Tag: ಹೊಂಬಾಳೆ ಸಂಸ್ಥೆ

  • ಹೃತಿಕ್ ರೋಷನ್ ಜೊತೆ ಸಿನಿಮಾ- ‘ಹೊಂಬಾಳೆ ಫಿಲಂಸ್’ನಿಂದ ಗುಡ್ ನ್ಯೂಸ್

    ಹೃತಿಕ್ ರೋಷನ್ ಜೊತೆ ಸಿನಿಮಾ- ‘ಹೊಂಬಾಳೆ ಫಿಲಂಸ್’ನಿಂದ ಗುಡ್ ನ್ಯೂಸ್

    ಕಾಂತಾರ (Kantara), ಕೆಜಿಎಫ್ 2, ಸಲಾರ್ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆ ಕಡೆಯಿಂದ ಈಗ ಗುಡ್ ನ್ಯೂಸ್ ಸಿಕ್ಕಿದೆ. ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡೋದಾಗಿ ಹೊಂಬಾಳೆ ಫಿಲಂಸ್ ಘೋಷಿಸಿದೆ. ಇದನ್ನೂ ಓದಿ:ಸೋಷಿಯಲ್ ಮೀಡಿಯಾದಿಂದ ದೀಪಿಕಾ ದಾಸ್ ದಿಢೀರ್ ಬ್ರೇಕ್- ಫ್ಯಾನ್ಸ್‌ಗೆ ಶಾಕ್

    ಹೃತಿಕ್ ಅವರನ್ನು ಗ್ರೀಕ್ ಗಾಢ್ ಎಂದು ಕರೆಯುತ್ತಾರೆ. ಅವರು ಅನೇಕರ ಮನಗೆದ್ದಿದ್ದಾರೆ. ಹೃತಿಕ್ ರೋಷನ್ ಅವರು ಹೊಂಬಾಳೆ ಫಿಲಂಸ್ (Hombale Films) ಜೊತೆ ಕೈಜೋಡಿಸಿದ್ದಾರೆ. ನಾವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇವೆ ಎಂದು ಹೊಂಬಾಳೆ ಸಂಸ್ಥೆ ಅನೌನ್ಸ್ ಮಾಡಿದೆ. ಸದ್ಯದಲ್ಲೇ ಈ ಚಿತ್ರದ ನಿರ್ದೇಶಕರ ಕುರಿತು ಹೆಚ್ಚಿನ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ. ಇದನ್ನೂ ಓದಿ:ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ

    ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿದೆ. ಈಗ ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿದ್ದು, ದೇಶದ ಗಡಿಗಳನ್ನು ಮೀರಿ ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವತ್ತ ಹೊಸ ಹೆಜ್ಜೆ ಇಟ್ಟಿದೆ.

  • KGF 3 ಮೇಲಿನ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ- ಗುಡ್‌ ನ್ಯೂಸ್ ಕೊಟ್ಟ ಹೊಂಬಾಳೆ ಸಂಸ್ಥೆ

    KGF 3 ಮೇಲಿನ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ- ಗುಡ್‌ ನ್ಯೂಸ್ ಕೊಟ್ಟ ಹೊಂಬಾಳೆ ಸಂಸ್ಥೆ

    ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF 2) ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏ.14) ಮೂರು ವರ್ಷಗಳಾಗಿದೆ. ಈ ದಿನ ಫ್ಯಾನ್ಸ್‌ಗೆ ‘ಕೆಜಿಎಫ್ 3’ (KGF 3) ಬರೋದಾಗಿ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಅನೌನ್ಸ್ ಮಾಡಿ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ:ಮೊಮ್ಮಗಳ ಬಗ್ಗೆ ಭಾವನಾತ್ಮಕ ನೋಟ್ ಬರೆದ ಅಜ್ಜ ಸುನಿಲ್ ಶೆಟ್ಟಿ

    ‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿ 3 ವರ್ಷಗಳಾಗಿವೆ. ಈ ಹಿನ್ನೆಲೆ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ‘ಕೆಜಿಎಫ್ ಚಾಪ್ಟರ್ 3’ ಫಿಕ್ಸ್ ಎಂದು ಘೋಷಿಸಿದೆ. ಈ ಚಿತ್ರ ಬಾಕ್ಸಾಫೀಸ್ ಧೂಳಿಪಟ ಮಾಡಿದ್ದಲ್ಲದೇ ಗಡಿಯನ್ನೂ ಮೀರಿ ಬೆಳೆದಿದೆ. ಸಿನಿಮಾ ಪ್ರಪಂಚದಾದ್ಯಂತ ‘ಕೆಜಿಎಫ್’ ಚಿತ್ರವನ್ನು ಸೆಲೆಬ್ರೇಟ್ ಮಾಡ್ತಿರುವಾಗ ಮುಂದಿನ ಅಧ್ಯಾಯದ ನಿರೀಕ್ಷೆ ಬಲವಾಗಿದೆ. ‘ಕೆಜಿಎಫ್ 3’ ಮೇಲಿನ ನಿಮ್ಮ ನಿರೀಕ್ಷೆಯನ್ನ ಸುಳ್ಳು ಮಾಡೋದಿಲ್ಲ. ರಾಕಿ ಭಾಯ್ ಪರಂಪರೆ ಜೀವಂತವಾಗಿದೆ ಮತ್ತು ಜಗತ್ತು ವೀಕ್ಷಿಸುತ್ತಿದೆ. ಮುಂದಿನ ಅಧ್ಯಾಯಕ್ಕಾಗಿ ಕಾಯ್ತಿರಿ ಎಂದು ಹೊಂಬಾಳೆ ಸಂಸ್ಥೆ ಸಂದೇಶ ಕೊಟ್ಟಿದೆ. ‘ಕೆಜಿಎಫ್ 2’ ಚಿತ್ರದ 3ನೇ ಆ್ಯನಿವರ್ಸರಿಗೆ ಚಾಪ್ಟರ್ 3ರನ್ನು ಅಧಿಕೃತವಾಗಿ ಘೋಷಿಸಿ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನು ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    ಅಂದಹಾಗೆ, ಪ್ರಶಾಂತ್ ನೀಲ್ (Prashanth Neel) ನಿರ್ದೇಶದ ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ಅಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದರು. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರದ ಹೈಲೈಟ್ಸ್ ಆಗಿತ್ತು. ಗಟ್ಟಿ ತಾಂತ್ರಿಕ ಬಳಗದ ಜತೆಗೆ ಘಟಾನುಘಟಿ ಪಾತ್ರವರ್ಗವನ್ನೂ ಹೊಂದಿರುವ ಈ ಸಿನಿಮಾದಲ್ಲಿ ಯಶ್‌ ಜೊತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸಹ ಮೋಡಿ ಮಾಡಿದ್ದರು. ಇದನ್ನೂ ಓದಿ:ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ

    ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಈ ಸಿನಿಮಾ ಹತ್ತಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಹಾರಿಸಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ. ಇದೀಗ ‘ಕೆಜಿಎಫ್ ಚಾಪ್ಟರ್ 3’ (KGF 3) ಮೇಲೆ ಸಿನಿ ಪ್ರಿಯರ ದೃಷ್ಟಿ ನೆಟ್ಟಿದೆ. ಅದರ ಬಗ್ಗೆಯೂ ಶೀಘ್ರದಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ಅಪ್‌ಡೇಟ್ ನೀಡಲಿದೆ.

  • ಪ್ರಭಾಸ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್‌

    ಪ್ರಭಾಸ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್‌

    ಕೆಜಿಎಫ್, ಕೆಜಿಎಫ್‌ 2, ಕಾಂತಾರ ಸಿನಿಮಾಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌ (Hombale Fims) ಇದೀಗ ಸಲಾರ್‌ ಬಳಿಕ ಮತ್ತೆ ಪ್ರಭಾಸ್ ಜೊತೆ ಕೈ ಜೋಡಿಸಿದೆ. ಪ್ರಭಾಸ್ (Prabhas) ಜೊತೆ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ಮಾಡೋದಾಗಿ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

    ಈ ಹಿಂದೆ ಪ್ರಭಾಸ್‌ ನಟನೆಯ ಸಲಾರ್‌ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸಿತ್ತು. ಇದೀಗ ಮತ್ತೆ ನಟನ ಜೊತೆ 3 ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಲಿದೆ. ಮುಂದಿನ 3 ವರ್ಷಗಳಲ್ಲಿ ಅಂದರೆ 2026, 2027, ಮತ್ತು 2028ಗೆ ಸಾಲು ಸಾಲು 3 ಸಿನಿಮಾಗಳು ರಿಲೀಸ್ ಆಗಲಿದೆ ಎಂದು ಹೊಂಬಾಳೆ ಸಂಸ್ಥೆ ಘೋಷಿಸಿದೆ. ಇದನ್ನೂ ಓದಿ:ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಡಬಲ್ ಧಮಾಕ- ‘ಘಾಟಿ’ ಚಿತ್ರದ ಫಸ್ಟ್ ಲುಕ್ ಔಟ್

     

    View this post on Instagram

     

    A post shared by Hombale Films (@hombalefilms)

