ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದಕ್ಕೆ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Homble Films) ಅನ್ನು ನಟ ಪ್ರಕಾಶ್ ರಾಜ್ (Prakash Raj) ಅಭಿನಂದಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ರಿಷಬ್ ಶೆಟ್ಟಿ ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಓಳಿತಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ
ಈ ಪ್ರತಿಕ್ರಿಯೆಗೆ ರಿಷಬ್ ಶೆಟ್ಟಿ ಹೃದಯಪೂರ್ವಕ ಧನ್ಯವಾದಗಳು ಪ್ರಕಾಶ್ ಅಣ್ಣ ಎಂದು ತಿಳಿಸಿದ್ದಾರೆ.
ಈಗಾಗಲೇ ಟ್ರೈಲರ್ ರಿಲೀಸ್ ಗಾಗಿ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಮತ್ತು ಕೆಜಿಎಫ್ 2 ಸಿನಿಮಾದ ಹೆಸರಿನಲ್ಲಿ ಅಲ್ಲಲ್ಲಿ ಪೂಜೆ ನಡೆದಿವೆ. ಅಲ್ಲದೇ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಎಲ್.ಇ.ಡಿನಲ್ಲಿ ಟ್ರೈಲರ್ ತೋರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲ ಸಂಭ್ರಮದ ಮಧ್ಯೆಯೇ ಟ್ರೈಲರ್ ವೀಕ್ಷಿಸಿದ ಮೊದಲ ವ್ಯಕ್ತಿಯು ಚುಟುಕಾಗಿ ಮತ್ತು ಅರ್ಥಪೂರ್ಣವಾಗಿ ವಿಮರ್ಶೆ ಮಾಡಿದ್ದಾರೆ.
ಇಂದು ಸಂಜೆ ಬಿಡುಗಡೆ ಆಗಲಿರುವ ಕೆಜಿಎಫ್ 2 ಸಿನಿಮಾದ ಟ್ರೈಲರ್ ಐದು ಭಾಷೆಗಳಲ್ಲಿ ಬರಲಿದೆ. ತೆಲುಗಿನಲ್ಲಿ ರಾಮ್ ಚರಣ್, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಮತ್ತು ಹಿಂದಿಯಲ್ಲಿ ಫರಾನ್ ಅಖ್ತಾರ್ ಆಯಾ ಭಾಷೆಯ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ರಿಲೀಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ
ಅಂದಹಾಗೆ ಈ ಸಿನಿಮಾದ ಮೊದಲ ಟ್ರೈಲರ್ ನೋಡಿದ್ದು ಪತ್ರಕರ್ತ ಹಾಗೂ ಓವರ್ ಸೀಸ್ ಸೆನ್ಸಾರ್ ಬೋರ್ಡನ ಸದಸ್ಯ ಉಮೈರ್ ಸಂಧು. ದಕ್ಷಿಣದ ಮತ್ತು ಬಾಲಿವುಡ್ ನ ಯಾವುದೇ ಸಿನಿಮಾ ಅಥವಾ ಟ್ರೈಲರ್, ಟೀಸರ್ ವಿದೇಶದಲ್ಲಿ ಬಿಡುಗಡೆ ಆಗುತ್ತಿದ್ದರೆ, ಅದನ್ನು ಮೊದಲ ವೀಕ್ಷಣೆ ಮಾಡುವುದು ಇದೇ ಉಮೈರ್ ಸಂಧು. ಇವರು ಓವರ್ ಸಿಸ್ ಸೆನ್ಸಾರ್ ಬೋರ್ಡನ ಸದಸ್ಯರಾದ ಕಾರಣಕ್ಕಾಗಿ ಮೊದಲ ನೋಡುವ ಅವಕಾಶ ಇವರಿಗೆ ಸಿಕ್ಕಿದೆ.
ಕೆಜಿಎಫ್ 2 ಟ್ರೈಲರ್ ಈಗಷ್ಟೇ ಸೆನ್ಸಾರ್ ಆಯಿತು. ಸೆನ್ಸಾರ್ ಬೋರ್ಡ್ ನಲ್ಲಿ ಟ್ರೈಲರ್ ನೋಡಿ ಸ್ಟನ್ ಆದೆ. ಟ್ರೈಲರ್ ನೋಡಿದ ನಂತರ ಮಾತೇ ಬರುತ್ತಿಲ್ಲ. ಸ್ಫೋಟಕ ರೀತಿಯಲ್ಲಿ ಅದು ಫೀಲ್ ಕೊಡುತ್ತಿದ್ದೆ. ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ’ ಟ್ವಿಟ್ ಮಾಡಿದ್ದಾರೆ ಉಮೈರ್ ಸಂಧು.