Tag: ಹೊಗೆನಕಲ್

  • ಹೊಗೆನಕಲ್‌ನಲ್ಲಿ ಬೋಟಿಂಗ್ ಸ್ಥಗಿತ – ಪ್ರವಾಸಿಗರಿಗೆ ನಿರ್ಬಂಧ

    ಹೊಗೆನಕಲ್‌ನಲ್ಲಿ ಬೋಟಿಂಗ್ ಸ್ಥಗಿತ – ಪ್ರವಾಸಿಗರಿಗೆ ನಿರ್ಬಂಧ

    ಚಾಮರಾಜನಗರ: ಕೆಆರ್‌ಎಸ್‌ನಿಂದ (KRS) ಒಂದೂವರೆ ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಿದ್ದರಿಂದ ಚಾಮರಾಜನಗರ ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿ ಹೊಗೆನಕಲ್‌ನಲ್ಲಿ (Hogenakkal) ಕಾವೇರಿ (Cauvery River) ಮೈದುಂಬಿ ಹರಿಯುತ್ತಿದ್ದಾಳೆ. ಇದನ್ನೂ ಓದಿ: ಮೆಟ್ಟೂರು ಡ್ಯಾಂ ಭರ್ತಿ, ನೀರು ಬಿಡುವಂತೆ ಸೂಚನೆ – ಕರ್ನಾಟಕದಿಂದ ತಮಿಳುನಾಡಿಗೆ ಎಷ್ಟು ನೀರು ಹೋಗಿದೆ?

    ಹೊಗೆನಕಲ್ ಮೂಲಕ ಕಾವೇರಿ ನೀರು ಮೆಟ್ಟೂರು ಡ್ಯಾಂ ಸೇರುತ್ತಿದ್ದಾಳೆ. ನೀರಿನ ರಭಸಕ್ಕೆ ಕಲ್ಲು, ಗುಡ್ಡ, ಜಲಪಾತಗಳು ಕೂಡ ಮುಳುಗಡೆಯಾಗಿವೆ. ಈ ಹಿನ್ನೆಲೆ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಹೊಗೆನಕಲ್‌ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ಘಟಪ್ರಭಾ – ಮುದೋಳ್‌ನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ

    ನೀರು ರಭಸವಾಗಿ ಹರಿಯುತ್ತಿರುವ ಹಿನ್ನಲೆ ಜಲಪಾತಗಳು ಕಣ್ಮರೆಯಾಗಿವೆ. ಕರ್ನಾಟಕ (Karnataka) ಅಷ್ಟೇ ಅಲ್ಲದೇ ತಮಿಳುನಾಡಿನಲ್ಲೂ (Tamil Nadu) ಕೂಡ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಹೊಗೆನಕಲ್‌ನತ್ತ ಬರುವ ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

     

  • ಹೊಗೆನಕಲ್ ದೋಣಿ ಸವಾರಿ ಬಲು ದುಬಾರಿ – ಅಧಿಕ ಶುಲ್ಕ ವಸೂಲಿ ಆರೋಪ

    ಹೊಗೆನಕಲ್ ದೋಣಿ ಸವಾರಿ ಬಲು ದುಬಾರಿ – ಅಧಿಕ ಶುಲ್ಕ ವಸೂಲಿ ಆರೋಪ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಜಲಪಾತ ಹೊಗೆನಕಲ್‍ನಲ್ಲಿ ದೋಣಿ ವಿಹಾರಕ್ಕೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

    ದೋಣಿ ಮತ್ತು ತೆಪ್ಪ ನಡೆಸುವವರು ಅಧಿಕ ಶುಲ್ಕ ವಸೂಲಿಗೆ ಮುಂದಾಗಿದ್ದಾರೆ ಎಂದು ಪ್ರವಾಸಿಗರು ಆರೋಪ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ದೋಣಿ ಸವಾರಿಗೆ ತಲಾ ಒಬ್ಬರಿಗೆ 125 ರೂ. ಶುಲ್ಕ ವಿಧಿಸಿದೆ. ಆದ್ರೆ ತೆಪ್ಪ ಓಡಿಸುವವರು ಸವಾರಿಗೆ ದುಬಾರಿ ಶುಲ್ಕ ವಸೂಲಿ ಆರೋಪ ಬಂದಿದೆ. ಜೊತೆಗೆ ಎಲ್ಲರಿಗೂ ಕೂಡ ಲೈಫ್ ಜಾಕೆಟ್, ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ ಎಂಬ ಆರೋಪವಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟಿಕಾಯತ್‌ ಮುಖಕ್ಕೆ ಮಸಿ – ವ್ಯಕ್ತಿಗೆ ಥಳಿತ

