Tag: ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

  • ಆಧುನಿಕ ಜೀವನಶೈಲಿ, ಒತ್ತಡ ಸೂಕ್ಷ್ಮ ಅಂಶಗಳ ಅನಾವರಣ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’

    ಆಧುನಿಕ ಜೀವನಶೈಲಿ, ಒತ್ತಡ ಸೂಕ್ಷ್ಮ ಅಂಶಗಳ ಅನಾವರಣ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’

    ಬೆಂಗಳೂರು: ಟೈಟಲ್ ಹಾಗೂ ಟ್ರೇಲರ್ ನಿಂದಲೇ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸೌಂಡ್ ಮಾಡಿದಂತಹ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ. ಈ ಶುಭ ಶುಕ್ರವಾರ ಥಿಯೇಟರ್ ಗೆ ಲಗ್ಗೆ ಇಟ್ಟಿದೆ. ಈ ವಾರ ಗಾಂಧಿನಗರಕ್ಕೆ ಎಂಟ್ರಿಕೊಟ್ಟ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಹೆಸರಿನ ಪ್ರಯೋಗಾತ್ಮಕ ಸಿನಿಮಾವೊಂದನ್ನ ಕನ್ನಡ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇಂದ್ರಬಾಬು ನಿರ್ದೇಶನವಿರುವ ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದೆ.

    `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿದಂಥಹ ಸಿನಿಮಾ. ಟ್ರೇಲರ್ ರಿಲೀಸ್ ಆದ್ಮೇಲೆ ಸಿನಿಮಾದ ನಿರೀಕ್ಷೆ ಮತ್ತೊಂದಿಷ್ಟು ಜಾಸ್ತಿಯಾಗಿತ್ತು. ಫೈನಲಿ ಇವತ್ತು ಆ ನಿರೀಕ್ಷೆಗೆ ತೆರೆಬಿದ್ದಿದೆ. ಸ್ಟೇಬಲ್ ಅಂಡ್ ಸೆಟಲ್ ಆ್ಯಕ್ಟಿಂಗ್‍ನಿಂದ ಅನಂತ್‍ನಾಗ್ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಬಾಸ್ ಪಾತ್ರದಲ್ಲಿ ಮಿಂಚಿರುವ ರಾಧಿಕಾ ಪ್ರತಿ ಫ್ರೇಮ್‍ನಲ್ಲೂ ಮುದ್ದಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಈ ಎರಡು ಕ್ಯಾರೆಕ್ಟರ್‍ಗಳು ಸಿನಿಮಾದ ಮೂಲ ಆಕರ್ಷಣೆಯಾಗಿದೆ.

    ಕಾರ್ಪೋರೇಟ್ ಬದುಕಿನ ಒದ್ದಾಟ, ಲಿವಿಂಗ್ ಟುಗೇದರ್ ರಿಲೇಷನ್‍ಶಿಪ್ ಪೀಕಲಾಟ, ಜತೆಗೆ ಓಲ್ಡೇಜ್ ಒಂಟಿತನದ ಹೋರಾಟದ ಸುತ್ತ ಸುತ್ತುವ ಈ ಸಿನಿಮಾ, ಮಾಸ್, ಆ್ಯಕ್ಷನ್, ಲವ್ ಚಿತ್ರಗಳನ್ನು ನೋಡಿ ಬೇಸರವಾದವ್ರಿಗೆ ಇಷ್ಟವಾಗುತ್ತದೆ. ರಾಮಚಂದ್ರ ಹಡಪದ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಪ್ರೇಕ್ಷಕರನ್ನ ಕಾಡುತ್ತವೆ.

    ಕಬ್ಬಡಿ ಸಿನಿಮಾ ಖ್ಯಾತಿಯ ಇಂದ್ರಬಾಬು ನಿರ್ದೇಶನದಲ್ಲಿ, ಹರೀಶ್ ಶೇರೆಗಾರ್, ಸುದರ್ಶನ್ ಮತ್ತು ರಾಮಮೂರ್ತಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಆಧುನಿಕ ಜೀವನಶೈಲಿ ಮತ್ತು ಒತ್ತಡ ಎರಡು ಸೂಕ್ಷ್ಮ ಅಂಶ ಚಿತ್ರದಲ್ಲಿ ಅನಾವರಣವಾಗಿದೆ. ಒಟ್ಟಿನಲ್ಲಿ ಮೊದಲ ದಿನವೇ ಗಾಂಧಿನಗರದ ಮಂದಿ, `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಅರ್ಥಪೂರ್ಣ ಮಹತ್ವ ತಿಳಿದುಕೊಂಡು ಸಿನಿಮಾಗೆ ಜೈ ಎಂದಿದ್ದಾರೆ.

  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಬೆಂಗಳೂರು: ಅನಂತ ನಾಗ್ ಸ್ಯಾಂಡಲ್‍ವುಡ್ ಕಂಡ ಮೇರು ಕಲಾವಿದ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಅನಂತನಾಗ್ ಹೊಂದಿದ್ದಾರೆ. ಹಿಂದೆಯೆಲ್ಲಾ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತನಾಗ್ ಇಂದು ಪೋಷಕ ಪಾತ್ರಗಳಿಗೆ ತಮ್ಮ ಅನುಭವದ ಮೂಲಕ ಜೀವ ತುಂಬುತ್ತಿದ್ದಾರೆ. ಕಥೆಯನ್ನು ನೋಡಿ ಒಪ್ಪಿಕೊಳ್ಳುವ ಅನಂತನಾಗ್ ಇಂದಿಗೂ ತಮ್ಮ ಅಮೋಘ ನಟನೆಯ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.

    ಸದ್ಯ ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ವಿಶೇಷ ಸಿನಿಮಾದ ಮೂಲಕ ತೆರೆಯ ಮೇಲೆ ಬರಲಿದ್ದಾರೆ. ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿದ್ದ ನರೇಂದ್ರ ಬಾಬು ಅವರ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.

    ಸ್ವಂತ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಗೆ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅನುಗುಣವಾಗಿ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಬೇರೆ ವ್ಯಕ್ತಿಯ ಕೆಳಗೆ ಕೆಲಸ ಮಾಡಲು ಮುಂದಾಗುತ್ತಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಯಂಗ್ ಜನರೇಷನ್‍ನ್ನು ಎದುರಿಸುವ ಪ್ರಸಂಗ ಬರುತ್ತದೆ. ಈ ಎಲ್ಲ ತಳಮಳ, ಒತ್ತಡ, ಸವಾಲುಗಳನ್ನು ಕಥಾ ನಾಯಕ ಹೇಗೆ ಎದುರಿಸುತ್ತಾನೆ ಎಂಬುವುದು ಚಿತ್ರದ ತಿರುಳು.

    ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಮಿತಾ ಪಾಟೀಲ್, ಅನಿಲ್ ಹುಲಿಯಾ, ಸಂದೀಪ್ ಅರಸ್ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಜನ್ ಲೋಕದ ಧೃವತಾರೆ ಗೀತಾಂಜಲಿ ರೈ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ರೇಬಿನ್ ಬ್ರದರ್‍ಹುಡ್ ಹಿನ್ನೆಲೆ ಸಂಗೀತವನ್ನು ಹೊಂದಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಹರೀಶ್ ಶೇರಿಗಾರ್, ರಾಮಮೂರ್ತಿ ಮತ್ತು ಸುದರ್ಶನ್ ಜೊತೆಯಾಗಿ ಬಂಡವಾಳ ಹಾಕಿದ್ದಾರೆ.