    ರೆಬಲ್ ಸ್ಟಾರ್ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಭಾರತೀಯ ಸಿನಿಮಾದ ಸಾರವನ್ನು ಸಂಭ್ರಮಿಸುವ ಹಾಗೂ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಕೈಜೋಡಿಸುವಿಕೆ ಅತ್ಯಂತ ಮಹತ್ವದ್ದಾಗಲಿದೆ. ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ಸಿನಿಮಾ ಅನುಭವವನ್ನು ಕೊಡುವುದು ನಮ್ಮ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ, ಮುಂದಿನ ಹಾದಿ ಮಿತಿಯಿಲ್ಲದ್ದಾಗಿದೆ. ‘ಸಲಾರ್ 2’ (Salaar 2) ಸಿನಿಮಾದ ಜೊತೆಗೆ ನಮ್ಮ ಈ ಪಯಣ ಪ್ರಾರಂಭ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಗುಡ್ ನ್ಯೂಸ್ ಹಂಚಿಕೊಂಡಿದೆ.

  • ‘ಕಾಂತಾರ 1’ ಸಿನಿಮಾದ ಬಿಗ್‌ ಅಪ್‌ಡೇಟ್‌- 4ನೇ ಶೆಡ್ಯೂಲ್‌ ಶೂಟಿಂಗ್‌ಗೆ ಡೇಟ್‌ ಫಿಕ್ಸ್

    ‘ಕಾಂತಾರ 1’ ಸಿನಿಮಾದ ಬಿಗ್‌ ಅಪ್‌ಡೇಟ್‌- 4ನೇ ಶೆಡ್ಯೂಲ್‌ ಶೂಟಿಂಗ್‌ಗೆ ಡೇಟ್‌ ಫಿಕ್ಸ್

    ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಎಲ್ಲಿಯವರೆಗೆ ಬಂತು ಎಂಬುದರ ಬಗ್ಗೆ ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಇದೇ ಆಗಸ್ಟ್ ಕೊನೆಯ ವಾರದಲ್ಲಿ ಮತ್ತೆ ‘ಕಾಂತಾರ 1’ (Kantara Chapter 1) ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.

    ಹೊಂಬಾಳೆ ಸಂಸ್ಥೆ ನಿರ್ಮಾಣದ ಬಹುನಿರೀಕ್ಷಿತ ಚಿತ್ರವು 2025ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ. ಆಗಸ್ಟ್‌ ಕೊನೆಯ ವಾರದಲ್ಲಿ 4ನೇ ಹಂತದ ಶೂಟಿಂಗ್‌ ಶುರುವಾಗಲಿದೆ. ಇದನ್ನೂ ಓದಿ:ಹಿಂದಿ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ

    4ನೇ ಹಂತದ ಚಿತ್ರೀಕರಣದಲ್ಲಿ ಕಂಪ್ಲಿಟ್ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ಶೂಟ್ ಮಾಡಲಾಗುತ್ತದೆ. ಚಿತ್ರವು ಪೂರ್ಣಗೊಳ್ಳುವ ಹಂತದಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿವೆ.

    ‘ಕಾಂತಾರ ಚಾಪ್ಟರ್ 1’ ಸಿನಿಮಾ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಜುರ್ಲಿ ದೇವತೆಯ ಕಥೆಯನ್ನು ಇದು ಹೊಂದಿದೆ. ಕಾಂತಾರ ಮೊದಲ ಭಾಗದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

  • ‘ಸಲಾರ್’ ರಿಲೀಸ್‌ಗೂ ಮುನ್ನ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

    ‘ಸಲಾರ್’ ರಿಲೀಸ್‌ಗೂ ಮುನ್ನ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

    ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬೋ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದೇ ಡಿ.22ಕ್ಕೆ ಸಲಾರ್‌ ಚಿತ್ರ ರಿಲೀಸ್‌ ಆಗ್ತಿದೆ.  ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ (Hombale Films) ತನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ನೀಡಿದೆ. ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಚಿತ್ರವನ್ನು ಘೋಷಿಸಿದ್ದ ಹೊಂಬಾಳೆ ಸಂಸ್ಥೆ ಇದೀಗ ಚಿತ್ರದ ಬಗ್ಗೆ ಹೊಸ ಮಾಹಿತಿ ತಿಳಿಸಿದೆ.

    ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಹೊಂಬಾಳೆ ಸಂಸ್ಥೆ ‘ರಘು ತಾತ’ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಮಹಾನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಸುಮನ್ ಕುಮಾರ್ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ:ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು- ವಿಜಯ್‌ಗೆ ರಶ್ಮಿಕಾ ಪ್ರೇಮ ಸಂದೇಶ?

