Tag: ಹೈದಾರಾಬಾದ್

  • ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಹೈದರಾಬಾದ್: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ. ಆದರೆ ಈ ಜೋಡಿ ಹೈದರಾಬಾದ್‍ನ ಐಷಾರಾಮಿ ಹೋಟೆಲ್‍ವೊಂದರಲ್ಲಿ ಇಬ್ಬರು ತಂಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಐಷಾರಾಮಿ ಹೋಟೆಲ್‍ವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ಇದ್ದಾರೆ. ಹಾಗಂದ ಮಾತ್ರಕ್ಕೆ ಇಬ್ಬರು ಒಟ್ಟಿಗೆ ಇದ್ದಾರೆ ಎಂದೇನಲ್ಲ. ವೃತ್ತಿ ಕಾರಣದಿಂದಾಗಿ ಹೈದಾರಾಬಾದ್‍ನಲ್ಲಿ ಬೀಡುಬಿಟ್ಟಿರುವ ಈ ಮಾಜಿ ದಂಪತಿ ಒಂದೇ ಹೋಟೆಲ್‍ನಲ್ಲಿ ಇದ್ದಾರೆ ಅಷ್ಟೇ. ಸದ್ಯ ಇಂಥದ್ದೊಂದು ಮಾಹಿತಿ ಸಿಕ್ಕಿದೆ. ಅಧಿಕೃತವಾಗಿ ವಿಚ್ಛೇದನ ಘೋಷಣೆ ಮಾಡಿರುವ ಇಬ್ಬರು, ಅದನ್ನೇ ಯೋಚಿಸುತ್ತ ಕುಳಿತಿಲ್ಲ. ಬದಲಾಗಿ, ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರದಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ ಸೆಲೆಬ್ರಿಟಿ ವಲಯದಲ್ಲಿ ಹಾಗಾಗುವುದಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇದ್ದರೆ ಪರಸ್ಪರ ಭೇಟಿ ಆಗುವ ಸಂದರ್ಭ ಒದಗಿ ಬರುತ್ತದೆ. ಈಗ ಧನುಷ್ ಹಾಗೂ ಐಶ್ವರ್ಯಾಗೆ ಹೀಗೆಯೇ ಆಗಿದೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

    ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ . ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್ ಅನ್ನು ಹೆಸರು ಬದಲಾಯಿಸಿ, ಐಶ್ವರ್ಯಾ ಕೂಡ ಶೇರ್ ಮಾಡಿಕೊಂಡಿದ್ದರು.

  • 6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    6 ವರ್ಷದ ಬಾಲಕಿಯನ್ನು ರೇಪ್‍ಗೈದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

    ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯೋರ್ವ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

    ಸೈದಾಬಾದ್‍ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದ ಬಗ್ಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸೇರಿದಂತೆ ದೇಶಾದ್ಯಂತ ಸುದ್ದಿ ಮಾಡಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಲ್ಲಂಕೊಂಡ ರಾಜು ಎಂಬಾತ ಶವವಾಗಿ ರೈಲ್ವೇ ಹಳಿ ಮೇಲೆ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

    ಸೈದಾಬಾದ್‍ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು, ರೈಲಿಗೆ ತಲೆಕೊಟ್ಟು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆತನ ಕೈ ಮತ್ತು ಶರೀರದ ಮೇಲಿದ್ದ ಹಚ್ಚೆಯ ಆಧಾರದ ಮೇಲೆ ಆತ ರಾಜು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ

    ಹೈದರಾಬಾದ್‍ನ ಸಮೀಪದ ಸೈದಾಬಾದ್‍ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಾಲಕಿಯನ್ನು ಕೊಲೆಗೈದು ಆ ಬಳಿಕ ಕಾಣೆಯಾಗಿದ್ದ. ಪೊಲೀಸರು ಆತನ ಪತ್ತೆಗಾಗಿ ಹುಡುಕಾಟದಲ್ಲಿದ್ದರು ಆದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಅದಲ್ಲದೆ ತೆಲಂಗಾಣ ಗೃಹ ಸಚಿವರು ಆರೋಪಿಯನ್ನು ಎನ್‍ಕೌಂಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.

  • ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಹೈದರಾಬಾದ್: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂದು ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಈ ಮೂಲಕ ಇದೀಗ ಕೆಜಿಎಫ್ ರೂವಾರಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

    ಹೌದು. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಇಂದು ಹೈದಾರಾಬಾದ್ ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಇದೀಗ ಅಲ್ಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಲು ಅಲ್ಲು ಕೂಡ ಆಫೀಸಿಗೆ ಬಂದಿದ್ದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ.

    ಕಚೇರಿ ಒಳಗಡೆ ಹೋಗುವ ಮೊದಲು ಅಲ್ಲು ಅರ್ಜುನ್ ಕ್ಯಾಮರಾಗೆ ಪೋಸ್ ನೀಡಿ ಹೋಗಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರು ಅಲ್ಲು ಆಫೀಸಿಗೆ ತೆರಳಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಒಟ್ಟಿನಲ್ಲಿ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಭೇಟಿ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಲಾರ್ ಬಳಿಕ ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಾರಾ..? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

  • ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಹೈದರಾಬಾದ್: ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ತನ್ನ 8 ತಿಂಗಳ ಹೆಣ್ಣು ಮಗುವಿನೊಂದಿಗೆ ಮಹಿಳೆಯೊಬ್ಬರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಮಹಿಳೆಯನ್ನು ಅನಿತಾ(24) ಎಂದು ಗುರುತಿಸಲಾಗಿದೆ. ಬಿಹಾರ ಮೂಲದವರಾಗಿರುವ ಅನಿತಾ, ಬಿಸ್ಮಲ್ ಸಿಂಗ್ ಎಂಬವರನ್ನು ವರಿಸಿದ್ದು, ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿದೆ. ಈ ಕುಟುಂಬ ಹೈದರಾಬಾದ್ ನ ಬಂಜಾರಾ ಹಿಲ್ಸ್ ಶ್ರೀರಾಮ್ ನಗರ ಕಾಲೋನಿಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಾಗಿದೆ.

    ಕುಟುಂಬದಲ್ಲಾಗುತ್ತಿರುವ ಪ್ರತಿನಿತ್ಯದ ಸಮಸ್ಯೆಗಳಿಂದ ಬೇಸತ್ತು ಮಹಿಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಂಪತಿ ದಿನನಿತ್ಯ ಜಗಳವಾಡುತ್ತಿದ್ದರು. ಈ ಮಧ್ಯೆ ಸಂಬಂಧಿಕರು ಇಬ್ಬರಲ್ಲಿರುವ ವೈಮನಸ್ಸನ್ನು ಸರಿದೂಗಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಅಂತೆಯೇ ಸೋಮವಾರ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದು, ಅನಿತಾ ತನ್ನ ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಮಗುವಿನೊಂದಿಗೆ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಪರಿಣಾಮ ಅನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪುಟ್ಟ ಕಂದಮ್ಮನ ಸ್ಥಿತಿ ಗಂಭೀರವಾಗಿದೆ.

    ಅನಿತಾ ಹಾರಿದ್ದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನಿತಾ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಂಜಾರಾ ಹಿಲ್ಸ್ ಸಬ್-ಇನ್ಸ್ ಪೆಕ್ಟರ್ ಕೆ. ಉದಯ್ ಹೇಳಿದ್ದಾರೆ.

  • ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಹೈದರಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಯುದ್ಧ ಆಗಲಿದೆ ಎಂದು 2 ವರ್ಷಗಳ ಹಿಂದೆಯೇ ಮಾಹಿತಿ ಇತ್ತು ಎಂದಿದ್ದ ಆಂಧ್ರಪ್ರದೇಶ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಆಂಧ್ರದ ಕಡಪ ಜಿಲ್ಲೆಯ ಸಾರ್ವಜನಿಕ ಸಮಾರಂಭದ ವೇಳೆ ಪವನ್ ಕಲ್ಯಾಣ್ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂದಿಗ್ಧ ಸ್ಥಿತಿಯ ಬಗ್ಗೆ ಮಾತನಾಡಿದ್ದರು. ಈ ವೇಳೆ ಬಿಜೆಪಿ ನನಗೆ 2 ವರ್ಷದ ಹಿಂದೆಯೇ ಯುದ್ಧದ ಬಗ್ಗೆ ಹೇಳಿತ್ತು ಎಂದಿದ್ದರು. ಪವನ್‍ರ ಈ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಲು ಕಾರಣವಾಗಿತ್ತು.

    ಈ ಹೇಳಿಕೆ ಬೆನಲ್ಲೇ ಸ್ಪಷ್ಟನೆ ನೀಡಿರುವ ಪವನ್ ಕಲ್ಯಾಣ್, ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬ ಬಗ್ಗೆ ಕೆಲ ತಜ್ಞರು ತಮ್ಮ ವರಿದಿಗಳ ಮೂಲಕ ತಿಳಿಸುತ್ತಾರೆ. ಇಂತಹದ್ದೇ ರಾಜಕೀಯ ವಿಶ್ಲೇಷಣೆ ವೇಳೆ ಮಾಹಿತಿ ನನಗೆ ಹೇಳಿದ್ದರು. ಅಲ್ಲದೇ ಆರ್ಥಿಕತೆಯ ಬಗ್ಗೆಯೂ ಇಂತಹದ್ದೇ ಮಾಹಿತಿ ನೀಡಲಾಗುತ್ತದೆ. ನನಗೆ ಬಿಜೆಪಿ ಈ ಮಾತು ಹೇಳಿಲ್ಲ ಎಂದಿದ್ದಾರೆ.

    ಯುದ್ಧದ ಬಗ್ಗೆ ಕೆಲವರು ದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಭವಿಷ್ಯ ಹೇಳುತ್ತಾರೆ. 2 ವರ್ಷಗಳ ಹಿಂದೆಯೇ ಯುದ್ಧ ಬರುತ್ತದೆ ಎಂದು ಕೆಲ ವರದಿಗಳು ಬಂದಿದೆ. ನೀವು ಕೂಡ ಅವುಗಳನ್ನು ಓದಿದರೆ ತಿಳಿಯುತ್ತದೆ. ಯುದ್ಧದ ಬಗ್ಗೆ ನಾನು ಎಂದು ಭವಿಷ್ಯ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಹೈದರಾಬಾದ್: ಜಗತ್ತಿನಲ್ಲಿ ಒಳ್ಳೆಯ ವ್ಯಕ್ತಿಗಳಿಗೇನೂ ಕೊರತೆಯಿಲ್ಲ ಅನ್ನೋದಕ್ಕೆ ಈ ಘಟನೆಯೇ ಒಂದು ನೈಜ ಉದಾಹರಣೆ.

    ಹೌದು. ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿಯೊಬ್ಬರು ಹೈದರಾಬಾದ್‍ನಲ್ಲಿ ವೀಸಾ ಸಂದರ್ಶನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಆಕೆಗೆ ಹಣದ ಕೊರೆತೆಯಾಗಿತ್ತು. ಈ ವೇಳೆ ಅಲ್ಲಿನ ಆಟೋ ಚಾಲಕರೊಬ್ಬರು ತನಗೆ ಸಹಾಯ ಮಾಡಿದ ಬಗ್ಗೆ ವಾರಿಜಶ್ರೀ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

