-ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಈ ಕೃತ್ಯದ ಪ್ರಮುಖ ಆರೋಪಿ
ಬೆಂಗಳೂರು: ನಗರದ ಹೊಂಗಸಂದ್ರ (Hongasandra) ಬಳಿಯ ಗಾರೆಪಾಳ್ಯ ರಸ್ತೆಯಲ್ಲಿ ಓರ್ವ ರೌಡಿಶೀಟರ್ ಕುಡಿದ ಮತ್ತಿನಲ್ಲಿ 18ಕ್ಕೂ ಹೆಚ್ಚು ವಾಹನಗಳ ಗಾಜನ್ನು ಪುಡಿ ಮಾಡಿ ದಾಂಧಲೆ ನಡೆಸಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ
ಇತ್ತೀಚಿಗೆ ಬೆಂಗಳೂರಿನ (Benagluru) ಹಲವೆಡೆ ಪುಡಿ ರೌಡಿಗಳ ದಾಂಧಲೆ ಹೆಚ್ಚುತ್ತಲೆ ಇದೆ. ಹವಾ ಮಾಡಬೇಕೆಂಬ ಉದ್ದೇಶದಿಂದ ಅಟ್ಟಹಾಸ ಮೆರೆಯುತ್ತಿದ್ದಾರೆ. ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ರೌಡಿಶೀಟರ್ ಸೇರಿ ಇನ್ನಿತರರು ಹೊಂಗಸಂದ್ರದ ಜನರನ್ನು ಬೆದರಿಸಲು ಅಲ್ಲಿದ್ದ 4 ಆಟೋ, 10 ಕಾರು ಮತ್ತು ಗೂಡ್ಸ್ ವಾಹನಗಳ ಗಾಜನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದು ಪುಡಿ ಮಾಡಿದ್ದಾರೆ.ಇದನ್ನೂ ಓದಿ: ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು
ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ (Bommanahalli) ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತ ರೌಡಿಶೀಟರ್ ಸೋಮಶೇಖರ್ ಈ ಕೃತ್ಯದ ಪ್ರಮುಖ ಆರೋಪಿ. ಸೋಮಶೇಖರ್ ಏರಿಯಾದಲ್ಲಿ ಹವಾ ಮಾಡೋಕೆ ಈಗಾಗಲೇ ಸಾಕಷ್ಟು ಜನರ ಬಳಿ ಕಿರಿಕ್ ಮಾಡಿಕೊಂಡಿದ್ದಾನೆ. ಜೊತೆಗೆ ಯುವಕರಿಗೆ ಕಾಲ್ ಮಾಡಿ ಆವಾಜ್ ಹಾಕುವುದು, ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದಕ್ಕೆ ಧಮ್ಕಿ ಹಾಕುವುದು, ಹೀಗೆ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ
ಬೆಂಗಳೂರು: ಬಿಬಿಎಂಪಿಯ ವೋಟರ್ ದತ್ತಾಂಶ ಹಗರಣ(Voter Data Scam) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಿಲುಮೆ(Chilume) ಸಂಸ್ಥೆಯ ಸಿಬ್ಬಂದಿ ಹೊಂಗಸಂದ್ರ ವಾರ್ಡ್‍ನ ಶಾಸಕರ ಕಚೇರಿಯಿಂದ ಕಾರ್ಯನಿರ್ವಹಿಸಿರುವುದು ಬೆಳಕಿಗೆ ಬಂದಿದೆ.
ಚಿಲುಮೆಯ(Chilume) ಅಕ್ರಮಗಳು ಬಯಲಿಗೆ ಬರುವ ಸುಳಿವನ್ನು ಅರಿತಿದ್ದ ಬಿಬಿಎಂಪಿ(BBMP) ತರಾತುರಿಯಲ್ಲಿ ನವೆಂಬರ್ 2ರಂದು ಚಿಲುಮೆಗೆ ನೀಡಿದ್ದ ಸರ್ವೇ ಅನುಮತಿಯನ್ನು ರದ್ದು ಮಾಡಿತ್ತು. ಈ ಬೆನ್ನಲ್ಲೇ ಚಿಲುಮೆಯ ನಾಲ್ಕು ಕಚೇರಿಗಳು ದಿಢೀರ್ ಎಂದು ಬಂದ್ ಆಗಿದ್ದವು. ಇದನ್ನೂ ಓದಿ: ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು
ಈ ಹೊತ್ತಲ್ಲಿ ಚಿಲುಮೆಯ ಸರ್ವೇ ಸಿಬ್ಬಂದಿಗೆ ಆಶ್ರಯ ಸಿಕ್ಕಿದ್ದು ಹೊಂಗಸಂದ್ರ ವಾರ್ಡ್‍ನ(Hongasandra Ward) ಶಾಸಕರ ಕಚೇರಿಯಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿನ ಆ ಪ್ರಭಾವಿ ಶಾಸಕರ ಕಚೇರಿಯಲ್ಲಿ ಕುಳಿತೇ ಚಿಲುಮೆ ಸಂಸ್ಥೆಯ ಸರ್ವೇ ಸಿಬ್ಬಂದಿ ನವೆಂಬರ್ 17ರವರೆಗೂ ಕಾರ್ಯನಿರ್ವಹಿಸಿದ್ದರು ಎನ್ನಲಾಗುತ್ತಿದೆ.