     

    View this post on Instagram

     

    A post shared by Hombale Films (@hombalefilms)

    ತರಕಾರಿ ಮಾರುಕಟ್ಟೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಸಾಗಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಪೋಸ್ಟರ್‌ನಲ್ಲಿ ಕೀರ್ತಿ ಸುರೇಶ್ ಅವರ ಚಿತ್ರ ಕಂಡು ಬಂದಿದೆ. ಹಿಂದಿ ಮತ್ತು ತಮಿಳಿನಲ್ಲಿ ಹಿನ್ನಲೆ ಧ್ವನಿ ಮೂಡಿಬಂದಿದೆ. ವಿಡಿಯೋ ಕೊನೆಯಲ್ಲಿ ಕಮಿಂಗ್ ಸೂನ್ ಎನ್ನುವ ಸಂದೇಶ ಮೂಡಿ ಬಂದಿದೆ. ಆದರೆ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಚಿತ್ರದ ಸಣ್ಣ ತುಣುಕು ರಿವೀಲ್ ಮಾಡುವ ಮೂಲಕ ಸಿನಿಮಾ ರಿಲೀಸ್ ಬಗ್ಗೆ ಮುನ್ಸೂಚನೆ ನೀಡಿದೆ.

    ನಾನಿ ಜೊತೆ ‘ದಸರಾ’ (Dasara) ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸಾಧಾರಣ ಯಶಸ್ಸು ಗಳಿಸಿತ್ತು. ದಸರಾ ಚಿತ್ರದ ನಂತರ ‘ರಘು ತಾತ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ತೆಲುಗು, ಕನ್ನಡ, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ಕಾಲಿವುಡ್‌ಗೂ ಹೊಂಬಾಳೆ ಸಂಸ್ಥೆ ಲಗ್ಗೆ ಇಡುತ್ತಿದೆ.

  • Breaking: ‘ಸಲಾರ್‌’ ಟ್ರೈಲರ್‌ ಔಟ್- ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್‌‌ ಖಡಕ್‌ ಎಂಟ್ರಿ

    Breaking: ‘ಸಲಾರ್‌’ ಟ್ರೈಲರ್‌ ಔಟ್- ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್‌‌ ಖಡಕ್‌ ಎಂಟ್ರಿ

    ಡಾರ್ಲಿಂಗ್ ಪ್ರಭಾಸ್ (Prabhas) ನಟನೆಯ ಬಹುನಿರೀಕ್ಷಿತ ‘ಸಲಾರ್’ (Salaar) ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್‌ನ ಹೈಲೈಟ್ ಆಗಿದೆ.

    ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್‌ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್‌’ ರಿಲೀಸ್‌ ಆಗುತ್ತಿದೆ. ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ಹಾಡಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ

    ಸಲಾರ್ ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ.

    ಇದು ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟ ಪಡಿಸಿದರುವ ಅವರು, ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ಈ ಇಬ್ಬರ ಜರ್ನಿಯನ್ನು ಎರಡು ಭಾಗವಾಗಿ ತೋರಿಸಲಾಗುವುದು ಎಂದು ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಸದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.

    ‘ಸಲಾರ್’ ಪ್ರಭಾಸ್ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.

  • Yuva ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    Yuva ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇಲ್ಲಿದೆ ಗುಡ್ ನ್ಯೂಸ್

    ಡಿಸೆಂಬರ್‌ನಲ್ಲಿ ‘ಯುವ’ (Yuva Film) ನೋಡ್ತಿವಿ ಅಂತ ಕಾದು ಕೂತಿದ್ದ ಅಭಿಮಾನಿಗಳು ಬೇಸರವಾಗಿದ್ದಾರೆ. ಆದ್ರೆ ಅಭಿಮಾನಿ ದೇವರುಗಳನ್ನ ಖುಷಿ ಪಡಿಸುವ ಸೂಪರ್ ಇಂಟ್ರಸ್ಟಿಂಗ್ ಸ್ಟೋರಿ ನಿಮಗಾಗಿ ಹೊತ್ತು ತಂದಿದ್ದಿವಿ. ಯುವ (Yuva) ಲಡಾಕ್ ಟು ಬಳ್ಳಾರಿ ರೌಂಡ್ಸ್ ಜೊತೆಗೆ 8 ದಿನಗಳ ಸಿಕ್ರೇಟ್ ವಿತ್ ರಿಲೀಸ್ ಪ್ಲ್ಯಾನ್ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಥೈಲ್ಯಾಂಡ್‌ಗೆ ಧ್ರುವ ಸರ್ಜಾ- ‘ಮಾರ್ಟಿನ್’ ಬಿಗ್ ಅಪ್‌ಡೇಟ್

