Tag: ಹೊಗೆ

  • ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಕೋಲ್ಕತ್ತಾ: ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿದ್ದು, ವಿಮಾನವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಂಡು ಕೋಲ್ಕತ್ತಾದಲ್ಲಿ ಇಳಿಸಲಾಗಿದೆ. ಆದರೆ ವಿಮಾನದಲ್ಲಿ ಹೊಗೆ ಅಥವಾ ಬೆಂಕಿ ಉಂಟಾಗಿರಲಿಲ್ಲ, ಅದು ಕೇವಲ ತಾಂತ್ರಿಕ ದೋಷದಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಭಾನುವಾರ ದೆಹಲಿಯಿಂದ ಹೊರಟಿದ್ದ ವಿಮಾನ 6ಇ-2513(ವಿಟಿ-ಐಜೆಎ) ನಲ್ಲಿ ಸರಕುಗಳನ್ನು ಇಡಲಾಗಿದ್ದ ಪ್ರದೇಶದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿತ್ತು. ಆದರೆ ಅದು ತಾಂತ್ರಿಕ ದೋಷದಿಂದ ಹೊಗೆ ಎಚ್ಚರಿಕೆ ನೀಡಿದ್ದು, ಘಟನೆಯ ಬಗ್ಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 720 ಹೊಸ ಕೋವಿಡ್ ಪ್ರಕರಣ ದೃಢ – 2 ಸಾವು

    ವಿಮಾನ ಕೋಲ್ಕತ್ತಾ ನಿಲ್ದಾಣವನ್ನು ತಲುಪಿದ ತಕ್ಷಣ ತಪಾಸಣೆ ನಡೆಸಲಾಯಿತು. ಬಳಿಕ ಅದು ನಕಲಿ ಎಚ್ಚರಿಕೆ ಎಂದು ದೃಢಪಡಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಹಲವು ವಿಮಾನಯಾನ ಸಂಸ್ಥೆಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿವೆ. ಇಂಡಿಗೋ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಜುಲೈನಲ್ಲಿ ಶೇ.58.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ನವದೆಹಲಿ: ಪ್ರಯಾಣಿಕರನ್ನು ಹೊತ್ತು ಜಬಲ್‍ಪುರಕ್ಕೆ ಹೊರಟ್ಟಿದ್ದ ಸ್ಪೈಸ್‍ಜೆಟ್ ವಿಮಾನದ ಕ್ಯಾಬಿನ್‍ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನವು ಮರಳಿದೆ.

    ದೆಹಲಿಯಿಂದ ಜಬಲ್‍ಪುರಕ್ಕೆ ಹೊರಟಿದ್ದ ಸ್ಪೈಸ್‍ಜೆಟ್ ವಿಮಾನವು ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ. ವಿಮಾನವು 5,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಕ್ಯಾಬಿನ್ ಒಳಗೆ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸದ್ಯ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್‍ಜೆಟ್ ವಕ್ತಾರರು ತಿಳಿಸಿದ್ದಾರೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ಇದೀಗ ಕ್ಯಾಬಿನ್ ಒಳಗೆ ಹೊಗೆ ಆವರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೆಹಲಿಗೆ ವಿಮಾನ ಹಿಂದುರುಗಿದ ನಂತರ ಪ್ರಯಾಣಿಕರು ನಿರ್ಗಮಿಸುತ್ತಿರುವುದನ್ನು ಕಾಣಬಹುದಾಗಿದೆ. ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

    Live Tv

  • ಕಲುಷಿತ ಗಾಳಿಯನ್ನು ಶುದ್ಧಗೊಳಿಸುವ ಹೊಗೆ ಗೋಪುರ- ದೇಶದಲ್ಲೇ ಮೊದಲು

    ಕಲುಷಿತ ಗಾಳಿಯನ್ನು ಶುದ್ಧಗೊಳಿಸುವ ಹೊಗೆ ಗೋಪುರ- ದೇಶದಲ್ಲೇ ಮೊದಲು

    ನವದೆಹಲಿ: ಕಲುಷಿತ ಗಾಳಿಯನ್ನು ಶುದ್ಧ ಗಾಳಿಯಾಗಿ ಪರಿವರ್ತಿಸುವ ದೇಶದ ಮೊಟ್ಟಮೊದಲ ಹೊಗೆ ಗೋಪುರವನ್ನು (ಸ್ಮಾಗ್ ಟವರ್) ದೆಹಲಿಯ ಕನ್ನಾಟ್‍ಪ್ಲೇಸ್‍ನಲ್ಲಿ ನಿರ್ಮಿಸಲಾಗಿದೆ.