ಈ ಆರೋಪ ನಿಜವೇ ಆದಲ್ಲಿ, ಇಡೀ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ಸಿಗಲಿದೆ. ಬಿಜೆಪಿಯ ಆ ಶಾಸಕ ಮತ್ತು ಬಿಬಿಎಂಪಿ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಈ ಮಧ್ಯೆ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರ ಕ್ಷೇತ್ರಗಳ ಮತದಾರರ ಮಾಹಿತಿಯನ್ನು ಚಿಲುಮೆ ಸಂಸ್ಥೆಯ ರವಿಕುಮಾರ್ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ
ಮತ ಮಾಹಿತಿಗಳವು ಪ್ರಕರಣದಲ್ಲಿ ಬಂಧಿತ ಕಿಂಗ್‍ಪಿನ್ ರವಿಕುಮಾರ್ ವಿಚಾರಣೆ ತೀವ್ರಗೊಂಡಿದೆ. ಚಿಲುಮೆಯ ಕೆಂಪೇಗೌಡ, ಧರ್ಮೇಶ್‍ನನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿವೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಪತ್ರಗಳು ಲಭ್ಯವಾಗಿವೆ.
ಆರ್‌ಓಗಳ ಮೂಲಕವೇ ಮತಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿಲುಮೆ ಮಾಹಿತಿ ಆಧರಿಸಿಯೇ ಆರ್‌ಓಗಳು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಆದರೂ ಈವರೆಗೂ ಕೇವಲ ಮೂವರು ಆರ್‌ಓಗಳನ್ನು ಅಮಾನತು ಮಾಡಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ಕೋವಿಡ್-19 ಹಾಟ್‍ಸ್ಪಾಟ್‍ಗಳಲ್ಲಿ ಒಂದಾದ ಹೊಂಗಸಂದ್ರ ವಾರ್ಡ್ ಈಗ ಕೊರೊನಾ ಮುಕ್ತವಾಗಿದೆ.
ತವರಿಗೆ ಹೋಗಲು ವಲಸೆ ಕಾರ್ಮಿಕರು ಒತ್ತಡ ಹೇರಿದ ಕಾರಣಕ್ಕೆ ಬಿಬಿಎಂಪಿ ಅವರೆಲ್ಲರಿಗೂ ತಮ್ಮ ಊರನ್ನು ಸೇರಲು ವ್ಯವಸ್ಥೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ಕೊರೊನಾ ಸೋಂಕಿತರು, ಶಂಕಿತರು, ಗುಣಮುಖರಾದವರ ಕ್ವಾರಂಟೈನ್ ಮುಗಿದ ಕೂಡಲೇ ವಾರ್ಡ್‍ನಿಂದ ಜಾಗ ಖಾಲಿ ಮಾಡಿದ್ದಾರೆ. ಸುಮಾರು 106 ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ತಲುಪಲು ಬಿಬಿಎಂಪಿ ಸಹಾಯ ಮಾಡಿದೆ. ಹೀಗಾಗಿ ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ಹೊಂಗಸಂದ್ರ ಈಗ ಕೊರೊನಾ ಮುಕ್ತ ಪ್ರದೇಶವಾಗಿದೆ.
ಆದರೆ ಪಕ್ಕದ ಮಂಗಮ್ಮನಪಾಳ್ಯ ವಾರ್ಡ್‍ನಲ್ಲಿ ಇನ್ನೂ ಕೊರೊನಾ ಶಂಕಿತರು ಇದ್ದಾರೆ. ಸುಮಾರು 46 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಲ್ಲದೆ ಶಂಕಿತರ ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಅವರಿಗೆ ಕೊರೊನಾ ಪರೀಕ್ಷೆ ಮಾಡಿ, ಸೋಂಕು ತಗುಲಿಲ್ಲ ಎಂದು ದೃಢವಾದ ಮೇಲೆಯೇ ಅವರನ್ನು ಕ್ವಾರಂಟೈನ್‍ನಿಂದ ಬಿಡುಗಡೆಗೊಳಿಸಲಾಗುತ್ತದೆ.