    125 ರೂ. ಶುಲ್ಕದ ಬದಲು ಅತಿ ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ನಾಲ್ಕು ಜನರ ಸವಾರಿಗೆ 1,500 ರೂ. ಡಿಮ್ಯಾಂಡ್ ಮಾಡ್ತಿದ್ದಾರೆಂದು ಪ್ರವಾಸಿಗರು ತೆಪ್ಪ ನಡೆಸುವವರ ವಿರುದ್ಧ ಆರೋಪ ಹೊರಿಸಿದ್ದಾರೆ. ಈ ಹಗಲು ದರೋಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸ್ತಿದ್ದಾರೆ. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಯೂ ಕೂಡ ಸ್ಥಳದಲ್ಲಿರಲ್ಲ. ಪ್ರಾಣಕ್ಕೆ ಸಂಚಕಾರ ಉಂಟಾಗುವ ಪರಿಸ್ಥಿತಿಯಿದೆ. ಅರಣ್ಯಾಧಿಕಾರಿಗಳು ಎಚ್ಚೆತ್ತು ಅಧಿಕ ಶುಲ್ಕ ವಸೂಲಿ ಮಾಡುವವರ ವಿರುದ್ಧ ಕ್ರಮವಹಿಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ

  • ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಚಾಮರಾಜನಗರ: ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಹೊಗೆನಕಲ್ ಜಲಪಾತಕ್ಕೆ ನಿಷೇಧ ಹೇರಲಾಗಿದೆ.

    ಸುತ್ತಮುತ್ತಲಿನ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ತುಂಬಿವೆ. ಆದ್ದರಿಂದ ಕೆಆರ್‍ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಹರಿಯುತ್ತಿರುವುದರಿಂದ ಕೊಳ್ಳೆಗಾಲದ ಸಮೀಪವಿರುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗಿದೆ.

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಕಡಿಮೆಯಾಗುವವರೆಗೂ ಪ್ರವಾಸಿಗರಿಗೆ ನಿಷೇಧ ಮುಂದುವರಿಯಲಿದೆ.

    ಸದ್ಯ ಹೊಗೆನಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಸಹ ನೀರಿನಿಂದ ಮುಳುಗಡೆಯಾಗಿದೆ. ಈ ಮೊದಲು ಬೆಂಗಳೂರು ಮೂಲಕ ಇಬ್ಬರು ಟೆಕ್ಕಿಗಳು ಹೊಗೆನಕಲ್ ನಲ್ಲಿ ಕೊಚ್ಚಿ ಹೋಗಿ ತಮ್ಮ ಪ್ರಾಣಕಳೆದುಕೊಂಡಿದ್ದರು.

  • ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.

    ಎರಡು ದಿನಗಳಿಂದ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರುವಾಸಿಯಾಗಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ತಮ್ಮ ಸೌಂದರ್ಯವನ್ನು ಮತ್ತಷ್ಟು ಎಚ್ಚಿಸಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

    ಗಗನಚುಕ್ಕಿಯಲ್ಲಂತೂ ನೀರು ಆಕಾಶದೆತ್ತರದಿಂದ ಬೀಳುವಂತೆ ಬಾಸವಾಗುತ್ತಿದೆ. ಇನ್ನೂ ಹೊಗೆನಕಲ್ ಫಾಲ್ಸ್ ಕೂಡ ಇದಕ್ಕೆ ಕಡಿಮೆ ಇಲ್ಲದಂತೆ ಧುಮ್ಮುಕ್ಕಿ ಹರಿಯುತ್ತಿದೆ. ಎತ್ತ ನೋಡಿದರೂ ನೀರು ತುಂಬಿಕೊಂಡಿದೆ. ಈ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೆ ಈ ಜಲಪಾತಗಳ ಕಡೆ ಹರಿದು ಬರುತ್ತಿದೆ.

    ಮೈದುಂಬಿ ಹರಿಯುತ್ತಿರುವ ಕಾವೇರಿ ಮತ್ತು ಕಪಿಲಾ ನದಿಗಳಿಂದಾಗಿ ಅಕ್ಕ-ಪಕ್ಕದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.