    ಈ ಸ್ಮಾಗ್ ಟವರ್ ಅಶುದ್ಧ ಗಾಳಿಯನ್ನು ಗೋಪುರದ ಮೇಲ್ಭಾಗದಿಂದ ಹೀರಿಕೊಂಡು ಪರಿಶುದ್ಧ ಗಾಳಿಯನ್ನು ತನ್ನ ಬುಡದಿಂದ ಹೊರಹಾಕುತ್ತದೆ. ಪ್ರತಿ ಸೆಕೆಂಡಿಗೆ 1,000 ಕ್ಯೂಬಿಕ್ ಮೀಟರ್‌ನಷ್ಟು ಗಾಳಿಯನ್ನು ಇದು ಸ್ವಚ್ಛಗೊಳಿಸುತ್ತದೆ. ಇದನ್ನೂ ಓದಿ:  ಹುಟ್ಟುಹಬ್ಬದ ದಿನ 12ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಗು

    ಮಾಲಿನ್ಯದ ವಿರುದ್ಧದ ಯುದ್ಧದಲ್ಲಿ ದೇಶದಲ್ಲೇ ಮೊದಲ ಹೊಗೆ ಗೋಪುರವನ್ನು ದೆಹಲಿಯಲ್ಲಿ ಆರಂಭಿಸಲಾಯಿತು. ಅಮೆರಿಕದ ತಂತ್ರಜ್ಞಾನದಿಂದ ಮಾಡಿದ ಈ ಹೊಗೆ ಗೋಪುರವು ಗಾಳಿಯಲ್ಲಿನ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಟಾಟಾ ಸಂಸ್ಥೆ, ಐಐಟಿ ಬಾಂಬೆ, ಐಐಟಿ ದೆಹಲಿ ತಜ್ಞರ ಮುಂದಾಳತ್ವದಲ್ಲಿ ಇದನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಇದು ಉತ್ತಮ ಫಲಿತಾಂಶ ಕೊಟ್ಟರೆ ದೆಹಲಿಯ ವಿವಿಧ ಭಾಗದಲ್ಲಿ ಇಂಥ ಮತ್ತಷ್ಟು ಗೋಪುರಗಳನ್ನು ನಿರ್ಮಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

  • ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಅಡಿಕೆ ಸಿಪ್ಪೆಗೆ ಬೆಂಕಿ – ಗ್ರಾಮದ ತುಂಬಾ ಆವರಿಸಿದ ಹೊಗೆ

    ಚಿಕ್ಕಮಗಳೂರು: ರಸ್ತೆ ಬದಿ ಹಾಕಿದ್ದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿದ ಗ್ರಾಮದ ತುಂಬಾ ಹೊಗೆ ಆವರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮಲೆನಾಡ ಹೆಬ್ಬಾಗಿಲು ಎಂದೇ ಕರೆಯುವ ತರೀಕೆರೆ ತಾಲೂಕಿನ ಬಹುತೇಕ ಭಾಗ ಅಡಿಕೆ ಉದ್ಯಮವನ್ನೇ ಆಶ್ರಯಿಸಿದೆ. ಈಗ ಅಡಿಕೆ ಕೊಯ್ಲಿನ ಸಮಯ ಮುಗಿದಿದೆ. ಸುಲಿದ ಅಡಿಕೆಯ ಸಿಪ್ಪೆಯನ್ನ ಒಣಗಲೆಂದು ಕೆಲವರು ರಸ್ತೆ ಬದಿ ಸುರಿಯುತ್ತಾರೆ. ಹೀಗೆ ಸುರಿದ ಅಡಿಕೆ ಸಿಪ್ಪೆಗೆ ಆಕಸ್ಮಿಕ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

    ಅಡಿಕೆ ಸಿಪ್ಪೆ ಜೋರಾಗಿ ಹೊತ್ತಿ ಉರಿಯದಿದ್ದರೂ ಬಾವಿಕೆರೆ ಗ್ರಾಮದ ತುಂಬಾ ಹೊಗೆ ಆವರಿಸಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮದಲ್ಲಿ ಅಕ್ಕಪಕ್ಕ ನಿಂತಿದ್ದವರೂ ಕಾಣದಂತೆ ಆಗಿದ್ದು, ಹೊಗೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.