    ಫೇಸ್ಬುಕ್ ಪೋಸ್ಟ್ ನಲ್ಲೇನಿದೆ?: ಇವರ ಹೆಸರು ಬಾಬಾ. ಆಟೋ ಚಾಲಕರಾಗಿರುವ ಬಾಬಾ ಅವರು ಇಂದು ನನ್ನನ್ನ ರಕ್ಷಿಸಿದ್ರು. ನಾನು ಹೈದರಾಬಾದ್‍ಗೆ ನನ್ನ ವೀಸಾ ಸಂದರ್ಶನಕ್ಕೆಂದು ಬಂದಿದ್ದೆ. ಈ ವೇಳೆ ಅಲ್ಲಿ ನನಗೆ ಹಣದ ಕೊರತೆಯಾಗಿತ್ತು. ವೀಸಾ ಶುಲ್ಕಕ್ಕಾಗಿ 5,000 ರೂ ಬೇಕಿತ್ತು. ಆದ್ರೆ ನನ್ನ ಬಳಿ ಇದ್ದಿದ್ದು ಸುಮಾರು 2000 ರೂ. ಮಾತ್ರ. ನಾವು ಸುಮಾರು 10-15 ಎಟಿಎಂಗಳಿಗೆ ಅಲೆದಾಡಿದೆವು. ಆದ್ರೆ ಎಲ್ಲೂ ಹಣ ಸಿಗಲಿಲ್ಲ. ಹೈದರಾಬಾದ್‍ನಲ್ಲಿ ಅನೇಕ ಕಡೆ ಎಟಿಎಂಗಳಲ್ಲಿ ಸಮಸ್ಯೆ ಇತ್ತು.

    ಈ ವೇಳೆ ನನ್ನ ಪರಿಸ್ಥಿತಿಯನ್ನು ಅರಿತ ಆಟೋ ಚಾಲಕ ಅವರು  ಕೂಡಿಟ್ಟ 3 ಸಾವಿರ ರೂ. ಕೊಟ್ಟರು. “ಮೇಡಂ ಅದನ್ನು ತೆಗೆದುಕೊಳ್ಳಿ. ಬಳಿಕ ಹೊಟೇಲ್ ಹತ್ರ ಬಂದು ವಾಪಾಸ್ ಮಾಡಿ ಪರವಾಗಿಲ್ಲ” ಅಂತಾ ಹೇಳಿದ್ರು.

    ಆಟೋ ಚಾಲಕನ ಈ ಮಾನವೀಯತೆ ನೋಡಿ ನನಗೆ ತುಂಬಾ ಖುಷಿಯಾಯಿತು. ಇವರ ಸಹಾಯ ಮನೋಭಾವಕ್ಕೆ ಕೃತಜ್ಞತೆ ಹೇಳಬೇಕು. ಇಂತಹ ವ್ಯಕ್ತಿಯನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿಲ್ಲ. ಅಪರಿಚಿತರೊಬ್ಬರಿಗೆ ಅವರು ನಿಸ್ವಾರ್ಥತೆಯಿಂದ ಸಹಾಯ ಮಾಡಿದ್ದು ನನ್ನ ಮನಸ್ಸು ತಟ್ಟಿತು.

    ಹೌದು, ಕೆಲವೊಂದು ಬಾರಿ ದೇವರು ಅತ್ಯಂತ ಚಿತ್ರ ಹಾಗೂ ಸುಂದರ ಸನ್ನಿವೇಶಗಳಲ್ಲಿ ನಮಗೆ ಗೋಚರಿಸುತ್ತಾನೆ. ಪ್ರತಿದಿನವೂ ಹೊಸ ಪಾಠಗಳನ್ನು ಕಲಿಯುತ್ತೇವೆ. ನಿಮ್ಮಂತಹ ಸ್ನೇಹಿತನನ್ನು ಪಡೆದಿದ್ದಕ್ಕೆ ನಾನು ನಿಜಕ್ಕೂ ಧನ್ಯ. ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ನೆನಪಿಸಿದ್ದಕ್ಕೆ ಧನ್ಯವಾದ ಅಂತಾ ವಾರಿಜಾಶ್ರೀ ಆಟೋ ಚಾಲಕ ಬಾಬ ಅವರ ಫೋಟೋದೊಂದಿಗೆ ಫೇಸ್ಬುಕ್‍ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.

    ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಸಹಾಯ ಮನೋಭಾವವನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಏಪ್ರಿಲ್ 11ರಂದು ಹಾಕಿರೋ ಈ ಪೋಸ್ಟ್ ಗೆ 31 ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    https://www.facebook.com/varijashree/posts/10212441979669404