆ ಅನಾರೋಗ್ಯದಿಂದ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಮುಂಜಾನೆ 4 ಗಂಟೆ ವೇಳೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸ್ಪೇಷಲ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇಂದು ಗ್ರಾಸ್ಟ್ರಿಕ್ ಪರಿಣಾಮ ತೀವ್ರ ಥರವಾದ ಹೊಟ್ಟೆನೋವಿನಿಂದಾಗಿ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದರ್ಶನ್ ಅವರಿಗೆ ಒಂದು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇಂದು ಆಸ್ಪತ್ರೆಯಲ್ಲೇ ಡಿ ಬಾಸ್ ಉಳಿದಿದ್ದಾರೆ. ವೈದ್ಯರ ಸಲಹೆ ಮೇರೆಗೆ ಒಂದು ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ.

    ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ಹಾಡು ಮಂಗಳವಾರ ಬಿಡುಗಡೆಯಾಗಿತ್ತು. ಈ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ 11 ಲಕ್ಷ ವೀಕ್ಷಣೆ ಕಂಡಿದೆ. ಈ ವಿಚಾರವಾಗಿ ನಿನ್ನೆ ಟ್ವೀಟ್ ಮಾಡಿದ್ದ ದರ್ಶನ್ ಅವರು, ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ ರಾಬರ್ಟ್ ಚಿತ್ರದ ಮೊದಲ ಹಾಡು ಬಾ ಬಾ ಬಾ ನಾನ್ ರೆಡಿ ಈಗ ನಿಮ್ಮ ಮುಂದೆ. ನೋಡಿ ಆಶೀರ್ವದಿಸಿ ಎಂದು ಟ್ವೀಟ್ ಮಾಡಿದ್ದರು.

  • ‘ಮಮ್ಮಿ ಸ್ವಾರಿ’ – ಡೆತ್‍ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

    ‘ಮಮ್ಮಿ ಸ್ವಾರಿ’ – ಡೆತ್‍ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

    ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದ ಲಗ್ಗೆರೆಯಲ್ಲಿ ನಡೆದಿದೆ.

    ಗೃಹಣಿ ಭಾರತಿ ನೇಣಿಗೆ ಶರಣಾದ ಮಹಿಳೆ. ಕಳೆದ ಮೂರು ತಿಂಗಳ ಹಿಂದೆ ಭಾರತಿಗೆ ಸತೀಶ್ ಜೊತೆ ಮದುವೆ ಆಗಿತ್ತು. ಇಂದು ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಭಾರತಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

    ಡೆತ್ ನೋಟ್‍ನಲ್ಲಿ ಮಮ್ಮಿ ಕ್ಷಮಿಸಿ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಸಾಕಷ್ಟು ಬಾರಿ ಚಿಕಿತ್ಸೆ ಪಡೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಸತೀಶ್ ನನಗೆ ನಿಮ್ಮ ಜೊತೆ ಬಾಳುವ ಯೋಗ ಮತ್ತು ಯೋಗ್ಯತೆ ಇಲ್ಲ. ದಯವಿಟ್ಟು ಕ್ಷಮಿಸು ಎಂದು ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆದರೆ ಭಾರತಿ ಪೋಷಕರು ಇದು ಆತ್ಮಹತ್ಯೆ ಅಲ್ಲ ಬದಲಾಗಿ ಗಂಡ ಸತೀಶನೇ ಕೊಲೆ ಮಾಡಿ ತಾನೇ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲ ನಗರ ಪೊಲೀಸರು, ಪತಿ ಸತೀಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ.

    ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.

    ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ.

    ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

  • 59 ಇಂಚಿನ ಹೊಟ್ಟೆಯೊಂದಿಗೆ ಪ್ರತಿದಿನ ನರಳಾಡ್ತಿದ್ದಾರೆ ಈ ವ್ಯಕ್ತಿ

    59 ಇಂಚಿನ ಹೊಟ್ಟೆಯೊಂದಿಗೆ ಪ್ರತಿದಿನ ನರಳಾಡ್ತಿದ್ದಾರೆ ಈ ವ್ಯಕ್ತಿ

    ಗುವಾಹಟಿ: ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳೋದು ಅಥವಾ ಹೆಚ್ಚಿಗೆ ಊಟ ಮಾಡಿದಾಗ ಹೊಟ್ಟೆ ಊದಿಕೊಳ್ಳೊದು ಸಾಮಾನ್ಯ. ಆದ್ರೆ ಹೊಟ್ಟೆ ಊತವೇ ಈಗ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿದೆ.