ಇಂದು ಕರ್ನಾಟಕದಲ್ಲಿ ಒಟ್ಟು 84 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಒಟ್ಟು 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
– ಕ್ವಾರಂಟೈನ್‍ನಲ್ಲಿರುವ 132 ಜನರ ಬೇಡಿಕೆಗೆ ಕಂಗೆಟ್ಟ ಬಿಬಿಎಂಪಿ
ಬೆಂಗಳೂರು: ನಮ್ಮನ್ನ ಮನೆಗೆ ಕಳುಹಿಸಿ, ನಾವು ವಾಕಿಂಗ್ ಮಾಡಬೇಕು ಬಿಡಿ ಎಂದು ಹೋಟೆಲ್ ಕ್ವಾರಂಟೈನ್‍ನಲ್ಲಿರುವ ಹೊಂಗಸಂದ್ರದ ಪುಂಡರು, ಬಿಹಾರಿಗಳು ಚಿತ್ರ ವಿಚಿತ್ರ ಬೇಡಿಕೆ ಇಡುತ್ತಿದ್ದಾರೆ.
ಬಿಹಾರಿಗಳು, ಹೊಂಗಸಂದ್ರದ ಪುಂಡರು ಸೇರಿದಂತೆ ಒಟ್ಟು 132 ಜನ ಕೋವಿಡ್-19 ಶಂಕಿತರು ಹೋಟೆಲ್ ಕ್ವಾರಟೈನ್‍ನಲ್ಲಿದ್ದಾರೆ. ಉತ್ತಮ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ಒದಗಿಸಿದರೂ ಒಂದಿಲ್ಲೊಂದು ವಿಚಾರಕ್ಕೆ ಕೊರೊನಾ ಶಂಕಿತರು ತಗಾದೆ ತೆಗೆಯುತ್ತಲೇ ಇದ್ದಾರೆ. ಅವರ ಚಿತ್ರ ವಿಚಿತ್ರ ಬೇಡಿಕೆಗಳಿಂದ ಬಿಬಿಎಂಪಿ ಕಂಗೆಟ್ಟಿದೆ.
ಮನೆಗೆ ಕಳುಹಿಸುವಂತೆ ಕೊರೊನಾ ಶಂಕಿತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕಂಗೆಟ್ಟಿದ್ದಾರೆ. ಈ ವಿಚಾರವಾಗಿ ಬಿಬಿಎಂಪಿಯು ಪೊಲೀಸ್ ಇಲಾಖೆ ಜೊತೆ ಮಾತುಕತೆ ನಡಸಿದ್ದು, ಬಿಹಾರಿಗಳನ್ನು ಊರಿಗೆ ಕಳುಹಿಸಿಕೊಡಲು ಟಿಕೆಟ್ ವ್ಯವಸ್ಥೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಇತ್ತ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೀಲ್‍ಡೌನ್ ಮಾಡಿದ್ದರೂ ಸ್ಥಳೀಯರ ಓಡಾಟ ಮಾತ್ರ ನಿಂತಿಲ್ಲ. ಪಾದರಾಯನಪುರ ಕಳ್ಳ ಮಾರ್ಗಗಳಲ್ಲಿ ಸಿಲ್‍ಡೌನ್ ಪ್ರದೇಶದ ಹೋಗುವುದು ಬರುವುದು ನಡೆಯುತ್ತಲೇ ಇದೆ. ಎಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳದ ಪರಿಣಾಮ ಪೊಲೀಸರು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ರಸ್ತೆಗಳಲ್ಲಿ ಜನ ಗುಂಪು ಸೇರುವುದು, ರಸ್ತೆ ಬದಿಯಲ್ಲಿ ಕುಳಿತು ಹರಟೆ ಹೊಡೆಯುವ ದೃಶ್ಯ ಸಾಮಾನ್ಯವಾಗಿವೆ. ಮತ್ತೆ ಕೆಲವರು ನಾಯಿ ಹಿಡಿದುಕೊಂಡು ಇಂದು ಬೆಳಗ್ಗೆ ವಾಕ್ ಮಾಡುತ್ತಿದ್ದರು.
ಬೆಂಗಳೂರು: ಹೊಂಗಸಂದ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂದ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂದ್ರದಲ್ಲಿ ಭೀತಿ ಎದುರಾಗಿದೆ.
ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ ಮುಗಿದ ನಂತರ ಮತ್ತೆ ಟೆಸ್ಟ್ ಗೆ ಒಳಪಡಿಸಿದ್ದಾರೆ. 2ನೇ ಟೆಸ್ಟ್‌ನಲ್ಲಿ ಬರೋಬ್ಬರಿ 5 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾದ ಐದು ಜನರಲ್ಲಿ ಒಬ್ಬರು ಅಲ್ಲಿನ ಸ್ಥಳೀಯರು, ಮೂವರು ಕೂಲಿ ಕಾರ್ಮಿಕರು ಮತ್ತು ಒಬ್ಬರು ಕನ್ನಡಿಗರಿದ್ದಾರೆ.
ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದುದ್ದರಿಂದ ಇವರು ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ. ಅಲ್ಲಿನ ಶೆಡ್‍ನಲ್ಲಿದ್ದವರು ಎನ್ನಲಾಗುತ್ತಿದೆ. ಈಗ ಈ ಐದು ಜನರ ಬಗ್ಗೆ ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದ್ದು, ಮತ್ತಷ್ಟು ಜನರನ್ನ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ. ಕ್ವಾರಂಟೈನ್‍ನಲ್ಲಿದ್ದ ಐದು ಜನರಿಗೆ ಪಾಸಿಟಿವ್ ಬಂದಿರುವುದು ಆರೋಗ್ಯ ಇಲಾಖೆ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಬೆಂಗಳೂರು: ಕ್ವಾರಂಟೈನ್ ನಲ್ಲಿರುವ ಹೊಂಗಸಂದ್ರದ ಬಿಹಾರಿಗಳು ಸಿಕ್ಕಾಪಟ್ಟೆ ಬೇಡಿಕೆ ಇಡುತ್ತಿದ್ದು, ಇವರ ಬೇಡಿಕೆ ಕೇಳಿ ಬಿಬಿಎಂಪಿ ಸಿಬ್ಬಂದಿ ರೋಸಿ ಹೋಗಿದ್ದಾರೆ.
ಹೊಂಗಸಂದ್ರ- ಎಲೆಕ್ಟ್ರಾನಿಕ್ ಸಿಟಿ ಮಧ್ಯ ಭಾಗದಲ್ಲಿ ಬರುವ ಮಣಿಪಾಲ್ ಕೌಂಟಿ ಹೋಟೆಲ್ ನಲ್ಲಿ ಬಿಹಾರಿ ಮೂಲದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈಗ ಟಿವಿ ಹಾಕಿಸಿ ಊಟ ಬೇರೆ ಕೊಡಿ ಎಂದು ಬಿಹಾರಿಗಳು ದಿನಕ್ಕೊಂದು ಬೇಡಿಕೆ ಇಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಈ ಬೇಡಿಕೆಗೆ ರೋಸಿ ಹೋದ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಕೌನ್ಸಿಲಿಂಗ್ ಮಾಡಿಸಿದ್ದರು. ಈಗ ಹೆಚ್ಚುವರಿ ಪೊಲೀಸ್ ಭದ್ರತೆಯ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಬಿಹಾರಿ ಕಾರ್ಮಿಕನಿಂದ 29 ಮಂದಿಗೆ ಸೋಂಕು ಹರಡಿದ್ದು, ಸೋಂಕಿತರ ಜೊತೆ ಸಂಪರ್ಕ ಹೊಂದಿರುವ 212 ಮಂದಿಯನ್ನು ಕ್ವಾರಂಟೈನ್ ಮಾಡಿ, ಮೂರು ಹೊತ್ತು ಊಟ, ಕುಡಿಯಲು ನೀರಿನ ಬಾಟಲ್ ಸೇರಿದಂತೆ ಬಿಬಿಎಂಪಿ ಎಲ್ಲ ವ್ಯವಸ್ಥೆ ಮಾಡಿದೆ.
ಹೊಂಗಸಂದ್ರದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಕ್ವಾರಂಟೈನ್ ಮಾಡಲಾದ 212 ಮಂದಿಯಲ್ಲಿ ಪ್ರಾಥಮಿಕ 175 ಹಾಗೂ 63 ಜನರನ್ನು ದ್ವಿತೀಯ ಸಂಪರ್ಕಿತರು ಎಂದು ಗುರುತಿಸಿಲಾಗಿದ್ದು, ಯಾರಿಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ.