    ಡಿಸೆಂಬರ್‌ನಲ್ಲಿ ಯುವ ಸಿನಿಮಾ ಬರುತ್ತಿಲ್ವಾ ಅನ್ನೋ ಡೌಟ್‌ನಲ್ಲಿರೋ ದೊಡ್ಮನೆ ದೇವರುಗಳಿಗೆ ಇಲ್ಲೊಂದು ಇಂಟ್ರಸ್ಟಿಂಗ್ ಸಮಾಚಾರ ಇಲ್ಲಿದೆ. ಯುವ ಸಿನಿಮಾ ಶೂಟಿಂಗ್ ಆಲ್ ಮೋಸ್ಟ್ ಮುಗಿದಿದೆ. ಟಾಕಿ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿರುವ ‘ಯುವ’ ಎರಡು ಹಾಡಿನ ಚಿತ್ರೀಕರಣಕ್ಕೆ ರೆಡಿಯಾಗ್ತಿದ್ದಾರೆ. ಲಡಾಕ್‌ನಲ್ಲಿ ಈ ಸಿನಿಮಾದ ಹಾಡೊಂದನ್ನ ಚಿತ್ರೀಕರಿಸಲು ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಲಡಾಕ್‌ನಿಂದ ಬಂದ್ಮೇಲೆ ಬಳ್ಳಾರಿಯಲ್ಲಿ ಇನ್ನೊಂದು ಹಾಡಿಗೆ ಯುವರಾಜ್ ಕುಮಾರ್ (Yuva Rajkumar) ಹೆಜ್ಜೆ ಹಾಕಲಿದ್ದಾರೆ.

    ಬಳ್ಳಾರಿ, ಲಡಾಕ್, ಬೆಂಗಳೂರು ಸೇರಿಸಿ 8 ದಿನ ಶೂಟಿಂಗ್ ಮಾಡಿದ್ದರೆ ಈ ಸಿನಿಮಾ ಕಂಪ್ಲೀಟ್. ಮುಂದಿನ ವಾರದಲ್ಲಿ ಹೊಂಬಾಳೆ ಸಂಸ್ಥೆ ಯುವ ರಿಲೀಸ್ ಡೇಟ್  ಮಾಡಲಿದೆ. ಒಳ್ಳೆಯ ಟೈಮ್ ಒಳ್ಳೆಯ ಮುಹೂರ್ತದಲ್ಲಿ ‘ಯುವ’ ಸಿನಿಮಾ ಚಿತ್ರಮಂದಿರಕ್ಕೆ ತಂದು ಜಾತ್ರೆ ಮಾಡಲು ಹೊಂಬಾಳೆ ರೆಡಿಯಾಗ್ತಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿರುವ ಖುಷಿಯಲ್ಲಿ ಅಷ್ಟೇ ಚೆನ್ನಾಗಿ ರಿಲೀಸ್ ಕೂಡ ಮಾಡುವ ಯೋಚನೆಯಲ್ಲಿದ್ದಾರೆ. ಸಂತೋಷ್ ಆನಂದ್ ರಾಮ್ ಕತೆಗೆ ಮಾರ್ಕ್ಸ್ ಹಾಕುವ ಸಮಯ ಹತ್ತಿರ ಆಗ್ತಿದೆ.

    ಯುವರಾಜ್‌ಕುಮಾರ್‌ಗೆ ಜೋಡಿಯಾಗಿ ಸಪ್ತಮಿ ಗೌಡ (Saptami Gowda) ನಟಿಸುತ್ತಿದ್ದಾರೆ. ‘ಕಾಂತಾರ’ (Kantara) ಬ್ಯೂಟಿ ಯುವಗೆ ಸಾಥ್ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾಂತಾರ’ ಚಿತ್ರಕ್ಕೆ 1 ವರ್ಷ- ಅಭಿಮಾನಿಗಳಿಗೆ ಚಿರಋಣಿ ಎಂದ ರಿಷಬ್ ಶೆಟ್ಟಿ

    ‘ಕಾಂತಾರ’ ಚಿತ್ರಕ್ಕೆ 1 ವರ್ಷ- ಅಭಿಮಾನಿಗಳಿಗೆ ಚಿರಋಣಿ ಎಂದ ರಿಷಬ್ ಶೆಟ್ಟಿ

    ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ‘ಕಾಂತಾರ’ (Kantara) ಚಿತ್ರವು ಇದೀಗ 1 ವರ್ಷ ಪೂರೈಸಿದೆ. ಇದೇ ಖುಷಿಯಲ್ಲಿ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ, ಸಕ್ಸಸ್‌ಗೆ ಕಾರಣವಾದ ಎಲ್ಲರಿಗೂ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

    ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ‘ಕಾಂತಾರ’ (Kantara) ಸಿನಿಮಾ ರಿಲೀಸ್ ಆಗಿ 1 ವರ್ಷ ಪೂರೈಸಿದೆ. ಕಳೆದ ವರ್ಷ 30ಕ್ಕೆ ಕಾಂತಾರ ಸಿನಿಮಾ ರಿಲೀಸ್ ಆಗಿತ್ತು. ದೈವದ ಪಂಜುರ್ಲಿ ಕಥೆಯನ್ನ ಅಭಿಮಾನಿಗಳು ಮೆಚ್ಚಿ ಗೆಲ್ಲಿಸಿದ್ದರು. ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ನಾನು- ನನ್ನ ತಂಡ ಸದಾ ಚಿರಋಣಿ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

    ‘ಕಾಂತಾರ’ ಚಿತ್ರ ರಿಲೀಸ್ ಬಳಿಕ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ರಿಷಬ್ ಸಿನಿಮಾ ಜನಪ್ರಿಯತೆ ಗಳಿಸಿತ್ತು. ಕರಾವಳಿ ಸೊಗಡಿನ ದೈವದ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಬಹುಭಾಷೆಗಳಲ್ಲಿ ಚಿತ್ರ ಸಕ್ಸಸ್ ಕಂಡಿತ್ತು. ಕಾಂತಾರ ಸಿನಿಮಾವನ್ನ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು. ಕಾಂತಾರ ಸಕ್ಸಸ್‌ ಬಳಿಕ ಕಾಂತಾರ 2 ಮಾಡಲು ಸಿದ್ಧತೆ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.

    ರಿಷಬ್ ಶೆಟ್ಟಿ ಜೋಡಿಯಾಗಿ ಮೂಗುತಿ ಸುಂದರಿ ಸಪ್ತಮಿ ಗೌಡ (Saptami Gowda) ಸಾಥ್ ನೀಡಿದ್ದರು. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಹಲವರು ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ನಟನೆಯ ‘ಸಲಾರ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಪ್ರಭಾಸ್ ನಟನೆಯ ‘ಸಲಾರ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಲಾರ್ (Salaar) ಮೆರವಣಿಗೆ ಹೊರಡಲು ಸಜ್ಜಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆ ಕಾಣುತ್ತಿದೆ. ಆದರೆ ಟ್ರೈಲರ್ ಬಗ್ಗೆ ಮಾತೇ ಇಲ್ಲ. ಯಾವಾಗ ಪ್ರಭಾಸ್ ದಿಬ್ಬಣ ಹೊರಡುತ್ತಾರೆ? ಯಾವಾಗ ತೋರಿಸುತ್ತೀರಿ ಡೈನೋಸಾರ್ ಹೂಂಕಾರ ? ಫ್ಯಾನ್ಸ್ ಕೇಳುತ್ತಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಂತಿದೆ. ಟ್ರೈಲರ್ ಇಂಚಿಂಚು ವಿವರ ಇಲ್ಲಿದೆ.

