Tag: ಹೊಂಬಾಳೆ ಫಿಲ್ಸ್ಮ್

  • ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಲೂಸಿಯಾ ಖ್ಯಾತಿಯ ಪವನ್ ಕುಮಾರ್ (Pawan Kumar) ಮತ್ತು ಮಲಯಾಳಂ ಹೆಸರಾಂತ ನಟ ಫಹಾದ್ ಫಾಸಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಮೊದಲ ಬಾರಿಗೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಅದೀಗ ನಿಜವಾಗಿದೆ. ಈ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ಕೊಡಲಿದ್ದೇವೆ ಎಂದು ಹೊಂಬಾಳೆ ಹೇಳಿಕೊಂಡಿತ್ತು.

    ಅಂದುಕೊಂಡಂತೆ ಆಗಿದ್ದರೆ, ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ದ್ವಿತ್ವ ಸಿನಿಮಾ ಆಗಬೇಕಿತ್ತು. ಪುನೀತ್ ಅವರ ಹಠಾತ್ ನಿಧನದಿಂದಾಗಿ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್ ಗೆ ಮಾಡಲಿದ್ದಾರಾ ಅಥವಾ ಬೇರೆ ಕಥೆಯನ್ನು ಪವನ್ ಆಯ್ಕೆ ಮಾಡಿಕೊಂಡಿದ್ದಾರಾ ಅವರೇ ಹೇಳಬೇಕು. ಒಟ್ಟಿನಲ್ಲಿ ಫಾಸಿಲ್ ಗಾಗಿ ಪವನ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಧೂಮ್ (Dhoom) ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಧೂಮ್ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

    ಫಹಾದ್ ಫಾಸಿಲ್ (Fahadh Faasil) ನಾಯಕನಾಗಿ ನಟಿಸುತ್ತಿದ್ದರೆ, ಸೂರರೈ ಪೋಟ್ರು ನಾಯಕಿ ಅಪರ್ಣಾ ಬಾಲಮುರಳಿ (Aparna Balamurali) ಈ ಸಿನಿಮಾದ ನಾಯಕಿ. ಅಕ್ಟೋಬರ್ 9 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಫಹಾದ್ ಪ್ರತಿಭಾವಂತ ನಟ, ಪವನ್ ಕುಮಾರ್ ಹೊಸ ಬಗೆಯ ಯೋಚಿಸುವ ನಿರ್ದೇಶಕ. ಹಾಗಾಗಿ ಧೂಮಂ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ದುಪ್ಪಟ್ಟಾಗಿದೆ. ಹೊಂಬಾಳೆ ಫಿಲ್ಸ್ಮ್ ನಿಂದ ಈಗಾಗಲೇ ಸಲಾರ್, ಬಘೀರ್, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ರೆಡಿಯಾಗಿದ್ದು, ಈ ಸಿನಿಮಾ ಸಾಲಿಗೆ ಧೂಮ್ ಕೂಡ ಸೇರ್ಪಡೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೆಟ್ಟೇರಿದ `ಬಘೀರ’ ಸಿನಿಮಾ: ಪ್ರಶಾಂತ್‌ ನೀಲ್‌ ಕಥೆಗೆ ಶ್ರೀಮುರಳಿ ಹೀರೋ

    ಸೆಟ್ಟೇರಿದ `ಬಘೀರ’ ಸಿನಿಮಾ: ಪ್ರಶಾಂತ್‌ ನೀಲ್‌ ಕಥೆಗೆ ಶ್ರೀಮುರಳಿ ಹೀರೋ

    ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ  ʻಬಘೀರ’ ಸಿನಿಮಾ ಇಂದು ಸೆಟ್ಟೇರಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಮೂಡಿ ಬರಲಿರುವ, ಡಾ.ಸೂರಿ ಆ್ಯಕ್ಷನ್ ಕಟ್ ಹೇಳ್ತಿರುವ ʻಬಘೀರʼ ಚಿತ್ರದ ಮುಹೂರ್ತ ನೆರವೇರಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಈಗ ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಇಂದು ಸರಳವಾಗಿ ನೆರವೇರಿದೆ. ಈ ವೇಳೆ `ಬಘೀರ’ ಚಿತ್ರದ ನಟ ಶ್ರೀಮುರಳಿ, ನಿರ್ದೇಶಕ ಡಾ.ಸೂರಿ ಮತ್ತು ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ ವಿಜಯ್ ಕಿರಗಂದೂರು ಸಾರಥ್ಯದ ಚಿತ್ರಕ್ಕೆ ರಿಷಬ್ ಶೆಟ್ಟಿ, ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಹೂರ್ತಕ್ಕೆ ಆಗಮಿಸಿ ಶುಭಹಾರೈಸಿದ್ದಾರೆ.