ಬೆಂಗಳೂರು: ಹೊಂಗಸಂದ್ರದ ಕಂಟೈನ್‍ಮೆಂಟ್ ಝೋನ್‍ಗೆ ಇಂದು ಡಿಎಚ್‍ಒ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಎಲ್ಲಾ ಮುನ್ನೆಚ್ಚರಿಕೆ ವಹಿಸುವಂತೆ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ಹೊಂಗಸಂದ್ರ ಈಗ ಹಾಟ್ ಸ್ಪಾಟ್ ಆಗಿರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಫಿವರ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಫಿವರ್ ಕ್ಲಿನಿಕ್‍ಗೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಸಿಬ್ಬಂದಿ ಅಗತ್ಯ ಔಷಧಿ ನೀಡಿ ಕಳುಹಿಸುತ್ತಿದ್ದಾರೆ.
ಇಲ್ಲಿ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿದ ಬಿಹಾರ ಮೂಲದ ಕಾರ್ಮಿಕ ಆರೋಗ್ಯ ಇಲಾಖೆಗೆ ಭಾರೀ ಸವಾಲಾಗಿದ್ದು ಆತನ ಸಂಪರ್ಕವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಬಿಹಾರಿ ಕಾರ್ಮಿಕನ ಮನೆಯ ಸುತ್ತಮುತ್ತ ವಾಸವಿದ್ದ ಏರಿಯಾದವರಿಗೆಲ್ಲಾ ಗಂಟಲು ದ್ರವ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸಾಮಾನ್ಯವಾಗಿ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊರತುಪಡಿಸಿ, ಸೀಲ್ಡ್ ಡೌನ್ ಆಗಿದ್ದ ಭಾಗದಲ್ಲಿ ಯಾರಿಗಾದ್ರೂ ಗುಣ ಲಕ್ಷಣಗಳು ಕಂಡುಬಂದರಷ್ಟೇ ಟೆಸ್ಟ್ ನಡೆಸುತ್ತಿದ್ರು. ಆದರೆ ಬಿಹಾರಿ ಕಾರ್ಮಿಕ ಪಾಸಿಟಿವ್ ಬಂದ ಬೆನ್ನಲ್ಲೇ ಈತನ ಕಾಂಟಾಕ್ಟ್ ನಲ್ಲಿರುವವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಅಲರ್ಟ್ ಆದ ಆರೋಗ್ಯ ಇಲಾಖೆ ಅತ್ಯಧಿಕ ಸಂಖ್ಯೆಯಲ್ಲಿ ಹೊಂಗಸಂದ್ರ ಭಾಗದಿಂದ ಸ್ಯಾಂಪಲ್ ಕಲೆಕ್ಟ್ ಮಾಡಲು ನಿರ್ಧರಿಸಿದೆ.
ಹೊಂಗಸಂದ್ರದಲ್ಲಿ ಆತಂಕದ ವಾತಾವರಣವಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಕಂಪ್ಲೀಟ್ ಬಂದ್ ಆಗಿವೆ. ಹೊಂಗಸಂದ್ರದಲ್ಲಿ ನಿರಂತರ ಪಾಸಿಟಿವ್ ಪ್ರಕರಣ ಏರಿಕೆಯಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ರಕ್ಷಣಾ ಕವಚ ನೀಡಲಾಗಿದೆ. ಕಸ ಎತ್ತುವ ಮೊದಲು ಕಸಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ನಂತರ ಕಸದ ಗಾಡಿಗಳಿಗೆ ಹಾಕುತ್ತಿದ್ದಾರೆ.
ಹೊಂಗಸಂದ್ರದ ವಿದ್ಯಾಜ್ಯೋತಿ ನಗರ ಸುತ್ತಮುತ್ತ ಬಿಬಿಎಂಪಿ ವತಿಯಿಂದ ಔಷಧಿ ಸಿಂಪಡಣೆ ಕಾರ್ಯವೂ ಇಂದು ನಡೆದಿದೆ.
-ಬೆಂಗಳೂರಿನ 19 ಮಂದಿಗೆ ಕೊರೊನಾ ಸೋಂಕು
-ಸಿಲಿಕಾನ್ ಸಿಟಿಗೆ ಇವತ್ತು ಬ್ಲ್ಯಾಕ್ ಫ್ರೈಡೇ
-ಬಿಹಾರದ ಕಾರ್ಮಿಕನಿಂದ 11 ಮಂದಿಗೆ ಸೋಂಕು
ಬೆಂಗಳೂರು: ಇವತ್ತು ಒಂದೇ ದಿನ 29 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೇರಿದೆ. ಸಿಲಿಕಾನ್ ಸಿಟಿಗೆ ಇವತ್ತು ಬ್ಲ್ಯಾಕ್ ಫ್ರೈಡೇ ಆಗಿದ್ದು, 19 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇಂದು ಬೆಳಗ್ಗೆ 11 ಮತ್ತು ಸಂಜೆ ಬುಲೆಟಿನ್ ನಲ್ಲಿ ಒಟ್ಟು 19 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಬೆಂಗಳೂರಿನ 19 ಜನರು ಸೇರಿದಂತೆ ರಾಜ್ಯದ 29 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ ಕಂಡಿದೆ.