    ಈ ಮಧ್ಯೆ ಸ್ಥಳಿಯರು ಕೂಡ ರಸ್ತೆ ಬದಿ ಅಡಿಕೆ ಸಿಪ್ಪೆಯನ್ನು ಸುರಿಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಬದಿ ಅಡಿಕೆ ಸಿಪ್ಪೆ ಸುರಿಯಲು ಬಿಡಬಾರದು ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.

  • ಚಳಿ, ಸೊಳ್ಳೆ ಕಾಟಕ್ಕೆ ಹೊಗೆ ಹಾಕಿ ಮಲಗಿದ ಕುಟುಂಬ- ಬಾಲಕಿ ಸಾವು

    ಚಳಿ, ಸೊಳ್ಳೆ ಕಾಟಕ್ಕೆ ಹೊಗೆ ಹಾಕಿ ಮಲಗಿದ ಕುಟುಂಬ- ಬಾಲಕಿ ಸಾವು

    – ಮೂವರು ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮನೆಯಲ್ಲಿ ಹೊಗೆ ಹಾಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ಮರಾಠಿ ಪಾಳ್ಯದಲ್ಲಿ ನಡೆದಿದೆ.

    ರಾತ್ರಿ ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮಲಗುವ ಮುನ್ನ ಮನೆಯಲ್ಲಿ ಹೊಗೆ ಹಾಕಲಾಗಿತ್ತು. ಟಿನ್ ಡಬ್ಬದಲ್ಲಿ ಇದ್ದಿಲು ಹಾಕಿ ಬೆಂಕಿ ಹಚ್ಚಿ ಹೊಗೆ ಹಾಕಿ ಇಡೀ ಕುಟುಂಬವೇ ಗಾಢ ನಿದ್ರೆಗೆ ಜಾರಿದೆ. ಪರಿಣಾಮ ರಾತ್ರಿ ಪೂರ್ತಿ ಮನೆಯ ತುಂಬಾ ಹೊಗೆ ಆವರಿಸಿದ್ದು, ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾತ್ರಿ ನಿದ್ದೆಗೆ ಜಾರಿದ 16 ವರ್ಷದ ಬಾಲಕಿ ಹೊಗೆ ಸೇವಿಸಿ ಮಲಗಿದ್ದಲ್ಲೇ ಕೊನೆಯುಸಿರು ಎಳೆದಿದ್ದಾಳೆ. ಮೃತ ಬಾಲಕಿಯ ತಂದೆ ವೀರಾಂಜನೇಯ, ತಾಯಿ ಶಾಂತಮ್ಮ ಮತ್ತು ತಂಗಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತ ಕುಟುಂಬ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಈ ಪ್ರಕರಣ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಯುದ್ಧ ವಿಮಾನ ಪತನ- ಭಾರೀ ದುರಂತವನ್ನೇ ತಡೆದು ಅಮರರಾದ ಪೈಲಟ್‍ಗಳು..!

    ಬೆಂಗಳೂರು: ತಾಂತ್ರಿಕ ದೋಷದಿಂದ ವಾಯುಪಡೆಯ ಮಿರಾಜ್-2000 ನಂಬರ್‍ನ ಯುದ್ಧ ವಿಮಾನ ಬೆಂಗಳೂರಿನ ಎಚ್‍ಎಎಲ್‍ನ ಯಮಲೂರು ಬಳಿ ಪತನಗೊಂಡು ಇಬ್ಬರು ಪೈಲಟ್‍ಗಳು ಶುಕ್ರವಾರ ಸಾವನ್ನಪ್ಪಿದ್ದರು. ಆದರೆ ಪೈಲಟ್ ಗಳು ತಮ್ಮ ಜೀವತೆತ್ತು ಸಂಭವಿಸಬಹುದಾದ ಭಾರೀ ಅವಘಡವನ್ನು ತಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಾಯೋಗಿಕ ಹಾರಾಟ ವೇಳೆ ಈ ಅವಘಡ ಸಂಭವಿಸಿದ್ದು, ರನ್‍ವೇಯಲ್ಲಿ ಹಾರಾಟ ನಡೆಸಿದ್ದ ವಿಮಾನ ಟೇಕಾಫ್ ಆಗಿದ್ದರೆ ವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೀಳುವ ಸಾಧ್ಯತೆ ಇತ್ತು. ಆದರೆ ಇದನ್ನು ಮನಗಂಡ ಫೈಲಟ್‍ಗಳು ವಿಮಾನ ಎತ್ತರಕ್ಕೆ ಟೇಕಾಫ್ ಮಾಡದಿರಲು ನಿರ್ಧರಿಸಿ ಹೊರ ಬರಲು ಪ್ರಯತ್ನಿಸಿದ್ದರು.