    `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಪ್ರಶಾಂತ್ ನೀಲ್ ಕಥೆಯಲ್ಲಿ, ಶ್ರೀಮುರಳಿ ನಟಿಸಲಿದ್ದು, ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಈಗಷ್ಟೇ ಚಿತ್ರದ ಮುಹೂರ್ತ ನೆರವೇರಿಸಿಕೊಂಡಿರುವ ʻಬಘೀರʼ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ.

  • ಪ್ರಭಾಸ್ ಕೈಗೆ ಎಕೆ-47 ಕೊಟ್ಟ ಪ್ರಶಾಂತ್ ನೀಲ್ – ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

    ಪ್ರಭಾಸ್ ಕೈಗೆ ಎಕೆ-47 ಕೊಟ್ಟ ಪ್ರಶಾಂತ್ ನೀಲ್ – ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

    ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ.

    ಕೆಜಿಎಫ್ ಚಾಪ್ಟರ್-1 ಮತ್ತು ಕೆಜಿಎಫ್-2 ಚಿತ್ರಗಳು ಭಾರತ ಸಿನಿಮಾ ರಂಗದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡಿವೆ. ಈ ಸಿನಿಮಾಗಳ ನಿರ್ದೇಶನ ಮತ್ತು ಮೇಕಿಂಗ್ ನೋಡಿದ ಎಲ್ಲರೂ ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಸ್ಟನ್ ಆಗಿದ್ದರು. ಕೆಜಿಎಫ್-2 ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ಅವರು ಯಾವ ಸಿನಿಮಾ ಮಾಡಲಿದ್ದಾರೆ ಎಂದು ದೇಶಾದ್ಯಂತ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.

    ಈಗ ಈ ಕೂತೂಹಲಕ್ಕೆ ತೆರೆ ಬಿದ್ದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಪ್ಯಾನ್ ಇಂಡಿಯಾ ಮೂವಿ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಮೊದಲ ಸಿನಿಮಾಗೆ ಸಲಾರ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ.

    ಈ ವಿಚಾರವಾಗಿ ನವೆಂಬರ್ 30ರಂದೇ ಟ್ವೀಟ್ ಮಾಡಿದ್ದ ಹೊಂಬಾಳೆ ಫಿಲ್ಮ್ ಸಂಸ್ಥೆ, ಪ್ರಿಯ ಪ್ರೇಕ್ಷಕರೇ ನೀವು ಯಾವಾಗಲೂ ನಮ್ಮ ಸಿನಿಮಾವನ್ನು ನಮಗಿಂತ ಹೆಚ್ಚಾಗಿ ಪ್ರೀತಿ ಮಾಡಿದ್ದೀರಿ. ನಿಮ್ಮ ಈ ಪ್ರೀತಿಗೆ ಪಾತ್ರರಾಗಲು ನಾವು ಮೊತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಈ ಸಿನಿಮಾದ ಬಗ್ಗೆ ಡಿಸೆಂಬರ್ 2ರಂದು ಮಾಹಿತಿ ನೀಡಲಿದ್ದೇವೆ ಎಂದು ಹೇಳಿತ್ತು.

    ಅದರಂತೆ ಇಂದು ಎರಡು ಗಂಟೆ 9 ನಿಮಿಷಕ್ಕೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಕೆ-47 ಗನ್ ಹಿಡಿದುಕೊಂಡು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆ ಮಾಡಿದೆ. ಜೊತೆಗೆ ಅತ್ಯಂತ ಹಿಂಸಾತ್ಮಕ ಮನುಷ್ಯ, ಆತ ಒಬ್ಬನೇ, ಆದರೆ ಆತ ಬಹಳ ವೈಲೆಂಟ್ ಎಂದು ಬರೆದುಕೊಂಡಿದೆ. ಜೊತೆಗೆ ನಮ್ಮ ಮುಂದಿನ ಸಿನಿಮಾ ಇದೆ. ಇದು ಒಂದು ಆ್ಯಕ್ಷನ್ ಚಿತ್ರ ಎಂದು ತಿಳಿಸಿದೆ.