ಸೋಂಕಿತರ ಮಾಹಿತಿ: ಬೆಳಗ್ಗೆ ಬಿಡುಗಡೆಯಾದ ಪಟ್ಟಿ:
1. ರೋಗಿ-446: ಬೆಂಗಳೂರಿನ 49 ವರ್ಷದ ಮಹಿಳೆ. ಸಂಪರ್ಕದ ಮಾಹಿತಿ ಲಭ್ಯವಾಗಿಲ್ಲ.
2. ರೋಗಿ-447: ತುಮಕೂರಿನ 32 ವರ್ಷದ ಪುರುಷ. ಸೂರತ್-ಗುಜರಾತ್‍ಗೆ ಪ್ರಯಾಣ ಬೆಳೆಸಿದ ಹಿನ್ನಲೆ ಹೊಂದಿದ್ದಾರೆ.
3. ರೋಗಿ-448: ಬೆಳಗಾವಿ ಜಿಲ್ಲೆ ರಾಯಬಾಗ್‍ನ 10 ವರ್ಷದ ಬಾಲಕಿ. ರೋಗಿ-150ರ ಸಂಪರ್ಕದಲ್ಲಿದ್ದರು.
4. ರೋಗಿ-449: ಬೆಂಗಳೂರಿನ 30 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
5. ರೋಗಿ-450: ಬೆಂಗಳೂರಿನ 22 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
6. ರೋಗಿ-451: ಚಿಕ್ಕಬಳ್ಳಾಪುರದ 39 ವರ್ಷದ ಪುರುಷ. ರೋಗಿ-250ರ ಸಂಪರ್ಕದಲ್ಲಿದ್ದರು.
7. ರೋಗಿ-452: ಬೆಂಗಳೂರಿನ 35 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
8. ರೋಗಿ-453: ಬೆಂಗಳೂರಿನ 32 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
9. ರೋಗಿ-454: ಬೆಂಗಳೂರಿನ 23 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
10. ರೋಗಿ-455: ಬಾಗಲಕೋಟೆ ಜಿಲ್ಲೆ ಮುದೋಳದ 28 ವರ್ಷದ ಪುರುಷ. ರೋಗಿ-380ರ ಸಂಪರ್ಕದಲ್ಲಿದ್ದರು.
11. ರೋಗಿ-456: ಬಾಗಲಕೋಟೆ ಜಿಲ್ಲೆ ಜಮಕಂಡಿಯ 46 ವರ್ಷದ ಪುರುಷ. ಸಂಪರ್ಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
12. ರೋಗಿ-457: ವಿಜಯಪುರದ 17 ವರ್ಷದ ಯುವಕ. ರೋಗಿ-221ರ ಸಂಪರ್ಕ ಹೊಂದಿದ್ದರು.
13. ರೋಗಿ-458: ಬೆಂಗಳೂರಿನ 26 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು.
14. ರೋಗಿ-459: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು.
15. ರೋಗಿ-460: ಬೆಂಗಳೂರಿನ 31 ವರ್ಷದ ಪುರುಷ. ರೋಗಿ-419ರ ಸಂಪರ್ಕದ ಹೊಂದಿದ್ದರು.
16. ರೋಗಿ-461: ಬೆಂಗಳೂರಿನ 32 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು.
17. ರೋಗಿ-462: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು.
18. ರೋಗಿ-463: ಬೆಳಗಾವಿ ಜಿಲ್ಲೆ ರಾಯಬಾಗ್‍ನ 15 ವರ್ಷದ ಬಾಲಕ. ರೋಗಿ-148ರ ಸಂಪರ್ಕದಲ್ಲಿದ್ದರು.
ಸಂಜೆ ಬಿಡುಗಡೆಯಾದ ಪಟ್ಟಿ:
19. ರೋಗಿ-464: ಮಂಡ್ಯ ಜಿಲ್ಲೆ ಮಳವಳ್ಳಿಯ 60 ವರ್ಷದ ಪುರುಷ. ರೋಗಿ ನಂಬರ್ 179ರ ಜೊತೆ ಸಂಪರ್ಕದಲ್ಲಿದ್ದರು.
