ದೊಡ್ಮನೆಯ ಕುಡಿ ಯುವರಾಜ್‌ಕುಮಾರ್(Yuvarajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಯುವನ ಪಟ್ಟಾಭಿಷೇಕಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಯುವನ ನಾಯಕಿ ಯಾರು ಎಂಬುದರರ ಬಗ್ಗೆ ಭಾರಿ ಚರ್ಚೆ ಕೂಡ ನಡೆಯುತ್ತಿದೆ. ಅದಕ್ಕೆಲ್ಲ ಉತ್ತರ ಕೂಡ ಇದೀಗ ಸಿಕ್ಕಿದೆ.

ಸಂತೋಷ್ ಆನಂದ್‌ರಾಮ್ (Santhosh Anandram) ಮತ್ತು ಯುವ ಕಾಮಬಿನೇಷನ್ ಚಿತ್ರ ಅನೌನ್ಸ್ ಆದ ದಿನದಿಂದ ಒಂದಲ್ಲಾ ಒಂದು ವಿವಾರವಾಗಿ ಸುದ್ದಿಯಾಗುತ್ತಲೇ ಇದೆ. ಮುಂದಿನ ಜನವರಿಯಿಂದ ಯುವನ ಡೆಬ್ಯೂ ಸಿನಿಮಾ ಶೂಟಿಂಗ್‌ಗೆ ತಯಾರಿ ನಡೆಯುತ್ತಿದ್ದು, ಯುವನಿಗೆ ಉಪೇಂದ್ರ (Upendra) ಅವರ ಮಗಳು ಐಶ್ವರ್ಯ, ಸುಧಾರಾಣಿ (Sudharani) ಮಗಳು ನಿಧಿ ಎಂದು ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಸ್ಟಾರ್ ಕಿಡ್ಸ್ ಯುವನಿಗೆ ನಾಯಕಿನಾ ಎಂಬ ಪ್ರಶ್ನೆ ಉತ್ತರ ಸಿಕ್ಕಿದೆ.

ಉಪೇಂದ್ರ ಅವರ ಮಗಳು ಐಶ್ವರ್ಯ ಈಗಾಗಲೇ ದೇವಕಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಧಾರಾಣಿ ಮಗಳು ನಿಧಿಗೆ ನಟನೆಯ ಬಗ್ಗೆ ಆಸಕ್ತಿ ಇದ್ಯಾ ಎಂಬುದು ತಿಳಿದು ಬಂದಿಲ್ಲ. ಇದೀಗ ಚಿತ್ರತಂಡದಿಂದ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಐಶ್ವರ್ಯಾ ಮತ್ತು ನಿಧಿ ಇಬ್ಬರು ಯುವನಿಗೆ ನಾಯಕಿಯರಾಗಿ ನಟಿಸುತ್ತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಇದು ಸುಳ್ಳು ಸುದ್ದಿ ಎಂದು ಖಾತ್ರಿಯಾಗಿದೆ. ಇದನ್ನೂ ಓದಿ: ರೂಪೇಶ್ ಶೆಟ್ಟಿ ವಿಚಾರವಾಗಿ, ಬಿಗ್ ಬಾಸ್ ವಿರುದ್ಧ ಸಾನ್ಯ ಅಯ್ಯರ್ ಗರಂ
View this post on Instagram
ಸದ್ಯದಲ್ಲಿ ಹೊಂಬಾಳೆ ಬ್ಯಾನರ್, ಯುವ ಚಿತ್ರದ ಕುರಿತಾದ ವಿಚಾರವನ್ನ ಅಧಿಕೃತವಾಗಿ ತಿಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹೊಸ ಅಪ್‌ಡೇಟ್‌ಯೊಂದನ್ನ ಚಿತ್ರತಂಡ ರಿವೀಲ್ ಮಾಡಲಿದೆ.









ಸೌತ್ ಸಿನಿರಂಗದಲ್ಲಿ ಟಾಪ್ ನಟಿಮಣಿಯರಲ್ಲಿ ಒಬ್ಬರಾಗಿರುವ ಕೀರ್ತಿ ಸುರೇಶ್ ಸತತ ಸೋಲಿನಿಂದ ಕಂಗೆಟ್ಟಿದ್ದರು. ಈಗ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ಚಿತ್ರದ ಆಯ್ಕೆಯಲ್ಲೂ ಚ್ಯೂಸಿಯಾಗಿರುವ ಕೀರ್ತಿ ಸುರೇಶ್ ಸದ್ಯ ಹೊಂಬಾಳೆ ಬ್ಯಾನರ್ ನಿರ್ಮಾಣ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಇದನ್ನೂ ಓದಿ:








ದೊಡ್ಮನೆ ಅಂದ್ರೆ ಭರವಸೆ, ಮೂರು ತಲೆಮಾರುಗಳಿಂದ ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಲೇ ಬಂದಿದ್ದಾರೆ. ಇದೀಗ ಈ ಸಾಲಿಗೆ ಭರವಸೆಯ ನಟ ಯುವರಾಜ್ ಸೇರ್ಪಡೆಯಾಗಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಕಾಣಿಸಿಕೊಳ್ತಿದ್ದಾರೆ. ಡೊಡ್ಮನೆ ಕುಡಿ ಯುವಗೆ ಟಕ್ಕರ್ ಕೊಡೋದಕ್ಕೆ ಧನಂಜಯ್ ರೆಡಿಯಾಗಿದ್ದಾರಂತೆ ಎಂಬ ಸುದ್ದಿ ಜೋರಾಗಿದೆ.
ಯುವರಾಜ್ ನಟನೆಯ ಈ ಚಿತ್ರದ ಟೈಟಲ್ ಮತ್ತು ಪಾತ್ರದ ಜತೆಗೆ ಚಿತ್ರಕಥೆ ಹೇಗಿರಬಹುದು ಅಂತೆಲ್ಲಾ ಈಗಾಗಲೇ ಅಭಿಮಾನಿಗಳು ಯೋಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಇನ್ನು ರಾಘವೇಂದ್ರ ಸ್ಟೊರ‍್ಸ್ ಚಿತ್ರದ ಶೂಟಿಂಗ್ ಮುಗಿಸಿ ಈಗ ಹೊಂಬಾಳೆ ಬ್ಯಾನರ್‌ನಲ್ಲಿ ಯುವರಾಜ್ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ಕೈಗೆತ್ತಿಕೊಂಡಿದ್ದಾರೆ. ಇನ್ನು ಈಗಾಗಲೇ ಸಂತೋಷ್ ಆನಂದ್ ರಾಮ್ ಅವರ ಅಪ್ಪು ಜತೆ ಯುವರತ್ನದಲ್ಲಿ ಡಾಲಿ ನಟಿಸಿರೋದ್ರಿಂದ ಈ ಚಿತ್ರದಲ್ಲೂ ಡಾಲಿ ಇರುತ್ತಾರೆ ಎಂದು ಸುದ್ದಿ ಜೋರಾಗಿದೆ. ಎಲ್ಲದಕ್ಕೂ ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.