    ಅಂತಿಮ ಕ್ಷಣದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಪೈಲಟ್ ಗಳು ಪ್ಯಾರಚೂಟ್ ಬಳಸಿ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆಗೆ ವಿಮಾನ ಸ್ಫೋಟಗೊಂಡಿತ್ತು. ಪರಿಣಾಮ ಸಿದ್ದಾರ್ಥ್ ನೇಗಿ (31), ಸಮೀರ್ ಅಬ್ರೋಲ್(33) ಜೀವ ಕಳೆದುಕೊಂಡಿದ್ದಾರೆ. ಸಮೀರ್ ಬೆಂಕಿ ಹೊತ್ತಿಕೊಂಡಿದ್ದ ಪ್ಯಾರಚೂಟ್ ಮೇಲೆಯೇ ಬಿದ್ದ ಪರಿಣಾಮ ಸುಟ್ಟು ಕರಕಲಾದರೆ, ತೀವ್ರ ಗಾಯಗೊಂಡಿದ್ದ ನೇಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.

    ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಒಂದೊಮ್ಮೆ ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಿದ್ದರೆ ಭಾರೀ ಅವಘಡ ಸಂಭವಿಸುತ್ತಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮಾಹಿತಿ ನೀಡಿರುವ ಎಚ್‍ಎಎಲ್ ಅಧಿಕಾರಿಯೊಬ್ಬರು ರನ್‍ವೇಯಲ್ಲಿಯೇ ವಿಮಾನದ ಟೈರ್ ಕಳಚಿ ಬಿದ್ದ ಪರಿಣಾಮ ಮುಂಭಾಗ ರನ್ ವೇಗೆ ಉಜ್ಜಿ ಬೆಂಕಿ ಕಿಡಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ವಿವರಿಸಿದ್ದಾರೆ.

    ವಿಮಾನ ಸ್ಫೋಟಗೊಂಡ ಅಲ್ಪ ದೂರದಲ್ಲೇ ಜನ ವಸತಿ ಪ್ರದೇಶಗಳಿದ್ದು, ಶಾಲೆ, ಟೆಕ್ ಪಾರ್ಕ್, ರಸ್ತೆ ಸೇರಿದಂತೆ ಹಲವು ಪ್ರದೇಶಗಳಿದೆ. ಒಂದೊಮ್ಮೆ ಪೈಟಲ್‍ಗಳು ವಿಮಾನವನ್ನು ರನ್ ವೇಯಿಂದ ಟೇಕಾಫ್ ಆಗಿದ್ದರೆ ವಸತಿ ಪ್ರದೇಶದಲ್ಲಿ ಉರುಳುವ ಸಾಧ್ಯತೆ ಇತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ- ಪೈಲಟ್ ದುರ್ಮರಣ

    ಬೆಂಗಳೂರು: ಇಲ್ಲಿ ಎಚ್‍ಎಎಲ್ ಏರ್ ಪೋರ್ಟ್  ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಪೈಲಟ್ ಮೃತಪಟ್ಟಿರುವ ಘಟನೆ  ಇಂದು ನಡೆದಿದೆ.

    ಸಿದ್ದಾರ್ಥ್ ಮೃತ ದುರ್ದೈವಿ ಪೈಲಟ್ ಆಗಿದ್ದು, ಮಿರಾಜ್ ಎನ್ನುವ ಯುದ್ಧ ವಿಮಾನ ಪತನವಾಗಿದೆ. ಮಿರಾಜ್ ಭಾರೀ ಸ್ಫೋಟಗೊಂಡ ಪರಿಣಾಮ ದಟ್ಟವಾದ ಹೊಗೆ ಅಲ್ಲಿ ಆವರಿಸಿದೆ. ಇದರಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಎಚ್ ಎ ಎಲ್ ನಿಂದ ಹೊರಭಾಗದಲ್ಲಿ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು. ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಎಚ್ ಎ ಎಲ್ ಕಂಪೌಂಡ್ ಒಳಗೆ ಬಿದ್ದಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

    ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

    ಯಾದಗಿರಿ: ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸುತ್ತಲೂ ಹೊಗೆ ಆವರಿಸಿದರಿಂದ ಬಸ್ ಮತ್ತು ಓಮನಿ ನಡುವೆ ಡಿಕ್ಕಿ ಸಂಭವಿಸಿದೆ.

    ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಡಗೇರಾ ಕ್ರಾಸ್ ಬಳಿ ಘಟನೆ ನಡೆದಿದೆ. ಓಮ್ನಿ ವಾಹನವು ಯಾದಗಿರಿಯಿಂದ ಹಾಲಿಗೇರಿಗೆ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ವಡಗೇರಾ ಕ್ರಾಸ್ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಹೊಗೆ ತುಂಬಿಕೊಂಡಿದ್ದು, ರಸ್ತೆ ಕಾಣುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಓಮ್ನಿ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

    ಓಮ್ನಿಯಲ್ಲಿದ್ದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದ ಜಮೀನಿಲ್ಲಿ ಬೆಂಕಿ ಬಿದ್ದು ಹೊಗೆಯಾಗಿದ್ದರಿಂದಲೇ ಈ ಅವಘಢ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ವಡಗೇರಾ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

    ಸಿಗರೇಟ್‍ನಿಂದಾಗಿ ನೋಡ ನೋಡುತ್ತಲೇ ಸುಟ್ಟು ಹೋಯ್ತು ಕಾರು- ವಿಡಿಯೋ ನೋಡಿ

    ಬೀಜಿಂಗ್: ಟ್ರಾಫಿಕ್ ಸಿಗ್ನಲ್‍ನಿಂದಾಗಿ ನಿಂತಿದ್ದ ಕಾರು ಸಿಗರೇಟ್‍ನಿಂದಾಗಿ ಸುಟ್ಟುಹೋದ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಯೆಝೆಯಾಂಗ್ ಪ್ರಾಂತ್ಯದ ಯೆವಿಯ ವೃತ್ತ ಒಂದರಲ್ಲಿ ನಿಂತಿದ್ದ ಕೆಂಪು ಕಾರಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಸೇವನೆ ಮಾಡಿದ್ದ ಪರಿಣಾಮ ಕಾರಿಗೆ ಬೆಂಕಿ ತಗುಲಿದೆ. ಪ್ರಾರಂಭದಲ್ಲಿ ಪ್ರಯಾಣಿಕರು ಕುಳಿತ ಜಾಗದಿಂದ ಕಾಣಿಸಿಕೊಂಡ ಹೊಗೆ ನಂತರ ಇಡಿ ಕಾರನ್ನು ದಟ್ಟವಾಗಿ ಆವರಿಸಿಕೊಂಡಿದೆ.

    ಈ ವೇಳೆ ಜಾಗೃತರಾದ ಹಿಂಬದಿ ಪ್ರಯಾಣಿಕರು ಹೊರಬಂದು ಬೆಂಕಿ ಎಲ್ಲಿ ಹತ್ತಿದೆ ಎಂದು ಪರಿಶೀಲಿಸಲು ಮುಂದಾಗಿದ್ದಾರೆ. ಅವರಲ್ಲಿ ಒಬ್ಬ ಡಿಕ್ಕಿ ತೆರೆಯುತ್ತಿದ್ದಂತೆ ಅಲ್ಲಿದ್ದ ಪಟಾಕಿಗಳು ಸಿಡಿಯುತ್ತ ಹೊರ ಬಂದವು. ಕಾರಿನಲ್ಲಿ ಮತ್ತಷ್ಟು ದಟ್ಟವಾಗಿ ಹೊಗೆ ಆವರಿಕೊಂಡಿದ್ದರಿಂದ ಮುಂಬದಿ ಪ್ರಯಾಣಿಕ ಹಾಗೂ ಚಾಲಕ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳು ಸಂಭವಿಸಿಲ್ಲ.

    ಕಾರಿನಲ್ಲಿ ಸಿಗರೇಟ್ ಸೇವನೆ ಮಾಡಿದ್ದರಿಂದಲೇ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಕಾರಿನ ಹಿಂಬದಿಯಲ್ಲಿದ್ದ ವಸ್ತುಗಳು ಹಾಗೂ ಆಸನಗಳು ಸುಟ್ಟಿರುವುದನ್ನು ಕಾಣಬಹುದಾಗಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಾರು ನಡು ರಸ್ತೆಯಲ್ಲಿ ಉರಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.