    ಅಸ್ಸಾಂನ ಬಿಕಾಶ್ ಹಜಾರಿಕಾ 61 ಕೆಜಿ ತೂಕವಿದ್ದು, ಅವರ ಹೊಟ್ಟೆ ಊದಿಕೊಂಡಿರುವ ಕಾರಣ ಪ್ರತಿದಿನ ನಡೆದಾಡಲು ಸಾಧ್ಯವಾಗದೆ ನೋವಿನಿಂದ ನರಳುವಂತಾಗಿದೆ. ಇವರು ಕಂಜೆಸ್ಟಿವ್ ಹೆಪಟಾಮೆಗಾಲಿ ಎಂಬ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಲೇ ಅವರ ಹೊಟ್ಟೆ 10 ಕೆಜಿಯಷ್ಟು ಊದಿಕೊಂಡಿದೆ. ಈ ತೊಂದರೆಯಿಂದಾಗಿ 21 ವರ್ಷದ ಬಿಕಾಶ್ ಕಳೆದ 5 ವರ್ಷದಿಂದ ಒಂದು ಸಲಕ್ಕೆ ಸುಮಾರು ಒಂದೂವರೆ ಗಂಟೆಯ ಕಾಲ ಕುಳಿತ ಸ್ಥಿತಿಯಲ್ಲೇ ನಿದ್ದೆ ಮಾಡುವಂತಾಗಿದೆ.

    ಚಿಕಿತ್ಸೆಗೆ ಈಗಾಗಲೇ ತಡವಾಗಿದೆ ಎಂದು ಭಾವಿಸಿರೋ ಬಿಕಾಶ್ ಸದ್ಯ ಬದುಕುವ ಎಲ್ಲಾ ಆಸೆಯನ್ನ ಬಿಟ್ಟಿದ್ದಾರೆ. ಪ್ರತಿದಿನ ನರಳಾಡುತ್ತಿರುವುದರಿಂದ ನಾನು ನಿಧಾನವಾಗಿ ಸಾಯ್ತಿದ್ದೀನಿ. ಏನೇ ಮಾಡಿದ್ರೂ ನೋವನ್ನ ದೂರ ಮಾಡೋಕೆ ಆಗ್ತಿಲ್ಲ ಎಂದು ಬಿಕಾಶ್ ಹೇಳಿದ್ದಾರೆ. ಸರ್ಜರಿಯಿಂದ ಬಿಕಾಶ್ ಅವರನ್ನ ಗುಣಪಡಿಸಬಹುದು. ಆದ್ರೆ ಬಿಕಾಶ್ ತಂದೆ ಗುತ್ತಿಗೆ ನೌಕರರಾಗಿದ್ದು ಸುಮಾರು 5 ಲಕ್ಷಕ್ಕೂ ಮೀರಿದ ಚಿಕಿತ್ಸಾ ವೆಚ್ಛವನ್ನ ಭರಿಸಲು ಕುಟುಂಬಕ್ಕೆ ಸಾಧ್ಯವಿಲ್ಲ.

    ಬಿಕಾಶ್‍ಗೆ ಇದರ ಲಕ್ಷಣ ಕಾಣಿಸಿಕೊಂಡಾದ ಸ್ಥಳೀಯ ವೈದ್ಯರು ಸಣ್ಣ ಇನ್ಫೆಕ್ಷನ್ ಎಂದು ಹೇಳಿ ಕೆಲವು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದ್ರೆ ಅದು ಉಲ್ಭಣಿಸಿದ ನಂತರ ಬಿಕಾಶ್ ಅವರ ಔಷಧಿಗಾಗಿ ಕುಟುಂಬದವರು ಮನೆಯನ್ನೇ ಮಾರಬೇಕಾಯ್ತು. ಇದೀಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದ ಕಾರಣ ಬಿಕಾಶ್ ಬದುಕುವ ಯಾವುದೇ ಭರವಸೆಯನ್ನ ಇಟ್ಟುಕೊಂಡಿಲ್ಲ.