20. ರೋಗಿ-465: ಬೆಂಗಳೂರು ನಗರದ 45 ವರ್ಷದ ಮಹಿಳೆ, ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ.
21. ರೋಗಿ-466: ಬೆಂಗಳೂರು ನಗರದ 50 ವರ್ಷದ ಪುರುಷ, ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲು
22. ರೋಗಿ-467: ವಿಜಯಪುರದ 27 ವರ್ಷದ ಯುವಕ, ರೋಗಿ ನಂಬರ್ 221ರ ಜೊತೆ ಸಂಪರ್ಕದಲ್ಲಿದ್ದರು.
23. ರೋಗಿ-468: ಬಾಗಲಕೋಟೆ ಜಿಲ್ಲೆಯ ಮುಧೋಳದ 14 ವರ್ಷದ ಬಾಲಕ. ರೋಗಿ ನಂಬರ್ 380ರ ಜೊತೆ ಸಂಪರ್ಕದಲ್ಲಿದ್ದನು
24. ರೋಗಿ-469: ಬೆಂಗಳೂರು ನಗರದ 26 ವರ್ಷದ ಯುವಕ. ರೋಗಿ ನಂಬರ್ 419ರ ಜೊತೆ ಸಂಪರ್ಕದಲ್ಲಿದ್ದನು
25. ರೋಗಿ-470: ಬೆಂಗಳೂರಿನ 20 ಯುವಕ, ರೋಗಿ-419ರ ಸಂಪರ್ಕ ಹೊಂದಿದ್ದರು.
26. ರೋಗಿ-471 ಬೆಂಗಳೂರಿನ 22 ಯುವಕ, ರೋಗಿ-419ರ ಸಂಪರ್ಕದಲ್ಲಿದ್ದರು.
27. ರೋಗಿ-472: ಬೆಂಗಳೂರಿನ 58 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
28. ರೋಗಿ-473: ಬೆಂಗಳೂರಿನ 38 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
29. ರೋಗಿ-474: ಬೆಂಗಳೂರಿನ 44 ಪುರುಷ, ರೋಗಿ-419ರ ಸಂಪರ್ಕದ ಹೊಂದಿದ್ದರು.
ಬೆಂಗಳೂರು: ಕೊರೊನಾ ಭೀತಿಯ ನಡುವೆಯೇ ಬೆಂಗಳೂರಿನ ಹೊಂಗಸಂದ್ರದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿ ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದ್ದಾನೆ.
ಹೊಂಗಸಂದ್ರದ ಕೊರೊನಾ ಪೀಡಿತ ಪ್ರದೇಶ ವಿದ್ಯಾಜ್ಯೋತಿ ನಗರದ ಸುತ್ತಮುತ್ತ ವ್ಯಕ್ತಿ ಓಡಾಟ ನಡೆಸುತ್ತಿದ್ದಾನೆ. ಅಲ್ಲಿ ಈಗಾಗಲೇ 9 ಜನರಿಗೆ ಪಾಸಿಟಿವ್ ಬಂದಿದ್ದು, ಪರಿಣಾಮ ಹೊಂಗಸಂದ್ರ ಸಂಪೂರ್ಣ ಸೀಲ್ ಡೌನ್ ಆಗಿದೆ. ಇದರ ಮಧ್ಯೆ ಈತನ ವರ್ತನೆ ಕಂಡು ಹೊಂಸಂದ್ರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಈ ಅನುಮಾನಸ್ಪದ ವ್ಯಕ್ತಿ ಉಗುಳುವುದು, ಮನೆಗಳ ಮುಂದೆ, ಅಂಗಡಿಗಳ ಮುಂದೆ ಮಲಗುವುದು, ಮನೆಗಳಿಗೆ ಕಲ್ಲು ಎಸೆಯುವುದು ಮಾಡ್ತಿದ್ದಾನೆ. ಮನೆಗಳ ಮುಂದೆ ಮಲಗುವುದು, ಉಗುಳುವುದನ್ನು ಕಂಡು ಬೈದು ಕಳಿಸುವ ಪ್ರಯತ್ನ ಮಾಡಿದ್ರು ಜನ ವಿಫಲರಾಗಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಭೀತಿ ನಡುವೆ ಈತನಿಗೂ ಕೊರೊನಾ ಇದೆಯಾ ಎಂಬ ಭಯ ಅಲ್ಲಿನ ಜನರಲ್ಲಿ ಮೂಡಿದೆ. ಬಿಹಾರಿ ಕೂಲಿ ಕಾರ್ಮಿಕ ಇರುವ ಏರಿಯಾ ಸುತ್ತಮುತ್ತ ಓಡಾಟ ನಡೆಸುತ್ತಿದ್ದು, ಈತನ ವರ್ತನೆ, ಓಡಾಟದ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಬೆಂಗಳೂರು: ಕೊರೊನಾ ಕೇಸ್‍ನಲ್ಲಿ ಬೆಂಗಳೂರಿನ ಹೊಂಗಸಂದ್ರ ನಂಜನಗೂಡು ಆಗುತ್ತಿದಿಯಾ ಅನ್ನೋ ಆತಂಕ ಎದುರಾಗಿದೆ. ಕಾರಣ ಬಿಹಾರ ಮೂಲದ ಕಾರ್ಮಿಕನೊಬ್ಬನಿಂದಲೇ ಈ ಏರಿಯಾದಲ್ಲಿ ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಬಿಹಾರ ಮೂಲದ ಕಾರ್ಮಿಕ ಬೊಮ್ಮನಹಳ್ಳಿ ವಲಯಕ್ಕೆ ಬರುವ ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದ. ಈತ ನಮ್ಮ ಮೆಟ್ರೋ ಕಾಮಗಾರಿಗೆ ಕೆಲಸ ಮಾಡುತ್ತಿದ್ದು, ಬರೋಬ್ಬರಿ 13 ಮಂದಿಗೆ ಕೊರೊನಾ ಹಬ್ಬಿರುವುದು ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಇಡೀ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಕೊರೊನಾ ಸೋಂಕಿತ ಕಾರ್ಮಿಕನ ಟ್ರಾವೆಲ್ ಹಿಸ್ಟರಿ – ಆಟೋದಲ್ಲಿ ಪ್ರಯಾಣ
ಈತ ವಾಸಿಸುತ್ತಿದ್ದ ವಿದ್ಯಾಜ್ಯೋತಿ ನಗರದಲ್ಲಿ ರಸ್ತೆ, ಅಂಗಡಿ, ಮನೆಗಳನ್ನು ಬಂದ್ ಮಾಡಲಾಗಿದೆ. ಬಿಹಾರ ಮೂಲದ ಈ ಕಾರ್ಮಿಕ ಹೊಂಗಸಂದ್ರದಲ್ಲಿ ಉಳಿದ 13 ಮಂದಿಯ ಒಟ್ಟಿಗೆ ವಾಸವಾಗಿದ್ದ. ಅಲ್ಲದೇ ಬಿಬಿಎಂಪಿ ನೀಡಿದ್ದ ಆಹಾರದ ಕಿಟ್‍ನಿಂದ 150 ಮಂದಿ ಒಟ್ಟಿಗೆ ಅಡುಗೆ ರೆಡಿ ಮಾಡುತ್ತಿದ್ದರು.
ಈತನ ಸಂಪರ್ಕದಲ್ಲಿದ್ದ 150 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕಾರ್ಮಿಕನಿಗೆ ಕೊರೊನಾ ಹೇಗೆ ಬಂತು ಅನ್ನೋದೇ ಈಗ ರಹಸ್ಯವಾಗಿಬಿಟ್ಟಿದೆ. ಲಾಕ್‍ಡೌನ್‍ಗೂ ಮೊದಲು ಈತ ಬಿಹಾರಕ್ಕೆ ಹೋಗಿಬಂದಿದ್ದ ಎಂದು ತಿಳಿದುಬಂದಿದೆ. ಈತನಿಂದ ಸೋಂಕಿತರಾದವರು ಪಕ್ಕದ ಮಂಗಮ್ಮನ ಪಾಳ್ಯದಲ್ಲೂ ಕೆಲಸ ಮಾಡುತ್ತಿದ್ದರು. ಹೀಗಾಗಿ ಈ ಸೋಂಕಿತರ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಅನ್ನೋ ಬಗ್ಗೆಯೂ ಇವತ್ತಿನಿಂದ ಬಿಬಿಎಂಪಿ ಮಾಹಿತಿ ಸಂಗ್ರಹಿಸಲಿದೆ. ಇನ್ನೂ ಈತ ಓಡಾಡುತ್ತಿದ್ದ ಆಟೋ ಚಾಲಕ ಮತ್ತು ಆತನ ಮನೆಯವರಿಗೆ ಕೊರೊನಾ ನೆಗೆಟಿವ್ ಬಂದಿದೆ.