    ಪ್ರಭಾಸ್‌ಗೆ (Prabhas) ಇದು ಅಗ್ನಿ ಪರೀಕ್ಷೆ. ಸತತ ಮೂರು ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡಿವೆ. ಸಲಾರ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಇದೆ. ಕಾರಣ ಪ್ರಶಾಂತ್ ನೀಲ್. ಮೂರೇ ಸಿನಿಮಾದ ಒಡೆಯ ನೀಲ್ ನೀಡಿರುವ ಭರವಸೆ. ಹೀಗಾಗಿ ಕೆಜಿಎಫ್ ಸಾರಥಿಗೆ ಎಲ್ಲ ರೀತಿ ಸಮರ್ಪಿಸಿಕೊಂಡಿದ್ದಾರೆ ಬಾಹುಬಲಿ. ಅದಕ್ಕೇ ವಿಶ್ವ ಇಷ್ಟಗಲ ಕಣ್ಣು ಬಿಟ್ಟಿದೆ. ಈಗ ಟ್ರೈಲರ್ ಬಿಡುಗಡೆ ವಿಚಾರ ಬೆಂಕಿ ಹೊತ್ತಿಸಿದೆ. ಬಹುಶಃ ಸೆಪ್ಟೆಂಬರ್ 6ರಂದು ಸಲಾರ್ ಸಿಹಿ ಹಂಚಲಿದೆ. ಇದನ್ನೂ ಓದಿ:ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ಈಗಾಗಲೇ ಟೀಸರ್ ಹೊರ ಬಂದಿದೆ. ಅದನ್ನು ನೋಡಿದ ಕೆಲವರು ಬೇಸರ ಮಾಡಿಕೊಂಡಿದ್ದರು. ಕಾರಣ ಪ್ರಭಾಸ್ ಮುಖ ಸರಿಯಾಗಿ ತೋರಿಸಿಲ್ಲ ಎನ್ನುವ ಆರೋಪ. ಅದನ್ನು ಪೂರ್ತಿ ಮಾಡಲು ನೀಲ್ ರೆಡಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಸೆನ್ಸಾರ್ ಕೂಡ ಆಗಿದೆ. ಎರಡು ನಿಮಿಷ ನಲವತ್ತೇಳು ಸೆಕೆಂಡ್ ಇದರ ಅವಧಿ. ಹೆಚ್ಚು ಕಮ್ಮಿ ಮೂರು ನಿಮಿಷ. ಇದನ್ನು ಕೇಳಿಯೇ ಡಾರ್ಲಿಂಗ್ ಭಕ್ತಗಣ ರಣಕೇಕೆ ಹಾಕುತ್ತಿದೆ. ಅದ್ಯಾವ ರೀತಿ ಪ್ರಭಾಸ್ ಘರ್ಜಿಸಿರಬಹುದು? ಹೇಗೆ ಕಾಣಬಹುದು? ಊಹೆ ಆಕಾಶಕ್ಕೇರಿದೆ.

    ಅಂದಹಾಗೆ ಟ್ರೈಲರ್ ರಿಲೀಸ್‌ ಕಾರ್ಯಕ್ರಮವನ್ನು ಹೈದ್ರಾಬಾದ್‌ನಲ್ಲಿ ನಡೆಸಲು ಸಿದ್ಧತೆಯಾಗುತ್ತಿದೆ. ಹೊಂಬಾಳೆ ಸಂಸ್ಥೆ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಅಂದು ಯರ‍್ಯಾರು ಬರುತ್ತಾರೆ? ಇಲ್ಲ ಗೊತ್ತಿಲ್ಲ. ಆದರೆ ಒಂದು ಮೂಲದ ಪ್ರಕಾರ ರಾಕಿಭಾಯ್ (Yash) ಮುಖ್ಯ ಅತಿಥಿಯಾಗಲಿದ್ದಾರಂತೆ. ಹೊಂಬಾಳೆಯಿಂದಲೇ (Hombale Films) ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಪಡೆದಿದ್ದಾರೆ ಯಶ್. ಆ ಸಂಸ್ಥೆ ಕೊಟ್ಟ ಅವಕಾಶದಿಂದ ವಿಶ್ವದ ತುಂಬಾ ಹೆಸರು ಮಾಡಿದ್ದಾರೆ. ಹೀಗಿರುವಾಗ ಅತಿಥಿಯಾಗಲು ಇಲ್ಲ ಎನ್ನುತ್ತಾರಾ? ಪ್ರಭಾಸ್-ಯಶ್ ಮೆರವಣಿಗೆಗೆ ಸಜ್ಜಾಗಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀಲ್‌ಗೆ ಪ್ರಭಾಸ್‌ ಸಾಥ್- ಕುಂದಾಪುರದ ಬಸ್ರೂರಿಗೆ ಬಂದಿಳಿದ ನಟ

    ನೀಲ್‌ಗೆ ಪ್ರಭಾಸ್‌ ಸಾಥ್- ಕುಂದಾಪುರದ ಬಸ್ರೂರಿಗೆ ಬಂದಿಳಿದ ನಟ

    ಪ್ರಭಾಸ್ (Prabhas) ಹೈದ್ರಾಬಾದ್‌ನಿಂದ ಹಾರಿ ಕರ್ನಾಟಕದ ಚಿಕ್ಕ ಗ್ರಾಮಕ್ಕೆ ಬಂದಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮ ಬಸ್ರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ವಾಟ್ ಈಸ್ ದಿಸ್? ಪ್ಯಾನ್ ಇಂಡಿಯಾ ಸ್ಟಾರ್ ಏಕಾಏಕಿ ಬಸ್ರೂರು ಸ್ಟುಡಿಯೋಕ್ಕೆ ಬಂದಿದ್ದೇಕೆ? ಅದು ಹೇಗೆ ಪ್ರಶಾಂತ್ ನೀಲ್ (Prashanth Neel) ಇದಕ್ಕೆ ಒಪ್ಪಿಸಿದರು? ಇಲ್ಲಿದೆ ಮಾಹಿತಿ.

    ಪ್ರಶಾಂತ್ ನೀಲ್ ಬಸ್ರೂರಿನಲ್ಲಿ ಕೆಲವು ದಿನಗಳಿಂದ ಟೆಂಟ್ ಹಾಕಿದ್ದಾರೆ. ಕಾರಣ ಎಲ್ಲರಿಗೂ ಗೊತ್ತಿದೆ. ಸಲಾರ್ (Saalar) ಇನ್ನೇನು ಬಿಡುಗಡೆಯಾಗುವ ತಯಾರಿಯಲ್ಲಿದೆ. ಅದಕ್ಕೂ ಮುಂಚೆ ಎಲ್ಲ ಕೆಲಸ ಮುಗಿಸಬೇಕಲ್ಲವೆ? ಹೀಗಾಗಿಯೇ ಸಂಗೀತ ನಿರ್ದೇಶಕ ರವಿ ಬಸ್ರೂರ್ ಒಡೆತನದ ಸ್ಟುಡಿಯೋದಲ್ಲಿ ಅಂತಿಮ ಕೆಲಸ ನಡೆದಿವೆ. ಪಟ್ಟಣದ ಸಹವಾಸವೇ ಬೇಡ ಎಂದು ರವಿ ತಮ್ಮ ಹುಟ್ಟೂರು ಬಸ್ರೂರಿನಲ್ಲಿ ಸ್ಟುಡಿಯೋ ಸ್ಥಾಪಿಸಿದ್ದಾರೆ. ರೀ- ರೆಕಾರ್ಡಿಂಗ್, ಡಬ್ಬಿಂಗ್ ಕಾರ್ಯ ನಡೆಯುತ್ತಿವೆ. ಅಲ್ಲೇ ಬಂದು ಪ್ರಭಾಸ್ ಡಬ್ಬಿಂಗ್ ಮಾಡುತ್ತಿದ್ದಾರೆ.

    ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದಮೇಲೆ ಇದೇ ಮೊದಲ ಬಾರಿಗೆ ಹಳ್ಳಿಯೊಂದರಲ್ಲಿ ಕುಳಿತು ಡಬ್ಬಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಶಾಂತ್ ನೀಲ್. ಬಸ್ರೂರು ಸ್ಟುಡಿಯೋದಲ್ಲೇ ಅವರು ಅಂತಿಮ ಹಂತದ ಕೆಲಸಕ್ಕೆ ಟಚ್ ಕೊಡುತ್ತಿದ್ದಾರೆ. ಜೊತೆಗೆ ಪ್ರಭಾಸ್‌ರನ್ನು ಇಲ್ಲಿಗೇ ಕರೆಸಿದ್ದಾರೆ. ಕಾರಣವೇನು ? ವಿಷಯ ಇದೆ. ಹೈದ್ರಾಬಾದ್ ಸೇರಿದಂತೆ ಯಾವುದೇ ಸಿಟಿಯಲ್ಲಿ ಡಬ್ಬಿಂಗ್ ಮಾಡಿದರೆ, ಅದರ ವಿಶುವಲ್ಸ್ ಅಥವಾ ವಿಡಿಯೋ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಅದಾಗಬಾರದೆಂದೇ ಈ ನಿರ್ಧಾರ ನೀಲ್ ಕೈಗೊಂಡಿದ್ದಾರೆ. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ

    ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್‌ಗೆ ಬಸ್ರೂರಿನಲ್ಲಿ ಡಬ್ಬಿಂಗ್ ಮಾಡಿಸುವುದು ಎಷ್ಟು ದೊಡ್ಡ ವಿಷಯವೋ. ಅದೇ ರೀತಿ ಪ್ರಭಾಸ್ ಕೂಡ ಈ ಮನವಿ ಒಪ್ಪಿರುವುದು ಕೂಡ. ಎಲ್ಲರೂ ಸೇರಿ ಒಂದೊಳ್ಳೆ ಪ್ರೊಜೆಕ್ಟ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹೊಂಬಾಳೆ ಸಂಸ್ಥೆ ಈಗಾಗಲೇ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ದಿನ ಘೋಷಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಟ್ರೈಲರ್ ಹೊರಬೀಳಲಿದೆ. ಅಲ್ಲಿಂದ ಹಬ್ಬ ಆರಂಭವಾಗಲಿದೆ. ಕನ್ನಡದ ಬಾವುಟ ಇನ್ನೊಮ್ಮೆ ವಿಶ್ವದ ತುಂಬಾ ಮೆರವಣಿಗೆ ಹೊರಡಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]