    https://twitter.com/prashanth_neel/status/1334054609220894720

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ಅವರು, ಸಿನಿಮಾದ ಮೇಲಿರುವ ಪ್ರೀತಿ, ಭಾಷೆಯ ನಡುವೆ ಇರುವ ಬೇಲಿಯನ್ನು ಬ್ರೇಕ್ ಮಾಡುತ್ತೆ. ನಮ್ಮ ಮುಂದಿನ ಇಂಡಿಯಾ ಸಿನಿಮಾ ಸಲಾರ್ ಎಂದು ಘೋಷಣೆ ಮಾಡುತ್ತಿದ್ದೇವೆ. ಡಾರ್ಲಿಂಗ್ ಪ್ರಭಾಸ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಮೊದಲಿಗೆ ಉಗ್ರಂ ಸಿನಿಮಾ ನಿರ್ದೇಶನ ಮಾಡಿ ಗೆದ್ದಿದ್ದ ನೀಲ್ ನಂತರ ಕೆಜಿಎಫ್ ಮಾಡಿ ಭಾರತ ಸಿನಿಮಾ ರಂಗದಲ್ಲಿ ಮನೆಮಾತಾಗಿದ್ದರು.

  • ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಬೆಂಗಳೂರು: ದೇಶದ ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಇದೇ ತಿಂಗಳು 21ರಂದು ಬಿಡುಗಡೆ ಆಗಲಿದೆ. ಇಂದು ಚಿತ್ರದ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.

    ಕೋಲಾರದ ಕೆಜಿಎಫ್‍ನ ಓರ್ವ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿ ಆದಾಗ ಚಿತ್ರದಲ್ಲಿ ಈ ಹಾಡು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಡಿನ ಪ್ರತಿಯೊಂದು ಸಾಲುಗಳು ಭೂಗತ ಲೋಕದ ಅಧಿಪತಿಯಾದ ರಾಕಿಯನ್ನು ವರ್ಣನೆ ಮಾಡುತ್ತಿವೆ. ಹಾಡಿನ ಚಿತ್ರೀಕರಣ ಸಂಪೂರ್ಣ 70ರ ದಶಕದ ಮಾದರಿಯಲ್ಲಿ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ಈಗಾಗಲೇ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಚಿತ್ರದ ಟೀಸರ್ ಮತ್ತು ಟ್ರೇಲರ್ ಎರಡು ಕೆಜಿಎಫ್ ಇದೊಂದು ಭಿನ್ನ ಸಿನಿಮಾ ಅಂತಾ ಎಂಬುದನ್ನು ಸಾಬೀತು ಮಾಡಿದ್ದವು. ಖಡಕ್ ಹಿನ್ನೆಲೆ ಧ್ವನಿಯಿಂದ ಆರಂಭವಾಗಿದ್ದ ಟೀಸರ್ ಮತ್ತು ಟ್ರೇಲರ್ ಇದೊಂದು ಪಕ್ಕಾ ಮಾಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಕಥೆ ಒಳಗೊಂಡಿದೆ ಎಂಬುದನ್ನು ಸಾರಿ ಹೇಳಿದ್ದವು. ಭೂಗತ ಲೋಕದ ಅಧಿಪತಿಯಾಗುವ ರಾಕಿ ಸಹ ಓರ್ವ ಮಗ. ತಾಯಿ ಮತ್ತು ಮಗನ ಪ್ರೀತಿಯನ್ನು ಚಿತ್ರದಲ್ಲಿ ಕಾಣಬಹುದು ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ಸದ್ಯ ಹಾಡನ್ನು ಲಹರಿ ಮ್ಯೂಸಿಕ್ ಯುಟ್ಯೂಬ್ ಅಕೌಂಟ್ ನಲ್ಲಿ ನೋಡಬಹುದಾಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿ ಖರ್ಚಿನಲ್ಲಿ ಆಡಿಯೋದ ಹಕ್ಕನ್ನು ಖರೀದಿಸಿದ್ದು ವಿಶೇಷವಾಗಿದೆ. ಇದು `ಕೆಜಿಎಫ್’ನ ಮೊದಲ ಹಾಡಾಗಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಕ್ರಮೇಣವಾಗಿ ಒಂದೊಂದೇ ಹಾಡುಗಳು ರಿಲೀಸ್ ಆಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv